ಪುಟಗಳು

ಉಘೇ ಬ್ಯಾಟ್ಗಾರ ರಂಗಣ್ಣ (ಕೋಲುಬೇಟೆ ಆಚರಣೆ):-























ಉಘೇ ಬ್ಯಾಟ್ಗಾರ ರಂಗಣ್ಣ (ಕೋಲುಬೇಟೆ ಆಚರಣೆ):-

ಡಿಸೆಂಬರ್ ಕೊನೆಯ ಗುರುವಾರ ಬಂತಂದ್ರೆ ಸಾಕು. ಕೋಲು ಬೇಟೆಗೆ ಹೋಗಲಿಕ್ಕೆ ಮನೇಲಿದ್ದ ಆಯುಧಗಳನ್ನು ತೊಳೆಸಿ, ಒಪ್ಪ ಓರಣ ಮಾಡಿಟ್ಟುಕೊಂಡು ಬೇಟೆಗೆ ಸಜ್ಜಾಗುತ್ತಿದ್ರು ನಮ್ಮ ಜನ. ಈಗಲೂ ಅಷ್ಟೆ. ಈ ವರ್ಷ ಡಿಸೆಂಬರ್ ೨೬ ಕ್ಕೆ ಬಂದು ನೋಡಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಹುಲಿಕುಂಟೆ ಗ್ರಾಮದಲ್ಲಿ ಕೋಲುಬೇಟೆ ಎಷ್ಟು ವೈಭವದಿಂದ ನಡೆಯುತ್ತೇ ಅನ್ನೋದನ್ನು. ಏನಪ್ಪಾ ಇದು! ಸರ್ಕಾರ ಪ್ರಾಣಿಗಳನ್ನು ಬೇಟೆಯಾಡುವುದನ್ನು ನಿಷೇದಿಸಿದ್ರು ಈ ಜನ ಅದ್ಹೇಗೆ ವೈಭವದಿಂದ ಬೇಟೆ ನಡೆಸ್ತಾರೆ ಅಂತ ನೀವು ಆಶ್ಚರ್ಯಪಡಬಹುದು. ಆದರೆ, ಮತ್ತೊಮ್ಮೆ ನಾನು ಪ್ರಮಾಣೀಕರಿಸಿ ಹೇಳ್ತೀನಿ ಇಲ್ಲಿ ಖಂಡಿತವಾಗಿಯೂ ಬೇಟೆ ವೈಭವದಿಂದ ನಡೆಯುತ್ತೆ. ಆದರೆ, ಯಾವುದೇ ಪ್ರಾಣಿ ಪಕ್ಷಿಗಳ ಬೇಟೆ ನಡೆಯೋದಿಲ್ಲ. ಇಲ್ಲಿ ನಡೆಯೋದು ಕೇವಲ ಸಾಂಕೇತಿಕ ಬೇಟೆಯ ಆಚರಣೆಯಷ್ಟೆ.

ಇದು ಬೆಂಗಳೂರು ಗ್ರಾಮಾಂತರ ಜನರ ಜಾನಪದ ಆಚರಣೆ. ಚೋಳರ ಕಾಲದಿಂದ ಈ ಬೇಟೆಯ ಆಚರಣೆ ನಡೆದುಕೊಂಡು ಬಂದಿದೆ ಅಂತ ಇಲ್ಲಿನ ಹಿರಿಯರು ಹೇಳ್ತಾರೆ. ಹುಲಿಕುಂಟೆ ಹಾಗೂ ಸುತ್ತಮುತ್ತಲಿನ ಜನರ ಆರಾಧ್ಯ ದೈವ ಶ್ರೀ ಬೇಟೆ ರಂಗನಾಥ ಸ್ವಾಮಿ ಇಲ್ಲಿನ ಜನರಿಗೆ ಶಕ್ತಿಯ ಸಾಕಾರ ರೂಪ.

ಕೋಲುಬೇಟೆಯ ದಿನ ಮಧ್ಯಾಹ್ನದ ಹೊತ್ತಿಗೆ ಕುದುರೆ ಮೇಲೆ ಕುಳಿತ ಪೇಟಧಾರಿ ಶ್ರೀ.ರಂಗನಾಥ ಸ್ವಾಮಿಯನ್ನು ಹೊತ್ತ ಪಲ್ಲಕ್ಕಿಯ ಜೊತೆಗೆ ನೂರಾರು ಮಂದಿ ಆಯುಧ ಹಿಡಿದ ಜನ ಹುಲಿಕುಂಟೆ ಗ್ರಾಮದಿಂದ ಚೆನ್ನಬಸವಯ್ಯನ ಪಾಳ್ಯದ ಬಳಿ ಬಂದು ಸೇರ್ತಾರೆ. ನಂತರ ಅಲ್ಲಿರುವ ಹುತ್ತದ ಸುತ್ತ ಸೌದೆಯಿಂದ ಹೊಗೆಹಾಕಿ, ಜೋರಾಗಿ ಬಾಯಿ ಬಡಿದುಕೊಳ್ಳುತ್ತಾ, ವಾದ್ಯ ಮಾಡುತ್ತಾ ಬೇಟೆ ನೀಡುವ ಸಲುವಾಗಿ ದೇವರನ್ನು ಪ್ರಾರ್ಥಿಸಿ ಮುಂದೆ ಸಾಗುತ್ತಾರೆ. ಈ ಆಚರಣೆಯನ್ನು ಹುಲಿಕುಂಟೆಯ ಸುತ್ತಮುತ್ತಲ ಕೆಲ ಗ್ರಾಮದಲ್ಲಿ ಒಂದು ವಾರದ ಹಿಂದೆಯೇ, ಗುರುವಾರದಂದು ತಮ್ಮ ಗ್ರಾಮದ ಶಕ್ತಿದೇವತೆಗೆ ಹಣ್ಣುಕಾಯಿ ಮಾಡಿಸಿ, ತಮ್ಮ ಆಯುಧಗಳನ್ನು ಶಕ್ತಿದೇವತೆಯ ಮುಂದಿಟ್ಟು ಬೇಟೆಗಾಗಿ ಪ್ರಾರ್ಥಿಸಿ ಪೂಜೆ ಸಲ್ಲಿಸುತ್ತಾರೆ. ಈ ಆಚರಣೆಗೆ ಹೊಗೆಬೇಟೆ ಎಂಬುದಾಗಿ ಕರೆಯುತ್ತಾರೆ.

ನಂತರ ಪಲ್ಲಕ್ಕಿ ಮುಂದುವರಿದು, ಚೆನ್ನಬಸವಯ್ಯನ ಪಾಳ್ಯಕ್ಕೂ ಮುಂದೆ ಇರುವ ದಿಣ್ಣೆಯಲ್ಲಿ ನಿರ್ಮಿಸಲಾಗಿರುವ ಮಂಟಪ ಅಥವಾ ಸ್ವಾಮಿಯ ಗದ್ದುಗೆಯಲ್ಲಿ ಶ್ರೀ.ಬೇಟೆ ರಂಗನಾಥಸ್ವಾಮಿಯನ್ನು ಪ್ರತಿಷ್ಟಾಪಿಸುವ ಸಮಯಕ್ಕೆ ಹುಲಿಕುಂಟೆ ಗ್ರಾಮದ ಜನತೆಯ ಜೊತೆಗೆ, ಸುತ್ತ ಮುತ್ತಲಿನ ಗ್ರಾಮದ ಜನರೆಲ್ಲಾ ತಂಡೋಪತಂಡವಾಗಿ ಪೊದೆಗಳಿಂದ, ಹೊಲಗಳಿಂದ, ಆಯುಧಗಳನ್ನಿಡಿದು, ಜೋರಾಗಿ ಗದ್ದಲ ಮಾಡುತ್ತಾ, ಬಾಯಿ ಬಡಿದುಕೊಳ್ಳುತ್ತಾ, ಸ್ವಾಮಿಗೆ ಜಯಘೋಷ ಹಾಕುತ್ತಾ ಓಡಿ ಬರುವ ದೃಶ್ಯ ಮೈನವಿರೇಳಿಸುವಷ್ಟು ಸುಂದರವಾಗಿರುತ್ತದೆ. ಅಲ್ಲಿ ತಾವು ಬೇಟೆಯಾಡಿ ತಂದ ಬಲಿಯನ್ನು ಸ್ವಾಮಿಗೆ ಅರ್ಪಿಸುವ ಸಾಂಕೇತಿಕ ಆಚರಣೆ ನಡೆಸಿ ಸ್ವಾಮಿಯ ಕೃಪಾಶೀರ್ವಾದಕ್ಕೆ ಪಾತ್ರರಾಗುತ್ತಾರೆ. ನಂತರ ಕೋಲುಬೇಟೆ ಉತ್ಸವ ಜಾತ್ರೆಯಾಗಿ ಮಾರ್ಪಾಟಾಗುತ್ತದೆ. ಬೇಟೆಗೆ ಬಂದ ಜನರೆಲ್ಲಾ ಸ್ವಾಮಿಗೆ ಹಣ್ಣು ಕಾಯಿ ಮಾಡಿಸಿ, ಅಲ್ಲಿ ಸೇರಿರುವ ಅಂಗಡಿಗಳಲ್ಲಿ ಕಡ್ಲೆಪುರಿ, ಬತ್ತಾಸು, ಚೌಚೌ, ಸಿಹಿತಿಂಡಿ, ಮಕ್ಕಳ ಆಟಿಕೆ ಕೊಂಡು ಮನೆಗೆ ತೆರಳುತ್ತಾರೆ. ಈ ದಿನ ಹುಲಿಕುಂಟೆಯೂ ಸೇರಿದಂತೆ ಸುತ್ತಮುತ್ತಲ ಗ್ರಾಮದ ಪ್ರತಿಯೊಂದು ಮನೆಯಲ್ಲೂ ಸಹ ಹಿದುಕಿದ ಅವರೇಬೇಳೆ ಸಾರು ವಿಶೇಷ. ಶತಮಾನಗಳ ಇತಿಹಾಸವಿರುವ ಈ ವಿಶಿಷ್ಟ ಆಚರಣೆ ನೋಡುಗರ ಕಣ್ಣಿಗೆ ಒಂದು ವಿಶಿಷ್ಟ ಹಬ್ಬ. ಬನ್ನಿ ಕೋಲು ಬೇಟೆ ಆಚರಣೆಯಲ್ಲಿ ನೀವೂ ಪಾಲ್ಗೊಳ್ಳಿ.

...... ವಿಶ್ವನಾಥ್.ಬಿ.ಮಣ್ಣೆ

ವಾಲ್ಮೀಕಿಯವರ ಪುಣ್ಯ ಜಯಂತಿ


ರಾಮ ನಾಮ ಮಾತ್ರದಿಂದ ಪರಮಸಿದ್ಧಿಯನ್ನು, ಜೀವನದ ಸಾರ್ಥಕತೆಯನ್ನು, ಪ್ರಖ್ಯಾತಿಯನ್ನೂ ಪಡೆದ ಮಹಷರ್ಿ ವಾಲ್ಮೀಕಿಯವರಿಗೆ ವಂದಿಸುತ್ತಾ, ತಮಗೆಲ್ಲರಿಗೂ ಮಹಷರ್ಿ ವಾಲ್ಮೀಕಿಯವರ ಜಯಂತಿಯ ಶುಭಾಶಯಗಳನ್ನು ಕೋರುತ್ತಿದ್ದೇನೆ.

ರಾಮಾಯಣ ಅದು ಆದಿ ಕಾವ್ಯ. ರಾಮಾಯಣವನ್ನು ರಚಿಸಿದ ಕವಿ ಮಹಷರ್ಿ ವಾಲ್ಮೀಕಿಯವರು. ಅವರನ್ನು ಆದಿಕವಿ ಅಂತಲೂ ಕರೀತಾರೆ. ಆ ಋಷಿಕವಿ ವಾಲ್ಮೀಕಿಯವರ ಮಹಾಗಾನಕ್ಕೆ ಜಗತ್ತು ಮಹಾಕಾವ್ಯದ ಪಟ್ಟಕಟ್ಟಿದೆ. ಕವಿಕೋಕಿಲರಾದ ಮಹಷರ್ಿ ವಾಲ್ಮೀಕಿಯವರ ಸಂಗೀತದಲ್ಲಿ ಸರೋವರದಂತಹ ಸೌಂದರ್ಯವಿದೆ. ಕಡಲಿನಂತಹ ಗಾಂಭೀರ್ಯವಿದೆ. ಚೆಲುವು ಮತ್ತು ಭವ್ಯತೆ ಎರಡೂ ಸಮನ್ವಯಗೊಂಡಿರುವ ಆ ಮಹತ್ಕೃತಿ ಲೋಕಪೂಜಿತಭಾವವನ್ನು ಹೊಂದಿದೆ. ಅಂತಹ ಕವಿಯೂ, ಅಂತಹ ಕೃತಿಯೂ, ನಮಗೆ ಲಭಿಸಿರೋದು ನಮ್ಮೆಲ್ಲರ ಹೆಮ್ಮೆ, ಪುಣ್ಯ ಮತ್ತು ಈ ಜಗತ್ತಿನ ಭಾಗ್ಯ.

ಬೇಡನಾಗಿದ್ದ ಆತ ರಾಮಾಯಣವನ್ನು ರಚಿಸುತ್ತಿದ್ದಾಗಲೆ, ರಾಮಾಯಣವೂ ಕೂಡ ವಾಲ್ಮೀಕಿಯನ್ನು ಸೃಷ್ಟಿಸುತ್ತಾ ಇತ್ತು. ಗುರುವಿನ ಅನುಗ್ರಹ, ಭಗವಂತನ ಕೃಪೆ ದೊರೆತರೆ ಬೇಡನಂತಹ ಸಾಮಾನ್ಯನೂ ಕೂಡ ಮಹಷರ್ಿಯಂತಹ ಮಹೋನ್ನತಿಗೆ ಏರಬಹುದು ಅನ್ನೋದಕ್ಕೆ ಮಹಷರ್ಿ ವಾಲ್ಮೀಕಿಯವರ ಜೀವನಕಥೆ ಒಂದು ಆಶಾದಾಯಕವಾದಂತಹ ಅಗ್ನಿಸಾಕ್ಷಿಯಾಗುತ್ತೆ.

    ವಾಲ್ಮೀಕಿಯವರು ಬೇಡರ ಕುಲದಲ್ಲಿ ಹುಟ್ಟಿದವರು. ಬೇಡರು ಅಂದ ಮಾತ್ರಕ್ಕೆ, ಬೇಡರು  ಅತ್ಯಂತ ದಡ್ಡರು ಅಂತಾಗಲಿ, ಕ್ರೂರಿಗಳಾದ ಕಾಡುಜನರು ಅಂತಾಗಲಿ, ಕರುಣೆಯಿಲ್ಲದ ಕಳ್ಳರು ಅಂತಾಗಲಿ, ಭಾವಿಸೋದು ಬೇಕಿಲ್ಲ. ಯಾಕಂದ್ರೆ, ಶ್ರೀರಾಮನ ಪ್ರಿಯಸ್ನೇಹಿತನಾದ ಗುಹನೂ ಬೇಡರ ದೊರೆ ಅನ್ನೋದನ್ನ ಗಮನಿಸಿದರೆ, ಬೇಡರಿಗೂ ಅವರ ಕುಲದ ವಿದ್ಯೆ, ಸಂಸ್ಕೃತಿ, ಇತ್ತು ಅಂತ ನಾವು ಒಪ್ಪಿಕೊಳ್ಳಬೇಕಾತ್ತೆ.

    ಇಂತಹ, ಬೇಡರ ಕುಲದಲ್ಲಿ ಹುಟ್ಟಿದ ವಾಲ್ಮೀಕಿಯವರು, ಬೇಡ ವೃತ್ತಿಯಿಂದಲೆ ಬಾಳ್ತಾ ಇದ್ರು ಅಂತಂದ್ರೆ, ಅದು ಅಧರ್ಮನೂ ಅಲ್ಲ, ಆಶ್ಚರ್ಯ ಪಡೋಂತ ವಿಷಯನೂ ಅಲ್ಲ. ವಾಲ್ಮೀಕಿಯವರು ಕಾಡಿನಲ್ಲಿ ಬಿಲ್ಲು ಬಾಣ, ಕತ್ತಿ, ಈಟಿಗಳನ್ನು ಹಿಡ್ಕೊಂಡು ತನ್ನವರ ಜೊತೆ ಸೇರಿ, ಹುಲಿ, ಸಿಂಹ, ಆನೆ, ಜಿಂಕೆ, ಹಂದಿ ಮೊದಲಾದ ಕಾಡುಪ್ರಾಣಿಗಳನ್ನು ಬೇಟೆಯಾಡಿರಬೇಕು. ದಂತ, ಚರ್ಮ, ಉಗುರು, ಮೊದಲಾದವುಗಳನ್ನು ಕೂಡಿಟ್ಟಿರಬೇಕು. ನದಿಗಳಲ್ಲಿ, ಕೆರೆಗಳಲಿ,್ಲ ಬಲೆ ಹಾಕಿ, ಗಾಳ ಹಾಕಿ ಮೀನು ಹಿಡಿದಿರಬೇಕು. ತರತರದ ಮರಗಳಲ್ಲಿ, ತರತರದ ರುಚಿಯ, ಹಣ್ಣುಹಂಪಲುಗಳನ್ನು ಕಿತ್ತಿರಬೇಕು. ವಿಧವಿಧವಾದ ಗಿಡಬಳ್ಳಿಗಳನ್ನು ಹುಡುಕಿ, ಗೆಡ್ಡೆಗೆಣಸುಗಳನ್ನು ಅಗೆದು ತನಗೂ ತನ್ನವರಿಗೂ ಆಹಾರ ಒದಗಿಸಿರಬೇಕು. ಬದುಕಿನ ಈ ಎಲ್ಲ ಅನಿವಾರ್ಯವಾದ ಲೌಕಿಕ ಕಾರಣಗಳಿಂದಾಗಿ, ವಾಲ್ಮೀಕಿಯವರು ಪ್ರಕೃತಿದೇವಿಯ ಸೌಂದರ್ಯದ ಸಾಮ್ಯಾಜ್ಯದ ವಿವಿಧ ಸಂಪತ್ತುಗಳನ್ನು ಮನಮುಟ್ಟುವಂತೆ ಅನುಭವಿಸಿರಬೇಕು.

    ಮೊದಲ ಕವಿಯಾಗುವಂತಹ ತನ್ನ ಮೆಚ್ಚಿನ ಕಂದನನ್ನು, ಬೇಡನನ್ನಾಗಿ ಹುಟ್ಟಿಸುವಂತೆ, ಆ ಸರಸ್ವತಿಯು ತನ್ನ ಪತಿಯನ್ನು ಪ್ರೇರೇಪಿಸಿದಳೇನೋ ಅನ್ನಿಸುತ್ತೆ. ಇಲ್ಲದಿದ್ದರೆ ರಾಮಾಯಣ ಈಗ ಇರುವುದಕ್ಕಿಂತಲೂ ಸಂಪೂರ್ಣವಾಗಿ ಬೇರೆ ರೀತಿಯಲ್ಲಿ ನಮಗೆ ದೊರೆತಾ ಇತ್ತು ಅಂತ ನಾವು ಧೈರ್ಯವಾಗಿ ಊಹಿಸಬಹುದು.

ವಾಲ್ಮೀಕಿಯವರ ಬಾಲ್ಯ ಮತ್ತು ತಾರುಣ್ಯಕಾಲಗಳಲ್ಲಿ ಅವರು ಅನುಭವಿಸಿದಂತಹ, ಅರಣ್ಯ ಪರಿಚಯದ ಪೂರ್ಣಫಲವನ್ನು ಅವರು ತಮ್ಮ ದಿವ್ಯಕೃತಿಯಾದ ರಾಮಾಯಣದಲ್ಲಿ ರಚಿಸಿರುವುದನ್ನು ನಾವು ಕಾಣಬಹುದು. ಆ ಕಾಡಿನ ಚೆಲುವು, ಆ ಮರಮರದ, ಗಿಡಗಡದ, ಬಳ್ಳಿಬಳ್ಳಿಯ, ಆತ್ನೀಯವಾದ ಪರಿಚಯ, ಹೂವು, ಹಕಿ,್ಕ ಹಣ್ಣು ಮುಂತಾದವುಗಳ, ಸೌಂದರ್ಯದಲ್ಲಿರುವಂತಹ ಆವೇಶಪೂರ್ಣವಾದ ಆಸಕ್ತಿ, ಅವುಗಳ ಒಂದೊಂದು ವಿವರದಲ್ಲಿ ಕೂಡ ಅವುಗಳೊಡನೆ ವಾಲ್ಮೀಕಿಯವರಿಗಿದ್ದ ನಿಕಟವಾದ ಸಂಬಂಧ ಹಾಗೂ ಅನುಭವದಿಂದ ದೊರೆತಂತಹ ಆ ರಸರುಚಿ, ಕಾಲಕಾಲಕ್ಕೆ ತಕ್ಕಂತೆ ಋತುಋತುಗಳಲ್ಲಿ ವ್ಯತ್ಯಾಸವಾಗುವಂತಹ  ಪ್ರಕೃತಿ ಸೌಂದರ್ಯದ ಆ ವಿವರಜ್ಞಾನ, ಇವೆಲ್ಲವೂ ಕೂಡ ಬೇಡ ವೃತ್ತಿಗಲ್ಲದೆ ಅಷ್ಟು ಆತ್ನೀಯವಾಗಿ ಲಭಿಸುವುದು ಸುಲಭ ಅಲ್ಲ. ವಾಲ್ಮೀಕಿಯವರ ನರನಾಡಿಗಳಲ್ಲಿ ಬಾನು, ಮುಗಿಲು, ಬೆಟ್ಟ, ಕಾಡು, ಹಕ್ಕಿ, ಮಳೆ, ಬಿಸಿಲು, ಚಳಿ, ಮಂಜು, ಬೆಳಗು, ನೇಸರು, ಇವೆಲ್ಲವೂ ನೆತ್ತರಾಗಿ ಹರಿತಾ ಇರೋದು, ಅವರು ಬೇಡನಾಗಿ ಹುಟ್ಟಿದ ಪುಣ್ಯದಿಂದಲ್ಲದೆ ಬೇರೆ ಅಲ್ಲ.

    ಹೀಗೆ ಹುಟ್ಟಿನಿಂದಲೆ ಕವಿಯಾಗಿದ್ದ ಬೇಡರ ತರುಣನಿಗೆ, ನಾರದರಂತಹ ಗುರುವಿನ ಅನುಗ್ರಹ ದೊರೆಯುತ್ತೆ. ನಾರದ ಮಹಷರ್ಿಯವರ ಗುರುಕೃಪೆ ದೊರೆತ ಮೇಲೆ, ಬೇಡರ ತರುಣ ವಲ್ಮೀಕಾಶ್ರಮದಲ್ಲಿ ತನ್ನ ಪಾಠ ಪ್ರವಚನ ಅಧ್ಯಯನವನ್ನು ಧ್ಯಾನರೂಪವಾದ ಉಗ್ರತಪಸ್ಸಿನಲ್ಲ್ಲಿ ಹಲವು ವರ್ಷಗಳನ್ನು ಹೆಚ್ಚಾಗಿ ಹೊರಗೆ ಎಲ್ಲಿಯೂ ಬರದಂತೆ ಕಳೆದಿರಬೇಕು. ಅವರ ಮೇಲೆ ಹುತ್ತು ಬೆಳೆದಿತ್ತು ಅನ್ನೋದು ಪ್ರತಿಮೆಯಲ್ಲಿ ಕಾಣಿಸುತ್ತೆ. ಗುರು ನಾರದರ ಪ್ರಸಾದದಿಂದ ರಾಮಮಂತ್ರ ಮತ್ತು ರಾಮಾಯಣದ ಕಥೆ ಎರಡರ ಸಿದ್ಧಿಯೂ ಸಿಗುತ್ತೆ, ಕೊನೆಗೆ ವಾಕ್ಯ ವಿಶಾರದನಾದ ಬೇಡ ಮಹಷರ್ಿಯಾಗುತ್ತಾರೆ.

    ಅಂತಹ ಅನಘ್ರ್ಯದಿವ್ಯವಾದಂತಹ, ಲೋಕೋತ್ತರ ರಸಭಾರದಿಂದ ಪರಿಪೂರ್ಣವಾಗಿದ್ದ, ಅವರ ಕವಿಚೇತನ, ಈ ಭುವನದ ಭಾಗ್ಯಕಾರಣವಾಗಿ ಕಾವ್ಯ ರೂಪದಲ್ಲಿ ಅವತರಿಸೋದಕ್ಕೆ ಒಂದು ನೆಪಮಾತ್ರದ ಘಟನೆ ನಡೆಯುತ್ತೆ. ಒಂದು ದಿನ ವಾಲ್ಮೀಕಿಯವರು ತಮ್ಮ ಆಶ್ರಮದ ಹತ್ತಿರ ಇದ್ದಂತಹ ತಮಸಾನದಿಗೆ ಬೆಳಗಿನ ಹೊತ್ತು ತೀರ್ಥದಲ್ಲಿ ಸ್ನಾನಕ್ಕೆ ಹೋಗಿರುತ್ತಾರೆ. ಆ ದಟ್ಟವಾದ ಕಾಡಿನಲ್ಲಿ ಆ ದಿನದ ವಾತಾವರಣ ದೈವಕಳೆಯಿಂದ ಕೂಡಿದೆಯೇನೋ ಅನ್ನಿಸುವಷ್ಟರ ಮಟ್ಟಿಗೆ ಸುಂದರವಾಗಿರುತ್ತೆ, ಯಾವುದೇ ಭಯವಿಲ್ಲದೇ ತಮ್ಮಷ್ಟಕ್ಕೆ ತಾವೇ ಹಾಡುತ್ತಾ ಆನಂದಪಡುತ್ತಾ ಇರುವ ಕ್ರೌಂಚ ಪಕ್ಷಿಗಳೆರಡನ್ನು ಅಂದ್ರೆ ಹಂಸಪಕ್ಷಿಗಳನ್ನು ಕಂಡಂತಹ ವಾಲ್ಮೀಕಿಯವರು ಬಹಳ ಸಂತೋಷದಿಂದ, ಆ ಪಕ್ಷಿಗಳ ಆನಂದದಲ್ಲಿ ತಾವೂ ಭಾಗಿಯಾಗಿ ನಿಂತು ನೋಡ್ತಾ ಇರೋ ಸಮಯದಲ್ಲಿ, ಅನಿರೀಕ್ಷಿತವಾಗಿ ಬಂದ ಬಾಣವೊಂದು ಗಂಡು ಕ್ರೌಂಚಪಕ್ಷಿಯನ್ನು ಬಲಿತೆಗೆದುಕೊಳ್ಳುತ್ತೆ, ಹೆಣ್ಣು ಕ್ರೌಂಚಪಕ್ಷಿ, ಕೆಳಗೆ ಬಾಣ ಸಹಿತವಾಗಿ ಬಿದ್ದು ಒದ್ದಾಡ್ತಾ ಇರೋ ಗಂಡು ಕ್ರೌಂಚಪಕ್ಷಿಯನ್ನು ಕಂಡು ಅಳುತ್ತಾ, ಕೂಗಾಡುತ್ತಾ ಸಂಕಟಪಡ್ತಾ ಹಾರಾಡುತ್ತಿರುತ್ತೆ, ಆ ದೃಶ್ಯವನ್ನು ಕಂಡಂತಹ ವಾಲ್ಮೀಕಿಯವರಿಗೆ ಕರುಣೆ ಉಕ್ಕಿ ಬರುತ್ತೆ, ಜೊತೆಗೆ ತಡೆಯಲಾರದಷ್ಟು ದುಃಖ ಅವರಿಗೆ ಆ ಕ್ಷಣ ಉಂಟಾಗುತ್ತೆ. ಆಗ ಮರದಾಚೆ ಅವಿತು ಕುಳಿತಿದ್ದಂತಹ ಬೇಡ ತನ್ನ ಬೇಟೆಯನ್ನು ಹುಡುಕಿಕೊಂಡು ಅಲ್ಲಿಗೆ ಓಡೋಡಿ ಬರ್ತಾನೆ. ಆಗ ಮಹಷರ್ಿ ವಾಲ್ಮೀಕಿಯವರು ಸ್ವಧರ್ಮಚಾರಿಯದಂತಹ ಆ ಬೇಡನನ್ನು ಅಧರ್ಮಚಾರಿ ಅಂತ ಹೇಳಿ, ಆ ಬೇಡನಿಗೆ ಹೀಗೆ ಶಾಪವನ್ನು ನೀಡ್ತಾರೆ.

    ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ
ಯತ್ ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮ್



ಹೇ ಬೇಡ, ಸಂತೋಷದಿಂದ ಹಾರಾಡ್ತಾ ಸುಖಪಡುತ್ತಿದ್ದಂತಹ ಕ್ರೌಂಚದಂಪತಿಗಳಲ್ಲಿ ಒಂದನ್ನು ನೀನು ಕೊಂದೆಯಲ್ಲ, ಎಂದೆಂದಿಗೂ ನಿನಗೆ ಏಳಿಗೆ ಆಗದಿರಲಿ ಅಂತ ಶಾಪ ಕೊಡ್ತಾರೆ.

ಮರುಕ್ಷಣವೇ ವಾಲ್ಮೀಕಿಯವರು ತಾವು ನುಡಿದಂತಹ ಕಠಿಣವಾಕ್ಯಕ್ಕೆ ತಾವೇ ನೊಂದುಕೊಂಡು, ಹಕ್ಕಿಯ ದುಃಖಕ್ಕೆ ಮರುಗಿ, ಕೋಪದಿಂದ ನಾನು ಎಂತಹ ಅಕಾರ್ಯವನ್ನು ಮಾಡಿಬಿಟ್ಟೆ, ಅಂತ ತಮ್ಮ ಗ್ರಹಣಬುದ್ದಿಗಾಗಿ ಪಶ್ಚಾತ್ತಾಪಪಡುತ್ತಾ, ಸಮೀಪದಲ್ಲಿದ್ದಂತಹ ತಮ್ಮ ಶಿಷ್ಯನಿಗೆ ಹೇಳ್ತಾರೆ,

ಪಾಪಬದ್ದೋಕ್ಷರ ಸಮಸ್ತಂತ್ರೀ ಲಯ ಸಮನ್ವಿತಃ
ಶಾಕೋರ್ತಸ್ಯ ಪ್ರವೃತ್ತೋ ಮೇ ಶ್ಲೋಕೋ ಭವತು ನಾನ್ಯಥಾ


ನಾನು ನುಡಿದದ್ದು, ಕೇವಲ ಶ್ಲೋಕ ಮಾತ್ರವಾಗಲಿ, ಅದು ಶಾಪ ಆಗೋದು ಬೇಡ ಅಂತ ಹೇಳ್ತಾರೆ.

    ನಂತರ ನದೀತೀರ್ಥದಲ್ಲಿ ಯಥಾವಿಧಿಯಾಗಿ ಸ್ನಾನಮಾಡಿ, ಆಶ್ರಮಕ್ಕೆ ಹಿಂತಿರುಗಿದ ಮಹಷರ್ಿ ವಾಲ್ಮೀಕಿಯವರು ಧ್ಯಾನಕ್ಕೆ ಕುಳಿತುಕೊಳ್ತಾರೆ. ಆಗ ಈ ಲೋಕದ ಸೃಷ್ಟಿಕರ್ತನೂ, ಸ್ವಯಂಪ್ರಭವೂ ಚತುಮರ್ುಖನೂ, ಮಹಾತೇಜಸ್ವಿಯೂ ಆದಂತಹ ಬ್ರಹ್ಮದೇವರು ಗೋಚರನಾಗಿ,  ತನ್ನ-ಕೋಪಕ್ಕೂ, ಕೊಟ್ಟ-ಶಾಪಕ್ಕೂ, ಚಿಂತಾಕ್ರಾಂತನಾಗಿದ್ದಂತಹ ವಾಲ್ಮೀಕಿಯವರಿಗೆ ಸಮಾಧಾನ ಹೇಳಿ, ಆದೇಶವನ್ನು ನೀಡುತ್ತಾರೆ. ನೀನು ಆ ಬೇಡನನ್ನು ಕುರಿತು ಹೇಳಿರುವುದರಲ್ಲಿ ಒಂದು ಶ್ಲೋಕ ರಚಿತವಾಗಿದೆ. ಅದಕ್ಕಾಗಿ ಶೋಕವೇಕೆ? ಆ ನನ್ನ ಛಂದಸ್ವರೂಪಿಣೆ ಸರಸ್ವತಿಯೆ, ನಿನ್ನಲ್ಲಿ ಅವತರಿಸಿದ್ದಾಳೆ. ಧೀಮಂತನೂ, ಧಮರ್ಾತ್ಮನೂ, ವೀರನೂ ಆಗಿರುವ ಶ್ರೀರಾಮನ ಚರಿತ್ರೆಯನ್ನು, ನೀನು ನಾರದ ಮಹಷರ್ಿಯಿಂದ ಕೇಳಿದಂತೆ, ಶ್ಲೋಕಬದ್ಧವಾಗಿ ಮಾಡು. ಅದು, ಸೀತಾ ರಾಮಲಕ್ಷ್ಮಣರಿಗೆ ಸಂಬಂಧಪಟ್ಟಿರಲಿ, ರಾಕ್ಷಸರಿಗೆ ಸಂಬಂಧಪಟ್ಟಿರಲಿ, ಯಾರ ವೃತ್ತವಾಗಲಿ, ಯಾರ ಚಿತ್ತವಾಗಲಿ, ಎಲ್ಲವೂ ನಿನಗೆ ಸಂಪೂರ್ಣವಾಗಿ ದರ್ಶನ ಪ್ರತ್ಯಕ್ಷವಾಗುತ್ತದೆ. ನಿನ್ನ ವಾಣಿಯಲ್ಲಿ ಸುಳ್ಳೆಂಬುದು ಒಂದಿಷ್ಟೂ ಸೇರುವುದಿಲ್ಲ. ಈ ಜಗತ್ತಿನಲ್ಲಿ ಎಲ್ಲಿಯವರೆಗೆ ಗಿರಿನದಿಗಳಿರುತ್ತವೆಯೋ, ಆ ವರೆಗೆ ಲೋಕಲೋಕಗಳಲ್ಲಿ ರಾಮಾಯಣ ಕಥೆ ಪ್ರಚುರವಾಗಿರುತ್ತದೆ. ಎಲ್ಲಿಯ ವರೆಗೆ ನಿನ್ನ ರಾಮಾಯಣ ಕಥಾಕೃತಿ ಪ್ರಚುರವಾಗಿರುತ್ತದೆಯೋ ಅಲ್ಲಿಯ ವರೆಗೆ ನೀನು ಈ ಮೇಲಣ ಮತ್ತು ಕೆಳಗಣ ಹದಿನಾಲ್ಕು ಲೋಕಗಳಲ್ಲಿಯೂ ಸರ್ವವ್ಯಾಪಿಯಾಗಿ, ಸರ್ವತೋಮುಖವಾಗಿ, ಸವರ್ೋದಯಕಾರಣನಾಗಿ, ಸರ್ವರಸಾನಂದರೂಪನಾಗಿ, ಇರುತ್ತೀಯಾ ಅಂತ ಹೇಳಿ ಆದೇಶವನ್ನಿತ್ತು ಆಶೀವರ್ಾದವನ್ನು ಮಾಡುತ್ತಾರೆ.

    ಬ್ರಹ್ಮದೇವರ ಆಶೀವರ್ಾದದಿಂದ ಮತ್ತು ಗುರು ನಾರದರ ಗುರುಕೃಪೆಯಿಂದ ವಾಲ್ಮೀಕಿಯವರು ರಾಮಾಯಣ ಕೃತಿಯನ್ನು ರಚಿಸುತ್ತಾರೆ. ಆ ರಾಮಾಯಣ ಕೃತಿ, ಅದು ಹುಟ್ಟಿದಾಗ ಕವಿಕೃತಿಯಾಗಿತ್ತು. ಆದರೆ, ಈಗ ಅದು ಪ್ರಕೃತಿಯಾಗಿದೆ. ಭಾರತದಂತಹ ಪವಿತ್ರ ದೇಶದ ಘನತೆಯನ್ನು ರಾಮಾಯಣದಂತಹ ಮಹಾಕಾವ್ಯವನ್ನು ಬರೆದು ಹೆಚ್ಚಿಸಿದ ಕೀತರ್ಿ ವಾಲ್ಮೀಕಿಯವರಿಗೆ ಸಲ್ಲುತ್ತದೆ.

    ಕವಿಮಹಷರ್ಿ ವಾಲ್ಮೀಕಿಯವರು ಆ ದಿನ ಹಾಡಿದ ರಾಮಾಯಣ, ಈ ದಿನ ಮತ್ತೊಮ್ಮೆ ನಮ್ಮಲ್ಲಿ ಮೂಡದ ಹೊರತು ಸಾರ್ಥಕವಾಗೋದಿಲ್ಲ. ರಾಮಾಯಣದ ವಿಚಾರಧಾರೆಗಳು, ತ್ಯಾಗ, ಪ್ರೀತಿ, ವಿಶ್ವಾಸ, ನಿಷ್ಠೆ, ಸ್ನೇಹದ ಭಾವನೆಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ, ವಾಲ್ಮೀಕಿಯವರ ಕೃತಿ ಸಾರ್ಥಕತೆಯನ್ನು ಪಡೆದುಕೊಳ್ಳುತ್ತೆ. ಅಲ್ಲದೆ, ನಮ್ಮ ಬದುಕಿಗೂ ಸಹ ಪುರುಷಾರ್ಥ ಸಿದ್ಧಿಯಾಗುತ್ತೆ. ರಾಮಾಯಣದ ವಿಚಾರಧಾರೆಗಳು, ನಮ್ಮನ್ನು ಪರಿಪೂರ್ಣ ಮನುಷ್ಯರನ್ನಾಗಿ ಮಾಡ್ತವೆ ಅನ್ನೋ ಅಂಶವನ್ನು ನಾವು ತಿಳಿದುಕೊಳ್ಳೋದಕ್ಕೆ ಪ್ರಯತ್ನ ಪಡಬೇಕು. 
   
ಜೈ ಶ್ರೀರಾಮ್, ಜೈ ಹನುಮಾನ್.
 

ಕನ್ನಡ ಸೇನಾನಿ ಪಿ.ಕೆ. ನಾರಾಯಣ

ದೇಶಭಕ್ತಿಯು ಚಿಮ್ಮುವ ಈ ಮುಂದಿನ ಕವನದ ಶೀರ್ಷಿಕೆ ಗಣರಾಜ ಗೀತೆ. ಈ ಗೀತೆ ಆರಂಭವಾಗುವುದು ಹೀಗೆ :
ಜಯ ಜಯ ಭಾರತ, ಜಯ ಜಯ ಭಾರತ ಜಯ ಭಾರತವೆಂದೆನ್ನಿ ||
ದಾಸ್ಯವನೋಡಿಸಿ, ಬಿಡುಗಡೆಯಾಡಿಸಿ
ಲಾಸ್ಯವ ಜನಮನಕೊದಗಿಸುತೀಗ
ಮೂಡಿತು ಭಾರತ ಗಣರಾಜ್ಯ!
ಹಾಡಿರಿ ಜನತೆಯ ಸಾಮ್ರಾಜ್ಯ!
ಋಷಿಗಳ ತಪಸು, ಕವಿಗಳ ಕನಸು
ಯೋಧರ ನೆನಸು, ಭಾರತ ಸೊಗಸು
ನವೀನ ಭಾರತ ಗಣರಾಜ್ಯ!
ಸುವೀರ ಚರಿತೆಯ ಸಾಮ್ರಾಜ್ಯ!
ಕೃಷ್ಣನ ಯೋಗವು ಬುದ್ಧನ ತ್ಯಾಗವು
ಗಾಂದಿಯ ಸತ್ಯವು ಅಹಿಂಸೆಯೆಲ್ಲವು
ಬೆರೆತಿಹ ಭಾರತ ಗಣರಾಜ್ಯ!
ಮೆರೆಯಲಿ ಧರ್ಮದ ಸಾಮ್ರಾಜ್ಯ!
ಸಮರದ ಯಾತನೆ ಜಗದಿಂ ತೊಲಗಿಸಿ
ಸಮತೆಯ ನೀತಿಯ ಜಗದಲಿ ಹಬ್ಬಿಸಿ
ಆಳಲಿ ಭಾರತ ಗಣರಾಜ್ಯ!
ಬಾಳಲಿ ಶಾಂತಿಯ ಸಾಮ್ರಾಜ್ಯ!
ಇಲ್ಲಿನ ಮಾತ್ರಾಲಯಗಳು ಗೇಯ ಪ್ರಧಾನವಾಗಿದ್ದು ಓದುಗರಲ್ಲಿ ದೇಶಭಕ್ತಿ ಹೊಮ್ಮು ವಂತೆ ಮಾಡುತ್ತವೆ. ಬಾಲ್ಯದಲ್ಲಿಯೇ ತಂದೆಯವರಿಗೆ ದೇಶದ ಮೇಲೆ ಭಕ್ತಿ ಹೆಚ್ಚು. ಯೌವನದ ಆರಂಭದಲ್ಲೇ ಸ್ವಾತಂತ್ರ್ಯದ ಹೋರಾಟದಲ್ಲಿ ಧುಮುಕಿ ಜೈಲಿಗೆ ಹೋದವರು ಅವರು. ಮೊಳಹಳ್ಳಿ ಶಿವರಾಯರ ಉಪದೇಶದಿಂದಾಗಿ, ಕುಟುಂಬದ ರಕ್ಷಣೆಗಾಗಿ ಅನಂತರ ಬಾಹ್ಯ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ಬಿಟ್ಟರೂ ಆ ಕಾಲದಲ್ಲಿ ರಚಿತವಾದ ಅವರ ಕವನಗಳಲ್ಲಿ, ಮಾಡಿದ ಭಾಷಣ ಗಳಲ್ಲಿ, ಬರೆದ ಲೇಖನಗಳಲ್ಲಿ ‘ದೇಶಭಕ್ತಿ’ ಎದ್ದು ಕಾಣುವ ಅಂಶವಾಗಿತ್ತು. ಗಾಂಧೀಜಿ, ನೆಹರೂ, ಅನ್ನಿಬೆಸೆಂಟ್ ಮೊದಲಾದ ರಾಷ್ಟ್ರನಾಯಕರನ್ನು ಕುರಿತ ಭಾಷಣಗಳನ್ನು, ಪ್ರಜಾಪ್ರಭುತ್ವ ದಿನಾಚರಣೆ, ಸ್ವಾತಂತ್ರ್ಯ ದಿನಾಚರಣೆಗಳಂಥ ರಾಷ್ಟ್ರೀಯ ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ಅವರ ಭಾಷಣಗಳನ್ನು ಕೇಳುವ ಸುಯೋಗ ನನ್ನದಾಗಿತ್ತು. ದೇಶಭಕ್ತಿಯ ಕೆಚ್ಚು, ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ ಸಾಮಾನ್ಯರ ತ್ಯಾಗ – ಬಲಿದಾನಗಳನ್ನು ಹೇಳುವಾಗ ಅವರು ತುಂಬ ಭಾವುಕರಾಗುತ್ತಿದ್ದರು clik this link ---------> ಕನ್ನಡ ಸೇನಾನಿ ಪಿ.ಕೆ. ನಾರಾಯಣ

ಮಾಧವ ಶ್ರೀಹರಿ ಅಣೆ

ದೇಶದ ಹಿತವನ್ನೇ ಮುಖ್ಯ ಗುರಿಯಾಗಿಟ್ಟು ಕೊಂಡು ಹಲವು ರೀತಿಗಳಲ್ಲಿ ದುಡಿದರು. ಬ್ರಿಟಿಷರ ಕಾನೂನು ಮುರಿದು ಸೆರೆಮನೆ ಸೇರಿದರು. ವೈಸರಾಯರ ಸಲಹಾಮಂಡಲಿಯಲ್ಲಿ ಕೆಲಸ ಮಾಡಿದರು. ವೈಸರಾಯಿ ತಪ್ಪು ಮಾಡಿದನೆಂದು ಕಂಡಾಗ ರಾಜೀನಾಮೆ ಕೊಟ್ಟರು. ಸ್ವತಂತ್ರ ಭಾರತದಲ್ಲಿಯೂ ಸೇವೆ ಸಲ್ಲಿಸಿದರು. ಮಾಧವ ಶ್ರೀಹರಿ ಅಣೆ

ಜಯಶಂಕರ ಪ್ರಸಾದ್

ಹಿಮಾದ್ರಿ ತುಂಗ ಶೃಂಗ ಸೇ
ಪ್ರಬುದ್ಧ ಶುದ್ಧ ಭಾರತೀ
ಸ್ವಯಂ ಪ್ರಭಾ ಸಮುಜ್ವಲಾ
ಸ್ವತಂತ್ರತಾ ಪುಕಾರತೀ..
ಅಮರ್ತ್ಯ, ವೀರಪುತ್ರ ಹೋ, ದೃಢ ಪ್ರತಿಜ್ಞ ಸೋಚ್ ಲೋ, ಪ್ರಶಸ್ತ ಪುಣ್ಯ ಪಂಥ ಹೈ .. ಬಡೇ ಚಲೋ ಬಡೇ ಚಲೋ

ಮೇಲಿನದು ಒಂದು ದೇಶಭಕ್ತಿಗೀತೆ, ಹಿಂದೀ ಭಾಷೆಯಲ್ಲಿದೆ. ನಮಗೆ ಸ್ವಾತಂತ್ರ್ಯ ಬರುವ ಮುನ್ನ ಅನೇಕ ಭಾರತೀಯರಲ್ಲಿ ದೇಶಾಭಿಮಾನ, ಸ್ವಾತಂತ್ರ್ಯ ಪ್ರೇಮವನ್ನು ಹುಟ್ಟಿಸಿದ ಗೀತೆ. ಇದರಲ್ಲಿ ಭಾರತ ಮಾತೆಯ ಗುಣಗಾನವಿದೆ. ಭಾರತೀಯರ ಕರ್ತವ್ಯದ ಬಗೆಗೆ ಕಳಕಳಿ ಇದೆ.
ಈ ದೇಶಭಕ್ತಿ ಗೀತೆಯನ್ನು ರಚಿಸಿದವರು ಪ್ರಸಿದ್ಧ ಹಿಂದೀ ಕವಿ ಜಯಶಂಕರ ಪ್ರಸಾದರು.
CLICK THIS LINK --------------> ಜಯಶಂಕರ ಪ್ರಸಾದ್

ಶಾಂತವೇರಿ ಗೋಪಾಲಗೌಡ

  ಶಾಂತವೇರಿ ಗೋಪಾಲಗೌಡ — ಬೆಂಕಿಯಂತಹ ವ್ಯಕ್ತಿತ್ವದ ಗೋಪಾಲ ಗೌಡರು ಅಧಿಕಾರಕ್ಕೆ ಆಸೆ ಪಡಲಿಲ್ಲ. ಸ್ವಾತಂತ್ರ್ಯದ ಹೋರಾಟದಲ್ಲಿ ಸೆರೆಮನೆ ಕಂಡರು. ಬಡತನವನ್ನು ಅನುಭವಿಸಿದ್ದ ಅವರು ಬಡವರಿಗಾಗಿ, ನಿಮ್ನ ವರ್ಗದವರಿಗಾಗಿ ಶ್ರಮಿಸಿದರು. ಕರ್ನಾಟಕದಲ್ಲಿ ಸಮಾಜವಾದ ಬಿತ್ತಿ ಬೆಳೆಸಿದರು.......... CLIK THIS LINK ...ಶಾಂತವೇರಿ ಗೋಪಾಲಗೌಡ

ಮುಂಡರಗಿ ಭೀಮರಾಯ

 ೧೮೫೭ರಲ್ಲಿ ಭಾರತೀಯರು ಬ್ರಿಟಿಷರ ವಿರುದ್ಧ ಸಿಡಿದೆದ್ದಾಗ ಸ್ವದೇಶಕ್ಕಾಗಿ ಪ್ರಾಣವನ್ನು ಅರ್ಪಿಸಿದ ಧೀರ. ರಾಜನಲ್ಲ, ರಾಜವಂಶಸ್ಥನಲ್ಲ, ದೇಸಾಯಿಯಲ್ಲ, ಜನತೆಯ ಪ್ರತಿನಿಧಿ. ವೀರನಾಗಿ ಬಾಳಿ ವೀರನಾಗಿ ಸಾವನ್ನು  ಆಹ್ವಾನಿಸಿದ.
ಮುಂಡರಗಿ ಭೀಮರಾಯ

ಸ್ವಾತಂತ್ರ್ಯ ಹೋರಾಟ ಚಾರಿತ್ರಿಕ ಅವಲೋಕನ

ಅಧ್ಯಾಯ 1: <span style='background-color: #ffff00'>ಸ್ವಾತಂತ್ರ್ಯ</span> ಹೋರಾಟ ಚಾರಿತ್ರಿಕ ಅವಲೋಕನ

ಭಾರತದ ರಾಷ್ಟ್ರಧ್ವಜವನ್ನು ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ ಹಾಗೂ ಜಿಲ್ಲಾ ಪಂಚಾಯತಿ ಕಛೇರಿಗಳಲ್ಲಿ ಪ್ರತಿದಿನ ಹಾರಿಸುವ ಬಗ್ಗೆ.

ಭಾರತದ ರಾಷ್ಟ್ರಧ್ವಜವನ್ನು ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ ಹಾಗೂ ಜಿಲ್ಲಾ ಪಂಚಾಯತಿ ಕಛೇರಿಗಳಲ್ಲಿ ಪ್ರತಿದಿನ ಹಾರಿಸುವ ಬಗ್ಗೆ.




"ಸಕಾಲ" ವ್ಯಾಪ್ತಿಯಡಿಗೆ ಪಿಂಚಣಿ ಯೋಜನೆಗಳು - ಇಂದು ಸಂಜೆ (ಆ-18-13)


ಹಿರಿಯ ವೇತನ ಶ್ರೇಣಿಗೆ ಸ್ವಯಂಚಾಲಿತ ವಿಶೇಷ ಪದೋನ್ನತಿಯ ಮಂಜೂರಾತಿಗಾಗಿ ಪ್ರಸ್ತಾವನಾ ಪತ್ರ

ಹಿರಿಯ ವೇತನ ಶ್ರೇಣಿಗೆ ಸ್ವಯಂಚಾಲಿತ ವಿಶೇಷ ಪದೋನ್ನತಿಯ ಮಂಜೂರಾತಿಗಾಗಿ ಪ್ರಸ್ತಾವನಾ ಪತ್ರ
ಸಕರ್ಾರಿ ಆದೇಶ ಸಂಖ್ಯೆ.ಎಫ್ಡಿ 25 ಎಸ್ಆರ್ಪಿ 91, ದಿನಾಂಕ:29-10-1991 ಮತ್ತು 4-1-1992 

ಶ್ರೀ ಮಣ್ಣೆಮ್ಮ ದೇವಿಯವರ ಜಾತ್ರಾ ಮಹೋತ್ಸವ


ಶ್ರೀ ಮಣ್ಣೆಮ್ಮ ದೇವಿಯವರ ಜಾತ್ರಾ ಮಹೋತ್ಸವ
(ದಿನಾಂಕ:29.04.2013 ರಿಂದ 05.04.2013 ರವರೆಗೆ)


 ಸರ್ವರಿಗೂ ಸುಸ್ವಾಗತ

ಗಂಗರಸರ ರಾಜಧಾನಿಯೆಂದೇ ಗುರುತಿಸಲ್ಪಡುವ ಮಣ್ಣೆ ಗ್ರಾಮದ ಗ್ರಾಮದೇವತೆ ಶ್ರೀ.ಮಣ್ಣೆಮ್ಮ ದೇವಿಯವರ ಜಾತ್ರಾಮಹೋತ್ಸವವು, ಮಣ್ಣೆ ಗ್ರಾಮದಲ್ಲಿ ದಿನಾಂಕ:29.04.2013 ರಿಂದ 05.04.2013 ರವರೆಗೆ ನಡೆಯಲಿದ್ದು, ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳು ಈ ಕೆಳಗಿನಂತಿರುತ್ತವೆ.

ದಿನಾಂಕ: 29.04.2013, ಸೋಮವಾರ, ಶ್ರೀ ಸೋಮೇಶ್ವರ ಸ್ವಾಮಿಗೆ ಬೆಲ್ಲದಾರತಿ :-
ಸಂಜೆ ಸುಮಾರು 5.00 ಗಂಟೆಗೆ ಮಣ್ಣೆ ಗ್ರಾಮದ ಮಧ್ಯಭಾಗ ಅಂದರೆ ದೇವಾಲಯಗಳ ಆವರಣದಿಂದ ಶ್ರೀ ಸೋಮೇಶ್ವರ ದೇವಾಲಯದವರೆವಿಗೂ ಬೆಲ್ಲದಾರತಿ ನಡೆಯುತ್ತದೆ. ಸುಮಾರು ಸಂಜೆ 6.00 ಗಂಟೆಗೆ ಸೋಮೇಶ್ವರ ಸ್ವಾಮಿಗೆ ಬೆಲ್ಲದಾರತಿ ಒಪ್ಪಿಸಿ ಭಕ್ತರು ತಮ್ಮ ತಮ್ಮ ಮನೆಗೆ ತೆರಳುತ್ತಾರೆ. ರಾತ್ರಿ ಮಣ್ಣೆ ಗ್ರಾಮದ ಪಕ್ಕದ ಗ್ರಾಮವಾದ ಕನ್ನೂಹಳ್ಳಿಯ ಕಲಾವಿದರಿಂದ ನಲ್ಲತಂಗ ಅಥವಾ ಶನಿಪ್ರಭಾವ ಎಂಬ ಸುಂದರ ಪೌರಾಣಿಕ ನಾಟಕವನ್ನು ಮಣ್ಣೆ ಗ್ರಾಮದಲ್ಲಿ ಅಭಿನಯಿಸಲಿದ್ದಾರೆ.

ದಿನಾಂಕ: 30.04.2013, ಮಂಗಳವಾರ, ಶ್ರೀ ಮಣ್ಣೆಮ್ಮದೇವಿಯವರಿಗೆ ಉಪಾಹಾರ:-
    ಮಣ್ಣೆಮ್ಮ ದೇವಿಯು ಅಕ್ಕಪಕ್ಕದ ಊರಿನ ಪ್ರತಿ ಮನೆಗೆ ಹೋಗಿ ಮಡಿಲಕ್ಕಿಯನ್ನು ಕಟ್ಟಿಸಿಕೊಂಡು ರಾತ್ರಿ ಸುಮಾರು 8.30 ಗಂಟೆಗೆ ಮಣ್ಣೆ ಫೌಡಶಾಲೆಯ ಬಳಿ ಇರುವ ಪ್ರಥಮ ಪೂಜಾ ಮಂಟಪ (ಮಹಾನವಮಿ ಮಂಟಪ) ಕ್ಕೆ ಬಂದು ನಂತರ ಹೂವಿನ ಪಲ್ಲಕ್ಕಿಯೊಂದಿಗೆ ಮಣ್ಣೆಮ್ಮ ದೇವಾಲಯದವರೆವಿಗೆ ಮೊಸರನ್ನದ ಉಪಹಾರದೊಂದಿಗೆ ಮೆರವಣಿಗೆ ನಡೆಯುತ್ತದೆ.

ದಿನಾಂಕ:01.04.2013, ಬುಧವಾರ, ರಾಶಿಪೂಜೆ :-
    ಈ ದಿನವೂ ಸಹ ಮಣ್ಣೆಮ್ಮ ದೇವಿಯು ಮಣ್ಣೆ ಗ್ರಾಮದ ಅಕ್ಕಪಕ್ಕದ ಗ್ರಾಮಗಳ ಮನೆಮನೆಗೆ ತೆರಳಿ ಮಡಲಕ್ಕಿಯನ್ನು ಕಟ್ಟಿಸಿಕೊಂಡು ರಾತ್ರಿ ಸುಮಾರು 8.30 ಗಂಟೆಗೆ ಮಣ್ಣೆಮ್ಮ ದೇವಾಲಯಕ್ಕೆ ತೆರಳುತ್ತಾರೆ. ನಂತರ ಶ್ರೀ ಮಣ್ಣೆಮ್ಮ ದೇವಿಯವರ ಪವಾಡಗಳನ್ನು ಹಾಡಿ ಹೊಗಳುತ್ತಾರೆ ಮತ್ತು ತಾಯಿಯ ಸಹೋದರರಾದ ವೈಯಾಳಿ ಪೋತರಾಜ ಮತ್ತು ಚನ್ನಾಂಗಲದ ವೀರಭದ್ರರಿಗೆ ಮಾಂಸದ ಅಡುಗೆಯ ರಾಶಿಯನ್ನು ಎಡೆಯಿಟ್ಟು ರಾಶಿಪೂಜೆ ನೆರವೇರಿಸುತ್ತಾರೆ. ಈ ದಿನ ರಾತ್ರಿ 8.30 ಗಂಟೆಗೆ ಮಣ್ಣೆಮ್ಮದೇವಿಯ ರಥೋತ್ಸವ ಬೀದಿಯಲ್ಲಿ ಮಣ್ಣೆಯ ಕಲಾವಿದರಿಂದ ಶ್ರೀಕೃಷ್ಣ ಸಂಧಾನ ಅಥವಾ ಕುರುಕ್ಷೇತ್ರ ಎಂಬ ಸುಂದರ ಪೌರಾಣಿಕ ನಾಟಕವನ್ನು ಅಭಿನಯಿಸಲಿದ್ದಾರೆ

ದಿನಾಂಕ: 02.04.2013, ಗುರವಾರ, ಶ್ರೀ ಮಣ್ಣೆಮ್ಮದೇವಿಯವರಿಗೆ ತಂಬಿಟ್ಟಿನಾರತಿ ಮತ್ತು ಅಗ್ನಿ ಕೊಂಡ ಪೂಜೆ:-
ಈ ದಿನ ವಿಶೇಷವಾಗಿ ಮಣ್ಣೆ ಜಾತ್ರಾ ಮಹೋತ್ಸವಕ್ಕೆ ಹೆಚ್ಚಿನ ಚಾಲನೆ ದೊರೆಯುತ್ತದೆ. ಬೆಳಗ್ಗೆ ಸುಮಾರು 8.00 ಗಂಟೆಗೆ ಮಣ್ಣೆಮ್ಮ ದೇವಿಯು ವಿವಿಧ ಪುಷ್ಪಗಳಿಂದ ಅಲಂಕೃತವಾಗಿ ಹೆಜ್ಜೆ ಹೆಜ್ಜೆಗೆ ತೆಂಗಿನಕಾಯಿಯ ಈಡುಗಾಯಿಯನ್ನು ಹಾಕಿಸಿಕೊಳ್ಳುತ್ತಾ, ಕುಣಿದು ಕುಪ್ಪಳಿಸಿ ಮಣ್ಣೆ ಗ್ರಾಮಕ್ಕೆ ಪ್ರವೇಶಿಸುವ ದೃಶ್ಯ ನೋಡುಗರ ಕಣ್ತುಂಬಿಕೊಳ್ಳುತ್ತದೆ. ಈ ದಿನ ಮಣ್ಣೆ ಗ್ರಾಮದ ಮಧ್ಯಭಾಗದಲ್ಲಿರುವ ದೇವಾಲಯಗಳ ಆವರಣದಲ್ಲಿ ಮಣ್ಣೆ ಗ್ರಾಮದ ಹಾಗೂ ಅಕ್ಕಪಕ್ಕದ ಸುಮಾರು ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಾರೆ. ಊರು ಪ್ರವೇಶಿಸುತ್ತಿದ್ದಂತೆಯೇ ತೆಂಗಿನ ಕಾಯಿಯ ಈಡುಗಾಯಿಯ ಸುರಿಮಳೆಯೇ ಹರಿಯುತ್ತದೆ. ದೇವರಾಟ, ಸೋಮನ ಕುಣಿತ ಇತ್ಯಾದಿ ಆಚಾರಗಳು ಮುಗಿದ ನಂತರ ಮಣ್ಣೆಮ್ಮ ದೇವಿಯವರಿಗೆ ಲಿಂಗಧಾರಣೆ ನಂತರ ಪ್ರತಿ ಮನೆಮನೆಗೂ ತೆರಳಿ ಮಡಿಲಕ್ಕಿಯನ್ನು ತುಂಬಿಸಿಕೊಂಡು ಪಲ್ಲಕ್ಕಿಯ ಮೇಲೆ ಬಂದು ಕುಳಿತುಕೊಂಡು ಮಣ್ಣೆಮ್ಮದೇವಿಯವರ ದೇವಾಲಯದವರೆಗೂ ಮೆರಣಿಗೆ ತೆರಳಿ ನಂತರ ಕೊಂಡಪೂಜೆ ನೆರವೇರಿಸಲಾಗುತ್ತದೆ.



ದಿನಾಂಕ: 03.04.2013, ಶುಕ್ರವಾರ, ಬಾಡೂಟ ಮತ್ತು ಕುಕ್ಕಲಮ್ಮದೇವಿಗೆ ತಂಬಿಟ್ಟಿನಾರತಿ:-
ಈ ದಿನ ಮಾಂಸಾಹಾರಿಗಳ ಪ್ರತಿ ಮನೆಯಲ್ಲೂ ವಿಶೇಷವಾದ ಮಾಂಸದೂಟದ ಭಕ್ಷ್ಯ ಭೋಜನಗಳು ನಡೆಯುತ್ತದೆ ಹಾಗೂ ಸಂಜೆ ಸುಮಾರು 5.30 ಗಂಟೆಗೆ ಊರಾಚೆಯ ಕುಕ್ಕಲಮ್ಮದೇವರಿಗೆ ತಂಬಿಟ್ಟಿನಾರತಿ ಕಾರ್ಯಕ್ರಮ ಇರುತ್ತದೆ. ಈ ದಿನ ರಾತ್ರಿ 8.30 ಗಂಟೆಗೆ ಮಣ್ಣೆಮ್ಮದೇವಿಯ ರಥೋತ್ಸವ ಬೀದಿಯಲ್ಲಿ ಮಣ್ಣೆಯ ಮತ್ತೊಂದು ನುರಿತ ಕಲಾ ತಂಡದವರಿಂದ ಶ್ರೀಕೃಷ್ಣ ಸಂಧಾನ ಅಥವಾ ಕುರುಕ್ಷೇತ್ರ ಎಂಬ ಸುಂದರ ಪೌರಾಣಿಕ ನಾಟಕವನ್ನು ಅಭಿನಯಿಸಲಿದ್ದಾರೆ)

ದಿನಾಂಕ: 04.04.2013, ಶನಿವಾರ, ಶ್ರೀ ಮಣ್ಣೆಮ್ಮದೇವಿಯವರ ರಥೋತ್ಸವ:-
ಈ ದಿನ ಸಂಜೆ ಸುಮಾರು 4.30 ಗಂಟೆಗೆ ಮಣ್ಣೆಮ್ಮ ದೇವಿಯವರನ್ನು ರಥೋತ್ಸವ ಜರುಗುತ್ತದೆ ಈ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ


ದಿನಾಂಕ: 05.04.2013, ಭಾನುವಾರ, ಕಡೆ ಪರಿಷೆ, ಶ್ರೀ ಆಂಜನೇಯ ಸ್ವಾಮಿಗೆ ಬೆಲ್ಲದಾರತಿ, ಸುಲಿಗೆ ಸೇವೆ:-
ಈ ದಿನ ಮಣ್ಣೆ ಗ್ರಾಮದಲ್ಲಿರುವ ಎಲ್ಲಾ ದೇವಾಲಯಗಳು ವಿಶೇಷವಾಗಿ ಅಲಂಕೃತಗೊಂಡಿದ್ದು, ನಾನಾ ರೀತಿಯ ಪೂಜೆ ಪುನಸ್ಕಾರಗಳು ಬೆಳಗ್ಗಿನಿಂದ ಸಂಜೆಯವರಿಗೆ ಜರುಗುತ್ತಿರುತ್ತದೆ. ಈ ದಿನ ಜಾತ್ರೋತ್ಸವದ ಕಡೆ ದಿನವಾಗಿದ್ದು ರಥೋತ್ಸವದ ಬೀದಿಯ ಸೊಬಗು ಇನ್ನೂ ಸ್ವಲ್ಪ ಉಳಿದಿರುತ್ತದೆ. ಸಂಜೆ ಸುಮಾರು 6.00 ಗಂಟೆಗೆ ಊರ ಮಧ್ಯಭಾಗದಿಂದ ಶ್ರೀ ಆಂಜನೇಯ ಸ್ವಾಮಿಗೆ ಬೆಲ್ಲದಾರತಿ ನಡೆಯುತ್ತದೆ. ನಂತರ ಸುಮಾರು ರಾತ್ರಿ 7.00 ಗಂಟೆಗೆ ಊರ ಹೊರಗಿನ ಎಲ್ಲಾ ದೇವಾಲಯಗಳಿಂದ ಮೆರವಣಿಗೆ ದೇವರುಗಳು ಮುತ್ತಿನ ಪಲ್ಲಕ್ಕಿಯೊಂದಿಗೆ ವಿವಿಧ ವಾದ್ಯ ತಾಳ ಮೇಳಗಳೊಂದಿಗೆ ಊರನ್ನು ಪ್ರವೇಶಿಸುತ್ತವೆ. ನಂತರ ಎಲ್ಲಾ ದೇವರುಗಳನ್ನು ದೇವಾಲಯದ ಜಗುಲಿಯ ಮೇಲೆ ಕೂರಿಸಿ ಜನಪದ ಆಚರಣೆಗಳಾದ ದೇವರಾಟ, ದೊಡ್ಡಾಟ, ಕಳ್ಳಾಟ, ಸುಲಿಗೆ ಸೇವೆ, ಸೋಮನ ಕುಣಿತ, ಇತ್ಯಾದಿ ಆಟಗಳು ನಡೆಯುತ್ತವೆ.


ಸರ್ವರಿಗೂ ಆದರದ ಸುಸ್ವಾಗತ

ವಂದನೆಗಳೊಂದಿಗೆ,

ವಿಶ್ವನಾಥ್.ಬಿ.ಮಣ್ಣೆ
ಅಧ್ಯಕ್ಷರು,
ಜೀವ ಕಲಾ ಕನ್ನಡ ಸೇವಾ ಸಂಘ, ಮಣ್ಣೆ,