ಪುಟಗಳು

ವೇದ

ಪ್ರಪಂಚದ ಅತ್ಯಂತ ಪುರಾತನ ಗ್ರಂಥಗಳಲ್ಲಿ ವೇದಗಳು ಮುಖ್ಯವಾದುವು.
ವೇದಗಳು ಭಾರತೀಯ ಸಂಸ್ಕೃತಿಯ ಅತ್ಯಂತ ಪ್ರಮುಖ ಗ್ರಂಥಗಳು. ವೇದಗಳು ನಾಲ್ಕು - ಋಗ್ವೇದ, ಸಾಮವೇದ, ಯಜುರ್ವೇದ ಮತ್ತು ಅಥರ್ವವೇದ. ಈ ನಾಲ್ಕು ವೇದಗಳಲ್ಲಿ ಋಗ್ವೇದವೇ ಅತ್ಯಂತ ಹಳೆಯದು, ಋಗ್ವೇದದ ಕಾಲ ಕ್ರಿ.ಪೂ ೧೫೦೦ಕ್ಕಿಂತ ಹಿಂದೆ ಇದ್ದಿರಬಹುದು. ವೇದ ವಾಙ್ಮಯ ಪ್ರಭಾವವು ಬೌದ್ಧ, ಜೈನ ಮತ್ತು ಸಿಖ್ ಧರ್ಮಗಳ ಬೆಳವಣಿಗೆಯಲ್ಲಿ ಪ್ರಮುಖವಾದುದು.
ಉಪನಿಷತ್ತುಗಳನ್ನು ವೇದಾಂತ ಎನ್ನುತ್ತಾರೆ.

ಉಗಮ
ಹಿ೦ದೂ ಸ೦ಪ್ರದಾಯದ೦ತೆ ವೇದಗಳು ಅಪೌರುಷೇಯವಾದವು, ಎ೦ದೆ೦ದಿಗೂ ಅಸ್ತಿತ್ವದಲ್ಲಿ ಇದ್ದಿರುವ೦ಥವು. ಹೀಗೆ ಅವು ಹಿ೦ದೂ ಶ್ರುತಿ ಪಠ್ಯಗಳ ಗು೦ಪಿಗೆ ಸೇರುತ್ತವೆ. ಚಾರಿತ್ರಿಕವಾಗಿ, ವೇದಗಳ ಉಗಮದ ಕಾಲ ಮತ್ತು ಸ್ಥಳ ಭಾರತೀಯ ಹಾಗೂ ಪಾಶ್ಚಾತ್ಯ ಚರಿತ್ರಜ್ಞರಿ೦ದ ಬಹಳಷ್ಟು ಸಿದ್ಧಾ೦ತಗಳನ್ನು ಕ೦ಡಿವೆ. ಫಿಷರ್ ಮೊದಲಾದ ಚರಿತ್ರಜ್ಞರು ವೇದಗಳು ೮೦೦೦ ವರ್ಷಗಳಿ೦ದಲೂ ಅಸ್ತಿತ್ವದಲ್ಲಿದ್ದಿವೆ ಎ೦ದು ಅಭಿಪ್ರಾಯಪಟ್ಟಿದ್ದರೂ, ಬಹುಪಾಲು ಚರಿತ್ರಜ್ಞರ ಅಭಿಪ್ರಾಯದ೦ತೆ ವೇದಗಳ ಸ೦ಕಲನ ಸುಮಾರು ಕ್ರಿ.ಪೂ ೧೮೦೦ ಕ್ಕೆ ಪ್ರಾರ೦ಭವಾಗಿ ಕ್ರಿ.ಪೂ ೮೦೦ ರ ವರೆಗೆ ಎ೦ದು.
ಸಾ೦ಪ್ರದಾಯಿಕವಾಗಿ, ಋಗ್ವೇದ ಸ೦ಹಿತೆಯ ಸ೦ಕಲನ ವೇದವ್ಯಾಸರ ಸೂಚನೆಯ೦ತೆ ಪೈಲ ಮಹರ್ಷಿಗಳಿ೦ದ ನಡೆಯಿತ೦ತೆ. ಧಾರ್ಮಿಕ ಮತ್ತು ಸಾಮಾಜಿಕ ಆಚರಣೆಗಳಲ್ಲಿ ಬಳಸಲ್ಪಡುವ ಮ೦ತ್ರಗಳ ಸ೦ಕಲನ ಯಜುರ್ವೇದ ಸ೦ಹಿತೆಯಾಗಿ ಬೆಳೆಯಿತು. ಸ೦ಗೀತಕ್ಕೆ ಹೊ೦ದುವ೦ತೆ ಬರೆಯಲಾದ ಅನೇಕ ಮ೦ತ್ರಗಳ ಸ೦ಕಲನ ಸಾಮವೇದ - ನಾಲ್ಕು ವೇದಗಳಲ್ಲಿ ಕೊನೆಯದು ಅಥರ್ವವೇದ. ಅಥರ್ವವು ಯಂತ್ರ,ತಂತ್ರಗಳ ಬಗ್ಗೆ ವಿವರಗಳನ್ನೊಳಗೊಂಡಿದೆ. ಪ್ರತಿ ವೇದಕ್ಕೂ ಒಂದು ಉಪವೇದವಿದೆ.

ಋಗ್ವೇದ
ನಾಲ್ಕು ವೇದಗಳಲ್ಲಿ ಮೊದಲನೆಯದು.ಚತುರ್ಮುಖ ಬ್ರಹ್ಮನ ಪೂರ್ವಮುಖದಿಂದ ಹೊರಬಂದಿದೆ.ಈ ವೇದದ ಮಂತ್ರಗಳನ್ನು ಯಜ್ಞ,ಯಾಗಾದಿಗಳನ್ನು ಮಾಡುವಾಗ,ದೇವತೆಗಳನ್ನು ಆಹ್ವಾನಿಸಲು ಉಪಯೋಗಿಸುತ್ತಾರೆ.ಯಜ್ಞದಲ್ಲಿ ಋಗ್ವೇದ ಮಂತ್ರಗಳನ್ನು ಪಠಿಸುವವರಿಗೆ "ಹೋತೃ"ವೆಂದು ಕರೆಯುತ್ತಾರೆ.ಋಗ್ವೇದದಲ್ಲಿ ಅನೇಕ ಶಾಖೆಗಳಿವೆ.ಆಯುರ್ವೇದ ಇದರ ಉಪವೇದ.

ಯಜುರ್ವೇದ
ಯಜುರ್ವೇದನಾಲ್ಕು ವೇದಗಳಲ್ಲಿ ಎರಡನೆಯದು.ಯಜ್ಞಯಾಗಾದಿಗಳ ವಿವರವಾದ ಕ್ರಮ ವಿವರಣೆಗಳು ಸೇರಿದೆ.ಇದರಲ್ಲಿ ೪೦ ಅಧ್ಯಾಯಗಳಿವೆ.ಯಜುರ್ವೇದದಲ್ಲಿ ಎರಡು ವಿಧಗಳಿದ್ದು ಕೃಷ್ಣ ಯಜುರ್ವೇದ ಹಾಗೂ ಶುಕ್ಲ ಯಜುರ್ವೇದಗಳೆಂದು ಹೆಸರು.ಕೃಷ್ಣಯಜುರ್ವೇದಕ್ಕೆ ತೈತ್ತೀರಿಯ ಸಂಹಿತೆ ಎಂದೂ ಶುಕ್ಲಯಜುರ್ವೇದಕ್ಕೆ ವಾಜಸನೇಯ ಸಂಹಿತೆ ಎಂದೂ ಹೆಸರಿದೆ.ಧನುರ್ವೇದ ಇದರ ಉಪವೇದ.

ಸಾಮವೇದ
ಸಾಮವೇದ ಮಂತ್ರಗಳನ್ನು ಸ್ವರ ಸಂಯೋಜನೆ ಮಾಡಿ ಹಾಡುವುದಕ್ಕೆ ಸಾಮ ಎಂದು ಹೇಳುತ್ತಾರೆ. ಸಾಮವೇದವು ಗಾನರೂಪವಾಗಿ ಹಾಡುವ ಮಂತ್ರಗಳಿಂದ ಕೂಡಿದ ವೇದವಾಗಿದೆ.ದೇವತೆಗಳನ್ನು ಸ್ತುತಿಸುವ ಮಂತ್ರಗಳು ಇದರಲ್ಲಿ ಸೇರಿದ್ದು ಎಲ್ಲವನ್ನೂ ಸ್ವರಲಯಸಹಿತ ಛಂದೋಬದ್ದವಾಗಿ ಹೇಳಬೇಕಾಗಿದೆ. ಈ ವೇದದಲ್ಲಿ ಋಗ್ವೇದದ ಮಂತ್ರಗಳೇ ಹೆಚ್ಚು ಇದ್ದು ಹೆಚ್ಚು ಕಡಿಮೆ ೭೮ ಮಂತ್ರಗಳು ಮಾತ್ರ ಹೊಸತಾಗಿವೆ.ಇದರಲ್ಲಿ ೧೫ ಭಾಗಗಳಿದ್ದು ೩೨ ಅಧ್ಯಾಯಗಳಿವೆ.ಗಾಂಧರ್ವವೇದ ಇದರ ಉಪವೇದ.

ಅಥರ್ವವೇದ
ಅಥರ್ವವೇದಹಿಂದೂ ಧರ್ಮದ ನಾಲ್ಕು ವೇದಗಳಲ್ಲಿ ಕೊನೆಯದು.ಅಥರ್ವಣ ಅಂಗೀರಸ ಋಷಿಗಳು ರಚಿಸಿದ ಮಂತ್ರಗಳಿಂದ ಕೂಡಿದ ವೇದವಾದುದರಿಂದ ಈ ಹೆಸೆರು.ಇದರಲ್ಲಿ ೨೦ ಕಾಂಡಗಳೂ,೭೬೦ ಸೂಕ್ತಗಳೂ,೬೦೦೦ ಮಂತ್ರಗಳೂ ಇವೆ.ಗದ್ಯ ಹಾಗೂ ಪದ್ಯ ಎರಡೂ ಶೈಲಿಯಲ್ಲಿ ರಚಿತವಾಗಿದೆ.ಈ ವೇದದಲ್ಲಿ ವಿವಾಹ ಪದ್ಧತಿ,ಶವಸಂಸ್ಕಾರ,ಗೃಹನಿರ್ಮಾಣ ಮುಂತಾದ ಜನರ ದಿನನಿತ್ಯದ ಜೀವನಕ್ಕೆ ಸಂಬಂಧಿಸಿದ ವಿಚಾರಗಳು ಕೂಡಾ ಸೇರಿಕೊಂಡಿದೆ.ಮಾಟ ಮಂತ್ರ,ಯಕ್ಷಿಣಿವಿದ್ಯೆ,ಇಂದ್ರಜಾಲ ಮುಂತಾದವುಗಳೂ ವಿಸ್ತಾರವಾಗಿ ಪ್ರಸ್ತಾಪಿಸಲ್ಪಟ್ಟಿದೆ.ಧನುರ್ವಿದ್ಯೆ,ರೋಗನಿವಾರಣೋಪಾಯ,ಔಷಧಿಗಳ ವಿವರ ಕೂಡಾ ಇದರಲ್ಲಿದೆ.ಯಜ್ಞಯಾಗಾದಿಗಳನ್ನು ನಿರ್ವಹಿಸುವ ಕ್ರಮದ ವಿವರಗಳೂ ಸೇರಿದೆ.

The Karnataka State Civil Service Act 1978















ಸ್ವಾಮಿ ವಿವೇಕಾನಂದ


ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ - ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ.

ಸಿಂಹ ವಾಣಿ
ಎದ್ದೇಳಿ, ಕಾರ್ಯೋನ್ಮುಕರಾಗಿ ಈ ಬದುಕಾದರು ಎಷ್ಟು ದಿನ ಮಾನವರಾಗಿ ಹುಟ್ಟಿದಮೇಲೆ ಏನಾದರು ಸಾಧಿಸಿ
ಏಳಿ, ಎದ್ದೇಳಿ ಕಬ್ಬಿಣದ ಮಾಂಸಖಂಡ, ಉಕ್ಕಿನ ನರಮಂಡಲ,ವಿಧ್ಯುತ್ ಇಚ್ಛಾಶಕ್ತಿಯನ್ನು ಬೆಳಸಿಕೊಳ್ಳಿ ಕಾರ್ಯಪ್ರವೃತ್ತರಾಗಿ
ನಿಮ್ಮ ಯೋಚನೆಯಂತೆ ನೀವು, ನೀವೊಬ್ಬ ಋಷಿ ಎಂದು ಭಾವಿಸಿದರೆ ಋಷಿಯೇ ಆಗುತ್ತೀರಿ
ತಾನು ಧುರ್ಬಲ ಎಂದು ಹೇಳುವುದು ಅತ್ಯಂತ ದೊಡ್ಡ ಅಪರಾಧ.
ಈ ಪ್ರಪಂಚದಲ್ಲಿರುವ ಎಲ್ಲಾಶಕ್ತಿಗಳು ಈಗಾಗಲೆ ನಮ್ಮವು, ನಮ್ಮ ಕಣ್ಣಿಗೆ ನಾವೇ ಬಟ್ಟೆ ಕಟ್ಟಿ ಕಟ್ಟಿಕೊಂಡು ಕತ್ತಲೆ ಎನ್ನುತ್ತಿದ್ದೇವೆ
ಮನದೊಳಗೆ ಪುಸ್ತಕ ತೆರೆಯದ ಹೊರತು ಎಷ್ಟು ಪುಸ್ತಕ ಓದಿದರು ವ್ಯರ್ಥ
ಜೀವನವೋಂದು ಗರಡಿ ಮನೆ ಇಲ್ಲಿ ಬಲಿಷ್ಥರಾಗಲು ಬಂದಿದ್ದೇವೆ

ಕಲಕತ್ತೆಯಲ್ಲಿ ಜನನ :
ವಿವೇಕಾನಂದರ ಪೂರ್ವಾಶ್ರಮದ ಹೆಸರು ನರೇಂದ್ರನಾಥ ದತ್ತ. ಇವರು ೧೮೬೩ ರಲ್ಲಿ ಕಲಕತ್ತೆಯಲ್ಲಿ ಜನಿಸಿದರು. ಶ್ರೀ ರಾಮಕೃಷ್ಣ ಪರಮಹಂಸರ ಶಿಷ್ಯರಾದ ಮೇಲೆ ವಿವೇಕಾನಂದ ಎಂಬ ಹೆಸರನ್ನು ಪಡೆದರು. ಕಲ್ಕತ್ತೆಯ ಸ್ಕಾಟಿಷ್ ಚರ್ಚ್ ಕಾಲೇಜಿನಲ್ಲಿ ತತ್ತ್ವಶಾಸ್ತ್ರ ಅಧ್ಯಯನ ಮಾಡಿದರು.

ಅದ್ವೈತಸಿದ್ಧಾಂತದ ಉಪಯುಕ್ತತೆಯನ್ನು ಬೋಧಿಸಿದರು
ಕೇವಲ ರಾಮಕೃಷ್ಣ ಪರಮಹಂಸರ ಶಿಷ್ಯರಾಗದೆ ತಮ್ಮದೇ ಶೈಲಿಯಲ್ಲಿ ಸಹ ದೊಡ್ಡ ಚಿಂತಕರಾಗಿ ವಿವೇಕಾನಂದರು ಹೆಸರು ಪಡೆದಿದ್ದಾರೆ. ಅವರ ಮುಖ್ಯ ಕಾಣಿಕೆಯೆಂದರೆ ಅದ್ವೈತ ಸಿದ್ಧಾಂತ ಕೇವಲ ತಾತ್ವಿಕವಾಗಿ ಉಚ್ಚ ತತ್ತ್ವಜ್ಞಾನ ಮಾತ್ರವಲ್ಲದೆ ಸಾಮಾಜಿಕ ಹಾಗೂ ರಾಜಕೀಯ ದೃಷ್ಟಿಯಿಂದಲೂ ಉಪಯುಕ್ತ ಎಂಬುದನ್ನು ತೋರಿಸಿಕೊಟ್ಟರು. ಅವರ ಅಭಿಪ್ರಾಯದಂತೆ, ರಾಮಕೃಷ್ಣರಿಂದ ಅವರು ಪಡೆದ ಮುಖ್ಯ ಬೋಧನೆಗಳಲ್ಲಿ ಒಂದೆಂದರೆ ಎಲ್ಲರಲ್ಲಿಯೂ ದೇವರಿದ್ದಾನೆ ಎಂಬುದು. ಇದೇ ಅವರ ಮಂತ್ರವಾಯಿತು, ಮತ್ತು ಅವರ "ದರಿದ್ರ ನಾರಾಯಣ ಸೇವೆ' ಎಂಬ ತತ್ತ್ವಕ್ಕೆ ದಾರಿ ಮಾಡಿಕೊಟ್ಟಿತು. ಈ ತತ್ತ್ವದಂತೆ ಬಡ ಜನರ ಸೇವೆಯಲ್ಲಿಯೇ ದೇವರ ಸೇವೆಯನ್ನು ಮಾಡುವ ದಾರಿಯನ್ನು ಅವರು ಪಾಲಿಸಿದರು. ಎಲ್ಲರಲ್ಲಿಯೂ ದೇವರಿದ್ದು ಎಲ್ಲರೂ ಸಮಾನರೆಂದಾದ ಮೇಲೆ ಕೆಲವರಿಗೆ ಮಾತ್ರ ಏಕೆ ಹೆಚ್ಚು ಬೆಲೆ ಬರಬೇಕು ಎಂಬ ಪ್ರಶ್ನೆಯನ್ನು ವಿವೇಕಾನಂದರು ಕೇಳಿಕೊಂಡರು. ಅವರ ಅಂತಿಮವಾದ ತೀರ್ಮಾನವೆಂದರೆ ಭಕ್ತನು ಮೋಕ್ಷವನ್ನು ಅನುಭವಿಸಿದಾಗ ನಮ್ಮಲ್ಲಿರುವ ಎಲ್ಲ ಭೇದಗಳೂ ಮಾಯವಾಗಿ, ಉಳಿಯುವುದೆಂದರೆ ಬ್ರಹ್ಮನೊಂದಿಗೆ ತಮ್ಮ ಐಕ್ಯವನ್ನು ಅರಿಯದ ಮತ್ತು ಕೆಳತುಳಿಯಲ್ಪಟ್ಟಿರುವ ಜನರ ಬಗೆಗೆ ಸಂತಾಪ ಮತ್ತು ಅವರಿಗೆ ಸಹಾಯ ಮಾಡುವ ಸದೃಢ ನಿಶ್ಚಯ.

ವಿವೇಕಾನಂದರ ವಿಶ್ವಪರ್ಯಟನೆ
ಅವರು ಪ್ರಪಂಚದಾದ್ಯಂತ ಪ್ರಯಾಣಮಾಡಿ, ಅಲ್ಲಿನ ಭಕ್ತರನ್ನುದ್ದೇಶಿಸಿ ಮಾಡಿದ ಭಾಷಣಗಳನ್ನು ಒಟ್ಟುಗೂಡಿಸಿ ಬರೆಯಲ್ಪಟ್ಟ ಅವರ ನಾಲ್ಕು ಪುಸ್ತಕಗಳು ಹಿಂದೂ ಧರ್ಮದ ಯೋಗ ಸಿದ್ಧಾಂತವನ್ನು ತಿಳಿಯಬಯಸುವವರಿಗೆ, ಮೂಲಭೂತ ಪಠ್ಯಗಳೆಂದೇ ಪರಿಗಣಿತವಾಗಿವೆ. ವಿವೇಕಾನಂದರ ನಂಬಿಕೆಗಳಲ್ಲಿ ಮುಖ್ಯವಾದುದು ನಮ್ಮಲ್ಲಿ ಎಲ್ಲರೂ ಮುಕ್ತರಾಗುವ ವರೆಗೆ ಯಾರೊಬ್ಬರೂ ಮುಕ್ತರಾಗಲಾರರೆಂಬುದು. ವೈಯಕ್ತಿಕ ಮುಕ್ತಿಯ ಆಸೆಯನ್ನು ಬಿಟ್ಟು ಎಲ್ಲರ ಮುಕ್ತಿಗಾಗಿ ಶ್ರಮಿಸುವವನೇ ಅವರ ದೃಷ್ಟಿಯಲ್ಲಿ ಪ್ರಬುದ್ಧ ವ್ಯಕ್ತಿ.

ವಿವೇಕಾನಂದರು, ಧರ್ಮ ಮತ್ತು ಸರ್ಕಾರದ ನಡುವೆ ಕಟ್ಟುನಿಟ್ಟಾದ ದೂರವಿಡುವಂತೆ ಮನವಿ ಮಾಡಿದರು. ಸಾಮಾಜಿಕ ಕಟ್ಟಲೆಗಳು ಧರ್ಮದ ಮೂಲಕ ರೂಪುಗೊಂಡಿರುತ್ತವೆಯಾದರೂ, ಸರ್ಕಾರಿ ಕೆಲಸಗಳಲ್ಲಿ ಯಾವುದೇ ಒಂದು ಧರ್ಮಕ್ಕೆ ಪ್ರಾಶಸ್ತ್ಯವಿರಬಾರದು ಎಂದು ಅವರ ನಂಬಿಕೆಯಾಗಿತ್ತು. ಅವರ ಕಲ್ಪನೆಯ ಆದರ್ಶ ಸಮಾಜವೆಂದರೆ ಬ್ರಾಹ್ಮಣ ಜ್ಞಾನ, ಕ್ಷತ್ರಿಯ ಸಂಸ್ಕೃತಿ, ವೈಶ್ಯ ದಕ್ಷತೆ ಮತ್ತು ಶೂದ್ರರ ಸಮಾನತೆಯ ಮೇಲೆ ನಿಂತಿರುವಂಥ ಸಮಾಜ. ಯಾವುದೇ ಒಂದು ವರ್ಗದ ಪ್ರಾಶಸ್ತ್ಯ ಸಮಾಜದಲ್ಲಿ ಸಮಾನತೆಯನ್ನು ಹಾಳುಗೆಡವುತ್ತದೆ ಎಂಬುದು ಅವರ ಸಾಮಾಜಿಕ ದೃಷ್ಟಿ. ಆಳವಾಗಿ ಸಮಾಜವಾದಿಯಾಗಿದ್ದರೂ, ಧರ್ಮದ ಮೂಲಕ ಸಮಾಜವಾದವನ್ನು ಹೇರುವುದು ತಪ್ಪೆಂದೂ, ಸಮಾಜವಾದ ಎಂಬುದು ವೈಯಕ್ತಿಕವಾಗಿ ಸಂದರ್ಭ ಸರಿಯಿದ್ದಾಗ ಜನರು ಕೈಗೊಳ್ಳಬೇಕಾದ ನಿರ್ಧಾರವೆಂದೂ ಅವರ ದೃಷ್ಟಿ.

ಸರ್ವಧರ್ಮಸಮ್ಮೇಳನ, ದ ಭಾಷಣದಲ್ಲಿ ಪ್ರತಿಪಾದಿಸಿದ ಹಿಂದೂ ಧರ್ಮದ ಸಿದ್ಧಾಂತಗಳು ,ಮಿಂಚಿನಂತೆ ಅಲ್ಲಿನ ಜನರನ್ನು ಆಕರ್ಶಿಸಿದವು
ವಿವೇಕಾನಂದರ ಅತಿ ಪ್ರಸಿದ್ಧ ಯಶಸ್ಸು೧೮೯೩ ರಲ್ಲಿ ಶಿಕಾಗೊ ನಗರದಲ್ಲಿ ನಡೆದ ಪ್ರಪಂಚ ಧರ್ಮಗಳ ಸಂಸತ್ತಿನಲ್ಲಿ ಬಂದಿತು. ಅವರ ಭಾಷಣದಲ್ಲಿ ಮೊದಲ ವಾಕ್ಯವಾಗಿದ್ದ "ಅಮೆರಿಕದ ಸಹೋದರ ಸಹೋದರಿಯರೇ" ಎಂಬ ವಾಕ್ಯ ಚಿರವಾಗಿದೆ. ಈ ಸಂದರ್ಭದಲ್ಲಿಯೇ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಹಿಂದೂ ಧರ್ಮದ ಬಗೆಗೆ ಆಸಕ್ತಿಯನ್ನೂ ಕೆರಳಿಸಿದರು. ಪೂರ್ವ ದೇಶದ ವಿಚಿತ್ರ ಧರ್ಮ ಎಂದು ಪರಿಗಣಿತವಾಗಿದ್ದ ಹಿಂದೂ ಧರ್ಮದ ತಾತ್ವಿಕ ಹಾಗೂ ಧಾರ್ಮಿಕ ಮೂಲಭೂತ ಮಹತ್ವವುಳ್ಳ ಸಂಪ್ರದಾಯಗಳು ಪಾಶ್ಚಾತ್ಯ ರಾಷ್ಟ್ರಗಳಲ್ಲಿಯೂ ಗುರುತಿಸಲ್ಪಟ್ಟವು. ಈ ಸಂದರ್ಭದ ಕೆಲವೇ ವರ್ಷಗಳಲ್ಲಿ ನ್ಯೂ ಯಾರ್ಕ್ ಮತ್ತು ಲಂಡನ್ ನಗರಗಳಲ್ಲಿ ವೇದಾಂತ ಕೇಂದ್ರಗಳನ್ನು ಸ್ಥಾಪಿಸಿ ಅನೇಕ ವಿಶ್ವವಿದ್ಯಾಲಯಗಳಲ್ಲಿ ಭಾಷಣಗಳನ್ನು ಮಾಡಿದರು. ಇದರ ನಂತರ ಭಾರತಕ್ಕೆ ಮರಳಿ ರಾಮಕೃಷ್ಣ ಮಿಷನ್ ಅನ್ನು ಸ್ಥಾಪಿಸಿದರು. ಹಾಗೆಯೇ "ಆತ್ಮನೋ ಮೋಕ್ಷಾರ್ಥಂ ಜಗದ್ ಹಿತಾಯ ಚ" (ಸ್ವತಃ ಮೋಕ್ಷಕ್ಕಾಗಿ ಮತ್ತು ಜಗತ್ತಿನ ಹಿತಕ್ಕಾಗಿ) ಎಂಬ ತತ್ತ್ವವನ್ನೂ ಸ್ಥಾಪಿಸಿದರು. ಇದು ಈಗ ಭಾರತದ ಧಾರ್ಮಿಕ ಸಂಸ್ಥೆಗಳಲ್ಲಿ ಬಹಳ ಹೆಸರು ಮಾಡಿರುವ ಮತ್ತು ಗೌರವಿತ ಸಂಸ್ಥೆಯಾಗಿದೆ. ಸ್ವಾಮಿ ವಿವೇಕಾನಂದರು ದಿವಂಗತರಾದಾಗ ಕೇವಲ ೩೯ ವರ್ಷದವರಾಗಿದ್ದರು.

ಸ್ವದೇಶ ಮಂತ್ರ
ಆರ್ಯಮಾತೆಯ ಅಮೃತಪುತ್ರರಿರಾ, ಮರೆಯದಿರಿ, ನಿಮ್ಮ ಸ್ತ್ರೀಯರ ಆದರ್ಶ ಸೀತಾ, ಸಾವಿತ್ರಿ, ದಮಯಂತಿಯರು. ಮರೆಯದಿರಿ, ನೀವು ಪೂಜಿಸುವ ಜಗದೀಶ್ವರನು ತ್ಯಾಗಿಕುಲ ಚೂಡಾಮಣಿ, ಉಮಾವಲ್ಲಭ ಶಂಕರ. ಮರೆಯದಿರಿ, ನಿಮ್ಮ ವಿವಾಹ, ನಿಮ್ಮ ಐಶ್ವರ್ಯ, ನಿಮ್ಮ ಜೀವನ ಬರಿಯ ಇಂದ್ರಿಯ ಭೋಗಕ್ಕಲ್ಲ, ವ್ಯಕ್ತಿಗತ ಸುಖಕ್ಕಲ್ಲ. ಮರೆಯದಿರಿ, ನಿಮ್ಮ ಜನ್ಮವಿರುವುದೇ ಜಗನ್ಮಾತೆಯ ಅಡಿದಾವರೆಗಳಲ್ಲಿ ಬಲಿದಾನಕ್ಕಾಗಿ! ಮರೆಯದಿರಿ, ನಿಮ್ಮ ಸಾಮಾಜಿಕ ರಚನೆ ಅನಂತ ವಿಶ್ವವ್ಯಾಪಿ ಜಗಜ್ಜನನಿಯ ಕಾಂತಿಯನ್ನು ಪ್ರತಿಬಿಂಬಿಸುವದಕ್ಕಾಗಿ ಇರುವದು. ಮರೆಯದಿರಿ, ಅಂತ್ಯಜರು, ಮೂಢರು, ದರಿದ್ರರು, ನಿರಕ್ಷರಕುಕ್ಷಿಗಳು, ಚಂಡಾಲರು ಮತ್ತು ಚಮ್ಮಾರರು - ಎಲ್ಲರೂ ನಿಮ್ಮ ರಕ್ತಬಂಧುಗಳಾದ ಸಹೋದರರು ! ವೀರಾತ್ಮರೇ, ಧೀರರಾಗಿ, ನೆಚ್ಚುಗೆಡದಿರಿ. ಭಾರತೀಯರು ನಾವು ಎಂದು ಹೆಮ್ಮೆ ತಾಳಿ. ಸಾರಿ ಹೇಳಿ, ಭಾರತೀಯರು ನಾವು, ಭಾರತೀಯರೆಲ್ಲ ನಮ್ಮ ಸಹೋದರರು. ಸಾರಿ ಹೇಳಿ, ಮೂರ್ಖ ಭಾರತೀಯರೂ ನಮ್ಮ ಸಹೋದರರು, ಬ್ರಾಹ್ಮಣ ಭಾರತೀಯರೆಮ್ಮ ಸಹೋದರರು, ಪಂಚಮ ಭಾರತೀಯರೆಮ್ಮ ಸಹೋದರರು. ನೀವು ಒಂದು ಚಿಂದಿಬಟ್ಟೆಯನ್ನು ಸೊಂಟಕ್ಕೆ ಕಟ್ಟಿಕೊಂಡಿದ್ದರೂ ಕೂಡ, ಅಭಿಮಾನಪೂರ್ವಕವಾಗಿ ದಿಕ್‌ತಟಗಳು ಅನುರಣಿತವಾಗುವಂತೆ ತಾರಸ್ವರದಿಂದ ಸಾರಿ ಹೇಳಿ "ಭಾರತೀಯರು ನಮ್ಮ ಸಹೋದರರು, ಭಾರತೀಯರು ನಮ್ಮ ಪ್ರಾಣ. ಭಾರತೀಯ ದೇವದೇವತೆಗಳೆಲ್ಲರೂ ನಮ್ಮ ದೇವರು. ಭಾರತೀಯ ಸಮಾಜ, ನಮ್ಮ ಬಾಲ್ಯದ ತೊಟ್ಟಿಲು, ತಾರುಣ್ಯದ ನಂದನವನ, ವೃದ್ಧಪ್ಯದ ವಾರಾಣಸಿ". ಸಹೋದರರೆ, ಹೀಗೆ ಸಾರಿ "ಭಾರತಭೂಮಿಯೆ ನಮ್ಮ ಪರಂಧಾಮ. ಭಾರತದ ಶುಭವೆ ನಮ್ಮ ಶುಭ." ಹಗಲೂ ರಾತ್ರಿಯೂ ಇದು ನಿಮ್ಮ ಪ್ರಾರ್ಥನೆಯಾಗಲಿ, "ಹೇ ಗೌರೀನಾಥ, ಹೇ ಜಗನ್ಮಾತೆ, ಪೌರುಷವನ್ನು ಎಮಗೆ ದಯಪಾಲಿಸು. ಹೇ ಸರ್ವಶಕ್ತಿಶಾಲಿನಿ, ನಮ್ಮ ದೌರ್ಬಲ್ಯವನ್ನು ದಹಿಸು. ಕ್ಲೈಬ್ಯವನ್ನು ಹೋಗಲಾಡಿಸು. ನಮ್ಮ ಷಂಡತನವನ್ನು ತೊಲಗಿಸು ;ನಮ್ಮನ್ನು ಪುರುಷಸಿಂಹರನ್ನಾಗಿ ಮಾಡು."

ಕೆ ಎಸ್ಅಶ್ವಥ್ Wikipedia ಇಂದ



ಕನ್ನಡ ಚಿತ್ರರಂಗ ದಲ್ಲಿ ಚಾಮಯ್ಯ ಮೇಷ್ಟ್ರು ಎಂದೇ ಖ್ಯಾತರಾದ ಕಲಾವಿದ ಅಶ್ವಥ್ ಅವರು. ನಾಗರಹಾವು ಚಿತ್ರದ ಚಾಮಯ್ಯ ಮೇಷ್ಟ್ರ ಪಾತ್ರ ಅವರನ್ನು ಜನಮಾನಸದಲ್ಲಿ ಸದಾಕಾಲ ಇರುವಂತೆ ಮಾಡಿತು. ನಾಯಕನಾಗಿ ಚಿತ್ರರಂಗ ಪ್ರವೇಶ ಮಾಡಿದರೂ ಸಹ ಮುಂದೆ ಪ್ರಸಿದ್ದಿ ಪಡೆದದ್ದು ಮಾತ್ರ ಪೋಷಕ ನಟನಾಗಿ.
ವ್ಯಕ್ತಿ ಪರಿಚಯ

(೧೯೨೫-೨೦೧೦). ಸುಮಾರು ಐದು ದಶಕಗಳ ಅವಧಿಯಲ್ಲಿ ೩೫೦ಕ್ಕಿಂತಲೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿರುವ ಜನಪ್ರಿಯ ನಟ. ಶಿಸ್ತು, ಸಮಯಪಾಲನೆ, ಸುಸಂಸ್ಕೃತ ನಡವಳಿಕೆಯಿಂದ ಚಿತ್ರ ನಿರ್ಮಾಣವಲಯದಲ್ಲಿ ಎಲ್ಲರ ಅಭಿಮಾನಕ್ಕೆ ಪಾತ್ರರಾದ ವ್ಯಕ್ತಿ ಅಶ್ವತ್ಥ್. ಅವರ ಹಿರಿಯರು ಹೊಳೆನರಸೀಪುರ ತಾಲ್ಲೂಕಿನ ಕರಗದಹಳ್ಳಿಯವರು. ತಂದೆ ಸುಬ್ಬರಾಯರು. ಮಾರ್ಚ್ ೨೫, ೧೯೨೫ರಲ್ಲಿ ಜನನ. ಮೊದಲ ಹೆಸರು ಅಶ್ವತ್ಥನಾರಾಯಣ. ಚಿತ್ರರಂಗಕ್ಕೆ ಬಂದ ನಂತರ ನಾರಾಯಣ ಕಳಚಿಕೊಂಡಿತು. ಓದಿದ್ದು ಇಂಟರ್ಮೀಡಿಯಟ್ವರೆಗೆ. ಸ್ವಾತಂತ್ರ್ಯ ಹೋರಾಟದಲ್ಲಿ ಸಹಭಾಗಿ, ಆಹಾರ ಇಲಾಖೆಯಲ್ಲಿ ನೌಕರಿ(೧೯೪೪), ನಾಟಕದ ಗೀಳು, ಆಕಾಶವಾಣಿಯಲ್ಲಿ ನಾಟಕ ವಿಭಾಗದಲ್ಲಿ ದುಡಿಮೆ; ನಾಟಕ ವಿಭಾಗದ ಮುಖ್ಯಸ್ಥರಾಗಿದ್ದ ಎನ್.ಎಸ್. ವಾಮನರಾಯರಿಂದ ಅಭಿನಯದಲ್ಲಿ ತರಬೇತಿ ಪಡೆಯುವ ಅವಕಾಶ ಲಭ್ಯ. ಅಶ್ವತ್ಥ್ ಅವರಿಗೆ ಚಲನಚಿತ್ರ ಸೇರಬೇಕೆಂಬ ಕಲ್ಪನೆಯೇ ಇರಲಿಲ್ಲ. ಅವಕಾಶ ಅದಾಗಿಯೇ ಬಂದಿತು. ನಾಟಕದಲ್ಲಿನ ಇವರ ಅಭಿನಯ ನೋಡಿ ಮೆಚ್ಚಿದ ಹಿರಿಯ ನಿರ್ದೇಶಕ ಕೆ.ಸುಬ್ರಹ್ಮಣ್ಯಂ ಅವರಿಂದ ಚಿತ್ರರಂಗಕ್ಕೆ ಆಹ್ವಾನ. ಮೈಸೂರಿನ ಪ್ರಿಮಿಯರ್ನಲ್ಲಿ ತಯಾರಾದ, ಭಾಗಶಃ ವರ್ಣದಲ್ಲಿ ಚಿತ್ರಣವಾದ ‘ಸ್ತ್ರೀ ರತ್ನ’(೧೯೫೫) ಚಿತ್ರದಲ್ಲಿ ನಾಯಕ. ‘ಸ್ತ್ರೀ ರತ್ನ’ ಚಿತ್ರದ ನಂತರ, ಚಿತ್ರರಂಗದಲ್ಲೆ ಮುಂದುವರೆಯುವ ನಿರ್ಧಾರ. ಆದರೆ ಆ ಅವಧಿಯಲ್ಲಿ ಕನ್ನಡ ಚಿತ್ರ ನಿರ್ಮಾಣ ಚಟುವಟಿಕೆ ಮಂದಗತಿಯಲ್ಲಿ ಸಾಗಿತ್ತು. ಆದರೂ ಚಿತ್ರರಂಗದ ಅಭಿನಯವನ್ನೇ ವೃತ್ತಿಯಾಗಿ ಸ್ವೀಕರಿಸಲು ಸಂಕಲ್ಪಿಸಿದ್ದ ಅಶ್ವತ್ಥ್, ಆಗ ಕನ್ನಡ ಚಿತ್ರ ನಿರ್ಮಾಣದ ಕೇಂದ್ರವಾಗಿದ್ದ ಮದರಾಸಿನಲ್ಲೇ ನೆಲೆಸಲು ನಿರ್ಧರಿಸಿದರು. ನಾಯಕ ಪಾತ್ರಗಳಿಂದ ಸರಿದು ಪೋಷಕ ಪಾತ್ರಗಳಲ್ಲಿ ಅಭಿನಯಿಸುವ ಸಂಕಲ್ಪ ಮಾಡಿದರು (೧೯೬೦). ಈ ನಿರ್ಧಾರವೂ ಯೋಗ್ಯವಾದುದೇ. ಇದರಿಂದ ಅವರ ಬಹುಮುಖ ಪ್ರತಿಭೆಯು ಪ್ರಕಾಶಕ್ಕೆ ಮುಕ್ತ ಅವಕಾಶ ದೊರೆಯಿತು. ಆರಂಭದದಿನಗಳಲ್ಲಿ ತಯಾರಾಗುತ್ತಿದ್ದದು ಹೆಚ್ಚಾಗಿ ಪೌರಾಣಿಕ ಹಾಗೂ ಭಕ್ತಿ ಪ್ರಧಾನ ಚಿತ್ರಗಳು. ಪೌರಾಣಿಕ ಭಕ್ತಿ ಪ್ರಧಾನ ಚಿತ್ರಗಳಲ್ಲಿ ನಾರದನ ಪಾತ್ರಗಳು ಅರಸಿ ಬಂದವು. ‘ಮಹಿಷಾಸುರ ಮರ್ದಿನಿ’, ‘ಸ್ವರ್ಣಗೌರಿ’, ‘ಭಕ್ತ ಪ್ರಹ್ಲಾದ’, ‘ದಶಾವತಾರ’, ‘ನಾಗಾರ್ಜುನ’-ಇವೇ ಮೊದಲಾದ ಚಿತ್ರಗಳಲ್ಲಿ ಅಶ್ವತ್ಥ್ ಅವರ ನಾರದನ ಪಾತ್ರ ಜನಮೆಚ್ಚುಗೆ ಪಡೆಯಿತು.

ಅಶ್ವತ್ಥ್ ವೈವಿಧ್ಯಮಯ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ; ಆ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಜನರಿಗೆ ಅಪ್ತವಾದುದು ತಂದೆಯ ಪಾತ್ರ; ಮನೆಯ ಹಿರಿಯಣ್ಣನ ಪಾತ್ರ, ‘ಗಾಳಿಗೋಪುರ’ ಚಿತ್ರದಿಂದ ಶಾಶ್ವತವಾಗಿ ಪ್ರಧಾನ ಪೋಷಕ ಪಾತ್ರಗಳಿಗೆ ಆಯ್ಕೆ. ‘ನಾಗರಹಾವು’ ಚಿತ್ರದ ಚಾಮಯ್ಯ ಮೇಸ್ಟ್ರು, ಮಕ್ಕಳಿಲ್ಲದ ಮೇಸ್ಟ್ರು. ತಾನು ಅತಿಯಾಗಿ ಪ್ರೀತಿಸುವ ತಂಟೆಕೋರ ವಿದ್ಯಾರ್ಥಿ. ಇವರಿಬ್ಬರ ನಡುವಣ ಮಾನವೀಯ ಸಂಬಂಧಗಳು, ಸಮಸ್ಯೆಗಳು, ದುರಂತದಲ್ಲಿ ಕೊನೆಗೊಳ್ಳುವ ಈ ಚಿತ್ರದಲ್ಲಿ ಮನಮಿಡಿಯುವಂತಹ ಅಭಿನಯ. ‘ಕಸ್ತೂರಿ ನಿವಾಸ’ದ ನಿಷ್ಠಾವಂತ ಸೇವಕ ರಾಮಯ್ಯ, ‘ಮಗ ಮೊಮ್ಮಗ’, ‘ತಂದೆ-ಮಕ್ಕಳು’ ಚಿತ್ರದಲ್ಲಿ ತಂದೆಯಾಗಿ ನೀಡಿರುವ ಮನ ಮುಟ್ಟುವ ಅಭಿನಯ. ‘ಸರ್ವಮಂಗಳ’ ಚಿತ್ರದಲ್ಲಿ ಕುರೂಪಿ ಸುಬ್ಬರಾಯನ ಪಾತ್ರ, ಅಶ್ವತ್ಥ್ ಅವರ ಅಪ್ರತಿಮ ಪ್ರತಿಭೆಯ, ಭಾವಪೂರ್ಣ ಅಭಿನಯಕ್ಕೆ ಇವು ಕೆಲವು ನಿದರ್ಶನಗಳು. ಕುಟುಂಬದ ಯಜಮಾನ, ಒಲವಿನ ಸೋದರ, ತಂದೆ ಮೊದಲಾದ ಸಜ್ಜನಿಕೆಯ ಪಾತ್ರಗಳ ಜೊತೆಗೆ ಹಾಸ್ಯ ಪಾತ್ರಗಳಲ್ಲೂ ಖಳನಾಯಕನ ಪಾತ್ರಗಳಲ್ಲೂ ಅವರು ಸಹಜವಾಗಿ ಅಭಿನಯಿಸಿದ್ದಾರೆ. ಪುಟ್ಟ ಪಾತ್ರಗಳಲ್ಲಿ ಚೊಕ್ಕ ಅಭಿನಯ ಇದು ಅವರ ಹಿರಿಮೆ. ಪ್ರಧಾನ ಪೋಷಕ ಚಿತ್ರಗಳಲ್ಲಿ ಅಶ್ವತ್ಥ-ಪಂಢರಿಬಾಯಿ ಜೋಡಿ ಅತ್ಯಂತ ಜನಪ್ರಿಯ. ‘ನಮ್ಮ ಮಕ್ಕಳು’, ‘ನಾಗರಹಾವು’, ‘ಮುತ್ತಿನಹಾರ’ ಚಿತ್ರಗಳ ಅಭಿನಯಕ್ಕಾಗಿ ‘ಶ್ರೇಷ್ಠ ಪೋಷಕ ನಟ’ರಾಗಿ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ತಮ್ಮ ಅಭಿನಯ, ಗಾಯನದಿಂದ ಕನ್ನಡ ಚಲನ ಚಿತ್ರೋದ್ಯಮಕ್ಕೆ ಘನತೆ, ಸ್ಥಿರತೆ ತಂದ ಡಾ.ರಾಜಕುಮಾರ್ ಹೆಸರಿನಲ್ಲಿ ಸರಕಾರ ಚಲನಚಿತ್ರರಂಗಕ್ಕೆ ಅಮೋಘ ಸೇವೆ ಸಲ್ಲಿಸಿದವರಿಗೆ ೧೯೯೩-೯೪ನೇ ಸಾಲಿನಿಂದ ಪ್ರಶಸ್ತಿ ನೀಡುತ್ತಿದೆ. ಈ ಪ್ರಶಸ್ತಿಗೆ ಭಾಜನರಾದ ಪ್ರಪ್ರಥಮ ನಟ-ಕೆ.ಎಸ್. ಅಶ್ವತ್ಥ್. ೧೯೯೫ರಲ್ಲಿ ಅಶ್ವತ್ಥ್ ಚಿತ್ರರಂಗಕ್ಕೆ ವಿದಾಯ ಹೇಳಿದ್ದರು. ಅದು ಅವರ ಅಭಿಮಾನಿ ಪ್ರೇಕ್ಷಕರಿಗೆ ಅಘಾತವಾಗಿತ್ತು. ಆದರೆ ‘ಶಬ್ದವೇಧಿ’ ಚಿತ್ರದ ಮೂಲಕ ಅವರ ಪುನರಾಗಮನವನ್ನು ಜನರು ಸಂಭ್ರಮದಿಂದ ಸ್ವಾಗತಿಸಿದರು

ಮನುಷ್ಯನ ಅನುಭವನಗಳನ್ನು ಶೋಧಿಸುವುದೇ ಸಾಹಿತ್ಯದ ಕ್ರಿಯೆ :- ಎಸ್.ಎಲ್.ಬೈರಪ್ಪ


ಇಳಿಯುವುದು ಶ್ರೀ ಸಾಮಾನ್ಯನ ಬೆಲೆ ಮಾತ್ರ:-


ಎಲ್ಲಿ ಹೋದರು ಬೆತ್ತ ಹಿಡಿದ ಮೇಷ್ಟ್ರು:-


ಕಂಡದ್ದು ಕಾಡಿದ್ದು:-


ವಿದ್ಯಾರ್ಥಿಗಳು ಆತ್ಮಹತ್ಯೆಗೆಳೆಸುವ ವಿಚಾರ


ರೆಕ್ಕೆ ಬಡಿಯುವ ವಿಮಾನಗಳು


ತಡೆಯಲು ಸಾಧ್ಯವೇ ಜನಸಂಖ್ಯಾ ಸ್ಪೋಟ? (ಉದಯವಾಣಿ)


ಸಂಸಾರ ಮತ್ತು ಸನ್ಯಾಸ (ಉದಯವಾಣಿ)


ಪಿ ಪಿ ಎಫ್ ಎಂಬ ಸಿಹಿ ಅಂಬಟೆಕಾಯಿ!! (ಉದಯವಾಣಿ)


ನೇತಿ ನೇತಿಯೆಂಬ ಭಾಷಾಕ್ರಿಯೆ - ಪಾಠ ಎರಡು (ಉದಯವಾಣಿ)


ನಗರಗಳಲ್ಲ - ನರಕಗಳು (ಉದಯವಾಣಿ)


ಕಾನೂನು ಉಲ್ಲಂಘಿಸಿದ ಮಕ್ಕಳ ರಕ್ಷಣೆ (ಉದಯವಾಣಿ)


ಗುಣದ ಗುಟ್ಟು ಬಿಡಿಸುವ ಮಾತುಗಳು (ಉದಯವಾಣಿ)


ಎಲ್ಲಿ ಹೋಯಿತು ಮುತ್ಸದ್ಧಿತನ? (ಉದಯವಾಣಿ)


ಬ್ರಷ್ಟಪಾಲನೆ - ಲೋಕಪಾಲನೆ (ಉದಯವಾಣಿ)


ಭಾಷೆ ಹಾಗೂ ಪರಮೋಶ ಸಿದ್ಧಾಂತ (ಉದಯವಾಣಿ)

ಮಾಹಿತಿ ಹಕ್ಕು ಕಾಯ್ದೆ ೨೦೦೫ ಪ್ರಕಾರ ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತದ ಬಗ್ಗೆ ಮಾಹಿತಿ





ಹಟ್ಟಿ ಗೋಲ್ಡ್ ಮೈನ್ಸ್ ಕಂಪನಿಯ ಬಗ್ಗೆ ಮಾಹಿತಿ ಹಕ್ಕಿನ ಅಡಿಯಲ್ಲಿ ಮಾಹಿತಿಗಾಗಿ ಈ ಕೆಳಗಿನ ಕೊಂಡಿಯನ್ನು ಅನುಸರಿಸಿ.

http://www.huttigold.co.in/hutti/index/rtiactkan

ಹುಲಿ ವೇಷ ನೃತ್ಯ Pili Vesha ( Tiger Dance)

ವೀರಗಾಸೆ ನೃತ್ಯ (Veeragase)

ಕಂಸಾಳೆ ನೃತ್ಯ (Kamsale Dance)

ಡೊಳ್ಳು ಕುಣಿತ (dollu kunitha gokula 1)

ಕನ್ನಡ ಪುಣ್ಯಕೋಟಿ ಗೋವಿನ ಹಾಡು

ನಗೆಯ ಬುಗ್ಗೆಯ ಚಿಮ್ಮಿಸುತ್ತಿರುವ ಪ್ರಾಣೇಶ್ (Praneesh Honnavar 2007 part 4)

ರಾಜ್ ರಸಸಂಜೆಯಲ್ಲಿ ರವಿ ಬೆಳಗೆರೆ (DR Raj Rasasange 14)

(ಜಯಂತ್ ಕಾಯ್ಕಿಣಿ )Jayant Kaikini speech

ಗೋಳ ಗುಮ್ಮಟ (ಬಿಜಾಪುರ) Gol Gumbad - Bijapur - India

ಚಿತ್ರದುರ್ಗ ಕಲ್ಲಿನಕೋಟೆ (Chitradurga fort)

ಟಿಪ್ಪು ಸುಲ್ತಾನ್ ಅರಮನೆ ಬೆಂಗಳೂರು (Tipu Sultan's Palace, Bangalore)

ಮೈಸೂರು ಅರಮನೆ (India - Mysore Palace)

ಐಹೊಳೆ (Aihole)

ಪಟ್ಟದಕಲ್ಲು (Group of Monuments at Pattadakal)

ಶ್ರವಣಬೆಳಗೊಳ

ಮಾಹಿತಿಹಕ್ಕು ಲೇಖನ (ಉದಯವಾಣಿ ದಿನಪತ್ರಿಕೆ)


ಜನಪ್ರಿಯ ಕನ್ನಡ ಗಾದೆಗಳು

  1. ವೇದ ಸುಳ್ಳಾದರು ಗಾದೆ ಸುಳ್ಳಾಗದು.
  2. ಅಡಿಕೆಗೆ ಹೋದ ಮಾನ ಆನೆ ಕೊಟ್ಟರು ಬರಲ್ಲ.
  3. ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ.
  4. ಎತ್ತು ಏರಿಗೆಳೀತು, ಕೋಣ ನೀರಿಗೆಳೀತು.
  5. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರಂತೆ.
  6. ಕೈ ಕೆಸರಾದರೆ ಬಾಯಿ ಮೊಸರು.
  7. ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತ?
  8. ಹೆಣ್ಣಿಗೆ ಹಟವಿರಬಾರದು, ಗಂಡಿಗೆ ಚಟವಿರಬಾರದು.
  9. ಮಾತು ಬೆಳ್ಳಿ, ಮೌನ ಬಂಗಾರ.
  10. ಮಾತು ಮನೆ ಮುರಿತು, ತೂತು ಓಲೆ ಕೆಡಿಸಿತು.
  11. ಮಂಗ ಮೊಸರು ತಿಂದು ಮೇಕೆ ಬಾಯಿಗೆ ಸವರಿದ ಹಾಗಾಯಿತು.
  12. ಮನೆಗೆ ಮಾರಿ, ಊರಿಗೆ ಉಪಕಾರಿ.
  13. ಆಳಾಗಬಲ್ಲವನು ಅರಸನಾಗಬಲ್ಲ.
  14. ಊರಿಗೆ ದೊರೆ ಆದರೂ ತಾಯಿಗೆ ಮಗನೆ.
  15. ಹೆತ್ತವರಿಗೆ ಹೆಗ್ಗಣ ಮುದ್ದು.
  16. ಊರೆಲ್ಲ ದೋಚಿಕೊಂಡು ಹೋದಮೇಲೆ ದೊಡ್ಡಿ (ಕೋಟೆ) ಬಾಗಿಲು ಹಾಕಿದರಂತೆ.
  17. ಗಿಡವಾಗಿ ಬಗ್ಗದ್ದು, ಮರವಾಗಿ ಬಗ್ಗೀತೇ?
  18. ಮಾಡೋದೆಲ್ಲ ಅನಾಚಾರ, ಮನೆ ಮುಂದೆ ಬೃಂದಾವನ.
  19. ಮನಸಿದ್ದರೆ ಮಾರ್ಗ.
  20. ಅಡ್ಡಗೋಡೆಯ ಮೇಲೆ ದೀಪ ಇಟ್ಟ ಹಾಗೆ.
  21. ಆರಕ್ಕೇರಲಿಲ್ಲ, ಮೂರಕ್ಕೀಳಿಯಲಿಲ್ಲ.
  22. ಆರು ಕೊಟ್ಟರೆ ಅತ್ತೆ ಕಡೆ, ಮೂರು ಕೊಟ್ಟರೆ ಸೊಸೆ ಕಡೆ.
  23. ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಇಷ್ಟ.
  24. ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡಂತೆ.
  25. ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ.
  26. ಬೆಕ್ಕು ಕಣ್ಮುಚ್ಚಿ ಹಾಳು ಕುಡಿದರೆ ಜಗತ್ತಿಗೆ ಗೊತ್ತಾಗಲ್ವಾ?
  27. ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ.
  28. ಬೆಳ್ಳಗಿರೋದೆಲ್ಲ ಹಾಲಲ್ಲ, ಹೊಳೆಯೋದೆಲ್ಲ ಚಿನ್ನ ಅಲ್ಲ.
  29. ಹತ್ತು ಕಟ್ಟೋ ಕಡೆ ಒಂದು ಮುತ್ತು ಕಟ್ಟು.
  30. ಜಲ ಶೋಧಿಸಿ ನೀರು ತರ್ಬೇಕು, ಕುಲ ಶೋಧಿಸಿ ಹೆಣ್ಣು ತರ್ಬೇಕು.
  31. ಚಿಂತೆ ಇಲ್ಲದವನಿಗೆ ಸನ್ತೇಲು ನಿದ್ದೆ.
  32. ದೇವರು ವರ ಕೊಟ್ಟರು ಪೂಜಾರಿ ಕೊಡೆಬೇಕಲ್ಲ.
  33. ಹನುಮಂತಾನೆ ಬಾಲ ಕಡಿತಿರುವಾಗ, ಇವನ್ಯಾವನೋ ಶಾವಿಗೆ ಕೇಳಿದನಂತೆ.
  34. ತುಂಬಿದ ಕೊಡ ತುಳುಕುವುದಿಲ್ಲ.
  35. ಗಂಡ ಹೆಂಡಿರ ಜಗಳ ಉಂಡು ಮಲಗೋ ತನಕ.
  36. ಹನಿ ಹನಿ ಸೇರಿದರೆ ಹಳ್ಳ, ತೆನೆ ತೆನೆ ಸೇರಿದರೆ ಬಳ್ಳ.
  37. ನಾಯಿನ ಕರೆದುಕೊಂಡು ಹೋಗಿ ಸಿಂಹಾಸಾನದ ಮೇಲೆ ಕೂರಿಸಿದ ಹಾಗಯ್ತು.
  38. ಹುಚ್ಚರ ಮದುವೆಯಲ್ಲಿ ಉನ್ಡೋನೆ ಜಾಣ.
  39. ಜಾಣನಿಗೆ ಮಾತಿನ ಪೆಟ್ಟು, ದಡ್ಡನಿಗೆ ದೊಣ್ಣೆ ಪೆಟ್ಟು.
  40. ಹಟದಿಂದ ಹೆಣ್ಣು ಕೆಟ್ಟಳು ಚಟದಿಂದ ಗಂಡು ಕೆಟ್ಟ
  41. ಗಂಡಸರ ಕೈಯಲ್ಲಿ ಕೂಸು ನಿಲ್ಲದು ಹೆಂಗಸರ ಕೈಯಲ್ಲಿ ಮಾತು ನಿಲ್ಲದು
  42. ಎಳ್ಳಿನಲ್ಲಿ ಎಣ್ಣೆ ಅಡಕ ಹಾಲಿನಲ್ಲಿ ಬೆಣ್ಣೆ ಅಡಕ೪. ಮೇಲೆ ಬಸಪ್ಪ ಒಳಗೆ ವಿಷಪ್ಪ
  43. ಹೊರಗೆ ಬೆಳಕು ಒಳಗೆ ಕೊಳಕು೬. ಹಿಟ್ಟೂ ಹಳಸಿತ್ತು ನಾಯಿಯೂ ಹಸಿದಿತ್ತು
  44. ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ೮. ಏಕಾದಶಿಯ ಮನೆಗೆ ಶಿವರಾತ್ರಿ ಬಂದ
  45. ಇದ್ದಾಗ ಹಿರಿಯಣ್ಣ ಇಲ್ಲದಾಗ ತಿರಿಯಣ್ಣ
  46. ಒಕ್ಕುವುದು ರೈತನ ಗುಣ ನೆಕ್ಕುವುದು ನಾಯಿಯ ಗುಣ
  47. ಅರಮನೆಯ ಮುಂದಿರಬೇಡ ಕುದುರೆಯ ಹಿಂದಿರಬೇಡ
  48. ತಾಯಿಯಂತೆ ಮಗಳು ನೂಲಿನಂತೆ ಸೀರೆ
  49. ಕತ್ತೆಯಂಥ ಅತ್ತೆ ಬೇಕು ಮುತ್ತಿನಂಥ ಗಂಡ ಬೇಕು
  50. ಅರಿತರೆ ಮಾತನಾಡು ಮರೆತರೆ ಕೂತು ನೋಡು
  51. ತೋಳ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು
  52. ಹಾಲಿದ್ದ ಕಡೆ ಬೆಕ್ಕು ಕೂಳಿದ್ದ ಕಡೆ ನಾಯಿ
  53. ಆಪತ್ತಿಗಾದವನೇ ನೆಂಟ ಕೆಲಸಕ್ಕಾದವನೇ ಭಂಟ
  54. ಗಂಜಿಯ ಕುಡಿದರೂ ಗಂಡನ ಮನೆ ಲೇಸು
  55. ಒಲಿದರೆ ನಾರಿ ಮುನಿದರೆ ಮಾರಿ
  56. ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು
  57. ಕಚ್ಚೋ ನಾಯಿ ಬೊಗಳುವುದಿಲ್ಲ
  58. ತುಂಬಿದ ಕೊಡ ತುಳುಕುವುದಿಲ್ಲ
  59. ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ
  60. ತಾಳಿದವನು ಬಾಳಿಯಾನು
  61. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ?
  62. ಆರಕ್ಕೆ ಏರಲಿಲ್ಲ ಮೂರಕ್ಕೆ ಇಳಿಯಲಿಲ್ಲ
  63. ಮುದುಕರಿಗೆ ಮುದ್ದೆ ಕೇಡು ಹಳೇ ಬಟ್ಟೆಗೆ ನೂಲು ಕೇಡು
  64. ಲಾಲಿಸಿದರೆ ಮಕ್ಕಳು ಪೂಜಿಸಿದರೆ ದೇವರು
  65. ಉತ್ತರೆ ಹೊಲ ಚಂದ ಬಿತ್ತರೆ ಬೆಳೆ ಚಂದ
  66. ಅಂಗೈ ಹುಣ್ಣಿಗೆ ಕನ್ನಡಿ ಬೇಕೇ?
  67. ಹಂಗಿನರಮನೆಗಿಂತ ಕುಂದಣದ ಗುಡಿ ಲೇಸು
  68. ಹಸಿದು ಹಲಸು ಉಂಡು ಮಾವು

ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲಯ:-

ಪರಿಶಿಷ್ಟ ವರ್ಗಗಳ ನಿರ್ದೇಶನಾಲಯದ ಬಗ್ಗೆ ಮಾಹಿತಿಗಾಗಿ ಈ ಕೆಳಗಿನ ಕೊಂಡಿಯನ್ನು ಅನುಸರಿಸಿ:-

http://tribalwelfarekar.in/index.html

ಮಾಹಿತಿ ಹಕ್ಕು : ಮಾದ್ಯಮಕ್ಕೆ ಹೆಚ್ಚಿನ ಹೊಣೆ :-

ಮಾಹಿತಿಗಾಗಿ ಕೆಳಗಿನ ಕೊಂಡಿಯನ್ನು ಅನುಸರಿಸಿ:-

http://www.kannadaprabha.com/NewDesign08/NewsItems.asp?ID=KPD20100605124704&Title=District+News&lTitle=%C1%DBd%C0+%C8%DB%7D%E6%25&Topic=0&dName=%D4%DB%C8%E6%DE%C2&Dist=10

ಮಾಹಿತಿ ನೀಡದ ಅಧಿಕಾರಿಗಳಿಗೆ ದಂಡ:- (ಸುದ್ದಿ ಸಮಾಚಾರ)

ಮಾಹಿತಿಗಾಗಿ ಕೆಳಗಿನ ಕೊಂಡಿಯನ್ನು ಅನುಸರಿಸಿ:-

http://thatskannada.oneindia.in/news/2009/06/28/officers-dont-neglect-rti-act-commissioner-mysore.html

ಮಾಹಿತಿ ಹಕ್ಕು ಅಧಿನಿಯಮ-೨೦೦೫ ಒಂದು ಅವಲೋಕನ (ಲೇಖನ):-

ಮಾಹಿತಿಗಾಗಿ ಈ ಕೆಳಗಿನ ಕೊಂಡಿಯನ್ನು ಒತ್ತಿ:-
http://www.ourkarnataka.com/Articles/law/information.htm

ಮಾಹಿತಿ ಹಕ್ಕು ನಿಜವಾದ ಸ್ವಾತಂತ್ರ್ಯ (ಲೇಖನ) :-

ಮಾಹಿತಿಗಾಗಿ ಕೆಳಗಿನ ಕೊಂಡಿಯನ್ನು ಅನುಸರಿಸಿ:-

http://mangaloreantimes.com/news/viewers/display_news.php?news_id=1788

MODEL DEEDS AND DRAFTS FOR SUM GUIDENCE


ಮಾಹಿತಿಗಾಗಿ ಈ ಕೆಳಗಿನ ಕೊಂಡಿಯನ್ನು ಅನುಸರಿಸಿ:-



RTI: new rule restricts quantum of information


ಮಾಹಿತಿಗಾಗಿ ಈ ಕೆಳಗಿನ ಕೊಂಡಿಯನ್ನು ಅನುಸರಿಸಿ:-