ಪುಟಗಳು

ಬೆಂಗಳೂರಲ್ಲಿ ನೀವು ನೋಡಲೇಬೇಕಾದ ಐತಿಹಾಸಿಕ ದೇವಸ್ಥಾನಗಳು (ಕೃಪೆ: ಸುವರ್ಣ ನ್ಯೂಸ್)

ಬೆಂಗಳೂರಲ್ಲಿ ನೀವು ನೋಡಲೇಬೇಕಾದ ಐತಿಹಾಸಿಕ ದೇವಸ್ಥಾನಗಳು
ಕೃಪೆ: ಸುವರ್ಣ ನ್ಯೂಸ್
ಬೆಂಗಳೂರು ನಗರ ಸಿಲಿಕಾನ್ ಸಿಟಿ ಎಂದೇ
ಖ್ಯಾತವಾಗಿದೆ. ಆದರೆ, ಆಧುನಿಕ ಕಟ್ಟಡಗಳಿಂದ ತುಂಬಿಹೋಗಿರುವ ಈ ನಗರದಲ್ಲಿ ಐತಿಹಾಸಿಕ ಮಹತ್ವವಿರುವ ಅನೇಕ ದೇವಸ್ಥಾನಗಳಿವೆ. ಒಂದು ಕಾಲದಲ್ಲಿ ಬೆಂಗಳೂರನ್ನ ಕಲ್ಯಾಣನಗರಿ ಎಂದು ಕರೆಯಲಾಗುತ್ತಂತೆ. ಅಂದ್ರೆ, ಬೆಂಗಳೂರು ದೇವಸ್ಥಾನಗಳ ನಗರಿಯಾಗಿತ್ತು.
1) ಧರ್ಮರಾಯ ಸ್ವಾಮಿ ದೇವಸ್ಥಾನ:
ಸುಮಾರು 800 ವರ್ಷಗಳ ಇತಿಹಾಸವಿರುವ ಇದು ಬೆಂಗಳೂರಿನ ಅತ್ಯಂತ ಪುರಾತನ ಕಟ್ಟಡಗಳಲ್ಲೊಂದು. ಗಂಗರಸರು(ತಿಗಳರು) ಈ ದೇವಸ್ಥಾನ ನಿರ್ಮಿಸಿದರೆಂದು ಹೇಳಲಾಗುತ್ತಿದೆ. ಪಾಂಡವರೇ ಇಲ್ಲಿ ಆರಾಧ್ಯದೈವವಾಗಿದ್ದು, ದೇಶದಲ್ಲೇ ಇದೊಂದು ವಿಶಿಷ್ಟ ಮಂದಿರವಾಗಿದೆ. ಬೆಂಗಳೂರಿನ ಹೃದಯಭಾಗದಲ್ಲಿರುವ ಈ ದೇವಸ್ಥಾನವು ಕೆಂಪೇಗೌಡರ ಕಾಲದಲ್ಲೂ ಪ್ರಾಮುಖ್ಯತೆ ಪಡೆದಿತ್ತು. ಕೆಂಪೇಗೌಡರು ಆಗಿನ ಬೆಂಗಳೂರಿನ ನಾಲ್ಕು ಮೂಲೆಗಳಲ್ಲಿ ನಿರ್ಮಿಸಿದ ಗೋಪುರಗಳು ಧರ್ಮರಾಯ ದೇವಸ್ಥಾನದಿಂದ ಸಮಾನ ಅಂತರದಲ್ಲಿರುವುದು ವಿಶೇಷ. ಈ ಹಿನ್ನೆಲೆಯಲ್ಲಿ ಧರ್ಮರಾಯ ದೇವಸ್ಥಾನವನ್ನು ಕೇಂದ್ರವನ್ನಾಗಿಟ್ಟುಕೊಂಡು ಕೆಂಪೇಗೌಡರು ಬೆಂಗಳೂರು ನಗರವನ್ನ ಕಟ್ಟಿದ್ದಾರೆ. ಧರ್ಮರಾಯ ಸ್ವಾಮಿ ದೇವಸ್ಥಾನ ಟೌನ್'ಹಾಲ್ ಬಳಿಯ ತಿಗಳರಪೇಟೆಯಲ್ಲಿದೆ.
2) ದೊಡ್ಡ ಬಸವನಗುಡಿ:
ಬೆಂಗಳೂರಿನ ಅತ್ಯಂತ ಜನಪ್ರಿಯ ದೇವಸ್ಥಾನಗಳಲ್ಲಿ ಇದೂ ಒಂದು. 1537ರಲ್ಲಿ ಕೆಂಪೇಗೌಡರು ಈ ದೇವಸ್ಥಾನವನ್ನ ಕಟ್ಟಿದರೆನ್ನಲಾಗಿದೆ. ಶಿವನ ವಾಹನವಾದ ನಂದಿ ಇಲ್ಲಿಯ ಮುಖ್ಯದೇವರು. ಇದು ವಿಶ್ವದ ಅತೀದೊಡ್ಡ ನಂದಿ ದೇವಸ್ಥಾನವಾಗಿದೆ. ಇಲ್ಲಿ ಪ್ರತೀ ವರ್ಷ ಸುತ್ತಮುತ್ತಲ ಗ್ರಾಮದ ಜನರು ತಮ್ಮ ಮೊದಲ ಕಡಲೆಕಾಯಿ ಬೆಳೆಯನ್ನ ಬಸವನಗುಡಿಗೆ ಸಮರ್ಪಿಸುವುದು ವಾಡಿಕೆ. ಹೀಗಾಗಿ, ಇಲ್ಲಿ ಪ್ರತೀ ವರ್ಷ ಕಡಲೆಕಾಯಿ ಪರಿಷೆ ನಡೆಯುತ್ತದೆ.
3) ಗವಿ ಗಂಗಾಧರೇಶ್ವರ ದೇವಸ್ಥಾನ:
ಕ್ರಿ.ಶ. 9ನೇ ಶತಮಾನದಲ್ಲಿ ಬೃಹತ್ ಹೆಬ್ಬಂಡೆಯನ್ನ ಕೊರೆದು ಈ ದೇವಸ್ಥಾನವನ್ನ ನಿರ್ಮಿಸಲಾಗಿದೆ. ಇದು ಶಿವನ ಮಂದಿರವಾಗಿದ್ದು, ನಂದಿಯ ವಿಗ್ರಹವೂ ಮುಂದೆ ಇದೆ. ಇಲ್ಲಿ ಮತ್ತೊಂದು ವಿಶೇಷವೆಂದರೆ ಅಗ್ನಿಯ ವಿಗ್ರಹ. ಇದಕ್ಕೆ 2 ತಲೆ, 7 ಕೈ ಹಾಗೂ 3 ಕಾಲುಗಳಿವೆ. ಇಲ್ಲಿರುವ ಅಗ್ನಿಯನ್ನ ಪೂಜಿಸಿದರೆ ಕಣ್ಣಿನ ದೋಷ ಪರಿಹಾರವಾಗುತ್ತದೆಂಬ ನಂಬಿಕೆ ಇದೆ.
ಈ ದೇವಸ್ಥಾನ ತುಂಬಾ ಖ್ಯಾತವಾಗಿರುವುದು ಮಕರ ಸಂಕ್ರಾಂತಿಯ ಕಾರಣಕ್ಕೆ. ಅಂದು ಸೂರ್ಯನ ಕಿರಣಗಳು ದೇವಸ್ಥಾನದೊಳಗೆ ನಂದಿಯ ಕೂಡುಗಳ ಮೂಲಕ ಹಾಯ್ದು ಶಿವಲಿಂಗದ ಮೇಲೆ ಬೀಳುತ್ತವೆ. ಒಂದು ಗಂಟೆ ಕಾಲ ಈ ವಿಸ್ಮಯ ನಡೆಯುತ್ತದೆ.
4) ಹಲಸೂರು ಸೋಮೇಶ್ವರ ದೇವಸ್ಥಾನ:
ಈ ಪುರಾತನ ಮಂದಿರವನ್ನ ಕೆಂಪೇಗೌಡರು ನಿರ್ಮಿಸಿದರೆಂಬ ಮಾತಿದೆ. ಹಾಗೆಯೇ, ಚೋಳರ ಕಾಲದಲ್ಲಿ ಈ ದೇವಸ್ಥಾನ ಕಟ್ಟಿರುವ ಸಾಧ್ಯತೆ ಇದೆ ಎಂದು ಕೆಲ ಇತಿಹಾಸಜ್ಞರು ಅಭಿಪ್ರಾಯಪಡುತ್ತಾರೆ. ದೇವಸ್ಥಾನದ ಬಗ್ಗೆ ಇರುವ ಪ್ರತೀತಿ ಪ್ರಕಾರ, ಯಲಹಂಕ ನಾಡಪ್ರಭು ಕೆಂಪೇಗೌಡರು ಕುದುರೆ ಏರಿ ಇಲ್ಲಿ ಬಂದು ಆಯಾಸಗೊಂಡು ಮಲಗಿದ್ದಾಗ ಸೋಮೇಶ್ವರ ಸ್ವಾಮಿ ಕನಸಿನಲ್ಲಿ ಬಂದು ದೇವಸ್ಥಾನ ನಿರ್ಮಿಸಬೇಕೆಂದು ಹೇಳಿದನಂತೆ. ಅದರಂತೆ ಕೆಂಪೇಗೌಡರು ಮಂದಿರ ಕಟ್ಟಿಸಿದರು ಎಂದು ಹೇಳಲಾಗುತ್ತದೆ.
5) ಹುಳಿಮಾವು ಗುಹಾಲಯ:
ಸುಮಾರು 4-5 ಶತಮಾನಗಳ ಇತಿಹಾಸವಿರುವ ಈ ದೇವಸ್ಥಾನ ಬನ್ನೇರುಘಟ್ಟ ರಸ್ತೆಯ ಹುಳಿಮಾವು ಎಂಬ ಜಾಗದಲ್ಲಿದೆ. ಗುಹೆಯೊಳಗಿರುವ ಈ ದೇವಸ್ಥಾನದ ಮುಖ್ಯ ದೇವರು ಶಿವ. ಸಾಧುವೊಬ್ಬರು ಇಲ್ಲಿ ಅನೇಕ ವರ್ಷಗಳ ಕಾಲ ತಪಸ್ಸು ಮಾಡಿದ್ದು ಅವರ ಸಮಾಧಿಯೂ ಇದೇ ಗುಹೆಯಲ್ಲಿದೆ.
6) ಜಗನ್ನಾಥ ದೇವಸ್ಥಾನ:
ಸರ್ಜಾಪುರ ರಸ್ತೆಯ ಅಗರದಲ್ಲಿ ಈ ದೇವಸ್ಥಾನವಿದೆ. ಶ್ರೀಜಗನ್ನಾಥ(ಕೃಷ್ಣ), ಅಣ್ಣ ಬಲರಾಮ ಮತ್ತು ತಂಗಿ ಸುಭದ್ರೆ ವಿಗ್ರಹಗಳು ಈ ಮಂದಿರದಲ್ಲಿವೆ. ಇಲ್ಲಿ ಪ್ರತೀ ವರ್ಷ ನಡೆಯುವ ಜಗನ್ನಾಥ ರಥಯಾತ್ರೆಗೆ ಸುಮಾರು 15 ಸಾವಿರ ಭಕ್ತಾದಿಗಳು ಆಗಮಿಸುತ್ತಾರೆ.
7) ಕಾಡುಮಲ್ಲೇಶ್ವರ ಮತ್ತು ನಂದಿತೀರ್ಥ ದೇವಸ್ಥಾನ:
ಮರಾಠ ರಾಜ ಶಿವಾಜಿಯ ಸೋದರ ವೆಂಕೋಜಿ 17ನೇ ಶತಮಾನದಲ್ಲಿ ಈ ಮಂದಿರವನ್ನ ಕಟ್ಟಿದ್ದಾರೆ. ದ್ರಾವಿಡ ಶೈಲಿಯಲ್ಲಿರುವ ಈ ದೇವಸ್ಥಾನದ ಆವರಣದಲ್ಲೇ ನಂದೀಶ್ವರ ತೀರ್ಥ ಎಂಬ ಇನ್ನೊಂದು ತೀರ್ಥವಿದೆ. ಬಸವತೀರ್ಥ ಎಂದು ಖ್ಯಾತವಾಗಿರುವ ಇಲ್ಲಿಯ ನಂದಿ ವಿಗ್ರಹದ ಬಾಯಿಯಿಂದ ಜಲ ಉಕ್ಕಿ ಹರಿಯುತ್ತದೆ. ನಗರದ ವೃಷಭಾವತಿ ನದಿಗೆ ಇದೇ ಜಲಮೂಲವಾಗಿದೆ. ಮಲ್ಲೇಶ್ವರಂ 15ನೇ ಕ್ರಾಸ್'ನಲ್ಲಿ ಈ ದೇವಸ್ಥಾನವಿದೆ.
8) ಕೋಟೆ ದೇವಸ್ಥಾನ:
ಕಲಾಸಿಪಾಳ್ಯ ಬಸ್ ನಿಲ್ದಾಣದ ಬಳಿ ಕೋಟೆ ಜಲಕಂಠೇಶ್ವರ ಮತ್ತು ಕೋಟೆ ವೆಂಕಟರಮಣ ದೇವಸ್ಥಾನಗಳಿವೆ. ಜಲಕಂಠೇಶ್ವರ ದೇವಸ್ಥಾನವನ್ನ ಚೋಳರು ನಿರ್ಮಿಸಿದರೆಂಬ ಮಾತಿದೆ. ಕೋಟೆ ವೆಂಕಟರಮಣ ದೇವಸ್ಥಾನವನ್ನು 17ನೇ ಶತಮಾನದಲ್ಲಿ ಚಿಕ್ಕದೇವರಾಜ ಒಡೆಯರ್ ಕಟ್ಟಿಸಿದ್ದಾರಂತೆ. ಇಲ್ಲಿರುವ ಕೋಟೆಯನ್ನೂ ಒಡೆಯರ್ ಅರಸರೇ ಕಟ್ಟಿದ್ದು. ಆದರೆ, ನಂತರದ ದಿನಗಳಲ್ಲಿ ಇದು ಟಿಪು ಸುಲ್ತಾನರ ಅರಮನೆಯಾಗಿ ಪರಿವರ್ತನೆಯಾಯ್ತು. ಕೋಟೆ ವೆಂಕಟರಮಣ ದೇವಸ್ಥಾನದಲ್ಲಿ ನಡೆಯುವ ವಾರ್ಷಿಕ ವೈಕುಂಠ ಏಕಾದಶಿ ಉತ್ಸವದಲ್ಲಿ ಸಾವಿರಾರು ಜನರು ಆಗಮಿಸಿ ಪೂಜೆ ಸಲ್ಲಿಸುತ್ತಾರೆ.
9) ಕುಮಾರಸ್ವಾಮಿ ದೇವಸ್ಥಾನ:
ಬಸವನಗುಡಿ ಸಮೀಪದ ಹನುಮಂತನಗರದಲ್ಲಿರುವ ಈ ದೇವಸ್ಥಾನದಲ್ಲಿ ಸುಬ್ರಮಣ್ಯನೇ ಮುಖ್ಯದೇವರು. ಗುಡ್ಡದ ಮೇಲೆ ದೇವಸ್ಥಾನವಿದ್ದು, ಹತ್ತಲು ಚೊಕ್ಕಟವಾದ ಮೆಟ್ಟಿಲುಗಳನ್ನ ಮಾಡಲಾಗಿದೆ. ಇದೇ ದೇವಸ್ಥಾನದ ಆವರಣದಲ್ಲಿ ಪಂಚಮುಖಿ ಗಣೇಶ ಹಾಗೂ ಆದಿಶೇಷನ ಮಂದಿರಗಳೂ ಇವೆ.
10) ರಾಗಿಗುಡ್ಡ ಪ್ರಸನ್ನಾಂಜನೇಯ ದೇವಸ್ಥಾನ:
ರಾಗಿ ಕಾಳಿನ ರಾಶಿಯಿಂದ ಆಂಜನೇಯನ ಮೂರ್ತಿ ತಯಾರಾಗಿದ್ದು, ಅದರಿಂದಲೇ ರಾಗಿಗುಡ್ಡ ಎಂಬ ಹೆಸರು ಬಂದಿದೆಯಂತೆ. ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಶಿವ ಕಲ್ಲುಗಳಾಗಿ ಪರಿವರ್ತನೆಗೊಂಡು ಈ ಗುಡ್ಡದಲ್ಲೇ ನೆಲಸಿದ್ದಾರೆಂಬ ಪ್ರತೀತಿ ಇದೆ. ಈ ತ್ರಿಮೂರ್ತಿಗಳ ವಿಗ್ರಹ ಕೆತ್ತಲಾದ 3 ಕಲ್ಲುಗಳೂ ಇಲ್ಲಿವೆ. 1969ರಲ್ಲಿ ದೇವಸ್ಥಾನವನ್ನ ಕಟ್ಟಲಾಗಿದೆ.
11) ರಂಗನಾಥ ಸ್ವಾಮಿ ದೇವಸ್ಥಾನ:
ಚಿಕ್ಕಪೇಟೆಯಲ್ಲಿರುವ ಈ ದೇವಸ್ಥಾನವನ್ನ 16ನೇ ಶತಮಾನದಲ್ಲಿ ವಿಜಯನಗರ ಅರಸರು ಕಟ್ಟಿದ್ದಾರೆನ್ನಲಾಗಿದೆ. ಚೈತ್ರ ಶುದ್ಧ ಪೌರ್ಣಮಿಯಂದು ಇಲ್ಲಿ ನಡೆಯುವ ರಥೋತ್ಸವ ತುಂಬಾ ಪ್ರಖ್ಯಾತವಾಗಿದೆ.
12) ಯಲಹಂಕ ಗೇಟ್ ಆಂಜನೇಯ ದೇವಸ್ಥಾನ:
ಅವೆನ್ಯೂ ರಸ್ತೆಯಲ್ಲಿರುವ ಈ ದೇವಸ್ಥಾನ ಪುರಾತನವಾಗಿದ್ದು ಕೆಂಪೇಗೌಡರಿಂದ ಕಟ್ಟಲ್ಪಟ್ಟಿದೆ. ಮಾರ್ಕೆಟ್ ಬಳಿಕ ಬೆಂಗಳೂರು ಕೋಟೆಯಿಂದ ಯಲಹಂಕ ಕಡೆಗೆ ಧ್ವಾರ ನಿರ್ಮಿಸಲಾಗಿತ್ತು. ಕೆಜಿ ರಸ್ತೆಯಲ್ಲಿರುವ ಈ ಧ್ವಾರದ ಬಳಿ ಆಂಜನೇಯ ದೇವಸ್ಥಾನವಿರುವುದರಿಂದ ಇದನ್ನು ಯಲಹಂಕ ಗೇಟ್ ಆಂಜನೇಯ ದೇವಸ್ಥಾನವೆಂದು ಕರೆಯಲಾಗುತ್ತದೆ.
ಬೆಂಗಳೂರು ನಗರ ಸಿಲಿಕಾನ್ ಸಿಟಿ ಎಂದೇ ಖ್ಯಾತವಾಗಿದೆ. ಆದರೆ, ಆಧುನಿಕ ಕಟ್ಟಡಗಳಿಂದ ತುಂಬಿಹೋಗಿರುವ ಈ ನಗರದಲ್ಲಿ ಐತಿಹಾಸಿಕ ಮಹತ್ವವಿರುವ ಅನೇಕ ದೇವಸ್ಥಾನಗಳಿವೆ. ಒಂದು ಕಾಲದಲ್ಲಿ ಬೆಂಗಳೂರನ್ನ ಕಲ್ಯಾಣನಗರಿ ಎಂದು ಕರೆಯಲಾಗುತ್ತಂತೆ. ಅಂದ್ರೆ, ಬೆಂಗಳೂರು ದೇವಸ್ಥಾನಗಳ ನಗರಿಯಾಗಿತ್ತು.

- See more at: http://www.suvarnanews.tv/magazine/article/10380_list-of-must-see-temples-inside-bengaluru#sthash.2pxcUST7.dpuf

ಉಘೇ ಬ್ಯಾಟ್ಗಾರ ರಂಗಣ್ಣ (ಕೋಲುಬೇಟೆ ಆಚರಣೆ):-

ಉಘೇ ಬ್ಯಾಟ್ಗಾರ ರಂಗಣ್ಣ (ಕೋಲುಬೇಟೆ ಆಚರಣೆ):-

ಡಿಸೆಂಬರ್ ಕೊನೆಯ ಗುರುವಾರ ಬಂತಂದ್ರೆ ಸಾಕು. ಕೋಲು ಬೇಟೆಗೆ ಹೋಗಲಿಕ್ಕೆ ಮನೇಲಿದ್ದ ಆಯುಧಗಳನ್ನು ತೊಳೆಸಿ, ಒಪ್ಪ ಓರಣ ಮಾಡಿಟ್ಟುಕೊಂಡು ಬೇಟೆಗೆ ಸಜ್ಜಾಗುತ್ತಿದ್ರು ನಮ್ಮ ಜನ. ಈಗಲೂ ಅಷ್ಟೆ. ಈ ವರ್ಷ ಡಿಸೆಂಬರ್ ೨೬ ಕ್ಕೆ ಬಂದು ನೋಡಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಹುಲಿಕುಂಟೆ ಗ್ರಾಮದಲ್ಲಿ ಕೋಲುಬೇಟೆ ಎಷ್ಟು ವೈಭವದಿಂದ ನಡೆಯುತ್ತೇ ಅನ್ನೋದನ್ನು. ಏನಪ್ಪಾ ಇದು! ಸರ್ಕಾರ ಪ್ರಾಣಿಗಳನ್ನು ಬೇಟೆಯಾಡುವುದನ್ನು ನಿಷೇದಿಸಿದ್ರು ಈ ಜನ ಅದ್ಹೇಗೆ ವೈಭವದಿಂದ ಬೇಟೆ ನಡೆಸ್ತಾರೆ ಅಂತ ನೀವು ಆಶ್ಚರ್ಯಪಡಬಹುದು. ಆದರೆ, ಮತ್ತೊಮ್ಮೆ ನಾನು ಪ್ರಮಾಣೀಕರಿಸಿ ಹೇಳ್ತೀನಿ ಇಲ್ಲಿ ಖಂಡಿತವಾಗಿಯೂ ಬೇಟೆ ವೈಭವದಿಂದ ನಡೆಯುತ್ತೆ. ಆದರೆ, ಯಾವುದೇ ಪ್ರಾಣಿ ಪಕ್ಷಿಗಳ ಬೇಟೆ ನಡೆಯೋದಿಲ್ಲ. ಇಲ್ಲಿ ನಡೆಯೋದು ಕೇವಲ ಸಾಂಕೇತಿಕ ಬೇಟೆಯ ಆಚರಣೆಯಷ್ಟೆ.

ಇದು ಬೆಂಗಳೂರು ಗ್ರಾಮಾಂತರ ಜನರ ಜಾನಪದ ಆಚರಣೆ. ಚೋಳರ ಕಾಲದಿಂದ ಈ ಬೇಟೆಯ ಆಚರಣೆ ನಡೆದುಕೊಂಡು ಬಂದಿದೆ ಅಂತ ಇಲ್ಲಿನ ಹಿರಿಯರು ಹೇಳ್ತಾರೆ. ಹುಲಿಕುಂಟೆ ಹಾಗೂ ಸುತ್ತಮುತ್ತಲಿನ ಜನರ ಆರಾಧ್ಯ ದೈವ ಶ್ರೀ ಬೇಟೆ ರಂಗನಾಥ ಸ್ವಾಮಿ ಇಲ್ಲಿನ ಜನರಿಗೆ ಶಕ್ತಿಯ ಸಾಕಾರ ರೂಪ.

ಕೋಲುಬೇಟೆಯ ದಿನ ಮಧ್ಯಾಹ್ನದ ಹೊತ್ತಿಗೆ ಕುದುರೆ ಮೇಲೆ ಕುಳಿತ ಪೇಟಧಾರಿ ಶ್ರೀ.ರಂಗನಾಥ ಸ್ವಾಮಿಯನ್ನು ಹೊತ್ತ ಪಲ್ಲಕ್ಕಿಯ ಜೊತೆಗೆ ನೂರಾರು ಮಂದಿ ಆಯುಧ ಹಿಡಿದ ಜನ ಹುಲಿಕುಂಟೆ ಗ್ರಾಮದಿಂದ ಚೆನ್ನಬಸವಯ್ಯನ ಪಾಳ್ಯದ ಬಳಿ ಬಂದು ಸೇರ್ತಾರೆ. ನಂತರ ಅಲ್ಲಿರುವ ಹುತ್ತದ ಸುತ್ತ ಸೌದೆಯಿಂದ ಹೊಗೆಹಾಕಿ, ಜೋರಾಗಿ ಬಾಯಿ ಬಡಿದುಕೊಳ್ಳುತ್ತಾ, ವಾದ್ಯ ಮಾಡುತ್ತಾ ಬೇಟೆ ನೀಡುವ ಸಲುವಾಗಿ ದೇವರನ್ನು ಪ್ರಾರ್ಥಿಸಿ ಮುಂದೆ ಸಾಗುತ್ತಾರೆ. ಈ ಆಚರಣೆಯನ್ನು ಹುಲಿಕುಂಟೆಯ ಸುತ್ತಮುತ್ತಲ ಕೆಲ ಗ್ರಾಮದಲ್ಲಿ ಒಂದು ವಾರದ ಹಿಂದೆಯೇ, ಗುರುವಾರದಂದು ತಮ್ಮ ಗ್ರಾಮದ ಶಕ್ತಿದೇವತೆಗೆ ಹಣ್ಣುಕಾಯಿ ಮಾಡಿಸಿ, ತಮ್ಮ ಆಯುಧಗಳನ್ನು ಶಕ್ತಿದೇವತೆಯ ಮುಂದಿಟ್ಟು ಬೇಟೆಗಾಗಿ ಪ್ರಾರ್ಥಿಸಿ ಪೂಜೆ ಸಲ್ಲಿಸುತ್ತಾರೆ. ಈ ಆಚರಣೆಗೆ ಹೊಗೆಬೇಟೆ ಎಂಬುದಾಗಿ ಕರೆಯುತ್ತಾರೆ.

ನಂತರ ಪಲ್ಲಕ್ಕಿ ಮುಂದುವರಿದು, ಚೆನ್ನಬಸವಯ್ಯನ ಪಾಳ್ಯಕ್ಕೂ ಮುಂದೆ ಇರುವ ದಿಣ್ಣೆಯಲ್ಲಿ ನಿರ್ಮಿಸಲಾಗಿರುವ ಮಂಟಪ ಅಥವಾ ಸ್ವಾಮಿಯ ಗದ್ದುಗೆಯಲ್ಲಿ ಶ್ರೀ.ಬೇಟೆ ರಂಗನಾಥಸ್ವಾಮಿಯನ್ನು ಪ್ರತಿಷ್ಟಾಪಿಸುವ ಸಮಯಕ್ಕೆ ಹುಲಿಕುಂಟೆ ಗ್ರಾಮದ ಜನತೆಯ ಜೊತೆಗೆ, ಸುತ್ತ ಮುತ್ತಲಿನ ಗ್ರಾಮದ ಜನರೆಲ್ಲಾ ತಂಡೋಪತಂಡವಾಗಿ ಪೊದೆಗಳಿಂದ, ಹೊಲಗಳಿಂದ, ಆಯುಧಗಳನ್ನಿಡಿದು, ಜೋರಾಗಿ ಗದ್ದಲ ಮಾಡುತ್ತಾ, ಬಾಯಿ ಬಡಿದುಕೊಳ್ಳುತ್ತಾ, ಸ್ವಾಮಿಗೆ ಜಯಘೋಷ ಹಾಕುತ್ತಾ ಓಡಿ ಬರುವ ದೃಶ್ಯ ಮೈನವಿರೇಳಿಸುವಷ್ಟು ಸುಂದರವಾಗಿರುತ್ತದೆ. ಅಲ್ಲಿ ತಾವು ಬೇಟೆಯಾಡಿ ತಂದ ಬಲಿಯನ್ನು ಸ್ವಾಮಿಗೆ ಅರ್ಪಿಸುವ ಸಾಂಕೇತಿಕ ಆಚರಣೆ ನಡೆಸಿ ಸ್ವಾಮಿಯ ಕೃಪಾಶೀರ್ವಾದಕ್ಕೆ ಪಾತ್ರರಾಗುತ್ತಾರೆ. ನಂತರ ಕೋಲುಬೇಟೆ ಉತ್ಸವ ಜಾತ್ರೆಯಾಗಿ ಮಾರ್ಪಾಟಾಗುತ್ತದೆ. ಬೇಟೆಗೆ ಬಂದ ಜನರೆಲ್ಲಾ ಸ್ವಾಮಿಗೆ ಹಣ್ಣು ಕಾಯಿ ಮಾಡಿಸಿ, ಅಲ್ಲಿ ಸೇರಿರುವ ಅಂಗಡಿಗಳಲ್ಲಿ ಕಡ್ಲೆಪುರಿ, ಬತ್ತಾಸು, ಚೌಚೌ, ಸಿಹಿತಿಂಡಿ, ಮಕ್ಕಳ ಆಟಿಕೆ ಕೊಂಡು ಮನೆಗೆ ತೆರಳುತ್ತಾರೆ. ಈ ದಿನ ಹುಲಿಕುಂಟೆಯೂ ಸೇರಿದಂತೆ ಸುತ್ತಮುತ್ತಲ ಗ್ರಾಮದ ಪ್ರತಿಯೊಂದು ಮನೆಯಲ್ಲೂ ಸಹ ಹಿದುಕಿದ ಅವರೇಬೇಳೆ ಸಾರು ವಿಶೇಷ. ಶತಮಾನಗಳ ಇತಿಹಾಸವಿರುವ ಈ ವಿಶಿಷ್ಟ ಆಚರಣೆ ನೋಡುಗರ ಕಣ್ಣಿಗೆ ಒಂದು ವಿಶಿಷ್ಟ ಹಬ್ಬ. ಬನ್ನಿ ಕೋಲು ಬೇಟೆ ಆಚರಣೆಯಲ್ಲಿ ನೀವೂ ಪಾಲ್ಗೊಳ್ಳಿ.

...... ವಿಶ್ವನಾಥ್.ಬಿ.ಮಣ್ಣೆ