ಪುಟಗಳು

ತಲಕಾಡಿನ ಗಂಗರು


ತಲಕಾಡಿನ ಗಂಗರು ಕರ್ನಾಟಕವನ್ನು ಸುಮಾರು 600 ವರ್ಷಗಳ ಧೀರ್ಘಕಾಲ (ಕ್ರಿ.ಶ. 350-999) ಆಳಿದರು. ಆರಂಭದಲ್ಲಿ ಸ್ವತಂತ್ರರಾಗಿಯೂ ತದನಂತರ ಬಾದಾಮಿ ಚಾಲುಕ್ಯ ಮತ್ತು ರಾಷ್ಟ್ರಕೂಟರ ಸಾಮಂತರಾಗಿಯೂ ಆಳಿದರು. ಅವರ ಅನುಕೂಲಕ್ಕೆ ತಕ್ಕಂತೆ ತಮ್ಮ ರಾಜಧಾನಿಯನನ್ನು ಬದಲಿಸುತ್ತಿದ್ದರು. ಕೋಲಾರ (ಕುವಲಾಲ) ಅವರ ಪ್ರಥಮ ರಾಜಧಾನಿ. ಕಾವೇರಿ ನದಿತೀರದ ಮೈಸೂರು ಜಿಲ್ಲೆಯ ತಲಕಾಡು (ತವಲನಪುರ) ಅವರ ಎರಡನೇ ರಾಜಧಾನಿ. ಚನ್ನಪಟ್ಟಣ ಬಳಿಯ ಮಾಕುಂದ, ಬೆಂಗಳೂರು ಜಿಲ್ಲೆಯ ನೆಲಮಂಗಲ ಬಳಿಯ ಮಾನ್ಯಪುರ (ಈಗಿನ ಮಣ್ಣೆ) ಅವರ ಇತರ ರಾಜಧಾನಿಗಳು. ಆದರೂ ತಲಕಾಡೇ ಅವರ ಧೀರ್ಘ ಹಾಗೂ ಮುಖ್ಯ ಆಡಳಿತ ಕೇಂದ್ರವಾಗಿದ್ದರಿಂದ ಅವರನ್ನು ತಲಕಾಡಿನ ಗಂಗರು ಎಂದು ಕರೆಯುತ್ತಾರೆ. ಮದಗಜ ಅವರ ರಾಜಮುದ್ರೆ ಅಥವಾ ಲಾಂಛನ.
ಕ್ಷಿಣ ಕರ್ನಾಟಕವನ್ನು ಪಲ್ಲವರು ಮತ್ತು ಚೋಳರ ಆಕ್ರಮಣಗಳಿಂದ ತಡೆಹಿಡಿದಿದ್ದವರು ಗಂಗರು. ಈ ವಂಶದ ಪ್ರಖ್ಯಾತ ದೊರೆ ದುರ್ವೀನಿತ (ಕ್ರಿ.ಶ. 555 -605) ಸ್ವತಃ ವಿದ್ವಾಂಸನಾಗಿದ್ದು, ಕನ್ನಡ ಮತ್ತು ಸಂಸ್ಕೃತಗಳೆರಡನ್ನೂ ಗ್ರಂಥ ರಚಿಸಿದ್ದಾನೆ. ಈ ವಂಶದಲ್ಲಿ ಪ್ರಯತ್ನಿಸಿದ ರಾಷ್ಟ್ರಕೂಟರನ್ನು ವಿರೋಧಿಸಿ ಶ್ರೀಪುರುಷನು ಪಲ್ಲವ ಇಮ್ಮಡಿ ಪರಮೇಶ್ವರವರ್ಮನನ್ನು ವಿಶಲದೆಯಲ್ಲಿ 731ರಲ್ಲಿ ಪೆರ್ಮಾಡಿ ಎಂಬ ಬಿರುದನ್ನು ಪಡೆದುಕೊಂಡನು. ಇವನು ಆನೆಗಳಿಗೆ ಸಂಭಂಧಿಸಿದಂತೆ ಗಜಶಾಸ್ತ್ರ ಎಂಬ ಸಂಸ್ಕೃತ ಗ್ರಂಥವನ್ನು ಬರೆದಿದ್ದಾನೆ.
ಗಂಗರು ತಮ್ಮ ರಾಜ್ಯದಲ್ಲಿ ಅನೇಕ ಕೆರೆಗಳನ್ನು ಕಟ್ಟಿಸಿದರು. ಅವರ ರಾಜ್ಯದ ಕೇಂದ್ರವಾಗಿದ್ದ ಕೋಲಾರ ಮತ್ತು ಮೈಸೂರು ಅವರ ದೇವಾಲಯಗಳನ್ನು ಇಂದಿಗೂ ಇವೆ. ಅವರ ಕಾಲದ ಸುಂದರ ದೇವಾಲಯಗಳನ್ನು ಇಂದಿಗೂ ಕೋಲಾರ, ತಲಕಾಡು, ಬೇಗೂರು, ನಾಗಪುರ ಮತ್ತು ನರಸಮಂಗಲಗಳಲ್ಲಿ ಕಾಣಬಹುದು. ಶ್ರವಣಬೆಳಗೊಳದಲ್ಲಿ 58ಅಡಿ ಎತ್ತರ ಗೊಮ್ಮಟನ ಏಕಶಿಲಾ ಮೂರ್ತಿಯನ್ನು ಕ್ರಿ.ಶ. 982ರಲ್ಲಿ ಚಾವುಂಡರಾಯನು ನಿರ್ಮಿಸಿದನು. ಕ್ರಿ.ಶ. 999ರಲ್ಲಿ ರಾಜ್ಯವು ಚೋಳರಿಂದ ವಶಪಡಿಸಿಕೊಳ್ಳಲ್ಪಟ್ಟು ಗಂಗರ ಆಳ್ವಿಕೆ ಕೊನೆಗೊಂಡಿತು.
ಮೂಲ:
ಗಂಗರ ರಾಜಧಾನಿ ತಲಕಾಡು ದಕ್ಷಿಣ ಗಂಗೆ ಕಾವೇರಿ ನದಿಯ ದಡದಲ್ಲಿದ್ದರಿಂದ ಅವರ ವಂಶಕ್ಕೆ ಗಂಗ ಹೆಸರಿಟ್ಟಿರಬಹುದು. ಆರಂಭ ಗಂಗರಸರು, ಶೈವರು, ಶಿವನ ಪತ್ನಿ ಗಂಗೆಯ ಆರಾಧಕರಾಗಿ ಈ ವಂಶಕ್ಕೆ ಅದೇ ಹೆಸರಿಟ್ಟಿರಬಹುದೆಂದು ಸಹ ಶಂಕಿಸಲಾಗಿದೆ.