ಪುಟಗಳು

ವಿಶ್ವ ತಂಬಾಕು ರಹಿತ ದಿನ

ಪ್ರತಿವರ್ಷ ವಿಶ್ವಾದ್ಯಂತ ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಲೇ ಇವೆ. ಆದರೆ, ತಂಬಾಕು ಸೇವನೆ ಪ್ರಮಾಣ ಕಡಿಮೆಯಾಗಲಿಲ್ಲ. ಅದರಿಂದ ಸಾಯುವವರ ಸಂಖ್ಯೆಯೂ.
ಯುವ ಜನಾಂಗವಂತೂ ಸಿಕ್ಕಾಪಟ್ಟೆ ಇಷ್ಟಾಪಟ್ಟೆ ಎಂಬಂತೆ ಸಿಗರೇಟ್‌, ಚುಟ್ಟಾ, ಹುಕ್ಕಾ, ಗುಟಾR, ಜರಾª ಮುಂತಾದವುಗಳಿಗೆ ಶರಣಾಗಿ ತಂಬಾಕು ಸೇವನೆ ಪ್ರಮಾಣ ಹೆಚ್ಚಾಗುತ್ತಿದೆ. ನಗರ ಪ್ರದೇಶಗಳಲ್ಲಿ ಧೂಮಪಾನಿಗಳಿಗಾಗಿಯೇ ಕಾಫಿ ಬಾರ್‌ಗಳ ರೀತಿಯಲ್ಲಿ ಹುಕ್ಕಾ ಕೇಂದ್ರಗಳು ತಲೆ ಎತ್ತುತ್ತಿವೆ.

ವಿಶ್ವದಲ್ಲಿ ಪ್ರತಿ ಆರು ಸೆಕೆಂಡಿಗೆ ಒಬ್ಬರು ತಂಬಾಕು ಸೇವನೆ ಸಂಬಂಧಿತ ಸಮಸ್ಯೆಯಿಂದ ಸಾವು ತಂದುಕೊಳ್ಳುತ್ತಿದ್ದರೆ ಭಾರತದಲ್ಲಿ ಪ್ರತಿವರ್ಷ 10 ಲಕ್ಷ ಮಂದಿ ಬಲಿಯಾಗುತ್ತಿದ್ದು ಪ್ರತಿನಿತ್ಯ ಕ್ಯಾನ್ಸರ್‌ನಿಂದಲೇ 2200 ಮಂದಿ ಸಾವಿಗೀಡಾಗುತ್ತಿದ್ದಾರೆ.

ಭಾರತದಲ್ಲಿ ಅಂದಾಜು 150 ದಶಲಕ್ಷಕ್ಕೂ ಹೆಚ್ಚು ಧೂಮಪಾನಿಗಳಿದ್ದು 30 ರಿಂದ 69 ವಯಸ್ಸಿನ ಶೇಕಡ 37 ರಷ್ಟು ಪುರುಷರು ಹಾಗೂ ಶೇಕಡ 5 ಮಂದಿ ಮಹಿಳೆಯರು ಧೂಮಪಾನಿಗಳು. ತಂಬಾಕು ಸೇವನೆಯಿಂದ ಅನಾರೋಗ್ಯಕ್ಕೆ ತುತ್ತಾಗಿ ಸಾವನ್ನಪ್ಪುವವರ ಪೈಕಿ ಶೇಕಡ 80 ರಷ್ಟು ಮಂದಿ ಗ್ರಾಮೀಣ ಭಾಗದವರು ಎಂಬುದು ಆಘಾತಕಾರಿ ಸಂಗತಿ.

ಈ ಹಿಂದೆ ತಂಬಾಕು ಸೇವನೆ ಎಂದರೆ ಅದು ಅನಕ್ಷರಸ್ಥರು ಅಥವಾ ದೊಡ್ಡ ಮನೆತನದವರು ಎಂಬ ಮಾತಿತ್ತು. ಗ್ರಾಮೀಣ ಭಾಗದ ಮಹಿಳೆಯರು ಕಡ್ಡಿಪುಡಿ, ನಶ್ಯ, ಪುರುಷರು ಬೀಡಿ, ಚುಟ್ಟಾ ಸೇವನೆ ಚಟ ಹತ್ತಿಸಿಕೊಂಡಿದ್ದರೆ ದೊಡ್ಡ ಕುಟುಂಬದವರು ’ಅಂತಸ್ತು’ ಪ್ರದರ್ಶನಕ್ಕೆ ಸಿಗರೇಟ್‌ ಸೇದುತ್ತಿದ್ದರು. ಆದರೆ, ಇದೀಗ ತಂಬಾಕು ಬಹುತೇಕ ಜನರ ದೈನಂದಿನ ಜೀವನದಲ್ಲಿ ಹಾಸುಹೊಕ್ಕಾಗಿದೆ. ಇದು ಸಾವಿನ ಪ್ರಮಾಣವನ್ನೂ ಹೆಚ್ಚಿಸಿದೆ. ಹಾವರ್ಡ್‌ ವಿಶ್ವವಿದ್ಯಾಲಯದ ಸಂಶೋಧನೆಯ ಪ್ರಕಾರ ಭಾರತದಲ್ಲಿ ಅನಾರೋಗ್ಯ ಸಂಬಂಧಿತ ಪ್ರತಿ 10 ಸಾವುಗಳಲ್ಲಿ 1 ಸಾವು ತಂಬಾಕು ಸೇವನೆಯಿಂದ ಆಗಿರುತ್ತದೆ.

ಇತ್ತೀಚಿನ ದಿನಗಳಲ್ಲಿ ಯುವಕ-ಯುವತಿಯರಲ್ಲಿ ಧೂಮಪಾನ ’ಫ್ಯಾಶನ್‌’ ಆಗಿರುವುದು ಮತ್ತೂ ಆತಂಕಕಾರಿ. ಧೂಮಪಾನ ಮಾಡುವ ಯವತಿಯರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗುತ್ತಿದೆ. ಆದರೆ, ಯುವ ಸಮುದಾಯ ಒಂದು ಮಾತು ನೆನಪಿಡಬೇಕು. ಧೂಮಪಾನ ಸೇರಿದಂತೆ ತಂಬಾಕು ಸೇವನೆಯಿಂದ ಶ್ವಾಸಕೋಶ ಹಾಗೂ ಹೃದ್ರೋಗ ಸಂಬಂಧಿ ಕಾಯಿಲೆಗಳ ಜತೆಗೆ ಆತಂಕ ಹುಟ್ಟಿಸುವಂತಹ ಸಂಗತಿ ಮತ್ತೂಂದಿದೆ. ಅದು ಪುರುಷರದಲ್ಲಿ ವೀರ್ಯೋತ್ಪಾದನೆ ಕಡಿತ, ನರದೌರ್ಬಲ್ಯ, ಮಹಿಳೆಯರಲ್ಲಿ ಗರ್ಭಕೋಶದ ಕ್ಯಾನ್ಸರ್‌. ಇದರಿಂದ ಕುಟುಂಬ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಹರೆಯದಲ್ಲಿ ಮೋಜಿಗಾಗಿ ಬರಮಾಡಿಕೊಳ್ಳುವ ಹವ್ಯಾಸ ಚಟವಾಗಿ ಸಂತಾನ ಪ್ರಾಪ್ತಿಯಿಲ್ಲದ ಫ‌ಲ ನೀಡುತ್ತಿದೆ.

ಪ್ರತಿವರ್ಷ ಶೇಕಡ 1.5 ರಷ್ಟು ಧೂಮಪಾನಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ವಿಚಿತ್ರ ಎಂದರೆ ತಂಬಾಕು ಬೆಳೆಯಿಂದ ಸರ್ಕಾರಕ್ಕೆ ಬರುವ ಆದಾಯ 200 ಕೋಟಿ ರೂ., ಆದರೆ, ತಂಬಾಕು ಸಂಬಂಧಿತ ಕಾಯಿಲೆಗಳಿಗೆ ಜನರು ವೆಚ್ಚ ಮಾಡುತ್ತಿರುವುದು 2,776 ಕೋಟಿ ರೂ.

ನೈಜ ಶತ್ರು

ಧೂಮಪಾನದಿಂದ ಯುವ ಸಮುದಾಯದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ’ಉದಯವಾಣಿ’ಯೊಂದಿಗೆ ಮಾತನಾಡಿದ ತಜ್ಞ ಡಾ.ಸೋಮಶೇಖರ್‌, ಧೂಮಪಾನ ಜಗತ್ತಿನ ಅತಿ ದೊಡ್ಡ ಶತ್ರುವಾಗಿ ಪರಿಣಮಿಸಿದೆ. ಯುವ ಸಮುದಾಯ ಶತ್ರುವನ್ನು ಅಪ್ಪಿ ಮುದ್ದಾಡುತ್ತಿದೆ. ಇದು ನಿಜಕ್ಕೂ ಆರೋಗ್ಯಕಾರಿ ಬೆಳವಣಿಗೆಯಲ್ಲ ಎಂದಿದ್ದಾರೆ.
ಚಿಕ್ಕವಯಸ್ಸಿನಲ್ಲೇ ಧೂಮಪಾನದ ಚಟ ಹತ್ತಿಸಿಕೊಳ್ಳುವ ಪ್ರವೃತ್ತಿ ಹೆಚ್ಚಾಗುತ್ತಿರುವುದರಿಂದ ವಿದ್ಯಾರ್ಥಿಗಳಲ್ಲಿ ಜ್ಞಾಪಕ ಶಕ್ತಿ ಕಡಿಮೆಯಾಗುತ್ತಿರುವ ಉದಾಹರಣೆಗಳಿವೆ. ಮದುವೆಯ ನಂತರ ವೀರ್ಯ ಉತ್ಪತ್ತಿ ಕಡಿಮೆಯಾಗಿ ಶಾಶ್ವತವಾಗಿ ಸಂತಾನ ಭಾಗ್ಯವೇ ಇಲ್ಲದಂತಾಗುತ್ತಿದೆ. ಮಕ್ಕಳಲಾಗುತ್ತಿಲ್ಲ ಎಂದು ಬಂದವರಲ್ಲಿ ಶೇಕಡ 90 ರಷ್ಟು ಮಂದಿ ಧೂಮಪಾನಿಗಳಾಗಿರುತ್ತಾರೆ ಎಂದು ಹೇಳುತ್ತಾರೆ.
ಗರ್ಭಿಣಿ ಮಹಿಳೆಯಂತೂ ಧೂಮಪಾನ ಮಾಡಿದರೆ ಖಂಡಿತವಾಗಿಯೂ ಹೊಟ್ಟೆಯಲ್ಲಿರುವ ಮಗುವಿಗೆ ತೊಂದರೆಯಾಗುತ್ತದೆ. ಅದರಲ್ಲಿ ಸಂಶಯವೇ ಇಲ್ಲ. ಇದುವರೆಗಿನ ಎಲ್ಲ ಸಂಶೋಧನೆಗಳೂ ಅದನ್ನು ದೃಢಪಡಿಸಿವೆ ಎಂದು ತಿಳಿಸುತ್ತಾರೆ.
ತಂಬಾಕು ಸೇವನೆಯಿಂದ ಪ್ರಮುಖವಾಗಿ ಬಾಯಿ ಕ್ಯಾನ್ಸರ್‌, ಗಂಟಲು ಕ್ಯಾನ್ಸರ್‌, ವಸಡು ಕ್ಯಾನ್ಸರ್‌, ಶ್ವಾಸಕೋಶದ ಕ್ಯಾನ್ಸರ್‌ ಮತ್ತು ಮಹಿಳೆಯರಲ್ಲಿ ಗರ್ಭಕೋಶದ ಕ್ಯಾನ್ಸರ್‌ ಕಾಯಿಲೆಗಳು ಬರುತ್ತವೆ. ಮೊದಲು ಗ್ರಾಮೀಣ ಭಾಗದಲ್ಲಿ ಇಂತಹ ಕಾಯಿಲೆಗಳು ಹೆಚ್ಚಾಗಿ ವರದಿಯಾಗುತ್ತಿತ್ತಾದರೂ ಈಗ ನಗರ ಪ್ರದೇಶದಲ್ಲಿ ಹೆಚ್ಚಾಗುತ್ತಿವೆ ಎನ್ನುತ್ತಾರೆ.
ಯುವ ಸಮುದಾಯ ತಂಬಾಕು ಸೇವನೆ ಚಟಕ್ಕೆ ಬಲಿಯಾಗದಂತೆ ಪೋಷಕರು ಮತ್ತು ಶಾಲಾ-ಕಾಲೇಜುಗಳಲ್ಲಿ ಶಿಕ್ಷಕರು ಸ್ವಲ್ಪ ಮುತುವರ್ಜಿ ವಹಿಸಬೇಕಾಗುತ್ತದೆ. ಚಿಕ್ಕಂದಿನಲ್ಲೇ ಅದರಿಂದಾಗುವ ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕು. ಮನೆಯಲ್ಲಿ ಪೋಷಕರು ಜವಾಬ್ದಾರಿ ತೆಗೆದುಕೊಂಡರೆ ಶಾಲಾ-ಕಾಲೇಜುಗಳಲ್ಲಿ ಶಿಕ್ಷಕರು ಆಸಕ್ತಿ ವಹಿಸಬೇಕು. ತಂಬಾಕು ಪಿಡುಗಿನ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ಶಾಲಾ-ಕಾಲೇಜುಗಳಲ್ಲಿ ತಂಡ ರಚಿಸಬೇಕು ಎಂದು ಹೇಳುತ್ತಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಕಾನೂನು ಜಾರಿಯಲ್ಲಿದೆ. ಶಾಲಾ-ಕಾಲೇಜು, ವಿಶ್ವವಿದ್ಯಾಲಯಗಳ ಕ್ಯಾಂಪಸ್‌ನಲ್ಲಿ ತಂಬಾಕು ಮಾರಾಟ ನಿಷಿದ್ಧ. ಆದರೆ, ಇದು ಕೇವಲ ಕಾಗದದ ಮೇಲಷ್ಟೇ. ಪರಿಣಾಮಕಾರಿ ನಿಯಂತ್ರಣ ಆಗುತ್ತಿಲ್ಲ. ಇತ್ತೀಚೆಗೆ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿರುವ ಅಂಗಡಿಗಳಲ್ಲೇ ವಿದೇಶಿ ಬ್ರಾಂಡ್‌ಗಳ ಸಿಗರೇಟ್‌ ಮಾರಾಟವಾಗುತ್ತಿರುವುದು ಬಹಿರಂಗಗೊಂಡಿತ್ತು. ಆದರೂ ಕಾನೂನಿನ ಮೂಲಕ ನಿಯಂತ್ರಣ ಮಾಡುವುದು ಸಾಧ್ಯವೇ ಇಲ್ಲ. ತಂಬಾಕು ನಿಯಂತ್ರಣವೇನಿದ್ದರೂ ಜನರಿಂದಲೇ ಆಗಬೇಕು ಎಂಬುದಂತೂ ಸತ್ಯ.
ಧೂಮಪಾನವಷ್ಟೇ ಅಪಾಯಕಾರಿಯಲ್ಲ. ಬೋರೊಬ್ಬರು ಸೇದಿ ಬಿಡುವ ಹೊಗೆ ಕುಡಿಯುವುದೂ (ಪ್ಯಾಸಿವ್‌ ಸ್ಮೋಕಿಂಗ್‌) ಡೇಂಜರ್‌. ಸಿಗರೇಟ್‌ ಸೇವನೆಯಿಂದ ನಾಲ್ಕು ಸಾವಿರ ಅಪಾಯಕಾರಿ ರಾಸಾಯನಿಕ ವಸ್ತುಗಳು ಉತ್ಪತ್ತಿಯಾಗುತ್ತವೆ. ಹೀಗಾಗಿ, ಧೂಮಪಾನ ಬಿಡಿ, ಧೂಮಪಾನಿಗಳ ಹತ್ತಿರಕ್ಕೂ ಸುಳಿಯಬೇಡಿ.


ತಂಬಾಕು ಸೇವನೆ(ಧೂಮಪಾನ)

ತಂಬಾಕು ಉರಿಸಿ ಅದರ ಹೊಗೆಯ ರುಚಿ ತೆಗೆದುಕೊಳ್ಳುವ ಅಥವಾ ಉಸಿರಿನ ಮೂಲಕ ಒಳತೆಗೆದುಕೊಳ್ಳುವುದನ್ನು ತಂಬಾಕು ಸೇವನೆ ಯೆಂದು ಕರೆಯಲಾಗುತ್ತದೆ. ಈ ಅಭ್ಯಾಸವು ಕ್ರಿ.ಪೂ 5000–3000ದಷ್ಟು ಹಿಂದೆಯೇ ರೂಢಿಯಲ್ಲಿತ್ತು BC.[೧] ಹಲವಾರು ನಾಗರೀಕತೆಗಳ ಧಾರ್ಮಿಕ ಆಚರಣೆಗಳ ಸಂದರ್ಭದಲ್ಲಿ ಧೂಪವುರಿಸುತ್ತಿದ್ದು, ಇದು ಮುಂದೆ ಉಪಭೋಗದ ಅಥವಾ ಸಾಮಾಜಿಕ ಸಾಧನವಾಗಿ ಬಳಕೆಯಾಗತೊಡಗಿತು.[೨] ಪ್ರಾಚೀನ ವಿಶ್ವದಲ್ಲಿ ತಂಬಾಕನ್ನು 1500ರ ಅಂತ್ಯಭಾಗದ ವೇಳೆಗೆ ಪರಿಚಯಿಸಲಾಯಿತು ಮತ್ತು ಇದು ವ್ಯಾಪಾರ ಮಾರ್ಗಗಳ ಮುಖಾಂತರ ಬೇರೆ ಸ್ಥಳಗಳನ್ನು ತಲುಪತೊಡಗಿತು. ಈ ವಸ್ತುವು ಆಗಾಗ್ಗೆ ಟೀಕೆಗೆ ಒಳಗಾದರೂ ಕೂಡ ಅದರ ಜನಪ್ರಿಯತೆ ಹೆಚ್ಚುತ್ತಲೇ ಹೋಯಿತು.[೩] ಜರ್ಮನ್ ವಿಜ್ಞಾನಿಗಳು 1920ರ ದಶಕದ ಅಂತ್ಯಭಾಗದಲ್ಲಿ ಧೂಮಪಾನ ಮತ್ತು ಶ್ವಾಸಕೋಶದ ಕ್ಯಾನ್ಸರ್ ನಡುವಿನ ಸಂಬಂಧವನ್ನು ಪತ್ತೆಹಚ್ಚಿದ್ದರಿಂದ ಆಧುನಿಕ ಇತಿಹಾಸದಲ್ಲಿ ಮೊತ್ತಮೊದಲ ಬಾರಿಗೆ ಧೂಮಪಾನ-ವಿರೋಧೀ ಚಳುವಳಿ ಆರಂಭವಾಯಿತು. ಆದರೆ, ಈ ಚಳುವಳಿಯು ಎರಡನೇ ವಿಶ್ವಯುದ್ಧದ ಸಮಯದಲ್ಲಿ ವಿರೋಧಪಕ್ಷಗಳನ್ನು ತಲುಪದೇ ಹೋದ ಕಾರಣದಿಂದಾಗಿ ದುರ್ಬಲಗೊಂಡು ಬಹುಬೇಗನೆ ಜನಪ್ರಿಯತೆ ಕಳೆದುಕೊಂಡಿತು.[೪] 1950ರಲ್ಲಿ ಮತ್ತೆ ಆರೋಗ್ಯ ಪರಿಣತರು ಧೂಮಪಾನ ಮತ್ತು ಶ್ವಾಸಕೋಶದ ಕ್ಯಾನ್ಸರ್ ನಡುವೆ ಸಂಬಂಧವಿದೆಯೆಂದು ಸೂಚಿಸತೊಡಗಿದರು.[೫] 1980ರ ದಶಕದಲ್ಲಿ ದೊರಕಿದ ವೈಜ್ಞಾನಿಕ ಸುಳಿವಿನಿಂದ ಈ ರೂಢಿಯ ವಿರುದ್ಧ ರಾಜಕೀಯ ಕ್ರಮಗಳನ್ನು ಕೈಗೊಳ್ಳುವಂತಾಯಿತು. 1965ರ ನಂತರ ತಂಬಾಕು ಸೇವನೆಯು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಏರಿಕೆಯಾಗಿವೆ ಇಲ್ಲವೇ ಇಳಿಕೆಯಾಗಿವೆ.[೬] ಆದರೆ ಅಭಿವೃದ್ಧಿಶೀಲ ಪ್ರಪಂಚದಲ್ಲಿ ಈ ಸಂಖ್ಯೆಯು ಏರಿಕೆಯಾಗುತ್ತಲೆ ಇದೆ

ಬಳಕೆ

ವಿಧಾನಗಳು

For more about the production of the argicultural product, see Types of tobacco, Cultivation of tobacco, Curing of tobacco, and Tobacco products
ತಂಬಾಕು ನಿಕೋಟಿಯಾನಾ ಕುಟುಂಬದ ಸಸ್ಯಗಳ ತಾಜಾ ಎಲೆಗಳಿಂದ ತಯಾರಿಸಲ್ಪಡುವ ಒಂದು ಕೃಷಿ ಉತ್ಪನ್ನವಾಗಿದೆ. ಈ ಕುಟುಂಬವು ಹಲವಾರು ಜಾತಿಗಳನ್ನು ಹೊಂದಿದ್ದು ಇವುಗಳಲ್ಲಿ ನಿಕೋಟಿಯಾನಾ ಟಬಾಕಮ್ ಜಾತಿಯ ಸಸ್ಯವನ್ನು ಸಾಮಾನ್ಯವಾಗಿ ಬೆಳೆಯಲಾಗುವುದು. ನಿಕೋಟಿಯಾನಾ ರಸ್ಟಿಕಾ ಎರಡನೇ ಸ್ಥಾನದಲ್ಲಿದ್ದು ಇದರಲ್ಲಿನ ನಿಕೋಟಿನ್ ಪ್ರಮಾಣವು ಅತಿಹೆಚ್ಚಿನ ಮಟ್ಟದಲ್ಲಿರುತ್ತದೆ. ಈ ಎಲೆಗಳನ್ನು ಕಟಾವು ಮಾಡಿ ಸಂಸ್ಕರಿಸುವುದರ ಮೂಲಕ ಮೆಲ್ಲನೆ ಉತ್ಕರ್ಷಣೆಯುಂಟಾಗಲು ಮತ್ತು ತಂಬಾಕಿನ ಎಲೆಯಲ್ಲಿರುವ ಕ್ಯಾರೊಟಿನಾಯ್ಡ್ಗಳು ನಶಿಸಲು ಅನುವು ಮಾಡಲಾಗುತ್ತದೆ. ಈ ಕ್ರಿಯೆಯು ತಂಬಾಕಿನಲ್ಲಿ ಕೆಲವು ಸಮ್ಮಿಶ್ರಣಗಳ ಉತ್ಪಾದನೆಗೆ ಕಾರಣವಾಗುತ್ತದೆ ಮತ್ತು ಇದರಿಂದಾಗಿ ಎಲೆಗಳಲ್ಲಿ ಸಿಹಿ ಹುಲ್ಲು, ಟೀ, ಗುಲಾಬಿಯೆಣ್ಣೆ ಅಥವಾ ಹಣ್ಣಿನ ಪರಿಮಳಗಳ ರುಚಿ ಕಂಡುಬರುತ್ತದೆ. ಪ್ಯಾಕೇಜಿಂಗ್ ಮಾಡುವ ಮುನ್ನ ತಂಬಾಕನ್ನು ವ್ಯಸನದ ಸಾಮರ್ಥ್ಯವನ್ನು ಹೆಚ್ಚಿಸುವ ಸಲುವಾಗಿ, pHನ ಮಟ್ಟವನ್ನು ಬದಲಾಯಿಸಲು ಅಥವಾ ಹೊಗೆಯ ಗುಣಮಟ್ಟವನ್ನು ಬದಲಿಸಿ ಹೆಚ್ಚು ರುಚಿಕರವನ್ನಾಗಿ ಮಾಡುವ ಸಲುವಾಗಿ ಸಾಮಾನ್ಯವಾಗಿ ಇತರ ಪದಾರ್ಥಗಳ ಜತೆ ಬೆರಕೆ ಮಾಡಲಾಗುತ್ತದೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿ ಈ ಸಮ್ಮಿಶ್ರಣಗಳಲ್ಲಿ 599 ಪದಾರ್ಥಗಳನ್ನು ಮಾತ್ರ ಬಳಸುವಂತೆ ನಿಯಮಿತಗೊಳಿಸಲಾಗಿದೆ.[೮] ಇದರ ನಂತರದ ಉತ್ಪನ್ನವನ್ನು ವಿಂಗಡಿಸಿ, ಪ್ಯಾಕೇಜಿಂಗ್ ಮಾಡಿ ಬಳಕೆದಾರ ಮಾರುಕಟ್ಟೆಗಳಿಗೆ ರಫ್ತುಮಾಡಲಾಗುವುದು. ಆದಷ್ಟು ಕಡಿಮೆ ಉಪ-ಪದಾರ್ಥಗಳನ್ನುಳ್ಳ ಸಕ್ರಿಯ ಪದಾರ್ಥಗಳನ್ನು ಬಳಕೆದಾರರಿಗೆ ತಲುಪಿಸಲು ನೂತನ ವಿಧಾನಗಳ ಬಳಕೆ ಮಾಡುತ್ತಿರುವುದರಿಂದ ಅಥವಾ ಬಳಕೆ ಮಾಡಲು ಆರಂಭಿಸಿರುವುದರಿಂದಾಗಿ ಬಳಕೆಯ ರೀತಿಗಳು ಗಣನೀಯವಾಗಿ ವಿಸ್ತರಿಸಿವೆ:
Field of tobacco organized in rows extending to the horizon.
Tobacco field in Intercourse, Pennsylvania.
Powderly stripps hung vertically, slightly sun bleached.
Basma leaves curing in the sun at Pomak village of Xanthi, Thrace, Greece.
Rectangular strips stacked in an open square box.
Processed tobacco pressed into long strips for shipping.
ಬೀಡಿ
ಬೀಡಿಗಳು ತೆಳ್ಳಗಿದ್ದು, ಸಾಮಾನ್ಯವಾಗಿ ಪರಿಮಳಭರಿತವಾಗಿರುವ ದಕ್ಷಿಣ ಏಷ್ಯಾದ ಸಿಗರೆಟ್‌ಗಳಾಗಿದ್ದು ಇವನ್ನು ತೇಂದು ಎಲೆಯಲ್ಲಿ ಸುರುಳಿಸುತ್ತಲ್ಪಟ್ಟ ತಂಬಾಕಿನಿಂದ ತಯಾರಿಸಲಾಗುವುದು ಮತ್ತು ಒಂದು ತುದಿಯಲ್ಲಿ ದಾರವೊಂದರಿಂದ ಸುತ್ತಿ ಕಟ್ಟಲಾಗುವುದು.[ಉಲ್ಲೇಖದ ಅಗತ್ಯವಿದೆ] ಬೀಡಿಗಳ ಹೊಗೆಯು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸಾಮಾನ್ಯವಾಗಿ ದೊರೆಯುವ ಸಿಗರೆಟ್‌ಗಳಿಗಿಂತ ಹೆಚ್ಚಿನ ಮಟ್ಟದ ಕಾರ್ಬನ್ ಮಾನಾಕ್ಸೈಡ್, ನಿಕೋಟೀನ್ ಮತ್ತು ಟಾರ್ ಅನ್ನು ಉತ್ಪಾದಿಸುತ್ತದೆ.[೪೦][೪೧] ಸಾಧಾರಣ ಸಿಗರೆಟ್‌ಗಳಿಗೆ ಹೋಲಿಸಿದರೆ ಬೀಡಿಗಳು ಕಡಿಮೆ ಬೆಲೆಯುಳ್ಳವಾದ್ದರಿಂದ, ಇವು ಬಹಳ ಹಿಂದಿನಿಂದಲೂ ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾ, ಕಾಂಬೋಡಿಯಾ ಮತ್ತು ಭಾರತಗಳ ಬಡವರಲ್ಲಿ ಜನಪ್ರಿಯವಾಗಿವೆ.[ಉಲ್ಲೇಖದ ಅಗತ್ಯವಿದೆ]
ಸಿಗಾರ್ಗಳು
ಸಿಗಾರ್‌ಗಳು ಒಣಗಿದ ಮತ್ತು ಹುದುಗು ಬರಿಸಿ ಗಟ್ಟಿಯಾಗಿ ಸುತ್ತಲಾದ ತಂಬಾಕಿನ ಗಂಟಾಗಿದ್ದು, ಇದರ ಹೊಗೆಯು ಧೂಮಪಾನ ಮಾಡುವವರ ಬಾಯಿಯನ್ನು ಪ್ರವೇಶಿಸಲು ಅನುವಾಗುವಂತೆ ಇದನ್ನು ಹೊತ್ತಿಸಲಾಗುತ್ತದೆ. ಈ ಹೊಗೆಯನ್ನು ಸಾಮಾನ್ಯವಾಗಿ ಉಸಿರಿನ ಮೂಲಕ ಒಳಗೆಳೆದುಕೊಳ್ಳಲಾಗುವುದಿಲ್ಲ, ಏಕೆಂದರೆ ಹೊಗೆಯಲ್ಲಿ ಅತಿ ಹೆಚ್ಚಿನ ಮಟ್ಟದ ಕ್ಷಾರದ ಗುಣವಿರುವುದರಿಂದ ಇದು ಬಹಳ ಬೇಗನೆ ಗಂಟಲ ನಾಳ ಮತ್ತು ಶ್ವಾಸಕೋಶಗಳು ಕೆರಳುವ ಸಾಧ್ಯತೆಯಿದೆ. ಇದರಿಂದಾಗಿ ಈ ಹೊಗೆಯನ್ನು ಸಾಮಾನ್ಯವಾಗಿ ಬಾಯಿಗೆ ತೆಗೆದುಕೊಳ್ಳಲಾಗುವುದು.[ಉಲ್ಲೇಖದ ಅಗತ್ಯವಿದೆ] ಸಿಗಾರ್ ಸೇವನೆಯ ವಾಡಿಕೆಯು ಸ್ಥಳ, ಐತಿಹಾಸಿಕ ಅವಧಿ ಮತ್ತು ಸಮೀಕ್ಷಿಸಲಾದ ಜನಸಂಖ್ಯೆಯನ್ನು ಅವಲಂಬಿಸಿದೆ, ಹಾಗೂ ಈ ವಾಡಿಕೆಯ ಊಹೆಗಳು ಸಮೀಕ್ಷೆಯ ವಿಧಾನಗಳಿಗನುಗುಣವಾಗಿ ಕೊಂಚ ಬದಲಾಗುತ್ತವೆ. ಈಗ ಅತಿಹೆಚ್ಚಿನ ಬಳಕೆಯು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಆಗುತ್ತದೆ, ಜರ್ಮನಿ ಮತ್ತು ಯುನೈಟೆಡ್ ಕಿಂಗ್‍ಡಮ್ ನಂತರದ ಸ್ಥಾನಗಳಲ್ಲಿವೆ; ಯುಎಸ್ ಮತ್ತು ಪಶ್ಚಿಮ ಯುರೋಪ್ ಪ್ರಪಂಚದ ಒಟ್ಟು ಸಿಗಾರ್ ಮಾರಾಟದ ಶೇಕಡಾ 75ರಷ್ಟನ್ನು ಬಳಸುತ್ತವೆ.[೪೨] 2005ರ ಅಂಕಿ ಅಂಶಗಳ ಪ್ರಕಾರ ಶೇಕಡಾ 4.3ರಷ್ಟು ಪುರುಷರು ಹಾಗೂ 0.3%ರಷ್ಟು ಮಹಿಳೆಯರು ಸಿಗಾರ್ ಸೇವನೆ ಮಾಡುತ್ತಾರೆಂದು ಎಣಿಕೆ ಹಾಕಲಾಗಿದೆ.[೪೩]
ಸಿಗರೇಟುಗಳು
ಫ್ರೆಂಚ್ ಭಾಷೆಯಲ್ಲಿ ಸಿಗರೆಟ್‌ಗಳೆಂದರೆ "ಸಣ್ಣ ಸಿಗಾರ್"ಗಳೆಂದು ಅರ್ಥ, ಈ ಉತ್ಪನ್ನವನ್ನು ಧೂಮಪಾನದ ಮೂಲಕ ಸೇವಿಸಲಾಗುತ್ತದೆ ಹಾಗೂ ಇವನ್ನು ಸಂಸ್ಕರಿಸಲಾದ ಮತ್ತು ಉತ್ತಮವಾಗಿ ಕತ್ತರಿಸಲಾದ ತಂಬಾಕಿನ ಎಲೆಗಳು ಮತ್ತು ಪುನರ್ರಚಿಸಲಾದ ತಂಬಾಕು ಮತ್ತು ಇದರ ಜತೆಗೇ ಇತರ ವಸ್ತುಗಳನ್ನು ಸೇರಿಸಿ ಸುತ್ತಲಾಗುತ್ತದೆ ಇಲ್ಲವೇ ಕಾಗದ ಸುತ್ತಿದ ಕೊಳವೆಯೊಂದಕ್ಕೆ ತುಂಬಿಸಲಾಗುತ್ತದೆ.[೮] ಸಿಗರೆಟ್‌ಗಳನ್ನು ಹೊತ್ತಿಸಿ ಸೇದಲಾಗುತ್ತದೆ, ಸಾಮಾನ್ಯವಾಗಿ ಇದಕ್ಕಾಗಿ ಒಂದು ಸೆಲ್ಯುಕೋಸ್ ಅಸಿಟೇಟ್ ಫಿಲ್ಟರ್ ಇದ್ದು ಇದರ ಮೂಲಕ ಹೊಗೆಯನ್ನು ಬಾಯಿ ಮತ್ತು ಶ್ವಾಸಕೋಶಕ್ಕೆ ತೆಗೆದುಕೊಳ್ಳಲಾಗುವುದು. ಸಿಗರೆಟ್ ಸೇವನೆಯು ತಂಬಾಕನ್ನು ಸೇವಿಸುವ ಅತ್ಯಂತ ಪ್ರಚಲಿತ ವಿಧಾನವಾಗಿದೆ.[ಉಲ್ಲೇಖದ ಅಗತ್ಯವಿದೆ]
ಎಲೆಕ್ಟ್ರಾನಿಕ್ ಸಿಗರೆಟ್‌ಗಳು
ಎಲೆಕ್ಟ್ರಾನಿಕ್ ಸಿಗರೆಟ್‌ಗಳು ತಂಬಾಕು ಧೂಮಪಾನಕ್ಕೆ ಪರ್ಯಾಯವಾಗಿವೆಯಾದರೂ ಇಲ್ಲಿ ತಂಬಾಕು ಸೇವನೆ ಇರುವುದಿಲ್ಲ. ಇದು ಬ್ಯಾಟರಿ-ಚಾಲಿತ ಸಾಧನವಾಗಿದ್ದು, ಇದರಲ್ಲಿರುವ ಆವೀಕೃತ ಪ್ರೊಪೈಲೀನ್ ಗ್ಲೈಕಾಲ್/ನಿಕೋಟಿನ್ ದ್ರಾವಣದ ಮೂಲಕ ನಿಕೋಟಿನ್ ಡೋಸ್‌ಗಳನ್ನು ಸೇವಿಸಬಹುದು. ಇದು ಇತ್ತೀಚೆಗೆ ಹೊಸದಾಗಿ ಬಂದ ಉತ್ಪನ್ನವಾದ್ದರಿಂದ, ಇದರ ಬಗೆಗಿನ ಹಲವಾರು ಕಾನೂನುಗಳು ಮತ್ತು ಸಾರ್ವಜನಿಕ ಆರೋಗ್ಯ ತನಿಖೆಗಳು ಇನ್ನೂ ಪೂರ್ಣಗೊಂಡಿಲ್ಲ.
ಹುಕ್ಕಾ
ಹುಕ್ಕಾವು ಧೂಮಪಾನ ಮಾಡಲು ಬಳಸುವ ಸಾಧಾರಣವಾಗಿ ಒಂದು ಅಥವಾ ಹಲವು ಶಾಖೆಗಳನ್ನುಳ್ಳ (ಸಾಮಾನ್ಯವಾಗಿ ಗಾಜಿನದಾದ) ನೀರಿನ ಕೊಳವೆಯಾಗಿದೆ. ಇದು ಮೂಲತಃ ಭಾರತದ್ದಾಗಿದ್ದು, ಈಗ ಹುಕ್ಕಾ ಪ್ರಪಂಚದೆಲ್ಲೆಡೆಗೆ, ವಿಶೇಷವಾಗಿ ಮಧ್ಯಪೂರ್ವ ದೇಶಗಳಲ್ಲಿ ಅತ್ಯಂತ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಹುಕ್ಕಾವು ನೀರಿನ ಶೋಧನೆ ಮತ್ತು ಪರೋಕ್ಷವಾದ ಉಷ್ಣತೆಯನ್ನು ಬಳಸಿಕೊಳ್ಳುತ್ತದೆ. ಇದನ್ನು ಗಿಡಮೂಲಿಕೆಗಳ ಹಣ್ಣುಗಳು, ತಂಬಾಕು ಅಥವಾ ಕ್ಯಾನಾಬಿಸ್ ಅನ್ನು ಧೂಮಪಾನದ ಮೂಲಕ ಸೇವಿಸಲು ಬಳಸಬಹುದು.
ಕ್ರೆಟೆಕ್‌ಗಳು
ಕ್ರೆಟೆಕ್‌ಗಳು ತಂಬಾಕು, ಲವಂಗ ಮತ್ತು ಒಂದು ರೀತಿಯ ರುಚಿ-ಪರಿಮಳಗಳನ್ನುಳ್ಳ ’ಸಾಸ್’ನ ಸಂಕೀರ್ಣ ಮಿಶ್ರಣದಿಂದ ತಯಾರಿಸಲಾದ ಸಿಗರೆಟ್‌ಗಳಾಗಿವೆ. ಇವುಗಳನ್ನು ಮೊದಲ ಬಾರಿಗೆ 1880ರ ದಶಕದಲ್ಲಿ ಕುಡುಸ್, ಜಾವಾದಲ್ಲಿ ಲವಂಗಗಳಲ್ಲಿರುವ ಔಷಧೀಯ ಅಂಶವಾದ ಯೂಜಿನಾಲ್ ಅನ್ನು ಶ್ವಾಸಕೋಶಗಳಿಗೆ ತಲುಪಿಸುವ ಸಲುವಾಗಿ ಬಳಸಲಾಯಿತು. ತಂಬಾಕಿನ ಗುಣಮಟ್ಟ ಮತ್ತು ವೈವಿಧ್ಯತೆಗಳು ಕ್ರೆಟೆಕ್ ಉತ್ಪಾದನೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ, ಹಾಗೂ ಇದರಿಂದಾಗಿ ಕ್ರೆಟೆಕ್‍ಗಳು 30ಕ್ಕಿಂತ ಹೆಚ್ಚಿನ ರೀತಿಯ ತಂಬಾಕನ್ನು ಒಳಗೊಂಡಿರುವಂತಹ ಸಾಧ್ಯತೆಗಳೂ ಇರುತ್ತವೆ.. ಇದಕ್ಕೆ ವಿಶಿಷ್ಟವಾದ ರುಚಿಯನ್ನು ನೀಡುವ ಸಲುವಾಗಿ ತಂಬಾಕಿನ ಮಿಶ್ರಣದ 1/3 ಭಾಗದಷ್ಟು ಚೂರುಮಾಡಿ ಒಣಗಿಸಿದ ಲವಂಗದ ಮೊಗ್ಗುಗಳನ್ನು ಸೇರಿಸಲಾಗುತ್ತದೆ. ಯುನೈಟೆಡ್ ಸ್ಟೇಟ್ಸ್‌ನ ಹಲವಾರು ರಾಜ್ಯಗಳು ಕ್ರೆಟೆಕ್‌ಅನ್ನು ನಿಷೇಧಿಸಿವೆ,[ಉಲ್ಲೇಖದ ಅಗತ್ಯವಿದೆ] ಮತ್ತು 2004ರಲ್ಲಿ ಯುನೈಟೆಡ್ ಸ್ಟೇಟ್ಸ್ ತಂಬಾಕು ಮತ್ತು ಮೆಂಥಾಲ್‌ಗಳನ್ನು ಹೊರತುಪಡಿಸಿ ಸಿಗರೆಟ್‌ಗಳು ಇನ್ನಾವುದೇ "ವಿಶೇಷ ಫ್ಲೇವರ್" ಅನ್ನು ಹೊಂದಿರುವುದನ್ನು ನಿಷೇಧಿಸಿತು, ಹಾಗೂ ಇದರಿಂದಾಗಿ ಕ್ರೆಟೆಕ್‌ಗಳನ್ನು ಸಿಗರೆಟ್‌ಗಳ ಪಟ್ಟಿಯಿಂದ ಹೊರತುಪಡಿಸಿದಂತಾಯಿತು.[೪೪]
ಪರೋಕ್ಷ ಧೂಮಪಾನ
ಸೇವಿಸಿ ಹೊರಬಿಟ್ಟ ತಂಬಾಕಿನ ಹೊಗೆಯನ್ನು ಅನೈಚ್ಛಿಕವಾಗಿ ಸೇವಿಸುವುದನ್ನು ಪರೋಕ್ಷ ಧೂಮಪಾನ ಎನ್ನಲಾಗುತ್ತದೆ. ಉರಿಯುತ್ತಿರುವ ತುದಿಯಿಂದ ಹೊರಡುವ ಹೊಗೆಯನ್ನು ಸೇವಿಸುವುದನ್ನು ಸೆಕೆಂಡ್-ಹ್ಯಾಂಡ್ ಸ್ಮೋಕಿಂಗ್(SHS) ಎನ್ನಲಾಗುತ್ತದೆ ಮತ್ತು ಉರಿಯುತ್ತಿರುವ ತುದಿಯನ್ನು ನಮ್ದಿಸಲಾದ ನಂತರ ಉಳಿದುಕೊಳ್ಳುವ ಹೊಗೆಯನ್ನು ಸೇವಿಸುವುದನ್ನು ಎನ್‌ವೈರ್ನಮೆಂಟಲ್ ಟೊಬ್ಯಾಕೋ ಸ್ಮೋಕ್ (ETS) ಅಥವಾ ಥರ್ಡ್ ಹ್ಯಾಂಡ್ ಸ್ಮೋಕ್ ಎನ್ನಲಾಗುತ್ತದೆ. ಇದರಿಂದುಂಟಾಗುವ ದುಷ್ಪರಿಣಾಮಗಳ ಕಾರಣದಿಂದ ಈ ರೀತಿಯ ಸೇವನೆಯು ತಂಬಾಕು ಉತ್ಪನ್ನಗಳ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಕೊಳವೆಯ ಮೂಲಕ ಧೂಮಪಾನ
ಕೊಳವೆ ಧೂಮಪಾನವು ಸಾಮಾನ್ಯವಾಗಿ ಸೇವಿಸಲಾಗುವ ತಂಬಾಕನ್ನು ಹೊತ್ತಿಸಲು ಒಂದು ಸಣ್ಣ ಕಕ್ಷೆ (ದ ಬೌಲ್), ಒಂದು ಸಣ್ಣ ಕಾಂಡ (ಶ್ಯಾಂಕ್) ಮತ್ತು ಕೊನೆಗೆ ಬಾಯಿಡಲು ಜಾಗ (ದ ಬಿಟ್) ಅನ್ನು ಹೊಂದಿರುತ್ತದೆ. ತಂಬಾಕಿನ ಚೂರುಗಳನ್ನು ಕಕ್ಷೆಯಲ್ಲಿಟ್ತು ಹೊತ್ತಿಸಲಾಗುತ್ತದೆ. ಕೊಳವೆ ಮೂಲಕ ಸೇವಿಸಲು ಬಳಸಲಾಗುವ ತಂಬಾಕುಗಳನ್ನು ಅತ್ಯಂತ ಎಚ್ಚರಿಕೆಯಿಂದ ಸಂಸ್ಕರಿಸಿ ಮಿಶ್ರ ಮಾಡಲಾಗುತ್ತದೆ ಹಾಗೂ ಇದರಿಂದ ಒದಗುವ ರುಚಿ-ಪರಿಮಳಗಳ ಸೂಕ್ಷ್ಮಗುಣಗಳು ಇನ್ನಾವುದೇ ತಂಬಾಕು ಉತ್ಪನ್ನಗಳಲ್ಲಿ ದೊರೆಯುವುದಿಲ್ಲ.
ರೋಲ್-ಯುವರ್-ಓನ್
ರೋಲ್-ಯುವರ್-ಓನ್ ಅಥವಾ ಕೈಯಿಂದ ಸುತ್ತಲಾಗುವ ಸಿಗರೆಟ್‌ಗಳನ್ನು ಸಾಧಾರಣವಾಗಿ ’ರೋಲೀಸ್’ ಎಂದು ಕರೆಯಲಾಗುತ್ತದೆ, ಮತ್ತು ಇವು ವಿಶೇಷವಾಗಿ ಯುರೋಪಿಯನ್ ದೇಶಗಳಲ್ಲಿ ಅತ್ಯಂತ ಜನಪ್ರಿಯವಾಗಿವೆ. ಇವನ್ನು ಬಿಡಿ ತಂಬಾಕು, ಸಿಗರೆಟ್ ಕಾಗದ ಮತ್ತು ಫಿಲ್ಟರ್‌ಗಳನ್ನು ಬೇರೆಬೇರೆಯಾಗಿ ಕೊಂಡುಕೊಂಡು ತಯಾರಿಸಲಾಗುತ್ತದೆ. ಸಾಮಾನ್ಯವಾಗಿ ಇವುಗಳನ್ನು ತಯಾರಿಸಲು ಕಡಿಮೆ ವೆಚ್ಚ ತಗಲುತ್ತದೆ.
ವೇಪರೈಸರ್
ಸಸ್ಯಜನ್ಯ ಪದಾರ್ಥಗಳ ಸಕ್ರಿಯ ಪದಾರ್ಥಗಳನ್ನು ಪರಿಷ್ಕರಿಸಲು ಬಳಸುವ ಸಾಧನವನ್ನು ವೇಪರೈಸರ್ ಎನ್ನಲಾಗುತ್ತದೆ. ಸಸ್ಯವನ್ನು ಸುಟ್ಟು ಅದರ ಕೆರಳಿಸುವ, ವಿಷಮಯ, ಕಾರಿನೋಜೆನಿಕ್ ಪದಾರ್ಥಗಳನ್ನುಳ್ಳ ಹೊಗೆಯನ್ನು ಸೇವಿಸುವುದಕ್ಕೆ ಬದಲಾಗಿ ವೇಪರೈಸರ್ ಒಂದು ಪದಾರ್ಥವನ್ನು ಅರೆ ನಿರ್ವಾತದಲ್ಲಿ ಬಿಸಿಮಾಡುವುದರ ಮೂಲಕ ಸಸ್ಯದಲ್ಲಿರುವ ಸಕ್ರಿಯ ಪದಾರ್ಥವು ಬೆಂದು ಆವಿಯಾಗುವುದು. ಸಸ್ಯ ಪದಾರ್ಥಕ್ಕೆ ನೇರವಾಗಿ ಬೆಂಕಿಹಾಕಿ ಸುಡುವುದಕ್ಕೆ ಬದಲಾಗಿ ಬಳಸಲಾಗುವ ಈ ವಿಧಾನವನ್ನು ಔಷಧೀಯ ಧೂಮಪಾನಕ್ಕಾಗಿ ಅತ್ಯಂತ ಪರಿಣಾಮಕಾರೀ ವಿಧಾನವೆಂದು ಬಳಶಲಾಗುತ್ತದೆ.

ಶರೀರ ವಿಜ್ಞಾನ

ಟೆಂಪ್ಲೇಟು:Also
ಇತರ ವಿಧಾನಗಳಿಗೆ ಹೋಲಿಸಿದರೆ ನಿಕೋಟಿನ್ ಅನ್ನು ಹೀರಿಕೊಳ್ಳಲು ಧೂಮಪಾನವನ್ನು ಅತ್ಯಂತ ಪರಿಣಾಮಕಾರೀ ವಿಧಾನವನ್ನಾಗಿ ತೋರಿಸುವ ಒಂದು ಗ್ರ್ಯಾಫ್.
ತಂಬಾಕಿನಲ್ಲಿರುವ, ಅದರಲ್ಲೂ ವಿಶೇಷವಾಗಿ ಸಿಗರೆಟ್‌ನಲ್ಲಿರುವ ಸಕ್ರಿಯ ಪದಾರ್ಥಗಳನ್ನು ಆ ಎಲೆಗಳನ್ನು ಹೊತ್ತಿಸಿ ಅದರಿಂದ ಹೊರಬರುವ ಆವಿರೂಪದ ಅನಿಲವನ್ನು ಸೇವಿಸುವುದರ ಮೂಲಕ ಪಡೆದುಕೊಳ್ಳಲಾಗುತ್ತದೆ. ಇದು ಶ್ವಾಸಕೋಶದಲ್ಲಿರುವ ಆಲ್ವಿಯೋಲೈ ಮೂಲಕ ಹೀರಲ್ಪಟ್ಟು ರಕ್ತಸಂಚಲನೆಗೆ ಅತಿಬೇಗನೆ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಸೇರಿಕೊಳ್ಳುತ್ತದೆ. ಶ್ವಾಸಕೋಶವು ಸುಮಾರು 300 ಮಿಲಿಯನ್ ಅಲ್ವಿಯೋಲೈಗಳನ್ನು ಹೊಂದಿದೆ ಮತ್ತು ಇದು 70 m2(ಒಂದು ಟೆನಿಸ್ ಕೋರ್ಟ್‌ನಷ್ಟು)ನಷ್ಟು ಮೇಲ್ಮೈ ಆವರಣದಷ್ಟಾಗುತ್ತವೆ. ಈ ವಿಧಾನದಲ್ಲಿ ಎಲ್ಲಾ ಹೊಗೆಯನ್ನೂ ಸೇವನೆ ಮಾಡಲಾಗುವುದಿಲ್ಲವಾದ್ದರಿಂದ ಇದು ಸಂಪೂರ್ಣವಾಗಿ ಸಕ್ಷಮವಾದ ವಿಧಾನವಲ್ಲವೆಂದು ಹೇಳಬಹುದು, ಏಕೆಂದರೆ ಬೆಂಕಿಯನ್ನು ಹೊತ್ತಿಸುವ ಪೈರೋಲಿಸಿಸ್ ಪ್ರಕ್ರಿಯೆಯ ಸಮಯದಲ್ಲಿ ಕೆಲವು ಸಕ್ರಿಯ ಪದಾರ್ಥಗಳು ಕಳೆದುಹೋಗಿಬಿಡುತ್ತವೆ.[೯] ಪೈಪ್ ಮತ್ತು ಸಿಗಾರ್‌ನ ಹೊಗೆಗಳನ್ನು ಅವುಗಳ ಅತಿಹೆಚ್ಚು ಕ್ಷಾರಗುಣದಿಂದ ಗಂಟಲ ನಾಳ ಮತ್ತು ಶ್ವಾಸಕೋಶಗಳನ್ನು ಕೆರಳಿಸುವುದೆಂಬ ಕಾರಣದಿಂದ ಒಳಗೆಳೆದುಕೊಳ್ಳಲಾಗುವುದಿಲ್ಲ. ಆದರೆ ಸಿಗರೆಟ್ ಹೊಗೆ(pH 5.3)ಗಿಂತಲೂ ಹೆಚ್ಚಿನ ತನ್ನ ಕ್ಷಾರಗುಣದಿಂದಾಗಿ(pH 8.5), ಯೂನಿಯನೈಸ್ಡ್ ನಿಕೋಟಿನ್ ಬಾಯಿಯ ಮ್ಯೂಕಸ್ ಮೆಂಬ್ರೇನ್ಗಳ ಮೂಲಕವೂ ಹೀರಿಕೊಳ್ಳಲ್ಪಡುತ್ತದೆ.[೪೫] ಹೀಗಿದ್ದಾಗ್ಯೂ ಸಿಗಾರ್ ಮತ್ತು ಪೈಪ್‌ನ ಮೂಲಕ ಹೀರಲ್ಪಡುವ ನಿಕೋಟಿನ್‌ನ ಪ್ರಮಾಣವು ಸಿಗರೆಟ್ ಹೊಗೆಯಿಂದ ಹೀರಲ್ಪಡುವ ಪ್ರಮಾಣಕ್ಕಿಂತ ಬಹಳ ಕಡಿಮೆಯಾಗಿದೆ.

ಮಣ್ಣೆ ಇತಿಹಾಸ ಮಣ್ಣು ಪಾಲು

ÈÚßzæ|(«æÄÈÚßMVÚÄ):
I~ÔÛÒOÚ ®ÚÁÚM®ÚÁæ¾Úß Õ«æ„Åæ ÑÛÁÚßÈÚ OæÞM¥ÚÃVÚ×Ú OÚßÂ}Úß ÑÚOÛ%ÁÚVÚ×Úß }ÛØÁÚßÈÚ D¥ÛÒÞ«Ú}æ¿ßM¥ÛW BM¥Úß I~ÔÛÒOÚ ÑÚ¤×ÚVÚ×Úß OÚ×ÚÙOÛÁÚÁÚ ¥ÛØVæ ÒÄßP @Ø¥Úߨ¥Ú @Ò¡}Ú‡ÈÚ«Úß„ OÚ׿¥ÚßOæà×ÚßÙÈÚ VÚMsÛM}ÚÁÚ G¥ÚßÂÑÚß~¡Èæ.
BM}ÚÔÚ¥æ§Þ ®ÚÂÒ¤~¾Ú߬„ÞVÚ «æÄÈÚßMVÚÄ }ÛÄàP«ÚÆÇÁÚßÈÚ }ÚÄOÛt«Ú VÚMVÚÁÚ OÛÄ¥Ú D®Ú ÁÛd¨Û¬ ÈÚáÛ«ÚÀ®Úâ´ÁÚ(ÈÚßzæ|)¾ÚßÆÇ¥æ. «Ût«Ú ÑÛÁÚÑÚ‡}Ú ÅæàÞOÚ¥Ú ÈæàloÈæà¥ÚÄ OÚä~ OÚÉÁÛd ÈÚáÛVÚ%¥Ú ÁÚ^Ú«æOÛÁÚ *Éd¾Úß«Úß OÚàsÚ OæÄ ÈÚÎÚ%VÚ×Úß BÅæÇÞ «æÅæVæàMt¥Ú§«Úß. BÆÇ ÁÛÎÚoñ OÚàlÁÚ A؇Oæ OÚßÁÚßÔÚß OÚàsÚ OÛyÒVÚß}Ú¡Èæ.

ÑÛ½ÁÚOÚVÚ×Ú ^æàÞÁÚÁÚß:
BM¢Ú ºÚÈÚÀ ®ÚÁÚM®ÚÁæ «æÅæÉÞsÛ¥Ú ÈÚáÛ«ÚÀ®Úâ´ÁÚ(ÈÚßzæ|) BM¥Úß ^æàÞÁÚÁÚ ¥ÛØVæ ÒÄßP «ÚÄßW ÔæàÞVÚß~¡¥æ. }Ú«Ú„ I~ÔÛÒOÚ ÑÛ¤«ÚÈÚáÛ«ÚÈæÞ AÔÚß~¾ÚáÛVÚßÈÚ …VæX AM}ÚOÚPQÞsÛW¥æ. BÆÇ VÚMVÚ ÁÛdÈÚß«æ}Ú«Ú¥Ú A؇Oæ ÔÛVÚà *Éd¾Úß«Ú …VæX ~ØÑÚßÈÚ ÌÅÛ ËÛÑÚ«ÚVÚ×Úß, ÑÛ½ÁÚOÚVÚ×Úß ÔÛVÚà ÉVÚÃÔÚVÚ×Úß ÕÞVæ B~ÔÛÑÚ¥Ú ÑÛOÚÐ=À¨ÛÁÚVÚ×Ú«Úß„ OÚ×ÚÙÁÚß ¥æàÞ^Úß~¡¥Û§Áæ.
@ƒOÛÂVÚ×Ú ¬Ä%OÚÐ=À: OÚ×ÚÙÁÚ ÔÛÈÚØ }Úsæ¾ÚßßÈÚM}æ ÈÚßzæ| VÛÃÈÚßÑÚ¤ÁÚß OæÞM¥Úà ÔÛVÚà ÁÛdÀ ÑÚOÛ%ÁÚ¥Ú ÑÚM…MƒÒ¥Ú BÅÛSæVÚØVæ ÈÚß«ÚÉ ÈÚáÛtOæàMsÚÁÚà ®ÚþæàÞd«ÚÈÛWÄÇ. B«Úà„ ¥ÚàÁÚß ¬Þt¥ÚÁæ ®æãÆÞÑÚÁÚß @ÑÚsæu}Ú«Ú }æàÞÁÚß~¡¥Û§Áæ. ®ÛÃ^ÚÀÈÚÑÚß¡ ÑÚMVÚÃÔÛľÚß @ƒOÛÂVÚ×Úß }ÚÈÚß½ ÈÛÀ¯¡Væ ÈÚßzæ| …ÁÚßÈÚâ´¦ÄÇ GM¥Úß ¦ÈÚÀ ¬Ä%OÚÐ=À ÈÚÕÒ¥Û§Áæ.
 
ÈÚßzæ|¾ÚßÅæÇÞ¬¥æ? «æÄÈÚßMVÚÄ }ÛÄàP«Ú ÈÚßzæ|¾Úᒀ }ÚÄOÛsÚß VÚMVÚÁÚ OÛÄ¥ÚÆÇ ¬ÈÚáÛ%yÈÛW¥Ú§ OÚ¯ÅæÞËÚ‡ÁÚ ¥æÞÈÚÑÛ¤«Ú, @OÚQ}ÚMW¾Úß ¥æÞÈÚÑÛ¤«Ú, ÈæçËæÀ¾ÚßÁÚ ¬Ä¾Úß ÔÛVÚà *Éd¾Úß«Úß OÚnoÒ¥Ú fÞ«ÛľÚß …Ò¡VÚØÈæ GM¥Úß Õ¾Úß ÑÚMËæàÞ¨ÚOÚ VæàÞ®ÛÄ ÁÛÈé OÚ«Ú„sÚ®ÚúÚOæQ ~ØÒ¥ÚÁÚß. @ÄÇ¥æ VÚMVÚÁÚ ÁÛdÈÚß«æ}Ú«Ú¥Ú *®Úâ´ÁÚßÎÚ, ÌÈÚÈÚáÛÁÚ ÔÛVÚà ¾ÚßßÈÚÁÛd «ÚÁÚÒMÔÚ @ÈÚÁÚß D®Ú ÁÛd¨Û¬¾ÚáÛW¥Ú§ ÈÚßzæ|¾Úß ÆÇ «æÅæ ¬M}Úß ÁÛdÀºÛÁÚ «ÚsæÒ¥Û§Áæ G«Úß„}Û¡Áæ ÑÚMËæàÞ¨ÚOÚ VæàÞ®ÛÄÁÛÈé. ®ÛÃ_Þ«Ú ÑÚMÑÚí~¾Úß OæÞM¥ÚÃÈÛWÁÚßÈÚ ÈÚßzæ| ÑÚMÁÚPÐÒ @»ÈÚ䦪®ÚtÑÚßÈÚM}æ ®ÛÃ^ÚÀÈÚÑÚß¡ ÑÚMVÚÃÔÛľÚß ÑæÞ ÑÚM…M¨Ú®Úlo BÅÛSæ @ƒOÛÂVÚ×Ú«Úß„ RߥÚß§ ºæÞn¾ÚáÛW, ®Ú}Úà …Áæ¥Úß É«ÚM~Ò¥ÚÁÚà OÚÈÚsæ OÛÒ«Ú PÈÚß½}Úà¡ ÒVÚÆÄÇ GM¥Úß @ÈÚÁÚß ~ÞÈÚà @ÑÚÈÚáÛ¨Û«Ú ÈÚÀOÚ¡®ÚtÑÚß}Û¡Áæ.
 
OÚ×ÚÙ}Ú«ÚÈÛ¥Ú¥Úß§ H«æÞ«Úß? OÚ¯ÅæÞËÚ‡ÁÚ ¥æÞÈÚÑÛ¤«Ú ¥Û‡ÁÚ®ÛÄOÚÁÚ Oæ}Ú¡«æ ®ÚÄÇÈÚÁÚ OÛÄ¥Ú ÌİOÚÅæVÚ×Ú«Úß„ «æ«æ¯ÑÚßÈÚM}æ BÈæ GM¥Úß ÑÚMËæàÞ¨ÚOÚÁÚ @»®ÛþÚß. ÕÞVÛW C ¥æÞÈÛľÚßVÚ×Ú OÚÆÇ«Ú OÚM…VÚ×Úß, A¨ÛÁÚ ÑÚ¡MºÚVÚ×Úß ÔÛVÚà ÌÅÛÑÚ«ÚVÚ׿«æ„ÄÇ OÚ×ÚÙÁÚß Oæà×æÙ Ôæàs榥ڧÁæ, @OÚQ-}ÚMW¾ÚßÁÚ ¥æÞÈÚÑÛ¤«Ú¥ÚÆÇ …ÑÚÈÚy|«Ú ÈÚßà~%¾Úß«Úß„ ÑÚM®Úãy%ÈÛW ºÚVÚ„VæàØÒ¥Û§Áæ. «ÚàÁÛÁÚß ÈÚÎÚ%VÚ×Ú ÕM¦«Ú ÌÅÛÑÚ«ÚVÚ×Úß CVÚ OÚy½Áæ¾ÚáÛVÚß~¡Èæ. B¥æÞ ÂÞ~ @ƒOÛÂVÚ×Úß ÔÛVÚà ®æãÆÞÑÚÁÚß ¬Ä%OÚÐ=À ÈÚÕÒ¥ÚÁæ @Ø¥Úߨ¥ÚÈÚâ´VÚ×Ú«Úß„ ¥æàÞ^Úß}Û¡ÁæM¥Úß ÑÚ¤ØÞ¾ÚßÁÛ¥Ú ÈæMOÚmæÞËé OÚ×ÚÈÚ×Ú ÈÚÀOÚ¡®ÚtÑÚß}Û¡Áæ.

ನಕಲಿ ಭೂ ದಾಖಲೆಗಳ ಸ್ವರ್ಗ ಬೆಂಗಳೂರು

ಬೆಂಗಳೂರು, ಮೇ 29: ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಭೂಮಿಯ ಬೆಲೆ ಗಗನಕ್ಕೆ ತಲುಪಿದ್ದೇ ತಡ ನಕಲಿ ದಾಖಲೆಗಳು ವ್ಯಾಪಕವಾಗಿ ಸೃಷ್ಟಿಯಾಗತೊಡಗಿವೆ. ಇಂತಹ ದಾಖಲೆಗಳ ಸೃಷ್ಟಿಕರ್ತರಿಗೆ ನಗರವು ಸ್ವರ್ಗವಾಗಿದೆ. ಸಬ್‌ ರಿಜಿಸ್ಟ್ರಾರ್‌, ಬಿಡಿಎ ಹಾಗೂ ತಹಸೀಲ್ದಾರ್ ಕಚೇರಿಗಳ ಸನಿಹದಲ್ಲೇ ನಕಲಿ ದಾಖಲೆಯ ಸೃಷ್ಟಿ ಕೇಂದ್ರಗಳಿವೆ ಎಂಬುದು ಆಘಾತಕಾರಿ.

ಜಮೀನುಗಳ ನಕಲಿ ದಾಖಲೆ ಸೃಷ್ಟಿಕರ್ತರಿಗೆ ಸಬ್‌ ರಿಜಿಸ್ಟ್ರಾರ್‌, ಬಿಡಿಎ ಹಾಗೂ ತಹಸೀಲ್ದಾರ್ ಕಚೇರಿಗಳ ಸುತ್ತಮುತ್ತಲಿನ ಕೆಲವು ಜೆರಾಕ್ಸ್‌ ಮಳಿಗೆಗಳು ಸಾಥ್‌ ನೀಡುತ್ತಿವೆ ಎಂಬ ಸತ್ಯವೂ ಬಯಲಾಗಿದೆ. ನಗರ ಪೊಲೀಸ್‌ ಆಯುಕ್ತ ಜ್ಯೋತಿ ಪ್ರಕಾಶ್‌ ಮಿರ್ಜಿ ಅವರು ಈ ಬಗ್ಗೆ ಸಾಕಷ್ಟು ಬೆಳಕು ಚೆಲ್ಲಿದ್ದಾರೆ. ವಿವರ ಹೀಗಿದೆ:

ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕುಗಳಿಗೆ ಸಲ್ಲಿಸಿ ಕೋಟ್ಯಂತರ ರೂ. ವಂಚಿಸಿದ್ದ ಹಾಗೂ ಬೇರೊಬ್ಬರ ಜಮೀನು ತಮ್ಮದೇ ಎಂದು ಮಾರಾಟ ಮಾಡುವುದಾಗಿ ನಂಬಿಸಿ ಕೋಟ್ಯಂತರ ರೂ. ಪಡೆದಿದ್ದ ವಂಚಕರು ಪೊಲೀಸ್ ವಿಚಾರಣೆಯಲ್ಲಿ ನಕಲಿ ದಾಖಲೆ ಹೇಗೆ ಸೃಷ್ಟಿಯಾಗುತ್ತಿದೆ ಎಂಬುದನ್ನು ಬಾಯ್ಬಿಟ್ಟಿದ್ದಾರೆ.

ಜಮೀನುಗಳ ಮಾರಾಟ, ಖರೀದಿ, ಖಾತೆ ಬದಲಾವಣೆ, ಇ.ಸಿ. ಪಡೆಯಲು ಆಸ್ತಿದಾರರು ಜೆರಾಕ್ಸ್‌ ಮಾಡಿಸುವಾಗ ಅವರ ಗಮನ ಬೇರೆಡೆ ಸೆಳೆದು ಒಂದು ಪ್ರತಿ ಎಕ್ಸ್‌ಟ್ರಾ ಪಡೆದು ಅಥವಾ ಮೂಲ ದಾಖಲಾತಿಗಳಾಗಿದ್ದಲ್ಲಿ ಕಲರ್ ಜೆರಾಕ್ಸ್‌ ಪಡೆದುಕೊಂಡು ಅದರ ಆಧಾರದಲ್ಲಿ ನಕಲಿ ದಾಖಲೆ ಸೃಷ್ಟಿಯಾಗುವುದು ಬಹಿರಂಗವಾಗಿದೆ.

ಜಮೀನು ಮಾರಾಟಗಾರ ಮತ್ತು ಖರೀದಿದಾರನ ನಡುವೆ 'ಮಧ್ಯಸ್ಥಿಕೆ'ದಾರರಾಗಿ ಕಾರ್ಯನಿರ್ವಹಿಸುವ ಕೆಲವರು ಮಾರಾಟ ಅಥವಾ ಖರೀದಿ ನೆಪದಲ್ಲಿ ಮಾಲೀಕರಿಂದ ಆಸ್ತಿಯ ದಾಖಲೆ ಪಡೆದು ಜೆರಾಕ್ಸ್‌ ಮಾಡಿಸಿಕೊಂಡು ನಂತರ ವ್ಯಾಪಾರ ಕುದುರಲಿಲ್ಲ ಎಂಬ ಸಬೂಬು ಹೇಳಿ ಜೆರಾಕ್ಸ್‌ ಪ್ರತಿಗಳ ಆಧಾರದಲ್ಲಿ ನಕಲಿ ದಾಖಲೆ ಸೃಷ್ಟಿ.

ಮಧ್ಯಸ್ಥಿಕೆದಾರರನ ಗಮನಕ್ಕೆ ಬಾರದಂತೆ ಆತನ ನೆರವಿನಿಂದಲೇ ಜಮೀನುಗಳ ದಾಖಲೆಗಳ ಪ್ರತಿ ಪಡೆದು ಜಮೀನು ಮಾಲೀಕರ ಹೆಸರಿನವರನ್ನೇ ಹುಡುಕಿ ನಕಲಿ ದಾಖಲೆ ಸೃಷ್ಟಿ ಮಾಡಲಾಗುತ್ತಿದೆ.

ನಕಲಿ ದಾಖಲೆ ಸೃಷ್ಟಿಗಾಗಿ ತಹಸೀಲ್ದಾರ್‌, ಬಿಡಿಎ, ಸಬ್‌ ರಿಜಿಸ್ಟ್ರಾರ್‌ ಕಚೇರಿ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ನೌಕರರ ಸಹಕಾರ ಪಡೆದು ನಕಲಿ ರಬ್ಬರ್ ಸ್ಟಾಂಪ್‌ ಹಾಗೂ ಮೊಹರು ತಯಾರಿಸಲಾಗುತ್ತಿತ್ತು ಎಂಬ ಮಾಹಿತಿಯನ್ನೂ ವಂಚಕರು ಹೊರಗೆಡವಿದ್ದಾರೆ.

ಆಸ್ತಿಯ ನೈಜ ಮಾಲೀಕರು ಯಾರು? ಅವರ ಹಿನ್ನೆಲೆ ಏನು ? ಅವರ ವಾರಸುದಾರರು ಯಾರು ? ಎಂಬಿತ್ಯಾದಿ ಮಾಹಿತಿ ಕಲೆಹಾಕಿ ಆ ನಂತರ ಮಧ್ಯಸ್ಥಿಕೆದಾರನ ಮೂಲಕ ಆಸ್ತಿ ಖರೀದಿ ಪ್ರಸ್ತಾಪ ಸಲ್ಲಿಸುವುದು. ಆ ನಂತರ ದೊಡ್ಡ ದೊಡ್ಡ ಹೋಟೆಲ್‌ಗ‌ಳಿಗೆ ಕರೆದು ತಾವು ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಎಂಬಂತೆ ಫೋಸ್‌ ನೀಡಿ ಅಲ್ಲಿ ಔತಣಕೂಟ ನೀಡಿ ಮಾರಾಟಗಾರನ ವಿಶ್ವಾಸಗಳಿಸುವುದು. ನಂತರ ಟೋಕನ್‌ ಅಡ್ವಾನ್ಸ್‌ ನೀಡಿ ಜಮೀನು ದಾಖಲೆಗಳ ಪ್ರತಿ ಪಡೆಯುವುದು ವಂಚಕರು ಕಾರ್ಯಾಚರಣೆ ವಿಧಾನ.

ವಂಚನೆ ವ್ಯವಹಾರದಲ್ಲಿ ಮಹಿಳೆಯರನ್ನು ಬಳಸಿಕೊಂಡರೆ ಯಾರಿಗೂ ಅನುಮಾನ ಬರುವುದಿಲ್ಲ ಎಂಬ ಕಾರಣಕ್ಕೆ ಜಮೀನಿನ ನೈಜ ಮಾಲೀಕರ ಹೆಸರು ಹೊಂದಿರುವವರನ್ನೇ ಆರಿಸಿಕೊಂಡು ನಕಲಿ ದಾಖಲೆ ಸೃಷ್ಟಿಸಿ ಇವರೇ ಮಾಲೀಕರು, ನಾವೆಲ್ಲಾ ಇವರ ಸಂಬಂಧಿಕರು ಎಂದು ಹೇಳಿಕೊಳ್ಳುತ್ತಿದ್ದರು. ಕೆಲವೊಮ್ಮೆ ಆಸ್ತಿ ಖರೀದಿದಾರರನ್ನು ಮನೆಗೂ ಆಹ್ವಾನಿಸಿ ಅಲ್ಲಿಯೂ ಕುಟುಂಬದವರಂತೆ ನಟಿಸುತ್ತಾರೆ.

ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕುಗಳಲ್ಲಿ ಅಡವಿಟ್ಟು ಹಣ ಸಾಲವಾಗಿ ಪಡೆಯುವುದು ಸುಲಭ ಮಾರ್ಗ ಎಂಬುದನ್ನು ಕಂಡುಕೊಂಡಿದ್ದ ವಂಚಕರು ನಕಲಿ ದಾಖಲೆ ಸೃಷ್ಟಿಸಿದ ಒಂದೇ ಆಸ್ತಿಯ ಅಥವಾ ಇಲ್ಲದ ಆಸ್ತಿಯ ದಾಖಲೆಗಳನ್ನೇ ಹತ್ತಾರು ಬ್ಯಾಂಕುಗಳಿಗೆ ನೀಡಿ ಸಾಲ ಪಡೆಯುತ್ತಿದ್ದರು. ಇದಕ್ಕೆ ಬ್ಯಾಂಕುಗಳ ಅಧಿಕಾರಿಗಳ ಸಹಕಾರವೂ ಇರುತ್ತಿತ್ತು. ಇಂತಿಷ್ಟು ಪರ್ಸೆಂಟೇಜ್‌ ವೆಚ್ಚ ಮಾಡುತ್ತಿದ್ದರು. ಈ ಎಲ್ಲ ಮಾಹಿತಿಗಳೂ ವಿಚಾರಣೆ ಸಂದರ್ಭದಲ್ಲಿ ಬಾಯ್ಬಿಡಿಸಲಾಗಿದೆ ಎಂದು ಹೇಳಲಾಗಿದೆ.

ಒಟ್ಟಾರೆ ಬೆಂಗಳೂರಿನಲ್ಲಿ ಜಮೀನುಗಳ ನಕಲಿ ದಾಖಲೆ ಸೃಷ್ಟಿಸುವ ಅತಿದೊಡ್ಡ ತಂಡವೇ ಕಾರ್ಯನಿರ್ವಹಿಸುತ್ತಿದ್ದು ಆ ತಂಡದ ಸಮಗ್ರ ಮಾಹಿತಿಯನ್ನು ಪೊಲೀಸರು ಸಂಗ್ರಹಿಸಿದ್ದು ಶೀಘ್ರದಲ್ಲೇ ಮತ್ತೂಂದು ಜಾಲ ಪೊಲೀಸ್‌ ಬಲೆಗೆ ಬೀಳಲಿದೆ

ಬಡವರ ಜಾತಿಗಣತಿ; ಸರಕಾರದ ದ್ವಂದ್ವ ನೀತಿ

ಬಡತನ ಆಧಾರಿತ ಜಾತಿಗಣತಿಯನ್ನು ಇದೇ 2011ರ ಜೂನ್‌ನಿಂದ ಡಿಸೆಂಬರ್‌ವರೆಗೆ ನಡೆಸಲು ಕೇಂದ್ರ ಸಚಿವ ಸಂಪುಟವು ಒಪ್ಪಿಗೆ ನೀಡಿರುವುದು ವರದಿಯಾಗಿದೆ.ಸಾಮಾಜಿಕ-ಆರ್ಥಿಕ ವಿವರಗಳನ್ನೊಳ ಗೊಂಡ ಜಾತಿಗಣತಿ ನಡೆಸುವ ನಿರ್ಧಾರವು ವಿರೋಧ ಪಕ್ಷಗಳಿಗೆ ಸರಕಾರವು ಸಂಸತ್ತಿನಲ್ಲಿ ನೀಡಿದ ಭರವಸೆ ಸಂಪೂರ್ಣವಾಗಿ ಈಡೇರಿಸಿ ದಂತಾಗಿದೆ ಎಂದು ಸರಕಾರದ ವಕ್ತಾರರೊಬ್ಬರು ಹೇಳಿಕೆ ನೀಡಿರುವುದು ಈ ಕೆಳಕಂಡ ಕಾರಣ ಗಳಿಂದಾಗಿ ವಾಸ್ತವಕ್ಕಿಂಥ ಭಿನ್ನವಾಗಿದೆ.ಸಂವಿಧಾನದ ಅನುಚ್ಛೇದ 15(4)ರ ಪ್ರಕಾರ, ಹಿಂದುಳಿದಿರುವಿಕೆಯನ್ನು ಸಾಮಾಜಿಕ ಮತ್ತು ಶೈಕ್ಷಣಿಕ ಮಾನದಂಡಗಳನ್ನಿಟ್ಟುಕೊಂಡು ಮೌಲ್ಯ ಮಾಪನ ಮಾಡಬೇಕೆ ಹೊರತು ಕೇವಲ ಬಡತನದ ಆರ್ಥಿಕ ಮತ್ತು ವರಮಾನದ ಅಳತೆ ಗೋಲಿನಿಂದಲ್ಲ.
ಈಗ ತಾನೇ ಮುಕ್ತಾಯಗೊಂಡ, ಹತ್ತು ವರ್ಷಗಳಿಗೊಮ್ಮೆ ನಡೆಯುವ ಸಾಮಾನ್ಯ ಜನಗಣತಿಯಲ್ಲಿಯೇ ಜಾತಿಯನ್ನು ಎಣಿಕೆ ಮಾಡಬೇಕೆಂದು ಎಲ್ಲ ರಾಜಕೀಯ ಪಕ್ಷಗಳ ನಾಯಕರು, ರಾಷ್ಟ್ರಾದ್ಯಂತ ಅನೇಕ ಬುದ್ಧಿಜೀವಿ ಗಳು, ಸಮಾಜಶಾಸ್ತ್ರಜ್ಞರು, ಜನಪರ ಚಳವಳಿ ಗಳ ಮುಖಂಡರು ಆಗ್ರಹಿಸಿದ್ದು, ಆನಂತರ ಸರಕಾರ ಜಾತಿಗಣತಿಯನ್ನು ಪ್ರತ್ಯೇಕವಾಗಿ ನಡೆಸಲು ತೆಗೆದುಕೊಂಡ ನಿರ್ಧಾರವನ್ನು ವಿರೋಧಿಸಿದ್ದನ್ನು ಇಲ್ಲಿ ಗಮನಿಸಬಹುದು. ಜನಗಣತಿಯಲ್ಲಿ ಜಾತಿ ಎಣಿಕೆಯನ್ನು ಒಮ್ಮೆಗೇ ಮಾಡುವುದರಿಂದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ದತ್ತಾಂಶಗಳು ಮತ್ತು ಡೆಮಾಗ್ರಫಿಕ್ ಕುರಿತ ದತ್ತಾಂಶಗಳಲ್ಲಿ ಕಂಡು ಬರುವ ಪರಸ್ಪರ ಸಂಬಂಧಗಳನ್ನು ಸುಲಭವಾಗಿ ಗುರುತಿಸಬಹು ದಿತ್ತು. ಜನಗಣತಿಯ ಜೊತೆಗೆ ಜಾತಿಗಣತಿ ಯನ್ನು ಕೈಗೊಂಡಿದ್ದರೆ ಫಲವತ್ತತೆ, ವಿವಾಹ ಮತ್ತು ಕೌಟುಂಬಿಕ ವಿವರಗಳು, ಮರಣ ಪ್ರಮಾಣ, ಸಾಕ್ಷರತೆ, ಶೈಕ್ಷಣಿಕ ಅರ್ಹತೆ ಮತ್ತು ಸಾಧನೆ, ಉದ್ಯೋಗ, ಉದ್ಯೋಗ ಲಕ್ಷಣಗಳು, ನಿರುದ್ಯೋಗ ಇತ್ಯಾದಿ ವಿಷಯಗಳ ಕುರಿತು ಸಂಪೂರ್ಣ ಮಾಹಿತಿ ಲಭ್ಯವಾಗುತ್ತಿತ್ತು.
ಈ ಮಾಹಿತಿಯೊಂದಿಗೆ ಸಾಮಾಜಿಕ ಮತ್ತು ಶೈಕ್ಷ ಣಿಕವಾಗಿ ಹಿಂದುಳಿದಿರುವ ಸಮುದಾಯಗಳಿಗೆ ಸಾಮಾಜಿಕ ನ್ಯಾಯದ ವಿವಿಧ ನೀತಿಗಳನ್ನು ಜಾರಿಮಾಡಲು ಅನುಕೂಲವಾಗುತ್ತಿತ್ತು. ಇಂತಹ ಮಾಹಿತಿಯು ಆಗಾಗ್ಗೆ ಹಿಂದುಳಿದ ಜಾತಿಗಳನ್ನು ಗುರುತಿಸಲು ಹಾಗೂ ಮೀಸಲಾತಿ ಪ್ರಮಾಣವನ್ನು ನಿಗದಿಪಡಿಸಲು ಸರಕಾರಕ್ಕೆ ಸಹಾಯವಾಗುತ್ತಿತ್ತು. ಆದರೆ ಈಗ ಸರಕಾರವು ಉದ್ದೇಶಿಸಿರುವ ಬಡತನ ಆಧಾರಿತ ಜಾತಿ ಗಣತಿ ಈ ಮೇಲಿನ ಉದ್ದೇಶಗಳಿಗೆ ವಿರುದ್ಧವಾ ಗಿದೆ.ಇಷ್ಟಾಗಿಯೂ ಉತ್ತಮ ತರಬೇತಿ ಹೊಂದಿ ರುವ ಗಣತಿ ಎಣಿಕೆದಾರರು ಹಾಗೂ ದೇಶಾ ದ್ಯಂತ ಇರುವ ವ್ಯವಸ್ಥಿತ ಗಣತಿ ಸಂಸ್ಥೆ ಮತ್ತು ಅದರ ಆಯುಕ್ತರು ಇದರಲ್ಲಿ ನೇರವಾಗಿ ಪಾಲ್ಗೊಳ್ಳುತ್ತಿಲ್ಲ. ಬದಲಾಗಿ ವಿವಿಧ ರಾಜ್ಯ ಸರಕಾರಗಳ ಪಂಚಾಯತ್ ನೌಕರರು, ಪಟ್ವಾರಿ ಗಳು, ಗ್ರಾಮೀಣ ಉದ್ಯೋಗ ಖಾತ್ರಿ ಯೋಜ ನೆಯ ಕೆಲಸಗಾರರಿಂದ ಇದನ್ನು ನಡೆಸಲು ಉದ್ದೇಶಿಸಲಾಗಿದೆ. ಇಂತಹ ಸಮೀಕ್ಷೆಯಿಂದ ನಿಗದಿತ ಸಮಯ ಮಿತಿಯೊಳಗೆ ನಂಬಲರ್ಹ ಹಾಗೂ ವಿಶ್ವಾಸಾರ್ಹ ಮಾಹಿತಿ ದೊರೆಯು ವುದು ಸಾಧ್ಯವಿಲ್ಲ.
ಜಾತಿಗಣತಿಯ ಮಾಹಿತಿಯನ್ನು, ಕೈಯಲ್ಲಿ ಹಿಡಿದು ಬಳಸಬಹುದಾದ ಸಣ್ಣಗಾತ್ರದ ಕಂಪ್ಯೂ ಟರ್(ಸಿಂಪ್ಯೂಟರ್) ಸಹಾಯದಿಂದ ಮಾಡ ಲಾಗುತ್ತಿದೆ. ಆ ಮಾಹಿತಿಯನ್ನು ನಂತರ ಗಣತಿ ದಾರ ಸ್ಕ್ಯಾನ್‌ಮಾಡಿದ ಜನಸಂಖ್ಯಾ ನೋಂದ ಣಿಯ ಮಾಹಿತಿಯೊಂದಿಗೆ ತುಂಬಲಾಗುತ್ತದೆ ಎಂದು ಹೇಳಲಾಗಿದೆ. ಈ ಕುರಿತು ಸ್ಪಷ್ಟ ಮಾಹಿ ತಿಗಳು ಇಲ್ಲದಿರುವುದು ಅನೇಕ ಗಂಭೀರ ಪ್ರಶ್ನೆ ಗಳಿಗೆ ಆಸ್ಪದಕೊಡುವಂತಿದೆ. ಹತ್ತಾರು ಸಾವಿರ ಕಂಪ್ಯೂಟರ್‌ಗಳು ದೇಶದ ವಿಭಿನ್ನ ಪ್ರದೇಶ ಮತ್ತು ಪರಿಸ್ಥಿತಿಗಳಲ್ಲಿ ಅಸಂಖ್ಯಾತ ಅನನುಭವಿ ಕಾರ್ಯಕರ್ತರ ಕೈಯಲ್ಲಿ ನಿಖರವಾಗಿ ಕೆಲಸ ಮಾಡುವುದು ಕಷ್ಟಸಾಧ್ಯವಾದುದು ಎಂಬುದಕ್ಕೆ ಹಿಂದಿನ ಅನುಭವಗಳು ಇದಕ್ಕೆ ನಿದರ್ಶನವಾಗಿವೆ.
ಈಗಷ್ಟೇ ಮುಕ್ತಾಯಗೊಂಡ ದಶವಾ ರ್ಷಿಕ ಜನಗಣತಿಯಲ್ಲೂ ಈ ಬಗೆಯ ವಿಶ್ವಾಸಾ ರ್ಹವಲ್ಲದ ವಿಧಾನವನ್ನು ಬಳಸದೆ ಮುದ್ರಿತ ಕಾಗದದ ನಮೂನೆಗಳನ್ನು ಮಾತ್ರ ಬಳಸಲಾಗಿತ್ತು ಎನ್ನುವುದನ್ನು ಗಮನಿಸಿದರೆ ಸಾಕು ಇದಕ್ಕೆ ಸ್ಪಷ್ಟ ಉತ್ತರ ಸಿಗುತ್ತದೆ. ಇಷ್ಟಲ್ಲದೆ ಜಾತಿ ಮತ್ತು ಧಾರ್ಮಿಕ ಮಾಹಿತಿಯನ್ನು ಗೌಪ್ಯವಾಗಿಡಲು ಸರಕಾರ ತೀರ್ಮಾನಿಸಿದೆ. ಸರಕಾರ ದೃಢವಾದ ನಿರ್ಧಾರವನ್ನು ತೆಗೆದುಕೊಳ್ಳದೆ, ಗೊಂದಲಮಯ ಹೇಳಿಕೆಗಳನ್ನು ನೀಡುತ್ತಾ, ತನ್ನ ನಿಲುವುಗಳನ್ನು ಬದಲಿಸುತ್ತಾ, ಕೊಟ್ಟ ಭರವಸೆಗಳನ್ನು ತಿರುಚುತ್ತಾ ಇರುವ -ಈ ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮ ವಾಗಿ ಗಮನಿಸಿದಾಗ ಜಾತಿಗಣತಿಯ ಕುರಿತು ಸರಕಾರದ ಪ್ರಾಮಾಣಿಕತೆ ಮತ್ತು ಉದ್ದೇಶ ಪೂರ್ಣತೆಯ ಬಗ್ಗೆ ಗಂಭೀರ ಅನುಮಾನಗಳಿಗೆ ಎಡೆಮಾಡಿಕೊಡುವುದಲ್ಲದೆ, ಜಾತಿಗಣತಿಯನ್ನು ಹೇಗಾದರೂ ಮಾಡಿ ನಾಶಗೊಳಿಸಬೇಕೆಂದು ಮೊದಲಿನಿಂದಲೂ ಸಾಮಾಜಿಕ ನ್ಯಾಯದ ವಿರುದ್ಧವಿರುವ ಶಕ್ತಿಗಳ ಜೊತೆಯಲ್ಲಿ ಆಳುವ ವರ್ಗ ಕೂಡ ಕೈಜೋಡಿಸಿದೆಯೇ ಎಂಬ ಪ್ರಶ್ನೆ ಸಹಜವಾಗಿ ಕಾಡುತ್ತಿದೆ.
-
ಡಾ.ಎಸ್.ಜಾಫೆಟ್
ಪ್ರಾಧ್ಯಾಪಕರು ಮತ್ತು ನಿರ್ದೇಶಕರು
ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರ,
ಭಾರತ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆ, ನಾಗರಬಾವಿ, ಬೆಂಗಳೂರು -560 072

ಸಂತೆಯಲ್ಲಿ ಸುಬ್ರಹ್ಮಣ್ಯ

ಎನ್ಕೆ ಸುಬ್ರಹ್ಮಣ್ಯರ ಹಾಸ್ಯ ಬರಹಗಳ ಸಂಕಲನ `ಸಂತೆಯಲ್ಲಿ ಸುಬ್ರಹ್ಮಣ್ಯ‘. ಒಬ್ಬ ಮಧ್ಯಮ ವರ್ಗದ ವ್ಯಕ್ತಿಯ ಅನುಭವವನ್ನು ಒಳಗೊಂಡ ಬರಹಗಳಿವು. ಮಧ್ಯಮವರ್ಗದ ಕನಸು ಹಾಗೂ ಜೀವನದ ವಿವರಗಳು ಇಲ್ಲಿ ಬರಹದ ರೂಪವನ್ನು ತಾಳಿವೆ.
ಹಾಗೆಂದು ಇಲ್ಲಿನ ಹದಿನೇಳು ಬರಹಗಳು ಸೀಮಿತ ಅನುಭವದ ಲೋಕದ ಒಳಗಷ್ಟೇ ಓಡಾಡುವುದಿಲ್ಲ. ಇಲ್ಲಿ ಸಂತೆ, ಕಂಪ್ಯೂಟರ್, ವಿಂಬಲ್ಡನ್, ಹೋಗಬೇಕಾದ ಅಮೆರಿಕಾ ಯಾತ್ರೆ, ಗುಜರಿ ಬಜಾರ್ ಬಗ್ಗೆಯೂ ಲೇಖನಗಳಿವೆ. ಲೇಖಕರು ಆಸಕ್ತಿಯಿಂದ ಓದಿಸಿಕೊಳ್ಳುವಂತೆ, ಲವಲವಿಕೆಯಿಂದ, ತಮಾಷೆಯಾಗಿ ಬರೆಯುತ್ತಾರೆ. ಇದಕ್ಕೆ ಹರಿಣಿ ಅವರ ವ್ಯಂಗ್ಯಚಿತ್ರಗಳು ಪುಟಕೊಟ್ಟಿವೆ.
ಶೀರ್ಷಿಕೆ: ಸಂತೆಯಲ್ಲಿ ಸುಬ್ರಹ್ಮಣ್ಯ ಲೇಖಕರು: ಎನ್ಕೆ ಸುಬ್ರಹ್ಮಣ್ಯ ಪ್ರಕಾಶಕರು: ನವ ಕರ್ನಾಟಕ ಪ್ರಕಾಶನ ಪುಟಗಳು : 116 ಬೆಲೆ:ರೂ. 55/

ಶೋಷಕರೇ ಶೋಷಿತರಿಗೆ ಹಿತವಚನ ನೀಡುವುದು ಈ ದೇಶದ ಬುದ್ಧಿಜೀವಿಗಳ ಫ್ಯಾಷನ್


scan0001

`ವಿಮರ್ಶಕ ಜಿ.ಎಚ್.ನಾಯಕರು ಶೋಷಕ ವರ್ಗದಿಂದ ಬಂದವರು. ಅವರ ಹೆಸರೇ ಜಾತಿ ಸೂಚಿತವಾದದ್ದು. ಅವರು ಸವರ್ಣೀರಾದ್ದರಿಂದ ಅವರು ಎಂದೂ ಅವರ ಜನಾಂಗದ ಬಗ್ಗೆ ಹೇಳುವುದಿಲ್ಲ. ಶೋಷಕರೇ ಶೋಷಿತರಿಗೆ ಹಿತವಚನ ನೀಡುವುದು ಈ ದೇಶದ ಬುದ್ಧಿಜೀವಿಗಳ ಫ್ಯಾಷನ್‘
…
`ಹಣದ ವಿಚಾರದಲ್ಲಿ ದೇವನೂರು ಮಹಾದೇವ ಪ್ರಾಮಾಣಿಕನಲ್ಲ. ಆತ ಪಡೆದ ಹಣಕ್ಕೆ ಲೆಕ್ಕವಿಲ್ಲ. ಶಿಸ್ತು ಮೊದಲೇ ಇಲ್ಲ. ಈ ವ್ಯಕ್ತಿ ಮತ್ತೊಬ್ಬರ ಮೇಲೆ ಗೂಬೆ ಕೂರಿಸಿ ತನ್ನ ಅಪ್ರಾಮಾಣಿಕತೆಯನ್ನು ಮುಚ್ಚಿಕೊಳ್ಳಲು ಸದಾ ಪ್ರಯತ್ನಿಸುತ್ತಾರೆ. ದೇವನೂರು ಮಹಾದೇವ ಎಷ್ಟು ದಲಿತರಿಂದ ಹಣ ಪಡೆದುಕೊಂಡಿದ್ದಾರೆ ಎಂಬುದನ್ನು ಆತ್ಮವಿಮರ್ಶೆ ಮಾಡಿಕೊಳ್ಳಬೇಕು‘ (ಪು 94-95) ಎಂದು ನೇರವಾಗಿ ಬರೆಯುವ ಮುನಿವೆಂಕಟಪ್ಪ ಯಾವುದೇ ಮುಲಾಜುಗಳಿಲ್ಲದೆ ಬರೆದ ಬರಹಗಳು ಇಲ್ಲಿವೆ.
ದಲಿತ ಚಿಂತಕರಲ್ಲಿ ಒಬ್ಬರಾದ ಡಾ.ಮುನಿವೆಂಕಟಪ್ಪ ಇಲ್ಲಿ ಮಾಡಿರುವುದು ಸಾಹಿತ್ಯದ ವಿಮರ್ಶೆಗಿಂತ ಹೆಚ್ಚಾಗಿ ದಲಿತರ ಚಾರಿತ್ರಿಕ ವಿಮರ್ಶೆ. ಇಲ್ಲಿನ ಲೇಖನಗಳಲ್ಲಿ ಮುಖ್ಯವಗಿ ದಲಿತ ಚಳವಳಿ ಹಾಗೂ ಸಾಹಿತ್ಯ ಚರ್ಚೆಯಾಗಿದೆ. ವೆಂಕಟಪ್ಪನವರ ಈ ಚಿಂತನೆಗಳಲ್ಲಿ ಒಂದು ನೈತಿಕವಾದ ಆಕ್ರೋಶ ಇರುವುದನ್ನು ನಾವು ಕಾಣಬಹುದು. ಇದು ಅನೇಕ ದೊಡ್ಡವರು ಎನ್ನಿಸಿಕೊಂಡವರ ತಪ್ಪು ನಿಲುವುಗಳಿಗೆ ಪ್ರತಿಯಾಗಿ ಹುಟ್ಟಿಕೊಂಡ ಸಿಟ್ಟು. ಈ ಸಿಟ್ಟಿನ ಹಿಂದೆ ನೋವು ಇದೆ ಎಂಬುದನ್ನು ಮರೆಯುವಂತಿಲ್ಲ. ಇದಕ್ಕೆ ಉದಾಹರಣೆಯಾಗಿ ಕವಿ ಸಿದ್ದಲಿಂಗಯ್ಯ ಅವರು `ನನ್ನನ್ನು ದಲಿತ ಕವಿ ಎಂದು ಕರೆಯಬೇಡಿ, ಕನ್ನಡದ ಕವಿ ಎಂದು ಕರೆಯಿರಿ’ ಎಂದು ಕೇಳಿಕೊಂಡಿರುವುದನ್ನು, ದಲಿತರು ತಾವು ನಡೆದುಬಂದ ದಾರಿಯನ್ನು ಹಿಂತಿರುಗಿ ನೋಡಲು ಸಿದ್ಧರಿಲ್ಲದಿರುವುದನ್ನು ತೋರಿದ್ದಾರೆ. (ಪು.28) ಇಂಥ ಅನೇಕ ಸಂದರ್ಭಗಳನ್ನು ಮುನಿವೆಂಕಟಪ್ಪನವರು ಇಲ್ಲಿನ ಪುಟಗಳಲ್ಲಿ ತೆರೆದಿಟ್ಟಿದ್ದಾರೆ. ಇದರೊಂದಿಗೆ ದೇವನೂರು ಮಹದೇವ, ಮೊಗಳ್ಳಿ ಅಂಥವರನ್ನು ಏಕವಚನದಲ್ಲಿ ಕರೆದು ಸಂಯಮ ಕಳೆದುಕೊಳ್ಳುತ್ತಾರೆ.
ಈ ಬಗೆಯ ನೈತಿಕ ಸಿಟ್ಟುಗಳು ಅವರಲ್ಲಿವೆ. ಅಂತಹ ಸಂಗತಿಗಳ ಬಗ್ಗೆ ನೇರವಾಗಿ, ಆಧಾರಸಹಿತವಾಗಿ ಹೇಳಿದ್ದಾರೆ. ಆದರೆ, ಒಂದೆಡೆ (ಮೈಸೂರು ಜಿಲ್ಲೆಯ ದಲಿತ ಬಂಡಾಯ ಸಾಹಿತ್ಯಿಕ ಹಿರಿಮೆ) ಕಥೆಗಾರ ಮೊಗಳ್ಳಿ ಗಣೇಶರ ಹಂಪಿಯ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿದ `ದಲಿತ ಕಥನ‘ದ ಬಗ್ಗೆ ಬರೆಯುತ್ತ ಮೊಗಳ್ಳಿವರು ಮಾಡುವ ಸುಳ್ಳು ಉಲ್ಲೇಖಗಳನ್ನು, ಲೇಖಕರ ನಡುವೆ `ಒಬ್ಬರ ಮೇಲೆ ಒಬ್ಬರನ್ನು ಎತ್ತಿಕಟ್ಟುವ, ಸಲ್ಲದ ವಿಚಾರಗಳನ್ನು ಬರೆಯುವ ಸಾಹಿತಿಗಳನ್ನು, ಅಂಥವನ್ನು ಪ್ರಕಟಿಸುವ ವಿಶ್ವವಿದ್ಯಾಲಯದ ಪ್ರಸಾರಾಂಗವನ್ನು ಏನೆಂದು ಕರೆಯಬೇಕು?’ ಎಂದು ಕೇಳಿದ್ದಾರೆ. ಈವರೆಗೆ ಲೇಖಕರ ಪ್ರಶ್ನೆ ಸರಿಯಾಗಿಯೇ ಇದೆ. ಮುಂದುವರಿದು ಅವರು ಮೈಸೂರು ವಿಶ್ವವಿದ್ಯಾಲಯದ ಕಥೆಗಾರ ಮೊಗಳ್ಳಿ ಗಣೇಶರು ಎಂ.ಎ ತರಗತಿಯಲ್ಲಿ ಮೂರನೆಯ ದರ್ಜೆಯಲ್ಲಿ ತೇರ್ಗಡೆಯಾಗಿ ಮತ್ತೊಂದು ಎಂ.ಎ ಗೆ ಸೇರಿ ಪ್ರಥಮ ದರ್ಜೆಯಲ್ಲಿ ಪಾಸಾದುದ್ದನ್ನೂ, ಅನಂತರ ಸಂಶೋಧನೆ ನೆಪದಲ್ಲಿ 12 ವರ್ಷಗಳ ಕಾಲ ಒಂದೇ ಕೊಠಡಿಯಲ್ಲಿ ಉಳಿದುಕೊಂಡುದ್ದನ್ನು, ಮೈಸೂರು ವಿ.ವಿ.ಯಲ್ಲಿ ಓದಲು ಬರುವ ಬಡಹುಡುಗರು ಹಾಸ್ಟೇಲ್ನಲ್ಲಿ ರೂಮಿಗಾಗಿ ಪರದಾಡುತ್ತಿರುವುದನ್ನು ನೋಡಿಯೂ ಮುಜುಗರಕ್ಕೆ ಅವರು ಒಳಗಾಗದಿರವುದನ್ನೂ, `ಆತನನ್ನು ಓಡಿಸಿ ನಿಜವಾದ ಅರ್ಹ ಬಡ ವಿದ್ಯಾರ್ಥಿಗಳಿಗೆ ಆ ಜಾಗ ಸಿಗುವಂತಾಗುವಂತೆ ಮಾಡಲು ಸಾಹಸ ಪಡಬೇಕಾಯಿತು‘ ಎಂದು ಬರೆಯುತ್ತಾರೆ. ಮೊಗಳ್ಳಿಯವರ ಕೃತಿಯೊಂದಿಗೆ ಅವರ ಈ ಉಲ್ಲೇಖ ಅಗತ್ಯ ಇತ್ತು ಎಂದು ಅನಿಸುವುದಿಲ್ಲ.
ಆದರೂ, ಈ ಪುಸ್ತಕ ಸಾಕಷ್ಟು ಚರ್ಚೆಗಳನ್ನು ದಲಿತ ಸಾಹಿತ್ಯ, ಚಳವಳಿಗಳ ಕುರಿತು ಮಾಡುತ್ತದೆ ಎಂಬುದು ಮಹತ್ವದ ಸಂಗತಿ.
ಶೀರ್ಷಿಕೆ: ದಲಿತ ಚಳವಳಿ ಮತ್ತು ಸಾಹಿತ್ಯ  ಲೇಖಕರು: ಡಾ.ವಿ.ಮುನಿವೆಂಕಟಪ್ಪ ಪ್ರಕಾಶಕರು: ಎಸ್.ಎಸ್.ಪ್ರಕಾಶನ ಪುಟಗಳು:128 ಬೆಲೆ:ರೂ.65/

ಹಿಂದುತ್ವ ಮತ್ತು ದಲಿತರು

ಈ ಗ್ರಂಥದಲ್ಲಿ ಸೇರ್ಪಡೆಯಾಗಿರುವ ಲೇಖನಗಳು ಹಿಂದುತ್ವ ಶಕ್ತಿಗಳು ದಲಿತರನ್ನು ತಮ್ಮತ್ತ ಸೆಳೆದುಕೊಳ್ಳುತ್ತಿರುವ ಪ್ರಕ್ರಿಯೆಯ ಬಗ್ಗೆ ತಾತ್ವಿಕವೂ ಅನುಭವಜನ್ಯವೂ ಆದ ವಿಶ್ಲೇಷಣೆಗಳ ಮೂಲಕ ಸಾಕಷ್ಟು ಬೆಳಕು ಚೆಲ್ಲುತ್ತವೆ. ಕ್ರಿಯಾಶೀಲ ಚಳವಳಿಗಾರರು ಮತ್ತು ವಿದ್ವಾಂಸರುಗಳು ಬರೆದಿರುವ ಲೇಖನಗಳು ಈ ಗ್ರಂಥದಲ್ಲಿ ಸೇರ್ಪಡೆಯಾಗಿವೆ. ಈ ಲೇಖನಗಳಲ್ಲಿ ದಲಿತರ ಸಾಮಾಜಿಕ, ಸಾಂಸ್ಕೃತಿಕ, ಸೈದ್ಧಾಂತಿಕ ಮತ್ತು ರಾಜಕೀಯ ಜೀವನಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಚರ್ಚಿಸಲಾಗಿದೆ. ಜೊತೆಗೆ ಅವರು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಅಗತ್ಯವಾದ ಮುನ್ನೋಟದ ಬಗ್ಗೆ ಬೆಳಕು ಹರಿಸುವ ಲೇಖನಗಳೂ ಇಲ್ಲಿವೆ. ಇತ್ತೀಚಿನ ವಿದ್ಯಮಾನಗಳು ಸೃಷ್ಟಿಸಿರುವ ಸಮಸ್ಯೆಗಳ ಕುರಿತ ಗಂಭೀರ ಸ್ವರೂಪದ ಸಂವಾದಕ್ಕೆ ಇಲ್ಲಿನ ಲೇಖನಗಳು ದಾರಿಮಾಡಿಕೊಡುತ್ತವೆ.
ಶೀರ್ಷಿಕೆ: ಹಿಂದುತ್ವ ಮತ್ತು ದಲಿತರು ಮೂಲ ಸಂಪಾದಕರು:ಆನಂದ್ ತೇಲ್ ತುಂಬ್ಡೆ ಅನು ಸಂಯೋಜನೆ: ಪ್ರೊ.ಗಂಗಾಧರ ಮೂರ್ತಿ ಪ್ರಕಾಶಕರು: ಚಿಂತನ ಪುಸ್ತಕ ಪುಟಗಳು:216 ಬೆಲೆ:ರೂ.120

ಶಾಂತಾರಾಮ್ ಹಾಜಿರ್ ಹೈ

kuruda-kurudi1


ಶಾಂತಾರಾಮ ಸೋಮಯಾಜಿ ಕತೆಗಳಲ್ಲಿ ಹೊಸಲೋಕವಿರುತ್ತದೆ. ವಿನೂತನವಾದ ಬರಹ ಶೈಲಿಯಲ್ಲಿ ಕತೆ ಹೇಳುವ ಶಾಂತಾರಾಮರ ಮೂರನೆಯ ಕಾದಂಬರಿ `ಕುರುಡ ಕುರುಡಿ‘. ಇಲ್ಲಿಯೂ ಕೂಡಾ ಹೊಸತೇನನ್ನೋ ಹೇಳುವ ಕೆಲಸ ನಡೆದಿದೆ. ಹೊಸ ಕಥಾವಸ್ತು. ಓದುಗರನ್ನು ಹಿಡಿದಿಟ್ಟುಕೊಂಡು ಹೋಗುವಲ್ಲಿ ಯಶಸ್ವಿಯಾಗಿದೆ. ಜೊತೆಗೆ ಶಾಂತಾರಾಮರ ವೈಚಾರಿಕ ವಿಷಯಗಳೂ ಇವೆ.
ವಾರಪತ್ರಿಕೆಯೊಂದರಲ್ಲಿ ಪ್ರಕಟವಾಗಿ ಜನಮೆಚ್ಚುಗೆ ಗಳಿಸಿದ `ಕುರುಡ ಕುರುಡಿ‘ಯನ್ನು ಬೆಳಕಿಗೆ ತಂದಿದ್ದಾರೆ ಪ್ರಕಾಶಕ ನಾರಾಯಣ ಮಾಳ್ಕೋಡ್. ಮುಖಪುಟದ ಕೆಟ್ಟ ವಿನ್ಯಾಸವನ್ನು ಕಣ್ಣುಮುಚ್ಚಿ ಕ್ಷಮಿಸಿದರೆ ಪುಸ್ತಕ `ಸುಮುಖ‘.
ಶೀರ್ಷಿಕೆ: ಕುರುಡ ಕುರುಡಿ ಲೇಖಕರು: ಶಾಂತಾರಾಮ ಸೋಮಯಾಜಿ ಪ್ರಕಾಶಕರು: ಸುಮುಖ ಪ್ರಕಾಶನ ಪುಟಗಳು:316 ಬೆಲೆ:ರೂ.200/