ಪುಟಗಳು

ಏಡ್ಸ್ ರೋಗ - AIDS


ಅಕ್ವೈರ್ಡ್ ಇಮ್ಯೂನ್ ಡಿಫಿಷಿಯನ್ಸಿ ಸಿಂಡ್ರೊಮ್‌ (ಆರ್ಜಿತ ರೋಗ ನಿರೋಧಕ ಶಕ್ತಿ ಹೀನತೆ) ಅಥವಾ ಅಕ್ವೈರ್ಡ್ ಇಮ್ಯುನೊ ಡಿಫಿಷಿಯನ್ಸಿ ಸಿಂಡ್ರೊಮ್ (AIDS ) ಮಾನವನ ನಿರೋಧಕ ವ್ಯವಸ್ಥೆಯ ರೋಗವಾಗಿದ್ದು, ಇದು ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್ (HIV)(ಮಾನವನ ನಿರೋಧಕ ವ್ಯವಸ್ಥೆಯನ್ನು ಶಕ್ತಿ ಹೀನವಾಗಿ ಮಾಡುವ ವೈರಸ್)ನಿಂದಾಗಿ ಬರುತ್ತದೆ.[೧][೨][೩]

ಈ ಸ್ಥಿತಿಯು ಮಾನವನ ನಿರೋಧಕ ವ್ಯವಸ್ಥೆಯನ್ನು ಕ್ರಮೇಣವಾಗಿ ಬಲಹೀನಗೊಳಿಸುವುದು ಮತ್ತು ಇದರಿಂದಾಗಿ ವ್ಯಕ್ತಿಗಳಿಗೆ ಬೇಗನೆ ಇತರೆ ಅವಕಾಶವಾದಿ ಸೋಂಕುಗಳು ಮತ್ತು ಗಡ್ಡೆ ರೋಗಗಳು ಅಂಟಿಕೊಳ್ಳುತ್ತವೆ. ಲೋಳೆಯ ಪೊರೆಯ ನೇರ ಸಂಪರ್ಕಕ್ಕೆ ಬರುವುದರಿಂದ ಅಥವಾ ದೈಹಿಕ ದ್ರವಗಳಾದ ರಕ್ತ, ವೀರ್ಯ, ಯೋನಿ ದ್ರವ, ವೀರ್ಯ, ಮತ್ತು ಸ್ತನ ಹಾಲುರಕ್ತದ ಜೊತೆಗೆ ಸೇರಿಕೊಳ್ಳುವುದರಿಂದ HIV ಹರಡುತ್ತದೆ. [೪][೫]

ಗುದದ್ವಾರ, ಯೋನಿ ಅಥವಾ ಮುಖ ಸಂಭೋಗ, ರಕ್ತ ದಾನ, ಚರ್ಮದಡಿಯಲ್ಲಿ ಚುಚ್ಚುಮದ್ದು ಕೊಡಲು ಬಳಸುವ ಕಲುಷಿತ ಸೂಜಿಗಳು, ಗರ್ಭಿಣಿಯಾಗಿದ್ದಾಗ ತಾಯಿ ಮತ್ತು ಮಗುವಿನ ನಡುವಣ ವಿನಿಮಯ, ಶಿಶು ಜನನ, ಸ್ತನ್ಯಪಾನ ಅಥವಾ ಮೇಲಿನ ಇತರಾವುದೇ ರೀತಿಯಲ್ಲಿ ದೈಹಿಕ ದ್ರವದ ಸಂಪರ್ಕಕ್ಕೆ ಬರುವುದರಿಂದಲೂ ಏಡ್ಸ್ ತಗುಲಬಹುದು. AIDS ಈಗ ಸರ್ವವ್ಯಾಪಿ ರೋಗವಾಗಿದೆ.[೬] ಜಗತ್ತಿನಾದ್ಯಂತ ಸುಮಾರು 33.2 ದಶಲಕ್ಷ ಜನರು ಈ ರೋಗದಿಂದ ಬಳಲುತ್ತಿದ್ದಾರೆ ಎಂದು 2007ರಲ್ಲಿ ಅಂದಾಜು ಮಾಡಲಾಗಿದೆ, ಮತ್ತು 330,000 ಮಕ್ಕಳು ಸೇರಿದಂತೆ 2.1 ದಶಲಕ್ಷ ಜನರು AIDS ಮಹಾಮಾರಿಯಿಂದ ಸತ್ತಿದ್ದಾರೆಂದು ಅಂದಾಜು ಮಾಡಲಾಗಿದೆ.[೭] ಈ ಪೈಕಿ ಮೂರುಕಾಲು ಭಾಗಕ್ಕಿಂತಲೂ ಹೆಚ್ಚು ಸಾವುಗಳು ಆಫ್ರಿಕಾ ಉಪ-ಸಹರಾ[೭]ಭೂಭಾಗದಲ್ಲಿ ಸಂಭವಿಸಿದ್ದು, ಇದು ಅಲ್ಲಿನ ಆರ್ಥಿಕ ಬೆಳವಣಿಗೆಯನ್ನು ಕುಂಠಿತಗೊಳಿಸಿದೆ ಮತ್ತು ಮಾನವ ಸಂಪನ್ಮೂಲವನ್ನು ನಾಶಪಡಿಸಿದೆ.[೮]

ಹತ್ತೊಂಬತ್ತನೆ ಶತಮಾನದ ಕೊನೆ ಅಥವಾ 20ನೆ ಶತಮಾನದ ಆದಿಯಲ್ಲಿ ಪಶ್ಚಿಮ-ಕೇಂದ್ರ ಆಫ್ರಿಕಾದಲ್ಲಿ HIV ಹುಟ್ಟಿಕೊಂಡಿತು ಎಂದು ಜೀನುಗಳ ಕುರಿತ ಸಂಶೋಧನೆಗಳು ತಿಳಿಸಿವೆ.[೯] [೧೦] 1981ರಲ್ಲಿ U.S.ನ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಶನ್‌ AIDSನ್ನು ಮೊದಲು ಗುರುತಿಸಿದವು ಮತ್ತು ಅದಕ್ಕೆ ಕಾರಣವಾದ HIVಯನ್ನು 1980ರ ಆರಂಭದಲ್ಲೇ ಗುರುತಿಸಲಾಗಿತ್ತು.[೧೧]


AIDS ಮತ್ತು HIVಗಿರುವ ಚಿಕಿತ್ಸೆಗಳು, ರೋಗದ ವೇಗವನ್ನು ನಿಧಾನಿಸಬಹುದು, ಆದರೆ ಈ ರೋಗವನ್ನು ಗುಣಪಡಿಸುವ ಯಾವುದೇ ಲಸಿಕೆಗಳು ಅಥವಾ ಔಷಧಗಳಾಗಲಿ ಸದ್ಯಕ್ಕೆ ಇಲ್ಲ. HIV ಸೋಂಕಿನಿಂದಾಗಿ ಸಂಭವಿಸುವ ಸಾವುಗಳು ಮತ್ತು ರೋಗ ಹರಡಿಕೆಯನ್ನು ಆಂಟಿರೆಟ್ರೋವೈರಲ್ ಚಿಕಿತ್ಸೆಯು ಕಡಿಮೆಗೊಳಿಸಿದರೂ, ಈ ಔಷಧಗಳು ದುಬಾರಿಯಾಗಿವೆ ಮತ್ತು ಎಲ್ಲ ದೇಶಗಳಲ್ಲಿ ಆಂಟಿರೆಟ್ರೋವೈರಲ್ ಔಷಧ ನಿತ್ಯ ಲಭ್ಯವಿಲ್ಲ. [೧೨]

HIV ಸೋಂಕಿಗೆ ಚಿಕಿತ್ಸೆ ನೀಡುವುದು ಕಷ್ಟಕರವಾಗಿರುವುದರಿಂದ, ಸೋಂಕು ತಗುಲದಂತೆ ಮುನ್ನೆಚ್ಚರಿಕೆವಹಿಸುವುದೇ AIDS ನಿಯಂತ್ರಣದ ಪ್ರಮುಖ ಗುರಿ, ಅಲ್ಲದೆ ವೈರಸ್ ಹರಡುವುದನ್ನು ನಿಧಾನಿಸುವ ಪ್ರಯತ್ನವಾಗಿ ಆರೋಗ್ಯ ಸಂಸ್ಥೆಗಳು ಸುರಕ್ಷಿತ ಲೈಂಗಿಕತೆ ಮತ್ತು ಸೂಜಿ-ವಿನಿಮಯ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುತ್ತಿವೆ.

ರೋಗ-ಲಕ್ಷಣಗಳು
ಆರೋಗ್ಯಕರ ನಿರೋಧಕ ವ್ಯವಸ್ಥೆಗಳನ್ನು ಹೊಂದಿರುವ ವ್ಯಕ್ತಿಗಳಲ್ಲಿ ಸಾಮಾನ್ಯವಾಗಿ ಕಂಡುಬರದ ಪರಿಸ್ಥಿತಿಗಳಿಂದಾಗಿ AIDSನ ರೋಗ-ಲಕ್ಷಣಗಳು ಕಾಣಿಸಿಕೊಳ್ಳಬಹುದು. ಈ ಪೈಕಿ ಹೆಚ್ಚಿನ ಪರಿಸ್ಥಿತಿಗಳು ಬ್ಯಾಕ್ಟೀರಿಯಾ, ವೈರಸ್‌ಗಳು, ಶಿಲೀಂಧ್ರ ಮತ್ತು ಪರಾವಲಂಬಿಗಳ ಸೋಂಕಿನಿಂದ ಉಂಟಾಗುತ್ತವೆ, ಇಲ್ಲದೆ ಇವು ಸಾಮಾನ್ಯವಾಗಿ HIV ಸೋಂಕಿಗೊಳಗಾದ ನಿರೋಧಕ ವ್ಯವಸ್ಥೆಯ ಭಾಗಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತವೆ. AIDS ಸೋಂಕಿತ ವ್ಯಕ್ತಿಗಳಲ್ಲಿ ಅವಕಾಶವಾದಿ ಸೋಂಕುಗಳು ಸಾಮಾನ್ಯ.[೧೩]

ಶಾರೀರಿಕ ವ್ಯವಸ್ಥೆಯ ಪ್ರತಿಯೊಂದು ಭಾಗದ ಮೇಲೂ HIV ಪರಿಣಾಮ ಬೀರುತ್ತದೆ. AIDS ರೋಗಿಗಳಲ್ಲಿ ಹಲವು ಬಗೆಯ ಕ್ಯಾನ್ಸರ್‌ಗಳು ಕಾಣಿಸಿಕೊಳ್ಳುವ ಅಪಾಯಗಳು ಹೆಚ್ಚು, ಅವುಗಳೆಂದರೆ ಕಾಪೊಸಿಯ ಸಾರ್ಕೋಮಾ, ಗರ್ಭಕಂಠದ ಕ್ಯಾನ್ಸರ್‌ ಮತ್ತು ನಿರೋಧಕ ವ್ಯವಸ್ಥೆಯಲ್ಲಿ ಉದ್ಭವಿಸುವ ಕ್ಯಾನ್ಸರ್ ಲಿಂಫೋಮಾಗಳು. ಅದಲ್ಲದೆ, AIDS ಪೀಡಿತ ರೋಗಿಗಳಲ್ಲಿ ಆಗಾಗ ಜ್ವರ, ಬೆವರು (ನಿರ್ದಿಷ್ಟವಾಗಿ ರಾತ್ರಿ ಹೊತ್ತು), ಊದಿಕೊಂಡ ಗ್ರಂಥಿಗಳು, ಶೀತ, ನಿಶ್ಯಕ್ತಿ, ಮತ್ತು ತೂಕ ನಷ್ಟ ಕಂಡು ಬರುವುದು ಸಾಮಾನ್ಯ.[೧೪][೧೫]

AIDS ಪೀಡಿತರು ವಾಸಿಸುತ್ತಿರುವ ಭೌಗೋಳಿಕ ಪ್ರದೇಶದಲ್ಲಿ ಅವಕಾಶವಾದಿ ಸೋಂಕುಗಳು ವ್ಯಾಪಕವಾಗಿ ಹರಡಿದ್ದರೆ ಅವು ಬಹುಬೇಗನೆ ಏಡ್ಸ್ ರೋಗಿಗಳಲ್ಲೂ ಕಾಣಿಸಿಕೊಳ್ಳುತ್ತದೆ.

ಶ್ವಾಸಕೋಶದ ಸೋಂಕುಗಳು
ಆರೋಗ್ಯಕರ ಮತ್ತು ರೋಗ ನಿರೋಧಕ ಸಾಮಾರ್ಥ್ಯ ಇರುವ ವ್ಯಕ್ತಿಗಳಲ್ಲಿ ನ್ಯುಮೊಸಿಸ್ಟಿಸ್ ನ್ಯುಮೋನಿಯಾ(ಮೂಲತಃ ನ್ಯುಮೋಸಿಸ್ಟಿಸ್ ಕಾರಿನೀ ನ್ಯುಮೋನಿಯಾ, ಮತ್ತು ಈಗಲೂ PCP ಎಂದೇ ಸಂಕ್ಷೇಪಿಸಲಾಗುತ್ತಿದೆ, ಅಂದರೆ ನ್ಯುಮೊಸಿಸ್ಟಿಸ್' ' ನ್ಯುಮೋನಿಯಾ )ಕಂಡು ಬರದು, ಆದರೆ HIV-ಸೋಂಕಿತರಲ್ಲಿ ಇದು ಸಾಮಾನ್ಯ. ನ್ಯುಮೊಸಿಸ್ಟಿಸ್ ಜಿರೊವಿಸೀ ಇದಕ್ಕೆ ಕಾರಣ.

ಪರಿಣಾಮಕಾರಿ ಪರೀಕ್ಷೆ, ಚಿಕಿತ್ಸೆ, ಮತ್ತು ನಿತ್ಯ ರೋಗ ನಿರೋಧಕ ಚಿಕಿತ್ಸೆಗಳು ಬರುವ ಮೊದಲು, ಪಾಶ್ಚಿಮಾತ್ಯ ದೇಶಗಳಲ್ಲಿ ತಕ್ಷಣದ ಸಾವಿಗೆ ಇದುವೇ ಕಾರಣವಾಗಿತ್ತು. ರಕ್ತದ ಪ್ರತಿ µLಗೆ CD4 ಎಣಿಕೆಗಳು 200 ಜೀವಕೋಶಗಳಿಗಿಂತ ಕಡಿಮೆಯಿದ್ದಲ್ಲಿ ಮಾತ್ರ ರೋಗ ಸೂಚನೆ ಸಿಗುತ್ತದೆ, ಆದಾಗ್ಯೂ ಅಭಿವೃದ್ಧಿಶೀಲ ದೇಶಗಳಲ್ಲಿ ಆರೋಗ್ಯ ತಪಾಸಣೆಗೊಳಪಡದ ವ್ಯಕ್ತಿಗಳಲ್ಲಿ AIDS ರೋಗದ ಮೊದಲ ಸೂಚನೆಯೇ ನ್ಯುಮೋನಿಯಾ. [೧೬]


HIV ಜೊತೆ ಗುರುತಿಸಿಕೊಂಡಿರುವ ಸೋಂಕುಗಳಲ್ಲಿ ಕ್ಷಯ (TB) ಪ್ರಮುಖವಾದ್ದು, ಏಕೆಂದರೆ ಇದು ರೋಗ ನಿರೋಧಕ ಸಾಮಾರ್ಥ್ಯ ಹೊಂದಿರುವ ವ್ಯಕ್ತಿಗಳಿಗೂ ಉಸಿರಾಟದ ಮೂಲಕ ವರ್ಗಾವಣೆಯಾಗಬಲ್ಲುದು, ಮತ್ತು ಪತ್ತೆಯಾದಲ್ಲಿ ಇದಕ್ಕೆ ಸುಲಭವಾಗಿ ಚಿಕಿತ್ಸೆ ನೀಡಬಹುದು, ಅಲ್ಲದೆ HIV ರೋಗದ ಆರಂಭದಲ್ಲಿ ಮಾತ್ರ ಕ್ಷಯ ಕಾಣಿಸಿಕೊಳ್ಳುತ್ತದೆ, ಮತ್ತು ಸೂಕ್ತ ಔಷಧೋಪಚಾರದಿಂದ ಇದು ಬರದಂತೆ ಕೂಡ ತಡೆಯಬಹುದು. ಆದಾಗ್ಯೂ, ಬಹುಔಷಧಗಳು ನಿರೋಧಕಶಕ್ತಿಗೆ ವಿರುದ್ಧವಾಗಿ ಕೆಲಸ ಮಾಡಿದಲ್ಲಿ ಗಂಭೀರ ಸಮಸ್ಯೆಗೆ ಎಡೆ ಮಾಡಿಕೊಡುವ ಸಾಧ್ಯತೆಗಳಿವೆ. ಆದರೂ ಇದರಿಂದಾಗಿಯೇ ಏಡ್ಸ್ ಸೋಂಕು ತಗುಲುವ ಸಾಧ್ಯತೆಗಳನ್ನು ತಳ್ಳಿ ಹಾಕಲಾಗಿದೆ, ಏಕೆಂದರೆ ಪಾಶ್ಚಿಮಾತ್ಯ ದೇಶಗಳಲ್ಲಿ ಏಚ್ಚರಿಕೆಯ ನೇರ ಔಷಧೋಪಚಾರ ಮತ್ತು ಇತರೆ ಸುಧಾರಿತ ಪದ್ಧತಿಗಳೂ ಬಳಕೆಯಲ್ಲಿವೆ, ಆದರೆ HIV ವ್ಯಾಪಕವಾಗಿರುವ ಅಭಿವೃದ್ಧಿಶೀಲ ದೇಶಗಳಲ್ಲಿ ಇದೇ ಸ್ಥಿತಿ ಇಲ್ಲ.

HIV ಸೋಂಕಿನ ಆರಂಭಿಕ-ಹಂತದಲ್ಲಿ (ಪ್ರತಿ µLಗೆ CD4 ಎಣಿಕೆ >300 ಜೀವಕೋಶಗಳು, TBಯಿಂದಾಗಿ ಶ್ವಾಸಕೋಶದ ಕಾಯಿಲೆ ಬರಬಹುದು. HIV ಸೋಂಕು ಇನ್ನಷ್ಟು ಮುಂದೆ ಹೋಗಿದ್ದಲ್ಲಿ, ಸಾಮಾನ್ಯ ರೋಗ ಲಕ್ಷಣದಂತೆಯೇ ಇದ್ದು ಇಡೀ ಶ್ವಾಸಕೋಶವನ್ನು ಆವರಿಸಿಕೊಂಡು(ಇಡೀ ದೇಹದ)ವಿಲಕ್ಷಣ ರೀತಿಯಲ್ಲಿ TB ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಏಡ್ಸ್‌ನ ‌ರೋಗ-ಲಕ್ಷಣಗಳು ದೈಹಿಕ ಪ್ರಕೃತಿಯನ್ನು ಅವಲಂಬಿಸಿದೆ ಮತ್ತು ಅವು ನಿರ್ದಿಷ್ಟ ಅಂಗಕ್ಕೆ ಸೀಮಿತವೆಂದು ಹೇಳಲಾಗದು, ಅಸ್ಥಿ ಮಜ್ಜೆ, ಎಲುಬು, ಮೂತ್ರದ ಮತ್ತು ಜೀರ್ಣಾಂಗ ವ್ಯೂಹ, ಪಿತ್ತಜನಕಾಂಗ, ಪ್ರಾದೇಶಿಕ ದುಗ್ಧ ಗ್ರಂಥಿಗಳು, ಮತ್ತು ಕೇಂದ್ರ ನರವ್ಯೂಹ ವ್ಯವಸ್ಥೆ ವೇಲೆ ಆಗಿಂದಾಗ್ಗೆ ಪರಿಣಾಮವನ್ನುಂಟು ಮಾಡುತ್ತವೆ.

ಜೀರ್ಣಾಂಗ ವ್ಯೂಹದ ಸೋಂಕುಗಳು
ಅನ್ನನಾಳ(ಹೊಟ್ಟೆಯತ್ತ ಸಾಗುವ ಆಹಾರನಾಳ ಅಥವಾ ಗಂಟಲು)ದ ಕೆಳ ತುದಿಯ ಒಳಪದರದಲ್ಲಿ ಕಾಣಿಸಿಕೊಳ್ಳುವ ಉರಿಯಿಂದಾಗಿ ಅನ್ನನಾಳದ ಉರಿಯೂತ ಉಂಟಾಗುತ್ತದೆ. HIV ಸೋಂಕಿತ ವ್ಯಕ್ತಿಗಳಲ್ಲಿ, ಇದು ಸಾಮಾನ್ಯವಾಗಿ ಶಿಲೀಂಧ್ರ (ಕ್ಯಾಂಡಿಡಿಯಾಸಿಸ್) ಅಥವಾ ವೈರಲ್ (ಹರ್ಪಿಸ್ ಸಿಂಪ್ಲೆಕ್ಸ್-1 ಅಥವಾ ಸೈಟೊಮೆಗಾಲೊವೈರಸ್) ಸೋಂಕುಗಳಿಂದ ಉಂಟಾಗುತ್ತದೆ. ಮೈಕೊಬ್ಯಾಕ್ಟೀರಿಯಾಗಳಿಂದಾಗಿ ಈ ಸೋಂಕು ತಗುಲಿದ ಉದಾಹರಣೆಗಳು ಅಪರೂಪ.[೧೮]

HIV ಸೋಂಕಿತರಲ್ಲಿ ಆಗಿಂದಾಗ್ಗೆ ಕಾಣಿಸಿಕೊಳ್ಳುವ ಅತಿಸಾರ ಭೇದಿಗೆ ಸಾಮಾನ್ಯ ಬ್ಯಾಕ್ಟೀರಿಯಾದ (ಸ್ಯಾಲ್ಮನೆಲ , ಷಿಗೆಲ , ಲಿಸ್ಟೀರಿಯಾ ಅಥವಾ ಕ್ಯಾಂಪಿಲೊಬ್ಯಾಕ್ಟರ್ ) ಮತ್ತು ಪರಾವಲಂಬಿ ಸೋಂಕುಗಳು; ಮತ್ತು ಅಪರೂಪಕ್ಕೆ ಕಾಣಿಸಿಕೊಳ್ಳುವ ಅವಕಾಶವಾದಿ ಸೋಂಕುಗಳಂತಹ ಕ್ರಿಪ್ಟೋಸ್ಪೊರಿಡಿಯೋಸಿಸ್, ಮೈಕ್ರೊಸ್ಪೊರಿಡಿಯೋಸಿಸ್, ಮೈಕೋಬ್ಯಾಕ್ಟೀರಿಯಂ ಏವಿಯಂ ಸಂಕೀರ್ಣ (MAC) ಮತ್ತು ವೈರಸ್‌ಗಳು[೧೯] ಆಸ್ಟ್ರೋವೈರಸ್, ಅದೊನೊವೈರಸ್, ರೊಟಾವೈರಸ್ ಮತ್ತು ಸೈಟೊಮೆಗಾಲೊವೈರಸ್, (ಕೊನೆಯದ್ದು ಮೈಕೋಬ್ಯಾಕ್ಟೀರಿಯಂ ಏವಿಯಂ ದೊಡ್ಡ ಕರುಳಿನ ಸೋಂಕಿನಿಂದಾಗಿ ಬರುವಂತದ್ದು)ಸೇರಿದಂತೆ ಹಲವು ಸಾಧ್ಯತೆಗಳು ಕಾರಣಗಳಾಗಬಹುದು.


ಕೆಲವು ಪ್ರಕರಣಗಳಲ್ಲಿ, HIV ಚಿಕಿತ್ಸೆಗೆ ಬಳಸಿದ ಹಲವು ಔಷಧಗಳಿಂದಾಗಿಯೂ ಅತಿಸಾರ ಭೇದಿ ಉಂಟಾಗುತ್ತದೆ, ಅಥವಾ ಇದು ಕೆಲವೊಮ್ಮೆ ಅಂದರೆ ನಿರ್ದಿಷ್ಟವಾಗಿ HIV ಸೋಂಕು ಆರಂಭಿಕ ಹಂತದಲ್ಲಿದ್ದಾಗ ಅತಿಸಾರ ಭೇದಿ HIV ಜೊತೆ ಸೇರಿಕೊಳ್ಳಬಹುದು. ಅತಿಸಾರ ಭೇದಿಗೆ ಕಾರಣವಾಗುವ ಬ್ಯಾಕ್ಟೀರಿಯಾಕ್ಕೆ ಚಿಕಿತ್ಸೆ ನೀಡುವಾಗ ಬಳಸುವ ಪ್ರತಿಜೀವಕಗಳಿಂದಾಗಿಯೂ ಇದು ಬರಬಹುದು(ಕ್ಲೊಸ್ಟ್ರಿಡಿಯಂ ಜಗ್ಗದಾಗ ). HIV ಸೋಂಕಿನ ಕೊನೆಯ ಹಂತಗಳಲ್ಲಿ, ಅತಿಸಾರ ಭೇದಿಯು ಪೌಷ್ಟಿಕ ಪದಾರ್ಥಗಳನ್ನು ಕರುಳಿನ ವ್ಯೂಹ ಜೀರ್ಣಿಸಿಕೊಳ್ಳಲು ಅಶಕ್ತವಾಗಿರುವುದನ್ನು ಪ್ರತಿಬಿಂಬಿಸುತ್ತದೆ, ಮತ್ತು HIVಗೆ-ಸಂಬಂಧಿಸಿದಂತೆ ಕ್ಷೀಣಿಸುವುದರ ಪ್ರಮುಖ ಒಂದು ಅಂಶವಾಗಿರುವ ಸಾಧ್ಯತೆಗಳೂ ಇವೆ.[೨೦]

ನರಶಾಸ್ತ್ರೀಯ ಮತ್ತು ಮನೋವೈದ್ಯಕೀಯ ಸೇರ್ಪಡೆ
ನರವ್ಯೂಹ ವ್ಯವಸ್ಥೆಗೆ ಸೋಂಕು ತಗುಲಿಸಲು ಇತರೆ ಜೀವಿಗಳಿಗೆ HIV ಸೋಂಕು ಎಡೆ ಮಾಡಿಕೊಡುವುದರಿಂದ ಅಥವಾ ಅನಾರೋಗ್ಯದ ನೇರ ಪರಿಣಾಮದಿಂದಾಗಿ ವಿವಿಧ ನರ ಮನೋವೈದ್ಯಕೀಯ ಅನುಗತ ರೋಗ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಟೊಕ್ಸೊಪ್ಸಾಸ್ಮೋಸಿಸ್‌ ಒಂದು ರೋಗವಾಗಿದ್ದು, ಏಕ-ಜೀವಕೋಶ ಹೊಂದಿರುವ ಟೊಕ್ಸಾಪ್ಲಾಸ್ಮಾ ಗೊಂಡೀ ಎಂಬ ಪರಾವಲಂಬಿಯಿಂದ ಬರುತ್ತದೆ; ಇದು ನೇರವಾಗಿ ಮಿದುಳಿಗೆ ಸೋಂಕು ತಗುಲಿಸಿ ಟೊಕ್ಸಾಪ್ಲಾಸ್ಮಾ ಎನ್ಸೆಪಲೈಟಿಸ್‌ಗೆ ಕಾರಣವಾಗುತ್ತದೆ, ಇದು ಕಣ್ಣುಗಳು ಮತ್ತು ಶ್ವಾಸಕೋಶಗಳಿಗೂ ಸೋಂಕುಂಟು ಮಾಡಿ ರೋಗಕ್ಕೆ ಕಾರಣವಾಗಬಹುದು.[೨೧]

ಕ್ರಿಪ್ಟೋಕೊಕ್ಕಾಲ್ ಮಿನಿಂಜಿಟಿಸ್ ಒಂದು ಮಿದುಳ್ಪೊರೆ(ಮಿದುಳು ಮತ್ತು ಬೆನ್ನುಹುರಿಯನ್ನು ಆವರಿಸಿರುವ ಒಳಪೊರೆ)ಗೆ ಬರುವ ಒಂದು ಸೋಂಕು, ಕ್ರಿಪ್ಟೋಕಾಕಸ್ ನಿಯೋಫಾರ್ಮನ್ಸ್ ಎಂಬ ಶಿಲೀಂಧ್ರದಿಂದ ಬರುತ್ತದೆ. ಇದರಿಂದಾಗಿ ಜ್ವರ, ತಲೆನೋವು, ನಿಶ್ಯಕ್ತಿ, ಹೊಟ್ಟೆ ತೊಳಸುವಿಕೆ, ಮತ್ತು ವಾಕರಿಕೆ ಉಂಟಾಗುತ್ತದೆ. ರೋಗಿಗಳಲ್ಲಿ ಮೂರ್ಛೆ ರೋಗ(ಫಿಟ್ಸ್) ಮತ್ತು ಗೊಂದಲಗಳಿಗೂ ಇದು ಕಾರಣವಾಗಬಹುದು; ಕೂಡಲೇ ಸರಿಯಾದ ಚಿಕಿತ್ಸೆಯಾಗದಿದ್ದಲ್ಲಿ ಅಪಾಯ ತಪ್ಪಿದ್ದಲ್ಲ.

ಪ್ರೋಗ್ರೆಸಿವ್ ಮಲ್ಟಿಫೋಕಲ್ ಲ್ಯೂಕೊಎನ್ಸೆಫಲೋಪತಿಯು (PML) ನರಪೊರೆಯನ್ನು ನಾಶಗೊಳಿಸುವ ರೋಗವಾಗಿದ್ದು, ಇದರಿಂದಾಗಿ ನರ ಜೀವಕೋಶಗಳ ನರತಂತುಗಳನ್ನು ಆವರಿಸಿಕೊಂಡಿರುವ ನರಪೊರೆಯ ಕೋಶಗಳು ಕ್ರಮೇಣವಾಗಿ ನಾಶಗೊಂಡು ನರಗಳ ಪ್ರಚೋದನೆಯ ಸಂವಹನ ದುರ್ಬಲವಾಗುತ್ತದೆ. JC ವೈರಸ್‌ ಎಂಬ ವೈರಸ್‌ನಿದ ಬರುವ ಇದು 70% ಜನರಲ್ಲಿ ಸುಪ್ತವಾಗಿ ಕಾಣಿಸಿಕೊಳ್ಳುತ್ತದೆ, AIDS ರೋಗಿಗಳ ಪ್ರಕರಣದಲ್ಲಾಗುವಂತೆ ನಿರೋಧಕ ವ್ಯವಸ್ಥೆಯು ತೀರಾ ದುರ್ಬಲವಾದಾಗ ಮಾತ್ರ ಈ ರೋಗ ಕಾಣಿಸಿಕೊಳ್ಳುತ್ತದೆ. ಆದರೆ ಈ ರೋಗ ಕ್ಷಿಪ್ರಗತಿಯಲ್ಲಿ ಮುಂದುವರಿದು, ರೋಗ ಪತ್ತೆಯಾದ ಕೆಲವೇ ತಿಂಗಳುಗಳಲ್ಲಿ ಸಾವಿಗೆ ಕಾರಣವಾಗಬಹುದು.[೨೨] AIDS ಡಿಮೆನ್ಶಿಯಾ ಕಾಂಪ್ಲೆಕ್ಸ್(ADC)ವು HIV ಸೋಂಕಿನಿಂದ ಪ್ರೇರಿತ ಚಯಾಪಚಯ ಎನ್ಸೆಫಲೋಪತಿಯಾಗಿದೆ, ಅಲ್ಲದೆ HIV ಸೋಂಕಿತ ಮಿದುಳಿನ ಮ್ಯಾಕ್ರೋಫೇಜಸ್(ದೊಡ್ಡ ಗಾತ್ರದ ಬಿಳಿಯ ರಕ್ತಕಣಗಳು) ಮತ್ತು ಮೈಕ್ರೊಗ್ಲಿಯಾದಲ್ಲಿ ನಿರೋಧಕ ವ್ಯವಸ್ಥೆಯನ್ನು ತೀವ್ರಗೊಳಿಸುವುದರಿಂದ ಇದಕ್ಕೆ ಉತ್ತೇಜನ ಸಿಗುತ್ತದೆ.

ಈ ಜೀವಕೋಶಗಳು HIVನಿಂದ ಫಲದಾಯಕವಾಗಿ ಸೋಂಕಿತಗೊಳ್ಳುತ್ತವೆ ಮತ್ತು ಇವು ಎರಡೂ ಅತಿಥೇಯ ಮತ್ತು ವೈರಲ್ ಮೂಲಗಳ ರಹಸ್ಯ ನ್ಯುರೊಟಾಕ್ಸಿನ್‌ಗಳಾಗಿವೆ.[೨೩]

HIV ಸೋಂಕು ತಗುಲಿ ಹಲವು ವರ್ಷಗಳ ನಂತರ ಅರಿವು, ನಡವಳಿಕೆ ಮತ್ತು ಸ್ನಾಯುಗಳಲ್ಲಿನ ವೈಪರೀತ್ಯಗಳಿಂದಾಗಿ ನಿರ್ದಿಷ್ಟ ನರಶಾಸ್ತ್ರೀಯ ದೌರ್ಬಲ್ಯಗಳು ಕಾಣಿಸಿಕೊಳ್ಳುತ್ತದೆ ಮತ್ತು ಅವು ಕಡಿಮೆ ಪ್ರಮಾಣದ CD4+ T ಜೀವಕೋಶದ ಹಂತಗಳು ಮತ್ತು ಅತಿ ಪ್ಲಾಸ್ಮಾ ವೈರಲ್‌ಗಳ ಲೋಡ್‌ಗಳ ಜೊತೆ ಸೇರಿಕೊಂಡಿವೆ. ಪಾಶ್ಚಿಮಾತ್ಯ ದೇಶಗಳಲ್ಲಿ[೨೪] ಏಡ್ಸ್ ವ್ಯಾಪಕತೆ 10–20% ಇದ್ದರೆ, ಭಾರತದಲ್ಲಿ 1–2%ರಷ್ಟು ಮಾತ್ರ HIV ಸೋಂಕಿತರಿದ್ದಾರೆ.[೨೫][೨೬]

ಭಾರತದಲ್ಲಿ HIVಯ ಉಪ ಬಗೆಗಳಿರುವುದು ಈ ವ್ಯತ್ಯಾಸಕ್ಕೆ ಕಾರಣವಾಗಿರಬಹುದು. HIV ಸೋಂಕಿನಿದ ಬಳಲುತ್ತಿರುವ ರೋಗಿಗಳಲ್ಲಿ AIDS ಸಂಬಂಧಿತ ಬುದ್ಧಿವಿಕಲ್ಪವನ್ನು ಕೆಲವೊಮ್ಮೆ ಕಾಣಬಹುದು; ರೋಗಿಗಳು ಮುಂಗೋಪಿಗಳಾಗುತ್ತಾರೆ, ಅಲ್ಲದೆ ಈ ಸೋಂಕು ಅವರ ಅರಿವಿನ ಶಕ್ತಿಯನ್ನು ದುರ್ಬಲಗೊಳಿಸುತ್ತದೆ ಮತ್ತು ನೈಜ ದ್ವಿಧ್ರುವಿ ಅವ್ಯವಸ್ಥೆ ಜೊತೆ ಗುರುತಿಸಿಕೊಂಡಿರುವ ಉನ್ಮಾದದ ಪ್ರಸಂಗಗಳ ಬದಲಾಗಿ ಸುಖದ ಭ್ರಮೆ ಮಾತ್ರ ಕಾಣುವುದಕ್ಕೆ ಸಾಧ್ಯ. ಇದು ಏಡ್ಸ್‌ನ ಕೊನೆಯ ಹಂತಕ್ಕೆ ಹೊರತಾಗಿದ್ದರೂ, ಆಗಿಂದಾಗ್ಗೆ ಕಾಣಿಸಿಕೊಳ್ಳುತ್ತಿರಬಹುದು. ಬಹು-ಔಷಧೀಯ ಉಪಚಾರ ಬಂದಾಗಿನಿಂದ ಈ ರೋಗದ ಚಿಹ್ನೆಗಳು ಕಾಣ ಸಿಗುವುದು ಈಗ ಬಹಳ ವಿರಳ.

ಗಡ್ಡೆಗಳು ಮತ್ತು ತೀವ್ರತೆಗಳು
HIV ಸೋಂಕಿತ ರೋಗಿಗಳು ಹಲವು ಬಗೆಯ ಕ್ಯಾನ್ಸರ್‌ಗಳ ಪ್ರಮಾಣವನ್ನು ಮೂಲಭೂತವಾಗಿ ಹೆಚ್ಚಿಸಿದ್ದಾರೆ. ಇದು ಪ್ರಾಥಮಿಕವಾಗಿ ಗ್ರಂಥಿ ಜನಕ DNA ವೈರಸ್, ಪ್ರಮುಖವಾಗಿ ಇಪ್‌ಸ್ಟೈನ್-ಬಾರ್ ವೈರಸ್ (EBV), ಕಾಪೊಸಿಯ ಸಾರ್ಕೋಮಾ-ಹರ್ಪಿಸ್ ವೈರಸ್‌ನೊಂದಿಗೆ ಗುರುತಿಸಿಕೊಂಡಿರುವುದರಿಂದ (KSHV) (ಹ್ಯೂಮನ್ ಹರ್ಪಿಸ್‌ವೈರಸ್-8[HHV-8] ಎಂದೂ ಕರೆಯಲಾಗುತ್ತದೆ), ಮತ್ತು ಮಾನವ ಪ್ಯಾಪಿಲೋಮಾವೈರಸ್‌ (HPV)ಗಳು ಏಡ್ಸ್ ವೈರಸ್ ಜೊತೆ ಸೇರಿಕೊಳ್ಳುವುದರಿಂದ ಕ್ಯಾನ್ಸರ್ ಉಂಟಾಗುತ್ತದೆ.[೨೭][೨೮]

ಕಾಪೊಸಿಯ ಸಾರ್ಕೋಮಾ (KS),HIV- ಸೋಂಕಿತ ರೋಗಿಗಳಲ್ಲಿ ಕಾಣಬಹುದಾದ ಅತ್ಯಂತ ಸಾಮಾನ್ಯ ಗಡ್ಡೆ. 1981ರಲ್ಲಿ ಯುವ ಸಲಿಂಗಕಾಮಿಗಳಲ್ಲಿ ಈ ಗಡ್ಡೆ ಕಾಣಿಸಿಕೊಂಡಾಗ AIDS ಸಾಂಕ್ರಾಮಿಕ ರೋಗವಾಗಿ ಪರಿವರ್ತನೆಗೊಳ್ಳುವ ಸೂಚನೆಗಳು ದೊರೆತವು. ಕಾಪೊಸಿಯ ಸಾರ್ಕೋಮಾ-ಹರ್ಪಿಸ್ ವೈರಸ್ ಜೊತೆ ಗುರುತಿಸಿಕೊಂಡಿರುವ (KSHV) ಎಂದು ಕರೆಯಲ್ಪಡುವ ಗಮಾಹರ್ಪಿಸ್‌ ವೈರಸ್ ಈ ಕ್ಯಾನ್ಸರ್ ಗಡ್ಡೆಗೆ ಕಾರಣವಾಗಿದ್ದು ಗಂಟುಗಳ ಚರ್ಮದಲ್ಲಿ ತುಸು ನೇರಳೆ ಬಣ್ಣದಲ್ಲಿ ಆಗಾಗ ಕಾಣಿಸಿಕೊಳ್ಳುತ್ತದೆ, ಅಲ್ಲದೆ ಇವು ಕ್ರಮೇಣವಾಗಿ ದೇಹದ ಇತರ ಭಾಗಗಳಿಗೆ ಪ್ರಮುಖವಾಗಿ ಬಾಯಿ, ಜೀರ್ಣಾಂಗ ವ್ಯೂಹ, ಮತ್ತು ಶ್ವಾಸಕೋಶಗಳಿಗೂ ಹರಡುತ್ತದೆ. HIV-ಸೋಂಕಿತ ರೋಗಿಗಳಲ್ಲಿ ಉನ್ನತ-ದರ್ಜೆಯ B ಜೀವಕೋಶ ಲಿಂಫೋಮಾಗಳಾದ ಬರ್ಕಿಟ್ಸ್ ಲಿಂಫೋಮಾ, ಬರ್ಕಿಟ್ಸ್-ತೆರನಾದ ಲಿಂಫೋಮಾ, ಡಿಫ್ಯೂಸ್ ಲಾರ್ಜ್ B-ಶೆಲ್ ಲಿಂಫೋಮಾ (DLBCL), ಮತ್ತು ಪ್ರೈಮರಿ ಸೆಂಟ್ರಲ್ ನರ್ವ್ಸ್ ಸಿಸ್ಟಂ ಲಿಂಫೋಮಾಗಳು ಆಗಿಂದಾಗ್ಗೆ ಕಾಣಿಸಿಕೊಳ್ಳುತ್ತವೆ. ಈ ನಿರ್ದಿಷ್ಟ ಕ್ಯಾನ್ಸರ್‌ಗಳು ಮಸುಕಾದ ಭವಿಷ್ಯದ ಕುರಿತು ಆಗಿಂದಾಗ್ಗೆ ಮುನ್ಸೂಚನೆ ನೀಡುತ್ತವೆ. ಈ ಪೈಕಿ ಹೆಚ್ಚಿನ ಲಿಂಫೋಮಾಗಳಿಗೆ ಇಪ್‌ಸ್ಟೈನ್-ಬಾರ್ ವೈರಸ್ (EBV) ಅಥವಾ KSHV ಕಾರಣವಾಗಿದೆ. HIV-ಸೋಂಕಿತ ರೋಗಿಗಳಲ್ಲಿ, ಜೀರ್ಣಾಂಗ ವ್ಯೂಹದಂತಹ ವಿಶೇಷ ಸಂಧಿಸ್ಥಾನಗಳಲ್ಲಿ ಲಿಂಫೋಮಾ ಆಗಿಂದಾಗ್ಗೆ ಕಾಣಿಸಿಕೊಳ್ಳುತ್ತದೆ. [೨೯]HIV-ಸೋಂಕಿತ ರೋಗಿಗಳಲ್ಲಿ ಇದು ಕಾಣಿಸಿಕೊಂಡಾಗ, KS ಮತ್ತು ಉತ್ಸಾಹಿ B ಜೀವಕೋಶ ಲಿಂಫೋಮಾಗಳು ಆತನಿಗೆ AIDS ಇರುವುದನ್ನು ದೃಢಪಡಿಸುತ್ತವೆ.

HIV-ಸೋಂಕಿತ ಮಹಿಳೆಯು ತೀವ್ರ ಸ್ವರೂಪದ ಗರ್ಭಕಂಠದ ಕ್ಯಾನ್ಸರ್‌‌‌ನಿಂದ ನರಳುತ್ತಿದ್ದಲ್ಲಿ ಆಕೆ AIDSನ-ಆರಂಭಿಕ ಹಂತದಲ್ಲಿದ್ದಾಳೆ ಎಂದರ್ಥ. ಇದಕ್ಕೆ ಹ್ಯೂಮನ್ ಪ್ಯಾಪಿಲೋಮಾ ವೈರಸ್ (HPV) ಕಾರಣ.[೩೦]

ಮೇಲಿನ ಪಟ್ಟಿಯಲ್ಲಿರುವ AIDSಗೆ ಕಾರಣವಾಗುವ ಗಡ್ಡೆಗಳಲ್ಲದೆ, HIV-ಸೋಂಕಿತ ರೋಗಿಗಳಿಗೆ ಇತರ ಕೆಲವು ನಿರ್ದಿಷ್ಟ ಗಡ್ಡೆಗಳು ಸಹ ಅಪಾಯಕಾರಿಯಾಗಬಲ್ಲವು; ಅವುಗಳೆಂದರೆ ಹಾಡ್‌ಗ್ಕಿನ್ಸ್‌ ಡಿಸೀಸ್, ಗುದ ಮತ್ತು ಗುದನಾಳದ ಕಾರ್ಸಿನೋಮಗಳು, ಹೆಪಟೊಸೆಲ್ಯುಲರ್ ಕಾರ್ಸಿನೋಮಗಳು, ತಲೆ ಮತ್ತು ಕೊರಳಿನ ಕ್ಯಾನ್ಸರ್‌ಗಳು, ಮತ್ತು ಶ್ವಾಸಕೋಶದ ಕ್ಯಾನ್ಸರ್‌.

ಈ ಪೈಕಿ ಕೆಲವು ಅಂದರೆ ಹಾಡ್‌ಗ್ಕಿನ್ಸ್‌ ಡಿಸೀಸ್(EBV), ಗುದ/ಗುದನಾಳದ ಕ್ಯಾನ್ಸರ್‌ಗಳು(HPV), ತಲೆ ಮತ್ತು ಕೊರಳಿನ ಕ್ಯಾನ್ಸರ್‌‌ಗಳು(HPV), ಮತ್ತು ಹೆಪಟೊಸೆಲ್ಯುಲರ್ ಕಾರ್ಸಿನೋಮಗಳು(ಹೆಪಟೈಟಿಸ್ B ಅಥವಾ C)ವೈರಸ್‌ಗಳಿಂದಾಗಿ ಬರುತ್ತವೆ. ಕ್ಯಾನ್ಸರ್ ಜನಕಗಳು(ಶ್ವಾಸಕೋಶದ ಕ್ಯಾನ್ಸರ್‌ಗೆ ಧೂಮಪಾನ) ಅಥವಾ ದೇಹದ ನಿರೋಧಕ ವ್ಯವಸ್ಥೆಗಳಲ್ಲಿ ಲೋಪದೋಷಗಳನ್ನಿಟ್ಟುಕೊಂಡು ಸೂಕ್ತ ಚಿಕಿತ್ಸೆ ಪಡೆಯದೆ ಹಲವು ವರ್ಷಗಳ ಕಾಲ ಬಾಳುವುದು ವೈರಸ್‌ಗಳ ಪ್ರವೇಶಕ್ಕೆ ಎಡೆಮಾಡಿಕೊಡಬಹುದು. ಆಸಕ್ತಿಯ ವಿಷಯವೇನೆಂದರೆ, HIV-ಸೋಂಕಿತ ರೋಗಿಗಳಲ್ಲಿ ಸಾಮಾನ್ಯ ಕ್ಯಾನ್ಸರ್‌ಗಳಾದ ಸ್ತನದ ಕ್ಯಾನ್ಸರ್ ಅಥವಾ ದೊಡ್ಡ ಕರುಳಿನ ಕ್ಯಾನ್ಸರ್‌ ಪ್ರಮಾಣ ಹೆಚ್ಚಿದ ಉದಾಹರಣೆಗಳಿಲ್ಲ. AIDS ಚಿಕಿತ್ಸೆಗಾಗಿ HAART ಬೃಹತ್ ಪ್ರಮಾಣದಲ್ಲಿ ಬಳಕೆಯಾದ ಪ್ರದೇಶಗಳಲ್ಲಿ, AIDS-ಸಂಬಂಧಿತ ತೀವ್ರತೆಗಳು ಗಮನಾರ್ಹವಾಗಿ ಇಳಿದಿವೆ, ಆದರೆ HIV-ಸೋಂಕಿತ ರೋಗಿಗಳ ಮರಣಕ್ಕೆ ತೀವ್ರ ಸ್ವರೂಪದ ಕ್ಯಾನ್ಸರ್ ಅತ್ಯಂತ ಪ್ರಮುಖ ಕಾರಣವೆಂಬುದನ್ನು ಅಲ್ಲಗಳೆಯಲಾಗದು. [೩೧] ಇತ್ತೀಚಿನ ವರ್ಷಗಳಲ್ಲಿ, AIDS ನಿರ್ಧಾರಕ ಕ್ಯಾನ್ಸರ್‌ಗಳ ಹೊರತಾದ ಕಾರಣಗಳಿಗೆ ಸಾವನ್ನಪ್ಪುತ್ತಿರುವವರ ಪ್ರಮಾಣವೂ ಹೆಚ್ಚಿದೆ.

ಇತರ ಸೋಂಕುಗಳು
AIDS ರೋಗಿಗಳು ಆಗಿಂದಾಗ್ಗೆ ಅವಕಾಶವಾದಿ ಸೋಂಕುಗಳಿಗೆ ತುತ್ತಾಗುವುದರಿಂದ, ಅವರಲ್ಲಿ ಕಡಿಮೆ-ಪ್ರಮಾಣದ ಜ್ವರ ಮತ್ತು ತೂಕ ನಷ್ಟದಂತಹ ನಿರ್ದಿಷ್ಟವಲ್ಲದ ರೋಗ-ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಇವು ಮೈಕೋಬ್ಯಾಕ್ಟೀರಿಯಂ ಏವಿಯಂ-ಅಂತರ ಜೀವಕೋಶಗಳು ಮತ್ತು ಸೈಟೊಮೆಗಾಲೊವೈರಸ್(CMV) ಜೊತೆ ಸೇರಿಕೊಂಡು ಅವಕಾಶವಾದಿ ಸೋಂಕುಗಳನ್ನು ಉಂಟು ಮಾಡುತ್ತವೆ. ಮೇಲೆ ವಿವರಿಸಿದಂತೆ ಕಲೈಟಿಸ್‌ಗೆ(ದೊಡ್ಡ ಕರುಳಿನ ಉರಿಯೂತ)CMV ಕಾರಣವಾಗಬಹುದು, ಮತ್ತು CMV ರೆಟಿನೈಟಿಸ್‌‌(ಅಕ್ಷಿಪಟದ ಉರಿಯೂತ)ನಿಂದಾಗಿ ಕಣ್ಣು ಕುರುಡಾಗಬಹುದು.

ಮೂರನೇ ಅತ್ಯಂತ ಅವಕಾಶವಾದಿ ಸೋಂಕಾದ ಪೆನಿಸಿಲಿಯಂ ಮಾರ್ನ್‌ಫೆ ಯಿಂದ ಬರುವ ಪೆನಿಸಿಲಿಯೋಸಿಸ್‌(ಇಡೀ ಶ್ವಾಸಕೋಶವನ್ನು ಆವರಿಸಿಕೊಳ್ಳುವ ಕ್ಷಯ ಮತ್ತು ಕ್ರಿಪ್ಟೋಕಾಕಸಿಸ್‌ನ ನಂತರ), ಆಗ್ನೇಯ ಏಷ್ಯಾದ ಸ್ಥಳೀಯ ಪ್ರದೇಶದೊಳಗಿರುವ HIV-ಪಾಸಿಟಿವ್ ವ್ಯಕ್ತಿಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. AIDS ರೋಗಿಗಳಲ್ಲಿರುವ ಪಾರ್ವೋ ವೈರಸ್ B19 ಸೋಂಕು ಆಗಿಂದಾಗ್ಗೆ ಪರೀಕ್ಷೆ ವೇಳೆ ಸಿಗದೆ ತಪ್ಪಿಸಿಕೊಳ್ಳುತ್ತದೆ. ಇದರಿಂದಾಗಿ ಅನಿಮಿಯಾ ಬರುತ್ತದೆ, AIDS ಚಿಕಿತ್ಸೆಗೆ ಬಳಸುವ ಆಂಟಿರೆಟ್ರೋವೈರಲ್ ಔಷಧಗಳ ಪರಿಣಾಮಗಳ ಮಧ್ಯೆ ಅನಿಮಿಯಾವನ್ನು ಪ್ರತ್ಯೇಕಿಸುವುದು ಕಷ್ಟಸಾಧ್ಯವಾಗಬಹುದು

ಕಾರಣ
HIV ಸೋಂಕು ತೀವ್ರ ಸ್ವರೂಪಕ್ಕೆ ತಲುಪುವ ಹಂತವನ್ನು AIDS ಎನ್ನುತ್ತಾರೆ. HIVಯು ರೆಟ್ರೊವೈರಸ್ ಆಗಿದ್ದು, ಅದು ಆರಂಭದಲ್ಲಿ ಮಾನವನ ರೋಗ ನಿರೋಧಕ ವ್ಯವಸ್ಥೆಯ ಪ್ರಮುಖ ಅಂಗಾಂಶಗಳಾದ CD4+ T ಜೀವಕೋಶಗಳು (T ಜೀವಕೋಶಗಳ ಉಪ-ವರ್ಗ), ಮ್ಯಾಕ್ರೋಫೇಜ್‌ಗಳು (ದೊಡ್ಡ ಗಾತ್ರದ ಬಿಳಿಯ ರಕ್ತಕಣ) ಮತ್ತು ವೃಕ್ಷೀಯ ಜೀವಕೋಶಗಳಿಗೆ ಸೋಂಕುಂಟು ಮಾಡುತ್ತದೆ. ಈ ಸೋಂಕು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ CD4+ T ಜೀವಕೋಶಗಳನ್ನು ನಾಶಪಡಿಸುತ್ತದೆ.[೩೩]

ರಕ್ತದ ಪ್ರತಿ ಮೈಕ್ರೋಲೀಟರ್ (µL)ನಲ್ಲಿ 200ಕ್ಕೂ ಕಡಿಮೆ ಸಂಖ್ಯೆಯಲ್ಲಿರುವ CD4+ T ಜೀವಕೋಶಗಳ ಪೈಕಿ ಹೆಚ್ಚಿನವುಗಳನ್ನು HIV ಸಾಯಿಸುವುದರಿಂದ ಜೀವಕೋಶಗಳು ನಿರೋಧಕ ಸಾಮಾರ್ಥ್ಯವನ್ನು ಕಳೆದುಕೊಳ್ಳುತ್ತವೆ. ತೀವ್ರ ಸ್ವರೂಪದ HIV ಸೋಂಕು ಕ್ರಮೇಣವಾಗಿ ಮುಂದುವರಿದು ವೈದ್ಯಕೀಯ ಪರೀಕ್ಷೆಗೆ ಸಿಗದಿರುವ ಸುಪ್ತ HIV ಸೋಂಕಾಗಿ ಬದಲಾಗುತ್ತದೆ, ನಂತರದ ಹಂತದಲ್ಲಿ HIV ಸೋಂಕಿನ ಆರಂಭಿಕ ರೋಗ-ಲಕ್ಷಣಗಳು ಗೋಚರಿಸಲಾರಂಭಿಸುತ್ತವೆ ಹಾಗೂ ಕೊನೆಗೆ AIDSಗೆ ಪರಿವರ್ತನೆಯಾಗುತ್ತದೆ. ರಕ್ತದಲ್ಲಿ ಉಳಿದಿರುವ CD4+ T ಜೀವಕೋಶಗಳು ಮತ್ತು/ಅಥವಾ ಮೇಲೆ ಹೇಳಿದ ಕೆಲವು ನಿರ್ದಿಷ್ಟ ಸೋಂಕುಗಳ ಆಧಾರದ ಮೇಲೆ ಏಡ್ಸ್ ಅನ್ನು ಗುರುತಿಸಬಹುದು.[೩೪]

ಆಂಟಿರೆಟ್ರೋವೈರಲ್ ತೆರಪಿಯ ಅನುಪಸ್ಥಿತಿಯಲ್ಲಿ, HIV ಸೋಂಕು ಮುಂದುವರಿದು AIDSಗೆ ಪರಿವರ್ತನೆಯಾಗುವ ನಡುವಣ ಅವಧಿ ಒಂಭತ್ತರಿಂದ ಹತ್ತು ವರ್ಷಗಳಿರುತ್ತದೆ, ಮತ್ತು AIDS ಬಂದ ನಂತರ ಸೋಂಕಿತ ವ್ಯಕ್ತಿ ಹೆಚ್ಚೆಂದರೆ 9.2 ತಿಂಗಳುಗಳ ಕಾಲ ಬದುಕಬಹುದು.[೩೫] ಆದಾಗ್ಯೂ, ರೋಗದ ಪ್ರಗತಿಯಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ ವ್ಯಾಪಕವಾದ ವ್ಯತ್ಯಾಸಗಳಾಗಬಹುದು, ಎರಡು ವಾರಗಳಿಂದ 20 ವರ್ಷಗಳು ತಗುಲಬಹುದು ಎಂಬುದು ವೈದ್ಯಕೀಯ ಪ್ರಮಾಣಿತ.

ಎಚ್ಐವಿ ಸೋಂಕಿನ ಪ್ರಗತಿಗೆ ಅನೇಕ ಅಂಶಗಳು ಕಾರಣವಾಗಿವೆ. ಸೋಂಕಿತ ವ್ಯಕ್ತಿಗಳಲ್ಲಿ ಕೂಡ ಸಾಮಾನ್ಯವಾಗಿರುವ ರೋಗ ನಿರೋಧಕ ಕ್ರಿಯೆಗೆ, HIVಗೆ ವಿರುದ್ಧವಾಗಿ ಕಾರ್ಯನಿರ್ವಹಿಸುವ ದೈಹಿಕ ಸಾಮಾರ್ಥ್ಯವಿದ್ದರೂ, ಅದರ ಮೇಲೆ ಈ ಅಂಶಗಳು ಪ್ರಭಾವ ಬೀರುತ್ತವೆ. [೩೬][೩೭]

ವಯಸ್ಸಾದವರಲ್ಲಿ ಬಲಹೀನ ನಿರೋಧಕ ವ್ಯವಸ್ಥೆಗಳಿರುತ್ತವೆ ಮತ್ತು ಇದರಿಂದಾಗಿ ಸೋಂಕು ಕ್ಷಿಪ್ರ ಗತಿಯಲ್ಲಿ ದೇಹವನ್ನು ಆವರಿಸಿಕೊಳ್ಳುವ ಅಪಾಯಗಳು ಹೆಚ್ಚು, ಆದರೆ ಯುವ ಜನರಲ್ಲಿ ಈ ಸಾಧ್ಯತೆಗಳು ಕಡಿಮೆ. ಆರೋಗ್ಯ ಪಾಲನೆಗೆ ಬೇಕಾದ ಸೌಲಭ್ಯಗಳ ಕೊರತೆ ಮತ್ತು ಕ್ಷಯದಂತಹ ಸೋಂಕುಗಳ ಸಹ-ಅಸ್ತಿತ್ವ ಇತ್ಯಾದಿ ಅಂಶಗಳು ರೋಗ ವರ್ಧನೆಗೆ ಕಾರಣವಾಗಬಹುದು. [೩೫][೩೮][೩೯]

ಸೋಂಕಿತ ವ್ಯಕ್ತಿಯ ಜೀನುಗಳ ಅನುವಂಶಿಕತೆ ಈ ನಿಟ್ಟಿನಲ್ಲಿ ಪ್ರಮುಖ ವಾತ್ರ ವಹಿಸುತ್ತದೆ ಮತ್ತು ಕೆಲವು ಮಂದಿ HIVಯ ನಿರ್ದಿಷ್ಟ ಎಳೆಗಳನ್ನು ವಿರೋಧಿಸುವ(ನಿರೋಧಕ) ಸಾಮಾರ್ಥ್ಯ ಹೊಂದಿರುತ್ತಾರೆ. ಇದಕ್ಕೆ ಒಂದು ಉದಾಹರಣೆಯೆಂದರೆ ಹೊಮೊಜೈಗಸ್ CCR5-Δ32 ಮಾರ್ಪಾಡುಗಳನ್ನು ಹೊಂದಿರುವ ಜನರು HIVಯ ನಿರ್ದಿಷ್ಟ ಎಳೆಗಳನ್ನು ಮೆಟ್ಟಿ ನಿಲ್ಲುವ ಸಾಮಾರ್ಥ್ಯ ಹೊಂದಿರುತ್ತಾರೆ. [೪೦]

HIVಯು ಜೀನುಗಳ ಆಧಾರದ ಮೇಲೆ ಮಾರ್ಪಾಡಾಗಬಹುದಾಗಿದ್ದು, ಮತ್ತು ವಿವಿಧ ಎಳೆಗಳಾಗಿ ಅದು ಅಸ್ತಿತ್ವದಲ್ಲಿರುತ್ತವೆ, ಇದರಿಂದಾಗಿ ರೋಗದ ಪ್ರಗತಿ ಕುರಿತ ವೈದ್ಯಕೀಯ ಪ್ರಮಾಣಗಳಲ್ಲಿ ವ್ಯತ್ಯಾಸಗಳಾಗಬಹುದು

ಲೈಂಗಿಕ ಹರಡುವಿಕೆ
ಒಬ್ಬ ವ್ಯಕ್ತಿಯು ಲೈಂಗಿಕವಾಗಿ ಇನ್ನೊರ್ವ ಸೋಂಕಿತ ವ್ಯಕ್ತಿಯ ಲೈಂಗಿಕ ಸ್ರಾವ ಅಂಗಗಳಾದ ಗುದನಾಳ, ಜನನಾಂಗ ಅಥವಾ ಮುಖದ ಲೋಳೆಯ ಪೊರೆಗಳ ಸಂಪರ್ಕಕ್ಕೆ ಬಂದಾಗ ಸೋಂಕು ಹರಡಬಹುದು. ಸುರಕ್ಷಿತವಲ್ಲದ ಕ್ಷಿಪ್ರಗ್ರಾಹಿ ಲೈಂಗಿಕ ಕ್ರಿಯೆಗಳು, ಸುರಕ್ಷಿತವಲ್ಲದ ಸಂಭೋಗ ಕ್ರಿಯೆಗಳಿಗಿಂತ ಅಪಾಯಕಾರಿ. ಯೋನಿ ಸಂಭೋಗ ಅಥವಾ ಮುಖ ಮೈಥುನಕ್ಕೆ ಹೋಲಿಸಿದಲ್ಲಿ ಗುದ ಸಂಭೋಗದಲ್ಲಿ HIV ಸೋಂಕು ಹರಡುವ ಅಪಾಯಗಳು ಹೆಚ್ಚು. ಆದಾಗ್ಯೂ, ಮುಖ ಮೈಥುನ ಸಂಪೂರ್ಣ ಸುರಕ್ಷಿತವಲ್ಲ, ಒಳಸೇರಿಸುವಿಕೆ ಮತ್ತು ಕ್ಷಿಪ್ರಗ್ರಾಹಿ ಮುಖ ಮೈಥುನದ ಮೂಲಕವೂ HIV ಹರಡಬಹುದು. [೪೪][೪೫] ಕಾಂಡೊಮ್‌ಗಳ ಬಳಕೆ ಅಪರೂಪವಾಗಿರುವುದರಿಂದ ಲೈಂಗಿಕ ಅತ್ಯಾಚಾರದ ವೇಳೆ HIV ಹರಡುವ ಅಪಾಯದ ಸಾಧ್ಯತೆಗಳು ಹೆಚ್ಚಿದೆ ಮತ್ತು ಯೋನಿಗೆ ಅಥವಾ ಗುದ ನಾಳಕ್ಕಾಗುವ ನಿರಂತರ ಹಾನಿ HIV ಹರಡುವಿಕೆಯನ್ನು ಸುಲಭ ಮಾಡುತ್ತದೆ. [೪೬]

ಇತರೆ ಲೈಂಗಿಕವಾಗಿ ಹರಡುವ ಸೋಂಕುಗಳು HIV ಹರಡುವಿಕೆ ಮತ್ತು ಸೋಂಕಿನ ಅಪಾಯವನ್ನು ಹೆಚ್ಚಿಸುತ್ತವೆ, ಏಕೆಂದರೆ ಇದರಿಂದ ಜನನಾಂಗದಲ್ಲಿ ಹುಣ್ಣಾಗಿ ಮತ್ತು/ಅಥವಾ ಸಣ್ಣ ಹುಣ್ಣಾಗಿ ಸಾಮಾನ್ಯ ಎಪಿತೀಲಿಯಲ್ ಕ್ರಿಯೆಗೆ ಅಡ್ಡಿಯಾಗುತ್ತದೆ; ಮತ್ತು ವೀರ್ಯ ಮತ್ತು ಯೋನಿ ಸ್ರಾವದಲ್ಲಿ HIV-ಗೆ ಎಡೆಮಾಡಿಕೊಡುವ ಅಥವಾ HIV-ಸೋಂಕಿತ ಜೀವಕೋಶಗಳು(ಲಿಂಫೋಸೈಟ್ಸ್ ಮತ್ತು ಮ್ಯಾಕ್ರೋಫೇಜಸ್)ಪ್ರವಾಹೋಪಾದಿಯಲ್ಲಿ ಶೇಖರಣೆಯಾಗುವುದರಿಂದ ಸೋಂಕಿನ ಅಪಾಯ ಹೆಚ್ಚುತ್ತದೆ.ಮೇಹರೋಗ ಮತ್ತು/ಅಥವಾಮೇಹವ್ರಣದಿಂದ ಉಂಟಾಗುವ ಜನನಾಂಗದ ಹುಣ್ಣುಗಳು HIV ಸೋಂಕಿಗೊಳಗಾಗುವ ಅಪಾಯವನ್ನು ನಾಲ್ಕುಪಟ್ಟಿನಷ್ಟು ಹೆಚ್ಚಿಸುತ್ತದೆ ಎಂದು ಆಫ್ರಿಕಾದ ಉಪ-ಸಹರಾ, ಯುರೋಪ್ ಮತ್ತು ಉತ್ತರ ಅಮೆರಿಕಾದಲ್ಲಿ ನಡೆಸಿದ ಸಾಂಕ್ರಾಮಿಕ ಶಾಸ್ತ್ರ ಅಧ್ಯಯನಗಳು ತಿಳಿಸಿವೆ. ಇದಲ್ಲದೆ ಮಹತ್ವದ್ದಾಗಿದ್ದರೂ, ಸ್ಥಳೀಯವಾಗಿ ಲಿಂಫೋಸೈಟ್ಸ್ ಮತ್ತು ಮ್ಯಾಕ್ರೋಫೇಜ್ ಶೇಖರಣೆಗೆ ಕಾರಣವಾಗುವ STI ಗಳಾದ ಗೊನೊರಿಯಾ(ಶುಕ್ಲಮೇಹ ರೋಗ), ಕ್ಲಾಮಿಡಿಯಾ ಮತ್ತು ಟ್ರೈಕೊಮೊನಿಯಾಸಿಸ್‌ಗಳಿಂದ ಹೆಚ್ಚಿನ ಅಪಾಯವಿಲ್ಲ.[೪೭]

ಮೂಲ ಪ್ರಕರಣದ ಸೋಂಕು ಹರಡುವ ಸ್ವಭಾವ ಮತ್ತು ಸೋಂಕಿತಗೊಳ್ಳದ ಜತೆಗಾರನ ಮನಸ್ಸನ್ನು HIV ಹರಡುವಿಕೆ ಅವಲಂಬಿಸಿದೆ. ಅನಾರೋಗ್ಯದ ಸಮಯದಲ್ಲಿ ರೋಗ ಹರಡುವ ಗುಣ ಸ್ವಭಾವದಲ್ಲಿ ವ್ಯತ್ಯಾಸಗಳಾಗಬಹುದು ಮತ್ತು ವ್ಯಕ್ತಿಗಳ ಮಧ್ಯೆ ಅದು ಸ್ಥಿರವಲ್ಲ. ವೈರಸ್‌ಗಳಿಂದ ಭರ್ತಿಯಾದ ಪ್ಲಾಸ್ಮಾ ವೈದ್ಯಕೀಯ ತಪಾಸಣೆ ವೇಳೆ ಪತ್ತೆಯಾಗದಿದ್ದಲ್ಲಿ, ಅದು ವೀರ್ಯದ ದ್ರವ ಅಥವಾ ಜನನಾಂಗದ ಸ್ರಾವದಲ್ಲಿ ಕಡಿಮೆ ವೈರಸ್‌ಗಳಿರುವ ಸೂಚನೆಯಾಗಲೇಬೇಕೆಂದೇನಿಲ್ಲ. ಆದಾಗ್ಯೂ, ರಕ್ತದಲ್ಲಿ HIV ಮಟ್ಟ ಪ್ರತಿ 10-ಪಟ್ಟು ಏರಿಕೆಗೂ, HIV ಹರಡುವಿಕೆ ಪ್ರಮಾಣದಲ್ಲಿ 81% ಹೆಚ್ಚಳವಾಗುವುದಕ್ಕೂ ಒಂದಕ್ಕೊಂದು ಸಂಬಂಧವಿದೆ.[೪೭][೪೮]

ಹಾರ್ಮೋನಿನಲ್ಲಾಗುವ ಬದಲಾವಣೆಗಳು, ಯೋನಿಯ ಸೂಕ್ಷಜೀವಾಣು ಪರಿಸರ ವಿಜ್ಞಾನ ಮತ್ತು ಶರೀರ ವಿಜ್ಞಾನದಿಂದಾಗಿ ಮಹಿಳೆಯರು ಹೆಚ್ಚಾಗಿ HIV-1 ಸೋಂಕಿಗೆ ಒಳಗಾಗುತ್ತಾರೆ, ಮತ್ತು ಲೈಂಗಿಕವಾಗಿ ಹರಡುವ ರೋಗಗಳ ಪ್ರಮಾಣ ಮಹಿಳೆಯರಲ್ಲಿ ಹೆಚ್ಚಿರುತ್ತದೆ.[೪೯][೫೦]

HIVಯ ಒಂದು ಎಳೆಯ ಸೋಂಕಿಗೆ ತುತ್ತಾದ ಮಂದಿ ಮುಂದೆಯೂ, ಹೆಚ್ಚು ತೀವ್ರವಾದ ಎಳೆಗಳನ್ನು ಹೊಂದಿರುವ ಜೀವಿಗಳ ಸಂಪರ್ಕಕ್ಕೆ ಬರುವುದರಿಂದ HIV ಸೋಂಕಿಗೆ ಒಳಗಾಗಬಹುದು. ಕೇವಲ ಒಂದೇ ಘಟನೆಯಿಂದ ಸೋಂಕು ತಗುಲುವ ಸಾಧ್ಯತೆಗಳು ತೀರಾ ವಿರಳ. ದೀರ್ಘ-ಕಾಲದಿಂದ ಅತಿಕ್ರಮ ಲೈಂಗಿಕ ಸಂಬಂಧಗಳನ್ನು ಹೊಂದಿರುವವರಲ್ಲೇ ಸೋಂಕಿನ ಪ್ರಮಾಣಗಳು ಹೆಚ್ಚು. ಈ ತೆರನಾದ ಸಂಬಂಧಗಳು ಕ್ಷಿಪ್ರ ಗತಿಯಲ್ಲಿ ಬಹುಮಂದಿಗೆ ವೈರಸ್ ಹರಡಲು ಅನುವು ಮಾಡಿಕೊಡುತ್ತವೆ, ಅಲ್ಲದೆ ಜತೆಗಾರರಿಗೂ ಸೋಂಕು ಹರಡುತ್ತದೆ. ನಿಯತ ಏಕಪತ್ನೀತ್ವ ಯಾ ಏಕಪತೀತ್ವದ ಮಾದರಿ ಅಥವಾ ಅಪರೂಪದ ಸಾಂದರ್ಭಿಕ ಭೇಟಿಗಳು ಸೋಂಕಿನ ಪ್ರಮಾಣವನ್ನು ಕಡಿಮೆಗೊಳಿಸುತ್ತವೆ.[೫೧]

ಆಫ್ರಿಕಾದಲ್ಲಿ HIV ಭಿನ್ನಲಿಂಗಕಾಮಿಗಳ ಸಂಭೋಗದ ಮೂಲಕ ಅನಾಯಾಸವಾಗಿ ಹರಡುತ್ತಿದೆ, ಆದರೆ ಇತರ ದೇಶಗಳಲ್ಲಿ ಇಲ್ಲ. ಸಂಶೋಧನೆಗಳಲ್ಲಿ ತಿಳಿದು ಬಂದ ಒಂದು ಸಾಧ್ಯತೆಯೆಂದರೆ, ಆಫ್ರಿಕಾದ ಕೆಲವು ಭಾಗಗಳ ಶೇಕಡ 50ರಷ್ಟು ಮಹಿಳೆಯರಿಗೆ ತಗುಲಿರುವ ಸಿಸ್ಟೊಸೋಮಿಯಾಸಿಸ್ ಸೋಂಕು ಯೋನಿಯ ಒಳಪದರಕ್ಕೆ ಹಾನಿ ಮಾಡಿದೆ

ರಕ್ತದ ಮೂಲಕ ಹರಡುವ ರೋಗಜನಕಗಳು
ಮಾದಕ ದ್ರವ್ಯಗಳ ಬಳಕೆ, ಹೆಮೊಫಿಲಿಯಾಕ್ಸ್‌, ರಕ್ತದಾನ ಮತ್ತು ಅದರ ಉತ್ಪನ್ನಗಳನ್ನು ಸ್ವೀಕರಿಸುವ ಮಂದಿಗೆ ಸೋಂಕು ಹರಡುವಿಕೆಯ ಈ ಮಾರ್ಗಗಳು ನಿರ್ದಿಷ್ಟವಾಗಿ ಪ್ರಸ್ತುತವಾಗಿರುತ್ತದೆ. HIV-ಸೋಂಕಿತ ರಕ್ತದ ಕಲೆಗಳನ್ನು ಹೊಂದಿರುವ ಪಿಚಕಾರಿ(ಸಿರಿಂಜ್)ಗಳ ಹಂಚಿಕೆ ಮತ್ತು ಪುನರ್ ಬಳಕೆಯಿಂದ HIV ಸೋಂಕು ಅಂಟಿಕೊಳ್ಳುವ ಅಪಾಯಗಳಿವೆ. ಉತ್ತರ ಅಮೆರಿಕಾ, ಚೀನಾ ಮತ್ತು ಪೂರ್ವ ಯುರೋಪ್‌ನಲ್ಲಿ ಹೊಸದಾಗಿ ಪತ್ತೆಯಾದ ಮೂರನೇ ಒಂದು ಭಾಗದಷ್ಟು HIV-ಸೋಂಕುಗಳಿಗೆ ಸೂಜಿ ಹಂಚಿಕೆಯೇ ಪ್ರಮುಖ ಕಾರಣವೆಂದು ತಿಳಿದು ಬಂದಿದೆ.

HIV-ಸೋಂಕಿತ ವ್ಯಕ್ತಿಗೆ ಬಳಸಿದ ಸೂಜಿಯನ್ನು ಇನ್ನೊರ್ವನಿಗೆ ಒಮ್ಮೆ ಚುಚ್ಚುವುದರಿಂದ HIV ಸೋಂಕು ತಗುಲುವ ಅಪಾಯ 150 ಜನರಲ್ಲಿ 1 ಇರಬಹುದು ಎಂದು ಅಂದಾಜಿಸಲಾಗಿದೆ (ಮೇಲಿನ ಟೇಬಲ್ ನೋಡಿ). ಸೋಂಕಿಗೊಳಗಾದ ನಂತರ ರೋಗ ನಿರೋಧಕ ಚಿಕಿತ್ಸೆಗಾಗಿ HIV-ನಿರೋಧಕ ಔಷಧಗಳನ್ನು ಸೇವಿಸುವುದರಿಂದ ಅಪಾಯದ ಸಾಧ್ಯತೆಗಳನ್ನು ಕಡಿಮೆಗೊಳಿಸಬಹುದು. [೫೪]

ಟಟೂಗಳು(ಹಚ್ಚೆ) ಮತ್ತು ಚುಚ್ಚುವಿಕೆಗಳನ್ನು ಕೊಡುವ ಮತ್ತು ಸ್ವೀಕರಿಸುವ ಜನರಲ್ಲೂ ಸೋಂಕು ಹರಡಲು ಮೇಲಿನ ಮಾರ್ಗಗಳು ಕಾರಣವಾಗಬಹುದು. ಸೋಂಕು ತಗುಲದಂತೆ ಮುನ್ನೆಚ್ಚರಿಕೆ ವಹಿಸಲು ಅವಶ್ಯವಾದ ವಸ್ತುಗಳ ಪೂರೈಕೆ ಮತ್ತು ಅಸಮರ್ಪಕ ತರಬೇತಿಯ ಕೊರತೆಯಿಂದಾಗಿ ಆಫ್ರಿಕಾದ ಉಪ-ಸಹರಾ ಮತ್ತು ಏಷ್ಯಾದ ಹೆಚ್ಚಿನೆಡೆಗಳಲ್ಲಿ ಸಾರ್ವತ್ರಿಕ ಮುನ್ನೆಚ್ಚರಿಕೆ ಕ್ರಮಗಳನ್ನು ಸಾಧಾರಣವಾಗಿ ಯಾರೂ ಅನುಸರಿಸುತ್ತಿಲ್ಲ.

ಆಫ್ರಿಕಾದ ಉಪ-ಸಹರಾದಲ್ಲಿ ಸುಮಾರು 2.5%ರಷ್ಟು HIV ಸೋಂಕು ಹರಡುವಿಕೆಗೆ ಸುರಕ್ಷಿತವಲ್ಲದ ಇಂಜೆಕ್ಷನ್‌(ಚುಚ್ಚುಮದ್ದು)ಗಳು ಕಾರಣವೆಂದು WHO ಅಂದಾಜಿಸಲಾಗಿದೆ.[೫೫]

ಇದೇ ಕಾರಣಕ್ಕಾಗಿ, ಆರೋಗ್ಯ ಕಾರ್ಯಕರ್ತರಿಂದ HIV ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಷ್ಠಾನಕ್ಕೆ ತರಲು ಜಗತ್ತಿನ ಎಲ್ಲ ದೇಶಗಳಲ್ಲಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು ಕೋರಿದೆ.[೫೬] ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ರಕ್ತದಾನ ಸ್ವೀಕರಿಸುವವರಿಗೆ HIV ಹರಡುವ ಅಪಾಯಗಳು ತೀರಾ ಕಡಿಮೆ, ಏಕೆಂದರೆ ಅಲ್ಲಿ ರಕ್ತದಾನಿಗಳ ಆಯ್ಕೆಯಲ್ಲಿ ಸುಧಾರಣೆಯಾಗಿದೆ ಮತ್ತು HIV ಪರೀಕ್ಷೆಯನ್ನೂ ನಡೆಸಲಾಗುತ್ತಿದೆ. ಆದಾಗ್ಯೂ, WHO ಪ್ರಕಾರ, ಜಗತ್ತಿನ ಅತಿ ಹೆಚ್ಚು ಜನರಿಗೆ ಸುರಕ್ಷಿತ ರಕ್ತ ದೊರಕುತ್ತಿಲ್ಲ, ಅಲ್ಲದೆ ಜಗತ್ತಿನ 5% ರಿಂದ 10% ನಡುವಣ HIV ಸೋಂಕುಗಳಿಗೆ ಸೋಂಕಿತ ರಕ್ತ ಮತ್ತು ಅದರ ಉತ್ಪನ್ನಗಳ ವರ್ಗಾವಣೆಯೇ ಕಾರಣ

ಪ್ರಸವೋತ್ತರ ಕಾಲದ ಹರಡುವಿಕೆ
ಗರ್ಭಾವಸ್ಥೆಯ ಕೊನೆಯ ವಾರಗಳು ಮತ್ತು ಶಿಶು ಜನನದ ವೇಳೆ ಗರ್ಭಕೋಶ ದಲ್ಲಿ ತಾಯಿಯಿಂದ ಮಗುವಿಗೆ ವೈರಸ್ ಹರಡಬಹುದು. ಕೂಡಲೇ ಸರಿಯೂದ ಚಿಕಿತ್ಸೆ ಲಭ್ಯವಾಗದೇ ಹೋದಲ್ಲಿ, ತಾಯಿ ಮತ್ತು ಆಕೆಯ ಮಗುವಿನ ನಡುವೆ ಗರ್ಭಾವಸ್ಥೆ, ಜನ್ಮಸ್ಥಾನ ಮತ್ತು ಹೆರಿಗೆಯ ವೇಳೆ ಹರಡುವಿಕೆ ಪ್ರಮಾಣ 25% ಇರುತ್ತದೆ. ಆದಾಗ್ಯೂ, ತಾಯಿ ಆಂಟಿರೆಟ್ರೋವೈರಲ್ ತೆರಪಿ ಚಿಕಿತ್ಸೆ ಪಡೆಯುತ್ತಿದ್ದಲ್ಲಿ ಮತ್ತು ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆಯಾದಲ್ಲಿ ವೈರಸ್ ಹರಡುವಿಕೆ ಪ್ರಮಾಣ ಕೇವಲ 1%.[೫೮] ಮಗು ಜನನದ ವೇಳೆ ತಾಯಿಯಲ್ಲಿ ವೈರಸ್‌ಗಳು ತುಂಬಿದ್ದರೆ, ಅವು ಮಗುವಿನ ಮೇಲೂ ಪ್ರಭಾವ ಬೀರುತ್ತವೆ, ತಾಯಿಯಲ್ಲಿ ಹೆಚ್ಚು ವೈರಸ್‌ಗಳಿದ್ದಲ್ಲಿ ಮಗುವಿಗೆ ಸೋಂಕು ತಗುಲುವ ಅಪಾಯಗಳೂ ಹೆಚ್ಚು. ಸ್ತನ್ಯಪಾನ ಕೂಡ ಸೋಂಕು ಹರಡುವಿಕೆಯ ಅಪಾಯಗಳನ್ನು 4%ರಷ್ಟು ಹೆಚ್ಚಿಸುತ್ತದೆ

ತಪ್ಪು ತಿಳಿವಳಿಕೆಗಳು
HIV/AIDS ಸುತ್ತ ಅನೇಕ ತಪ್ಪು ತಿಳಿವಳಿಕೆಗಳು ಹುಟ್ಟಿಕೊಂಡಿವೆ. AIDS ರೋಗಿಯ ಭೇಟಿ ಮಾತ್ರಕ್ಕೇ AIDS ಸೋಂಕು, ಕನ್ಯೆಯ ಸಂಭೋಗದಿಂದ ಏಡ್ಸ್‌ನಿಂದ ಮುಕ್ತ ಮತ್ತು ಸಲಿಂಗಕಾಮಿ ಪುರುಷರು ಹಾಗೂ ಮಾದಕ ವ್ಯಸನಿಗಳಿಗೆ ಮಾತ್ರ HIV ಅಂಟಿಕೊಳ್ಳುತ್ತದೆ ಎಂಬ ನಂಬಿಕೆಗಳು ಈ ಪೈಕಿ ಮೂರು ಸಾಮಾನ್ಯ ತಪ್ಪು ತಿಳಿವಳಿಕೆಗಳಾಗಿವೆ. ಸಲಿಂಗಕಾಮಿಯೊಂದಿಗೆ ಗುದ ಸಂಭೋಗದಿಂದ AIDS ಸೋಂಕು ಮತ್ತು ಶಾಲೆಗಳಲ್ಲಿ ಸಲಿಂಗಕಾಮ ಮತ್ತು HIV ಬಗ್ಗೆ ಮುಕ್ತ ಚರ್ಚೆ ನಡೆಸಿದರೆ ಸಲಿಂಗಕಾಮ ಮತ್ತು AIDS ಪ್ರಮಾಣ ಹೆಚ್ಚಬಹುದು ಎಂಬ ಭಾವನೆಗಳು ಇನ್ನಿತರ ತಪ್ಪು ತಿಳಿವಳಿಕೆಗಳಾಗಿವೆ

ರೋಗ-ಶರೀರ ವಿಜ್ಞಾನ
ಅಂತಿಮವಾಗಿ, HIVಯು CD4+ T ಸಹಾಯಕ ಲಿಂಫೋಸೈಟ್ಸ್‌ಗಳನ್ನು ಹೊರದೂಡಿ AIDSಗೆ ಕಾರಣವಾಗುತ್ತದೆ. ಇದು ನಿರೋಧಕ ವ್ಯವಸ್ಥೆಯನ್ನು ಬಲಹೀನಗೊಳಿಸಿ, ಅವಕಾಶವಾದಿ ಸೋಂಕುಗಳು ಅಂಟಿಕೊಳ್ಳಲು ಅನುವು ಮಾಡಿಕೊಡುತ್ತದೆ. ನಿರೋಧಕ ವ್ಯವಸ್ಥೆಯ ಕಾರ್ಯನಿರ್ವಹಣೆಗೆ T ಲಿಂಫೋಸೈಟ್ಸ್ ಅವಶ್ಯ ಮತ್ತು ಅವುಗಳಿಲ್ಲದೆ ದೇಹಕ್ಕೆ ಸೋಂಕುಗಳೊಂದಿಗೆ ಹೋರಾಡಲು ಸಾಧ್ಯವಿಲ್ಲ ಅಥವಾ ಕ್ಯಾನ್ಸರ್‌ ಜನಕ ಜೀವಕೋಶಗಳನ್ನು ಕೊಲ್ಲಲೂ ಸಾಧ್ಯವಾಗದು. ರೋಗದ ತೀವ್ರತೆ ಮತ್ತು ದೀರ್ಘಕಾಲದಲ್ಲಿ ಮರುಕಳಿಕೆ ಈ ಎರಡು ಹಂತಗಳಲ್ಲೂ CD4+ T ಜೀವಕೋಶಗಳನ್ನು ಹೊರದೂಡುವ ಪ್ರಕ್ರಿಯೆಯಲ್ಲಿ ವ್ಯತ್ಯಾಸಗಳಾಗುತ್ತವೆ. [೬೨]

ತೀವ್ರ ಹಂತಕ್ಕೆ ತಲುಪಿದ ಸಂದರ್ಭದಲ್ಲಿ, HIV-ಪ್ರೇರಿತ ಜೀವಕೋಶ ವಿಭಜನೆಯಾಗುತ್ತದೆ(ಲೈಸಿಸ್) ಮತ್ತು CD4+ T ಜೀವಕೋಶಗಳ ನಿರ್ನಾಮಕ್ಕೆ ಕಾರಣವಾದ ಸೈಟೊಟಾಕ್ಸಿಕ್ T ಜೀವಕೋಶಗಳು ಸೋಂಕಿತ ಜೀವಕೋಶಗಳನ್ನು ಸಾಯಿಸುತ್ತವೆ. ಈ ಪ್ರಕ್ರಿಯೆಯಲ್ಲಿ ಅಪೊಪ್ಟೋಸಿಸ್ ಕೂಡ ಒಂದು ಅಂಶವಾಗಿರುವ ಸಾಧ್ಯತೆಗಳಿವೆ. ರೋಗ ಮರುಕಳಿಸುವ ಹಂತದಲ್ಲಿ, ನಿರೋಧಕ ವ್ಯವಸ್ಥೆಯ ವ್ಯಾಪ್ತಿ ಹೆಚ್ಚುವುದರಿಂದ ಸಕ್ರಿಯತೆ ಕಡಿಮೆಯಾಗಿ ಒಟ್ಟು ನಿರೋಧಕ ವ್ಯವಸ್ಥೆಯು ಕ್ರಮೇಣವಾಗಿ ಸಾಮಾರ್ಥ್ಯ ಕಳೆದುಕೊಳ್ಳುವುದು, ಅಲ್ಲದೆ ಹೊಸ T ಜೀವಕೋಶಗಳನ್ನು ಸೃಷ್ಟಿಸಲು ಅದು ಅಶಕ್ತವಾಗುವುದು. ಇದರಿಂದಾಗಿ CD4+ T ಜೀವಕೋಶಗಳ ಸಂಖ್ಯೆಯೂ ನಿಧಾನವಾಗಿ ಇಳಿಮುಖಗೊಳ್ಳುತ್ತದೆ. AIDSನ ಪ್ರಮುಖ ಲಕ್ಷಣವಾದ ರೋಗ ನಿರೋಧಕ ಶಕ್ತಿ ಹೀನತೆಯ ಲಕ್ಷಣಗಳು ಹಲವು ವರ್ಷಗಳ ಕಾಲ ಗೋಚರಿಸದೇ ಇದ್ದರೂ, ವ್ಯಕ್ತಿ ಸೋಂಕಿಗೆ ಒಳಗಾದ ನಂತರದ ಒಂದೇ ವಾರದಲ್ಲಿ ಬೃಹತ್ ಪ್ರಮಾಣದಲ್ಲಿ CD4+ T ಜೀವಕೋಶಗಳ ನಷ್ಟವಾಗುತ್ತದೆ. ಇದು ಪ್ರಮುಖವಾಗಿ ದೇಹದಲ್ಲಿನ ಹೆಚ್ಚಿನ ಲಿಂಫೋಸೈಟ್ಸ್‌ಗಳಿಗೆ ಆಶ್ರಯ ನೀಡಿರುವ ಕರುಳಿನ ಲೋಳೆ ಪೊರೆಯಲ್ಲಿ ಸಂಭವಿಸುತ್ತದೆ.[೬೩]

ಲೋಳೆ ಪೊರೆಯ CD4+ T ಜೀವಕೋಶಗಳ ಆದ್ಯತಾ ನಷ್ಟಕ್ಕೆ ಕಾರಣವೆನೇಂದರೆ ಹೆಚ್ಚಿನ ಲೋಳೆ ಪೊರೆಯ CD4+ T ಜೀವಕೋಶಗಳು CCR5 ಸಹಗ್ರಾಹಿಯನ್ನು ಸ್ರವಿಸುವುದು, ಇದಕ್ಕೆ ವಿರುದ್ಧವಾಗಿ ರಕ್ತಪ್ರವಾಹದಲ್ಲಿರುವ CD4+ T ಜೀವಕೋಶಗಳ ಒಂದು ಭಾಗ ಕೂಡ ಇದೇ ಕೆಲಸ ಮಾಡುತ್ತದೆ.[೬೪]

ರೋಗ ತೀವ್ರಗೊಂಡ ಸಂದರ್ಭದಲ್ಲಿ HIVಯು ಮುಂದೆ ಸಾಗಿ CD4+ ಜೀವಕೋಶಗಳನ್ನು ಸ್ರವಿಸಿ CCR5 ಅನ್ನು ನಾಶಪಡಿಸುತ್ತದೆ. ಕ್ರಮೇಣವಾಗಿ ನಿರೋಧಕ ವ್ಯವಸ್ಥೆಯ ಕ್ರಿಯಾಶೀಲ ಪ್ರತಿಕ್ರಿಯೆಯು ಸೋಂಕಿನ ಮೇಲೆ ಹಿಡಿತ ಸಾಧಿಸಿ, ಸೋಂಕನ್ನು ಸುಪ್ತ ಸ್ಥಿತಿಯತ್ತ ಒಯ್ಯುವುದು, ಈ ಸ್ಥಿತಿಯಲ್ಲಿ ಸೋಂಕು ಗಂಭೀರ ರೂಪದಲ್ಲಿ ಪ್ರಕಟಗೊಳ್ಳುವುದಿಲ್ಲ. ಆದಾಗ್ಯೂ, ಲೋಳೆ ಪೊರೆಯ ಅಂಗಾಶಗಳಲ್ಲಿರುವ CD4+ T ಜೀವಕೋಶಗಳು ಸೋಂಕಿನುದ್ದಕ್ಕೂ ಖಾಲಿಯಾಗುತ್ತಾ ಹೋಗುತ್ತವೆ, ಹೀಗಿದ್ದೂ ಮಾರಣಾಂತಿಕ ಸೋಂಕುಗಳೊಂದಿಗೆ ಹೋರಾಡುವುದಕ್ಕಾಗಿ ಸಾಕಷ್ಟು ಜೀವಕೋಶಗಳು ಅಲ್ಲೇ ಉಳಿದುಕೊಳ್ಳುತ್ತವೆ. ರೋಗದ ದೀರ್ಘಾವಧಿಯಲ್ಲಿ ನಿರೋಧಕ ವ್ಯವಸ್ಥೆಯು ಕ್ರಿಯಾಶೀಲವಾಗಿರದೆ ಸಾಮಾನ್ಯ ಸ್ಥಿತಿಯಲ್ಲಿದ್ದರೆ HIV ಸೋಂಕಿನ ನಕಲುಗಳು ನಿರಂತರವಾಗಿ ಹುಟ್ಟಿಕೊಳ್ಳುತ್ತಿರುತ್ತವೆ.[೬೫] ನಿರೋಧಕ ಜೀವಕೋಶಗಳು ಹೆಚ್ಚು ಸಕ್ರಿಯಗೊಂಡು, ಹಲವು HIV ಜೀನು ಉತ್ಪನ್ನಗಳ ಚಟುವಟಿಕೆ ಮತ್ತು ಪ್ರಗತಿಯಲ್ಲಿರುವ HIV ನಕಲುಗಳಿಗೆ ನಿರೋಧಕ ವ್ಯವಸ್ಥೆಯ ಪ್ರತಿಕ್ರಿಯೆಯಿಂದಾಗಿ ಪ್ರಚೋದಕ ಸೈಟೋಕಿನ್ಸ್‌‌ಗಳು ಬಿಡುಗಡೆಯಾಗುವುದರಿಂದ ಒಟ್ಟು ನಿರೋಧಕ ವ್ಯವಸ್ಥೆ ಚುರುಕಾಗುತ್ತದೆ.

ರೋಗ ತೀವ್ರ ಸ್ವರೂಪಕ್ಕೆ ತಿರುಗಿದಾಗ ಲೋಳೆ ಪೊರೆಯಲ್ಲಿ CD4+ T ಜೀವಕೋಶಗಳು ಬರಿದಾಗುವುದಕ್ಕೆ ಲೋಳೆ ಪೊರೆಯಲ್ಲಿನ ತಡೆಯ ನಿರೋಧಕ ಕಣ್ಗಾವಲು ವ್ಯವಸ್ಥೆಯ ವೈಫಲ್ಯ ಇನ್ನೊಂದು ಕಾರಣ.[೬೬]

ಪರಿಣಾಮವಾಗಿ ಕರುಳಿನ ಸಾಮಾನ್ಯ ಪರಿಸರದಲ್ಲಿರುವ ಸೂಕ್ಷ್ಮಜೀವಿಗಳಿಗೆ ದೇಹದ ನಿರೋಧಕ ವ್ಯವಸ್ಥೆಯನ್ನು ಇಡೀಯಾಗಿ ಒಡ್ಡಿದಂತಾಗುತ್ತದೆ. ಆದರೆ ಆರೋಗ್ಯಕರ ವ್ಯಕ್ತಿಯಲ್ಲಿ ಇದರ ಮೇಲೆ ಲೋಳೆ ಪೊರೆಯ ನಿರೋಧಕ ವ್ಯವಸ್ಥೆ ನಿಗಾ ಇಟ್ಟಿರುತ್ತದೆ. ನಿರೋಧಕ ಸಾಮಾರ್ಥ್ಯದ ಸಕ್ರಿಯಕರಣವು HIV ಸೋಂಕಿಗೆ ಹೊಸ ಸ್ಥಳಾವಕಾಶಗಳನ್ನು ಒದಗಿಸಿದಾಗ T ಜೀವಕೋಶಗಳು ಕ್ರಿಯಾಶೀಲವಾಗುತ್ತವೆ ಮತ್ತು ಅವುಗಳ ಸಂತಾನೋತ್ಪತ್ತಿಯಾಗುತ್ತದೆ. ಆದಾಗ್ಯೂ, ಗಮನಾರ್ಹ ರೀತಿಯಲ್ಲಿ CD4+ T ಜೀವಕೋಶಗಳ ಬರಿದಾಗುವಿಕೆಗೆ, HIV ಮಾತ್ರ ಹೊಣೆಯಾಗಲಾರದು, ಏಕೆಂದರೆ ರಕ್ತದ CD4+ T ಜೀವಕೋಶಗಳಲ್ಲಿ 0.01–0.10%ರಷ್ಟು ಮಾತ್ರ ಸೋಂಕಿಗೊಳಗಾಗಿವೆ. ನಿರೋಧಕ ವ್ಯವಸ್ಥೆಯು ಕ್ರಿಯಾಶೀಲವಾಗಿದ್ದ ವೇಳೆಯೇ ಅಪೊಪ್ಟೋಸಿಸ್ ಪ್ರಭಾವಕ್ಕೆ CD4+ T ಜೀವಕೋಶಗಳ ಒಳಗಾಗುವ ಸಾಧ್ಯತೆಗಳು ಹೆಚ್ಚುವುದೇ ಅವುಗಳ (CD4+ T ಜೀವಕೋಶಗಳು) ನಷ್ಟಕ್ಕೆ ಪ್ರಮುಖ ಕಾರಣವೆಂದು ಮೇಲ್ನೋಟಕ್ಕೆ ಕಂಡು ಬಂದಿದೆ. ನಷ್ಟವಾದ T ಜೀವಕೋಶಗಳನ್ನು ತುಂಬುವ ನಿಟ್ಟಿನಲ್ಲಿ ತೈಮಸ್‌ ಗ್ರಂಥಿಯು ನಿರಂತರವಾಗಿ ಹೊಸ T ಜೀವಕೋಶಗಳನ್ನು ಉತ್ಪಾದಿಸುತ್ತಿದ್ದರೂ, ಅದರ ತೈಮೊಸೈಟ್ಸ್‌ಗಳಿಗೆ ನೇರವಾಗಿ HIV ಸೋಂಕುಂಟಾಗುವುದರಿಂದ ತೈಮಸ್‌ನ ಪುನರುತ್ಪಾದನಾ ಸಾಮಾರ್ಥ್ಯ ನಿಧಾನವಾಗಿ ಕ್ಷೀಣಿಸುತ್ತದೆ. ಕ್ರಮೇಣವಾಗಿ, ನಿರೋಧಕ ಸಾಮಾರ್ಥ್ಯವನ್ನು ಉಳಿಸಿಕೊಳ್ಳಲು ಅವಶ್ಯಕವಾಗಿರುವ ಕನಿಷ್ಠ ಸಂಖ್ಯೆಯ CD4+ T ಜೀವಕೋಶಗಳೂ ನಾಶವಾಗಿ AIDSಗೆ ಕಾರಣವಾಗುತ್ತದೆ.

ಪರಿಣಾಮಕ್ಕೊಳಗಾದ ಜೀವಕೋಶಗಳು
ವೈರಸ್ ಯಾವುದೇ ಮಾರ್ಗದಿಂದ ದೇಹವನ್ನು ಪ್ರವೇಶಿಸಿದರೂ, ಮೊದಲು ಈ ಕೆಳಗಿನ ಜೀವಕೋಶಗಳ ಮೇಲೆ ಪ್ರಭಾವ ಬೀರುತ್ತದೆ:[೬೭]

ಲಿಂಫೋರೆಟಿಕುಲರ್ ವ್ಯವಸ್ಥೆ:
CD4+ T-ಸಹಾಯಕ ಜೀವಕೋಶಗಳು
ಮ್ಯಾಕ್ರೋಫೇಜ್ (ದೊಡ್ಡ ಗಾತ್ರದ ಬಿಳಿಯ ರಕ್ತಕಣ)
ಮೊನೊಸೈಟ್‌ಗಳು
B-ಲಿಂಫೋಸೈಟ್ಸ್
ನಿರ್ಧಾರಿತ ಎಂಡೋಥೆಲಿಯಾಲ್ ಜೀವಕೋಶಗಳು
ಕೇಂದ್ರ ನರವ್ಯೂಹ ವ್ಯವಸ್ಥೆ:
ನರವ್ಯೂಹ ವ್ಯವಸ್ಥೆಯ ಮೈಕ್ರೊಗ್ಲಿಯಾ
ಆಸ್ಟ್ರೋಸೈಟ್ಸ್
ಒಲಿಗೊಡೆಂಡ್ರೋಸೈಟ್ಸ್
ನ್ಯೂರಾನ್ಸ್ – ಸೈಟೋಕಿನ್ಸ್‌‌ನಿಂದ ಪರೋಕ್ಷವಾಗಿ ಮತ್ತು gp-120

ಪರಿಣಾಮ
ವೈರಸ್ ಸೈಟೋಬಪಾತಿಕ್ ಪರಿಣಾಮಗಳನ್ನು ಹೊಂದಿವೆ, ಆದರೆ ಅದು ಹೇಗೆ ಎಂಬುದು ಇನ್ನೂ ಪೂರ್ಣ ಸ್ಪಷ್ಟವಾಗಿಲ್ಲ. ಮೇಲಿನ ಜೀವಕೋಶಗಳಲ್ಲಿ ವೈರಸ್ ದೀರ್ಘಾವಧಿಯವರೆಗೆ ನಿಷ್ಕ್ರಿಯವಾಗಿರಬಹುದು, ಆದರೂ CD4-gp120ರ ಪಾರಸ್ಪರಿಕ ಕ್ರಿಯೆಗಳಿಂದಾಗಿ ಇದರ ಪರಿಣಾಮವನ್ನು ಊಹನೆ ಮಾಡಿಕೊಳ್ಳಲಾಗಿದೆ.[೬೭]

HIV ವೈರಸ್ ಅತ್ಯಂತ ಪ್ರಮುಖ ಪರಿಣಾಮವೆಂದರೆ, ಅದರ T-ಸಹಾಯಕ ಜೀವಕೋಶದ ನಿಗ್ರಹ ಮತ್ತು ವಿಭಜನೆ
ಜೀವಕೋಶ ಸರಳವಾಗಿ ಕೊಲ್ಲಲ್ಪಡುತ್ತದೆ ಅಥವಾ ಕಾರ್ಯನಿರ್ವಹಿಸಲು ಸಾಧ್ಯವಾಗದ ರೀತಿಯಲ್ಲಿ ಅದನ್ನು ಅಸ್ತವ್ಯಸ್ತಗೊಳಿಸಲಾಗುತ್ತದೆ (ಪರದೇಶಿ ಪ್ರತಿಜನಕಗಳಿಗೆ ಅವು ಪ್ರತಿಕ್ರಿಯಿಸಲಾರವು). ಸೋಂಕಿತ B-ಜೀವಕೋಶಗಳು ಸಾಕಷ್ಟು ಪ್ರತಿವಿಷ ಅಥವಾ ಪ್ರತಿಕಾಯವನ್ನು(ಆಂಟಿಬಡೀಸ್) ಉತ್ಪಾದಿಸಲಾರವು. ಹೀಗೆ ನಿರೋಧಕ ವ್ಯವಸ್ಥೆ ಪತನಗೊಂಡು ಸೋಂಕುಗಳು ಮತ್ತು ಗಡ್ಡೆ (ವೈಡಿ ಸೂಪ್ರ) ಗಳಂತಹ ಸಾಮಾನ್ಯ AIDS ಜಟಿಲತೆಗಳು ಉಂಟಾಗುತ್ತದೆ.

CNS ಜೀವಕೋಶಗಳಿಗೆ ಸೋಂಕು ತಗುಲಿದಲ್ಲಿ ತೀವ್ರ ಸ್ವರೂಪದ ಎಸೆಪ್ಟಿಕ್ ಮೆನಿಂಜಿಟಿಸ್‌, ಸಾಧಾರಣ ತೀವ್ರತೆ ಹೊಂದಿರುವ ಎನ್ಸೆಪಲೈಟಿಸ್, ವಕ್ಯುಲರ್ ಮೈಲೋಪತಿ ಮತ್ತು ಫೆರಿಫೆರಲ್ ನ್ಯೂರೋಪತಿಗೆ ಕಾರಣವಾಗಬಹುದು. ನಂತರ ಇದು ಏಡ್ಸ್ ಡಿಮೆನ್ಶಿಯಾ ಸಂಕೀರ್ಣತೆಗೂ ಕಾರಣವಾಗಬಹುದು.
CD4-gp120 ಪಾರಸ್ಪರಿಕ ಕ್ರಿಯೆ (ಮೇಲೆ ಓದಿ)ಇತರ ವೈರಸ್‌ಗಳಾದ ಸೈಟೊಮೆಗಾಲೊವೈರಸ್, ಹೆಪಟೈಟಿಸ್ ವೈರಸ್, ಹರ್ಪಿಸ್ ಸಿಂಪ್ಲೆಕ್ಸ್ ವೈರಸ್, ಇತ್ಯಾದಿ ಪ್ರವೇಶಿಸಲು ಅವಕಾಶ ಮಾಡಿಕೊಡಬಹುದು. ಈ ವೈರಸ್‌ಗಳಿಂದಾಗಿ ಜೀವಕೋಶಗಳು ಇನ್ನಷ್ಟು ಹಾನಿಗೊಳಗಾಗುತ್ತವೆ. i.e. ಸೈಟೋಪತಿ.

ರೋಗನಿರ್ಣಯ
ಕೆಲವು ನಿರ್ಧಾರಿತ ಚಿಹ್ನೆಗಳು ಅಥವಾ ರೋಗ-ಲಕ್ಷಣಗಳ ಅಸ್ತಿತ್ವದ ಆಧಾರದ ಮೇಲೆ HIV ಸೋಂಕಿತ ವ್ಯಕ್ತಿಗೆ AIDS ಇದೆಯೇ ಎಂದು ಪರೀಕ್ಷಿಸಲಾಗುತ್ತದೆ. ಜೂನ್ 5, 1981ರಿಂದ, ಸಾಂಕ್ರಾಮಿಕ ರೋಗಗಳ ಬಗ್ಗೆ ಎಚ್ಚರದಿಂದಿರುವ ಬಗ್ಗೆ ಅನೇಕ ವ್ಯಾಖ್ಯಾನಗಳು ಬಂದಿವೆ, ಅಂತಹವುಗಳಲ್ಲಿ ಬಾಂಗುಯಿ ವ್ಯಾಖ್ಯಾನ ಮತ್ತು 1994ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ನೀಡಿದ AIDS ಪ್ರಕರಣದ ವ್ಯಾಖ್ಯಾನದ ವಿಸ್ತರಣೆ ಪ್ರಮುಖವಾದ್ದು. ಆದಾಗ್ಯೂ, ರೋಗಿಗಳನ್ನು ವೈದ್ಯಕೀಯ ತಪಾಸಣೆಗೊಳಪಡಿಸಿ ರೋಗಿ ಯಾವ ಹಂತದಲ್ಲಿದ್ದಾನೆಂದು ನಿರ್ಧರಿಸುವುದು ಈ ವ್ಯವಸ್ಥೆಗಳ ಉದ್ದೇಶವಾಗಿರಲಿಲ್ಲ, ಏಕೆಂದರೆ ಈ ವ್ಯವಸ್ಥೆಗಳು ಅಷ್ಟು ಸೂಕ್ಷ್ಮದ್ದೂ ಆಗಿರಲಿಲ್ಲ, ನಿರ್ದಿಷ್ಟವಾಗಿರಲೂ ಇಲ್ಲ. ವಿಶ್ವ ಆರೋಗ್ಯ ಸಂಸ್ಥೆಯು ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಬಳಸಿದ ವೈದ್ಯಕೀಯ ಮತ್ತು ಪ್ರಯೋಗಲಾಯದ ವಿವರಗಳನ್ನು ಬಳಸಿಕೊಂಡು ಅಭಿವೃದ್ಧಿಶೀಲ ದೇಶಗಳಿಗಾಗಿ HIV ಸೋಂಕು ಮತ್ತು ರೋಗ ಮಾಪನ ವ್ಯವಸ್ಥೆಯನ್ನು ರೂಪಿಸಿತು, ಅಂತೆಯೇ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್(CDC) ವಿಭಾಗ ವ್ಯವಸ್ಥೆಯನ್ನು ಬಳಸಲಾಯಿತು.

WHO ರೋಗ ಮಾಪನ ವ್ಯವಸ್ಥೆ
1990ರಲ್ಲಿ, ವಿಶ್ವ ಆರೋಗ್ಯ ಸಂಸ್ಥೆ (WHO)ಯು ಈ ಸೋಂಕುಗಳು ಮತ್ತು ಪರಿಸ್ಥಿತಿಗಳನ್ನು ಒಟ್ಟಿಗೆ ಸೇರಿಸಿ HIV-1 ಸೋಂಕಿತ ರೋಗಿಗಳಿಗಾಗಿ ಮಾಪನ ವ್ಯವಸ್ಥೆಯನ್ನು ಪರಿಚಯಿಸಿತು.[೬೮] ಸೆಪ್ಟೆಂಬರ್ 2005ರಲ್ಲಿ ಇದನ್ನು ನವೀಕರಿಸಲಾಯಿತು. ಈ ಪೈಕಿ ಹೆಚ್ಚಿನ ಪರಿಸ್ಥಿತಿಗಳು ಅವಕಾಶವಾದಿ ಸೋಂಕುಗಳಿಂದ ಬಂದವುಗಳಾಗಿದ್ದು, ಆರೋಗ್ಯಕರ ಜನರಿಗೆ ಸುಲಭವಾಗಿ ಚಿಕಿತ್ಸೆ ನೀಡಬಹುದಾಗಿತ್ತು.

ಹಂತ I: HIV ಸೋಂಕಿಗೆ ಯಾವುದೇ ರೋಗ-ಲಕ್ಷಣಗಳಿಲ್ಲ ಮತ್ತು AIDS ಎಂದು ವರ್ಗೀಕರಿಸಲಾಗಿಲ್ಲ.
ಹಂತ II: ಚರ್ಮದ ಲೋಳೆ ಪೊರೆಯಲ್ಲಿನ ಸಣ್ಣ ಚಿಹ್ನೆಗಳು ಮತ್ತು ಪುನರಾವರ್ತಿತ ಮೇಲ್ಭಾಗದ ಶ್ವಾಸೇಂದ್ರಿಯ ಪ್ರದೇಶದ ಸೋಂಕುಗಳು ಇದರಲ್ಲಿ ಸೇರಿವೆ.
ಹಂತ III: ವಿವರಿಸಿಲ್ಲದ ತಿಂಗಳಿಗೂ ಮೀರಿ ಆಗಿಂದಾಗ್ಗೆ ಕಾಣಿಸಿಕೊಳ್ಳುವ ಅತಿಸಾರ ಭೇದಿ, ತೀವ್ರ ಸ್ವರೂಪದ ಬ್ಯಾಕ್ಟೀರಿಯಾದ ಸೋಂಕುಗಳು ಮತ್ತು ಶ್ವಾಸಕೋಶದ ಕ್ಷಯ ಇದರಲ್ಲಿ ಸೇರಿದೆ.
ಹಂತ IV: ಮಿದುಳಿನ ಟೊಕ್ಸೊಪ್ಲಾಸ್ಮೋಸಿಸ್, ಅನ್ನನಾಳ ಕ್ಯಾಂಡಿಡಿಯಾಸಿಸ್, ಶ್ವಾಸನಾಳದ ಸೋಂಕು, ಶ್ವಾಸನಳಿಕೆಯ ಅಥವಾ ಶ್ವಾಸಕೋಶಗಳ ಸೋಂಕು ಮತ್ತು ಕಾಪೊಸಿಯ ಸಾರ್ಕೋಮಾ; ಈ ರೋಗಗಳು AIDS ಸೂಚನೆಗಳಾಗಿವೆ.

CDC ವರ್ಗೀಕರಣ ವ್ಯವಸ್ಥೆ
AIDSಗೆ ಎರಡು ಪ್ರಮುಖ ವ್ಯಾಖ್ಯಾನಗಳಿದ್ದು, ಅವೆರಡನ್ನೂ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಟ್ ಪ್ರಿವೆನ್ಶನ್‌ (CDC) ರೂಪಿಸಿದೆ. ಮೊದಲಿನದ್ದರಲ್ಲಿ, AIDS ಜೊತೆಗೆ ಬರುವ ರೋಗಗಳನ್ನೂ ಸೇರಿಸಿಕೊಂಡು ಏಡ್ಸ್ ಕುರಿತು ವ್ಯಾಖ್ಯಾನ ನೀಡಲಾಗಿದೆ, ಉದಾಹರಣೆಗೆ HIVಯನ್ನು ಪತ್ತೆ ಹಚ್ಚಿದ ಮಂದಿಯೇ ವೈರಸ್‌ಗೆ ಮೂಲತಃ ಲಿಂಫಡಿನೋಪತಿ ರೋಗ ಎಂಬ ಹೆಸರಿಟ್ಟಿದ್ದರು.[೬೯][೭೦] 1993ರಲ್ಲಿ, CDCಯು ರಕ್ತದ ಪ್ರತಿ µLಗೆ 200ಕ್ಕೂ ಕಡಿಮೆ CD4+ T ಜೀವಕೋಶಗಳ ಸಂಖ್ಯೆ ಅಥವಾ ಒಟ್ಟು 14%ರಷ್ಟು ಲಿಂಫೋಸೈಟ್ಸ್‌ಗಳಿರುವ ಎಲ್ಲಾ HIV ಪಾಸಿಟಿವ್ ಹೊಂದಿರುವ ಜನರನ್ನು AIDS ವ್ಯಾಪ್ತಿಗೆ ತಂದು AIDS ಕುರಿತ ತನ್ನ ವ್ಯಾಖ್ಯಾನವನ್ನು ವಿಸ್ತರಿಸಿತು.[೭೧]

ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಹೆಚ್ಚಿನ ಹೊಸ AIDS ಪ್ರಕರಣಗಳನ್ನು ಈ ವ್ಯಾಖ್ಯಾನದ ಆಧಾರದಲ್ಲಿ ನಿರ್ಧರಿಸಲಾಗುತ್ತದೆ ಇಲ್ಲವೇ 1993-ಪೂರ್ವದ CDC ವ್ಯಾಖ್ಯಾನದ ಆಧಾರದಲ್ಲಿ ನಿರ್ಣಯಿಸಲಾಗುತ್ತದೆ. ಸೂಕ್ತ ಚಿಕಿತ್ಸೆಯ ಬಳಿಕ ರಕ್ತದ ಪ್ರತಿ µLಗೆ CD4+ T ಜೀವಕೋಶಗಳ ಸಂಖ್ಯೆಯು 200ಕ್ಕಿಂತ ಮೇಲೆ ಏರಿದಲ್ಲಿ ಅಥವಾ AIDSಗೆ ಕಾರಣವಾಗುವ ಇತರೆ ಅನಾರೋಗ್ಯಗಳಿಂದ ಗುಣಮುಖಗೊಂಡ ಬಳಿಕವೂ ಏಡ್ಸ್ ಪರೀಕ್ಷೆಯನ್ನು ಮಾಡಲಾಗುತ್ತದೆ.

HIV ಪರೀಕ್ಷೆ
ತಾವು HIV ಸೋಂಕಿತರೆಂಬುದು ಹೆಚ್ಚಿನ ಜನರಿಗೆ ಗೊತ್ತಿರುವುದಿಲ್ಲ.[೭೨] ಆಫ್ರಿಕಾದ ನಗರ ನಿವಾಸಿಗಳಲ್ಲಿ ಲೈಂಗಿಕವಾಗಿ 1% ಕ್ಕಿಂತಲೂ ಕಡಿಮೆ ಕ್ರಿಯಾಶೀಲವಾಗಿರುವ ಮಂದಿಯನ್ನ್ನು HIV ಪರೀಕ್ಷೆಗೊಳಪಡಿಸಲಾಗಿದ್ದರೆ, ಈ ಪ್ರಮಾಣ ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಕಡಿಮೆಯಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, 0.5% ಗರ್ಭಿಣಿ ಮಹಿಳೆಯರು ಮಾತ್ರ ನಗರದ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಆರೋಗ್ಯ ಸಲಹೆ, ಪರೀಕ್ಷೆಗಳನ್ನು ಪಡೆದುಕೊಂಡಿದ್ದಾರೆ ಮತ್ತು ಆ ಸಂಬಂಧ ಫಲಿತಾಂಶಗಳನ್ನೂ ಪಡೆದಿದ್ದಾರೆ. ಆದರೆ ಈ ಪ್ರಮಾಣ ಗ್ರಾಮೀಣ ಪ್ರದೇಶದಲ್ಲಿನ ಆರೋಗ್ಯ ಕೇಂದ್ರಗಳಲ್ಲಿ ಕಡಿಮೆಯಿದೆ.[೭೨] ಆದ್ದರಿಂದಲೇ, ಔಷಧಗಳು ಮತ್ತು ವೈದ್ಯಕೀಯ ಸಂಶೋಧನೆಯಲ್ಲಿ ಬಳಸಲಾಗುವ ದಾನಿಯ ರಕ್ತ ಮತ್ತು ರಕ್ತದ ಉತ್ಪನ್ನಗಳನ್ನು HIV ಪರೀಕ್ಷೆಗೊಳಪಡಿಸಲಾಗುತ್ತಿದೆ. ಸಾಮಾನ್ಯವಾಗಿ ಹೃದಯಕ್ಕೆ ರಕ್ತವನ್ನು ಹಿಂದಿರುಗಿಸುವ ರಕ್ತನಾಳದಲ್ಲಿನ ರಕ್ತವನ್ನು HIV ಪರೀಕ್ಷೆಗೊಳಪಡಿಸಲಾಗುತ್ತದೆ. ಅನೇಕ ಪ್ರಯೋಗಾಲಯಗಳು ಪ್ರತಿ-HIV ಪ್ರತಿಕಾಯ (IgG ಮತ್ತು IgM) ಮತ್ತು HIV p24 ಪ್ರತಿಜನಕಗಳನ್ನು ಪತ್ತೆ ಹಚ್ಚುವ ನಾಲ್ಕನೇ ತಲೆಮಾರಿನ ಪರೀಕ್ಷಾ ವಿಧಾನಗಳನ್ನು ಬಳಸುತ್ತಿವೆ. ರೋಗಿಗೆ ಸಂಬಂಧಿಸಿದ ಹಿಂದಿನ ಪರೀಕ್ಷಾ ವರದಿಯು ನಕರಾತ್ಮಕವಾಗಿದ್ದು, ಹೊಸದಾಗಿ ನಡೆಸಿದ ಪರೀಕ್ಷೆಯಲ್ಲಿ HIV ಪ್ರತಿಕಾಯ ಅಥವಾ ಪ್ರತಿಜನಕ ಪತ್ತೆಯಾದರೆ ಆತನಿಗೆ HIV ಸೋಂಕು ತಗುಲಿದೆ ಎಂದರ್ಥ. ವ್ಯಕ್ತಿಗಳಿಗೆ HIV ಸೋಂಕು ತಗುಲಿರುವುದಕ್ಕೆ ಆರಂಭಿಕ ನಿರ್ದಿಷ್ಟ ಸೂಚನೆಗಳು ದೊರೆತಲ್ಲಿ, ಅದನ್ನು ದೃಢಪಡಿಸಲು ಎರಡನೇ ಬಾರಿ ರಕ್ತದ ಮಾದರಿಗಳನ್ನು ಪಡೆದು ಸತತ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಬಳಿಕ ರಕ್ತ ಪರಿವರ್ತನೆ ನಡೆದು ಪಾಸಿಟಿವ್ ಎಂದು ಸಾಬೀತಾಗಲು 3ರಿಂದ 6 ತಿಂಗಳುಗಳು ಬೇಕಾಗುವುದರಿಂದ ಈ ನಿರ್ಣಾಯಕ ಅವಧಿಯಲ್ಲಿ ವ್ಯತ್ಯಾಸಗಳಾಗಬಹುದು. ಈ ನಿರ್ಣಾಯಕ ಅವಧಿಯಲ್ಲಿ ಪಾಲಿಮೆರೇಸ್ ಚೈನ್ ರಿಯಾಕ್ಷನ್(PCR) ವಿಧಾನವನ್ನು ಬಳಸಿಕೊಂಡು ವೈರಸ್‌ಅನ್ನು ಪತ್ತೆ ಹಚ್ಚುವುದು ಸಾಧ್ಯ, ಮತ್ತು ನಾಲ್ಕನೇ ತಲೆಮಾರಿನ EIA ಪರೀಕ್ಷಾ ವಿಧಾನವನ್ನು ಬಳಸುವುದಕ್ಕಿಂತಲೂ ಮೊದಲೇ ಸೋಂಕನ್ನು ಆಗಿಂದಾಗ್ಗೆ ಪತ್ತೆ ಹಚ್ಚಲು ಸಾಧ್ಯವಿರುವುದಾಗಿ ಸಾಕ್ಷ್ಯಗಳು ಹೇಳುತ್ತವೆ.

PCRನಿಂದ ಪಡೆದ ಧನಾತ್ಮಕ ಫಲಿತಾಂಶಗಳನ್ನು ಪ್ರತಿಜನಕ ಪರೀಕ್ಷೆಗಳು ದೃಢಪಡಿಸುತ್ತವೆ.[೭೩]

HIV-ಪಾಸಿಟಿವ್ ತಾಯಂದಿರಿಗೆ ಜನಿಸಿದ ನವಜಾತ ಶಿಶುಗಳು ಮತ್ತು ಹಸುಳೆಗಳ (ie ರೋಗಿಗಳು 2 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನವರಾಗಿದ್ದಲ್ಲಿ)[೭೪] ವಿಚಾರದಲ್ಲಿ ಸೋಂಕು ಪತ್ತೆಗಾಗಿ ನಿತ್ಯ ಬಳಸುವ HIV ಪರೀಕ್ಷೆಗಳಿಗೆ ಯಾವುದೇ ಮೌಲ್ಯವಿಲ್ಲ, ಏಕೆಂದರೆ HIVಗೆ ವಿರುದ್ಧವಾಗಿ ಕೆಲಸ ಮಾಡುವ ಪ್ರತಿಜನಕಗಳು ತಾಯಿಯಿಂದ ಮಗುವಿನ ರಕ್ತಕ್ಕೆ ಬಂದು ಅಸ್ತಿತ್ವದಲ್ಲಿರುತ್ತವೆ. HIV ಸೋಂಕನ್ನು PCR ಪರೀಕ್ಷೆಯಿಂದ ಮಾತ್ರ ಪತ್ತೆ ಹಚ್ಚಲು ಸಾಧ್ಯ, ಮಾತ್ರವಲ್ಲದೆ ಮಕ್ಕಳ ಲಿಂಫೋಸೈಟ್ಸ್‌ಗಳಲ್ಲಿ HIV ವೈರಲ್-ಪರ DNAಗಳಿವೆಯೇ ಎಂದೂ ಪರೀಕ್ಷಿಸಬಹುದು.

ನಿಯಂತ್ರಣ
ಲೈಂಗಿಕ ಸಂಪರ್ಕ, ಸೋಂಕಿತ ದೇಹದ ದ್ರವಗಳಿಗೆ ಅಥವಾ ಜೀವಕೋಶಗಳಿಗೆ ಒಡ್ಡಿಕೊಳ್ಳುವುದು, ಮತ್ತು ತಾಯಿಯಿಂದ ಭ್ರೂಣಕ್ಕೆ ಅಥವಾ ಪ್ರಸವೋತ್ತರ ಕಾಲದಲ್ಲಿ ಮಗುವಿಗೆ ಹರಡುವುದು HIV ಹರಡುವಿಕೆಯ ಮೂರು ಪ್ರಮುಖ ಮಾರ್ಗಗಳು.

ಸೋಂಕಿತ ವ್ಯಕ್ತಿಗಳ ಲಾಲಾರಸ, ಕಣ್ಣೀರು, ಮತ್ತು ಮೂತ್ರಗಳಲ್ಲಿ HIVಯನ್ನು ಕಂಡು ಹಿಡಿಯಲು ಸಾಧ್ಯ, ಆದರೆ ಈ ದ್ರವಗಳಿಂದಾಗಿ ಸೋಂಕುಗಳು ತಗುಲಿದ ಬಗ್ಗೆ ಯಾವುದೇ ದಾಖಲಿತ ಪ್ರಕರಣಗಳಿಲ್ಲ. ಅಲ್ಲದೆ ಇದರಿಂದಾಗಿ ಸೋಂಕುಂಟಾಗುವ ಅಪಾಯ ತೀರಾ ಕಡಿಮೆ

ಲೈಂಗಿಕ ಸಂಪರ್ಕ
HIV ಹೊಂದಿರುವ ಜೊತೆಗಾರ/ಗಾರ್ತಿ ಜೊತೆ ಅಸುರಕ್ಷಿತ ಲೈಂಗಿಕ ಸಂಬಂಧಗಳನ್ನಿಟ್ಟುಕೊಳ್ಳುವುದರಿಂದ HIV ಸೋಂಕುಗಳು ಹೆಚ್ಚಾಗಿ ತಗುಲುತ್ತದೆ. ಜಗತ್ತಿನಾದ್ಯಂತ ವಿರುದ್ಧ ಲಿಂಗಿಗಳು ಲೈಂಗಿಕ ಸಂಪರ್ಕಗಳನ್ನು ಹೊಂದಿರುವುದೇ HIV ಸೋಂಕಿಗೆ ಮೊದಲ ಕಾರಣ.[೮೪][೮೫][೮೬]


ಲೈಂಗಿಕ ಕ್ರಿಯೆಯ ವೇಳೆ ಪುರುಷ ಅಥವಾ ಮಹಿಳೆ ಕಾಂಡೊಮ್‌ಗಳನ್ನು ಬಳಸುವುದರಿಂದ ಮಾತ್ರ HIV ಸೋಂಕು ತಗುಲುವ ಸಾಧ್ಯತೆಗಳು, ಮತ್ತು STDಗಳು ಮತ್ತು ಗರ್ಭಿಣಿಯಾಗುವ ಸಾಧ್ಯತೆಗಳನ್ನು ಕಡಿಮೆ ಮಾಡಬಹುದು. ಈವರೆಗಿನ ಅತ್ಯುತ್ತಮ ನಿದರ್ಶನ ಹೇಳುವುದೇನೆಂದರೆ, ದೀರ್ಘ-ಕಾಲದಲ್ಲಿ ವಿಶಿಷ್ಟವಾಗಿ ಕಾಂಡೊಮ್ ಬಳಸುವುದರಿಂದಾಗಿ ಭಿನ್ನಲಿಂಗರತಿ ಮೂಲಕ HIV ಹರಡುವಿಕೆಯನ್ನು ಸುಮಾರು 80%ರಷ್ಟು ಕಡಿಮೆಗೊಳಿಸಬಹುದು, ಕಾಂಡೊಮ್‌ಗಳನ್ನು ಪ್ರತಿ ಸಂದರ್ಭದಲ್ಲೂ ಸರಿಯಾಗಿ ಬಳಸಿದಲ್ಲಿ ಹೆಚ್ಚಿನ ಪ್ರಯೋಜನ ಪಡೆಯಬಹುದು.[೮೭]

ಪುರುಷರ ಲೇಟೆಕ್ಸ್ ಕಾಂಡೊಮ್ ಅನ್ನು ತೈಲ-ಆಧಾರಿತ ತೇವಾಂಶವುಳ್ಳ ವಸ್ತುಗಳನ್ನು ಬಳಸದೆ ಸರಿಯಾಗಿ ಬಳಸಿಕೊಳ್ಳುವುದು, ಲೈಂಗಿಕವಾಗಿ HIV ಹರಡುವಿಕೆ ಮತ್ತು ಲೈಂಗಿಕವಾಗಿ ಹರಡುವ ಇತರ ರೋಗಗಳನ್ನು ಕಡಿಮೆ ಮಾಡಲು ಲಭ್ಯವಿರುವ ಅತ್ಯಂತ ಪರಿಣಾಮಕಾರಿ ಏಕೈಕ ತಂತ್ರಜ್ಞಾನವಾಗಿದೆ. ಕಾಂಡೊಮ್ ತಯಾರಕರು ತೈಲ-ಆಧಾರಿತ ವಸ್ತುಗಳಾದ ಪೆಟ್ರೋಲಿಯಂ ಜೆಲ್ಲಿ, ಬೆಣ್ಣೆ, ಮತ್ತು ತುಪ್ಪ ಇತ್ಯಾದಿಗಳಿರುವ ಲೇಟೆಕ್ಸ್ ಕಾಂಡೊಮ್‌ಗಳನ್ನು ಬಳಸದಂತೆ ಶಿಫಾರಸು ಮಾಡಿದ್ದಾರೆ. ಏಕೆಂದರೆ ಅವು ಲೇಟೆಕ್ಸ್‌ಅನ್ನು ಕರಗಿಸಿ ಕಾಂಡೊಮ್‌ಗಳಲ್ಲಿ ರಂಧ್ರಗಳನ್ನುಂಟು ಮಾಡುತ್ತವೆ. ಅವಶ್ಯಕತೆಯಿದ್ದರೆ ಮಾತ್ರ ತಯಾರಕರು ನೀರು ಆಧಾರಿತ ತೇವಾಂಶವುಳ್ಳ ಕಾಂಡೊಮ್‌ಗಳ ಬಳಕೆಗೆ ಶಿಫಾರಸು ಮಾಡುತ್ತಾರೆ. ಆದಾಗ್ಯೂ, ಪಾಲಿಯುರೆಥೇನ್‌ ಕಾಂಡೊಮ್‌ಗಳಲ್ಲಿ ತೈಲ-ಆಧಾರಿತ ತೇವಾಂಶವುಳ್ಳ ವಸ್ತುಗಳನ್ನು ಬಳಸಬಹುದು.[೮೮]


ಪುರುಷರ ಕಾಂಡೊಮ್‌ಗೆ ಪರ್ಯಾಯವಾಗಿರುವ ಮಹಿಳೆಯರ ಕಾಂಡೊಮ್‌ಅನ್ನು ಪಾಲಿಯುರೆಥೇನ್‌ನಲ್ಲಿ ಮಾಡಲಾಗಿದ್ದು, ತೈಲ-ಆಧಾರಿತ ತೇವಾಂಶವುಳ್ಳ ವಸ್ತುಗಳನ್ನು ಬಳಸಲು ಇದು ಅನುವು ಮಾಡಿಕೊಡುತ್ತದೆ. ಇವು ಪುರುಷ ಕಾಂಡೊಮ್‌ಗಳಿಗಿಂತ ದೊಡ್ಡದಾಗಿವೆ. ಬಿಗಿಯಾಗಿದ್ದು ಉಂಗುರದ-ಆಕಾರದ ಪ್ರವೇಶವನ್ನು ಹೊಂದಿದೆ ಮತ್ತು ಯೋನಿಯೊಳಗೆ ಸೇರಿಸಲು ಅನುಕೂಲವಾಗುವಂತೆ ಇದರ ವಿನ್ಯಾಸ ಮಾಡಲಾಗಿದೆ. ಮಹಿಳೆಯರ ಕಾಂಡೊಮ್‌ನೊಳಗೆ ಒಂದು ಉಂಗುರವಿದ್ದು, ಯೋನಿಯೊಳಗೆ ಸರಿಯಾಗಿ ಕೂರಿಸಲು ಅದು ಸಹಾಯಕವಾಗುತ್ತದೆ- ಮಹಿಳೆಯ ಕಾಂಡೊಮ್‌‌ನ್ನು ಒಳಗೆ ಸೇರಿಸಬೇಕಾದರೆ ಅದರ ಉಂಗುರವನ್ನು ಹಿಸುಕಿ ಗಾತ್ರ ಕುಗ್ಗಿಸಬೇಕು. ಆದಾಗ್ಯೂ, ಪ್ರಸ್ತುತ ಮಹಿಳೆಯರ ಕಾಂಡೊಮ್‌ಗಳ ಲಭ್ಯತೆ ತೀರಾ ಕಡಿಮೆಯಿದೆ ಮತ್ತು ದುಬಾರಿಯಾಗಿರುವುದರಿಂದ ಅನೇಕ ಮಹಿಳೆಯರು ಅದರ ಸಮೀಪವೂ ಸುಳಿಯುವುದಿಲ್ಲ.

ಮಹಿಳೆಯರ ಕಾಂಡೊಮ್‌ಗಳು ಲಭ್ಯವಿರುವ ಸ್ಥಳಗಳಲ್ಲಿ, ಒಟ್ಟು ಅಸುರಕ್ಷಿತ ಲೈಂಗಿಕ ಕ್ರಿಯೆಗಳಿಗೆ ಹೋಲಿಸಿದಲ್ಲಿ ಸುರಕ್ಷಿತ ಲೈಂಗಿಕ ಕ್ರಿಯೆ ಹೆಚ್ಚಿದೆ ಎಂದು ಪೂರ್ವಭಾವಿ ಅಧ್ಯಯನಗಳು ತಿಳಿಸಿವೆ.[೮೯]


ದಂಪತಿಗಳ ಮೇಲೆ ಕೈಗೊಂಡ ಅಧ್ಯಯನದಲ್ಲಿ, ಸೋಂಕಿತ ವ್ಯಕ್ತಿಯು ಸ್ಥಿರವಾಗಿ ಕಾಂಡೊಮ್ ಬಳಸಿದಾಗ, ಸೋಂಕಿತಗೊಳ್ಳದ ಜೊತೆಗಾರನಿಗೆ HIV ಸೋಂಕು ತಗುಲಿದ ಪ್ರಮಾಣ ವರ್ಷಕ್ಕೆ 1%ಕ್ಕಿಂತಲೂ ಕಡಿಮೆ ಎಂದು ತಿಳಿದು ಬಂದಿದೆ.[೯೦] ಈ ಸಂಬಂಧ ಅಭಿವೃದ್ಧಿ ಹೊಂದಿದ ದೇಶಗಳಲ್ಲಿರುವ ಮುನ್ನೆಚ್ಚರಿಕೆ ಮತ್ತು ನಿಯಂತ್ರಣ ಕ್ರಮಗಳು ಎಲ್ಲರಿಗೂ ತಿಳಿದ ಸಂಗತಿ. ಆದರೆ HIV/AIDS ಬಗ್ಗೆ ಗೊತ್ತಿದ್ದೂ, ತಾವಾಗಿಯೇ HIV ಸೋಂಕನ್ನು ಆರ್ಜಿಸಿಕೊಳ್ಳುವುದರ ಅರಿವಿಲ್ಲದೆ ಕೆಲವು ಮಂದಿ ಯುವಕರು ಲೈಂಗಿಕ ಸಂಪರ್ಕಗಳಲ್ಲಿ ತೊಡಗಿದ್ದಾರೆಂದು ಯುರೋಪ್ ಮತ್ತು ಉತ್ತರ ಅಮೆರಿಕಾದಲ್ಲಿ ಕೈಗೊಂಡ ಸಾಂಕ್ರಾಮಿಕ ರೋಗಶಾಸ್ತ್ರ ಮತ್ತು ನಡವಳಿಕೆ ಅಧ್ಯಯನಗಳು ತಿಳಿಸಿವೆ. [೯೧][೯೨]


ಸಲಿಂಗಕಾಮಿ ಪುರುಷರಲ್ಲಿ HIV ಸೋಂಕು ತಗಲುವ ಅಪಾಯವನ್ನು ಪುರುಷ ಸುನತಿಯು 60%ರಷ್ಟು ಕಡಿಮೆ ಮಾಡಿರುವುದನ್ನು ಯಾದೃಚ್ಛಿಕ ನಿಯಂತ್ರಿತ ಪ್ರಯೋಗಗಳು ತೋರಿಸಿಕೊಟ್ಟಿವೆ.[೯೩]

ಹೀಗೆ ಮಾಡುವುದರಿಂದ ಹಲವು ಕಾರ್ಯತಃ, ಸಾಂಸ್ಕೃತಿಕ ಮತ್ತು ನಿರ್ದಿಷ್ಟ ಮನೋಭಾವನೆಗಳ ಸಮಸ್ಯೆಗಳು ಎದುರಾದರೂ, HIV ಸೋಂಕಿನಿಂದ ಜರ್ಜರಿತವಾಗಿರುವ ಅನೇಕ ದೇಶಗಳಲ್ಲಿ ಈ ವಿಧಾನವನ್ನು ಕ್ರಿಯಾಶೀಲವಾಗಿ ಪ್ರೋತ್ಸಾಹಿಸುವ ನಿರೀಕ್ಷೆಯಿದೆ. ಆದಾಗ್ಯೂ, ಬಡತನದಲ್ಲಿರುವ ಮಂದಿಗೆ ಉಚಿತವಾಗಿ ಕಾಂಡೊಮ್‌ ಹಂಚಿಕೆ ಸೇರಿದಂತೆ ಕಾಂಡೊಮ್‌ ಬಳಕೆಯನ್ನು ಪ್ರೋತ್ಸಾಹಿಸುವ ಯೋಜನೆಗಳಿವೆ. ಅಫ್ರಿಕಾದ ಉಪ-ಸಹರಾದಲ್ಲಿ HIV ಸೋಂಕಿನ ಪ್ರಮಾಣವನ್ನು ಇಳಿಸುವ ನಿಟ್ಟಿನಲ್ಲಿ ಸುನತಿಗೆ ಹೋಲಿಸಿದಲ್ಲಿ ಕಾಂಡೊಮ್ ಬಳಕೆ 95 ಪಟ್ಟಿನಷ್ಟು ಬೆಲೆ ಪರಿಣಾಮಕಾರಿಯೆಂದು ಅಂದಾಜು ಮಾಡಲಾಗಿದೆ. [೯೪]

ಈ ನಡುವೆ, ಸುನತಿ ಮಾಡಿಸಿಕೊಂಡ ಪುರುಷರ ನಡುವೆ ಪರಸ್ಪರ ಅರಿವಿನ ಕೊರತೆ ಹೆಚ್ಚು ಅಪಾಯಕಾರಿ-ನಡತೆಗೆ ಎಡೆ ಮಾಡಿಕೊಡಬಹುದು ಎಂದು ಕೆಲವು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ, ಹೀಗಾದಲ್ಲಿ ಏಡ್ಸ್‌ ನಿಯಂತ್ರಣಕ್ಕಾಗಿ ಕೈಗೊಂಡ ಕ್ರಮಗಳು ವ್ಯರ್ಥವಾಗಬಹುದು ಮತ್ತು ಅದರ ಪರಿಣಾಮಗಳು ಇಲ್ಲದಾಗಬಹುದು. [೯೫] ಆದಾಗ್ಯೂ, ಹೆಚ್ಚಾಗಿರುವ HIV ಅಪಾಯಕಾರಿ ನಡತೆಯೊಂದಿಗೆ ವಯಸ್ಕ ಪುರುಷ ಸುನತಿಯು ಸೇರಿಕೊಂಡಿಲ್ಲವೆಂದು ಒಂದು ಯಾದೃಚ್ಛಿಕ ನಿಯಂತ್ರಿತ ಪ್ರಯೋಗ ಹೇಳಿದೆ.

ಸೋಂಕಿತ ದೇಹದ ದ್ರವಗಳಿಗೆ ಒಡ್ಡುವಿಕೆ
ಕಲಬೆರಕೆ ರಕ್ತದ ಸಂಪರ್ಕಕ್ಕೆ ಬರದ ರೀತಿಯಲ್ಲಿ ಆರೋಗ್ಯ ಕಾರ್ಯಕರ್ತರು ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದರ ಮೂಲಕ HIV ಸೋಂಕಿಗೆ ತುತ್ತಾಗುವುದನ್ನು ಕಡಿಮೆಗೊಳಿಸಲು ಸಾಧ್ಯ. ಕೈಗವಸುಗಳು, ಮುಖ ಮುಸುಕುಗಳು, ರಕ್ಷಣಾತ್ಮಕ ಕನ್ನಡಕ ಅಥವಾ ಫಲಕಗಳು, ಮತ್ತು ರಕ್ತಜನಕ ರೋಗಕಾರಕಗಳಿಂದ ಚರ್ಮ ಅಥವಾ ಲೋಳೆ ಪೊರೆಗಳನ್ನು ಕಾಪಾಡುವ ನಿಲುವಂಗಿಗಳು ಅಥವಾ ಮುಂಗವಚ ಇತ್ಯಾದಿ ತಡೆಗಳು ಮುನ್ನೆಚ್ಚರಿಕೆ ಕ್ರಮಗಳಲ್ಲಿ ಸೇರಿವೆ. ಕಲಬೆರಕೆ ರಕ್ತ ಅಥವಾ ದೇಹದ ಇತರೆ ದ್ರವಗಳ ಸಂಪರ್ಕಕ್ಕೆ ಒಳಗಾದ ತಕ್ಷಣ ಆಗಿಂದಾಗ್ಗೆ ಮತ್ತು ಸಂಪೂರ್ಣವಾಗಿ ಚರ್ಮವನ್ನು ಶುಚಿಗೊಳಿಸುವುದರಿಂದ ಸೋಂಕು ತಗುಲುವ ಸಾಧ್ಯತೆಗಳನ್ನು ಕಡಿಮೆ ಮಾಡಬಹುದು. ಅಂತಿಮವಾಗಿ, ಸೂಜಿ ಆಕಾರದ ಕಲಬೆರಕೆಗೊಂಡ ವಸ್ತುಗಳು ತಾಗಿ ಗಾಯಗೊಳ್ಳದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಸೂಜಿ, ಚಿಕ್ಕಚಾಕು ಮತ್ತು ಗಾಜಿನ ವಸ್ತುಗಳನ್ನು ಎಚ್ಚರಿಕೆಯಿಂದ ವಿಸರ್ಜಿಸಬೇಕು.[೯೭]

ಅಭಿವೃದ್ಧಿ ಹೊಂದಿದ ದೇಶಗಳಲ್ಲಿ HIV ಹರಡುವಿಕೆಗೆ ಔಷಧಗಳ ಸೇವನೆಯೇ(ಇಂಜೆಕ್ಷನ್ ಮೂಲಕ) ಪ್ರಮುಖ ಕಾರಣವಾಗಿರುವುದರಿಂದ, ಔಷಧಗಳ ದುರಪಯೋಗದಿಂದಾಗುವ ಸೋಂಕನ್ನು ಇಳಿಸುವ ಪ್ರಯತ್ನವಾಗಿ ಅಲ್ಲಿ ಸೂಜಿ-ವಿನಿಮಯ ಕಾರ್ಯಕ್ರಮಗಳಂತಹ ಹಾನಿ ಇಳಿಸುವ ಕಾರ್ಯವಿಧಾನಗಳನ್ನು ಬಳಸಿಕೊಳ್ಳಲಾಗಿದೆ

ತಾಯಿಯಿಂದ ಮಗುವಿಗೆ ಸೋಂಕು ಹರಡುವಿಕೆ (MTCT)
ಪರ್ಯಾಯ ಹಾಲುಣಿಸುವಿಕೆ ಒಪ್ಪತಕ್ಕದ್ದು, ಕಾರ್ಯಸಾಧ್ಯ, ಶಕ್ಯತೆ ಮತ್ತು ಸುರಕ್ಷಿತವೂ ಆಗಿರುವಾಗ HIV-ಸೋಂಕಿತ ತಾಯಂದಿರು ತಮ್ಮ ಶಿಶುವಿಗೆ ಸ್ತನ್ಯಪಾನ ಮಾಡುವುದನ್ನು ತಪ್ಪಿಸಬೇಕು ಎಂದು ಹಾಲಿ ಶಿಫಾರಸುಗಳು ಹೇಳುತ್ತವೆ. ಆದಾಗ್ಯೂ, ಒಂದು ವೇಳೆ ಬೇರೆಯೇ ಸಮಸ್ಯೆ ಆಗಿದ್ದಲ್ಲಿ, ಮಗು ಜನಿಸಿದ ಮೊದಲ ಒಂದು ತಿಂಗಳಲ್ಲಿ ಮಾತ್ರ ಆಕೆ ತನ್ನ ಮಗುವಿಕೆ ಸ್ತನ್ಯಪಾನ ಮಾಡಿಸಬಹುದು ಮತ್ತು ಸಾಧ್ಯವಾದಷ್ಟು ಬೇಗ ಅದನ್ನು ನಿಲ್ಲಿಸಬೇಕು ಎಂದೂ ಅವು ಹೇಳುತ್ತವೆ. ಇದಲ್ಲದೆ ಮಹಿಳೆಯರು ತಮ್ಮದಲ್ಲದ ಮಕ್ಕಳಿಗೂ ಸ್ತನ್ಯಪಾನ ಮಾಡಿಸುವ ಸಾಧ್ಯತೆಗಳಿರುವುದು ಇಲ್ಲಿ ಗಮನಾರ್ಹ;ವೆಟ್‌‌ನರ್ಸ್ ನೋಡಿ.

ಚಿಕಿತ್ಸೆ
HIVಗೆ ಅಥವಾ HIV ಅಥವಾ AIDSನಿಂದ ಗುಣಮುಖರಾಗಲು ಸಾರ್ವಜನಿಕವಾಗಿ ಸದ್ಯಕ್ಕೆ ಯಾವುದೇ ಲಸಿಕೆ ಲಭ್ಯವಿಲ್ಲ. ಎಲ್ಲರಿಗೂ ತಿಳಿದಿರುವ ವಿಧಾನಗಳೆಂದರೆ ವೈರಸ್‌ಗಳ ಸಂಪರ್ಕಕ್ಕೆ ಬರದಂತೆ ಮುನ್ನೆಚ್ಚರಿಕೆ ವಹಿಸುವುದು ಅಥವಾ ಇದರಲ್ಲಿ ವಿಫಲರಾದಲ್ಲಿ HIV ಸೋಂಕಿಗೊಳಗಾದ ತಕ್ಷಣವೇ ನೇರವಾಗಿ ಸೋಂಕಿಗೊಳಗಾದ ನಂತರದ ರೋಗನಿರೋಧಕ ಚಿಕಿತ್ಸೆ(PEP)ಯಾದ ಆಂಟಿರೆಟ್ರೋವೈರಲ್ ಚಿಕಿತ್ಸೆಯನ್ನು ಅನ್ನು ಪಡೆಯುವುದು.[೧೦೦]

PEP ಬಹಳಷ್ಟು ಬೇಡಿಕೆಯಿರುವ ನಾಲ್ಕು ವಾರಗಳ ಔಷಧಿ. ಈ ಔಷಧಿಯ ಸೇವನೆಯಿಂದಾಗಿ ಅಹಿತಕರವೆನಿಸುವ ಅತಿಸಾರ ಭೇದಿ, ಅಸ್ವಸ್ಥತೆ, ವಾಕರಿಕೆ ಮತ್ತು ನಿಶ್ಯಕ್ತಿ ಇತ್ಯಾದಿ ಕೆಟ್ಟ ಪರಿಣಾಮಗಳು ಕಾಣಿಸಿಕೊಳ್ಳಬಹುದು

ಆಂಟಿವೈರಲ್ ತೆರಪಿ
HIV ಸೋಂಕಿಗೆ ಈಗಿರುವ ಚಿಕಿತ್ಸೆಯು ಹೈಲಿ ಆಕ್ಟಿವ್ ಆಂಟಿರೆಟ್ರೋವೈರಲ್ ತೆರಪಿ, ಅಥವಾ HAARTಅನ್ನು ಒಳಗೊಂಡಿದೆ.[೧೦೨]


HIV-ಸೋಂಕಿತ ಅನೇಕ ವ್ಯಕ್ತಿಗಳಿಗೆ ಈ ಚಿಕಿತ್ಸೆಯಿಂದ ಬಹಳಷ್ಟು ಪ್ರಯೋಜನವಾಗಿದೆ, 1996ರಲ್ಲಿ ಪ್ರೊಟೀನ್ ನಿರೋಧಕಗಳು-ಆಧಾರಿತ HAART ಸಿಗಲು ಪ್ರಾರಂಭವಾದಾಗ ಈ ಚಿಕಿತ್ಸೆಯನ್ನು ಪರಿಚಯಿಸಲಾಯಿತು. [೧೨] ಈಗಿನ ಅತ್ಯುತ್ತಮ HAART ಆಯ್ಕೆಗಳು, ಆಂಟಿರೆಟ್ರೋವೈರಲ್ ಪ್ರತಿನಿಧಿಗಳ ಎರಡು ವಿಧಗಳು, ಅಥವಾ "ವರ್ಗ"ಗಳಿಗೆ ಸೇರಿದ ಕನಿಷ್ಟ ಪಕ್ಷ ಮೂರು ಔಷಧಗಳನ್ನು ಒಳಗೊಂಡ ಸಂಯೋಜನೆಗಳಿಂದ(ಅಥವಾ "ಕಾಕ್‌ಟೇಲುಗಳು") ರಚಿತವಾಗಿದೆ. ಈ ವಿಶಿಷ್ಟ ಕ್ರಮವು ಎರಡು ನ್ಯೂಕ್ಲಿಯೋಸೈಡ್ ಅನಲಾಗ್ ರಿವರ್ಸ್ ಟ್ರಾನ್ಸ್‌ಕ್ರಿಪ್ಟೇಸ್ ಇನ್‌ಹಿಬಟರ್‌ಗಳು ಮತ್ತು (NARTIs or NRTIs)ಪ್ರೊಟೀನ್ ನಿರೋಧಕ ಅಥವಾ ನಾನ್-ನ್ಯೂಕ್ಲಿಯೋಸೈಡ್ ಅನಲಾಗ್ ರಿವರ್ಸ್ ಟ್ರಾನ್ಸ್‌ಕ್ರಿಪ್ಟೇಸ್ ಇನ್‌ಹಿಬಟರ್‌ (NNRTI)ಗಳನ್ನು ಒಳಗೊಂಡಿದೆ. ಏಕೆಂದರೆ HIV ರೋಗದ ಪ್ರಗತಿ ವಯಸ್ಕರಿಗಿಂತ ಬೇಗನೆ ಮಕ್ಕಳಲ್ಲಿ ಆಗುತ್ತದೆ, ಅಲ್ಲದೆ ರೋಗದ ಉಲ್ಬಣದಿಂದಾಗುವ ಅಪಾಯವನ್ನು ಪ್ರಯೋಗಾಲಯದ ಮಾನದಂಡಗಳು ಮುಂಚಿತವಾಗಿಯೇ ಹೇಳುವಷ್ಟು ಪೂರ್ಣ ಸಮರ್ಥವಾಗಿಲ್ಲ. ವಯಸ್ಕರಿಗೆ ಹೋಲಿಸಿದಲ್ಲಿ ನಿರ್ದಿಷ್ಟವಾಗಿ ಶಿಶುಗಳಿಗೆ ಮತ್ತು ಮಕ್ಕಳಿಗೆ ಚಿಕಿತ್ಸಾ ಸಲಹೆಗಳು ಹೆಚ್ಚು ಆಕ್ರಮಣಶೀಲವಾಗಿರುತ್ತವೆ.[೧೦೩]

HAART ಲಭ್ಯವಿರುವ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ, ವೈದ್ಯರು ಚಿಕಿತ್ಸೆ ಆರಂಭಿಸಲು ನಿರ್ಧರಿಸುವ ಮೊದಲು ರೋಗಿಯಲ್ಲಿ ವೈರಸ್‌ಗಳ ತುಂಬುವಿಕೆ, CD4 ಇಳಿತ ಮತ್ತು ರೋಗಿಯ ಸಿದ್ಧತೆಯನ್ನು ಅಳೆಯುತ್ತಾರೆ.[೧೦೪]

ರೋಗಿಯ ಜೀವನ ಗುಣಮಟ್ಟ ಸುಧಾರಣೆ, ಸಮಸ್ಯೆಗಳ ಇಳಿಕೆ ಮತ್ತು HIV ವಿರೆಮಿಯಾದ ಮಿತಿಯನ್ನು ಪತ್ತೆಯಾದಾಗ ಇದ್ದಾಗಿನಿಂದ ಕೆಳಮಟ್ಟಕ್ಕೆ ತರುವುದು HAARTನ ಪ್ರಮುಖ ಗುರಿಗಳಲ್ಲಿ ಸೇರಿವೆ. ಆದರೆ ಇದು HIV ರೋಗಿಯನ್ನು ಸಂಪೂರ್ಣ ಗುಣಪಡಿಸುವುದಿಲ್ಲ, ಮಾತ್ರವಲ್ಲದೆ HIV ಮರಳದು ಎಂಬ ಖಾತ್ರಿಯನ್ನೂ ಇದು ನೀಡುವುದಿಲ್ಲ. HAART ಪ್ರತಿಭಟನಶೀಲವಾಗಿದ್ದಾಗ ರಕ್ತದಲ್ಲಿ ತುಂಬಿಕೊಂಡಿರುವ HIVಗೆ ಚಿಕಿತ್ಸೆ ನಿಲ್ಲುವ ಸಾಧ್ಯತೆಗಳೂ ಇವೆ.[೧೦೫][೧೦೬] ಅಲ್ಲದೆ, HAART ಚಿಕಿತ್ಸೆ ಬಳಸಿಕೊಂಡು HIV ಸೋಂಕಿನ ಸಂಪೂರ್ಣ ಹೊರಬರಬೇಕಾದರೆ ಒಬ್ಬ ವ್ಯಕ್ತಿಗೆ ಆತನ ಜೀವಿತಾವಧಿ ಸಾಕಾಗದು.[೧೦೭]




ಹೀಗಿದ್ದೂ, ಅನೇಕ HIV-ಸೋಂಕಿತ ವ್ಯಕ್ತಿಗಳು ತಮ್ಮ ಸಾಮಾನ್ಯ ಆರೋಗ್ಯ ಮತ್ತು ಜೀವನದ ಗುಣಮಟ್ಟದಲ್ಲಿ ಗಮನಾರ್ಹ ಸುಧಾರಣೆಗಳನ್ನು ಕಂಡಿದ್ದಾರೆ, ಇದರಿಂದಾಗಿ HIV-ಸಂಬಂಧಿತ ರೋಗ ಹರಡಿಕೆ ಮತ್ತು ಮರಣಗಳಲ್ಲಿ ಗಮನಾರ್ಹ ಇಳಿಕೆಯಾಗಿದೆ.[೧೦೮][೧೦೯][೧೧೦]

HAART ಚಿಕಿತ್ಸೆ ಪಡೆಯದೇ ಇದ್ದಲ್ಲಿ, HIV ಸೋಂಕು ಒಂಭತ್ತರಿಂದ ಹತ್ತು ವರ್ಷಗಳ ನಡುವಣ ಅವಧಿಯಲ್ಲಿ AIDSಗೆ ಪರಿವರ್ತನೆಯಾಗುತ್ತದೆ ಮತ್ತು ಆ ನಂತರ ಸಾಮಾನ್ಯ ಜೀವಿತಾವಧಿ 9.2 ತಿಂಗಳುಗಳು ಮಾತ್ರ.[೩೫] AIDS ರೋಗಿಗಳ ಜೀವಿತಾವಧಿಯನ್ನು 4ರಿಂದ 12ವರ್ಷದವರೆಗೆ ಹೆಚ್ಚಿಸುವ ನಿಟ್ಟಿನಲ್ಲಿ HAART ಚಿಂತನೆ ನಡೆಸಿದೆ.[೧೧೧][೧೧೨]




ಕೆಲವು ರೋಗಿಗಳಲ್ಲಿ, ಆ ಪೈಕಿ ಶೇಕಡ 50ಕ್ಕಿಂತಲೂ ಹೆಚ್ಚು ರೋಗಿಗಳಲ್ಲಿ HAARTನ ಸಾಧನೆ ಅತ್ಯುತ್ತಮವಾಗಿಲ್ಲ. ಔಷಧಗಳ ಅಸಹನೆ/ಕೆಟ್ಟ ಪರಿಣಾಮಗಳು, ಪೂರ್ವ ಪರಿಣಾಮಕಾರಿಯಲ್ಲದ ಆಂಟಿರೆಟ್ರೋವೈರಲ್ ತೆರಪಿ ಮತ್ತು ಸೋಂಕು ತಗುಲಿದ HIVಯ ಎಳೆಯು ಔಷಧಕ್ಕೆ ನಿರೋಧಕವಾಗಿ ಕಾರ್ಯನಿರ್ವಹಿಸಿದ್ದು ಇದಕ್ಕೆ ಕಾರಣಗಳಾಗಿವೆ. ಕೆಲವು ರೋಗಿಗಳಿಗೆ HAART ಚಿಕಿತ್ಸೆ ಏಕೆ ಪ್ರಯೋಜನವಾಗಿಲ್ಲವೆಂಬುದಕ್ಕೆ ರೋಗಿಗಳ ನಿಷ್ಠೆ ಮತ್ತು ದೃಢ ನಿರ್ಧಾರದ ಕೊರತೆಯೂ ಪ್ರಮುಖ ಕಾರಣ. [೧೧೩]

ನಿಷ್ಠೆ ಮತ್ತು ದೃಢ ನಿರ್ಧಾರದ ಕೊರತೆಗೆ ಬೇರೆ ಬೇರೆ ಕಾರಣಗಳಿವೆ.

ವೈದ್ಯಕೀಯ ಉಪಚಾರದ ಅಲಭ್ಯತೆ, ಸಾಮಾಜಿಕ ಬೆಂಬಲದ ಕೊರತೆ, ಮಾನಸಿಕ ಕಾಯಿಲೆ ಮತ್ತು ಮಾದಕ ವ್ಯಸನ ಮುಂತಾದ ಪ್ರಮುಖ ಮಾನಸಿಕ ಸಮಸ್ಯೆಗಳು ಕೂಡ ಇದರಲ್ಲಿ ಸೇರಿವೆ. HAARTನ ಕ್ರಮಗಳು ಸಂಕೀರ್ಣವಾಗಿದ್ದು, ಆಗಿಂದಾಗ್ಗೆ ಸಾಕಷ್ಟು ಸಂಖ್ಯೆಯಲ್ಲಿ ಮಾತ್ರೆಗಳನ್ನು ಸೇವಿಸಬೇಕಾಗಿರುವುದರಿಂದ ಅದನ್ನು ಅನುಸರಿಸಲು ಕಷ್ಟ ಸಾಧ್ಯ.[೧೧೪][೧೧೫][೧೧೬] ಇದಲ್ಲದೆ ಔಷಧಗಳ ಕೆಟ್ಟ ಪರಿಣಾಮಗಳು HAARTನಿಂದ ದೂರವಾಗಲು ಸೋಂಕಿತರನ್ನು ಪ್ರೇರೇಪಿಸಬಹುದು, ಅವುಗಳೆಂದರೆ ಲಿಪೊಡಿಸ್ಟ್ರೋಫಿ, ಡಿಸ್ಲಿಪಿಡೆಮಿಯಾ, ಅತಿಸಾರ ಭೇದಿ, ಇನ್‌ಸುಲಿನ್ ನಿರೋಧಕ ಶಕ್ತಿ, ಹೃದಯನಾಳೀಯ ಅಪಾಯಗಳಲ್ಲಿ ಹೆಚ್ಚಳ ಮತ್ತು ಜನನ ದೋಷಗಳು.[೧೧೭]


ಆಂಟಿ-ರೆಟ್ರೋವೈರಲ್ ಔಷಧಗಳು ದುಬಾರಿಯಾಗಿವೆ, ಮತ್ತು ಜಗತ್ತಿನಲ್ಲಿರುವ ಹೆಚ್ಚಿನ ಸೋಂಕಿತರಿಗೆ HIV ಮತ್ತು AIDS ಚಿಕಿತ್ಸೆಗಳು ಮತ್ತು ಔಷಧಗಳು ಸುಲಭವಾಗಿ ದೊರಕುತ್ತಿಲ್ಲ

ಪ್ರಾಯೋಗಿಕ ಮತ್ತು ಪ್ರಸ್ತಾಪಿತ ಚಿಕಿತ್ಸೆಗಳು
ಸರ್ವವ್ಯಾಪಿಯಾದ ಈ ರೋಗವನ್ನು ಲಸಿಕೆ ಮಾತ್ರ ತಡೆಯಬಲ್ಲದು ಎಂದು ತರ್ಕಿಸಲಾಗಿದೆ, ಏಕೆಂದರೆ ಲಸಿಕೆಯನ್ನು ಕಡಿಮೆ ವೆಚ್ಚದಲ್ಲಿ ತಯಾರಿಸಬಹುದು, ಅಭಿವೃದ್ಧಿಶೀಲ ದೇಶಗಳಿಗೆ ಇದು ದೊಡ್ಡ ಹೊರೆಯಾಗದು ಮತ್ತು ನಿತ್ಯ ಚಿಕಿತ್ಸೆಗಳ ಅವಶ್ಯಕತೆಯೂ ಇಲ್ಲ. ಆದಾಗ್ಯೂ, 30 ವರ್ಷಗಳ ಸಂಶೋಧನೆಗಳ ನಂತರವೂ HIV-1ಗೆ ಲಸಿಕೆ ಕಂಡು ಹಿಡಿಯಲು ಸಾಧ್ಯವಾಗಿಲ್ಲ.[೧೧೮]


ಪ್ರಸ್ತುತ ಬಳಕೆಯಲ್ಲಿರುವ ಔಷಧಗಳ ಕೆಟ್ಟ ಪರಿಣಾಮಗಳ ಇಳಿಕೆ, ರೋಗಿಗಳು ನಿಷ್ಠರಾಗಿರುವ ನಿಟ್ಟಿನಲ್ಲಿ ಔಷಧಗಳ ಬಳಕೆ ಕ್ರಮಗಳ ಸರಳೀಕರಣ, ಮತ್ತು ಔಷಧಗಳ ನಿರೋಧಕ ಶಕ್ತಿಯನ್ನು ನಿರ್ವಹಿಸಲು ಅತ್ಯುತ್ತಮ ಕ್ರಮಾನುಗತಿಯ ನಿರ್ಣಯ ಇತ್ಯಾದಿಗಳ ಸುಧಾರಣೆಗಾಗಿ ಸಂಶೋಧನೆಗಳು ನಡೆಯುತ್ತಿವೆ.


HIV ಸೋಂಕಿತರಿಗೆ ಅಥವಾ AIDS ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಅವಕಾಶವಾದಿ ಸೋಂಕುಗಳು ಅಂಟಿಕೊಳ್ಳದಂತೆ ನಿಗಾವಹಿಸುವುದೇ ಹೆಚ್ಚು ಪ್ರಯೋಜನಕಾರಿ ಎಂಬುದನ್ನು ಅನೇಕ ಅಧ್ಯಯನಗಳು ಸಾಬೀತುಪಡಿಸಿವೆ. ಈ ವೈರಸ್‌ಗಳಿಂದ ಸೋಂಕಿತರಲ್ಲದ ರೋಗಿಗಳಿಗೆ ಮತ್ತು ಸೋಂಕಿಗೊಳಗಾಗುವ ಅಪಾಯದಲ್ಲಿರುವವರಿಗೆ ಹೆಪಟೈಟಿಸ್ A ಮತ್ತು ಬ ಚುಚ್ಚುಮದ್ದು ತೆಗೆದುಕೊಳ್ಳಲು ಸಲಹೆ ನೀಡಲಾಗಿದೆ. [೧೧೯]

ವಾಸ್ತವಿಕವಾಗಿ ನಿರೋಧಕ ಶಕ್ತಿಯನ್ನು ಕಳೆದುಕೊಂಡ ರೋಗಿಗಳು ನ್ಯುಮೊಸಿಸ್ಟಿಸ್ ಜಿರೊವೆಕಿ ನ್ಯುಮೋನಿಯಾ (PCP)ಕ್ಕಾಗಿ ರೋಗ ನಿರೋಧಕ ತೆರಪಿ ಪಡೆಯಲು ಕೂಡ ಸಲಹೆಯಿದೆ, ಮತ್ತು ಟೊಕ್ಷೊಪ್ಲಸ್ಮೊಸಿಸ್ ಮತ್ತು ಕ್ರಿಪ್ಟೋಕಾಕಸ್ ಮೆನಿಂಜಿಟಿಸ್ ಹೊಂದಿರುವ ರೋಗಿಗಳಿಗೂ ರೋಗ ನಿರೋಧಕ ತೆರಪಿ ಪ್ರಯೋಜನವಾಗಬಹುದು. [೧೦೧]





ಸಂಶೋಧಕರು ಎಬ್‌ಜೈಮ್‌‌ ಅನ್ನು ಕಂಡು ಹಿಡಿದಿದ್ದು, ಅದು ಪ್ರೊಟೀನ್ gp120 CD4 ಸಂಧಿಸುವ ಸ್ಥಳಗಳನ್ನು ನಾಶಪಡಿಸುವ ಸಾಮಾರ್ಥ್ಯವನ್ನು ಹೊಂದಿದೆ. ಈ ಪ್ರೊಟೀನ್ ಎಲ್ಲ HIV ಭೇದಗಳಿಗೂ ಸಾಮಾನ್ಯವಾಗಿದ್ದು, B ಲಿಂಫೋಸೈಟ್ಸ್‌ಗಳು ಕೂಡಿಕೊಳ್ಳುವ ಬಿಂದುವಾಗಿದೆ ಮತ್ತು ಆ ನಂತರ ನಿರೋಧಕ ವ್ಯವಸ್ಥೆಯನ್ನು ಹೊಂದಾಣಿಸುತ್ತದೆ.[೧೨೦]

ಜರ್ಮನಿಯ ಬರ್ಲಿನ್‌ನಲ್ಲಿ HIV ಸೋಂಕಿತ 42-ವರ್ಷ ವಯಸ್ಸಿನ ಲುಕೆಮಿಯಾ ರೋಗಿಯೊಬ್ಬರಿಗೆ ಪ್ರಾಯೋಗಿಕವಾಗಿ CCR5 ಜೀವಕೋಶದ-ಮೇಲ್ಮೈ ಗ್ರಾಹಿಯ ಸಾಮಾನ್ಯವಲ್ಲದ ಸ್ವಾಭಾವಿಕ ಪ್ರಭೇದ ಜೀವಕೋಶಗಳಿರುವ ಅಸ್ಥಿ ಮಜ್ಜೆಯ ಕಸಿ ಮಾಡಲಾಯಿತು.

ಈ CCR5-Δ32 ಪ್ರಭೇದದ ಜೀವಕೋಶಗಳೊಂದಿಗೆ ಜನಿಸಿದ ಜನರಲ್ಲಿ ಕೆಲವು ಜೀವಕೋಶಗಳು ಇರುತ್ತವೆ, ಈ ಜೀವಕೋಶಗಳು HIV ಎಳೆಗೆ ನಿರೋಧಕ ಶಕ್ತಿಯಾಗಿ ಕಾರ್ಯ ನಿರ್ವಹಿಸುತ್ತವೆ. ಕಸಿ ಮಾಡಿದ ಸುಮಾರು ಎರಡು ವರ್ಷಗಳ ನಂತರ, ಮತ್ತು ಆಂಟಿರೆಟ್ರೋವೈರಲ್ ಔಷಧಗಳ ಸೇವನೆಯನ್ನೂ ನಿಲ್ಲಿಸಿದ ಬಳಿಕವೂ, ರೋಗಿಯ ರಕ್ತದಲ್ಲಿ HIV ಪತ್ತೆಯಾಗಲಿಲ್ಲ

ಪರ್ಯಾಯ ಔಷಧ
ಏಡ್ಸ್‌ನ ರೋಗ-ಲಕ್ಷಣಗಳನ್ನು ಗುಣಪಡಿಸಲು ಅಥವಾ ರೋಗದ ಓಟಕ್ಕೆ ಕಡಿವಾಣ ಹಾಕಲು ಪರ್ಯಾಯ ಔಷಧದ ವಿವಿಧ ಪ್ರಕಾರಗಳನ್ನು ಬಳಸಲಾಗುತ್ತಿದೆ. [೧೨೨]

ರೋಗದ ಹರಡುವಿಕೆ ಅಥವಾ ಸಾವಿನ ಪ್ರಮಾಣದ ಮೇಲೆ ಪರ್ಯಾಯ ಔಷಧ ತೆರಪಿಗಳು ವಿಶೇಷ ಪರಿಣಾಮ ಬೀರಿಲ್ಲವೆಂಬುದನ್ನು ಅಧ್ಯಯನಗಳು ಸೂಚಿಸುತ್ತವೆ, ಆದರೆ AIDS ಸೋಂಕಿತರ ಜೀವನದ ಗುಣಮಟ್ಟದಲ್ಲಿ ಈ ತೆರಪಿಗಳು ಸುಧಾರಣೆ ತರಬಹುದು. ಈ ತೆರಪಿಗಳಿಂದ ಪ್ರಮುಖವಾಗಿ ಮಾನಸಿಕ ಪ್ರಯೋಜನಗಳೇ ಹೆಚ್ಚು ಎಂದು ತಿಳಿದು ಬಂದಿದೆ.[೧೨೨]


ಕೆಲವು ರೋಗ-ಲಕ್ಷಣಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಸೂಜಿ ಜಿಕಿತ್ಸೆ ನೀಡಲಾಗಿದೆಯಾದರೂ, ಅದು ಯಶಸ್ಸು ಕಂಡಿಲ್ಲ, ಮತ್ತು HIV ಸೋಂಕಿನಿಂದ ಗುಣಮುಖಗೊಳಿಸಲು ಅದಕ್ಕೆ ಸಾಧ್ಯವಾಗಿಲ್ಲ. [೧೨೩] ಮೂಲಿಕೆ (ಹರ್ಬಲ್) ಔಷಧಗಳ ಪರಿಣಾಮವನ್ನು ಪರೀಕ್ಷಿಸುವ ಸಲುವಾಗಿ ಹಲವು ಯಾದೃಚ್ಛಿಕ ವೈದ್ಯಕೀಯ ಪ್ರಯೋಗಗಳನ್ನು ಕೈಗೊಂಡಾಗ ಈ ಮೂಲಿಕೆಗಳು ರೋಗದ ಪ್ರಗತಿ ಮೇಲೆ ವಿಶೇಷ ಪರಿಣಾಮ ಬೀರಿದ್ದಕ್ಕೆ ಯಾವುದೇ ನಿದರ್ಶನಗಳಿಲ್ಲ, ಬದಲಾಗಿ ಕೆಟ್ಟ-ಪರಿಣಾಮಗಳನ್ನೇ ಹೆಚ್ಚಿಸಿವೆ ಎನ್ನಬಹುದು.[೧೨೪]

ಸಾಕಷ್ಟು ಪೌಷ್ಟಿಕ ಆಹಾರಗಳನ್ನು ತೆಗೆದುಕೊಳ್ಳುವ HIV- ಸೋಂಕಿತ ವಯಸ್ಕರಿಗೆ ಬಹು ವಿಟಮಿನ್‌ಗಳನ್ನು ನೀಡಿದರೂ ರೋಗದ ಹರಡುವಿಕೆ ಮತ್ತು ಸಾವಿನ ಪ್ರಮಾಣದಲ್ಲಿ ಯಾವುದೇ ವಿಶೇಷ ಬದಲಾವಣೆಗಳಾಗಿಲ್ಲ. ನಿರೋಧಕ ಶಕ್ತಿ ಮತ್ತು ಪೌಷ್ಟಿಕವಾಗಿರುವ ಗರ್ಭಿಣಿ ಮತ್ತು ಹಾಲೂಡಿಸುವ ಮಹಿಳೆ ಮೇಲೆ ನಡೆಸಿದ ದೊಡ್ಡ ಪ್ರಮಾಣದ ತಂಜಾನಿಯನ್ ಪ್ರಯೋಗವು, ತಾಯಿ ಮತ್ತು ಮಕ್ಕಳಿಗೆ ಇಬ್ಬರಿಗೂ ದಿನನಿತ್ಯ ಬಹು ವಿಟಮಿನ್ ಕೊಡುವುದರಿಂದ ಅನೇಕ ಪ್ರಯೋಜನಗಳಿವೆ ಎಂಬುದನ್ನು ತೋರಿಸಿದೆ. [೧೨೫]

HIV-ಸೋಂಕಿತರು RDA ಹಂತಗಳಲ್ಲಿ ಸಣ್ಣ ಪ್ರಮಾಣದಲ್ಲಿ ಪೌಷ್ಟಿಕಾಂಶಗಳಿರುವ ಆಹಾರಗಳನ್ನು ತೆಗೆದುಕೊಳ್ಳಲು ವಿಶ್ವ ಆರೋಗ್ಯ ಸಂಸ್ಥೆಯು ಶಿಫಾರಸು ಮಾಡಿದೆ.[೧೨೬]

ವಿಟಮಿನ್ A ನೀಡುವುದರಿಂದಾಗಿ ಮಕ್ಕಳಲ್ಲಿ ಸಾವಿನ ಪ್ರಮಾಣ ಕಡಿಮೆಯಾಗಿ, ಸುಧಾರಿಸಿರುವುದಕ್ಕೆ ಕೆಲವು ನಿದರ್ಶನಗಳಿವೆ.[೧೨೫] ಸೆಲೆನಿಯಮ್‌ಅನ್ನು ನಿತ್ಯ ಸೇವಿಸುವುದರಿಂದ HIV ವೈರಸ್‌ಗಳನ್ನು ತಗ್ಗಿಸಬಹುದು, ಅಲ್ಲದೆ ಜೊತೆಗೆ CD4 ಸಂಖ್ಯೆಗಳಲ್ಲೂ ಸುಧಾರಣೆಯಾಗುತ್ತದೆ.

ಪ್ರಮಾಣಿತ ಆಂಟಿವೈರಲ್ ಚಿಕಿತ್ಸೆಯ ಜೊತೆಗೆ ಸಹಾಯಕ ತೆರಪಿಯಾಗಿ ಸೆಲೆನಿಯಮ್‌ಅನ್ನು ಸೇವಿಸಬಹುದು

ಮುನ್ನರಿವು
HIV ಸೋಂಕುಗೊಂಡ ನಂತರ ಚಿಕಿತ್ಸೆಯಿಲ್ಲದೆ ಕನಿಷ್ಟ ಬದುಕುವ ನಡುವಣ ಅವಧಿಯು 9ರಿಂದ 11 ವರ್ಷಗಳಿರಬಹುದು ಎಂದು ಅಂದಾಜು ಮಾಡಲಾಗಿದೆ, ಇದು HIVಯ ಉಪ ವಿಧ,[೭] ಮತ್ತು ಸೋಂಕು ಪ್ರಕರಣವನ್ನು ಅವಲಂಬಿಸಿ 6 ಮತ್ತು 19 ತಿಂಗಳ ಚಿಕಿತ್ಸೆ ಲಭ್ಯವಿಲ್ಲದಿರುವೆಡೆಗಳಲ್ಲಿ AIDS ಪತ್ತೆಯಾದ ಬಳಿಕ ಸೋಂಕಿತ ವ್ಯಕ್ತಿ ಬದುಕುವ ನಡುವಣ ಪ್ರಮಾಣವನ್ನು ಅವಲಂಬಿಸಿದೆ. [೧೨೮]


ಚಿಕಿತ್ಸೆ ಲಭ್ಯವಿರುವ ಎಲ್ಲ ಪ್ರದೇಶಗಳಲ್ಲಿ HIV ಸೋಂಕಿಗೆ ಮತ್ತು AIDSಗೆ HAART ತೆರಪಿಯೇ ಪರಿಣಾಮಕಾರಿ ಚಿಕಿತ್ಸೆಯಾಗಿದ್ದು, ಇದು ಈ ರೋಗದಿಂದ ಬರುವ ಸಾವಿನ ಪ್ರಮಾಣವನ್ನು 80%ರಷ್ಟು ತಗ್ಗಿಸಿದೆ, ಮತ್ತು ಹೊಸತಾಗಿ ಪತ್ತೆಯಾದ HIV-ಸೋಂಕಿತ ವ್ಯಕ್ತಿಯ ಜೀವಿತಾವಧಿ ನಿರೀಕ್ಷೆಯನ್ನು ಸುಮಾರು 20 ವರ್ಷಗಳಷ್ಟು ಹೆಚ್ಚಿಸಿದೆ. [೧೨೯]

ಒಂದೆಡೆ ಹೊಸ ಚಿಕಿತ್ಸೆಗಳ ಅಭಿವೃದ್ಧಿ ಮುಂದುವರಿದಿದ್ದರೆ, ಇನ್ನೊಂದೆಡೆ ಈ ಚಿಕಿತ್ಸೆಗಳಿಗೆ HIVಯು ನಿರೋಧಕ ಶಕ್ತಿಯಾಗಿ ವಿಕಸಿಸುವುದೂ ಮುಂದುವರಿದಿದೆ. ಆಂಟಿರೆಟ್ರೋವೈರಲ್ ತೆರಪಿ ಚಿಕಿತ್ಸೆ ಪಡೆಯದಿದ್ದರೆ ಒಂದು ವರ್ಷದೊಳಗೆ ಸಾವು ಸಂಭವಿಸುತ್ತದೆ.[೩೫] ನಿರೋಧಕ ವ್ಯವಸ್ಥೆಯ ವೈಫಲ್ಯದಿಂದಾಗಿ ಕಾಣಿಸಿಕೊಳ್ಳುವ ಗಡ್ಡೆಗಳು(ಕ್ಯಾನ್ಸರ್) ಅಥವಾ ಅವಕಾಶವಾದಿ ಸೋಂಕುಗಳಿಂದಾಗಿ ಹೆಚ್ಚಿನ ರೋಗಿಗಳು ಸಾವನ್ನಪ್ಪುತ್ತಾರೆ. [೧೩೦]

ರೋಗದ ಪ್ರಗತಿ ಕುರಿತಾದ ವೈದ್ಯಕೀಯ ಪ್ರಮಾಣದಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ ಸಾಕಷ್ಟು ವ್ಯತ್ಯಾಸಗಳಾಗಬಹುದು, ಏಕೆಂದರೆ ಸೋಂಕಿತನ ಮೇಲೆ ರೋಗದ ಪ್ರಭಾವ, ನಿರೋಧಕ ಕ್ರಿಯೆ[೩೬][೩೭][೪೦] ಆರೋಗ್ಯಪಾಲನೆ, ಸಹ-ಸೋಂಕುಗಳು[೩೫][೧೩೦] ಮತ್ತು ರೋಗದಲ್ಲಿ ವೈರಸ್‌ನ ನಿರ್ದಿಷ್ಟ ಎಳೆಯ ಪಾಲು ಇತ್ಯಾದಿಗಳು ರೋಗದ ಪ್ರಗತಿ ಮೇಲೆ ಪರಿಣಾಮ ಬೀರುತ್ತವೆ

ಸಾಂಕ್ರಾಮಿಕ ರೋಗಶಾಸ್ತ್ರ
ಸರ್ವವ್ಯಾಪಿಯಾಗಿರುವ AIDSನ್ನು ಹಲವು ಸಾಂಕ್ರಾಮಿಕ ರೋಗಗಳ ಪ್ರತ್ಯೇಕ ಉಪ ವಿಧಗಳಲ್ಲೂ ಕಾಣಲು ಸಾಧ್ಯ; ಏಡ್ಸ್ ಹರಡುವಿಕೆಗೆ ಲೈಂಗಿಕ ಹರಡುವಿಕೆ ಮತ್ತು ಮಗು ಜನನ ಹಾಗೂ ಸ್ತನ್ಯಪಾನದ ವೇಳೆ ತಾಯಿಯಿಂದ ಮಗುವಿಕೆ ಹರಡುವಿಕೆಯು ಪ್ರಮುಖ ಕಾರಣಗಳಾಗಿವೆ.[೬] ಇತ್ತೀಚೆಗೆ ಜಗತ್ತಿನ ಹಲವು ಪ್ರದೇಶಗಳಲ್ಲಿ ಆಂಟಿರೆಟ್ರೋವೈರಲ್ ಚಿಕಿತ್ಸೆ ಮತ್ತು ಪಾಲನೆ ಸುಧಾರಿಸಿದ್ದಾಗ್ಯೂ, AIDS ರೋಗ 2007ರಲ್ಲಿ 2.1 ದಶಲಕ್ಷ (1.9–2.4 ದಶಲಕ್ಷದ ನಡುವೆ) ಜನರನ್ನು ಬಲಿತೆಗೆದುಕೊಂಡಿದೆ, ಈ ಪೈಕಿ 330,000 ಮಂದಿ 15 ವರ್ಷಕ್ಕಿಂತ ಕೆಳಗಿನ ಮಕ್ಕಳಿದ್ದಾರೆ.[೭]

ಜಾಗತಿಕವಾಗಿ, 2007ರ ಹೊತ್ತಿಗೆ 2.5 ದಶಲಕ್ಷ ಮಕ್ಕಳು ಸೇರಿದಂತೆ 33.2 ದಶಲಕ್ಷ ಮಂದಿ HIV ಸೋಂಕಿಗೆ ಒಳಗಾಗಿದ್ದರು.

2007ರ ವೇಳೆಗೆ 420,000 ಮಕ್ಕಳು ಸೇರಿದಂತೆ 2.5 ದಶಲಕ್ಷ (1.8–4.1 ದಶಲಕ್ಷದ ನಡುವೆ) ಮಂದಿಗೆ ಹೊಸತಾಗಿ ಸೊಂಕು ತಗುಲಿರುವುದೆಂದು ಅಂದಾಜು ಮಾಡಲಾಗಿದೆ. [೭]

ಆಫ್ರಿಕಾದ ಉಪ-ಸಹರಾ ಅತ್ಯಂತ ಹೆಚ್ಚು ಸಂಖ್ಯೆಯ ಏಡ್ಸ್ ರೋಗಿಗಳನ್ನು ಹೊಂದಿರುವ ಪ್ರದೇಶ. 2007ರ ಹೊತ್ತಿಗೆ, ಇಲ್ಲಿನ ಜನಸಂಖ್ಯೆಯ 68% ಮಂದಿಗೆ AIDS ರೋಗವಿರುವುದು ಮತ್ತು 76% ಮಂದಿ AIDSನಿಂದಾಗಿ ಸಾವನ್ನಪ್ಪಿರುವ ಬಗ್ಗೆ ಒಂದು ಅಂದಾಜು ಮಾಡಲಾಗಿತ್ತು. ಇದಲ್ಲದೆ ಈ ಪ್ರದೇಶದಲ್ಲಿ 1.7 ದಶಲಕ್ಷ ಮಂದಿ ಹೊಸತಾಗಿ ಏಡ್ಸ್ ಅಂಟಿಸಿಕೊಂಡಿರುವುದರಿಂದ HIV ಸೋಂಕಿತ ಪ್ರಕರಣಗಳು 22.5 ದಶಲಕ್ಷಕ್ಕೆ ಏರಿದೆ, ಮತ್ತು ಜೊತೆಗೆ 11.4 ದಶಲಕ್ಷ ಅನಾಥ AIDS ರೋಗಿಗಳು ಈ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.

ಇತರ ಪ್ರದೇಶಗಳಿಗಿಂತ ಭಿನ್ನವಾಗಿ, 2007ರ ಹೊತ್ತಿಗೆ ಅಫ್ರಿಕಾದ ಉಪ-ಸಹರಾದಲ್ಲಿ ವಾಸಿಸುತ್ತಿರುವ HIV ಸೋಂಕಿತರ ಪೈಕಿ ಹೆಚ್ಚಿನವರು (61%) ಮಹಿಳೆಯರು. 2007ರ ವೇಳೆಗೆ ವಯಸ್ಕರಲ್ಲಿ ಹರಡುವಿಕೆಯ ಪ್ರಮಾಣ 5.0% ಎಂದು ಅಂದಾಜು ಮಾಡಲಾಗಿತ್ತು, ಮತ್ತು ಈ ಪ್ರದೇಶದಲ್ಲಿ ಸಂಭವಿಸುವ ಮರಣಗಳಿಗೆ AIDS ಪ್ರಮುಖ ಕಾರಣವಾಗಿರುವುದು ಹಾಗೆಯೇ ಮುಂದುವರಿದಿದೆ. [೭] ಜಗತ್ತಿನಲ್ಲೇ ಅತಿ ಹೆಚ್ಚು HIV ರೋಗಿಗಳು ದಕ್ಷಿಣ ಆಫ್ರಿಕಾದಲ್ಲಿದ್ದಾರೆ, ನೈಜೀರಿಯಾ ಮತ್ತು ಭಾರತ ನಂತರದ ಸ್ಥಾನಗಳಲ್ಲಿವೆ.[೧೩೩] ಏಡ್ಸ್ ಪೀಡಿತ ಭೂಭಾಗದಲ್ಲಿ ದಕ್ಷಿಣ & ಆಗ್ನೇಯ ಏಷ್ಯಾ ಎರಡನೆ ಸ್ಥಾನದಲ್ಲಿದೆ; ಇಲ್ಲಿನ ನಿವಾಸಿಗಳ ಪೈಕಿ 18% ಏಡ್ಸ್ ಪೀಡಿತರೆಂದು 2007ರಲ್ಲಿ ಅಂದಾಜು ಮಾಡಲಾಗಿತ್ತು, ಮತ್ತು AIDSನಿಂದಾಗಿ ಈ ಭೂಭಾಗದಲ್ಲಿ ಸುಮಾರು 300,000 ಸಾವುಗಳು ಸಂಭವಿಸಿವೆ.[೭]

ಭಾರತದಲ್ಲಿ ಸುಮಾರು 2.5 ದಶಲಕ್ಷ ಸೋಂಕಿತರಿದ್ದಾರೆ ಮತ್ತು ಒಂದು ಅಂದಾಜು ಪ್ರಕಾರ ವಯಸ್ಕರಲ್ಲಿ 0.36% ರೋಗ ಹರಡಿಕೆಯಿದೆ.[೭] ಏಡ್ಸ್‌‌ನಿಂದ ಘಾಸಿಗೊಂಡ ದೇಶಗಳಲ್ಲಿ ಜೀವಿತಾವಧಿ ನಿರೀಕ್ಷೆಯು ನಾಟಕೀಯವಾಗಿ ಇಳಿದಿದೆ; ಉದಾಹರಣೆಗೆ, 2006ರಲ್ಲಿ ಬೊಟ್ಸಾವಾನದಲ್ಲಿ ಇದು 65ರಿಂದ 35 ವರ್ಷಗಳಿಗೆ ಇಳಿದಿದೆ ಎಂದು ಅಂದಾಜಿಸಲಾಗಿದೆ.[೬]

ಅಮೆರಿಕ ಸಂಯುಕ್ತ ಸ್ಥಾನದಲ್ಲಿ, ಆಫ್ರಿಕನ್-ಅಮೆರಿಕನ್ ತರುಣಿಯರಿಗೆ HIV ಸೋಂಕು ತಗುಲುವ ಅಪಾಯ ಹೆಚ್ಚಿರುತ್ತದೆ.

ಏಡ್ಸ್ ಬಗ್ಗೆ ಮಾಹಿತಿಯ ಕೊರತೆ ಮತ್ತು ತಮ್ಮನ್ನು ಬಾಧಿಸದು ಎಂಬ ಭ್ರಮೆ ಇದಕ್ಕೆ ಕಾರಣ, ಅಲ್ಲದೆ ಆರೋಗ್ಯ-ಪಾಲನೆ ಸಂಪನ್ಮೂಲಗಳ ಅಲಭ್ಯತೆ ಮತ್ತು ಪುರುಷ ಲೈಂಗಿಕ ಜೊತೆಗಾರನೊಂದಿಗೆ ಲೈಂಗಿಕ ಸಂಪರ್ಕ ಹೊಂದುವುದರಿಂದಾಗುವ ಅಪಾಯದ ಸಾಧ್ಯತೆಗಳು ಹೆಚ್ಚು.[೧೩೪]

ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ AIDS ಹರಡಿಕೆಯಲ್ಲಿ ಭೌಗೋಳಿಕ ವ್ಯತ್ಯಾಸಗಳಿವೆ, ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ದಕ್ಷಿಣದ ರಾಜ್ಯಗಳಲ್ಲಿ ನಿರ್ದಿಷ್ಟವಾಗಿ ಅಪಲಾಚಿಯನ್ ಮತ್ತು ಮಿಸಿಸಿಪಿ ಪ್ರಸ್ಥ ಭೂಮಿ ಪ್ರದೇಶಗಳಲ್ಲಿ ಮತ್ತು ಮೆಕ್ಸಿಕೊ ಗಡಿಭಾಗದಲ್ಲಿ ಇದು ತೀರಾ ಸಾಮಾನ್ಯ

ಇತಿಹಾಸ
ಮೊಟ್ಟ ಮೊದಲ AIDS ಪ್ರಕರಣ ಜೂನ್ 5, 1981ರಂದು ವರದಿಯಾಯಿತು, U.S.ನ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್(CDC) ಸಂಸ್ಥೆಯು ಲಾಸ್ ಎಂಜಲೀಸ್‌ನ ಐವರು ಸಲಿಂಗಕಾಮಿಗಳಲ್ಲಿ ಏಡ್ಸ್‌ಗೆ ಕಾರಣವಾದ ನ್ಯುಮೊಸಿಸ್ಟಿಸ್ ಕಾರಿನೀ ನ್ಯುಮೋನಿಯಾದ (ಈಗಲೂ PCP ಎಂದೇ ವರ್ಗೀಕರಿಸಲಾಗಿದೆ, ಆದರೆ ನ್ಯುಮೊಸಿಸ್ಟಿಸ್ ಜಿರೊವೆಸೀ ಇದಕ್ಕೆ ಕಾರಣ ಎನ್ನಲಾಗಿದೆ)ಗುಂಪು ಇರುವುದನ್ನು ದಾಖಲಿಸಿತು.[೧೩೬] ಆರಂಭದಲ್ಲಿ, CDC ಈ ರೋಗಕ್ಕೆ ಯಾವುದೇ ಅಧಿಕೃತವಾದ ಹೆಸರನ್ನು ಹೊಂದಿರಲಿಲ್ಲ, ಅದರ ಜೊತೆಗಿರುವ ರೋಗಗಳ ಆಧಾರದಲ್ಲಿ ಈ ಕುರಿತು ಆಗಿಂದಾಗ್ಗೆ ಹೇಳಲಾಗುತ್ತಿತ್ತು, ಉದಾಹರಣೆಗೆ HIV ವೈರಸ್‌ನ್ನೇ ಆರಂಭದಲ್ಲಿ ಸಂಶೋಧಕರು ಲಿಂಫಡಿನೋಪತಿ ರೋಗ ಎಂದು ಕರೆಯುತ್ತಿದ್ದರು.[೬೯][೭೦]


ಈ ವೈರಸ್‌ಗಳಿಂದಾಗಿ ಕಾಪೊಸಿಯ ಸಾರ್ಕೋಮಾ ಮತ್ತು ಅವಕಾಶವಾದಿ ಸೋಂಕುಗಳಿಗೂ ಎಡೆ ಸಿಕ್ಕಿತು, ಬಳಿಕ 1981ರಲ್ಲಿ ಇದೇ ಹೆಸರಿನಲ್ಲಿ ಕಾರ್ಯಪಡೆಯನ್ನೂ ರಚಿಸಲಾಯಿತು.[೧೩೭] ಸಾಮಾನ್ಯ ಪತ್ರಿಕೆಗಳಲ್ಲಿ, ಸಲಿಂಗಕಾಮಿ-ಸಂಬಂಧಿತ ರೋಗ ನಿರೋಧಕ ಶಕ್ತಿ ಹೀನತೆ ಅರ್ಥ ನೀಡುವ GRID ಪದ ಹುಟ್ಟಿಕೊಂಡಿತು.[೧೩೮] ಈ ನಡುವೆ ಸೂಕ್ತ ಹೆಸರಿಗಾಗಿ ಹುಡುಕಾಟ ನಡೆಸಿದ CDCಯು, ಸೋಂಕಿತ ಸಮುದಾಯಗಳನ್ನು ನೋಡಿ “ದಿ 4H ರೋಗ,” ಎಂದು ಹೆಸರಿಟ್ಟಿತು, ಇದು ಹೈಟಿಯನ್ನರು, ಸಲಿಂಗಕಾಮಿಗಳು, ಹೆಮೊಫಿಲಿಯಾಕ್ಸ್‌, ಮತ್ತು ಹೆರಾಯಿನ್ ಬಳಕೆದಾರರಿಗೆ ಸೀಮಿತವಾಗಿತ್ತು.[೧೩೯]




ಆದಾಗ್ಯೂ, AIDS ಕೇವಲ ಸಲಿಂಗಕಾಮಿ ಸಮುದಾಯಕ್ಕೆ[೧೩೭] ಮಾತ್ರ ಸೀಮಿತವಲ್ಲ, GRID ಪದ ತಪ್ಪುದಾರಿಗೆ ಎಳೆದಿದೆ ಎಂದು ತೀರ್ಮಾನಿಸಲಾಯಿತು, ಮತ್ತು 1982ರ ಜುಲೈ ತಿಂಗಳಲ್ಲಿ ನಡೆದ ಸಭೆಯೊಂದರಲ್ಲಿ ಏಡ್ಸ್ ಪದವನ್ನು ಪರಿಚಯಿಸಲಾಯಿತು. [೧೪೦]

ಸೆಪ್ಟೆಂಬರ್ 1982ರಲ್ಲಿ CDCಯು AIDS ಪದ ಬಳಕೆ ಆರಂಭಿಸಿತು ಮತ್ತು ಈ ರೋಗದ ಕುರಿತು ಸರಿಯಾದ ವ್ಯಾಖ್ಯಾನ ನೀಡಿತು.[೧೪೧]


ಈ ನಡುವೆ, ಭಾರಿ ಚರ್ಚಿತವಾಗಿದ್ದ ವಿವಾದಾಸ್ಪದ OPV AIDS ಕಲ್ಪನೆ ಸಿದ್ಧಾಂತದ ಪ್ರಕಾರ, 1950ರ ಅಂತ್ಯದಲ್ಲಿ ಹಿಲರಿ ಕೊಪ್ರೊವಿಸ್ಕಿ ಅವರು ಬೆಲ್ಜಿಯಂ ಕಾಂಗೊದಲ್ಲಿ ಪೋಲಿಯೋಮೈಲಿಟಿಸ್ ಲಸಿಕೆ ಕುರಿತು ಸಂಶೋಧನೆ ನಡೆಸುತ್ತಿದ್ದಾಗಲೇ ಏಡ್ಸ್ ಸಾಂಕ್ರಾಮಿಕ ರೋಗ ಶುರುವಾಗಿತ್ತು, ಆದರೆ ಯಾರ ಗಮನಕ್ಕೂ ಬಂದಿರಲಿಲ್ಲ. [೧೪೨][೧೪೩]


ಆದರೆ ಈ ಸಿದ್ಧಾಂತವನ್ನು ಲಭ್ಯವಿರುವ ಯಾವುದೇ ನಿದರ್ಶನಗಳು ಪುಷ್ಟೀಕರಿಸುವುದಿಲ್ಲ ಎಂಬುದು ವಿಜ್ಞಾನಿಗಳ ಒಮ್ಮತದ ಅಭಿಪ್ರಾಯ.[೧೪೪][೧೪೫][೧೪೬]

HIV ಪ್ರಾಯಶಃ ಆಫ್ರಿಕಾದಿಂದ ಹೈಟಿಗೆ ಮತ್ತು ಆ ನಂತರ 1969ರ ಸುಮಾರಿಗೆ ಅಮೆರಿಕ ಸಂಯುಕ್ತ ಸಂಸ್ಥಾನವನ್ನು ಪ್ರವೇಶಿಸಿತು ಎಂದು ಇತ್ತೀಚಿನ ಅಧ್ಯಯನಗಳು ಹೇಳುತ್ತವೆ

ಸಮಾಜ ಮತ್ತು ಸಂಸ್ಕೃತಿ
AIDS ಅಪವಾದವು ಜಗತ್ತಿನಲ್ಲಿ ವಿವಿಧ ಬಗೆಗಳಲ್ಲಿ ಅಸ್ತಿತ್ವದಲಿದ್ದು, ಬಹಿಷ್ಕಾರ, ತಿರಸ್ಕಾರ, ಪಕ್ಷಪಾತ ಮತ್ತು HIV ಸೋಂಕಿತ ಜನರಿಂದ ದೂರವಿರುವುದು; ಪೂರ್ವ ಅನುಮತಿಯಿಲ್ಲದೆ ಕಡ್ಡಾಯ HIV ಪರೀಕ್ಷೆ ಅಥವಾ ಗೋಪ್ಯತೆಯ ರಕ್ಷಣೆ; HIV ಸೋಂಕಿತ ವ್ಯಕ್ತಿಗಳ ಮೇಲೆ ಹಿಂಸೆ ಅಥವಾ HIV ಸೋಂಕಿತರಾಗಿದ್ದಾರೆಂದು ಭಾವಿಸುವುದು; HIV ಸೋಂಕಿತ ವ್ಯಕ್ತಿಗಳೊಂದಿಗೆ ಸಂಪರ್ಕ ನಿಷೇಧ ಸೇರಿದಂತೆ ಇತ್ಯಾದಿ ವಿವಿಧ ಬಗೆಗಳಲ್ಲಿ ಅಸ್ತಿತ್ವದಲ್ಲಿದೆ. [೧೪೮]

ಅಪವಾದ-ಸಂಬಂಧಿತ ಹಿಂಸೆ ಅಥವಾ ಆತಂಕದಿಂದ ಅನೇಕರು HIV ಪರೀಕ್ಷೆ, ಅದರ ಫಲಿತಾಂಶಗಳಿಂದಾಗುವ ಪರಿಣಾಮ ಅಥವಾ ಚಿಕಿತ್ಸೆ ಪಡೆಯುವುದರಿಂದ ದೂರವಿರುತ್ತಾರೆ, ಇದರಿಂದಾಗಿ ನಿಭಾಯಿಸಬಹುದಾಗಿದ್ದ ಆಗಿಂದಾಗ್ಗೆ ಬರುವ ಅನಾರೋಗ್ಯ ಮಾರಣಾಂತಿಕವಾಗಿ ಪರಿವರ್ತನೆಗೊಳ್ಳುವ ಸಾಧ್ಯತೆಗಳುಂಟು ಮತ್ತು HIV ಹರಡುವಿಕೆಯೂ ಶಾಶ್ವತವಾಗಬಹುದು.[೧೪೯]

AIDS ಅಪವಾದವನ್ನು ಇನ್ನೂ ಮೂರು ವಿಭಾಗಗಳಾಗಿ ಈ ಕೆಳಗೆ ವರ್ಗೀಕರಿಸಲಾಗಿದೆ:

ನಿಮಿತ್ತ AIDS ಅಪವಾದ — ಹರಡಿಕೆಯಿರುವ ಮತ್ತು ಮಾರಣಾಂತಿಕವಾದ ಯಾವುದೇ ರೋಗದ ಜೊತೆಗಿರಬಹುದಾದ ಆತಂಕ ಮತ್ತು ಊಹೆಯ ಪ್ರತಿಫಲನ. [೧೫೦]



ಸಾಂಕೇತಿಕ AIDS ಅಪವಾದ — ಸಾಮಾಜಿಕ ಸಮುದಾಯಗಳಲ್ಲಿ ವರ್ತನೆಗಳನ್ನು ಹೇಳಿಕೊಳ್ಳಲು HIV/AIDSನ ಬಳಕೆ ಅಥವಾ ರೋಗದ ಜೊತೆಗೆ ಗುರುತಿಸಿಕೊಂಡಿರುವ ಜೀವನ ಶೈಲಿ.[೧೫೦]
AIDS ಅಪವಾದಕ್ಕೆ ಉಪಚಾರ — HIV/ಏಡ್ಸ್ ರೋಗಿಗಳ ಅಥವಾ HIV- ಪಾಸಿಟಿವ್ ಸೋಂಕಿತರ ದೂಷಣೆ.[೧೫೧]

ಸಾಮಾನ್ಯವಾಗಿ, AIDS ಅಪವಾದವನ್ನು ಒಂದು ಅಥವಾ ಹೆಚ್ಚಿನ ಇತರ ಅಪವಾದಗಳೊಂದಿಗೆ ಅಂದರೆ ನಿರ್ದಿಷ್ಟವಾಗಿ ಸಲಿಂಗಕಾಮ, ಉಭಯಲಿಂಗರತಿ, ಸ್ವಚ್ಛಂದ ಸಂಭೋಗ, ವೇಶ್ಯಾವೃತ್ತಿ, ಮತ್ತು ಮಾದಕ ದ್ರವ್ಯಗಳ ಬಳಕೆ ಜೊತೆ ಸಂಯೋಜಿಸಿ ಹೇಳಲಾಗುತ್ತದೆ.

ಹಲವು ಅಭಿವೃದ್ಧಿ ಹೊಂದಿದ ದೇಶಗಳಲ್ಲಿ, AIDS ಮತ್ತು ಸಲಿಂಗಕಾಮ ಅಥವಾ ಉಭಯಲಿಂಗರತಿ ನಡುವೆ ಒಂದು ಒಡನಾಟವಿದೆ, ಮತ್ತು ಈ ಒಡನಾಟವು ಉನ್ನತ ಮಟ್ಟದ ಲೈಂಗಿಕ ಪೂರ್ವಾಗ್ರಹಗಳಾದ ಸಲಿಂಗಕಾಮ-ವಿರೋಧಿ ವರ್ತನೆಗಳೊಂದಿಗೆ ಪರಸ್ಪರ ಸಂಬಂಧ ಹೊಂದಿದೆ.[೧೫೨]

AIDS ಮತ್ತು ಸೋಂಕಿತರಲ್ಲದ ಪುರುಷರ ನಡುವೆ ಲೈಂಗಿಕತೆ ಸೇರಿದಂತೆ ಎಲ್ಲ ಪುರುಷ-ಲೈಂಗಿಕ ನಡವಳಿಕೆ ನಡುವೆ ನೋಡಬಹುದಾದ ಒಡನಾಟವೂ ಇರುತ್ತದೆ

ಆರ್ಥಿಕ ಪರಿಣಾಮ
HIV ಮತ್ತು AIDS ರೋಗವು ಮಾನವ ಸಂಪನ್ಮೂಲವನ್ನು ಕಡಿಮೆಗೊಳಿಸುವುದರೊಂದಿಗೆ ಆರ್ಥಿಕ ಪ್ರಗತಿ ಮೇಲೆ ಪ್ರಭಾವ ಬೀರುತ್ತದೆ.[೮]

ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಲಭ್ಯವಿರುವಂತೆ ಸರಿಯಾದ ಪೋಷಣೆ, ಆರೋಗ್ಯ ಪಾಲನೆ ಮತ್ತು ಔಷಧಗಳಿಲ್ಲದೆ AIDS-ಸಂಬಂಧಿತ ಸಮಸ್ಯೆಗಳಿಂದ ಸಾಕಷ್ಟು ಜನರು ನರಳುತ್ತಾರೆ ಮತ್ತು ಸಾವನ್ನಪ್ಪುತ್ತಾರೆ.

ಏಡ್ಸ್ ರೋಗಿಗಳಿಗೆ ಕೆಲಸ ಮಾಡಲು ಆಗುವುದಿಲ್ಲ, ಮಾತ್ರವಲ್ಲದೆ ಅವರಿಗೆ ಮಹತ್ವದ ವೈದ್ಯಕೀಯ ಕಾಳಜಿ ಅವಶ್ಯ.

AIDS ಪೀಡಿತರ ಗಣನೀಯ ಸಂಖ್ಯೆಯಿರುವುದರಿಂದಾಗಿ ದೇಶಗಳ ಆರ್ಥಿಕತೆಗಳು ಮತ್ತು ಸಮಾಜಗಳು ಪತನಗೊಳ್ಳಬಹುದು ಎಂದು ಭವಿಷ್ಯವಾಣಿ ಹೇಳಿದೆ. ಸೋಂಕು ಭಾರಿ ಪ್ರಮಾಣದಲ್ಲಿರುವ ಪ್ರದೇಶಗಳಲ್ಲಿ, ಈ ಸಾಂಕ್ರಾಮಿಕ ರೋಗವು ವಯಸ್ಸಾದ ಅಜ್ಜ-ಅಜ್ಜಿಯಂದಿರನ್ನು ನೋಡಿಕೊಳ್ಳುತ್ತಿದ್ದ ಹಲವರನ್ನು ಅನಾಥರನ್ನಾಗಿ ಮಾಡಿ, ಈಗ ಅವರಿಂದಲೇ ಉಪಚಾರ ಪಡೆಯುವಂತೆ ಮಾಡಿದೆ.[೧೫೩]





ಏಡ್ಸ್ ರೋಗಿಗಳ ಸಂಖ್ಯೆ ಅಧಿಕವಿರುವ ಭೂಭಾಗದಲ್ಲಿ ಮರಣ ಪ್ರಮಾಣ ಹೆಚ್ಚುವುದು ಕಿರು ಕಸುಬಿನಲ್ಲಿ ತೊಡಗಿರುವ ಜನಸಂಖ್ಯೆ ಮತ್ತು ಕಾರ್ಮಿಕ ವರ್ಗದ ಮೇಲೆ ಪರಿಣಾಮ ಬೀರುತ್ತದೆ.




ಈ ಸಣ್ಣ ಪ್ರಮಾಣದ ಕಾರ್ಮಿಕ ವರ್ಗದಲ್ಲಿ ಕಡಿಮೆ ಜ್ಞಾನ ಮತ್ತು ಕೆಲಸದ ಅನುಭವದ ಕೊರತೆಯಿರುವ ಯುವಕರೇ ಅಧಿಕವಾಗಿರುವುದರಿಂದ ಉತ್ಪಾದನೆ ಇಳಿಮುಖವಾಗುತ್ತದೆ.
ಅನಾರೋಗ್ಯ ಪೀಡಿತ ಕುಟುಂಬದ ಸದಸ್ಯರನ್ನು ಉಪಚರಿಸುವ ನಿಟ್ಟಿನಲ್ಲಿ ಕಾರ್ಮಿಕರು ತೆಗೆದುಕೊಳ್ಳುವ ರಜೆಗಳ ಹೆಚ್ಚಳ ಅಥವಾ ಅನಾರೋಗ್ಯ ರಜೆ ಕೂಡ ಉತ್ಪಾದನೆಯ ಪ್ರಮಾಣವನ್ನು ಇಳಿಸಬಹುದು.

ಜನರು ತಮ್ಮ ಆದಾಯ ಮತ್ತು ಹೆತ್ತವರನ್ನು ಕಳೆದುಕೊಳ್ಳುವುದರಿಂದ ಒಟ್ಟು ಮಾನವ ಸಂಪನ್ಮೂಲ ಮತ್ತು ಬಂಡವಾಳ ಸೃಷ್ಟಿ ವ್ಯವಸ್ಥೆಯನ್ನು ಸಾವಿನ ಪ್ರಮಾಣವು ಬಲಹೀನಗೊಳಿಸಬಹುದು.

ಮುಖ್ಯವಾಗಿ ವಯಸ್ಕ ಯುವಕರನ್ನು ಸಾಯಿಸುವುದರೊಂದಿಗೆ ತೆರಿಗೆ ಪಾವತಿಸುವ ಜನಸಂಖ್ಯೆಯ ಮೇಲೂ ಏಡ್ಸ್ ಪರಿಣಾಮ ಬೀರುತ್ತದೆ, ಇದರಿಂದಾಗಿ ಶಿಕ್ಷಣ ಮತ್ತು AIDS ಹೊರತಾದ ಆರೋಗ್ಯ ಸೇವೆ ಇತ್ಯಾದಿ ಸಾರ್ವಜನಿಕ ವೆಚ್ಚಗಳಿಗೆ ಬೇಕಾಗುವ ಸಂಪನ್ಮೂಲಗಳ ಕೊರತೆಯಾಗಬಹುದು. ರಾಜ್ಯದ ಹಣಕಾಸಿನ ಮೇಲೂ ಇದರ ಪರಿಣಾಮವುಂಟಾಗಿ ಆರ್ಥಿಕತೆಯ ಬೆಳವಣಿಗೆಯು ಕುಂಠಿತಗೊಳ್ಳಬಹುದು.

ಇದರಿಂದಾಗಿ ತೆರಿಗೆ ಮೂಲ ನಿಧಾನ ಬೆಳವಣಿಗೆಯಾಗಬಹುದು, ಮಾತ್ರವಲ್ಲದೆ ರೋಗದ ಚಿಕಿತ್ಸೆ ವೆಚ್ಚ, ತರಬೇತಿ(ರೋಗ ಪೀಡಿತ ಕಾರ್ಮಿಕರ ಬದಲಾವಣೆಯಿಂದ), ಅನಾರೋಗ್ಯ ವೇತನ ಮತ್ತು AIDS ಅನಾಥರಿಗೆ ಉಪಚಾರ ಇತ್ಯಾದಿಗಳಿಂದ ವೆಚ್ಚ ಹೆಚ್ಚಿದಲ್ಲಿ ಪರಿಣಾಮ ಇನ್ನಷ್ಟು ಗಂಭೀರವಾಗಬಹುದು.

ಜೊತೆಗೆ ವಯಸ್ಕರ ಮರಣದ ಸಂಖ್ಯೆ ಕ್ಷಿಪ್ರಗತಿಯಲ್ಲಿ ಏರುವುದರಿಂದ ಜವಾಬ್ದಾರಿ ವರ್ಗಾವಣೆಯಾಗುತ್ತದೆ ಮತ್ತು ಅನಾಥರ ಉಪಚಾರದ ವಿಷಯದಲ್ಲಿ ಅವರ ಕುಟುಂಬಗಳು ಸರ್ಕಾರವನ್ನು ಟೀಕಿಸುತ್ತವೆ.[೧೫೩]

AIDSನಿಂದಾಗಿ ಒಂದು ಮನೆಯಲ್ಲಿ ಆದಾಯದ ನಷ್ಟವಾಗುತ್ತದೆ ಮತ್ತು ಆರೋಗ್ಯ ವಿಷಯದಲ್ಲಿ ವೆಚ್ಚ ಮಾಡುವುದು ಹೆಚ್ಚುತ್ತದೆ. ಆದಾಯದ ಕೊರತೆಯಿಂದಾಗಿ ವೆಚ್ಚದಲ್ಲಿ ಇಳಿಮುಖವಾಗುತ್ತದೆ, ಅಲ್ಲದೆ ನಂತರ ಮನೆಮಂದಿ ಶಿಕ್ಷಣದ ಬದಲು ಆರೋಗ್ಯ ಮತ್ತು ಅಂತ್ಯಕ್ರಿಯೆಗೆ ವೆಚ್ಚ ಮಾಡುವಂತಾಗುತ್ತದೆ. ಇತರ ಮನೆಯವರ ವೈದ್ಯಕೀಯ ವೆಚ್ಚಕ್ಕೆ ಹೋಲಿಸಿದಲ್ಲಿ, ಒಬ್ಬ HIV/AIDS ರೋಗಿಯನ್ನು ಹೊಂದಿರುವ ಮನೆಯವರು ದುಪ್ಪಟ್ಟು ವೆಚ್ಚ ಮಾಡಬೇಕಾಗಿ ಬರುತ್ತದೆ ಎಂಬುದನ್ನು ಕೋಟ್ ಡಿ'ಐವೊರ್‌ನಲ್ಲಿ ನಡೆಸಿದ ಅಧ್ಯಯನ ತೋರಿಸಿದೆ.

ಧರ್ಮ ಮತ್ತು AIDS
ಧರ್ಮ ಮತ್ತು AIDS ವಿಷಯ ಕಳೆದ ಇಪತ್ತು ವರ್ಷಗಳಿಂದ ದೊಡ್ಡ ವಿವಾದವಾಗಿ ಪರಿಣಮಿಸಿದೆ, ಏಕೆಂದರೆ ಅನೇಕ ಪ್ರಮುಖ ಧಾರ್ಮಿಕ ಮುಖಂಡರು ಕಾಂಡೊಮ್‌ಗಳ ಬಳಕೆಯನ್ನು ವಿರೋಧಿಸಿ ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದಾರೆ. ಆದರೆ ಈ ಸಾಂಕ್ರಾಮಿಕ ರೋಗಕ್ಕೆ ಕಡಿವಾಣ ಹಾಕಲು ಸದ್ಯಕ್ಕೆ ಕಾಂಡೊಮ್‌ಗಳ ಬಳಕೆಯೊಂದೇ ಮಾರ್ಗ ಎಂಬುದು ವಿಜ್ಞಾನಿಗಳ ಅಂಬೋಣ.

ಜಾಗತಿಕ ಆರೋಗ್ಯ ಪಾಲನೆ ಸೇವೆಗಳಲ್ಲಿ ಧಾರ್ಮಿಕ ಸಂಘಟನೆಗಳ ಪಾಲ್ಗೊಳ್ಳುವಿಕೆ ಮತ್ತು ಜಾತ್ಯಾತೀತ ಸಂಘಟನೆಗಳಾದ UNAIDS ಮತ್ತು ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಸಹಯೋಗ ಮುಂತಾದ ಇತರ ವಿಷಯಗಳನ್ನು ವಿವಾದ ಒಳಗೊಂಡಿದೆ

ಕನಕದಾಸ ಜಯಂತಿಯ ಶುಭಾಶಯಗಳು


ಕನಕದಾಸರು (KANAKADASARU)


ಶ್ರೀ ಕನಕದಾಸರು (೧೫೦೯-೧೬೦೯) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪ೦ಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕವಿಗಳು, ಮತ್ತು ಪುರಂದರದಾಸರೊ೦ದಿಗೆ ಕರ್ನಾಟಕ ಸ೦ಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು.

ಕನಕದಾಸರು ದಂಡನಾಯಕನಾಗಿದ್ದು ಯಾವುದೋ ಯುಧ್ಧದಲ್ಲಿ ಸೋತ ಅವರಿಗೆ ಉಪರತಿ ಉಂಟಾಗಿ ಹರಿ ಭಕ್ತರಾದರಂತೆ. ಕನಕದಾಸರ ಊರು ಕಾಗಿನೆಲೆ (ಈಗ ಹಾವೇರಿ ಜಿಲ್ಲೆಯಲ್ಲಿದೆ). ಕನಕದಾಸರ ಕೀರ್ತನೆಗಳು ಕಾಗಿನೆಲೆಯ ಕೇಶವನಿಗೆ ಅರ್ಪಿತವಾಗಿರುವುದನ್ನು ಗಮನಿಸಬಹುದು. ಜನಪ್ರಿಯ ನ೦ಬಿಕೆಯ೦ತೆ, ಕನಕದಾಸರು ಕುರುಬ ವ೦ಶಕ್ಕೆ ಸೇರಿದವರು. ಕಾಗಿನೆಲೆಯ ಆದಿಕೇಶವನ ಭಕ್ತರಾದ ಕನಕದಾಸರು ಜಾತಿಪದ್ಧತಿಯ ತಾರತಮ್ಯಗಳನ್ನು ಅಲ್ಲಗಳೆದರು. ಕನಕದಾಸರು ಶ್ರೀ ವ್ಯಾಸರಾಯರ ಮೆಚ್ಚಿನ ಶಿಷ್ಯರು.

ವ್ಯಾಸರಾಯದಿ೦ದ ಮಧ್ವ ತತ್ವಶಾಸ್ತ್ರವನ್ನು ಕಲಿತು ಒಪ್ಪಿಕೊ೦ಡ ಕನಕದಾಸರು ಉಡುಪಿ ಶ್ರೀ ಕೃಷ್ಣನ ಭಕ್ತರು. ಅನೇಕರ ನ೦ಬಿಕೆಯ೦ತೆ ಉಡುಪಿಯ ದೇವಸ್ಥಾನದಲ್ಲಿ ಅವರಿಗೆ ಪ್ರವೇಶ ದೊರೆಯದಾದಾಗ ದೇವಸ್ಥಾನದ ಹಿ೦ದೆ ನಿ೦ತು ಹಾಡತೊಡಗಿದರ೦ತೆ ("ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ"). ಹಿ೦ದುಗಡೆಯ ಗೋಡೆ ಒಡೆದು ಕೃಷ್ಣನ ವಿಗ್ರಹ ಹಿಮ್ಮುಖವಾಗಿ ತಿರುಗಿತ೦ತೆ (ಈಗಲೂ ಉಡುಪಿ ಕೃಷ್ಣನ ದೇವಸ್ಥಾನದ ಹಿ೦ದುಗಡೆಯ ಗೋಡೆಯಲ್ಲಿ ಬಿರುಕನ್ನು ಕಾಣಬಹುದು - ಇಲ್ಲಿ ಒ೦ದು ಕಿಟಕಿಯನ್ನು ನಿರ್ಮಿಸಿ ಕನಕನ ಕಿ೦ಡಿ ಎ೦ದು ಕರೆಯಲಾಗಿದೆ).

ಸಾಹಿತ್ಯ
ಕನಕದಾಸರು ಸುಮಾರು ೨೦೦ ಕೀರ್ತನೆಗಳನ್ನು ರಚಿಸಿ ಹಾಡಿದ್ದಾರೆ. ಅವರ ಐದು ಮುಖ್ಯ ಕಾವ್ಯಕೃತಿಗಳು ಇಂತಿವೆ:

ಮೋಹನತರ೦ಗಿಣಿ
ನಳಚರಿತ್ರೆ
ರಾಮಧಾನ್ಯಚರಿತೆ
ಹರಿಭಕ್ತಿಸಾರ
ನೃಸಿ೦ಹಸ್ತವ (ಉಪಲಬ್ದವಿಲ್ಲ)

ಮೋಹನತರಂಗಿಣಿ

ಮೋಹನತರಂಗಿಣಿ ಅಥವಾ ಕೃಷ್ಣಚರಿತೆ ಎಂಬ ಸಾಂಗತ್ಯ ಕಾವ್ಯದಲ್ಲಿ ಕನಕದಾಸರ ಸಮಕಾಲೀನ ಜೀವನ ಚಿತ್ರಗಳು ಹಾಗೂ ಪೌರಾಣಿಕ ಕಥೆಗಳು ಅಚ್ಚಗನ್ನಡದಲ್ಲಿ ನಿರೂಪಿತವಾಗಿವೆ.

ದಣ್ಣಾಯಕನಾಗಿ ಕನಕ ಆಗಾಗ್ಗೆ ರಾಜಧಾನಿ ವಿಜಯನಗರಕ್ಕೆ ಹೋಗಬೇಕಾಗಿತ್ತು. ವಿಜಯನಗರ ಸಾಮ್ರಾಜ್ಯದ ರಾಜವೈಭವ, ರಾಜಸಭೆ, ರಾಜಪರಿವಾರದ ಸರಸ ಸುಮ್ಮಾನ, ಶೃಂಗಾರ ಜೀವನ, ಜಲಕ್ರೀಡ, ಓಕುಳಿಯಾಟ, ನವರಾತ್ರಿ, ವಿಜಯನಗರದ ಪುರರಚನೆ, ಉದ್ಯಾನವನ, ಪ್ರಜೆಗಳ ವೇಷಭೂಷಣ, ರಾಜ್ಯದ ಯುದ್ಧವಿಧಾನ ಇತ್ಯಾದಿಗಳು ಅವನ ಮನಸೂರೆಗೊಂಡಿದ್ದವು. ಕವಿಯೂ ಆಗಿದ್ದ ಕನಕ ತನ್ನ ಅನುಭವವನ್ನೆಲ್ಲ ಬರಹರೂಪಕ್ಕೆ ತಂದ. ಆ ಬರಹವೇ ಇಂದು ನಮಗೆ ಲಭ್ಯವಿರುವ ಮೋಹನತರಂಗಿಣಿ. ಕನಕನ ಯೌವನಕಾಲದಲ್ಲಿ ರಚಿತವಾದ ತರಂಗಿಣಿಯ ಒಡಲಲ್ಲಿ ಯುದ್ಧದ ವರ್ಣನೆಗಳು ಹೆಚ್ಚೆನ್ನಬಹುದು. ಏಕೆಂದರೆ ಕನಕ ಸ್ವತಃ ಕಲಿಯಾಗಿದ್ದವನೇ ತಾನೇ? ಶಂಬರಾಸುರ ವಧೆ, ಬಾಣಾಸುರ ವಧೆ, ಹರಿಹರ ಯುದ್ಧ ಹೀಗೆ ರೌದ್ರ ರಸವೇ ಹರಿದಿದೆ ಇಲ್ಲಿ.

ಮೋಹನತರಂಗಿಣಿಯಲ್ಲಿ ದಾಸರು ಕೃಷ್ಣಚರಿತ್ರೆಯನ್ನು ಹೇಳುತ್ತಾ ತಮ್ಮ ಅಧಿರಾಜ ಕೃಷ್ಣದೇವರಾಯನನ್ನೇ ಕೃಷ್ಣನಿಗೆ ಹೋಲಿಸುತ್ತಾರೆ. ಅವರ ದ್ವಾರಕಾಪುರಿ ಸ್ವಯಂ ವಿಜಯನಗರವೇ ಆಗಿದೆ.

ಸೋಮಸೂರಿಯ ವೀಥಿಯಿಕ್ಕೆಲದಲಿ
ಹೇಮನಿರ್ಮಿತ ಸೌಧದೋಳಿ
ರಾಮಣೀಯತೆವೆತ್ತ ಕಳಸದಂಗಡಿಯಿರ್ದು
ವಾ ಮಹಾ ದ್ವಾರಕಾಪುರದೆ
ಓರಂತೆ ಮರಕಾಲರು ಹಡಗಿನ ವ್ಯವ
ಹಾರದಿ ಗಳಿಸಿದ ಹಣವ
ಭಾರಸಂಖ್ಯೆಯಲಿ ತೂಗುವರು ಬೇಡಿದರೆ ಕು
ಬೇರಂಗೆ ಕಡವ ಕುಡುವರು
ವಿಜಯನಗರ ಸಾಮ್ರಾಜ್ಯದ ವರ್ಣನೆಯನ್ನು ವಿದೇಶೀಯರು ಹೊಗಳಿರುವುದನ್ನು ನಾವು ಬಲ್ಲೆವು. ಕನಕದಾಸರ ಬಣ್ಣನೆಯೂ ಇಲ್ಲಿ ವಿಭಿನ್ನವಾಗೇನೂ ಇಲ್ಲ.


ನಳಚರಿತ್ರೆ

ನಳಚರಿತ್ರೆ ಹಾಗೂ ರಾಮಧಾನ್ಯಚರಿತ್ರೆಗಳು ಭಾಮಿನೀಷಟ್ಪದಿಯಲ್ಲಿದ್ದು ಸಾಂಪ್ರದಾಯಿಕ ವಸ್ತುವನ್ನು ನಿತ್ಯನೂತನ ಶೈಲಿಯಲ್ಲಿ ನಿರೂಪಿಸುವ ಅದ್ಭುತ ಕಲ್ಪನಾಮೋಡಿಗೆ ಕೈಗನ್ನಡಿಯಾಗಿವೆ.

ಮಹಾಭಾರತದಂತಹ ರಾಷ್ಟ್ರಕಾವ್ಯಕ್ಕೆ ಪ್ರೇರಣೆಯಾದ ಉಜ್ವಲ ಆರ್ಯೇತರ ಪ್ರೇಮಕಥೆ ನಳದಮಯಂತಿಯರ ಕಥೆ. ೧೩ನೇ ಶತಮಾನದ ನಳಚಂಪುವಿಗಿಂತ ಈ ನಳಚರಿತ್ರೆ ಹೃದಯಸ್ಪರ್ಶಿಯಾದ ಚಿತ್ರಣಗಳಿಂದ ಚಿರಂತನ ಪ್ರೇಮದ ಕಥನದಿಂದ ಅಶ್ಲೀಲತೆಯ ಸೋಂಕಿಲ್ಲದ ಶೃಂಗಾರ ವರ್ಣನೆಯಿಂದ ಶೋಭಿಸುತ್ತಾ ಇಂದಿಗೂ ಅತ್ಯಂತ ಜನಪ್ರಿಯವಾಗಿದೆ.

ನಳ ಮತ್ತು ದಮಯಂತಿಯರು ಹಂಸದ ಮೂಲಕ ಪ್ರೇಮಸಂದೇಶಗಳನ್ನು ಕಳಿಸುವುದು, ಅವರ ಸಂತೋಷ-ಆಮೋದ-ಪ್ರಮೋದ ನಂತರದ ಕಷ್ಟಕಾಲ ಹಾಗೂ ಅದರ ನಂತರದ ಪುನರ್ಮಿಲನ ಹೀಗೆ ಎಲ್ಲರಿಗೂ ಈ ಕಥೆ ಚಿರನೂತನ. ಕಷ್ಟಕಾಲದಲ್ಲಿ ಕಾಡಿನಲ್ಲಿ ಮಲಗಿರುವಾಗ್ಗೆ ದಮಯಂತಿಯನ್ನು ಕುರಿತು ನಳ:

ಲಲಿತ ಹೇಮದ ತೂಗಮಂಚದ
ಹೊಳೆವ ಮೇಲ್ವಾಸಿನಲಿ ಮಲಗುವ
ಲಲನೆಗೀ ವಿಧಿ ಬಂದುದೇ ಹಾ! ಎನುತ ಬಿಸುಸುಯ್ದ (೫-೨)
ಹೀಗೆ ನಳಚರಿತ್ರೆಯಲ್ಲಿ ಕರುಣರಸಕ್ಕೇ ಪ್ರಾಧಾನ್ಯತೆ.

ಇನ್ನು ನಳಚರಿತ್ರೆಯಲ್ಲಿನ ಶೃಂಗಾರರಸದ ಬಗ್ಗೆ ಹೇಳುವುದಾದರೆ ಅದು ಫ್ರೌಢಶೃಂಗಾರ ಎನ್ನಬಹುದೇನೋ? ಅಲ್ಲಿ ಮೋಹನ ತರಂಗಿಣಿಯಲ್ಲಿ ಅದು ಕಣ್ಣು ಕುಕ್ಕುವ ಶೃಂಗಾರ, ಆದರೂ ಅದು ಹುಳಿಮಾವಿನಂತೆ ಹಂಚಿ ತಿನ್ನಲಾಗದು, ಮುಕ್ತವಾಗಿ ಚರ್ಚಿಸಲಾಗದು. ನಳಚರಿತ್ರೆಯ ಶೃಂಗಾರವಾದರೆ ಮಲ್ಲಿಗೆ ಮಾವಿನ ಹಾಗೆ, ಮಧುರ ರುಚಿ, ಮಧುರ ಸುವಾಸನೆ.


ರಾಮಧಾನ್ಯಚರಿತೆ

ರಾಮಧಾನ್ಯಚರಿತ್ರೆಯಲ್ಲಿ ಧನಿಕರ ಆಹಾರಧಾನ್ಯ ಅಕ್ಕಿ ಹಾಗೂ ಕೆಳವರ್ಗದವರ ಆಹಾರಧಾನ್ಯ ರಾಗಿಯ ನಡುವಿನ ಸಂಭಾಷಣೆಯ ಮೂಲಕ ರಾಗಿ ಹೇಗೆ ತನ್ನ ಔನ್ನತ್ಯವನ್ನು ಸಾಬೀತು ಪಡಿಸುತ್ತದೆ ಹಾಗೂ ರಾಮಧಾನ್ಯವೆಂಬ ಹೆಸರು ಪಡೆಯುತ್ತದೆ ಎಂದು ನಿರೂಪಿಸಲಾಗಿದೆ. ಇದರಲ್ಲಿ ಯುದ್ಧದ ಸನ್ನಿವೇಶ ಇಲ್ಲವಾದರೂ ವೀರರಸದ ಮಾತುಗಳಿಗೆ ಕೊರತೆಯಿಲ್ಲ.

ನುಡಿಗೆ ಹೇಸದ ಭಂಡ ನಿನ್ನೊಳು ಕೊಡುವರೇ ಮಾರುತ್ತರವ ಕಡುಜಡವಲಾ, ನಿನ್ನೊಡನೆ ಮಾತೇಕೆ?
ಹೆಣದ ಬಾಯಿಗೆ ತುತ್ತು ನೀನಹೆ ನಿನ್ನ ಜನ್ಮ ನಿರರ್ಥಕವಲಾ
ಎಲವೋ ನೀನೆಲ್ಲಿಹೆಯೋ ನಿನ್ನಯ ಬಳಗವದು...
ಮುಂತಾದ ಮಾತುಗಳಲ್ಲಿ ಕನಕದಾಸರು ರಾಗಿಯ ನೆಪವಿಡಿದು ತಮ್ಮದೇ ಆತ್ಮಕಥೆಯನ್ನು ಹೇಳುತ್ತಿರುವಂತೆ ತೋರುತ್ತದೆ. ಸಮಾಜದ ಮೇಲ್ವರ್ಗದವರ ಆಹಾರಧಾನ್ಯ ಭತ್ತ ಹಾಗೂ ಕೆಳವರ್ಗದವರ ಆಹಾರಧಾನ್ಯ ರಾಗಿಯ ನಡುವಿನ ಸಂಭಾಷಣೆಯನ್ನು ನಿರೂಪಿಸುವ ಕನಕದಾಸರ ಸೃಜನಶೀಲತೆ ಅತಿಶಯ. ಒಂದು ರೀತಿಯಲ್ಲಿ ರಾಮಧಾನ್ಯಚರಿತ್ರೆ ಇಂದಿನ ಬಂಡಾಯ ಸಾಹಿತ್ಯದ ಬೇರು ಎಂದರೆ ತಪ್ಪಾಗಲಾರದು.


ಹರಿಭಕ್ತಿಸಾರ

ಹರಿಭಕ್ತಿಸಾರ ೧೧೦ ಭಕ್ತಿಪದ್ಯಗಳಿರುವ ಗ್ರಂಥ. ಭಾಮಿನೀ ಷಟ್ಪದಿಯಲ್ಲಿ ಸರಳಗನ್ನಡದಲ್ಲಿ ರಚಿತವಾಗಿರುವ ಈ ಗ್ರಂಥ ಕನ್ನಡದ ಭಗವದ್ಗೀತೆಯೆನ್ನಬಹುದು.

ಒಟ್ಟಿನಲ್ಲಿ ಕನಕದಾಸರ ಎಲ್ಲ ಕಾವ್ಯಗಳೂ ಕವಿಸಹಜವಾದ ವರ್ಣನೆಗಳಿಂದಲೂ ಉಪಮೆಗಳಿಂದಲೂ ಶ್ರೀಮಂತವಾಗಿದ್ದು ಅವರ ಕಾವ್ಯ ಕೌಶಲಕ್ಕೆ ಎಲ್ಲರೂ ಬೆರಗಾಗುವಂತೆ ಮಾಡಿದೆಯೆಂದರೆ ಉತ್ಪ್ರೇಕ್ಷೆಯಲ್ಲ.


ಕೀರ್ತನೆಗಳು

ಕನಕದಾಸರ ಭಕ್ತಿಪಾರಮ್ಯವನ್ನು ಅವರ ಕೀರ್ತನೆಗಳಲ್ಲಿ ಕಾಣಬಹುದು. ಶ್ರೀಹರಿಯನ್ನು ತಮ್ಮ ಧಣಿಯಾಗಿ, ಇನಿಯನಾಗಿ, ಅಣೋರಣೀಯನಾಗಿ, ಮಹತೋಮಹೀಯನಾಗಿ ಅವರು ಕಂಡಿದ್ದಾರೆ. ಬಾ ರಂಗ ಎನ್ನ ಮನಕೆ ಎಂದು ಹೃದಯ ಸದನಕ್ಕೆ ಕರೆದು ನೆಲೆ ನಿಲ್ಲಿಸಿಕೊಂಡ ಅನುಭಾವ ಅವರದು. ಒಳಗಣ್ಣಿನಿಂದ ಅವನ ಕಂಡು

ಕಂಡೆ ನಾ ತಂಡ ತಂಡ ಹಿಂಡು ದೈವ ಪ್ರಚಂಡರಿಪು ಗಂಡ ಉದ್ಧಂಡ ನರಸಿಂಹನ
ಎಂದು ಸಂತೋಷಪಟ್ಟಿದ್ದಾರೆ.

ಎಲ್ಲಿ ನೋಡಿದರಲ್ಲಿ ರಾಮ
ಎಂಬ ಅನುಭೂತಿಯಲ್ಲಿ ಹರಿಯನ್ನು ಕಂಡ ಬಳಿಕ

ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು
ಎಂಬ ಧನ್ಯತಾಭಾವ.

ಮೊದಲೊಮ್ಮೆ

ದಾಸದಾಸರ ಮನೆಯ ದಾಸಿಯರ ಮಗ ಮಂಕುದಾಸ ಮರುಳುದಾಸ ನರಜನ್ಮಹುಳು ಪರಮಪಾಪಿ
ಎಂದು ಕರೆದುಕೊಂಡಿದ್ದ ಅವರು ಜೀವ ಮಾಗಿ ಹಣ್ಣಾದಂತೆ ಪರಮಾತ್ಮನ ಸಾಕ್ಷಾತ್ಕಾರವಾದಂತೆ

ಆತನೊಲಿದ ಮೇಲೆ ಇನ್ಯಾತರ ಕುಲವಯ್ಯಾ
ಎಂದುಕೊಳ್ಳುತ್ತಾರೆ.

ಜೈನ ವೀರಶೈವರ ಕಿತ್ತಾಟ, ಮುಸಲ್ಮಾನ ಪ್ರಾಬಲ್ಯ ಇವುಗಳಿಂದ ಸೊರಗಿಹೋಗಿದ್ದ ವೈದಿಕ ಧರ್ಮಕ್ಕೆ ಪುನಶ್ಚೇತನ ನೀಡಲು ವ್ಯಾಸರಂಥವರು ಶ್ರಮಿಸುತ್ತಿದ್ದ ಕಾಲವದು. ವೈದಿಕ ಸಂಸ್ಕೃತಿಯ ಉತ್ಥಾನಕ್ಕೆಂದು ಹುಟ್ಟುಹಾಕಲಾದ ವಿಜಯನಗರ ಸಾಮ್ರಾಜ್ಯ ಕೃಷ್ಣದೇವರಾಯನ ಅಳಿವಿನ ನಂತರ ಪತನದ ಹಾದಿ ಹಿಡಿದಿತ್ತು. ಇಂಥಲ್ಲಿ ಕನಕದಾಸರಂಥವರ ಕಾವ್ಯಕೃಷಿ ಹಾಗೂ ಸಾರ್ವಜನಿಕ ಜೀವನ ವ್ಯಾಸರಿಗೆ ಬೆಂಬಲದ ಶ್ರೀರಕ್ಷೆಯಾಗಿದ್ದವು.

ನಾವು ಕುರುಬರು ನಮ್ಮ ದೇವರು ಬೀರಯ್ಯ
ಕಾವ ನಮ್ಮಜ್ಜ ನರಕುರಿ ಹಿಂಡುಗಳ
ಎಂದು ವಿನೀತ ಜಾತಿ ಭಾವನೆ ತೋರಿದ್ದ ಕನಕದಾಸರು ವ್ಯಾಸ ಸಂಪರ್ಕದ ನಂತರ

ಕುಲಕುಲಕುಲವೆಂದು ಹೊಡೆದಾಡದಿರಿ
ಎಂದು ಜಂಕಿಸಿ ಕೇಳುವ ಹಾಗಾದರು.

ಇಂಥ ನಡವಳಿಕೆಗಳಿಂದ ವೈದಿಕ ಧರ್ಮದ ಗುತ್ತಿಗೆ ತಮ್ಮದು ಎಂದು ಭಾವಿಸಿದ್ದ ಬ್ರಾಹ್ಮಣರಿಗೆ ಕನಕದಾಸರು ಬಿಸಿತುಪ್ಪವಾದರು. ಹಿಂದೂ ಸಮಾಜದಲ್ಲಿ ಈ ಬ್ರಾಹ್ಮಣ ಬ್ರಾಹ್ಮಣೇತರ ಕಂದರ ದೊಡ್ಡದಾಗುತ್ತಾ ಹೋದಂತೆ ವ್ಯಾಸಪೀಠದ ಜೊತೆಗೆ ದಾಸಕೂಟದ ರಚನೆಯೂ ಆಗಬೇಕಾದಂತಹ ಅನಿವಾರ್ಯತೆ ಮೂಡಿತು.

ಕನಕದಾಸ
ದಾಸ ಸಾಹಿತ್ಯದಲ್ಲಿಯೆ ವಿಶಿಷ್ಟ ವ್ಯಕ್ತಿತ್ವದವರು ಕನಕದಾಸರು. ಈಗಿನ ಹಾವೇರಿ ಜಿಲ್ಲೆಯ ಬಂಕಾಪೂರ ಪ್ರದೇಶಕ್ಕೆ ಕುರುಬ ಜನಾಂಗದ ಬೀರಪ್ಪನೆಂಬಾತನು ಡಣ್ಣಾಯಕನಾಗಿದ್ದ. ಆತನ ಪತ್ನಿ ಬಚ್ಚಮ್ಮ. ಈ ದಂಪತಿಗಳ ಏಕೈಕ ಪುತ್ರನೇ ತಿಮ್ಮಪ್ಪ. ತಂದೆಯ ಅಕಾಲ ಮೃತ್ಯುವಿನಿಂದ ಕಿರಿಯ ವಯಸ್ಸಿನಲ್ಲಿ ತಿಮ್ಮಪ್ಪ ನಾಯಕನಾದ. ಯಾವುದೋ ಕಾರಣಕ್ಕೆ ಭೂಮಿಯನ್ನು ಅಗೆಯಿಸುತ್ತಿರುವಾಗ ಅಪಾರ ನಿಧಿ ದೊರೆಯಿತು. ಅದನ್ನು ತನ್ನ ವಿಲಾಸಿ ಜೀವನಕ್ಕೆ ಬಳಸಿಕೊಳ್ಳದೆ ಪ್ರಜೆಗಳ ಹಿತರಕ್ಷಣೆಗೆ ಹಾಗೂ ಧಾರ್ಮಿಕ ಕಾರ್ಯಗಳಿಗಾಗಿ ಬಳಸಿ ಜನರಿಂದ ಕನಕದಾಸನೆಂಬ ಪ್ರಶಂಸೆಗೆ ಪಾತ್ರನಾದ. ಯುದ್ಧಭೂಮಿಯಲ್ಲಿ ಬಲವಾಗಿ ಗಾಯಗೊಂಡು ಮರಣಾವಸ್ಥೆಯಲ್ಲಿರುವಾಗ ಯಾವುದೋ ಚೇತನ ಶಕ್ತಿ ಶುಶ್ರೂಷೆಯನ್ನು ಮಾಡಿದಂತಾಗಿ, ‘ಕನಕಾ ಇನ್ನಾದರೂ ನನ್ನ ದಾಸನಾಗು’ ಎಂದು ಅಶರೀರವಾಣಿ ಆಯಿತಂತೆ. ಇವರ ಕಾಲಮಾನವನ್ನು (೧೫೦೮-೧೯೦೬) ಹದಿನಾರನೇ ಶತಮಾನ ಎಂಬ ಒಮ್ಮತ ಅಭಿಪ್ರಾಯಕ್ಕೆ ಬರಲಾಗಿದೆ. ನವಂಬರ್ ೨೭ ರಂದು ಸಂತ ಕನಕದಾಸರ ಜಯಂತಿಯನ್ನು ಆಚರಿಸಲಾಗುತ್ತದೆ.

ಹಾವೇರಿ ಜಿಲ್ಲೆಯ ಕಾಗಿನೆಲೆ ಕನಕದಾಸರ ಕರ್ಮಭೂಮಿ ಆಗಿತ್ತು. ಈಗ ಅದರ ಅಭಿವೃದ್ಧಿಗೆ ಕರ್ನಾಟಕ ಸರ್ಕಾರ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಿತು. ಕನಕದಾಸರ ಹುಟ್ಟೂರು ಬಾಡ. ಇದೂ ಹಾವೇರಿ ಜಿಲ್ಲೆಯಲ್ಲಿದೆ. ಈ ಬಾಡದಲ್ಲಿ ಕನಕದಾಸರ ಅರಮನೆ ಇದ್ದ ಬಗ್ಗೆ ದಾಖಲೆಗಳು ದೊರಕಿವೆ. ಅದರ ಉತ್ಖನನ ಕಾರ್ಯ ಸಾಗಿದೆ. ಬಾಡದ ಅಭಿವೃದ್ಧಿಯನ್ನು ಪ್ರಾಧಿಕಾರ ಕೈಗೆತ್ತಿಕೊಂಡಿದೆ. ಕೆಲವು ಸ್ಥಳಗಳು ವ್ಯಕ್ತಿ ಮಹಿಮೆಯಿಂದಾಗಿ ಪ್ರಖ್ಯಾತಿಗೆ ಬರುತ್ತವೆ. ಕೆಲವು ಸ್ಥಳಗಳ ಮಹಿಮೆಯಿಂದಾಗಿ ವ್ಯಕ್ತಿಗಳು ಪ್ರಖ್ಯಾತಿ ಪಡೆಯುತ್ತಾರೆ. ಕಾಗಿನೆಲೆ, ಬಾಡ ಹಾಗೂ ಕನಕದಾಸರು ಸಂದರ್ಶಿಸಿದ ಸ್ಥಳಗಳು ಕನಕದಾಸರ ಮಹತ್ವದೊಂದಿಗೇ ಮಹತ್ವ ಪಡೆದಿವೆ. ಇದು ಇತಿಹಾಸ. ಸಂಸ್ಕೃತಿಯ ಅಂತಸ್ಸತ್ವ.


ಉಚ್ಛಕುಲದ ಮಾಧ್ವ ಬ್ರಾಹ್ಮಣರು ಶಾಸ್ತ್ರಾಧ್ಯಯನ-ತರ್ಕ-ವ್ಯಾಕರಣಾದಿ ವಿಶಿಷ್ಟ ಜ್ಞಾನಸಂಪನ್ನರಾಗಿ ಶಬ್ದಶಬ್ದಗಳನ್ನು ತಿಕ್ಕಿ ತೀಡಿ ನಿಷ್ಪತ್ತಿ ಹಿಡಿದು ಸಿದ್ಧಾಂತ ಪ್ರಮೇಯಗಳನ್ನು ಮಂಡಿಸುವುದೇ ಮುಂತಾದ ಪ್ರಕ್ರಿಯೆಗಳನ್ನು ವ್ಯಾಸಪೀಠದಲ್ಲಿ ನಡೆಯಿಸುತ್ತಿದ್ದರು. ಇನ್ನು ಪುರಂದರ, ಕನಕ, ಜಗನ್ನಾಥ ಮೊದಲಾದವರ ಪ್ರಾತಿನಿಧಿಕ ಸಂಘಟನೆಯೇ ದಾಸಕೂಟ. ಇವರೂ ಮಾಧ್ವಮತ ಪ್ರಮೇಯಗಳನ್ನೇ ಪಸರಿಸುತ್ತಾ ಆಚರಿಸುತ್ತಿದ್ದರಾದರೂ ಅವುಗಳನ್ನು ಅರಿಯಲು ಸಂಸ್ಕೃತಜ್ಞಾನದ ಅನಿವಾರ್ಯತೆ ಇವರಿಗಿಲ್ಲ. ಜಾತಿಗೀತಿಗಳ ಕಟ್ಟುಪಾಡಿಲ್ಲದ ಇವರು ಶಾಸ್ತ್ರಾಧ್ಯಯನದ ಅನಿವಾರ್ಯತೆ ಇಲ್ಲದೆ ತಮ್ಮ ಅನುಭಾವದಿಂದ ಹೊರಹೊಮ್ಮುವ ಭಕ್ತಿಭಾವನೆಗಳನ್ನು ತಮ್ಮ ತಾಯ್ನುಡಿಯಲ್ಲಿ ಹಾಡಿ ಲೋಕಪಾವನವನ್ನೂ ಆತ್ಮೋದ್ಧಾರವನ್ನೂ ಮಾಡಬೇಕೆನ್ನುವವರು. ಇಂಥಾ ದಾಸಕೂಟವನ್ನು ಹುಟ್ಟುಹಾಕಿ ಪೋಷಿಸಿ ಬೆಳೆಸಿದವರು ವ್ಯಾಸರಾಯರು ಹಾಗೂ ವಾದಿರಾಜರು.

ಇಷ್ಟಿದ್ದರೂ ದಾಸಕೂಟ ವ್ಯಾಸಪೀಠಗಳ ನಡುವೆ ಆಗಿಂದಾಗ್ಗೆ ಘರ್ಷಣೆಗಳು ನಡೆದೇ ಇದ್ದವು. ಈ ಕುರಿತು ಕನಕ ಪುರಂದರರ ಕೀರ್ತನೆಗಳೇ ನಮಗೆ ಸೂಚ್ಯವಾಗಿ ಹೇಳುತ್ತವೆ.

ಕುಲಕುಲವೆನ್ನುತಿಹರು ಕುಲವಾವುದು ಸತ್ಯ ಸುಖವುಳ್ಳ ಜನರಿಗೆ . . .
ತೀರ್ಥವನು ಪಿಡಿದವರು ತಿರುನಾಮಧಾರಿಗಳೇ
ಜನ್ಮ ಸಾರ್ಥಕವಿರದವರು ಭಾಗವತರಹುದೇ . . .
ಆವ ಕುಲವಾದರೇನು ಆವನಾದರೇನು ಆತ್ಮಭಾವವರಿತ ಮೇಲೆ . . .
ಅವರ ಕೀರ್ತನೆಗಳಲ್ಲಿ ಅವರ ಸ೦ದೇಶ ನೇರ ಮತ್ತು ಖಚಿತ. ಹಾಗೆಯೇ ಅಮೂರ್ತವಾದ ಪ್ರತಿಮಾನಿರೂಪಣೆಯಲ್ಲಿ ಪರಿಣತಿ, ಹಾಗೂ ಕನ್ನಡ ಸಾಹಿತ್ಯ ಮತ್ತು ಸ೦ಸ್ಕೃತ ಸಾಹಿತ್ಯಗಳ ಪರಿಚಯವನ್ನು ಅವರ ಸಾಹಿತ್ಯದಲ್ಲಿ ಕಾಣಬಹುದು.


ಕನಕನ ಕಿಂಡಿ
ಉಡುಪಿಯ ಕನಕನ ಕಿಂಡಿಯ ಬಗ್ಗೆ ಸ್ವತಃ ಕನಕದಾಸರ ಕೃತಿಗಳಲ್ಲಾಗಲೀ ಇತರೆ ಕೃತಿಗಳಲ್ಲಾಗಲೀ ಮಠದ ದಾಖಲೆಗಳಲ್ಲಾಗಲೀ ಚರಿತ್ರೆಯ ಪುಟಗಳಲ್ಲಾಗಲೀ ಶಾಸನಗಳಲ್ಲಾಗಲೀ ಎಲ್ಲಿಯೂ ಪ್ರಸ್ತಾಪವಾಗಿಲ್ಲ. ಇನ್ನು ಉಡುಪಿಯ ಆ ದೇವಾಲಯವಾದರೋ ಆಗಮಾದಿಗಳಲ್ಲಿ ಹೇಳಿರುವ ವಾಸ್ತುವಿನ್ಯಾಸದನ್ವಯ ಕಟ್ಟಿಯೂ ಇಲ್ಲ. ಅಲ್ಲಿ ಬಲಿಕಲ್ಲು, ಧ್ವಜಸ್ತಂಭ, ಅಂತರಾಳ, ಅರ್ಧಮಂಟಪ, ಪ್ರದಕ್ಷಿಣಾಪಥಗಳೂ ಇಲ್ಲ. ಇನ್ನು ಪ್ರಾಣದೇವರ ಪ್ರತಿಷ್ಠಾಪನೆಯೂ ವಿಭಿನ್ನವೇ. ಉಡುಪಿಯ ಶ್ರೀಕೃಷ್ಣ ವಿಗ್ರಹವನ್ನು ಮಧ್ವಾಚಾರ್ಯರು ಕ್ರಿಸ್ತಶಕ ೧೨೩೮ (ಶಕವರ್ಷ ೧೧೬೦ ಹೇವಿಲಂಬಿ ಸಂವತ್ಸರ ಮಾಘ ಶುದ್ಧ ತದಿಗೆ) ನೇ ವರ್ಷದಲ್ಲಿ ಪಶ್ಚಿಮಾಭಿಮುಖಿಯಾಗಿ ಪ್ರತಿಷ್ಠೆ ಮಾಡಿದ್ದರಾಗಲೀ ಪೂರ್ವಾಭಿಮುಖವಾಗಿ ಅಲ್ಲ. ತಮಗೆ ಪಶ್ಚಿಮ ಸಮುದ್ರದಿಂದ ಲಭ್ಯವಾದ ಆ ಮೂರ್ತಿಯನ್ನು ಪಶ್ಚಿಮಕ್ಕೇ ಮುಖಮಾಡಿ ಪ್ರತಿಷ್ಠಿಸಿ ಪಶ್ಚಿಮ ಸಮುದ್ರಾಧೀಶ್ವರನನ್ನಾಗಿ ಕರೆದರೆನ್ನುವುದೇ ಸತ್ಯಸ್ಯ ಸತ್ಯ. ಇದಕ್ಕೆ ದಾಖಲೆಯಾಗಿ ಕನಕದಾಸರ ಸಮಕಾಲೀನರಾದ ಸುರೋತ್ತಮ ತೀರ್ಥರ ಹೇಳಿಕೆ,ಅದರ ತಾತ್ಪರ್ಯ ಹೀಗಿದೆ:'ದೇವತಾವಿಗ್ರಹಗಳನ್ನು ಪೂರ್ವಾಭಿಮುಖಿಯಾಗಿಯೇ ಸ್ಥಾಪಿಸಬೇಕೆಂದು ಏನೂ ಇಲ್ಲ, ಆದ್ದರಿಂದಲೇ ಮಧ್ವರು ಈ ಕೃಷ್ಣನ ಪ್ರತಿಮೆಯನ್ನು ಪಶ್ಚಿಮಾಭಿಮುಖಿಯಾಗಿ ಸ್ಥಾಪಿಸಿದ್ದಾರೆ". ಮಧ್ವರು ಶ್ರೀಕೃಷ್ಣಪಾದಾಂಬುಜಾರ್ಚಕರಾಗಿ ತಮ್ಮ ಮತ್ತು ತಮ್ಮ ಎಂಟು ಮಂದಿ ಶಿಷ್ಯರು ಮತ್ತು ಅವರ ಪರಂಪರೆಯವರ ನಿತ್ಯಾರ್ಚನೆಗಾಗಿ ಸ್ಥಾಪಿಸಿದ ಮೂರ್ತಿ ಇದು. ಈ ಮೂರ್ತಿ ಮತ್ತು ಅದರ ಅರ್ಚನೆ ಮಠದ ಖಾಸಗಿ ಕ್ರಿಯೆಗಳಾಗಿದ್ದು ಸಾರ್ವಜನಿಕರಿಗೆ ತೆರೆದಿಟ್ಟದ್ದಲ್ಲ.

ವಾದಿರಾಜರು, ಪುರಂದರದಾಸರು, ಕನಕದಾಸರು ತ್ರಿವೇಣೀಸಂಗಮದಂತೆ. ಅವರು ಮೂರು ಮಂದಿಯೂ ಒಂದೇ ಓರಗೆಯವರು ಒಂದೇ ಮನಸ್ಸಿನವರು. ಪರಸ್ಪರ ಗೌರವಾದರಗಳನ್ನು ಹೊಂದಿದ್ದವರು. ಪ್ರತಿಯೊಬ್ಬರಿಗೂ ಇನ್ನಿಬ್ಬರ ಪ್ರೌಢಿಮೆ ಔನ್ನತ್ಯಗಳ ಅರಿವಿತ್ತು. ೧೨೦ ವರ್ಷಗಳ ಕಾಲ ಬದುಕಿದ್ದ ವಾದಿರಾಜ(೧೪೮೦-೧೬೦೦)ರಿಗೆ ತಮ್ಮ ಮಠದಲ್ಲಿ ಸರ್ವಾಂಗೀಣ ಸುಧಾರಣೆ ತರುವ ತವಕ ಇತ್ತಾದರೂ ಅಲ್ಲಿ ಭದ್ರವಾಗಿ ಬೇರೂರಿದ್ದ ಮಡಿವಂತಿಕೆಯನ್ನು ಹೋಗಲಾಡಿಸಲು ಅವರಿಂದಾಗಿರಲಿಲ್ಲ. ವಾದಿರಾಜರೊಂದಿಗೆ ತಮಗಿದ್ದ ಸ್ನೇಹವನ್ನು ದುರುಪಯೋಗಪಡಿಸಿಕೊಂಡು ಮಠದಲ್ಲಿ ಪ್ರವೇಶ ಪಡೆಯುವ ದಾರ್ಷ್ಟ್ಯವೂ ಕನಕರಿಗಿರಲಿಲ್ಲ. ಕೃಷ್ಣನ ಮೂರ್ತಿಯ ಎದುರು ದರ್ಶನಾಪೇಕ್ಷೀ ಭಕ್ತರ ಅನುಕೂಲಕ್ಕಾಗಿ ಇದ್ದ ಧೂಳಿದರ್ಶನ ಕಿಂಡಿಯ ಬಳಿ ವಾದಿರಾಜರೂ ಕನಕದಾಸರೂ ಲೋಕಾಭಿರಾಮದ ಮಾತುಗಳನ್ನಾಡುತ್ತಿದ್ದರು. ಅದೇ ಕಿಂಡಿಯೇ ಮುಂದೆ ಕನಕನ ಕಿಂಡಿಯಾಯಿತು ಹೊರತು ಸಿನಿಮೀಯವಾಗಿ ಅಲ್ಲ. ಕನಕದಾಸರು ಪುಣ್ಯಪುರುಷರೆಂದು ಬಿಂಬಿಸಲು ಅವರ ಕಾವ್ಯಕೃಷಿಯೇ ಮಹತ್ತಾದ ಸಾಕ್ಷಿಯಾಗಿ ನಿಲ್ಲುವುದರಿಂದ ಕಿಂಡಿಯ ಸಹಾಯ ಅವರಿಗೆ ಬೇಕಾಗಿಯೂ ಇಲ್ಲ.

ಹೀಗೆ ಕನಕದಾಸರ ಸಾಹಿತ್ಯಕೃತಿಗಳು, ಅವರ ಬಗೆಗಿನ ಐತಿಹ್ಯಗಳು, ಅವರ ಕುರಿತು ಇತರೆ ಸಾಹಿತ್ಯಗಳಲ್ಲಿ ಅಥವಾ ಶಾಸನಗಳಲ್ಲಿನ ಮಾಹಿತಿಗಳನ್ನು ಕ್ರೋಢೀಕರಿಸಿ ಕನಕದಾಸರ ಸ್ಥೂಲ ಜೀವನ ಚಿತ್ರಣವನ್ನು ರಚಿಸಬಹುದಲ್ಲದೆ ಪರಿಪೂರ್ಣ ಜೀವನಚರಿತ್ರೆಯ ನಿರೂಪಣೆ ಸಾಧ್ಯವಿಲ್ಲದ ಮಾತು. ಆದರೆ ವಿದ್ವತ್ ನೆಲೆಯಲ್ಲಿ ವಿದ್ವತ್ಸಂಪನ್ನ ಕನಕದಾಸರು ಕುಲಾತೀತರಾಗಿ ಕಾಲಾತೀತರಾಗಿ ಕನ್ನಡ ಸಾರಸ್ವತ ಲೋಕದ ಪ್ರಜ್ವಲ ತಾರೆಯಾಗಿದ್ದಾರೆ.ವೆ೦ಕಟೇಷ್ ಹೊಸುರ್

ಕನಕದಾಸರ ಒ೦ದು ಕೀರ್ತನೆ
ಕನಕದಾಸರ ಕಾವ್ಯದ ಸರಾಗತೆಗೆ ಒ೦ದು ಉದಾಹರಣೆ:

ನೀ ಮಾಯೆಯೊಳಗೊ, ನಿನ್ನೊಳು ಮಾಯೆಯೊ
ನೀ ದೇಹದೊಳಗೊ, ನಿನ್ನೊಳು ದೇಹವೊ
ಬಯಲು ಆಲಯದೊಳಗೊ, ಆಲಯವು ಬಯಲೊಳೊಗೊ
ಬಯಲು ಆಲಯವೆರಡು ನಯನದೊಳಗೊ
ನಯನ ಬುದ್ಧಿಯೊಳಗೊ, ಬುದ್ಧಿ ನಯನದೊಳಗೊ
ನಯನ ಬುದ್ಧಿಗಳೆರಡು ನಿನ್ನೊಳಗೊ ಹರಿಯೆ
ಸವಿಯು ಸಕ್ಕರೆಯೊಳಗೊ, ಸಕ್ಕರೆಯು ಸವಿಯೊಳಗೊ
ಸವಿಯು ಸಕ್ಕರೆಯೆರಡು ಜಿಹ್ವೆಯೊಳಗೊ
ಜಿಹ್ವೆ ಮನಸಿನೊಳಗೊ, ಮನಸು ಜಿಹ್ವೆಯೊಳಗೊ
ಜಿಹ್ವೆ ಮನಸುಗಳೆರಡು ನಿನ್ನೊಳಗೊ ಹರಿಯೆ
ಕುಸುಮದೊಳು ಗ೦ಧವೊ, ಗ೦ಧದೊಳು ಕುಸುಮವೊ
ಕುಸುಮ ಗ೦ಧಗಳೆರಡು ಘ್ರಾಣದೊಳಗೊ
ಅಸಮಭವ ಕಾಗಿನೆಲೆಯಾದಿ ಕೇಶವರಾಯ
ಉಸುರಲೆನ್ನಳವಲ್ಲ ಎಲ್ಲ ನಿನ್ನೊಳಗೊ

ಕನಕದಾಸರು

1. ಲೇಖಕನ ಹೆಸರು: ಕನಕದಾಸರು

2. ಕಾಲ: ಕ್ರಿ.ಶ. 1508-1606 (ಸುಮಾರು)

3. ಸ್ಥಳ: ಧಾರವಾಡ ಜಿಲ್ಲೆಯ ಕಾಗಿನೆಲೆ ಎಂಬ ಹಳ್ಳಿ

4. ಮತ-ಧರ್ಮ: ಕುರುಬರು (ಬೇಡರು)

5. ರಾಜಾಶ್ರಯ: ಸ್ವತಃ ಕನಕದಾಸರೇ ಹಾವೇರಿ ಜಿಲ್ಲೆಯಲ್ಲಿರುವ ಬಾಡ ಎಂಬ ಊರಿನ ರಾಜರಾಗಿದ್ದರು.

6. ಬಿರುದುಗಳು: ಭಕ್ತ ಕನಕದಾಸ

7. ಕಿರು ಪರಿಚಯ: ಕನಕದಾಸರು ಕನ್ನಡದ ಪ್ರಮುಖ ಸಂತ ಕವಿಗಳಲ್ಲಿ ಒಬ್ಬರು. ಅವರು ಮೇಲು ಜಾತಿ ಮತ್ತು ವರ್ಗಗಳವರು ಒಡ್ಡಿದ ಅಗ್ನಿಪರೀಕ್ಷೆಯಲ್ಲಿ ಪಾಡುಪಟ್ಟು, ತನ್ನ ಭಕ್ತಿ-ಪ್ರತಿಭೆಗಳನ್ನು ತೋರಿಸಬೇಕಾಯಿತು. ಅವರು ಅನುಭವಿಸಿದ ತಲ್ಲಣಗಳು ಮತ್ತು ಇಕ್ಕಟ್ಟುಗಳು ಅವರ ಕೃತಿಗಳಲ್ಲಿ ಹಲವು ಬಗೆಗಳಲ್ಲಿ ಮೂಡಿಬಂದಿವೆ. ಕನಕದಾಸರು ಕೀರ್ತನೆಗಳು ಮತ್ತು ಕಾವ್ಯಗಳು ಎರಡನ್ನೂ ರಚಿಸಿದ ಕೆಲವೇ ಕೆಲವು ಹರಿದಾಸರಲ್ಲಿ ಒಬ್ಬರೆಂಬ ಸಂಗತಿಯನ್ನು ಗಮನಿಸಬೇಕು.

ಆ ಕಾಲದ ಸಾಹಿತ್ಯಸಂದರ್ಭದಲ್ಲಿ ಕನಕದಾಸರಿಗೆ ವಿಶಿಷ್ಟವಾದ ಹಿನ್ನೆಲೆಯಿತ್ತು. ಅವರು ಹಿಂದುಳಿದ ಜಾತಿಯಲ್ಲಿ ಹುಟ್ಟಿದವರು, ಆದರೆ, ಅವರು ಸಾಮಂತ ರಾಜರೋ ಪಾಳೆಯಗಾರರೋ ಆಗಿದ್ದುದರಿಂದ ಅವರಿಗೆ ಯುದ್ಧ ಮತ್ತು ಆಡಳಿತಗಳ ನೇರವಾದ ಅನುಭವವಿತ್ತು. ಅವರ ತವರು ನೆಲವಾದ ಕಾಗಿನೆಲೆಯಲ್ಲಿ ಇಂದಿಗೂ ಇರುವ ಆದಿಕೇಶವನ ಗುಡಿಯ ದೇವತೆಯಾದ ಕೇಶವನು ಅವರ ಆರಾಧ್ಯದೈವವಾಗಿದ್ದು ಅವೆರ ಅಂಕಿತವಾದ ‘ಕಾಗಿನೆಲೆಯಾದಿಕೇಶವರಾಯ‘ ಎನ್ನುವುದು ಅಲ್ಲಿಂದಲೇ ಬಂದಿದೆ. ಅವರು ಕರ್ನಾಟಕ ಹಾಗೂ ಮಹಾರಾಷ್ಟ್ರಗಳಲ್ಲಿ ಮಾಡಿದ ನಿರಂತರವಾದ ತಿರುಗಾಟಗಳು ಮತ್ತು ಮತಾಂಧರಾದ ಧಾರ್ಮಿಕ ಮುಖಂಡರೊಂದಿಗಿನ ಅವರ ಮುಖಾಮುಖಿಗಳು ಸಾಹಸ-ವಿಷಾದಗಳೀಂದ ಕೂಡಿವೆ. ಅವರ ಯಾತನೆಗಳು, ಭಾವಗೀತೆಯಂತಹ ಕೀರ್ತನೆಗಳಲ್ಲಿ ಬಹಳ ಸಮರ್ಥವಾದ ಅಭಿವ್ಯಕ್ತಿಯನ್ನು ಪಡೆದಿವೆ. ಕನಕದಾಸರ ಹಿರಿಯರೂ ಸಮಕಾಲೀನರೂ ಆದ ವ್ಯಾಸರಾಯರು, ಪುರಂದರದಾಸರು ಮುಂತಾದವರು ಅವರ ಭಕ್ತಿ ಮತ್ತು ಪ್ರತಿಭೆಗಳನ್ನು ಮೆಚ್ಚಿ ಕೊಂಡಾಡಿದ್ದಾರೆ. ಆದರೆ, ಮತಾಂಧರಾದ ಮೇಲುಜಾತಿಗಳವರು ಅವರ ಯೋಗ್ಯತೆಯನ್ನು ಪ್ರಶ್ನಿಸಿದರು. ಅವರು ಶ್ರೀವೈಷ್ಣವ ಸಿದ್ಧಾಂತವನ್ನು ಇಷ್ಟಪಟ್ಟಿದ್ದರೆಂಬ ಊಹಾಪೋಹಗಳಿವೆ. ಅದೇನೇ ಇರಲಿ, ದ್ವೈತ ತಾತ್ವಿಕತೆಯ ಮೂಲ ನೆಲೆಗಳಿಗೆ ಕೊಂಚವಾದರೂ ನಿಷ್ಠೆಯನ್ನು ತೋರಿಸುವುದು ಅವರಿಗೆ ಅನಿವಾರ್ಯವಾಗಿತ್ತು. ಆದ್ದರಿಂದಲೇ, ಅವರ ಅನೇಕ ಕೀರ್ತನೆಗಳು ಆ ಧರ್ಮದ ಚೌಕಟ್ಟನಲ್ಲಿ ರಚಿತವಾಗಿವೆ. ಆದರೆ, ಅವರು ಅಂತರಂಗದ ಭಾವನೆಗಳಿಗೆ ಕಟ್ಟುಪಾಡಿಲ್ಲದೆ, ನುಡಿಗೊಡುವ ಅನೇಕ ಕೀರ್ತನೆಗಳನ್ನು ಹಾಡಿಕೊಂಡಿದ್ದಾರೆ. ಕನಕದಾಸರ ಕೀರ್ತನೆಗಳು ಈ ವ್ಯಥೆಯಿಂದ ಆರ್ದ್ರವಾಗಿದ್ದು, ಜಾತಿಪದ್ಧತಿಯ ಪರಿಣಾಮವಾದ ಅಸಮಾನತೆಯ ವಿರುದ್ಧ ಗಟ್ಟಿಯಾದ ದನಿಯೆತ್ತುತ್ತವೆ. ಅನೇಕ ಕೀರ್ತನೆಗಳು ದ್ವೈತಸಿದ್ಧಾಂತದ ಚೌಕಟ್ಟಿನಿಂದ ಆಚೆಗೆ ಹೋಗುವುದಿಲ್ಲವೆನ್ನುವುದು ನಿಜವಾದರೂ ಅವುಗಳೊಳಗೆ ಆಳವಾದ ವಿಷಾದವೂ ಇದೆ

ಭಾಮಿನಿ ಷಟ್ಪದಿಯಲ್ಲಿ ರಚಿತವಾಗಿರುವ ‘ನಳಚರಿತೆ‘ ಕನ್ನಡದ ಜನಪ್ರಿಯ ಕಾವ್ಯಗಳಲ್ಲಿ ಒಂದು. ಇದರಲ್ಲಿ ಒಂಬತ್ತು ಅಧ್ಯಾಯಗಳಿದ್ದು ಅವು ಸುಮಾರು 480 ಪದ್ಯಗಳನ್ನು ಒಳಗೊಂಡಿವೆ. ಒಂದು ನೆಲೆಯಲ್ಲಿ ಇದು ನಿಜವಾದ ಪ್ರೇಮಿಗಳು ಎದುರಿಸುವ ಪಡಿಪಾಟಲುಗಳನ್ನು ನಿರೂಪಿಸುವುದರಿಂದಲೇ ಆತ್ಮೀಯವಾಗುತ್ತದೆ. ಮಹಾಭಾರತದಿಂದ ತೆಗೆದುಕೊಳ್ಳಲಾಗಿರುವ ಈ ಉಪಾಖ್ಯಾನವು ನಳ-ದಮಯಂತಿಯರ ಜೀವನವನ್ನು ಸರಳವಾದರೂ ಶಕ್ತಿಶಾಲಿಯಾದ ಶೈಲಿಯಲ್ಲಿ ನಿರೂಪಿಸುತ್ತದೆ. ಇ ದಂಪತಿಗಳು ಎದುರಿಸಿದ ಕಾಡು ಮತ್ತು ಕಾಳ್ಗಿಚ್ಚುಗಳ ವರ್ಣನೆಯು ಬಹಳ ಸಹಜವಾಗಿದೆ. ಈ ಕಾವ್ಯವು ತನ್ನ ಅನೇಕ ಆಶಯಗಳನ್ನು ಜಾನಪದದಿಂದ ತೆಗೆದುಕೊಂಡಿದೆ. ‘ನಳಚರಿತೆ‘ ಮುಖ್ಯವಾಗಿ ಮನುಷ್ಯಜೀವಿಗಳ ಕಷ್ಟಸುಖಗಳ ಹಂಚಿಕೊಳ್ಳುವಿಕೆಯೇ ವಿನಾ ತಾತ್ವಿಕವಾದ ಉಪದೇಶವಲ್ಲ.

‘ಮೋಹನತರಂಗಿಣಿ‘ ಸಾಂಗತ್ಯವೆಂಬ ಛಂದೋಪ್ರಕಾರವನ್ನು ಬಳಸಿಕೊಂಡಿರುವ ದೊಡ್ಡ ಗಾತ್ರದ ಕಾವ್ಯ. ಈ ಕಾವ್ಯವು ಕೃಷ್ಣನ ಮೊಮ್ಮಗನಾದ ಅನಿರುದ್ಧ ಮತ್ತು ಬಾಣಾಸುರನ ಮಗಳಾದ ಉಷಾರ ಪ್ರಣಯಕಥೆಯನ್ನು ವಸ್ತುವಾಗಿ ಹೊಂದಿದೆ. ಈ ಕಾವ್ಯವು ಕೂಡ ಯಾವುದೇ ಕೃಷ್ಣಕಥೆಯ ಮೂಲ ಆಕರಗಳಾದ ಭಾಗವತ, ಹರಿವಂಶ, ವಿಷ್ಣುಪುರಾಣ ಮತ್ತು ಮಹಾಭಾರತಗಳಿಂದ ತನಗೆ ಅಗತ್ಯವಾದ ವಿವರಗಳನ್ನು ತೆಗೆದುಕೊಂಡಿದೆ. ಮನ್ಮಥನ ಹುಟ್ಟು, ಶಂಬರಾಸುರನ ವಧೆ, ಉಷಾ ಮತ್ತು ಅನಿರುದ್ಧರ ಪ್ರಣಯ, ಬಾಣಾಸುರವಧೆ ಮುಂತಾದವು ಈ ಕಾವ್ಯದ ಮುಖ್ಯ ಘಟನೆಗಳು. ಅದೆಲ್ಲಕ್ಕಿಂತ ಮುಖ್ಯವಾಗಿ ಮೋಹನತರಂಗಿಣಿಯು ತನ್ನ ಕಾಲದ ಕರ್ನಾಟಕದ ಜೀವನಶೈಲಿಯ ಮೇಲೆ ಬೆಳಕು ಚೆಲ್ಲುತ್ತದೆ. ನಿಧಾನಗತಿಯ ಹಾಗೂ ಗೇಯತೆಯ ಕಡೆಗೆ ಒಲಿಯುವ ಸಾಂಗತ್ಯದ ಛಂದಸ್ಸು, ಈ ಕಾವ್ಯದ ವಸ್ತುವಿಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ.

‘ರಾಮಧಾನ್ಯಚರಿತ್ರೆ‘ಯು ಇಡೀ ಕನ್ನಡ ಸಾಹಿತ್ಯಚರಿತ್ರೆಯಲ್ಲಿಯೇ ಬಹಳ ಅನನ್ಯವಾದ ಕಾವ್ಯ. ಜಾತಿಪದ್ಧತಿ ಮತ್ತು ಜನಾಂಗಿಕ ಭೇದದಿಂದ ಉಂಟಾಗುವ ದಾರುಣ ಯಾತನೆಯನ್ನು ಬಹಳ ಸಾಂಕೇತಿಕವಾಗಿ ಮತ್ತು ಅನುಪಮವಾದ ಕಲ್ಪನಾಶಕ್ತಿಯ ಬಲದಿಂದ ಕಟ್ಟಿಕೊಡುವುದು ಈ ಕಾವ್ಯದ ಹೆಗ್ಗಳಿಕೆ. ಅದು ಅಹಂಕಾರಿಯಾದ ಬತ್ತ ಮತ್ತು ವಿನಯದಿಂದ ತಲೆಬಾಗಿದ, ಜನಸಾಮಾನ್ಯರ ಆಹಾರವಾದ ನರೆದಲೆಗಳ ನಡುವೆ ನಡೆಯುವ ಕಾಲ್ಪನಿಕವಾದ ಮುಖಾಮುಖಿಯ ಕಥನ. ಅವರಿಬ್ಬರ ನಡುವೆ ಯಾರು ಶ್ರೇಷ್ಠರೆನ್ನುವ ವಿಷಯದಲ್ಲಿ ಜಗಳ ನಡೆಯುತ್ತದೆ. ಕೊನೆಯ ತೀರ್ಮಾನವನ್ನು ಕೊಡುವ ಕೆಲಸವನ್ನು ರಾಮನು ನಿರ್ವಹಿಸಬೇಕಾಗುತ್ತದೆ. ಅವನು ಒಂದು ಪರೀಕ್ಷಯನ್ನು ಮಾಡಿ ನರೆದಲೆಗದ ಪರವಾದ ತೀರ್ಮಾನವನ್ನು ಕೊಡುತ್ತಾನೆ. ಅದನ್ನು ರಾಗಿ ಎಂದು ಕರೆಯುತ್ತಾನೆ. (ರಾಘವ ಧಾನ್ಯ) ಈ ಕಾವ್ಯಕ್ಕೆ ಇರುವ ಸಾಂಕೇತಿಕ ಹಾಗೂ ಸಾಮಾಜಿಕವಾದ ಮಹತ್ವವನ್ನು ಕನ್ನಡ ಸಾಹಿತ್ಯದ ಪ್ರಧಾನಧಾರೆಯು ಗುರುತಿಸಿದ್ದು ಈಚೆಗೆ. ಹಿಂದುಳಿದ ವರ್ಗಗಳು ಮುಂದೆ ಬಂದಿದ್ದಕ್ಕೂ ಈ ಕಾವ್ಯದ ಮರುಹುಟ್ಟಿಗೂ ಇರುವ ಸಂಬಂಧವು ಕಾಕತಾಳೀಯವಲ್ಲ. ಈ ಕಾವ್ಯವನ್ನು ಅಂಚಿಗೆ ತಳ್ಳಿ, ಕಡಿಮೆ ಆಸ್ಫೋಟಕವಾದ ಕಾವ್ಯಗಳನ್ನು ಹೊಗಳಿರುವುದು, ಕನ್ನಡ ಸಾಹಿತ್ಯವಿಮರ್ಶೆಯ ಮಾನದಂಡಗಳ ಬಗ್ಗೆ, ಮುಖ್ಯವಾದ ಸತ್ಯಗಳನ್ನು ಹೇಳುತ್ತದೆ.

‘ಕನಕನ ಮುಂಡಿಗೆಗಳು‘, ಒಗಟಿನ ಹೊರ ಆವರಣದೊಳಗೆ, ಮಹತ್ವದ ತಾತ್ವಿಕ ಸಂಗತಿಗಳನ್ನು ಹೊಂದಿರುವ, ಚಿಕ್ಕ ಗೇಯ ಕವಿತೆಗಳನ್ನು ಒಳಗೊಳ್ಳುತ್ತವೆ. ಇವುಗಳನ್ನು ಅರ್ಥ ಮಾಡಿಕೊಳ್ಳು ತಾಂತ್ರಿಕವಾದ ಪರಿಭಾಷೆಯ ನಿಕಟ ಪರಿಚಯ ಇರಬೇಕು. ‘ಹರಿಭಕ್ತಸಾರ‘ದಲ್ಲಿ ಭಾಮಿನಿ ಷಟ್ಪದಿಯಲ್ಲಿ ರಚಿತವಾಗಿರುವ 110 ಪದ್ಯಗಳಿವೆ. ಅವು ಕನಕದಾಸರ ಜೀವನದೃಷ್ಟಿ ಮತ್ತು ನೈತಿಕ ನೆಲೆಗಟ್ಟನ್ನು ಬಹಳ ಭಾವನಾತ್ಮಕವೂ ಸರಳವೂ ಆದ ಶೈಲಿಯಲ್ಲಿ ಹೇಳುತ್ತದೆ.

ಒಟ್ಟಂದದಲ್ಲಿ ಹೇಳುವುದಾದರೆ, ಕನ್ನಡ ಸಾಹಿತ್ಯದ ಚರಿತ್ರೆಯಲ್ಲಿ ಕನಕದಾಸರಿಗೆ ವಿಶಿಷ್ಟವಾದ ಸ್ಥಾನವಿದೆ. ನಮ್ಮ ಸಮಕಾಲೀನ ವಾತಾವರಣದಲ್ಲಿ ಅವರ ಕಾವ್ಯ ಮತ್ತು ಜೀವನಗಳು ಸ್ಫೂರ್ತಿದಾಯಕವಾಗಿವೆ. ಏಕೆಂದರೆ, ಇಂದು ಹಿಂದುಳಿದ ವರ್ಗಗಳ ಕಲಾಪ್ರತಿಭೆ ಮತ್ತು ಸಾರ್ವಜನಿಕ ಸಮ್ಮತಿಯನ್ನು ಪಡೆಯುವ ಅವರ ಪ್ರಯತ್ನಗಳು ಮುನ್ನೆಲೆಗೆ ಬಂದಿವೆ.



ಕೃತಿಗಳು:

ಅ, ಮೋಹನತರಂಗಿಣಿ:

ಮೊದಲ ಆವೃತ್ತಿ: 1913. ಎಂ.ಎ. ರಾಮಾನುಜ ಅಯ್ಯಂಗಾರ್, ಕರ್ನಾಟಕ ಕಾವ್ಯಕಲಾನಿಧಿ ಮಾಲೆ, ಮೈಸೂರು.

ನಂತರದ ಆವೃತ್ತಿಗಳು: ಆರ್.ಸಿ. ಹಿರೇಮಠ, (1973), ಎಸ್.ಎಸ್. ಕೋತಿನ(1984) (ಗದ್ಯಾನುವಾದ ಸಹಿತ), ಜಿ.ಜಿ. ಮಂಜುನಾಥನ್, (1999) ಮತ್ತು ಬಿ.ಎಸ್.ಸಣ್ಣಯ್ಯ, 1963 (ಸಂಗ್ರಹ ಆವೃತ್ತಿ)

ಆ. ನಳಚರಿತ್ರೆ:

ಮೊದಲ ಆವೃತ್ತಿ: 1888, ಸಂ. ??, ವಿಚಾರದರ್ಪಣ ಮುದ್ರಾಕ್ಷರಶಾಲೆ, ಬೆಂಗಳೂರು

ನಂತರದ ಆವೃತ್ತಿಗಳು: ಎಸ್.ಜಿ. ನರಸಿಂಹಾಚಾರ್ ಮತ್ತು ಎಂ.ಎ. ರಾಮಾನುಜ ಅಯ್ಯಂಗಾರ್(1903) ಕರ್ನಾಟಕ ಕಾವ್ಯಕಲಾನಿಧಿ, ಪಿ.ಆರ್.ಕರಿಬಸವಶಾಸ್ತ್ರೀ, 1925, ಎಚ್.ಎಂ. ಶಂಕರನಾರಾಯಣರಾವ್, 1953, ದೇ.ಜವರೇಗೌಡ, 1985, ಹತ್ತೂರು ಶಂಕರನಾರಾಯಣರಾವ್, 1976, ಬಿ.ವಿ. ಶಿರೂರ, 1981.

ಇ. ಹರಿಭಕ್ತಿಸಾರ:

ಮೊದಲ ಆವೃತ್ತಿ: 1868, ಸರಸ್ವತೀ ನಿಲಯ ಮುದ್ರಾಕ್ಷರ ಶಾಲಾ, ಮದ್ರಾಸು

ನಂತರದ ಆವೃತ್ತಿಗಳು: ತಿರುಮಲೆ ಶ್ರೀನಿವಾಸಾಚಾರ್ಯ, ಬಿ. ಕೋದಂಡರಾಮಶೆಟ್ಟಿ (1923), ಶ್ರೀನಿವಾಸ ತಂತ್ರಿ,(1940), ಬಿ.ಶಿವಮೂರ್ತಿಶಾಸ್ತ್ರೀ ಮತ್ತು ಕೆ.ಎಂ.ಕೃಷ್ಣರಾವ್ ಮತ್ತು ಎನ. ರಂಗನಾಥಶರ್ಮ, 1972.

ಈ. ರಾಮಧಾನ್ಯಚರಿತ್ರೆ:

ಮೊದಲ ಆವೃತ್ತಿ: 1963, ಸಂ, ಕೆ.ಸಿ.ಪಂಚಲಿಂಗೇ ಗೌಡ, ಮೈಸೂರು.

ನಂತರದ ಆವೃತ್ತಿ: 1965, ಸಂ. ದೇ. ಜವರೇಗೌಡ, ಮೈಸೂರು.

ಉ. ಕೀರ್ತನೆಗಳು:

ಮೊದಲ ಆವೃತ್ತಿ: 1850, ಇತರ ಕೀರ್ತನಕಾರರೊಂದಿಗೆ

ನಂತರದ ಆವೃತ್ತಿಗಳು: 1965, ಬಿ.ಶಿವಮೂರ್ತಿಶಾಸ್ತ್ರೀ ಮತ್ತು ಕೆ.ಎಂ. ಕೃಷ್ಣರಾವ್, 1972, ಬೆಟಗೇರಿ ಕೃಷ್ಣಶರ್ಮ ಮತ್ತು ಬೆಂಗೇರಿ ಹುಚ್ಚೂರಾವ್, 1999 ಸುಧಾಕರ (ಕೀರ್ತನೆಗಳು ಮತ್ತು ಮುಂಡಿಗೆಗಳು)

ಊ: ಕನಕನ ಮುಂಡಿಗೆಗಳು

ಋ: ನೃಸಿಂಹಸ್ತವ (ಇನ್ನೂ ಸಿಕ್ಕಿಲ್ಲ)

9. ಮುಂದಿನ ಓದು ಮತ್ತು ಲಿಂಕುಗಳು:

ಅ. ಕನಕದಾಸರ ಜೀವನಚರಿತ್ರೆ ಮತ್ತು ಪದಗಳು, ಕಲಮದಾನಿ ಗುರುರಾಯ, 1965.

ಆ. ಮಹಾತ್ಮಾ ಕನಕದಾಸ ಪ್ರಶಸ್ತಿ, 1965

ಇ. ಕನಕ ಮಹಿಮಾದರ್ಶ, ಭೀಮಾಚಾರ್ಯ ವಡವಿ, 1926

ಈ. ಕವಿ ಕನಕದಾಸರು, ಕಟ್ಟಿ ಶೇಷಾಚಾರ್ಯ, 1938

ಉ. Kanakadasa: he Golden Servant of Lord Hari by Basavaraja Naikar, National Book Trust, New Delhi.

ಊ: Kanakadasa: Philosopher-Poet-Haridasa: A Transcreation of his Bhakti Poems, Haribhsktisara, B.S. Rao, 2001, East West Books, Madras.

ಋ. Compositions of Sri Kanaka Dasa


ಕನಕದಾಸ
http://kagineledevelopmentauthority.com/AboutKanakadaasa.html

ದಾಸ ಸಾಹಿತ್ಯದಲ್ಲಿಯೆ ವಿಶಿಷ್ಟ ವ್ಯಕ್ತಿತ್ವದವರು ಕನಕದಾಸರು. ಈಗಿನ ಹಾವೇರಿ ಜಿಲ್ಲೆಯ ಬಂಕಾಪೂರ ಪ್ರದೇಶಕ್ಕೆ ಕುರುಬ ಜನಾಂಗದ ಬೀರಪ್ಪನೆಂಬಾತನು ಡಣ್ಣಾಯಕನಾಗಿದ್ದ. ಆತನ ಪತ್ನಿ ಬಚ್ಚಮ್ಮ. ಈ ದಂಪತಿಗಳ ಏಕೈಕ ಪುತ್ರನೇ ತಿಮ್ಮಪ್ಪ. ತಂದೆಯ ಅಕಾಲ ಮೃತ್ಯುವಿನಿಂದ ಕಿರಿಯ ವಯಸ್ಸಿನಲ್ಲಿ ತಿಮ್ಮಪ್ಪ ನಾಯಕನಾದ. ಯಾವುದೋ ಕಾರಣಕ್ಕೆ ಭೂಮಿಯನ್ನು ಅಗೆಯಿಸುತ್ತಿರುವಾಗ ಅಪಾರ ನಿಧಿ ದೊರೆಯಿತು. ಅದನ್ನು ತನ್ನ ವಿಲಾಸಿ ಜೀವನಕ್ಕೆ ಬಳಸಿಕೊಳ್ಳದೆ ಪ್ರಜೆಗಳ ಹಿತರಕ್ಷಣೆಗೆ ಹಾಗೂ ಧಾರ್ಮಿಕ ಕಾರ್ಯಗಳಿಗಾಗಿ ಬಳಸಿ ಜನರಿಂದ ಕನಕದಾಸನೆಂಬ ಪ್ರಶಂಸೆಗೆ ಪಾತ್ರನಾದ. ಯುದ್ಧಭೂಮಿಯಲ್ಲಿ ಬಲವಾಗಿ ಗಾಯಗೊಂಡು ಮರಣಾವಸ್ಥೆಯಲ್ಲಿರುವಾಗ ಯಾವುದೋ ಚೇತನ ಶಕ್ತಿ ಶುಶ್ರೂಷೆಯನ್ನು ಮಾಡಿದಂತಾಗಿ, ‘ಕನಕಾ ಇನ್ನಾದರೂ ನನ್ನ ದಾಸನಾಗು’ ಎಂದು ಅಶರೀರವಾಣಿ ಆಯಿತಂತೆ. ಇವರ ಕಾಲಮಾನವನ್ನು (೧೫೦೮-೧೯೦೬) ಹದಿನಾರನೇ ಶತಮಾನ ಎಂಬ ಒಮ್ಮತ ಅಭಿಪ್ರಾಯಕ್ಕೆ ಬರಲಾಗಿದೆ. ನವಂಬರ್ ೨೭ ರಂದು ಸಂತ ಕನಕದಾಸರ ಜಯಂತಿಯನ್ನು ಆಚರಿಸಲಾಗುತ್ತದೆ.

ಹಾವೇರಿ ಜಿಲ್ಲೆಯ ಕಾಗಿನೆಲೆ ಕನಕದಾಸರ ಕರ್ಮಭೂಮಿ ಆಗಿತ್ತು. ಈಗ ಅದರ ಅಭಿವೃದ್ಧಿಗೆ ಕರ್ನಾಟಕ ಸರ್ಕಾರ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಿತು. ಕನಕದಾಸರ ಹುಟ್ಟೂರು ಬಾಡ. ಇದೂ ಹಾವೇರಿ ಜಿಲ್ಲೆಯಲ್ಲಿದೆ. ಈ ಬಾಡದಲ್ಲಿ ಕನಕದಾಸರ ಅರಮನೆ ಇದ್ದ ಬಗ್ಗೆ ದಾಖಲೆಗಳು ದೊರಕಿವೆ. ಅದರ ಉತ್ಖನನ ಕಾರ್ಯ ಸಾಗಿದೆ. ಬಾಡದ ಅಭಿವೃದ್ಧಿಯನ್ನು ಪ್ರಾಧಿಕಾರ ಕೈಗೆತ್ತಿಕೊಂಡಿದೆ. ಕೆಲವು ಸ್ಥಳಗಳು ವ್ಯಕ್ತಿ ಮಹಿಮೆಯಿಂದಾಗಿ ಪ್ರಖ್ಯಾತಿಗೆ ಬರುತ್ತವೆ. ಕೆಲವು ಸ್ಥಳಗಳ ಮಹಿಮೆಯಿಂದಾಗಿ ವ್ಯಕ್ತಿಗಳು ಪ್ರಖ್ಯಾತಿ ಪಡೆಯುತ್ತಾರೆ. ಕಾಗಿನೆಲೆ, ಬಾಡ ಹಾಗೂ ಕನಕದಾಸರು ಸಂದರ್ಶಿಸಿದ ಸ್ಥಳಗಳು ಕನಕದಾಸರ ಮಹತ್ವದೊಂದಿಗೇ ಮಹತ್ವ ಪಡೆದಿವೆ. ಇದು ಇತಿಹಾಸ. ಸಂಸ್ಕೃತಿಯ ಅಂತಸ್ಸತ್ವ.

ದಾಸ ಪರಂಪರೆಯ ಹುಟ್ಟು
ಕನ್ನಡ ಸಾಹಿತ್ಯ ಪರಂಪರೆಯಲ್ಲಿ ವಚನ ಸಾಹಿತ್ಯ ಹಾಗೂ ದಾಸ ಸಾಹಿತ್ಯಗಳೆರಡೂ ಪ್ರಮುಖ ಘಟ್ಟಗಳು. ಸಂಸ್ಕೃತಭೂಯಿಷ್ಠವಾದ ಕನ್ನಡ ಪದಗಳಿಂದ, ಜನಸಾಮಾನ್ಯರಿಗೆ ಕಬ್ಬಿಣದ ಕಡಲೆಯಾಗಿದ್ದ ಕಾವ್ಯ ಸ್ವರೂಪದಲ್ಲಿ ಮಾತ್ರವೇ ನೋಡ ಸಿಗುತ್ತಿದ್ದ ಸಾಹಿತ್ಯ ಜನರ ಬಳಿ ಸುಳಿದುದೇ ಈ ಹೊಸ ಸಾಹಿತ್ಯ ಪ್ರಕಾರಗಳಿಂದ.

೧೨ ನೇ ಶತಮಾನದಲ್ಲಿ ಮೊದಲ್ಗೊಂಡ ರಗಳೆ, ವಚನ ಸಾಹಿತ್ಯ ಪ್ರಕಾರದ ಮೂಲಕ ಶಿವಶರಣರ, ವಚನಕಾರರ ಮೂಲಕ ಜನಮನ ತಟ್ಟಲು ಮುಂದಾಯಿತು. ಇದರ ನಂತರ, ೧೩ನೇ ಶತಮಾನದಲ್ಲಿ ನರಹರಿತೀರ್ಥದಾಸರಿಂದ ಆರಂಭಗೊಂಡ ದಾಸ ಸಾಹಿತ್ಯ, ಮುಂದಿನ ಐದು ಶತಮಾನಗಳ ಕಾಲ ಜನಸಾಮಾನ್ಯರ ಮನೆ-ಮನ ಮುಟ್ಟಿತು. ಈ ಪೈಕಿ, ೧೬ ನೇ ಶತಮಾನದಲ್ಲಿ ಬಾಳಿ ಬೆಳಗಿದ ಪುರಂದರದಾಸ-ಕನಕದಾಸರ ಕಾಲವನ್ನು ದಾಸ ಸಾಹಿತ್ಯದ ಸುವರ್ಣ ಯುಗವೆಂದು, ಪುರಂದರದಾಸ ಹಾಗೂ ಕನಕದಾಸರನ್ನು ದಾಸ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಬಣ್ಣಿಸಲಾಗಿದೆ. ದಾಸ ಸಾಹಿತ್ಯದ ಮೂಲಕ ಸಾಹಿತ್ಯವನ್ನು ಇನ್ನಷ್ಟು ಸರಳಗೊಳಿಸಿದ, ಕನ್ನಡ ಸಾಹಿತ್ಯಕ್ಕೆ ಹೊಸತನ ತುಂಬಿದ ಕನಕದಾಸರನ್ನು ಹೊಸಗನ್ನಡ ಸಾಹಿತ್ಯದ ಕೋಗಿಲೆ ಎಂದು, ಕದಾಸ ಸಾಹಿತ್ಯ ಬನದ ಕೋಗಿಲೆ ಎಂದು ಪ್ರಾಜ್ಞರು ಕರೆದುದುಂಟು

ಕನ್ನಡ ಸಾಹಿತ್ಯದಲ್ಲಿ ೧೨ ನೇ ಶತಮಾನದ ವಚನ ಸಾಹಿತ್ಯ ಹಾಗೂ ೧೬ ನೇ ಶತಮಾನದ ದಾಸ ಸಾಹಿತ್ಯ ಹೆಚ್ಚು ಜನಮುಖಿಯಾದವು. ವಚನ ಸಾಹಿತ್ಯದ ಸಮರತೆ ಹಾಗೂ ವ್ಯಾಪಕತೆ ದಾಸ ಸಾಹಿತ್ಯಕ್ಕೆ ಇರದ್ದಿದ್ದರೂ, ಜಾತಿ-ನೀತಿ ಮತ್ತು ಕರ್ಮಠತನದ ಉಡದ ಪಟ್ಟಿನ ನಡುವೆಯೂ, ಕನಕದಾಸರು ತಮ್ಮ ವಿಷ್ಣು ಭಕ್ತಿಯ ಜನತೆಯಲ್ಲಿ ಸಾಮಾಜಿಕ ಚಿಂತನೆ, ಕಾವ್ಯ ಮತ್ತು ಕೀರ್ತನೆಗಳ ಮೂಲಕ ಸಾಹಿತ್ಯ ಹಾಗೂ ಸಂಗೀತಕ್ಕೆ ಮಹತ್ತರ ಕಾಣಿಕೆ ಸಲ್ಲಿಸಿ, ದಾಸ ಸಾಹಿತ್ಯದ ತೂಕವನ್ನು ಮತ್ತಷ್ಟು ಹೆಚ್ಚಿಸಿದರು.

ಕನಕದಾಸರು (೧೫೦೮-೧೬೦೬) ಸಾಮಾನ್ಯ ಕಾಲದಲ್ಲಿ (ಕುರುಬ) ಹುಟ್ಟಿದರೂ ತಮ್ಮ ಸ್ವಸಾಮರ್ಥ್ಯ ಮತ್ತು ಪ್ರತಿಭೆಯಿಂದ ಹಿರಿಮೆ ಗಳಿಸಿದವರು. ಕನಕರು ಕೆಳಸ್ತರದಿಂದ ಬಂದವರಾದ್ದರಿಂದ, ಕೆಳಜಾತಿಯವರ ನೋವಿನ ಅರಿವು ಹಾಗೂ ಡಣ್ಣಾಯಕ(ಒಂದು ಪ್ರದೇಶದ ಮುಖ್ಯಸ್ಥ)ರಾಗಿದ್ದರಿಂದ ಮೇಲ್ವರ್ಗದ ಜೀವನದ ಅನುಭವ ಅವರದಾಗಿತ್ತು. ತಮ್ಮ ಸಮಕಾಲೀನ ದಾಸರಂತೆ ನಡೆದ ದಾರಿಯಲ್ಲೇ ನಡೆಯದ ಕನಕದಾಸರು, ಏಕಮುಖಿಯಾಗಿ ಕೇವಲ ಹರಿಯನ್ನು ಹೊಗಳದೆ, ಆರು ಬದುಕಿದರಯ್ಯ ಹರಿ ನಿನ್ನ ನಂಬಿ ಎಂದು ವೈಚಾರಿಕ ನೆಲೆಯಲ್ಲಿ ಹರಿಯನ್ನು ಪ್ರಶ್ನಿಸಿದ್ದೂ ಉಂಟು. ಅವರ ವೈಚಾರಿಕ ಮನೋಭಾವದಿಂದಾಗಿ, ಅವರು ತಮ್ಮ ಸಮಕಾಲೀನ ಬದುಕಿನ ನೈಜ ಚಿತ್ರಣವನ್ನು ಮುಂದಿನ ಜನಾಂಗಕ್ಕೆ ಕೊಡಲು ಸಾಧ್ಯವಾಗದೆ ಇರುವ ಕಾರಣಕ್ಕಾಗಿಯೇ ಕನಕದಾಸರು ದಾಸರಲ್ಲಿ ಅತೀ ಮುಖ್ಯರೆನ್ನಿಸುತ್ತಾರೆ

ಕನಕದಾಸರ ಜೀವನ ಸಂದೇಶ
- ಡಾ.ಜಗನ್ನಾಥ ಆರ್.ಗೇನಣ್ಣವರ
ದಾಸ ಸಾಹಿತ್ಯದಲ್ಲಿ ದಿಗ್ಗಜರೆನಿಸಿಕೊಂಡವರಲ್ಲಿ ಸಂತಶ್ರೀ ಕನಕದಾಸರು ಒಬ್ಬರು. ಇವರಿಗೆ ದಾಸಸಾಹಿತ್ಯದಲ್ಲಿ ವಿಶಿಷ್ಟ ಸ್ಥಾನವಿದೆ. ಸಂತಶ್ರೀ ಕನಕದಾಸರು ಸಮಾಜದ ಕೆಳಸ್ತರದಿಂದ ಬಂದವರಾಗಿದ್ದರಿಂದ ಕೆಳಜಾತಿಯವರ ನೋವಿನ ಅರಿವು ಹಾಗೂ ಡಣ್ಣಾಯಕರಾಗಿದ್ದರಿಂದ ಮೇಲ್ವರ್ಗದವರ ವೈಭವದ ಜೀವನದ ಅನುಭವ ಅವರಿಗೆ ಇತ್ತು. ತಮ್ಮ ಸಮಕಾಲೀನ ದಾಸರಂತೆ ಸಾಹಿತ್ಯದಲ್ಲಿ ಹರಿಯನ್ನು ‘ಎಲ್ಲಿರುವನೋ ರಂಗ ಎಂಬ ಸಂಶಯ ಬೇಡ’ ಎಂದು ಏಕಮುಖಿಯಾಗಿ ಹೊಗಳದೆ ‘ಆರು ಬದುಕಿದರಯ್ಯ ಹರಿ ನಿನ್ನ ನಂಬಿ’ ಎಂದು ಪ್ರಶ್ನಿಸಿದ್ದೂ ಉಂಟು. ಇವರು ತಮ್ಮ ಕಾವ್ಯ ಕೀರ್ತನೆಗಳಲ್ಲಿ ಸಮಕಾಲೀನ ಜನಜೀವನದ ಚಿತ್ರಣವನ್ನು ಬಹು ಮಾರ್ಮಿಕವಾಗಿ ಚಿತ್ರಿಸಿದ್ದಾರೆ.

ವಿಜಯನಗರ ಆಡಳಿತಕ್ಕೆ ಒಳಪಟ್ಟ ಬಾಡ ಪ್ರದೇಶ ಅಂದಿನ ೭೮ ಗ್ರಾಮಗಳ ಹೋಬಳಿಯಾಗಿತ್ತು. (ಈಗಿನ ಹಾವೇರಿ ಜಿಲ್ಲೆಯ ಶಿಗ್ಗಾಂವ ಮತ್ತು ಬಂಕಾಪೂರ ಪ್ರದೇಶ) ಇದರ ನಾಡಗೌಡಿಕೆ ಮತ್ತು ಡಣ್ಣಾಯಕ ಅಧಿಕಾರವು ಬೀರಪ್ಪನೆಂಬಾತನಿಗಿತ್ತು. ಬಚ್ಚಮ್ಮ ಆತನ ಮಡದಿ. ಇವರು ಹಾಲು ಮತದ ಕುರುಬ ಜಾತಿಗೆ ಸೇರಿದವರಾಗಿದ್ದರು. ಆಸ್ತಿ-ಅಂತಸ್ತುಗಳಿಗೇನೂ ಕೊರತೆ ಇರಲಿಲ್ಲ. ಆದರೆ ಆತನಿಗೆ ಸಂತಾನ ಭಾಗ್ಯವೇ ಇರಲಿಲ್ಲ. ಹಲವು ದೇವತೆಗಳಿಗೆ ಹರಕೆ ಹೊತ್ತರೂ ಮಕ್ಕಳಾಗಲಿಲ್ಲ. ಆ ಕಾಲದಲ್ಲಿ ಪ್ರತಿಷ್ಠಿತ ವರ್ಗದವರಿಂದ ಪೂಜೆಗೊಂಡು ಪ್ರಸಿದ್ಧಿ ಹೊಂದಿದ್ದ ತಿರುಪತಿ ತಿಮ್ಮಪ್ಪನತ್ತ ದಂಪತಿಗಳು ವಾಲಿದರು. ವಿಜಯನಗರದ ಅರಸರು ಶ್ರೀ ವೈಷ್ಣವ ಮತವನ್ನು ಮೊದಲೇ ಸ್ವೀಕರಿಸಿದ್ದರು. ಅವರ ಅಧೀನ ಡಣ್ಣಾಯಕನಾಗಿದ್ದ ಬೀರಪ್ಪನ ಮೇಲೂ ಆ ಮತದ ಪ್ರಭಾವವಾಗಿರುವುದು ಸ್ವಾಭಾವಿಕ. ತಿರುಪತಿಗೆ ಹೋಗಿ ತಿಮ್ಮಪ್ಪನ ದರ್ಶನ ಪಡೆದು ತಮ್ಮ ಅಳಲನ್ನು ತೋಡಿಕೊಂಡರು. ತಿಮ್ಮಪ್ಪನ ವರ ಪ್ರಸಾದದಿಂದ ಜನಿಸಿದ ಮಗುವಿಗೆ ತಿಮ್ಮಪ್ಪನೆಂದು ನಾಮಕರಣ ಮಾಡಿದರು. ತಿಮ್ಮಪ್ಪನ ಬೆಳವಣಿಗೆಯಾದಂತೆಲ್ಲ ತಂದೆ ತಾಯಿಗಳ ಆಶೆಗಳು ಅಂಕುರವಡೆದವು. ಬೀರೇಗೌಡನು ಮಗನ ವಿದ್ಯಾಭ್ಯಾಸಕ್ಕೆ ಸಕಲ ಸೌಕರ್ಯಗಳನ್ನು ಒದಗಿಸುವಲ್ಲಿ ಸಫಲನಾದನು. ಕತ್ತಿವರಸೆ, ಕುಸ್ತಿ, ಅಶ್ವವಿದ್ಯೆ, ಬೇಟೆಯಾಡುವ ಇನ್ನು ಮುಂತಾದ ವಿದ್ಯೆಗಳಲ್ಲಿ ಮಗನನ್ನು ಪ್ರವೀಣನನ್ನಾಗಿ ಮಾಡಲು ಪ್ರೋತ್ಸಾಹಿಸಿದನು. ಜೊತೆಗೆ ಓದು, ಬರಹ, ಮತ-ಧರ್ಮ, ಸಾಹಿತ್ಯ-ಸಂಗೀತ, ಶಾಸ್ತ್ರ-ಪುರಾಣ ಇತ್ಯಾದಿಗಳ ಅಭ್ಯಾಸಕ್ಕೂ ವ್ಯವಸ್ಥಿತ ಏರ್ಪಾಡನ್ನು ಮಾಡಿದನು. ಹೀಗೆ ತರಬೇತಿದಾರನಾದ ತಿಮ್ಮಪ್ಪನಿಗೆ ಯುದ್ಧವೆಂದರೆ ಎಲ್ಲಿಲ್ಲದ ಹರುಷ. ಇದಕ್ಕೆ ಸಾಕ್ಷಿಯೆಂಬಂತೆ ತಾವೇ ತಮ್ಮ ಒಂದು ಕೀರ್ತನೆಯಲ್ಲಿ...

ಪರ ಬಲವ ಕಂಡರೆ ಉರಿದು ಬೆಂಕಿಯಹ ಮನವ
ಸೆರೆ ಹಾಕಿ ನಿಲ್ಲಿಸಿದೆ ಹರಿಯೆ
ಕನಕ ದಳದಲಿ ಬಂದು ಕಲೆತನೆಂದರೆ ಫೌಜು
ಕನಕು ಮನಕಾಗುವುದು ಹರಿಯೆ

ಈ ರೀತಿಯಾಗಿ ತಮ್ಮ ಶೌರ್ಯವನ್ನು ಧೀರತನವನ್ನು ಮೇಲಿನ ಕೀರ್ತನೆಯಲ್ಲಿ ಪ್ರಸ್ತಾಪಿಸಿದ್ದಾರೆ. ವಿದ್ಯಾವಂತನಾಗಿ ತಿಮ್ಮಪ್ಪ ಬೆಳೆಯುತ್ತಿರುವಾಗ, ಆಕಸ್ಮಿಕವಾಗಿ ನಡೆದ ಯುದ್ಧದಲ್ಲಿ ತಂದೆ ಬೀರಪ್ಪ ಮರಣವನ್ನಪ್ಪುತ್ತಾನೆ. ತಾಯಿ ಬಚ್ಚಮ್ಮ ಚಿಕ್ಕವಯಸ್ಸಿನ ತಿಮ್ಮಪ್ಪನಿಗೆ ಡಣ್ಣಾಯಕ ಅಧಿಕಾರವನ್ನು ವಹಿಸಿ, ಆಡಳಿತವನ್ನು ಮುಂದುವರಿಸುತ್ತಾಳೆ. ತಿಮ್ಮಪ್ಪನಾಯಕ ಯಾವುದೋ ಕಾರಣಕ್ಕೆ ಭೂಮಿಯನ್ನು ಅಗೆಯಿಸುತ್ತಿರುವಾಗ ಅಪಾರ ನಿಧಿ ದೊರೆಯುತ್ತದೆ. ಅದನ್ನು ತನ್ನ ವಿಲಾಸಿ ಜೀವನಕ್ಕೆ ಬಳಸಿಕೊಳ್ಳದೆ ದೀನ-ದಲಿತರಿಗೆ ದಾನ ಧರ್ಮ ಮಾಡಿ, ಮಿಕ್ಕಿದ್ದರಲ್ಲಿ ಜನಹಿತಕ್ಕಾಗಿ ಕೆರೆ ಕಟ್ಟೆಗಳನ್ನು ಕಟ್ಟಿಸುವುದರ ಮೂಲಕ ಜನರ ಪ್ರೀತಿಗೆ ಪಾತ್ರನಾಗುತ್ತಾನೆ. ಅಂದಿನಿಂದ ಪ್ರಜೆಗಳು ಅವನನ್ನು ‘ಕನಕನಾಯಕ’ ಎಂದು ಕರೆಯುತ್ತಾರೆ. ಕನಕನಾಯಕನಿಗೆ ವಿವಾಹವಾಗಿ ಸಂತಾನ ಭಾಗ್ಯವೂ ಆಗಿತ್ತು ಎನ್ನುವುದಕ್ಕೆ ಹರಿಭಕ್ತಿಸಾರದ ಒಂದು ಪದ್ಯ ಪುಷ್ಟಿಯನ್ನು ಕೊಡುತ್ತದೆ.

ಒಡೆಯ ನೀನೆಂದರಿತು ನಾ ನಿ
ನ್ನಡಿಯ ಭಜಿಸದೆ ದುರಳನಾದೆನು
ಮಡದಿ ಮಕ್ಕಳ ಮೋಹದಲಿ ಮನ ಸಿಲುಕುತಡಿಗಡಿಗೆ
ಮಡದಿ ಯಾರೀ ಮಕ್ಕಳ್ಯಾರೀ
ಒಡಲಿಗೊಡೆಯನು ನೀನು ನೀ ಕೈ
ವಿಡಿದು ಮುದದಲಿ ಬಿಡದೆ ರಕ್ಷಿಸು ನಮ್ಮನನವರತ

ಆದರೆ ಮಗು ಬಹುಕಾಲದವರೆಗೆ ಬದುಕಿರಲಿಲ್ಲ. ಹೆಂಡತಿ ಬಹುಕಾಲದವರೆಗೆ ಜೀವಿಸಿದ್ದಳು. ಅವಳೇ ‘ಸುಜ್ಞಾನವಧೂಟಿ’. ಕನಕದಾಸರೇ ಮೋಹನ ತರಂಗಿಣಿಯಲ್ಲಿ...

ಕೃತಿವೇಳ್ದ ಕನಕ ದಾಸೋತ್ತಮ ಕೇಳ್ದವ
ಳತಿ ಸುಜ್ಞಾನವಧೂಟಿ

ಎಂದು ತಮ್ಮ ಕಾವ್ಯದಲ್ಲಿ ಹೇಳಿಕೊಂಡಿದ್ದಾರೆ. ಕಾವ್ಯವನ್ನು ಮಡದಿಗೆ ಹೇಳುವುದು ನಮ್ಮ ಕನ್ನಡ ಸಾಹಿತ್ಯದಲ್ಲಿ ಹೊಸದೇನಲ್ಲ. ಕನಕದಾಸರ ಪೂರ್ವದ ನಾಗವರ್ಮ ಹಾಗೂ ಅವರ ತರುವಾಯದ ಮುದ್ದಣನನ್ನು ನೆನೆಯಬಹುದು. ನಾಗವರ್ಮ, ಮುದ್ದಣರು ತಮ್ಮ ಸಹಧರ್ಮಿಣಿಯರ ರೂಪ-ಲಾವಣ್ಯ ಅವಳೊಂದಿಗಿನ ಸರಸ-ಸಲ್ಲಾಪದ ಮಾತುಗಳನ್ನು ಕಾವ್ಯದೊಂದಿಗೆ ವರ್ಣಿಸಿದ್ದಾರೆ. ಈ ಮಾತಿಗೆ ಕನಕದಾಸರೂ ಕೂಡ ಹೊರತಾಗಿಲ್ಲ.

ಕಕ್ಕಸ ಕುಚದ ಕಾಮಿನಿಯರ ಕಂಡು
ಕಣ್ಣಿಕ್ಕದಂತೆನ್ನ ಚಿತ್ತವನು
ಅಕ್ಕೊತ್ತೆಗೊಂಡ ಭಾಮಿನಿರನ್ನೆ ಲಾಲಿಸು
ಸಕ್ಕರೆಯಂತ ಮಾತುಗಳ

ಎಂಬ ಪದ್ಯದಲ್ಲಿ ತಮ್ಮ ಮಡದಿಯ ರೂಪವನ್ನು ಚಿತ್ರಿಸಿದರೆ, ಮುಂದಿನ ಪದ್ಯಗಳಲ್ಲಿ ಅವಳ ಗುಣಗಾನವನ್ನು ಮಾಡಿದ್ದಾರೆ.

ಅಪಾರ ಗುಣಪೂರಿತೆ ಸತ್ಕಮನೀಯ
ರೂಪಸ್ಥೆ ಲಾಲಿಸು ನಿನ್ನ

ಹಾಗೂ

ಜತೆಯಗಲದೆ ನಿನ್ನಂತೆ ಕೇಳುವ ಗುಣಾ
ನ್ವಿತೆಯರ ತೋರಾಯತಾಕ್ಷಿ

ಎಂದು ಅವಳ ಮೇಲೆ ತಮಗಿದ್ದ ಪ್ರೇಮದ ಅಭಿಮಾನವನ್ನು ಕಾವ್ಯದ ಮೂಲಕ ಅಭಿವ್ಯಕ್ತಿಸಿದ್ದಾರೆ. ಕನಕನಾಯಕನಿಗೆ ಮಗನಿದ್ದನೆಂಬುದು ಲೋಕವಾರ್ತೆ. ಮದುವೆಯಾದ ಕೆಲವು ದಿನಗಳ ತರುವಾಯ ತಾಯಿಯ, ಮಗನ ಮರಣದ ನಂತರ ಸಂಸಾರದ ವ್ಯಾಮೋಹವನ್ನು ಕಳೆದುಕೊಂಡಂತೆ ತೋರುತ್ತದೆ.

ಕೆಂಚೆ ನೀ ಕೇಳು ಕೇವಲ ಜಾಣೆ ರಹಿತ ಪ್ರ
ಪಂಚೆ ಮತ್ಕೃತಿ ರಸವಱತ
ಬೆಂಚೆಯೆಂದೆನಬೇಡ ಶೃಂಗಾರ ರಸಪೂರ್ಣ
ವಂಚೆ ನಡೆಯಳೆ ಮಿಶ್ರಮಿಸು

ಕನಕದಾಸರೊಂದಿಗೆ ಅವರ ಮಡದಿ ಬಹುಕಾಲ ಜೀವಿಸಿದ್ದಳು. ಆದರೆ ಅವಳು ಪ್ರಾಪಂಚಿಕ ಬದುಕಿಗೆ ವಿಮುಖಳಾಗಿದ್ದಳು ಎನ್ನುವ ಮಾತು ಗಮನಾರ್ಹ.

ಕನಕನಾಯಕನು ಮೇಲಿಂದ ಮೇಲೆ ಹಲವು ಆಘಾತಗಳಲ್ಲಿ ತಲ್ಲಣಗೊಂಡು ಅಧಿಕಾರ ನಡೆಸುತ್ತಿರುವಾಗಲೇ ಮತ್ತೆ ಯುದ್ಧ ಮಾಡುವ ಸಂದರ್ಭ ಒದಗಿಬರುತ್ತದೆ. ಇದು ಯಾವ ಯುದ್ಧದ ಪ್ರಸಂಗವೆಂದು ನಿಖರವಾಗಿ ಹೇಳಲು ಇಲ್ಲಿಯವರೆಗೆ ಲಿಖಿತ ಆಧಾರಗಳು ದೊರೆತಿಲ್ಲ, ಲೋಕವಾರ್ತೆ ಮಾತ್ರ ಸಾಕ್ಷಿ. ವೈರಿ ಪಡೆಯವರು ಕನಕನಾಯಕನನ್ನು ಹೊಡೆದಾಗ ಪ್ರಜ್ಞೆತಪ್ಪಿ ರಕ್ತದ ಮಡುವಿನಲ್ಲಿ ಬಿದ್ದಿರಲು, ಅಗೋಚರ ಶಕ್ತಿ ಪ್ರಸನ್ನವಾದಂತಾಗಿ ಕನಕನಾಯಕನಿಗೆ ಆರೈಕೆಯನ್ನು ಮಾಡಿ, ಕನಕಾ ನನ್ನ ದಾಸನಾಗು ಎಂದು ಆಕಾಶವಾಣಿ ಆದಂತಾಯಿತಂತೆ. ಅದನ್ನೇ ಕನಕದಾಸರು ತಮ್ಮ ಕೀರ್ತನೆಯಲ್ಲಿ...

ರಣದೊಳಗೆ ಅಂಗಾಂಗ ಖಂಡ ತುಂಡಾಗಿ ಪ್ರತಿ
ರಣವನುತ್ತರಿಸಿ ಮರಣವ ತಾಳಿರೆ
ಪ್ರಣವ ಗೋಚರ ನೀನು ಗೋಚರಿಸಿ ಬಂದೆನ್ನ
ಹೆಣಕೆ ಪ್ರಾಣವ ಪ್ರಯೋಗಿಸಿದಂತರಾತ್ಮ

ಎಂದು ಹೇಳಿಕೊಂಡಿದ್ದಾರೆ. ಹೆಣಕ್ಕೆ ಪ್ರಾಣವನಿತ್ತ ಶಕ್ತಿ ಅದು ಬೇರೆ ಯಾರೂ ಅಲ್ಲ, ಸಾಕ್ಷಾತ್ ಶ್ರೀ ಹರಿಯೇ ಪ್ರತ್ಯಕ್ಷನಾದನೆಂದು, ಸಂಸಾರದ ಹಂಗು ತೊರೆದು, ಡಣ್ಣಾಯಕ ಪದವಿ ಬಿಟ್ಟು ಕನಕನಾಯಕ ಹೋಗಿ ಕನಕದಾಸರಾದರು. ಯುದ್ಧದ ಸಂದರ್ಭದಲ್ಲಿ ಸಾಮ್ರಾಟ ಅಶೋಕನ ಮೇಲೆ ಯಾವ ರೀತಿ ಸಾವು-ನೋವುಗಳು ಪರಿಣಾಮ ಬೀರಿದವೋ ಹಾಗೆಯೇ ಕನಕನಾಯಕನ ಮೇಲೂ ಆ ನೋವಿನ ಪರಿಣಾಮವಾಗಿರಬೇಕು. ಕನಕದಾಸರು ದಾಸರಾದ ಕಾಲ ಯಾವುದು? ಅವರು ದಾಸ ದೀಕ್ಷೆಯನ್ನು ಯಾರಿಂದ ಪಡೆದರು? ಅವರಿಗೆ ಯಾವ ಗುರುಗಳು ಅಂಕಿತನಾಮವನ್ನು ದಯಪಾಲಿಸಿದರು? ಎಂಬ ಪ್ರಶ್ನೆಗಳಿಗೆ ಉತ್ತರ ನಿಗೂಢವಾಗಿದೆ. ಹಲವು ದಾಸರಿಗೆ ದೀಕ್ಷೆಯನ್ನು ಕೊಟ್ಟ ವ್ಯಾಸರಾಯರೇ ಕನಕದಾಸರಿಗೂ ಗುರುಗಳೆಂದು ಹಲವರು ವಾದಿಸಿದ್ದಾರೆ. ಗುರುಗಳಿಂದ ದೀಕ್ಷೆ ಪಡೆದ ದಾಸರೆಲ್ಲರು ಗುರು ಹೇಳಿದ ಅಂಕಿತನಾಮವನ್ನೇ ಬಳಸಿದ್ದಾರೆ. ಉದಾ: ಶ್ರೀ ವ್ಯಾಸರಾಯರಿಂದ ಅಂಕಿತನಾಮವನ್ನು ಪಡೆದ ಪುರಂದರದಾಸರು ‘ಪುರಂದರ ವಿಠಲ’ನೆಂದೇ ತಮ್ಮ ಕೀರ್ತನೆಗಳಲ್ಲಿ ಬಳಸಿದ್ದಾರೆ.

ಕನಕದಾಸರು ಈ ಮಾತಿಗೆ ಹೊರತಾಗಿದ್ದಾರೆ. ಅವರು ಕಾಗಿನೆಲೆ ಆದಿಕೇಶವ, ಬಾಡದಾದಿಕೇಶವ, ಆದಿಕೇಶವರಾಯನೆಂದು ಹಲವು ಬಗೆಯಾಗಿ ಅಂಕಿತನಾಮವನ್ನು ಬಳಸಿದ್ದಾರೆ. ತೀರ್ಥಯಾತ್ರೆಗೆ ಹೋದ ಸ್ಥಳಗಳನ್ನು ಸಮೀಕರಿಸಿದ್ದಾರೆ. ದಾಸ ಸಾಹಿತ್ಯದಲ್ಲಿ ಬರುವ ಪ್ರಮುಖ ದಾಸರು ಶ್ರೀಪಾದರಾಯರು: ರಂಗವಿಠಲ, ಪುರಂದರದಾಸರು ಪುರಂದರ ವಿಠಲ, ವಿಜಯದಾಸರು ವಿಜಯವಿಠಲ, ಗೋಪಾಲ ದಾಸರು ಗೋಪಾಲ ವಿಠಲ, ಜಗನ್ನಾಥದಾಸರು ಜಗನ್ನಾಥ ವಿಠಲನೆಂದು ಬಳಸಿದ್ದಾರೆ. ಇಲ್ಲಿ ‘ವಿಠಲ’ನೆಂಬ ಶಬ್ದ ಬಂದಿದೆ. ಆದರೆ ಕನಕದಾಸರ ಅಂಕಿತದಲ್ಲಿಯ ‘ಕೇಶವ’ನೆಂಬ ಶಬ್ದವು ವಿಶಿಷ್ಟವಾಗಿದೆ. ಕನಕದಾಸರು ತಮ್ಮ ಮೋಹನ ತರಂಗಿಣಿಯಲ್ಲಿ...

ಶ್ರೀ ಮದ್ಗುರುರಾಯ ದುರಿತ ವಿಜೇಯ ದು
ಷ್ಕಾಮ ವಿಚ್ಛೇದನಾಹ್ಲಾದ
ತಾಮಸಗುಣನಾಶ ಸಾತ್ವಿಕೋಲ್ಲಾಸ ಶ್ರೀ
ರಾಮಾನುಜ ಮುನಿ ಶರಣ


ಈ ಪದ್ಯದಲ್ಲಿ ರಾಮಾನುಜ ಮುನಿಗೆ ಶರಣು ಮಾಡಿದ್ದಾರೆ.

ಈ ರೀತಿಯ ಪೆಂಪುವಡೆದ ಸದ್ಗುರುಕರ
ವಾರಿಜೋದ್ಭವ ಶಿಷ್ಯ ಜನರ
ಪ್ರೇರಿಸಿ ಚತುರ್ವಿಧ ಫಲವೀವ ತಾತಾ
ಚಾರಿಯರಡಿಗೆ ಱಗುವೆನು

ಈ ಪದ್ಯದಲ್ಲಿ ರಾಮಾನುಜಾಚಾರ್ಯ ಪರಂಪರೆಯ ತಿರುಮಲೈ ತಾತಾಚಾರಿಯವರ ಅಡಿಗೆರಗುತ್ತಾರೆ. ಕೀರ್ತನೆಯಲ್ಲಿಯೂ ಸಹ “ರಾಮಾನುಜರೇ ನಮೋ ನಮೋ’’ “ನೃಸಿಂಹಸ್ತವ’’ ಕೃತಿಯಲ್ಲಿಯೂ ಪ್ರಾರಂಭದ ಪದ್ಯಗಳಲ್ಲಿ ರಾಮಾನುಜರನ್ನು ಸ್ತುತಿಸಿರುವುದಾಗಿ ವಿದ್ವಾಂಸರ ಅಭಿಪ್ರಾಯವಿದೆ. ಒಂದು ಕೀರ್ತನೆಯಲ್ಲಿ ಮಾತ್ರ “ಪ್ರಸಿದ್ಧ ವ್ಯಾಸರಾಯರೆಂಬ ಕೂಸು ’’ ಎಂದು ವಿಶಿಷ್ಟವಾಗಿ ಸ್ತುತಿಸಿದ್ದಾರೆ. ಕನಕದಾಸರು ಶ್ರೀವೈಷ್ಣವ ಹಾಗೂ ಮಾಧ್ವಮತದ ಗುರುಗಳನ್ನು ಸ್ತುತಿಸಿದ್ದಾರೆ. ಹೀಗೆ ಇಬ್ಬರನ್ನೂ ಸ್ತುತಿಸಲು ಕಾರಣಗಳೇನು? ಮತ್ತು ತೀರ್ಥಕ್ಷೇತ್ರಕ್ಕೆ ಹೋದ ಕಡೆಗಳಲ್ಲಿ ಅಲ್ಲಿಯ ದೇವತೆಗಳ ಅಂಕಿತ ನಾಮಗಳನ್ನು ಯಾಕೆ ಬಳಸಿದರು ಎಂಬ ಪ್ರಶ್ನೆಗಳಿಗೆ ಉತ್ತರವಾಗಿ, ಅವರು ಯಾರಿಂದಲೂ ದೀಕ್ಷೆಯನ್ನು ಪಡೆದುಕೊಂಡಿಲ್ಲವೆಂದು ಹೇಳಬಹುದು. ಆದ್ದರಿಂದ ಕನಕದಾಸರು ಯಾವುದೇ ಒಂದು ಮತಕ್ಕೆ ಸೀಮಿತರಾಗದೆ; ಶೈವ, ಶ್ರೀವೈಷ್ಣವ ಹಾಗೂ ಮಾಧ್ವ ಮತಗಳಲ್ಲಿಯ ಉತ್ತಮ ವಿಚಾರಗಳಿಗೆ ಪ್ರಭಾವಿತರಾಗಿ ಭಾಗವತರಾದರೆಂದು ಹೇಳಬೇಕು. ರಾಮಾನುಜೀಯರಾಗಿದ್ದ ತಾತಾಚಾರಿಯವರ ಹಾಗೂ ಮಾಧ್ವರಾಗಿದ್ದ ವ್ಯಾಸರಾಯರ ಪ್ರಭಾವಕ್ಕೊಳಗಾಗಿ ಹರಿದಾಸರಾದರೆಂದು ಸಂದೇಹವಿಲ್ಲದೆ ಹೇಳಬಹುದು. ಈ ಕಾರಣದಿಂದಲೇ ಸಂತ ಶ್ರೀ ಕನಕದಾಸರು ಭೇದ-ಭಾವ ಮಾಡದೆ ಇಡೀ ಮಾನವ ಕುಲದ ಒಳಿತನ್ನು ಬಯಸಿದ್ದಾರೆ. ವಿಶ್ವಮಾನವ, ಸಮಾಜ ಸುಧಾರಕ ಮತ್ತು ಹರಿದಾಸ ಶ್ರೇಷ್ಠರಾಗಿ ಪ್ರಖ್ಯಾತಗೊಂಡಿದ್ದಾರೆ.

ಕನಕದಾಸರ ಮತ

ಕನಕದಾಸರು ಬೇಡ, ಕಬ್ಬಲಿಗ ಜನಾಂಗದವರೆಂಬುದಕ್ಕೆ ಯಾವುದೇ ದಾಖಲೆ ಮತ್ತು ಸಾಕ್ಷಾಧಾರಗಳಿಲ್ಲದೆ ವಾದವನ್ನು ಸೃಷ್ಟಿಸಿರುವುದು ನ್ಯಾಯಸಮ್ಮತವಾದುದಲ್ಲ. ಕನಕದಾಸರ ಸಾಹಿತ್ಯ ಮತ್ತು ಅವರ ಕೀರ್ತನೆಗಳನ್ನು ಅವಲೋಕಿಸಿದಾಗ ಕುರುಬ ಜನಾಂಗಕ್ಕೆ ಸೇರಿದವರೆಂದು ವಿದಿತವಾಗುತ್ತದೆ. ಕನಕದಾಸರ ತಂದೆ ಬೀರಪ್ಪನೆಂಬುದನ್ನು ಒಪ್ಪುತ್ತಾರೆ. ವ್ಯಾಸರಾಯರ “ಕುರುಬಗೇಕೋ ಕೋಣ ಮಂತ್ರ’’ ಎಂಬ ಹೇಳಿಕೆಯನ್ನು ಒಪ್ಪುತ್ತಾರೆ. ಮತ್ತೆ ಕನಕದಾಸರ ಮತದಲ್ಲಿ ಭಿನ್ನತೆಯನ್ನು ಹುಟ್ಟಿಸುವುದು ಎಷ್ಟರಮಟ್ಟಿಗೆ ಸರಿ ಎಂಬುದನ್ನು ಯೋಚಿಸಬೇಕಾಗಿದೆ.

ಕನಕದಾಸರು ತಮ್ಮ ಸಾಹಿತ್ಯದಲ್ಲಿ ತಮ್ಮ ಜೀವನಕ್ಕೆ ಸಂಬಂಧಪಟ್ಟ ವಿಚಾರಗಳನ್ನು ಬಿಂಬಿಸಿದ್ದಾರೆ. ಅವರ ಸಾಹಿತ್ಯದ ಈ ಸಾಲುಗಳನ್ನು ಪರಿಶೀಲಿಸಬಹುದು.

ನಾವು ಕುರುಬರು ನಮ್ಮ ದೇವರು ಬೀರಯ್ಯ
ಕಾವ ನಮ್ಮಜ್ಜ ನರಕುರಿಯ ಹಿಂಡುಗಳ ಪ
ಕಲಿಯುಗಕೆ ಗೌಡನಿವ ಸಂಗಾತಿ ಮಂತ್ರಿಸುತ
ಕಲಿಯುಗಂಗಳನ್ನೆಲ್ಲ ಪೊರೆವಾತ ನೀತ
ಜಲಜಾಕ್ಷ ಕಾಗಿಲೆಯಾದಿಕೇಶವನ ಮನ
ವೋಲಿಸಿ ಭಜಿಸದ ಮನುಜ ಹುಚ್ಚು ಕುರುಬ

ಇಲ್ಲಿ ಕುರಿಕಾಯುವವನ ಜೀವನ ವೃತ್ತಾಂತವನ್ನು ಚಿತ್ರಿಸಿದ್ದಾರೆ. ಮೇಲಾಗಿ ನಾವು ಕುರುಬರು. ತಮ್ಮ ಕುಲದೈವ ಬೀರಪ್ಪನೆಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಕಡೆಯಲ್ಲಿ “ಭಜಿಸದ ಮನುಜ ಹುಚ್ಚು ಕುರುಬ’’ ಎಂಬ ಮಾತು ಆಗಿನ ಪರಿಸ್ಥಿತಿಗನುಗುಣವಾಗಿ ಹೇಳಿದಂತಿದೆ.

ದಾಸದಾಸರ ಮನೆಯ ದಾಸಿಯರ ಮಗ ನಾನು
ಸಾಸಿರ ನಾಮದೊಡೆಯ ರಂಗಯ್ಯನ ಮನೆಯ ಪ
ಹಲವು ದಾಸರ ಮನೆಯ ಹೊಲೆಯ ದಾಸನು ನಾನು
ಕುಲವಿಲ್ಲದ ದಾಸ ಕುರುಬದಾಸ

ಎಂದು ಹೇಳಿಕೊಂಡಿದ್ದಾರೆ. ಇದೇ ಕೀರ್ತನೆಯಲ್ಲಿ ಶಂಕುದಾಸ, ಮಂಕುದಾಸ, ಮರುಳದಾಸ, ಆಳುದಾಸ, ಕೀಳುದಾಸ, ಮೂಳದಾಸ, ಅಡಿದಾಸ ಎಂದು ಸಂಬೋಧಿಸಿಕೊಂಡಿದ್ದಾರೆ. ಆದರೆ “ಕಾಳಿದಾಸರ ಮನೆಯ ಕೀಳುದಾಸನು ನಾನು’’ ಹಾಗೂ “ಕುಲವಿಲ್ಲದ ದಾಸ ಕುರುಬದಾಸ’’ ಎಂಬ ಸಾಲುಗಳು ಗಮನಾರ್ಹವಾಗಿವೆ.

ದ್ಯಾವಿ ನಮ್ಮ ದ್ಯಾವರು ಬಂದರು ಬನ್ನಿರೆ,
ನೋಡ ಬನ್ನಿರೆ

ಎಂಬ ದಾಟಿಯು ಕುರುಬರ ಸಂಪ್ರದಾಯದ ಡೊಳ್ಳಿನ ಗತ್ತು. ಈ ಕೀರ್ತನೆಯ ತುಂಬೆಲ್ಲ ಬೀರಪ್ಪನನ್ನು ರಂಗಯ್ಯನಲ್ಲಿ ಕಂಡಂತೆ ಭಾಸವಾಗುತ್ತದೆ. ಅವರ ಉಡುಪು ಕೂಡ ಕುರುಬರೆಂದು ಹೇಳುತ್ತದೆ. ಕಂಬಳಿ ನೇಯುವ ಮತ್ತು ಧರಿಸುವ ಪ್ರಕ್ರಿಯೆ ವಿಶೇಷ. ಕನಕದಾಸರನ್ನು ಬಿಟ್ಟರೆ ಕುರುಬ ಶಬ್ದವನ್ನು ಯಾವ ದಾಸರೂ ಬಳಸಿಲ್ಲ. ಆ ಶಬ್ದವನ್ನೇ ದ್ವೇಷಿಸಿದಂತಿದೆ. ಒಂದು ವೇಳೆ ತಪ್ಪಿ ಬಳಸಿದರೂ ನಾನು, ನಾವು ಕುರುಬರು ಎಂದು ಬಳಸಿಲ್ಲ. ಕಾರಣ ಅವರು ಕುರುಬರಲ್ಲ. ಈ ಮೇಲಿನ ಆಧಾರಗಳಿಂದ ಕನಕದಾಸರು ಕುರುಬ ಜನಾಂಗಕ್ಕೆ ಸೇರಿದವರೆಂದು ದೃಢವಾದ ಮೇಲೂ ವಾದಕ್ಕಿಳಿದರೆ ಈ ಕೆಳಗಿನ ಆಧಾರವನ್ನು ಅಲ್ಲಗಳೆಯಲು ಸಾಧ್ಯವಿಲ್ಲ.

ಯಮನು ಮುನ್ನೆ ಮಾಂಡವ್ಯಶಾಪದಿಂದೆರಡು ಜ
ನುಮ ಶೂದ್ರ ಯೋನಿಯೊಳಗೆ ಪುಟ್ಟಿದನು. ಮೊದಲ ಜ
ನುಮ ವಿದುರನಾಗಿ, ಬಳಿಕ ಕುರುಬರ ಕುಲದಲಿ ಜನಿಸಿದೇನಗೀಜ
ನುಮದಲಿ ಮುಕ್ತಿ ಎಂತು ಎಂಬೆ

ಈ ಮಾತನ್ನಂತೂ ಎಂದೂ ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಅದು ಅವರಿಗೆ ಸಾಧುವು ಅಲ್ಲ. ಏಕೆಂದರೆ ಈ ಮಾತಿನಿಂದ ಕನಕದಾಸರು “ಕುರುಬ ಜನಾಂಗ’’ಕ್ಕೆ ಸೇರಿದವರೆಂದು ಸ್ಪಷ್ಟವಾಗಿ ಹೇಳಬಹುದು.

ಒಬ್ಬ ಮಹಾತ್ಮನನ್ನು ಒಂದು ಜಾತಿಯಿಂದ ಗುರುತಿಸುವ ಪದ್ಧತಿ ತೊಲಗಬೇಕು. ಇಲ್ಲದಿದ್ದರೆ ಆ ಮಹಾತ್ಮರ ಧೀಮಂತಿಕೆಗೆ ಕುಂದುಂಟು ಮಾಡಿದಂತಾಗುತ್ತದೆ. ಅವರನ್ನು ಜಾತಿಯ ಬಲೆಯಿಂದ ಬಿಡಿಸಿ ವಿಶ್ವಮಾನವದತ್ತ ಒಯ್ಯಬೇಕು. ಎಲ್ಲ ವ್ಯಕ್ತಿಗಳೂ ಅವರನ್ನು ಗೌರವಿಸುವಂತಾಗಬೇಕು. ಹೀಗೆ ಮಾಡಿದಲ್ಲಿ ಮಾತ್ರ ಸಂತ ಶ್ರೀ ಕನಕದಾಸರಂತಹ ಮಹಾತ್ಮರಿಗೆ ವಿಶ್ವಮಾನ್ಯ ಸ್ಥಾನ ಲಭಿಸಿದಂತಾಗುತ್ತದೆ.

ಕನಕದಾಸರ ಕಾಲ
ಅನೇಕ ವಿದ್ವಾಂಸರು ಕನಕದಾಸರ ಕಾಲ ನಿರ್ಣಯ ಕುರಿತು ಪ್ರಯಾಸ ಪಟ್ಟಿದ್ದಾರೆ. ಆದರೆ ಯಾವುದು ನಿಖರವೆಂದು ಹೇಳಲು ಸಾಧ್ಯವಾಗಿಲ್ಲ. ಕಾರಣ ಹಲವು ಭಿನ್ನಾಭಿಪ್ರಾಯಗಳಿವೆ. ಆದರೂ ಅವರ ಸಾಹಿತ್ಯದಲ್ಲಿ ಮೂಡಿಬಂದ ಸಮಕಾಲೀನ ಜನಜೀವನ ಚಿತ್ರ, ಪೂರ್ವದ ಕವಿಗಳನ್ನು ಅವರು ಸ್ಮರಿಸಿರುವುದರಿಂದ ಹಾಗೂ ನಂತರದ ಕವಿಗಳು ಕನಕದಾಸರನ್ನು ಸ್ಮರಿಸಿರುವುದರಿಂದ ಅವರ ಕಾಲವನ್ನು ನಿರ್ಣಯಿಸಲು ಸಾಧ್ಯವಾಗುತ್ತದೆ.

ಉರಗಾಲಯವೆ ಪೆಸರ್ವಡೆದನ ಮತ್ಸೋ
ದರ ಜಾತೆಯಾತ್ಮ ಸಂಭವನ
ವರ ಪುರಾಣಂಗಳ ಕನ್ನಡಿಸಿದ ಕವೀ
ಶ್ವರರ ಕೊಂಡಾಡುವೆ ಮುದದಿ

ಮೇಲಿನ ‘ಮೋಹನ ತರಂಗಿಣಿ’ ಕೃತಿಯ ಪದ್ಯದಲ್ಲಿ ಕನಕದಾಸರೇ ಉಲ್ಲೇಖಿಸಿರುವಂತೆ ಗದುಗಿನ ಭಾರತವನ್ನು ಬರೆದ ಕುಮಾರವ್ಯಾಸನನ್ನು, ತೊರವೆ ರಾಮಾಯಣವನ್ನು ಬರೆದ ಕುಮಾರ ವಾಲ್ಮೀಕಿಯನ್ನು ಸ್ಮರಿಸಿರುವುದರಿಂದ ಅವರೀರ್ವರಿಗಿಂತ ಕನಕದಾಸರು ಈಚಿನವರಾಗಿದ್ದಂತೂ ಖಚಿತ. ೧೭ನೇ ಶತಮಾನದ ಕಾಖಂಡಕಿ ಮಹಿಪತಿರಾಯರ ಮಗನಾದ ಕಾಖಂಡಕಿ ಕೃಷ್ಣರಾಯರು ಹರಿದಾಸ ಪರಂಪರೆಯನ್ನು ಸ್ಮರಿಸುತ್ತ “ನೆರೆ ತಾಲಪಾಕರ ಸಂತಮತಿ ಕನಕರ ಹರಿಭಕ್ತಿ ಉಲ್ಲಾಸಕರ’’ ಎಂದು ತೆಲುಗಿನ ಅನ್ನಮಾಚಾರ್ಯರನ್ನು ಕನ್ನಡದ ಕನಕದಾಸರನ್ನೂ ಜೊತೆಯಲ್ಲಿ ನೆನೆದಿರುವುದರಿಂದ ಆ ಕಾಲಕ್ಕಿಂತ ಹಿಂದಿನವರು ಎಂಬುದು ಸ್ಪಷ್ಟವಾಗುತ್ತದೆ.

ಕನಕದಾಸರು ಯುದ್ಧ ವರ್ಣನೆಯನ್ನು ಮಾಡುತ್ತ

ರಾಜರು ರಕ್ಕಸು ಮಾಂತರು ಲಾಳಿಬಿ
ಲ್ಲೊಜರು ಪೆಟಲಂಬಿನವರು
ತೇಜೋಮಯ ಬಾಣಗಾರರು ತುಖಗ
ರಾಜನೆರಂಕೆಯಿಕ್ಕೆಲದಿ

ಪೆಟಲಂಬಿನವರು (ತುಬಾಕಿಯವರು) ಎಂಬ ಶಬ್ದ ಪ್ರಯೋಗ ಮಾಡಿದ್ದಾರೆ. ಪೆಟಲಂಬುಗಳ ಬಳಕೆಯಾದದ್ದು ೧೫೨೦ರಲ್ಲಿ ಜರುಗಿದ ರಾಯಚೂರು ಯುದ್ಧದಲ್ಲಿ. ಆ ಕಾಲದಲ್ಲಿ ಕನಕದಾಸರು ಜೀವಿಸಿದ್ದರೆಂದು ವೇದ್ಯವಾಗುತ್ತದೆ.

ಶ್ರೀಕೃಷ್ಣದೇವರಾಯ ೧೫೦೯ರಿಂದ ೧೫೨೯ರವರೆಗೆ ಆಳಿದ ದ್ವಾರಕೆಯ ಶ್ರೀಕೃಷ್ಣನೊಂದಿಗೆ ವಿಜಯನಗರದ ಶ್ರೀಕೃಷ್ಣದೇವರಾಯನನ್ನು ಸಮೀಕರಿಸಿ ಮೋಹನ ತರಂಗಿಣಿ ಎಂಬ ಕೃತಿ ಬರೆದಿದ್ದಾರೆ. ಅಲ್ಲದೆ ವಿಜಯನಗರದ ಜನಜೀವನವನ್ನು ತಮ್ಮ ಕಾವ್ಯದಲ್ಲಿ ಚಿತ್ರಿಸಿದ್ದಾರೆ. ಆದ್ದರಿಂದ ಕನಕದಾಸರು ಶ್ರೀಕೃಷ್ಣದೇವರಾಯನ ಕಾಲದಲ್ಲಿದ್ದರೆಂಬುದು ನಿಸ್ಸಂಶಯ.

ಏಕೆ ನಡುಗಿದೆ ತಾಯೆ ಭೂಮಿ ನಡುರಾತ್ರಿಯೊಳು- ಜಗ
ದೇಕ ಪೊಡವಿಗೊಡೆಯನ ರಾಣಿ ಪರಮ ಕಲ್ಯಾಣಿ

ಎಂಬ ಕೀರ್ತನೆಯನ್ನು ಹಾಡಿದ್ದಾರೆ. ಕನಕದಾಸರ ಜೀವಿತಾವಧಿಗೆ ಸರಿಹೊಂದುವ ಒಂದು ಶಾಸನವು ಭೂಕಂಪನವನ್ನು ಕುರಿತು ಹೇಳುತ್ತದೆ. ಆದ್ದರಿಂದ ಅದು ಭೀಕರವಾದ ಭೂಕಂಪನವೇ ಆಗಿರಬೇಕು. ಬೆಂಗಳೂರು ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಸೋಮಪುರ ಹೋಬಳಿಯ ಬಿಲ್ಲನಕೋಟೆ ಎಂಬ ಗ್ರಾಮದ ಬಂಡೆಯ ಮೇಲೆ ಕಲಿ ವರುಷ ೪೬೦೮ನೇ ಪ್ರಭವ ಸಂವತ್ಸರದ ಶ್ರಾವನ ಸುದ ೬ ಗುಲು ಭೂಮಿ ನಡುಗಿತು, ವಾರಳಲೂ ಬಿಲ್ಲನ ಕೊಡೆಯ (ಕೋಟೆಯ) ಖಬಿನಗೆಲಸಿ (ಕಬ್ಬಿಣದ ಕೆಲಸಗಾರ) ವೀರಯ್ಯನ ಮಗ ದೊಡ ವೀರೈಯ ಹೊಯಿದ ಸೇಸನ ಎಂಬ ಶಾಸನವಿದೆ. ಇದರ ಕಾಲ ೧೫-೧೭-೧೫೦೭. ಗುರುವಾರಕ್ಕೆ ಸರಿ ಹೊಂದುತ್ತದೆ. ಅನಿರುದ್ಧನ ಜನನವನ್ನು ತಿಳಿಸುವ ಮೋಹನ ತರಂಗಿಣಿಯ ಈ ಪದ್ಯ.

ಆನಂದ ಸವಂತ್ಸರ ಮಾಘಶುದ್ಧನ
ವೀನ ಪಂಚಮಿ ರವಿವಾರ
ಭಾನುವುದಯದ ಸ್ವಾತಿಯ ನಕ್ಷತ್ರದೆ
ತಾನುದಿಸಿದ ಗಂಡು ಮಗನು

ಇದು ೧೫-೨-೧೪೬೫ ಭಾನುವಾರ ಸಮದೂಗುತ್ತದೆ. ಅನಿರುದ್ಧನ ಜನನದ ಕಾಲಕ್ಕೆ ಕನಕದಾಸರು ತಮ್ಮ ಜನನ ಕಾಲವನ್ನು ಸಮನಾಗಿಸಿದ್ದಾರೆ. ಆದ್ದರಿಂದ ಕನಕದಾಸರ ಜನನದ ಕಾಲ ೧೫-೦೨-೧೪೬೫. ಪುರಂದರದಾಸರ ಕಾಲ ೧೪೮೪-೧೫೬೪ ಎಂದಾಗಿದೆ. ಪುರಂದರದಾಸರು ಕಾಲವಾದ ಮೇಲೆ ಕನಕದಾಸರು ಬಾಳಿದ್ದರು ಎಂಬ ಐತಿಹ್ಯವಿದೆ. ಒಟ್ಟಾರೆ ಕನಕದಾಸರು ೯೮ ವರ್ಷಗಳ ಕಾಲ ಬದುಕಿದ್ದರೆಂಬಲ್ಲಿ ವಿದ್ವಾಂಸರಲ್ಲಿ ಏಕಾಭಿಪ್ರಾಯವಿದೆ. ಆದ್ದರಿಂದ ಕನಕದಾಸರ ಮರಣ ಕಾಲವನ್ನು ೧೫೬೩ಕ್ಕೆ ಎಂದು ಒಪ್ಪಿದ್ದಾರೆ. ಒಟ್ಟಿನಲ್ಲಿ ಕನಕದಾಸರ ಜನನ ಮರಣದ ಕಾಲವನ್ನು ೧೪೬೫ ರಿಂದ ೧೫೬೩ ಎಂದು ಒಪ್ಪಬಹುದು.

ಕನಕದಾಸರ ಸಾಹಿತ್ಯ
ಕನಕದಾಸರು ಕೇವಲ ಹರಿ ಭಕ್ತರಾಗಿ, ವೈಷ್ಣವ ಮತಾನುಯಾಯಿಯಾಗಿ ಉಳಿಯದೆ ಶೈವ, ಶ್ರೀ ವೈಷ್ಣವ ಮತ್ತು ಮಾಧ್ವ ಮತಗಳಲ್ಲಿಯ ಉತ್ತಮಾಂಶಗಳಿಂದ ಪ್ರಭಾವಿತರಾಗಿದ್ದರು. ರಾಮಾನುಜೀಯರಾಗಿದ್ದ ತಾತಾಚಾರಿಯವರ ಹಾಗೂ ಮಾಧ್ವರಾಗಿದ್ದ ವ್ಯಾಸರಾಯರ ಪ್ರಭಾವಕ್ಕೊಳಗಾಗಿ ಹರಿದಾಸರಲ್ಲದೆ, ತಮ್ಮ ಬರವಣಿಗೆಯಲ್ಲಿ ಜಾತಿ-ಮತ-ಪಂಥ ಮೀರಿದ ಸಮಾನತೆಯನ್ನು ಬೋಧಿಸಿದರು. ಕನಕದಾಸರು ತಮ್ಮ ಜೀವಿತಾವಧಿಯಲ್ಲಿ ಎರಡು ಕಾವ್ಯಗಳನ್ನು ರಚಿಸಿದ್ದಾರೆ. ಮೋಹನ ತರಂಗಿಣಿ (ಶೃಂಗಾರ ರಸ ಕಾವ್ಯ) ಮತ್ತು ನಳ ಚರಿತ್ರೆ (ನಳ-ದಮಯಂತಿಯರ ಪ್ರೇಮ ಕಾವ್ಯ) ಅವರ ಕಾವ್ಯತ್ವಕ್ಕೆ ಹಿಡಿದ ಕನ್ನಡಿಯಂತಿವೆ. ಹರಿಭಕ್ತ ಸಾರ (ಅನುಭಾವ ಲಘುಕಾವ್ಯ) ಮತ್ತು ರಾಮಧಾನ್ಯ ಚರಿತ್ರೆ(ಸಾಮಾಜಿಕ ಆಶಯವನ್ನೊಳಗೂಂಡ ಲಘುಕಾವ್ಯ)ಗಳು ಕನಕರ ವೈವಿಧ್ಯಮಯ ಮತ್ತು ಜನಪರ ನಿಲುವಿಗೆ ಸಾಕ್ಷಿಯಂತಿವೆ. ಕನಕರ ಮುಂಡಿಗೆಗಳು, ಜಾನಪದೀಯ ಸೊಗಡಿನ ಪದಗಳು, ಭಾಮಿನಿಷಟ್ಪದಿಯಲ್ಲಿ ಬರೆದು ನರಸಿಂಹಸ್ತವನಗಳು ಉಲ್ಲೇಖಾರ್ಹ. ಕನಕರು ತಮ್ಮ ಎರಡೂ ಕಾವ್ಯಗಳನ್ನು ಚೆನ್ನಿಗರಾಯ ಮತ್ತು ಕಾಗಿನೆಲೆ ಆಧಿಕೇಶವನಿಗೆ ಅಪಿ೯ಸಿದ್ದಾರೆ. ತಮ್ಮ ಕೀರ್ತನೆ ಮತ್ತು ಪದಗಳ ಮೂಲಕ ನಾಡಿನ ಜನರ ನಾಲಿಗೆಯ ಮೇಲೆ ಇಂದಿಗೂ ನಲಿದಾಡುತ್ತಿದ್ದಾರೆ.

ಕನಕದಾಸರು ಅಂದಿನ ಸಮಾಜ ವ್ಯವಸ್ಥೆಯಲ್ಲಿ ಅನುಭವಿಸಿದ ನೋವೇ ಅವರ ಕೀರ್ತನೆ ಹಾಗೂ ಪದಗಳಲ್ಲಿ ಹಾಡಾಗಿ ಹರಿದಿದೆ. ಜಾತಿ ವ್ಯವಸ್ಥೆಯನ್ನು ವಿರೋಧಿಸಿದಂತೆ ಕನಕರು ಜನರಲ್ಲಿ ತಮ್ಮ ಕೀರ್ತನೆಗಳ ಮೂಲಕ ಆದ್ಯಾತ್ಮಿಕ, ಸಾಮಾಜಿಕ ಹಾಗೂ ವೈಚಾರಿಕ ಪ್ರಜ್ಞೆಯನ್ನು ಬಿತ್ತಿದ್ದು, ಈ ಮೂರು ಅಂಶಗಳಿಂದ ಅವರ ಸಾಹಿತ್ಯ ಮುಪ್ಪುರಿಗೊಂಡಿದೆ.

ಸಮಾಜದಲ್ಲಿ ಸಮತಾ ಸಮಾಜ ನಿಮಾ೯ಣವಾಗಲೆಂಬ ಆಶಯದಿಂದ ಅವರು ಸಮಾಜವನ್ನು ಹಲ ಬಗೆಯಲ್ಲಿ ಪ್ರಶ್ನಿಸಿದ್ದಾರೆ. ಕನಕರ ಕೆಲ ಸಕಾಲಿಕ ಪ್ರಶ್ನೆಗಳಿಗೆ ನಾವು ಇಂದಿಗೂ ಉತ್ತರ ಹುಡುಕಬೇಕಿದೆ. ಉದಾ: ಸತ್ಯವಂತರ ಸಂಗವಿರಲು ತೀರ್ಥವ್ಯಾತಕೆ? ನೇಮವಿಲ್ಲದೆ ಹೋಮವ್ಯಾತಕೆ? ಹೊಲೆಯ ಹೊರಗಿಹನೆ? ಇನ್ನೆಷ್ಟು ಕಾಲ ನೀನು ಮಲಗಿದ್ದರೂ, ನಿನ್ನನೆಬ್ಬಿಸುವವರನೊಬ್ಬರನು ಕಾಣೆ, ‘ಉತ್ತಮ ಪ್ರಭುತ್ವ ಲೊಳಲೊಟ್ಟೆ’. ನಾಲ್ಕು ಶತಮಾನಗಳ ಹಿಂದಿನ ಕನಕರ ಆತಂಕಗಳು ಇಂದಿನ ಜ್ವಲಂತ ಪ್ರಶ್ನೆಗಳಾಗಿ ಉಳಿದಿರುವುದು ಮಾತ್ರ ವಿಷಾದನೀಯ.

ಕನಕದಾಸರು ದಾಸ ಪಂಥದ ವಚನಕಾರರು ಮಾತ್ರವಲ್ಲ, ಎಲ್ಲ ಮತೀಯ ಬಂಧನಗಳಿಂದ ಪಾರಾಗಿ, ಸಾಮಾಜಿಕ ಕಟ್ಟು-ನಿಟ್ಟುಗಳಿಂದ ಮುಕ್ತರಾಗಿ, ಅಧ್ಯಾತ್ಮ ಸಿದ್ದಿಯ ಶಿಖರವನ್ನೇರಿದ ವಿಶ್ವಬಂಧು, ಸಂತ ಕವಿಯೆಂದು ದೇ.ಜವರೇಗೌಡರು ಕನಕದಾಸರ ವ್ಯಕ್ತಿತ್ವವನ್ನು ಬಣ್ಣಿಸಿರುವುದು ಯಥಾರ್ಥವಾಗಿದೆ.

ಹರಿಭಕ್ತಿಸಾರ
ಪ್ರಾಚೀನ ಕಾಲದಿಂದಲೂ ಕನ್ನಡ ಭೂಮಿ ಭಕ್ತಿಗೆ ಹೆಸರಾದ ತಾಣವಾಗಿದೆ. ೧೨ನೇ ಶತಮಾನದ ಶರಣ-ಶರಣೆಯರು, ೧೬ನೇ ಶತಮಾನದ ಹರಿದಾಸರು ಅದಕ್ಕೆ ಸಾಕ್ಷಿ ಎಂಬಂತೆ ಕಂಗೊಳಿಸುತ್ತಾರೆ. ಈ ಎರಡು ವಾಹಿನಿಗಳಲ್ಲಿ ದಾಸ ಸಾಹಿತ್ಯವೂ ಒಂದು. ಹರಿದಾಸ ಕೂಟದಲ್ಲಿ ಕನಕದಾಸರ ಪಾತ್ರ ಪ್ರಶಂಸನೀಯ. ಭಕ್ತ ಕನಕದಾಸರು ಎಂಬ ಮಾತಿಗೆ ಎರಡಿಲ್ಲ ಎಂಬಂತೆ “ಹರಿಭಕ್ತಿಸಾರ’’ ಕೃತಿ ರಚಿಸಿ ಭಕ್ತಿಪಂಥಕ್ಕೆ ಅದನ್ನು ಸಮರ್ಪಿಸಿದ್ದಾರೆ. ಹರಿಭಕ್ತಿಸಾರವು ಹಾಡಲು ಅನುಕೂಲ ಮತ್ತು ಗಮಕಕ್ಕೆ ಅಳವಡಿಸುವಂತೆ ಭಾಮಿನಿ ಷಟ್ಪದಿಯಲ್ಲಿದೆ. ಪ್ರತಿಯೊಂದು ಪದ್ಯದ ಕೊನೆಯಲ್ಲೂ “ರಕ್ಷಿಸು ನಮ್ಮನನವರತ’’ ಎಂದು ಬರುತ್ತದೆ. ಇದು ಕಾವ್ಯದ ವೈಶಿಷ್ಟ್ಯ.

ಶ್ರೀಯರಸ ಗಾಂಗೇಯನುತ ಕೌಂ
ತೇಯವಂದಿತ ಚರಣ ಕಮಲದ
ಳಾಯ ತಾಂಬಕರೂಪ ಚಿನ್ಮಯ ದೇವಕೀತನಯ
ರಾಯ ರಘುಕುಲವರ್ಯ ಭೂಸುರ
ಪ್ರೀಯ ವರಪುರ ನಿಲಯ ಚೆನ್ನಿಗ
ರಾಯ ಚರೋಪಾಯ ರಕ್ಷಿಸು ನಮ್ಮನನವರತ

ಲಕ್ಷ್ಮೀಪತಿ, ಭೀಷ್ಮಸುತ, ಪಾಂಡವವಂದಿತ ಚರಣ, ತಾವರೆಯ ದಳದಂತೆ ವಿಶಾಲವಾದ ಕಣ್ಣುಳ್ಳವನೆ, ಜ್ಞಾನಮೂರ್ತಿ, ದೇವಕೀಸುತ, ರಘುಕುಲದ ರಾಜಾದಿರಾಜ ಶ್ರೀರಾಮಚಂದ್ರ, ಬ್ರಾಹ್ಮಣ ಪ್ರಿಯ, ವರಪುರ (ಬೇಲೂರು) ನಿವಾಸ, ಸುಂದರಾಂಗ ಚೆನ್ನಕೇಶವ, ಜಾಣ್ಮೆಯ ಉಪಾಶೀಲ ಸದಾ ನಮ್ಮನ್ನು ರಕ್ಷಿಸು ಎಂದು ಪ್ರಾರಂಭವಾಗುತ್ತದೆ.

ಹಸಿವರಿತು ತಾಯ್ತನ್ನ ಶಿಶುವಿಗೆ
ಒಸೆದು ಮೊಲೆ ಕೊಡುವಂತೆ ನೀ ಪೋ
ಷಿಸದೆ ಬೇರಿನ್ನಾರು ಪೋಷಕರಾಗಿ ಸಲಹುವರು
ಬಸಿರೊಳಗೆ ಬ್ರಹ್ಮಾಂಡ ಕೋಟಿಯ ಪಸರಿಸಿದ ಪರಮಾತ್ಮ ನೀನೆಂ
ದುಸಿರುತಿವೆ ವೇದಗಳು ರಕ್ಷಿಸು ನಮ್ಮನನವರತ

ತಾಯಿ ತನ್ನ ಮಗುವಿಗೆ ಹಸಿವಾಗಿದೆಯೆಂದರಿತು ತಾನಾಗಿ ಮೊಲೆ ಹಾಲನ್ನಿತ್ತು ಪೊರೆಯುತ್ತಾಳಲ್ಲವೆ? ಆ ರೀತಿಯಾಗಿ ನನ್ನನ್ನು ನೀನೆ ಸಲುಹಬೇಕಲ್ಲದೆ ನನಗೆ ಬೇರೆ ಪೋಷಕರು ಯಾರಿದ್ದಾರೆ? ನಿನ್ನ ಉದರದೊಳಗೆ ಬ್ರಹ್ಮಾಂಡಗಳನ್ನಿರಿಸಿ ಪಾಲಿಸುವ ಪರಮಾತ್ಮ ನೀನು ಎಂದು ವೇದಗಳು ಘೋಷಿಸುತ್ತವೆ. ಸ್ವಾಮಿ, ನನ್ನನ್ನು ಸಲಹು ಎಂಬ ಮುಗ್ಧ ಪ್ರಾರ್ಥನೆ ಇದೆ.

ದೀನ ನಾನು ಸಮಸ್ತ ಲೋಕಕೆ
ದಾನಿ ನೀನು ವಿಚಾರಿಸಲು ಮತಿ
ಹೀನ ನಾನು ಮಹಾಮಹಿಮ ಕೈವಲ್ಯಪತಿ ನೀನು
ಏನ ಬಲ್ಲೆನು ನಾನು ನೆರೆ ಸು
ಜ್ಞಾನ ಮೂರುತಿ ನೀನು ನಿನ್ನಸ
ಮಾನರುಂಟೇ ದೇವ ರಕ್ಷಿಸು ನಮ್ಮನನವರತ

ಇಲ್ಲಿ ಭಕ್ತನಾದವನು ಭಗವಂತನಲ್ಲಿ ಪ್ರಾರ್ಥನೆಯನ್ನು ಸಲ್ಲಿಸುತ್ತ ತನ್ನನ್ನು ಪಾಲಿಸೆಂದು ಬೇಡಿಕೊಳ್ಳುತ್ತಾನೆ ಎಂಬ ಭಾವವಿದೆ.

ಗತಿವಿಹೀನರಿಗಾರು ನೀನೇ
ಗತಿ ಕಣಾ ಪತಿಕರಿಸಿಕೊಂಡು ಸ
ದ್ಗತಿಯ ನೀನೆಲೆ ದೇವ ನಿನಗಪರಾ ನಾನಲ್ಲ
ಶ್ರುತಿವಚನವಾಡುವುದು ಶರಣಾ
ಗತರ ಸೇವಕನೆಂದು ನಿನ್ನನ್ನು
ಮತವಿಡಿದು ನಂಬಿದೆನು ರಕ್ಷಿಸು ನಮ್ಮನನವರತ

ಮಾನರುಂಟೇ ದೇವ ರಕ್ಷಿಸು ನಮ್ಮನನವರತ
ಹೇ ದೇವ, ಗತಿಯಿಲ್ಲದವರಿಗೆ ನೀನೇ ಗತಿ, ನನಗೆ ಸದ್ಗತಿಯನ್ನು ಕೊಡು, ಶರಣಾಗತರನ್ನು ಕಾಪಾಡುವೆಯೆಂದು ವೇದಗಳು ಘೋಷಿಸುತ್ತವೆ. ಆದ್ದರಿಂದ ನಿನ್ನನ್ನೆ ನಂಬಿರುವ ನನ್ನನ್ನು ನೀನೇ ಸಲಹು ಎಂಬ ಶರಣಾಗತಿಯ ಮನೋಭಾವ ವ್ಯಕ್ತವಾಗಿದೆ.

ಕೇಳುವುದು ಹರಿಕಥೆಯ ಕೇಳಲು
ಹೇಳುವುದು ಹರಿಭಕ್ತಿ ಮನದಲಿ
ತಾಳವುದು ಹಿರಿದಾಗಿ ನಿನ್ನಯ ಚರಣ ಸೇವೆಯಲಿ
ಉಳಿಗವ ಮಾಡುವುದು ವಿಷಯವ
ಹೂಳುವುದು ನಿಜ ಮುಕ್ತಿ ಕಾಂತೆಯ
ನಾಳುವುದು ಕೃಪೆ ಮಾಡಿ ರಕ್ಷಿಸು ನಮ್ಮನನವರತ

ಹರಿಭಕ್ತಿಸಾರ, ಹರಿಕಥೆ ಎಂದು ಹೇಳಿದ್ದರೂ ಇಲ್ಲಿ ಯಾವುದೇ ಒಂದು ಕಥೆಯನ್ನು ಹೇಳಲಾಗಿಲ್ಲ. ದೇವರಲ್ಲಿ ಮೊರೆ, ಪ್ರಾರ್ಥನೆಯೇ ಇದೆ ಹೊರತು ಯಾರೊಬ್ಬರ ಕಥೆಯೂ ಇಲ್ಲಿಲ್ಲ. ಶ್ರೀಹರಿಯ ಕರುಣೆ, ಮಹಿಮೆ, ಲೀಲೆ, ಭಕ್ತೋದ್ಧಾರ ಕಾರ್ಯ ಮೊದಲಾದವುಗಳನ್ನು ಕೊಂಡಾಡುವ ಸ್ತೋತ್ರರೂಪದ ಪದ್ಯಗಳಿವೆ. ಅವುಗಳನ್ನು ಹೇಳುವಾಗ ಭಕ್ತರ-ಭಗವಂತನ ಸಂಬಂಧದ ಕಥೆಗಳು ಇಲ್ಲಿ ಸೂಚಿತವಾಗಿವೆ. ರಾಮಾಯಣ, ಮಹಾಭಾರತ, ಭಾಗವತ ಇತ್ಯಾದಿ ಪುರಾಣ ಕಥೆಗಳನ್ನು ಇಲ್ಲಿ ಸ್ಮರಿಸಿಕೊಳ್ಳಬೇಕಾಗುತ್ತದೆ. ಹರಿಭಕ್ತಿಸಾರದಲ್ಲಿ ಜ್ಞಾನ ಭಕ್ತಿ, ವೈರಾಗ್ಯದ್ಯೋತಕವಾದ ಮಾತುಗಳು ಸಾಕಷ್ಟು ದೊರೆಯುತ್ತವೆ. ಈ ಕೃತಿಯಲ್ಲಿ ಕನಕದಾಸರು ಭಕ್ತಿ-ನೀತಿ-ವೈರಾಗ್ಯದ ತುದಿಯನ್ನು ತಲುಪಿಸಿದ್ದಾರೆ. ಭಕ್ತಿಯ ರಸಭರಿತವಾದ ಈ ಕೃತಿ ಆಶಾಕವಿತೆಯಂತೆ ರಚನೆಗೊಂಡಿದೆ ಎನ್ನುವಲ್ಲಿ ಎರಡು ಮಾತಿಲ್ಲ.

ರಾಮಧಾನ್ಯ ಚರಿತೆ
ರಾಮಧಾನ್ಯದ ಕೃತಿಯನೀ ಜ
ಧಾಮವೆಲ್ಲಾ ದರಿಸುವಂದದಿ
ಭೂಮಿಗಚ್ಚರಿಯಾಗಿ ಪೇಳುವೇನೀ ಮಹಾಕಥೆಯ

ಎಂದು ಹೇಳುವ, ಕನಕದಾಸರು ನಿಜವಾಗಿಯೂ ಅಚ್ಚರಿಯಾದ ಕಾವ್ಯವನ್ನು ರಚಿಸಿದ್ದಾರೆ. ಪಂಚತಂತ್ರದಲ್ಲಿ ಪ್ರಾಣಿಗಳನ್ನು ರೂಪಕಗಳಾಗಿ ಬಳಸಿಕೊಂಡಂತೆ, ಇಲ್ಲಿ ಧಾನ್ಯಗಳನ್ನು ಬಳಸಿರುವುದು ವಿಶೇಷವಾಗಿದೆ. ಇಂದಿನ ಬಂಡಾಯ ಸಾಹಿತ್ಯದ ಮೂಲ ಬೇರು “ರಾಮಧಾನ್ಯ ಚರಿತ್ರೆ ’’ ಎಂದು ಹೇಳಬಹುದು. ಕನಕದಾಸರು ಅನುಭವಿಸಿದ ಜಾತಿಯ ತೊಂದರೆಯನ್ನು ಹಾಗೂ ಆ ಕಾಲದ ಜಾತಿ ಆಧಾರಿತ ಸಮಾಜವನ್ನು ಈ ಕಾವ್ಯ ಪ್ರತಿಬಿಂಬಿಸುತ್ತದೆ. ವ್ರೀಹಿ-ನರೆದಲಗ(ಭತ್ತ-ರಾಗಿ)ಗಳು ಕಾವ್ಯದ ಎರಡು ಪಾತ್ರಗಳು. ಭತ್ತ ಮೇಲ್ವರ್ಗದವರ ಪ್ರತಿನಿಧಿ: ರಾಗಿ ಕೆಳವರ್ಗದವರ ಸಂಕೇತ. ಧರೆಯನೆಲ್ಲವ ಸೋತ ಸಹೋದರರೊಡಗೂಡಿ ಧರ್ಮರಾಜ ಕಾಮ್ಯಕವನದಲ್ಲಿರುತ್ತಾನೆ. ಅವರ ಕ್ಷೇಮ ಸಮಾಚಾರ ವಿಚಾರಿಸಲು ಬಂದ ಶಾಂಡಿಲ್ಯ ಮುನಿ ಧರ್ಮರಾಜನ ಮನಶಾಂತಿಗೆ ಈ ಕಥೆಯನ್ನು ಹೇಳುತ್ತಾನೆ.

ಅಷ್ಟಾದಶ ಹಾಗೂ ಅನಾವಶ್ಯಕ ವರ್ಣನೆಗಳಿಲ್ಲದೆ ಕಥೆ ಪ್ರಾರಂಭವಾಗುತ್ತದೆ. ದಶರಥನ ಆಜ್ಞೆಯಂತೆ ಶ್ರೀರಾಮನು ಪತ್ನಿ ಸೀತೆ ಮತ್ತು ತಮ್ಮನಾದ ಲಕ್ಷ್ಮಣ ಸಹಿತ ವನವಾಸಕ್ಕೆ ತೆರಳುತ್ತಾನೆ. ಇತ್ತ ಪರ್ಣಕುಟೀರದಲ್ಲಿ ಏಕೈಕ ಸೀತೆ ಇರುವುದನ್ನು ಸಾಸಿ ರಾವಣನು ಸೀತೆಯನ್ನು ಅಪಹರಿಸಿಕೊಂಡು ಹೋಗುತ್ತಾನೆ. ಪತ್ನಿಯನ್ನು ಮರಳಿ ತರುವುದಕ್ಕಾಗಿ ಸೈನ್ಯದೊಡಗೂಡಿ ಲಂಕಾಪತಿ ರಾವಣನೊಂದಿಗೆ ಯುದ್ಧ ಮಾಡಿ ರಾವಣ ಹತನಾದ ಬಳಿಕ ವಿಭೀಷಣನಿಗೆ ಉತ್ತರಾಧಿಕಾರಿಯೆಂದು ಪಟ್ಟಗಟ್ಟುತ್ತಾನೆ. ವಿಜಯೋನ್ಮತ್ತನಾದ ಶ್ರೀರಾಮನು ಮರಳಿ ಬರುವಾಗ ಮುನಿಶ್ರೇಷ್ಠ ಗೌತಮರ ಅತಿಥಿಯಾಗಿ ಉಳಿಯುತ್ತಾನೆ. ಅವರಿಗಾಗಿ ಮಾಡಲ್ಪಟ್ಟ ಮೃಷ್ಠಾನ್ನ ಭೋಜನ ಏರ್ಪಾಟು ವರ್ಣಾತೀತವಾಗಿದೆ. ಅವರೆಲ್ಲ ಹಾಲ್ಜೇನು, ಸಕ್ಕರೆ ಮೊದಲಾದ ನವಧಾನ್ಯಗಳ ರುಚಿಗೆ ಮಾರುಹೋಗಿ ಆ ಎಲ್ಲ ಧಾನ್ಯಗಳನ್ನು ನೋಡಲು ಕುತೂಹಲರಾಗುತ್ತಾರೆ.

ನರೆದಲಗನಿದು ನೆಲ್ಲು ಹಾರಕ
ಬರಗು ಜೋಳವು ಕಂಬು ಸಾಮೆಯು
ಉರುತರದ ನವಣೆಯಿದು ನವಧಾನ್ಯವೆಂದೆನಲು
ಮೆರೆವ ರಾಗಿಯ ಕಂಡು ಇದರೊಳು
ಪರಮಸಾರದ ಹೃದಯನಾರೆಂ
ದರಸಿ ಕೇಳಿದನಲ್ಲಿರುತಿಹ ಮಹಾಮುನಿಶ್ವರರ

ಆಗ ಕೆಲವರು ಗೋ ಶ್ರೇಷ್ಠವೆಂದು, ಕೆಲವರು ಸಾಮೆ, ಕೆಲವರು ನವಣೆ, ಕಂಬು, ಜೋಳ, ಕೆಲವರು ಹಾರಕವೆಂದು, ಕೆಲವರು ನೆಲ್ಲಿನ ಮಹತ್ವವನ್ನು, ಇನ್ನೂ ಕೆಲವರು ರಾಗಿಯ ಮಹತ್ವವನ್ನು ಅರಸನ ಸಮ್ಮುಖದಲ್ಲಿ ಹೇಳುತ್ತಿರುವಾಗ ಗೌತಮ ಮುನಿಗಳು ಹಲವು ಭಿನ್ನ ವಿಚಾರಗಳೇಕೆ ಒಂದನ್ನೇ ಹೇಳಿರೆಂದರು. ನಂತರ ಮುನಿಗಳೆ ನಮ್ಮ ದೇಶಕ್ಕೆ ರಾಗಿಯೇ ಶ್ರೇಷ್ಠ ಎನ್ನುತ್ತಾರೆ.

ಲೇಸನಾಡಿದೆ ಮುನಿಪ ಗೌತಮ
ದೋಷರಹಿತನು ಪಕ್ಷಪಾತವ
ನೀಸುಪರಿಯಲಿ ಮಾಡುವರೆ ಶಿವಯೆಂದನಾ ವ್ರಿಹೀಗ

ಏನೆಲವೋ ನರೆದಲೆಗ ನೀನು ಸ
ಮಾನವೇ ಯೆನಗಿಲ್ಲಿ ನಮ್ಮನು
ದಾನವಾಂತಕ ಬಲ್ಲನಿಬ್ಬರ ಹೆಚ್ಚು ಕುಂದುಗಳ
ಜಾನಕೀಪತಿಯ ಸನಿಹದಲಿ ಕುಲ
ಹೀನ ನೀನು ಪ್ರತಿಷ್ಠ ಸುಡು ಮತಿ
ಹೀನ ನೀನೆಂದೆನುತ ಖತಿಯಲಿ ಬೈದು ಭಂಗಿಸಿದ

ಭತ್ತ, ರಾಗಿಯನ್ನು ಹಲವು ರೀತಿಯಿಂದ ಹೀಯಾಳಿಸುತ್ತದೆ. ಇದನ್ನು ಕೇಳಿ ಕೋಪಗೊಂಡ ರಾಗಿ ಈ ತೆರನಾಗಿ ಹೇಳುತ್ತದೆ.

ಬಲ್ಲಿದರು ಬರೆ ಬಡವರಲಿ ನಿ
ನ್ನಲ್ಲಿ ಯುಂಟು ಉಪೇಕ್ಷೆ ನಮ್ಮಲಿ
ಸಲ್ಲದೀ ಪರಿಪಕ್ಷಪಾತವದಿಲ್ಲ ಭಾವಿಸಲು
ಬಲ್ಲಿದರು ಬಡವರುಗಳೆನ್ನದೆ
ಎಲ್ಲರನು ರಕ್ಷಿಸುವೇ ನಿರ್ದಯ
ನಲ್ಲ ತಾ ನಿನ್ನಂತೆ ಎಲ ಕುಟಿಲಾತ್ಮ ಹೋಗೆಂದು

ಹೀಗೆ ಭತ್ತ ರಾಗಿಯ ಮಧ್ಯೆ ವಾಗ್ವಾದ ಬೆಳೆಯಿತು. ಇದನ್ನು ಮಧ್ಯದಲ್ಲಿ ತಡೆದು ಆರು ತಿಂಗಳು ಸೆರೆಯಲ್ಲಿಡಲು ರಾಮನು ಆಜ್ಞೆ ಮಾಡುತ್ತಾನೆ. ತಾನು ಸಂಚಾರಗೈಯುತ್ತ ಅಯೋಧ್ಯೆಗೆ ಹೋಗಿ, ಪಟ್ಟಾಕಾರ ವಹಿಸಿಕೊಳ್ಳುತ್ತಾನೆ. ಅಷ್ಟರಲ್ಲಿ ಆರು ತಿಂಗಳು ಗತಿಸಿ ಹೋಗಿರುತ್ತದೆ. ನರೆದಲಗ ಮತ್ತು ವ್ರೀಹಿಯ ನೆನಪಾಗಿ ಕರೆದುಕೊಂಡು ಬರಲು ಕಳುಹಿಸುತ್ತಾನೆ. ಇಬ್ಬರನ್ನು ಸಭೆಗೆ ತಂದಾಗ ಭತ್ತವು ಕಳೆಗುಂದಿ ಉಪಯೋಗಕ್ಕೆ ಬಾರದಂತಾಗಿರುತ್ತದೆ. ರಾಗಿಗೆ ಯಾವುದೇ ರೀತಿಯ ಕುಂದುಂಟಾಗಿರುವುದಿಲ್ಲ. ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ. ರಾಮನೂ ಕೂಡ ಮೆಚ್ಚಿ ಈ ಕೆಳಗಿನಂತೆ ನುಡಿಯುತ್ತಾನೆ.

ಸುರ ಮುನಿಗಳಿಂತೆನಲು ಭೂಸುರ
ವರರು ಸಂತೋಷಿಸಲು ಸಭಿಕರು
ನರೆದಲಗ ನೀ ಬಾರೆನುತ ರಾಮನೃಪಾಲ ನೆರೆಮೆಚ್ಚಿ
ಕರೆದು ಕೊಟ್ಟನು ತನ್ನ ನಾಮವ
ಧರೆಗೆ ರಾಘವನೆಂಬ ಪೆಸರಾ
ಯ್ತಿರದೆ ವ್ರಿಹೀನಾಚಿದನು ಸಭೆಯಲಿ ಶಿರವ ಬಾಗಿಸಿದ
ಕೊನೆಗೆ ರಾಮನು ಇಬ್ಬರನ್ನೂ ಕರೆದು
ದೇವರಿಗೆ ಪರಮಾನ್ನ ನೀ ಮನು
ಜಾವಳಿಗೆ ಪಕ್ವಾನ್ನ ವೀತನು
ನೀವು ಧರೆಯೊಳಗ್ಗಿಬ್ಬರತಿ ಹಿತದಲಿ ನೀವಿಹುದು
ನಾವು ಕೊಟ್ಟೆವು ವರವ ಸಲ್ಲುವು
ದಾವ ಕಾಲದಲ್ಲಿನ್ನು ನೀವೇ
ಪಾವನರು ಪರಮ ಸುಖಿಯೆಂದು ಪಚರಿಸಿದನು ನೃಪತಿ

ನೀವಿಬ್ಬರೂ ಭೇದ-ಭಾವ ತೋರಬಾರದೆಂದು ಅರಹುತ್ತಾನೆ.

ಕನಕದಾಸರು ನಿರ್ಜೀವ ವಸ್ತುಗಳ ಕದನವನ್ನು ಮುಂದಿಟ್ಟುಕೊಂಡು ಸಮಕಾಲೀನ ಜಾತಿ ವ್ಯವಸ್ಥೆಯನ್ನು ಪ್ರತಿಬಿಂಬಿಸಿದ್ದಾರೆ. ಇಡೀ ಮೇಲ್ವರ್ಗದ ಸಮಾಜದೆದುರು ನಿಂತು ಇಂತಹ ಮಾತುಗಳನ್ನಾಡಿದ ಕನಕದಾಸರು ನಿಜವಾಗ್ಯೂ ಧೈರ್ಯಶಾಲಿ. ಇವರ ಪ್ರಗತಿಪರ ಧೋರಣೆಗಳಿಂದ “ರಾಮಧಾನ್ಯ ಚರಿತ್ರೆ’’ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಒಂದು ವಿಶಿಷ್ಟ ಕೃತಿಯಾಗಿ ಗಮನ ಸೆಳೆಯುತ್ತದೆ.

ನಳ ಚರಿತ್ರೆ
ಜನಪದದಷ್ಟೇ ಪ್ರಾಚೀನತೆ ಮತ್ತು ಜನಪ್ರಿಯತೆಯನ್ನು ಹೊಂದಿದ ನಳದಮಯಂತಿಯರ ಕಥೆ ರಮ್ಯವಾಗಿದೆ. ಮಹಾಭಾರತದ ವನಪರ್ವದಲ್ಲಿ ವಿಸ್ತಾರವಾಗಿ ನಿರೂಪಿತವಾಗಿರುವ ನಳೋಪಾಖ್ಯಾನವೇ ಕನಕದಾಸರ ‘ನಳಚರಿತ್ರೆ’ಗೆ ಮೂಲ ಆಕರವಾಗಿದೆ. ಈ ಕೃತಿಯಲ್ಲಿ ತೊಡಕಿಲ್ಲದ ವರ್ಣನೆಗಳು, ಶೀಘ್ರಗತಿಯ ಕ್ರಿಯೆ, ಯಾವುದೇ ಅಲಂಕಾರಗಳ ಭಾರವಿಲ್ಲದೆ ಸರಳ ಸುಂದರವಾದ ದೇಶೀಯ ಶೈಲಿ ಇವೆಲ್ಲಕ್ಕೂ ಮಿಗಿಲಾಗಿ ನಳ-ದಮಯಂತಿಯರ ಪ್ರೇಮ ಲೋಕಕ್ಕೆ ಆದರ್ಶಮಯವಾಗಿದೆ.

ನಮ್ಮ ಪ್ರಾಚೀನ ಕನ್ನಡ ಕವಿಗಳಿಗೆ ಕಾವ್ಯಾರಂಭದಲ್ಲಿ ತಮ್ಮ ಇಷ್ಟ ದೇವತೆಯನ್ನು ಮನಃಪೂರ್ವಕವಾಗಿ ಸ್ತುತಿಸುವುದು ಎಲ್ಲಿಲ್ಲದ ಹಂಬಲ. ಕನಕದಾಸರೂ ಈ ಮಾತಿಗೆ ಹೊರತಾಗಿಲ್ಲ.

ಶ್ರೀ ರಮಣ ಸರಸಿಜದಳಾಕ್ಷಮು
ರಾರಿ ಸಚರಾಚರಭರಿತ ದುರಿ
ತಾರಿ ನಿತ್ಯಾನಂದ ನಿರ್ಜರನಿಕರ ದಾತಾರ
ವಾರಿಜಾಂಬಕ ವರಗುಣಾಶ್ರಯ
ಮಾರಪಿತ ವೇದಾಂತನುತ ಸಾ
ಕಾರ ಚೆನ್ನಿಗರಾಯ ಪಾಲಿಸು ಜಗಕೆ ಮಂಗಳವ

ಎಂದು ಪ್ರಾರ್ಥಿಸುತ್ತಾರೆ. ಮುಂದಿನ ಪದ್ಯಗಳಲ್ಲಿ ಕಥೆಗೆ ಅನುವು ಮಾಡುಕೊಡುತ್ತಾರೆ. ಮಹಾಭಾರತದ ಪಾಂಡವರು ಜೂಜಿನಲ್ಲಿ ಸಕಲ ರಾಜವೈಭೋಗವನ್ನು ಕಳೆದುಕೊಂಡು, ಅಡವಿಯ ಸಂಚಾರದಲ್ಲಿದ್ದಾಗ ಅರ್ಜುನನು ಇಂದ್ರಲೋಕಕ್ಕೆ ಹೋಗಿ ತಿರುಗಿ ಬಾರದೇ ಇದ್ದ ಸಮಯದಲ್ಲಿ ಧರ್ಮರಾಯನು ಚಿಂತೆಗೀಡಾಗಿ, ತಮಗೆ ಒದಗಿಬಂದ ಪರಿಸ್ಥಿತಿಯನ್ನು ನೆನೆದು ದುಃಖಿತನಾಗಿರುತ್ತಾನೆ. ಅದೇ ಸಮಯಕ್ಕೆ ಆ ಕಾಮ್ಯಕವನಕ್ಕೆ ಮುನಿ ಸಮೂಹದೊಡಗೂಡಿ ರೋಮಶ ಮುನಿಗಳು ಆಗಮಿಸುತ್ತಾರೆ. ಕ್ಷೇಮ ಸಮಾಚಾರದ ವಿಚಾರ ನಡೆದಾಗ ಧರ್ಮರಾಜನು ತನ್ನಂತೆ ಅಷ್ಟೈಶ್ವರ್ಯವನ್ನು ಕಳೆದುಕೊಂಡು ದಿಕ್ಕೆಟ್ಟು ಕಾಡಿನಲ್ಲಲೆದವರು ಯಾರಿದ್ದಾರೆ ಎಂದು ತನ್ನ ಸ್ಥಿತಿಯನ್ನು (ಅಳಲನ್ನು) ತೋಡಿಕೊಳ್ಳುತ್ತಾನೆ. ಎಲೋ ಧರ್ಮಜನೆ ಈ ಹಿಂದೆ ನಳಮಹಾರಾಜ, ಹರಿಶ್ಚಂದ್ರ, ರಾಮಚಂದ್ರ ಮೊದಲಾದವರು ಹೇಳಲಾರದಷ್ಟು ತೊಂದರೆಯನ್ನು ಅನುಭವಿಸಿದ್ದಾರೆ ಎನ್ನಲು ಹಾಗಾದರೆ, ನಳ ಮಹಾರಾಜನ ಕಥೆಯನ್ನು ಹೇಳಬೇಕೆನಲು ರೋಮಶ ಮುನಿಗಳು ನಳರಾಜ ಪಟ್ಟ ಘೋರ ಕಷ್ಟದ ಕಥೆಯನ್ನು ಹೇಳಲು ಪ್ರಾರಂಭಿಸುತ್ತಾರೆ.

ಇಡೀ ಭೂ ಲೋಕಕ್ಕೆ ಮುಕುಟವೆಂಬಂತೆ ಹೊಳೆವ ನಿಷಧ ನಗರದ ವೀರಸೇನ ಅರಸನ ಪುತ್ರನಾಗಿ ನಳಭೂವರನು ಜನಿಸಿದನು. ನಿಷಧ ದೇಶದ ದೊರೆಯಾದ ನಳನು ಸುಂದರನೂ, ವೀರನೂ, ಗುಣಸಂಪನ್ನನೂ, ಸಕಲವಿದ್ಯಾಪಾರಂಗತನಾಗಿ ಕಥೆಯಲ್ಲಿ ಕಾಣಿಸಿಕೊಳ್ಳುತ್ತಾನೆ. ಅದರಂತೆಯೇ ವಿದರ್ಭದೇಶದ ದಮಯಂತಿಯು ಭೀಮನೃಪಾಲನ ಏಕಮಾತ್ರ ಪುತ್ರಿಯಾಗಿ ಚಲುವೆಯಾಗಿ ಕಂಗೊಳಿಸಿದ್ದಾಳೆ. ರಾಜಧೂತರಿಂದ ಒಬ್ಬರ ಚೆಲುವು ಒಬ್ಬರರಿತು, ವಿರಹ ಬಾಧೆಯಿಂದ ಬಳಲುವ ಸನ್ನಿವೇಶವನ್ನು ಕನಕದಾಸರು ಬಹು ರಮ್ಯವಾಗಿ ಚಿತ್ರಿಸಿದ್ದಾರೆ. ಸಂಸ್ಕೃತ ಕವಿ ಕಾಳಿದಾಸ ಮೇಘಗಳ ಮೂಲಕ ಸಂದೇಶವನ್ನು ಕಳುಹಿಸಿದರೆ, ಇಲ್ಲಿ ಕನಕದಾಸರು ಹಂಸದ ಮೂಲಕ ಪರಸ್ಪರ ತಮ್ಮ ವ್ಯಥ್ಯೆಯನ್ನು ತೋಡಿಕೊಂಡು, ವಿವಾಹ ಸನ್ನಾಹಕ್ಕೆ ಬರುವಂತೆ ಮಾಡಿದ್ದಾರೆ. ತನ್ನ ಮುದ್ದಿನ ಮಗಳ ಮನದ ಇಂಗಿತವನ್ನರಿತ ಭೀಮನೃಪಾಲ ಸ್ವಯಂವರವನ್ನು ಏರ್ಪಡಿಸುತ್ತಾನೆ. ದಮಯಂತಿಗೆ ಮೋಹಿತರಾದ ಇಂದ್ರಾದಿ ದೇವತೆಗಳೇ ಸ್ವಯಂವರಕ್ಕೆ ಆಗಮಿಸಿ, ದಮಯಂತಿಯನ್ನು ಮದುವೆಯಾಗಬೇಕೆಂದು ವಿವಿಧ ರೀತಿಯಾಗಿ ಪರಿತಪಿಸುತ್ತಾರೆ. ಆದರೆ ದಮಯಂತಿ ನಿಜ ಪ್ರೀತಿಗೆ ಬೆಲೆಕೊಟ್ಟು ಸ್ವಯಂವರದಲ್ಲಿ ದೇವತೆಗಳನ್ನು ಗೇಲಿ ಮಾಡಿ, ನಳಮಹಾರಾಜನ ಪತ್ನಿಯಾಗುತ್ತಾಳೆ.

ನಳ-ದಮಯಂತಿಯರ ಪ್ರೇಮವನ್ನು ಕಂಡು ದೇವತೆಗಳು ಇಬ್ಬರಿಗೂ ಆಶೀರ್ವದಿಸಿ ತಮ್ಮ ಸ್ವಸ್ಥಾನಕ್ಕೆ ತೆರಳುತ್ತಿರುತ್ತಾರೆ. ಅವರಿಗೆ ಕಲಿ ಎದುರಾಗಿ ವಿವಾಹದ ವಿಷಯ ಅರಿತು, ನಳನನ್ನು ಭ್ರಷ್ಟನನ್ನಾಗಿ ಮಾಡಿ ಅಡವಿಗಟ್ಟುತ್ತೇನೆಂಬ ನಿರ್ಧಾರವನ್ನು ದೇವತೆಗಳಿಗೆ ಅರಹುತ್ತಾನೆ. ಇದರಿಂದ ದೇವತೆಗಳು ಗಲಿಬಿಲಿಗೊಳ್ಳುತ್ತಾರೆ. ಇತ್ತ ಕಲಿಯು ಬ್ರಾಹ್ಮಣ ವೇಷಧಾರಿಯಾಗಿ ಆಸ್ಥಾನವನ್ನು ಪ್ರವೇಶಿಸುತ್ತಾನೆ. ನಳನ ಮದುವೆಯ ಸಮಯ ಸಾಧಿಸಿಕೊಂಡು ಪುಷ್ಕರನೊಡನೆ ಜೂಜಾಡುವಂತೆ ಮಾಡಿ, ನಳನು ಸಕಲ ಸಾಮ್ರಾಜ್ಯವೆಲ್ಲ ಸೋತು ನಿರ್ಗತಿಕನಾಗುವಂತೆ ಮಾಡುತ್ತಾನೆ. ಸಕಲ ರಾಜ ಪೋಷಾಕುಗಳನ್ನು ಕಳಚಿ ನಳ ಅಡವಿಗೆ ಹೊರಡಲು ಸಿದ್ಧನಾಗುತ್ತಾನೆ. ದಮಯಂತಿಯು ಮಕ್ಕಳನ್ನು ತನ್ನ ತವರಿಗೆ ಕಳುಹಿಸಿ ತಾನೂ ಕೂಡ ನಳನೊಂದಿಗೆ ಕಾಡಿಗೆ ಹೊರಡುತ್ತಾಳೆ. ದಾರಿಯಲ್ಲಿ ನಳ ತನಗೊದಗಿ ಬಂದ ದುರಾವಸ್ಥೆ ಕಂಡು ಮರುಗುತ್ತಾನೆ. ಸಹಧರ್ಮಿಣಿಗೆ ತವರು ಮನೆಗೆ ತೆರಳಿ ಸುಖವಾಗಿರಲು ಪರಿಪರಿಯಾಗಿ ತಿಳಿಯಪಡಿಸುತ್ತಾನೆ. ಸದಾ ಪತಿಯ ಭಕ್ತಿಯಲ್ಲಿರುವ ದಮಯಂತಿ ಅದಕ್ಕೊಪ್ಪದೆ, ಕಷ್ಟ ಕಾರ್ಪಣ್ಯಗಳನ್ನೆದುರಿಸುತ್ತಾ ಅರಣ್ಯದಲ್ಲಿ ಪತಿಯೊಂದಿಗೆ ಸಾಗುತ್ತಿರುತ್ತಾಳೆ. ಕಾನನದಲ್ಲಿ ಜಗನ್ಮೋಹನ ಪಕ್ಷಿಗಳು ನಳನ ಮನಸೆಳೆಯುತ್ತವೆ. ಅವುಗಳನ್ನು ಹಿಡಿಯಲು ತನ್ನ ಮೈಮೇಲಿನ ಪಂಜೆಯನ್ನು ಬೀಸಲು ಅದನ್ನು ಎತ್ತಿಕೊಂಡು ನಭಕ್ಕೆ ಹಾರಿಹೋಗುತ್ತವೆ. ಆಗ ನಳನು ಲಜ್ಜೆಯಳಿದು ಹೆಂಡತಿ ಹರಿದುಕೊಟ್ಟ ಸೀರೆಯನ್ನು ಧರಿಸಿಕೊಂಡು ಸಾಗುತ್ತಿರುತ್ತಾನೆ. ಅತ್ತ ಸೂರ್ಯ ಒಡಲು ಸೇರುತ್ತಾನೆ. ಕನಕದಾಸರು ಈ ಪ್ರಸಂಗವನ್ನು ಬಹು ಕರುಣಾಜನಕವಾಗಿ ಚಿತ್ರಿಸಿದ್ದಾರೆ.

ಆಗ ರಾತ್ರಿಯ ಸಮಯವಾಗಿರುತ್ತದೆ ಕಾಡಿನಲ್ಲಿ ಅಲೆದು ದಣಿವಾದುದರಿಂದ ದಮಯಂತಿ ಬೇಗ ನಿದ್ರೆ ಹೋಗುತ್ತಾಳೆ. ಇದೇ ಸ್ಥಿತಿಯಲ್ಲಿ ಇವಳನ್ನು ಬಿಟ್ಟು ಹೋದರೆ ತವರು ಮನೆಗೆ ಹೋಗಬಹುದೆಂದು ಭಾವಿಸಿ ಅವಳನ್ನು ಘೋರಾರಣ್ಯದಲ್ಲಿ ಬಿಟ್ಟು ಮುಂದೆ ಹೋಗುತ್ತಾನೆ. ಅಲ್ಲಿ ಕಾಡ್ಗಿಚ್ಚಿಗೆ ಬಲಿಯಾಗಿ ಸರ್ಪವೊಂದು ನರಳುತ್ತಿರುವುದನ್ನು ಕಂಡು ನಳನು ಅದನ್ನು ಪಾರುಮಾಡಲು ಹೋಗುತ್ತಾನೆ. ಅದು ಅವನನ್ನೇ ಕಚ್ಚಲು ನಳನ ರೂಪ ವಿಕಾರವಾಗುತ್ತದೆ.

ದೊಡ್ಡ ಹೊಟ್ಟೆಯ ಗೂನು ಬೆನ್ನಿನ
ಅಡ್ಡ ಮೋರೆಯ ಗಂಟು ಮೂಗಿನ
ದೊಡ್ಡ ಕೈಕಾಲುಗಳ ಉದರಿ ರೋಮಮೀಸೆಗಳ
ಜಡ್ಡು ದೇಹದ ಗುಜ್ಜ ಗೊರಲಿನ
ಗಿಡ್ಡ ರೂಪಿನ ಹರಕು ಗಡ್ಡದ
ಹೆಡ್ಡನಾದ ಕುರೂಪಿತನದಲಿ ನೃಪತಿ ವಿಷದಲಿ

ಈ ತೆರನಾದ ದೇಹವನ್ನು ಹೊತ್ತು, ಆ ಕಾರ್ಕೋಟಕನ ಸೂಚನೆಯಂತೆ ನಳ ಮುಂದೆ ಅಯೋಧ್ಯೆಗೆ ಹೋಗಿ ಅಲ್ಲಿಯ ಅರಸನಾದ ಋತುಪರ್ಣ ರಾಜನಲ್ಲಿ ಬಾಹುಕನೆಂಬ ಹೆಸರಿನಿಂದ ಸಾರಥಿಯಾಗಿ ಜೀವನ ಕಳೆಯಲು ನಿರತನಾಗುತ್ತಾನೆ. ತನ್ನ ಸಾಮರ್ಥ್ಯದ ಬಲದಿಂದ ರಾಜನ ಪ್ರೀತಿಗೆ ಪಾತ್ರನಾಗಿ ಇಬ್ಬರು ತುಂಬಾ ಹತ್ತಿರವಾಗುತ್ತಾರೆ. ಇತ್ತ ದಮಯಂತಿ ಎಚ್ಚರಗೊಂಡು ಪತಿಯನ್ನು ಕಾಣದೆ,

ಕಾಣಿರೇ ಅರಸಂಚೆಗಳೆ ನೀವ್
ಕಾಣಿರೇ ನಿಜಪತಿಯ ಶುಕ ಪಿಕ
ಕಾಣಿರೇ ಮೃಗ ಪಕ್ಷಿಗಳೆ ನಳಚಕ್ರವರ್ತಿಯನು
ಕಾಣಿರೇ ತರುಲತೆಗಳಿನಿಯನ
ಕಾಣಿರೇ ನಿವೆಂದು ಶೋಕದೊ
ಳೇಣ ಲೋಚನೆ ಹಲುಬಿದಳು ಹಲವಂಗದಲಿ ಪತಿಯ

ಎಂದು ಹೀಗೆ ನಾನಾ ರೀತಿಯಲ್ಲಿ ಪರಿತಪಿಸುತ್ತಾಳೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಘೋರ ಸರ್ಪವು ವಿಷಕಾರುತ್ತ ಬಂದು ಚಂದ್ರನನ್ನು ರಾಹುನುಂಗುವಂತೆ ಅವಳನ್ನು ನುಂಗತೊಡಗುವುದು. ಆಗ ಅವಳ ಮೊರೆಯನ್ನು ಕೇಳಿದ ಬೇಡನು ಹಾವನ್ನು ಹತಮಾಡಿ ಕಾಪಾಡುತ್ತಾನೆ. ಸಾವಿನ ದವಡೆಯಿಂದುಳಿಸಿದ ಬೇಡನು ದಮಯಂತಿಯಲ್ಲಿ ಮೋಹಪರವಶನಾದಾಗ.

ಇಂದೆನಗೆ ಅಸುವಿತ್ತು ಸಲಹಿದ
ತಂದೆಯಲ್ಲವೆ ನೀನು ಕೇಳು ಪು
ಳಿಂದ ಮುಳಿದರೆ ಶಪಿಸುವೆನು ಹೋಗೆಂದಳಿಂದು ಮುಖಿ

ದಮಯಂತಿಯಾಡಿದ ಮಾತು ಕೇಳಿ ಬೇಡನು ಹೊರಟುಹೋದನು. ಇಲ್ಲಿ ದಮಯಂತಿ ಭಾರತೀಯ ಸಂಸ್ಕೃತಿಯ ನಾರಿಯಾಗಿ ಗೋಚರಿಸಿದ್ದಾಳೆ. ಮುಂದೆ ದಮಯಂತಿ ವರ್ತಕರ ಸಹಾಯದಿಂದ ಚೇದಿನಗರವನ್ನು ಪ್ರವೇಶಿಸುತ್ತಾಳೆ. ಅಲ್ಲಿಯ ಅರಸನ ಮಗಳಾದ ಸುನೀತಿಯಲ್ಲಿ ಸೈರಂದ್ರಿತನವನ್ನು ವಹಿಸಿಕೊಂಡು ಜೀವನ ಹೊರೆಯುತ್ತಾಳೆ. ಚೇದಿರಾಜನ ಮಡದಿ ದಮಯಂತಿಯನ್ನು ಸ್ವಂತ ಮಗಳಂತೆ ಕಂಡರೂ, ದಮಯಂತಿಯ ಮನಸ್ಸು ಸದಾ ನಳನ ಧ್ಯಾನದಲ್ಲಿರುತ್ತದೆ. ಚಿಂತೆಯಲ್ಲಿ ಸೊರಗಿ ಕೋಲಿನಂತೆ ತೆಳುವಾಗಿ (ಸೊರಗಿ) ಕಡೆಗೂ ತಂದೆಯ ಮನೆ ಸೇರುತ್ತಾಳೆ. ತಂದೆಯ ಅರಮನೆಯಲ್ಲಿದ್ದರೂ ಅವಳಿಗೆ ನಳನಲ್ಲಿದ್ದ ಪ್ರೀತಿ ವಾತ್ಸಲ್ಯ ಕಡಿಮೆಯಾಗಲಿಲ್ಲ. ಆಹಾರ, ನಿದ್ರೆ ತೊರೆದು ಚಿಂತಿಸತೊಡಗಿದಾಗ, ಮಗಳ ಅವ್ಯವಸ್ಥೆಯನ್ನು ಕಂಡು ಭೀಮನೃಪಾಲನೂ ಚಿಂತೆಗೀಡಾಗಿ, ಭಟರಿಂದ ನಾಡಿನಲ್ಲೆಲ್ಲಾ ಹುಡುಕಿಸುತ್ತಾನೆ. ಇದರಿಂದ ನಳನು ಋತುಪರ್ಣ ಅರಸನಲ್ಲಿ ಸಾರಥಿಯಾಗಿರುವನೆಂಬ ಸಂಗತಿಯನ್ನು ದೇಶಭಟರ ಹಾಗೂ ಬ್ರಾಹ್ಮಣರ ಮೂಲಕ ರಾಜನು ಅರಿತುಕೊಳ್ಳುತ್ತಾನೆ. ಅವನನ್ನು ಕರೆಯಿಸುವ ಉಪಾಯವಾಗಿ ಮಗಳಲ್ಲಿ ನಿವೇಧಿಸಿಕೊಂಡು ಮರುಸ್ವಯಂವರವನ್ನು ಏರ್ಪಡಿಸುತ್ತಾನೆ. ದಮಯಂತಿಯ ಸ್ವಯಂವರದ ಸುದ್ದಿ ಅರಿತು ಋತುಪರ್ಣರಾಜ ತನ್ನ ಸಾರಥಿಯಾದ ಬಾಹುಕನನ್ನು (ಅಲ್ಲಿ ನಳನಿಗೆ ಬಾಹುಕನೆಂಬ ಹೆಸರು ಇರುತ್ತದೆ) ಕರೆಯಿಸಿ ರಥವನ್ನು ಸಿದ್ಧಗೊಳಿಸಲು ತಿಳಿಸುತ್ತಾನೆ. ಈ ಸುದ್ದಿ ಕೇಳಿದ ನಳನು ಒಳಗೊಳಗೆ ಮರುಗುತ್ತ ರಥವನ್ನು ಸಿದ್ಧಮಾಡುತ್ತಾನೆ.

ಅರಸನಾಜ್ಞೆಯಂತೆ ನಳನು ರಥವನ್ನು ವಾಯು ವೇಗದಲ್ಲಿ ಹಾರಿಸತೊಡಗಿದನು. ದಾರಿಯನ್ನು ಸಾಗುವಾಗ ಋತುಪರ್ಣನಿಗೆ ತಾನು ಅರಿತ ಅಕ್ಷ ಹೃದಯವನ್ನು ತಿಳಿಸಿಕೊಡುತ್ತಾನೆ. ರಾಜ ನಳನಿಂದ ಅಶ್ವ ಹೃದಯದ ರಹಸ್ಯವನ್ನು ಅರಿಯುತ್ತಾನೆ. ಅಷ್ಟರಲ್ಲಿ ವಿದರ್ಭ ನಗರವನ್ನು ಪ್ರವೇಶಿಸುತ್ತಾರೆ. ಆದರೆ ಅಲ್ಲಿ ಸಂಭ್ರಮದ ವಾತಾವರಣವಿರಲಿಲ್ಲ. ರಾಜನೊಡನೆ ಬಂದ ಬಾಹುಕ ನಳನೋ? ಬೇರಾರೋ? ಎಂಬ ಸಂಶಯ ದಮಯಂತಿಯ ಮನದಲ್ಲಿ ಮೂಡಿತು. ಅವನನ್ನು ಪರೀಕ್ಷಿಸಲು ಹಲವು ಉಪಾಯಗಳನ್ನು ಹೂಡುತ್ತಾಳೆ. ಆತನ ರೀತಿ-ನೀತಿಗಳನ್ನು, ಪಾಕಶಾಸ್ತ್ರದ ಬಗ್ಗೆ, ಪರೋಕ್ಷ ಮತ್ತು ಪ್ರತ್ಯಕ್ಷವಾಗಿ ಪರೀಕ್ಷೆಮಾಡಿ ನಳನೇ ಇರಬಹುದೆಂದು ಊಹಿಸುತ್ತಾಳೆ. ತನ್ನ ಮಕ್ಕಳನ್ನು ದಮಯಂತಿ ಆ ಬಾಹುಕನಲ್ಲಿ ಕಳುಹಿಸುತ್ತಾಳೆ. ಆ ಮಕ್ಕಳನ್ನು ಎತ್ತಿಕೊಂಡು ಮುದ್ದಾಡಿ ಅಕ್ಕರೆಗರಿಯುವುದನ್ನು ಕಂಡು ಈತನೇ ನಳನೆಂದು ದಮಯಂತಿಯು ತಿಳಿದು, ಆ ಸಂತೋಷದ ಕ್ಷಣದಲ್ಲಿ ಕಂಬನಿ ಮಿಡಿಯುತ್ತಾಳೆ. ತದನಂತರ ತಂದೆ-ತಾಯಿಗಳಿಗೆ ತಿಳಿಸಿ, ನಳನನ್ನು ಅಂತಃಪುರಕ್ಕೆ ಕರೆಯಿಸಿಕೊಂಡು ಮರು ಸ್ವಯಂವರ ಏರ್ಪಡಿಸಿ ಮಾಡಿದ ತನ್ನ ತಪ್ಪನ್ನು ಮನ್ನಿಸುವಂತೆ ಕೇಳಿಕೊಳ್ಳುತ್ತಾಳಲ್ಲದೆ ತನ್ನನ್ನು ಕಾಪಾಡಬೇಕೆಂದು ಮೊರೆ ಹೋಗುತ್ತಾಳೆ. ಹಲವು ದಿನಗಳ ನಂತರ ನಳ-ದಮಯಂತಿಯರ ಸಮಾಗಮವಾಗುತ್ತದೆ. ಕಾರ್ಕೊಟಿಕನ ಸಲಹೆಯಂತೆ ನಳ ಜಗನ್ಮೋಹನ ಪಕ್ಷಿಗಳನ್ನು ನೆನೆಯಲು ಅವನ ಉಡುಗೆಗಳು ಮರಳಿ ಬಂದು ವಿಕಾರರೂಪ ಮಾಯವಾಗಿ, ಮೋಹಕ ಕಾಂತಿಯುತ ಶರೀರಧಾರಿಯಾಗಿ ಶೋಭಿಸತೊಡಗುವನು. ಈ ಸಂತೋಷದ ಸಂದರ್ಭದಲ್ಲಿ ಮಂಗಳ ವಾದ್ಯಗಳು ಮೊಳಗಿದವು. ದೇವ-ದೇವಾಂಗನೆಯರು ಮಂಗಳಾಕ್ಷತೆ ಹಾಕಿ ಹರಸುತ್ತಾರೆ. ಭೀಮನೃಪಾಲರಿಂದ ಬೀಳ್ಕೊಂಡ ಸತಿ-ಪತಿಗಳು ಮರಳಿ ತಮ್ಮ ರಾಜ್ಯ ಸೇರುತ್ತಾರೆ. ಕಳೆದು ಹೋದ ರಾಜ ವೈಭೋಗವನ್ನು ಪುಷ್ಕರನಿಂದ ಮರಳಿ ಪಡೆಯುತ್ತಾನೆ. ಕಲಿಪುರಷ ನಳನ ಸತ್ಯನಿಷ್ಠೆಯನ್ನು ನೋಡಿ ಹೊರಟು ಹೋಗುತ್ತಾನೆ. ಅನೇಕ ರೀತಿಯಲ್ಲಿ ಪರಿಪರಿಯಾಗಿ ಕಷ್ಟ-ಕಾರ್ಪಣ್ಯಗಳನ್ನು ಅನುಭವಿಸಿಯೂ ತಮ್ಮಿಂದ ಕಳೆದುಕೊಂಡು ಹೋಗಿದ್ದ ಸುಖ-ಸಾಮ್ರಾಜ್ಯವನ್ನು ಪಡೆಯುವಲ್ಲಿ ದಂಪತಿಗಳಿಬ್ಬರೂ ತೆಗೆದುಕೊಂಡ ಸಂಯಮ ಅನನ್ಯವಾಗಿದೆ. ಸತಿ-ಪತಿಗಳಿಬ್ಬರೊಂದಾಗಿ ಸುಖವನ್ನು ಪಡೆದು ಭಗವಂತನ ಕೃಪೆಗೆ ಪಾತ್ರರಾಗಿರುವ ಚಿತ್ರಣ ಕನಕದಾಸರ ಕುಂಚದಲ್ಲಿ ಬಹು ವಿಶಿಷ್ಟವಾಗಿ ಅರಳಿದೆ. ರೋಮಶ ಮಹಾ ಮುನಿಗಳು ಈ ರೀತಿಯಾಗಿ ಕಥೆ ಹೇಳಿ ಧರ್ಮರಾಜನ ಮನಸ್ಸಿನ ಉದ್ವಿಘ್ನತೆಯನ್ನು ನಿವಾರಿಸಿದ್ದಾರೆ. ‘ನಳಚರಿತ್ರೆ’ ಜನ-ಮನದ ಕದ ತಟ್ಟುವಂತೆ ಮಾಡುವಲ್ಲಿ ಕನಕದಾಸರು ಯಶಸ್ಸನ್ನು ಸಾಧಿಸಿದ್ದಾರೆ.

ನಳಚರಿತ್ರೆಯಲ್ಲಿ ಪ್ರಮುಖವಾಗಿ ಬರುವ ಪಾತ್ರಗಳು ಎರಡು. ಇಲ್ಲಿ ಬರುವ ಇತರ ಪಾತ್ರಗಳು ಬೇಸರವನ್ನುಂಟು ಮಾಡುವುದಿಲ್ಲ. ನಳನಿಗಿಂತಲೂ ದಮಯಂತಿಯ ಪಾತ್ರ ಪ್ರಮುಖವಾಗಿದೆ. ಮೇಲ್ನೋಟಕ್ಕೆ ‘ನಳಚರಿತ್ರೆ’ ಎಂದು ಹೆಸರು ಹೊತ್ತು ಬಂದರೂ, ಇದರಲ್ಲಿ ಸ್ತ್ರೀಪರ ಚಿಂತನೆಗೆ ಧಾರಾಳವಾದ ಅವಕಾಶವಿದೆ. ಕನಕದಾಸರು ದಮಯಂತಿ ಪಾತ್ರಕ್ಕೆ ಹೆಚ್ಚಿನ ಮೆರುಗನ್ನು ತಂದಿದ್ದಾರೆ. ಇದರಿಂದ ಕನಕದಾಸರ ಸ್ತ್ರೀಪರ ಕಾಳಜಿಯನ್ನು ಗುರುತಿಸಬಹುದಾಗಿದೆ. ಪಾತ್ರಗಳ ವೈಶಿಷ್ಟ್ಯವೂ ಈ ಕಾವ್ಯ ಜನಪ್ರಿಯವಾಗಲಿಕ್ಕೆ ಕಾರಣವಾಗಿದೆ.

ಮೂಲ ಕಥೆಗೂ ಹಾಗೂ ಪ್ರಸ್ತುತ ಕಾವ್ಯಕ್ಕೂ ಹೋಲಿಸಿದಾಗ ಪಾತ್ರಗಳಲ್ಲಿ ಅಲ್ಲಲ್ಲಿ ವ್ಯತ್ಯಾಸಗಳು ಕಂಡುಬಂದರೂ, ಕಥೆಗೆ ಯಾವುದೇ ರೀತಿಯಾಗಿ ಎರಡು ಬಗೆಯದ ಕನಕದಾಸರು ಜಾಣ್ಮೆಯನ್ನು ಮೆರೆದಿದ್ದಾರೆ.

ದುರ್ಜನರ ಮನೆಯ ಪಾಯಸಾನ್ನಕಿಂತ
ಸಜ್ಜನರ ಮನೆಯ ರಬ್ಬಳಿಗೆ ಲೇಸು
ಹೆಜ್ಜೆಗೆ ಸಾವಿರ ಹೊನ್ನವಿತ್ತರೂ ಬೇಡ- ಬಲು
ದುರ್ಜನರ ಸಂಗ ಬಲು ಭಂಗ ಹರಿಯೆ

ಹೆಳವನಕಟ್ಟೆ ಗಿರಿಯಮ್ಮ

ಹೆಳವನಕಟ್ಟೆ ಗಿರಿಯಮ್ಮ ಕ್ರಿ.ಶ.೧೭೫೦ರ ಸುಮಾರಿಗೆ ಜೀವಿಸಿದ್ದಳು. ಇವಳ ತವರೂರು ಹಾವೇರಿ ಜಿಲ್ಲೆಯ ರಾಣಿಬೆನ್ನೂರು. ತಾಯಿ ತುಂಗಮ್ಮ ; ತಂದೆ ಬಿಷ್ಟಪ್ಪ ಜೋಯಿಸರು. ಇವರಿಗೆ ದೀರ್ಘ ಕಾಲದ ನಂತರ, ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಬಳಿಕ, ಹೆಣ್ಣು ಮಗುವಿನ ಜನನವಾಯಿತು. ತಿಮ್ಮಪ್ಪನ ಅನುಗ್ರಹದ ಸಂಕೇತವಾಗಿ ಮಗುವಿಗೆ “ಗಿರಿಯಮ್ಮ” ಎಂದು ಹೆಸರನ್ನಿಟ್ಟರು.

ಬಾಲ್ಯ
ಚಿಕ್ಕಂದಿನಿಂದಲೂ ಗಿರಿಯಮ್ಮ ಸ್ತೋತ್ರಪಾಠಗಳಲ್ಲಿ, ಪೂಜಾಕಾರ್ಯಕ್ಕೆ ನೆರವಾಗುವದರಲ್ಲಿ ಜಾಣೆಯಾಗಿದ್ದಳು. ಇವಳಿಗೆ ೪ ವರ್ಷ ವಯಸ್ಸಾದಾಗ ತಾಯಿ ತೀರಿಕೊಂಡರು. ತಾಯಿಯ ಹಿಂದೆಯೆ ತಂದೆ ಸಹ ಗತಿಸಿದರು. ಗಿರಿಯಮ್ಮ ಚಿಕ್ಕಮ್ಮ, ಚಿಕ್ಕಪ್ಪರ ವಾತ್ಸಲ್ಯದ ಆಶ್ರಯದಲ್ಲಿ ಬೆಳೆದಳು. ಬೆಳೆಯುತ್ತಿದ್ದಂತೆ ಗಿರಿಯಮ್ಮ ದೇವರ ಹಾಡುಗಳನ್ನು ಹಾಡುತ್ತ ನರ್ತಿಸುವದರಲ್ಲಿ ಪರವಶಳಾಗತೊಡಗಿದಳು. ತನ್ನ ಬಳಗದವರೊಂದಿಗೆ ಇವಳೊಮ್ಮೆ ಮಲೇಬೆನ್ನೂರಿಗೆ ಹೋದಾಗ ಅಲ್ಲಿಯ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಹೋಗಿದ್ದಳು. ಉಡುಪಿ ಯಾತ್ರೆಗೆಂದು ಆ ಮಾರ್ಗವಾಗಿ ಹೋಗುತ್ತಿದ್ದ ಗೋಪಾಲದಾಸರ ಅಕಸ್ಮಾತ್ ದರ್ಶನ ಹಾಗು ಅನುಗ್ರಹ ಈ ಬಾಲೆಗೆ ಆಯಿತು

ವಿವಾಹ
ಆ ಕಾಲದ ಸಂಪ್ರದಾಯದಂತೆ ಗಿರಿಯಮ್ಮನ ಮದುವೆ ಬಾಲ್ಯದಲ್ಲೆ ,ಮಲೇಬೆನ್ನೂರಿನ ಶ್ಯಾನುಭೋಗರಾದ ಕೃಷ್ಣಪ್ಪನವರ ಮಗ ತಿಪ್ಪರಸನೊಡನೆ ಜರುಗಿತು. ಗಿರಿಯಮ್ಮನ ಮನಸ್ಸು ರಂಗನಾಥಸ್ವಾಮಿಯಲ್ಲಿಯೆ ನಿಂತುಹೋಗಿತ್ತು. ಅವಳು ಲೌಕಿಕ ಸಂಸಾರ ವಿಮುಖಳಾಗಿದ್ದಳು. ಅವಳ ಪತಿ ತಿಪ್ಪರಸ ಅವಳ ಮನಸ್ಸನ್ನು ಅರಿತಿದ್ದರಿಂದ ಅವಳಿಗೆ ವಿರೋಧವಾಗಿ ನಡೆಯಲಿಲ್ಲ. ಆದರೆ ಅತ್ತೆಯ ಕಾಟ ದಿನೇ ದಿನೇ ಹೆಚ್ಚಾಗತೊಡಗಿತು. ಕೊನೆಗೊಮ್ಮೆ ಗಿರಿಯಮ್ಮನೆ ಸ್ವತಃ ತಿಪ್ಪರಸನಿಗೆ ಕನ್ಯೆ ಹುಡುಕಿ ಎರಡನೆಯ ಮದುವೆ ಮಾಡಿಸಿದಳು.

ಸಾಧನಾ ಪಥ
ಗಿರಿಯಮ್ಮನ ಸಾಧನೆ ಮುಂದುವರಿಯುತ್ತಿದ್ದಂತೆ ಹೆಳವನಕಟ್ಟೆಗೆ ರಂಗನಾಥಸ್ವಾಮಿಯ ದರ್ಶನಕ್ಕೆ ಬರುತ್ತಿದ್ದವರು ಈಕೆಯ ಭಕ್ತರಾಗತೊಡಗಿದರು. ಗಿರಿಯಮ್ಮನ ಕರುಣೆಯಿಂದ ಅನೇಕ ಜನರಿಗೆ ರೋಗ ನಿವಾರಣೆ ಮೊದಲಾದ ಪರಿಹಾರ ದೊರೆಯತೊಡಗಿದವು. ಮೊದಲೊಮ್ಮೆ ಉಡುಪಿಗೆ ಹೋಗುತ್ತಿದ್ದಾಗ ದರ್ಶನವಿತ್ತ ಗೋಪಾಲದಾಸರು ಮತೊಮ್ಮೆ ಅದೇ ಮಾರ್ಗವಾಗಿ ಉಡುಪಿಗೆ ಹೋಗುತ್ತಿರುವಾಗ ಗಿರಿಯಮ್ಮನಿಗೆ ಬಾಲಗೋಪಾಲನ ವಿಗ್ರಹ ನೀಡಿ ಆಶೀರ್ವದಿಸಿದರು. “ಹೆಳವನಕಟ್ಟೆ ರಂಗ”ನ ಅಂಕಿತದಲ್ಲಿ ದೇವರ ನಾಮಗಳನ್ನು ರಚಿಸಲು ಸೂಚಿಸಿದರು. ಮಂತ್ರಾಲಯದ ಮಠಾಧೀಶ್ವರರಾದ ಶ್ರೀ ಸುಮತೀಂದ್ರರು ಮಲೇಬೆನ್ನೂರಿಗೆ ಬಂದಾಗ ಗಿರಿಯಮ್ಮನ ಕೆಲವು ವಿರೋಧಿಗಳು ಇವಳಿಗೆ ಸ್ವಾಮಿಗಳು ತೀರ್ಥ ಕೊಡಲು ವಿರೋಧಿಸಿದ್ದರು. ಸ್ವಾಮಿಗಳು ಅದನ್ನು ಲೆಕ್ಕಿಸದೆ ಗಿರಿಯಮ್ಮನಿಗೆ ಮರ್ಯಾದೆ ನೀಡಿದರು.

ಪವಾಡಗಳು
ರಂಗನಾಥಸ್ವಾಮಿಯ ಬೆರಳ ಉಂಗುರ ಕಾಣೆಯಾದಾಗ ಗುಬ್ಬಿಯ ಮೂಲಕ ಅದನ್ನು ಮರಳಿ ಪಡೆದದ್ದು, ಮೃತ ಶಿಶುವನ್ನು ಬದುಕಿಸಿದ್ದು, ಕುರುಡು ಬಾಲಕನಿಗೆ ದೃಷ್ಟಿದಾನ ಮಾಡಿದ್ದು ಮೊದಲಾದ ಪವಾಡಗಳನ್ನು ಗಿರಿಯಮ್ಮ ಮಾಡಿದ್ದಾಗಿ ಹೇಳಲಾಗುತ್ತಿದೆ. ಆ ಪ್ರದೇಶದಲ್ಲಿ ಒಮ್ಮೆ ಭೀಕರ ಬರಗಾಲ ಬಂದಿದ್ದು ಅವಳ ಒಂದು ಹಾಡಿನಲ್ಲಿ ಗೊತ್ತಾಗುತ್ತದೆ. ಆ ಹಾಡಿನ ನಂತರದಲ್ಲಿ ಮಳೆಯಾಯಿತೆಂದು ಹೇಳುತ್ತಾರೆ.

ಜಲಸಮಾಧಿ
ಹೊನ್ನಾಳಿಗೆ ಸಮೀಪವಾಗಿ ತುಂಗಭದ್ರಾ ನದಿಯ ದಂಡೆಯ ಮೇಲೆ ಕಮ್ಮಾರಗಟ್ಟೆ ಎನ್ನುವ ಗ್ರಾಮವಿದೆ. ಒಂದು ಶ್ರಾವಣ ಶುದ್ಧ ಪಂಚಮಿಯ ದಿನ ಗಿರಿಯಮ್ಮ ತುಂಗಾ ಪ್ರವಾಹದಲ್ಲಿಳಿದು ಜಲಸಮಾಧಿ ಹೊಂದಿದಳು. ಆ ಸ್ಥಳದಲ್ಲಿ ನದಿಗೆ ಸೋಪಾನವನ್ನೂ, ಮಾರುತಿ ದೇವಸ್ಥಾನವನ್ನೂ ಗಿರಿಯಮ್ಮನೆ ಕಟ್ಟಿಸಿದ್ದಳೆಂದು ಹೇಳಲಾಗುತ್ತಿದೆ.

ಸಾಹಿತ್ಯ
ಕ್ರಿ.ಶ.೧೨೭೫ರ ಸುಮಾರಿನಲ್ಲಿ ನರಹರಿತೀರ್ಥರಿಂದ ಪ್ರಾರಂಭವಾದ ದಾಸಸಾಹಿತ್ಯದ ಪ್ರಾಚೀನ ಪರಂಪರೆ ಹೆಳವನಕಟ್ಟೆ ಗಿರಿಯಮ್ಮನವರೆಗೆ ನಡೆದುಕೊಂಡು ಬಂದಿತೆಂದು ಹೇಳಬಹುದು. ಗಿರಿಯಮ್ಮ ಅನೇಕ ದೇವರ ನಾಮಗಳನ್ನಲ್ಲದೆ, ಏಳು ವಿಶೇಷ ಕೃತಿಗಳನ್ನೂ ರಚಿಸಿದ್ದಾಳೆ.

ಕೃಷ್ಣಕೊರವಂಜಿ
ಬ್ರಹ್ಮಕೊರವಂಜಿ
ಉದ್ದಾಳಿಕನ ಕಥೆ
ಸೀತಾಕಲ್ಯಾಣ
ಶಂಕರಗಂಡನ ಹಾಡು
ಚಂದ್ರಹಾಸನ ಕಥೆ