ಸಮ್ಮೋಹ ಮಾಡಿ ಸಂಭೋಗಿಸಿದ ಹಜರತ್ ಬಾಬಾಗೆ ಗೂಸಾ
ನಾಗಪುರ, ಜುಲೈ25: ನನಗೊಂದು ಮದುವೆ ಮಾಡಿಸಿಕೊಡಿ ಎಂದು ಅಲವತ್ತುಕೊಂಡಿದ್ದ 32 ವರ್ಷದ ಯುವತಿಯ ಮೇಲೆ ಅತ್ಯಾಚಾರವೆಸಗಿ, ಸುಲಿಗೆ ಮಾಡಿದ ಆರೋಪದ ಮೇಲೆ 52 ವರ್ಷದ ಹಜರತ್ ಬಾಬಾವೊಬ್ಬನನ್ನು ಬಂಧಿಸಿಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಯುವತಿ ವಾಸವಾಗಿದ್ದ ಮಾಮಿನಪುರ ಬಡಾವಣೆಯ ನಿವಾಸಿಗಳು ಹಜರತ್ ಬಾಬಾನನ್ನು ದರದರನೆ ಹೊರಗೆಳೆದು, ಮನಸಾರೆ ಬಡಿದಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.
ಆರೋಪಿ ಹಜರತ್ ಮೊಹಮದ್ ವಲೀವುಲ್ಲಾ ಸಮೀರುಲ್ಲಾ ಸಹ ಇದೇ ಬಡಾವಣೆಯವನು. ಹೆಂಗೆಳೆಯರಿಂದ ಗೂಸಾ ತಿಂದು ಮೇಯೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಬಾಧಿತ ಯುವತಿ 11 ಮಕ್ಕಳ ಪೈಕಿ ಕೊನೆಯವಳು. ಅವಳ ಅಪ್ಪ-ಅಮ್ಮ ಎಷ್ಟೂ ಗಂಡುಗಳನ್ನು ನೋಡಿದರೂ ಯಾವುದೂ ಬರಕತ್ತಾಗಲಿಲ್ಲ. ಇದರಿಂದ ಬೇಸತ್ತ ಯುವತಿ ಜೂನ್ ಮೊದಲ ವಾರದಲ್ಲಿ ಬಾಬಾ ಬಳಿ ತನ್ನ ಗೋಳನ್ನು ನಿವೇದಿಸಿಕೊಂಡಳು.
ಬಾಬಾ, ರಾತ್ರಿ ವೇಳೆ ಮನೆಗೆ ಬರುವಂತೆ ಯುವತಿಗೆ ಪುಸಲಾಯಿಸಿದ. ಅಲ್ಲಿ ಒಂದಷ್ಟು ಮಂತ್ರಗಳನ್ನು ಹೇಳುತ್ತಾ ಯುವತಿಯ ಮೇಲೆ ಹಿಪ್ನಾಟಿಸಂ ಮಾಡಿ, ತನ್ನ ಕಾರ್ಯಾಚರಣೆಗೆ ಇಳಿದಿದ್ದ. ಯುವತಿಯು ಭೌತಿಕವಾಗಿ ಬಾಬಾ ವಶವಾದಳು. ಕೆಲವೊಂದು ಭಂಗಿಗಳಲ್ಲಿ ಫೋಟೋಗಳನ್ನೂ ತೆಗೆದಿದ್ದ. ಆ ಫೋಟೋಗಳನ್ನು ತೋರಿಸಿ, ನನ್ನನ್ನು ಬ್ಲ್ಯಾಕ್ ಮೇಲ್ ಮಾಡತೊಡಗಿದ್ದ. ಕೊನೆಗೆ ಅತ್ಯಾಚಾರವನ್ನೂ ಮಾಡಿದ ಎಂದು ಯುವತಿ ಪೊಲೀಸರಿಗೆ ದೂರು ಮೂಲಕ ತಿಳಿಸಿದ್ದಾಳೆ.
ಅಪಾಯವನ್ನರಿತ ಯುವತಿ ಘಟನೆಯ ಬಳಿಕ ಬಾಬಾನತ್ತ ಸುಳಿಯುವುದನ್ನು ಬಿಟ್ಟಳು. ಆದರೆ ಅವ ಫೋಟೋ ತೋರಿಸಿ, ಬೆದರಿಕೆಯೊಡ್ಡತೊಡಗಿದ. ಅಷ್ಟೇ ಅಲ್ಲ 30,000 ರುಪಾಯಿ ಹಣ ನಿಡುವಂತೆಯೂ ಪೀಡಿಸತೊಡಗಿದ. ಜತೆಗೆ, ಮದುವೆಗೆಂದು ತೆಗೆದಿರಿಸಿರುವ ಆಭರಣಗಳನ್ನೂ ಕೊಡುವಂತೆ ಕೇಳಿದ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.
ಆದರೆ ಯುವತಿ ಇದ್ಯಾವುದಕ್ಕೂ ಬಗ್ಗಲಿಲ್ಲ. ಕೊನೆಗೆ ಮನೆಯವರಿಗೂ ಕಳೆದ ಗುರುವಾರ ವಿಷಯ ತಿಳಿಸಿದಳು. ನೆರೆಹೊರೆಯವರೂ ಜತೆಯಾಗಿ ಪೊಲೀಸರ ಸಹಾಯ ಪಡೆಯುವುದಕ್ಕೂ ಮುನ್ನ ಬಾಬಾ ಮನೆಗೆ ತೆರಳಿ, ಅವನಿಗೆ ಸರಿಯಾಗಿ ಗೂಸಾ ಕೊಟ್ಟರು. ಸ್ವಲ್ಪ ಸಮಯದ ನಂತರ ಬಂದ ಪೊಲೀಸರು ಬಾಬಾನನ್ನು ಆಸ್ಪತ್ರೆಗೆ ಸೇರಿಸಿ, ಅವನ ವಿರುದ್ಧ ಕೇಸು ದಾಖಲಿಸಿದ್ದಾರೆ

ಈ ಸುದ್ದಿ ಚಿತ್ರವನ್ನು ನೀವು ನೋಡದಿರುವುದೇ ಲೇಸು
ಬೆಂಗಳೂರು, ಜುಲೈ 5: ಈ ಸುಂದರ, ಸುಕೋಮಲ ನಗ್ನ ಯುವತಿಯ ಚಿತ್ರ ಜಗತ್ತಿನಾದ್ಯಂತ ಇಂಟರ್ನೆಟ್ ನೋಡುಗರನ್ನು ಭಾವೋದ್ರಕಗೊಳಿಸುತ್ತಿದೆ. ಈ ರೋಮಾಂಚನ ಸೋಂಕಿನಂತೆ ಹಬ್ಬುತ್ತಿದೆ.
ಮೊದಲ ಏಟಿಗೆ ಅಲ್ಲಲ್ಲ ನೋಟಕ್ಕೆ ದಪ್ಪ ಮಹಿಳೆಯನ್ನು ಯುವತಿಯೊಬ್ಬಳು ಆಪ್ಯಾಯಮಾನದಿಂದ ಬಳಸಿಕೊಂಡು ನಿಂತಂತಿದೆ. ಅವಳ ಮಾನ ಮುಚ್ಚ. ಅದೆಂಗೆ ಅಷ್ಟು ಮಂದಿಯ ಮಧ್ಯೆ ನಗ್ನಳಾಗಿದ್ದಾಳೆ ಎಂದು ಮೂಗು ಮುರಿಯಬೇಡಿ. ದಿಟ್ಟ ಪೋಸ್ ನೀಡಿರುವ ಈ ಯುವತಿಯತ್ತ ಸ್ವಲ್ಪ ಸಾವಕಾಶವಾಗಿ ಮತ್ತೊಮ್ಮೆ, ಮಗದೊಮ್ಮೆ ದಿಟ್ಟಿಸಿ ನೋಡಿ. ಥತ್ ನಿಮ್ಮ... 'ಅದು' ಆಯಮ್ಮನ ನಗ್ನ ತೋಳು ಕಣ್ರಿ!
'ಆಕ್ವರ್ಡ್ ಮೊಮೆಂಟ್' ಎಂಬ ಅಡಿಬರಹದ ಈ ಚಿತ್ರ ಈಗಾಗಲೇ ಪಡ್ಡೆ ಹುಡುಗರ ಕೈಗೆ ಸಿಕ್ಕಿ ನಜ್ಜುಗೊಜ್ಜಾಗಿದೆ. ನೀವೂ ವಸಿ ನೋಡಿ ಆನಂದಿಸಿ. ಆದರೆ ಹೆಂಗೆಳೆಯರಿಗೆ ಒಂದು ಎಚ್ಚರಿಕೆ! ದಢೂತಿಯರ ಪಕ್ಕದಲ್ಲಿ ನಿಂತು ಪೋಸ್ ಕೊಡುವ ಮುನ್ನ ಯಾವ ಭಂಗಿಯಲ್ಲಿ ನಿಂತಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಅವರಿಗೆ ಎಲ್ಲೆಲ್ಲಿ ಟೈರುಗಳು ಬಂದಿರುತ್ತವೆ ಎಂದು ಹೇಳಲಾಗದು. ಇಲ್ಲವಾದಲ್ಲಿ, ಅನ್ಯಥಾ ಮುಜುಗರಂ ನಿಮ್ಮದಾಗುವುದುಂ...
ಇಷ್ಟಕ್ಕೂ ಅಯಮ್ಮ ಯಾರು? ಈ ಬಾಲೆ ಯಾಕಾಗಿ ಆ ದೊಡ್ಡಮ್ಮನ ಮೇಲೆ ಬಳ್ಳಿಯಂತೆ ಬಾಗಿ ನಿಂತಿದ್ದಾಳೆ? ಸಂದರ್ಭ ಏನು? ಎಂಬ ಪ್ರಶ್ನೆಗಳನ್ನು ಕೇಳುತ್ತಾ ಸಮಯ ಹಾಳು ಮಾಡಬೇಡಿ, ಹಾಗೇ ಸುಮ್ಮನೇ ನೋಡುತ್ತಾ ಎಂಜಾಯ್ ಮಾಡಿ!

ವಿಂಡೋಸ್ ಎಕ್ಸ್ ಪಿ ಸಾಯಲು ಸಾವಿರ ದಿನ ಬಾಕಿ
ಸ್ಯಾನ್ ಫ್ರಾನ್ಸಿಸ್ಕೋ ಜು 15: ಸಾಫ್ ವೇರ್ ದಿಗ್ಗಜ ಮೈಕ್ರೋಸಾಫ್ಟ್ ತನ್ನ ಬಹು ಜನಪ್ರಿಯ ಆಪರೇಟಿಂಗ್ ಸಿಸ್ಟಮ್ ವಿಂಡೋಸ್ ಎಕ್ಸ್ ಪಿಗೆ ಡೇತ್ ಡೇ ಫಿಕ್ಸ್ ಮಾಡಿದೆ. ಕಂಪನಿ ಮೂಲಗಳ ಪ್ರಕಾರ, ವಿಂಡೋಸ್ ಎಕ್ಸ್ ಪಿ ಇನ್ನು ಉಳಿದಿರುವುದು ಸಾವಿರ ದಿನಗಳು ಮಾತ್ರ. ಜು.11 ರಿಂದ ಎಕ್ಸ್ ಪಿ ಸಾವಿನ ದಿನಗಳ ಎಣಿಕೆ ಆರಂಭವಾಗಿದೆ. ನಂತರ ಎಕ್ಸ್ ಪಿ ಸೇವೆ ಸಂಪೂರ್ಣ ನಿಲ್ಲಿಸಲಾಗುವುದು ಎಂದು ಮೈಕ್ರೋ ಸಾಫ್ಟ್ ಸಂಸ್ಥೆಯ ಸ್ಟೀಫನ್ ರೋಸ್ ಹೇಳಿದ್ದಾರೆ.
ಮೈಕ್ರೋಸಾಫ್ಟ್ ಕಡೆಯಿಂದ ಯಾವುದೇ ಪ್ಯಾಚ್ ಹಾಗೂ ತಾಂತ್ರಿಕ ಬೆಂಬಲ ಗ್ರಾಹಕರಿಗೆ ಸಿಗುವುದಿಲ್ಲ. ಒಂದು ವೇಳೆ ಎಕ್ಸ್ ಪಿ ಬಳಸಿದರೂ ಸುರಕ್ಷತೆ ಇರುವುದಿಲ್ಲ. ಬದಲಿಗೆ ವಿಂಡೋಸ್ 7 ಬಳಸಲೇ ಬೇಕಾದ ಅನಿವಾರ್ಯತೆ ಉಂಟಾಗಲಿದೆ. ಈ ಮಧ್ಯೆ ಮೈಕ್ರೋಸಾಫ್ಟ್ ವಿಂಡೋಸ್ 7 ಜನಪ್ರಿಯತೆ ನಂತರ ವಿಂಡೋಸ್ 8 ಅನ್ನು 2012ರಲ್ಲಿ ಹೊರ ತರಲಿದೆ.
Read: In English
ವಿಂಡೋಸ್ 7 ಗೆ ಹೆಚ್ಚಿನ ಪ್ರಚಾರ ನೀಡಬೇಕಿದೆ. ಎಕ್ಸ್ ಪಿ ಬದಲಿಗೆ ಹೆಚ್ಚಿನ ಸೌಲಭ್ಯವುಳ್ಳ ಇತರೆ ಆಪರೇಟಿಂಗ್ ಸಿಸ್ಟಮ್ ಬಳಕೆಗೆ ಅವಕಾಶ ಕಲ್ಪಿಸಲಾಗುವುದು. ಲಕ್ಷಾಂತರ ಕಂಪ್ಯೂಟರ್ ಗಳ ಮೊದಲ ಆಯ್ಕೆಯಾಗಿ ಇಂದಿಗೂ ವಿಂಡೋಸ್ ಎಕ್ಸ್ ಪಿ ಜನಪ್ರಿಯತೆ ಉಳಿಸಿಕೊಂಡಿದೆ. ಆದರೆ, 2014ರ ನಂತರ ಎಕ್ಸ್ ಪಿ ಸಂಪೂರ್ನ ನಿರ್ನಾಮವಾಗಲಿದೆ. ಮೈಕ್ರೋಸಾಫ್ಟ್ ಕಡೆಯಿಂದ ಯಾವುದೇ ಪ್ಯಾಚ್ ಹಾಗೂ ತಾಂತ್ರಿಕ ಬೆಂಬಲ ಗ್ರಾಹಕರಿಗೆ ಸಿಗುವುದಿಲ್ಲ. ಒಂದು ವೇಳೆ ಎಕ್ಸ್ ಪಿ ಬಳಸಿದರೂ ಸುರಕ್ಷತೆ ಇರುವುದಿಲ್ಲ. ಬದಲಿಗೆ ವಿಂಡೋಸ್ 7 ಬಳಸಲೇ ಬೇಕಾದ ಅನಿವಾರ್ಯತೆ ಉಂಟಾಗಲಿದೆ. ಈ ಮಧ್ಯೆ ಮೈಕ್ರೋಸಾಫ್ಟ್ ವಿಂಡೋಸ್ 7 ಜನಪ್ರಿಯತೆ ನಂತರ ವಿಂಡೋಸ್ 8 ಅನ್ನು 2012ರಲ್ಲಿ ಹೊರ ತರಲಿದೆ.
ಅಪ್ಪಟ ಕನ್ನಡ ಪತ್ರಿಕೆ ಕರವೇ 'ನಲ್ನುಡಿ'ಯ ಜುಲೈ ಸೊಬಗು
ಪಕ್ಕದಲ್ಲಿದೆ ಜುಲೈ ತಿಂಗಳ ಕರವೇ ನಲ್ನುಡಿ. ಅಮಾವಾಸ್ಯೆಯ ರಾತ್ರಿಯಲ್ಲಿ ಹೊಳೆಯುವ ತಾರೆಗಳಂತೆ ಕಪ್ಪು ಹಿನ್ನೆಲೆಯಲ್ಲಿ ಬಣ್ಣಬಣ್ಣದ ಫೋಟೋಗಳಿರುವ ವಿನ್ಯಾಸ ಮತ್ತು ಕಲೆಯ ಮುದ್ರಣದ ಮುದ್ದಾದ 'ಮುಖಪುಟ'. ಮುಖವನ್ನು ಆಚೀಚೆ ಅಲ್ಲಾಡಿಸಲು ಬಿಡದಂತೆ ಚಿತ್ರಗಳಿಗೆ ಹೊಂದಿಕೊಂಡ 'ಶೀರ್ಷಿಕೆಗಳು'. ಆಹಾ!... ನಮಗೇಕೆ ಎರಡೇ ಎರಡು ಕಣ್ಣುಗಳು ಎನಿಸದಿರದು.
ಮೊದಲ ಪುಟದಲ್ಲಿ, ಪ್ರಸ್ತುತ ವಿದ್ಯಮಾನದ ವಿಷಯಕ್ಕೆ ಸಂಬಂಧಿಸಿದ, ವಿಶೇಷ ಅಧ್ಯಯನದಿಂದ ಮಂಡಿಸಲ್ಪಟ್ಟ, ಸಾಮಾಜಿಕ ಕಳಕಳಿಯಿಂದ ಕೂಡಿದ ದೂರದೃಷ್ಟಿಯುಳ್ಳ ಸಂಪಾದಕಿ ವಿಶಾಲಾಕ್ಷಿ ಅವರ ಸಂಪಾದಕೀಯ. 'ಒಳಪುಟಗಳಲ್ಲಿ ಏನೇನಿದೆ' ಎಂಬ ವಿವರಣೆ ಸಂಪಾದಕೀಯದ ಮುಂದಿನ ಪುಟದಲ್ಲಿ. ಅದು ಹತ್ತಿಯ ಮೇಲಿರುವ ಹವಳದಂತೆ. ಏನಿಲ್ಲ, ಏನಿದೆ ಅಂತ ನೋಡ ಹೊರಟರೆ ಅದೊಂದು ಫುಲ್ ಮೀಲ್ಸ್. ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾಗಿರುವ ಟಿ. ಎ. ನಾರಾಯಣಗೌಡರ 'ನೇರನುಡಿ' ಯಿಂದ ಪ್ರಾರಂಭವಾಗಿ ಸಮಾಜಮುಖಿ 'ಒಡಲನುಡಿ' ಯೊಂದಿಗೆ ಕೊನೆಗೊಳ್ಳುವ ಈ ಮಾಸಿಕ ನಿಜವಾಗಿಯೂ ಒಂದು ಅಚ್ಚರಿ, ಅಮೂಲ್ಯ ರತ್ನ.
ಈ ಸಂಚಿಕೆಯ ಒಳಪುಟಗಳಲ್ಲಿ ಡಾ.ದೊಡ್ಡರಂಗೇಗೌಡ ಅವರ " ಅನನ್ಯ ಕಲಾಕೃತಿ ಮೂಡಬೇಕಾದರೆ ಅಸಾಧ್ಯ ಪರಿಶ್ರಮ ಬೇಕೇ ಬೇಕು " ಎಂಬ ಅನುಭವದ ಹೊನ್ನುಡಿ. ಅಪ್ಪಗೆರೆ ತಿಮ್ಮರಾಜುರವರ " ಮೂಲ ಜಾನಪದ ಕಲಾವಿದರ ದುಃಖ ದುಮ್ಮಾನಗಳು ಎಂಬ ಸ್ವಾನುಭವದ ಹಿನ್ನೆಲೆಯಿಂದ ಮೂಡಿರುವ ಜಾನಪದ ಕಲಾವಿದರ ಜೀವನದ ಅನಾವರಣ. ಕರ್ನಾಟಕ ಪ್ರಶಸ್ತಿಯ ಪ್ರತಿಭೆಯಲ್ಲಿ ದೇಜಗೌ ಅವರನ್ನು ಕುರಿತ ಬರಹ. 'ಸ್ವಾಮಿಗಳು ಮಠದಲಿಲ್ಲ' ಎಂಬ ತೀರ್ಪುಗಾರರ ಮೆಚ್ಚುಗೆ ಪಡೆದಿರುವ ಕಥೆ, ಡಾ. ಜಿ.ಎಂ. ಹೆಗಡೆಯವರ ಕನ್ನಡ ಪರಿಚಾರಿಕೆ, ಕಲೆ, ಕಾವ್ಯ, ವೈಚಾರಿಕ ಲೇಖನ. ರಂಗನುಡಿ ಹೀಗೆ ಒಂದೇ ಎರಡೇ! ಸಾಕಷ್ಟು ಸಾಧ್ಯತೆಗಳ ಸಂಗ್ರಹ ಈ ಮಾಸಿಕ.
ಹಿಂದಿನ ಸಂಚಿಕೆಯನ್ನು ಹುಡುಕುವಂತೆ, ಮುಂದಿನ ಸಂಚಿಕೆಯನ್ನು ಕಾಯುವಂತೆ ಮಾಡಿರುವ ಈ ಸಂಚಿಕೆ ಈಗ ದಿನವಿಡೀ ಕಾಡುತ್ತಿರುವುದೂ ನಿಜ! ಮಾಡಲೇಬೇಕಾಗಿರುವ ಮಾಧ್ಯಮಗಳ ಕೆಲವು ಕರ್ತವ್ಯಗಳಿಗೇ ಇದು ಒಂದು ಕನ್ನಡಿ, ಮಾಡಬೇಕಾಗಿರುವ ಕೆಲಸಗಳಿಗೆ ಮನ್ನುಡಿಯೂ ಎನ್ನಬಹುದು.
'ಕರ್ನಾಟಕ ರಕ್ಷಣಾ ವೇದಿಕೆ'ಯಿಂದ ಹೊರಬರುತ್ತಿರುವ ಈ ಮಾಸಿಕ ಕರ್ನಾಟಕದ ಜನರಿಗೆ ಇದರಲ್ಲಿರುವ ವೈವಿಧ್ಯಮಯ ಬರಹಗಳ ಮೂಲಕ 'ರಕ್ಷಣೆಯ' ಬೆಚ್ಚನೆ ಭಾವವನ್ನು ಕೊಡುತ್ತಿರುವುದು ಮೆಚ್ಚಲೇಬೇಕಾದ ಅಂಶ. ಮುಂದಿನ ಸಂಚಿಕೆಗಳಲ್ಲೂ ಇದೇ ವೈವಿಧ್ಯತೆ, ಕಾಳಜಿ ಇರಲೆಂದು ಆಶಿಸುವ ಕರ್ನಾಟಕದ ಜನತೆಗೆ ನಿರಾಶೆಯಾಗಲಾರದೆಂದು ನಾವೂ ಆಶಿಸುತ್ತೇವೆ

ವಿವಾಹಿತ ವ್ಯಕ್ತಿಗಳ ಅಕ್ರಮ ಸಂಬಂಧ ಸಮ್ಮತವಲ್ಲ:ಕೋರ್ಟ್
ಮುಂಬೈ, ಜು 12: ಇಬ್ಬರು ವಿವಾಹಿತ ವ್ಯಕ್ತಿಗಳಿಗೆ ಅನೈತಿಕ ವೈವಾಹಿಕ ಸಂಬಂಧವಿರಿಸಿಕೊಳ್ಳುವ ಸ್ವಾತಂತ್ರ್ಯ ಇಲ್ಲ ಎಂದು ಮುಂಬೈ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ವ್ಯಭಿಚಾರ ದಂಡನಾರ್ಹವಾಗಿರುವ ಐಪಿಸಿ ಸೆಕ್ಷನ್ 497ರ ಸಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ನಗರದ ಉದ್ಯಮಿಯೊಬ್ಬರು ಹೂಡಿದ ದಾವೆಯನ್ನು ಉಚ್ಚ ನ್ಯಾಯಾಲಯ ವಜಾಗೊಳಿಸಿ, ಈ ತೀರ್ಪು ನೀಡಿದೆ.
ವ್ಯಭಿಚಾರ ವಿವಾಹದ ಪವಿತ್ರತೆಗೆ ವಿರುದ್ಧವಾಗಿದೆ ಎಂದು ಪರಿಗಣಿಸಲಾಗಿದೆ. ವ್ಯಭಿಚಾರ ದಂಡನಾರ್ಹ ಅಲ್ಲವೆಂದು ಮಾಡಿದರೆ ಅನೈತಿಕ ವೈವಾಹಿಕ ಸಂಬಂಧಗಳಿಗೆ ಯಾವುದೇ ನಿರ್ಬಂಧವಿಲ್ಲ ಎಂದು ಮಾಡಿದಂತಾಗುತ್ತದೆ. ಇದು ವಿವಾಹ ಸಂಬಂಧದ ಸ್ಥಿರತೆ ಮೇಲೆ ಪರಿಣಾಮ ಬೀರಲಿದೆ ಎಂದು ವಿಭಾಗೀಯ ನ್ಯಾಯಪೀಠದ ಜಸ್ಟೀಸ್ ಬಿ.ಎಚ್. ಮರ್ಲಪಳ್ಳೆ ಮತ್ತು ಯು.ಡಿ.ಸಾಳ್ವಿ ಅಭಿಪ್ರಾಯಪಟ್ಟರು.
ವಿವಾಹಿತ ಪರ ಸ್ತ್ರೀಯೊಂದಿಗೆ ಅನೈತಿಕ ಸಂಬಂಧವಿರಿಸಿದ ಆರೋಪದಲ್ಲಿ 497 ಸೆಕ್ಷನ್ ಪ್ರಕಾರ ಕ್ರಿಮಿನಲ್ ವಿಚಾರಣೆ ಎದುರಿಸುತ್ತಿರುವ ಈ ಉದ್ಯಮಿ ಅರ್ಜಿ ಹೂಡಿದ್ದರು. ಪ್ರೌಢ ವ್ಯಕ್ತಿಯೊಂದಿಗೆ ಸಹಮತದ ಲೈಂಗಿಕ ಸಂಬಂಧ ಬೆಳೆಸುವುದು ಜೀವನದ ಮೂಲಭೂತ ಹಕ್ಕಾಗಿದೆ ಎಂದು ಅವರು ವಾದಿಸಿದ್ದರು.
ಐಪಿಸಿ ಸೆಕ್ಷನ್ 497 ವ್ಯಕ್ತಿಯ ಸಂವಿಧಾನಬದ್ಧ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ ಎಂದು ಮಂಡಿಸಿದ ವಾದಗಳಲ್ಲಿ ನಮಗೆ ಯಾವುದೇ ದೃಢವಾದ ಆಧಾರ ಸಿಕ್ಕಿಲ್ಲ. ವ್ಯಭಿಚಾರ ಕೆಲವು ರಾಷ್ಟ್ರಗಳಲ್ಲಿ ಮಾತ್ರ ಅಪರಾಧವಾಗಿದೆ ಎನ್ನುವ ಕಾರಣಕ್ಕೆ ಮಾತ್ರ ಐಪಿಸಿ 497 ಸೆಕ್ಷನ್ ಅನ್ನು ಅಸಿಂಧು ಮಾಡಲಾಗದು ಎಂದು ಮರ್ಲಪಳ್ಳೆ ಹೇಳಿದರು

ಅನಂತ ಗುಪ್ತ ನಿಧಿ: ಕಾಡತೊಡಗಿದೆ ಸಂರಕ್ಷಣೆಯ ಭೀತಿ
ತಿರುವನಂತಪುರಂ, ಜುಲೈ 4: ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದ ರಹಸ್ಯ ಕೊಠಡಿಗಳಲ್ಲಿ ಪತ್ತೆಯಾಗಿರುವ ಅಪಾರ ಪ್ರಮಾಣದ ಸಂಪತ್ತನ್ನು ಸಂರಕ್ಷಿಸುವುದು ಹೇಗೆಂಬುದು ಈಗ ಎಲ್ಲರ ಚಿಂತೆಯ ವಿಷಯ.
ರಹಸ್ಯ ಕೊಠಡಿಯ ತೆರೆಯುವ ತನಕ ಈ ದೇವಸ್ಥಾನಕ್ಕೆ ಸಾಧಾರಣವಾದ ಬಂದೋಬಸ್ತಿನ ವ್ಯವಸ್ಥೆಯಿತ್ತು. ಆದರೆ ಈಗ ಅಬೇಧ್ಯ ರಕ್ಷಣಾ ವ್ಯವಸ್ಥೆಯನ್ನು ಮಾಡಲಾಗಿದ್ದರೂ ಸುದೀರ್ಘ ಕಾಲ ಸಂಪತ್ತನ್ನು ರಕ್ಷಿಸಿಡಬೇಕಾದ ಚಿಂತೆ ಸರಕಾರವನ್ನು ಕಾಡುತ್ತಿದೆ. ಒಟ್ಟಾರೆ ಸುಮಾರು 1 ಲಕ್ಷ ಕೋಟಿ ರುಪಾಯಿ ಮೇಲ್ಪಟ್ಟು ಬೆಲೆಬಾಳುವ ಸಂಪತ್ತು ದೇವಸ್ಥಾನದ ರಹಸ್ಯ ಕೊಠಡಿಗಳಲ್ಲಿದೆ.
ಸುಪ್ರೀಂ ಕೋರ್ಟ್ ನೇಮಿಸಿರುವ ಏಳು ಸದಸ್ಯರ ಸಮಿತಿ ಸಂಪತ್ತಿನ ತಪಶೀಲು ಪಟ್ಟಿ ತಯಾರಿಸುತ್ತಿದ್ದು, ಶನಿವಾರದ ತನಕ ಸುಮಾರು 1 ಲಕ್ಷ ಕೋಟಿ ರು. ಸಂಪತ್ತು ಸಿಕ್ಕಿದೆ. ಭಾನುವಾರ ತಪಶೀಲು ಪಟ್ಟಿ ತಯಾರಿಸುವ ಪ್ರಕ್ರಿಯೆಗೆ ವಿರಾಮ ನೀಡಲಾಗಿದ್ದು, ಸೋಮವಾರ ಮುಂದುವರಿಯುತ್ತದೆ.
ಜಗತ್ತಿನ ಅತ್ಯಂತ ಶ್ರೀಮಂತ ಹಿಂದು ದೇವಸ್ಥಾನವಾಗಿ ಮೂಡಿ ಬಂದಿರುವ ಹಿನ್ನೆಲೆಯಲ್ಲಿ ಅಬೇಧ್ಯ ರಕ್ಷಣಾ ವ್ಯವಸ್ಥೆಯನ್ನು ಮಾಡುವ ಅಗತ್ಯವೂ ತಲೆದೋರಿದೆ. ಐತಿಹಾಸಿಕ ಮಹತ್ವವುಳ್ಳ ಈ ದೇವಾಲಯ ಮತ್ತು ಇಲ್ಲಿ ದೊರೆತಿರುವ ಭಾರಿ ಸಂಪತ್ತಿನ ಸಂರಕ್ಷಣೆ ಹೇಗೆ ಎನ್ನುವ ಪ್ರಶ್ನೆ ಇತಿಹಾಸಕಾರರು, ಪ್ರಾಧ್ಯಾಪಕರು ಹಾಗೂ ದೇವಾಲಯ ಸಂಸ್ಕೃತಿ ಕುರಿತ ಕುತೂಹಲಿಗಳನ್ನು ಕಾಡತೊಡಗಿದೆ.
ಸ್ವಾತಂತ್ರ್ಯಪೂರ್ವದ ಇತರ ಹಲವು ರಾಜಮನೆತನಗಳಲ್ಲಿ ಈ ರೀತಿ ಅಪಾರ ಪ್ರಮಾಣದ ಸಂಪತ್ತು ಇತ್ತು. ಆದರೆ ಅದು ದಾಳಿಕೋರರ ಪಾಲಾಗಿದೆ ಅಥವ ರಾಜಮನೆತನದವರೇ ಅವುಗಳನ್ನು ಬಳಸಿಕೊಂಡಿದ್ದಾರೆ. ಆದರೆ ಈ ಖಜಾನೆ ತಿರುವಾಂಕೂರು ಸಂಸ್ಥಾನವನ್ನಾಳಿದವರ ಪ್ರಾಮಾಣಿಕತೆ ಮತ್ತು ಸರಳತೆಯ ಸಂಕೇತದಂತಿದೆ. ಅವರು ಈ ಸ್ವತ್ತಿನಲ್ಲಿ ಏನೊಂದನ್ನೂ ತೆಗೆದುಕೊಂಡು ಹೋಗಿಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
'ಶತಮಾನಗಳಿಂದ ದೇವಾಲಯದ ನೆಲಮಾಳಿಗೆಯಲ್ಲಿದ್ದ ಈ ಭಂಡಾರವನ್ನು ಮುಂದಿನ ಪೀಳಿಗೆಗಾಗಿ ಸಂರಕ್ಷಿಸಬೇಕು' ಎಂದು ಇತಿಹಾಸಕಾರ ಮತ್ತು ಲೇಖಕ ಎಂ.ಜಿ. ಶಶಿಭೂಷಣ್ ಹೇಳಿದ್ದಾರೆ.
ಈ ಸಂಪತ್ತನ್ನು ಬಹಳ ಎಚ್ಚರಿಕೆ ಹಾಗೂ ಕಾಳಜಿಯಿಂದ ಸಂರಕ್ಷಿಸಿಡಬೇಕೆಂದು ಇಂಡಿಯನ್ ಹಿಸ್ಟರಿ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ನಾರಾಯಣನ್ ಸಹಿತ ಹಲವು ಇತಿಹಾಸಕಾರರು ಒತ್ತಾಯಿಸಿದ್ದಾರೆ. ಇದು ತಿರುವಾಂಕೂರು ರಾಜಮನೆತನದವರ ಆಧೀನದಲ್ಲಿರುವ ದೇವಸ್ಥಾನಕ್ಕೆ ಸಂಪತ್ತಾಗಿರುವುದರಿಂದ ಇಷ್ಟರ ತನಕ ಪಾಲಿಸಿಕೊಂಡು ಬಂದಿರುವ ಪರಂಪರೆಯ ಪ್ರಕಾರ ಸರಕಾರ ಅದನ್ನು ವಶಪಡಿಸಿಕೊಳ್ಳುವಂತಿಲ್ಲ. ಸರಕಾರದ ಆಧೀನಕ್ಕೊಳಪಟ್ಟ ದೇವಸ್ಥಾನಗಳು ದುರಾಡಳಿತದಿಂದ ನಾಶವಾಗಿರುವ ಅನೇಕ ಉದಾಹರಣೆಗಳು ನಮ್ಮೆದುರಿಗಿವೆ. ಅನಂತಪದ್ಮನಾಭ ಸ್ವಾಮಿ ದೇವಸ್ಥಾನಕ್ಕೆ ಈ ಗತಿಯಾಗಬಾರದು ಎಂದು ನಾರಾಯಣನ್ ಹೇಳಿದ್ದಾರೆ.
ರಹಸ್ಯ ಕೊಠಡಿಗಳಲ್ಲಿ ಪತ್ತೆಯಾಗಿರುವ ಕೆಲವೊಂದು ವಸ್ತುಗಳನ್ನು ವಸ್ತು ಸಂಗ್ರಹಾಲಯದಲ್ಲಿ ಸಾರ್ವಜನಿಕ ವೀಕ್ಷಣೆಗಾಗಿ ಇಡಬಹುದು. ಉಳಿದ ಸಂಪತ್ತನ್ನು ಸುರಕ್ಷಿತವಾಗಿ ಕಾಪಿಡಬೇಕೆಂದು ಅವರು ಸಲಹೆ ಮಾಡಿದ್ದಾರೆ.
1947ರ ಬಳಿಕ ಹೆಚ್ಚಿನೆಲ್ಲ ದೇವಸ್ಥಾನಗಳ ಆಡಳಿತವನ್ನು ತಿರುವಾಂಕೂರು ದೇವಸ್ವಂ ಬೋರ್ಡ್‌ಗೆ ಬಿಟ್ಟುಕೊಡಲಾಗಿದ್ದರೂ ಅನಂತ ಪದ್ಮನಾಭಸ್ವಾಮಿ ದೇವಸ್ಥಾನದ ಆಡಳಿತ ಮಾತ್ರ ರಾಜಮನೆತನದವರ ಆಧೀನದಲ್ಲಿತ್ತು.ಕೊನೆಯ ರಾಜ ಚಿತ್ತಿರಾ ತಿರುನಾಲ್ ಬಲರಾಮ ವರ್ಮ ಅವರನ್ನು ದೇವಸ್ಥಾನಗಳ ವಿಲಯನದ ಬಳಿಕ ರಾಜಪ್ರಮುಖರೆಂದು ಹೆಸರಿಸಿದರೂ ಅವರು ರಹಸ್ಯ ಕೊಠಡಿಗಳಲ್ಲಿರುವ ಸಂಪತ್ತನ್ನು ಮುಟ್ಟಿಲ್ಲ.
ಈ ನಡುವೆ ವಿಶ್ವಹಿಂದು ಪರಿಷತ್, ನಾಯರ್ ಸರ್ವಿಸ್ ಸೊಸೈಟಿ, ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ ಮುಂತಾದ ಸಂಘಟನೆಗಳು ಸಂಪತ್ತನ್ನು ಸರಕಾರ ವಶಪಡಿಸಿಕೊಳ್ಳಬಾರದು ಎಂದು ಎಚ್ಚರಿಸಿವೆ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)