ಪುಟಗಳು

ವಿಂಡೋಸ್ ಎಕ್ಸ್ ಪಿ ಸಾಯಲು ಸಾವಿರ ದಿನ ಬಾಕಿ

ಸ್ಯಾನ್ ಫ್ರಾನ್ಸಿಸ್ಕೋ ಜು 15: ಸಾಫ್ ವೇರ್ ದಿಗ್ಗಜ ಮೈಕ್ರೋಸಾಫ್ಟ್ ತನ್ನ ಬಹು ಜನಪ್ರಿಯ ಆಪರೇಟಿಂಗ್ ಸಿಸ್ಟಮ್ ವಿಂಡೋಸ್ ಎಕ್ಸ್ ಪಿಗೆ ಡೇತ್ ಡೇ ಫಿಕ್ಸ್ ಮಾಡಿದೆ. ಕಂಪನಿ ಮೂಲಗಳ ಪ್ರಕಾರ, ವಿಂಡೋಸ್ ಎಕ್ಸ್ ಪಿ ಇನ್ನು ಉಳಿದಿರುವುದು ಸಾವಿರ ದಿನಗಳು ಮಾತ್ರ. ಜು.11 ರಿಂದ ಎಕ್ಸ್ ಪಿ ಸಾವಿನ ದಿನಗಳ ಎಣಿಕೆ ಆರಂಭವಾಗಿದೆ. ನಂತರ ಎಕ್ಸ್ ಪಿ ಸೇವೆ ಸಂಪೂರ್ಣ ನಿಲ್ಲಿಸಲಾಗುವುದು ಎಂದು ಮೈಕ್ರೋ ಸಾಫ್ಟ್ ಸಂಸ್ಥೆಯ ಸ್ಟೀಫನ್ ರೋಸ್ ಹೇಳಿದ್ದಾರೆ.
  Read:  In English 
ವಿಂಡೋಸ್ 7 ಗೆ ಹೆಚ್ಚಿನ ಪ್ರಚಾರ ನೀಡಬೇಕಿದೆ. ಎಕ್ಸ್ ಪಿ ಬದಲಿಗೆ ಹೆಚ್ಚಿನ ಸೌಲಭ್ಯವುಳ್ಳ ಇತರೆ ಆಪರೇಟಿಂಗ್ ಸಿಸ್ಟಮ್ ಬಳಕೆಗೆ ಅವಕಾಶ ಕಲ್ಪಿಸಲಾಗುವುದು. ಲಕ್ಷಾಂತರ ಕಂಪ್ಯೂಟರ್ ಗಳ ಮೊದಲ ಆಯ್ಕೆಯಾಗಿ ಇಂದಿಗೂ ವಿಂಡೋಸ್ ಎಕ್ಸ್ ಪಿ ಜನಪ್ರಿಯತೆ ಉಳಿಸಿಕೊಂಡಿದೆ. ಆದರೆ, 2014ರ ನಂತರ ಎಕ್ಸ್ ಪಿ ಸಂಪೂರ್ನ ನಿರ್ನಾಮವಾಗಲಿದೆ.

ಮೈಕ್ರೋಸಾಫ್ಟ್ ಕಡೆಯಿಂದ ಯಾವುದೇ ಪ್ಯಾಚ್ ಹಾಗೂ ತಾಂತ್ರಿಕ ಬೆಂಬಲ ಗ್ರಾಹಕರಿಗೆ ಸಿಗುವುದಿಲ್ಲ. ಒಂದು ವೇಳೆ ಎಕ್ಸ್ ಪಿ ಬಳಸಿದರೂ ಸುರಕ್ಷತೆ ಇರುವುದಿಲ್ಲ. ಬದಲಿಗೆ ವಿಂಡೋಸ್ 7 ಬಳಸಲೇ ಬೇಕಾದ ಅನಿವಾರ್ಯತೆ ಉಂಟಾಗಲಿದೆ. ಈ ಮಧ್ಯೆ ಮೈಕ್ರೋಸಾಫ್ಟ್ ವಿಂಡೋಸ್ 7 ಜನಪ್ರಿಯತೆ ನಂತರ ವಿಂಡೋಸ್ 8 ಅನ್ನು 2012ರಲ್ಲಿ ಹೊರ ತರಲಿದೆ.