ಪುಟಗಳು

ಅಚ್ಚ ಕನ್ನಡದೊಳಗೆ ನೂರಾರು ಕನ್ನಡ

 

Method of getting information through Reactive SMS (Karnataka Information Commission)

ಕೇಂದ್ರ ಸಂಸ್ಥೆಗಳ ಸಿಬ್ಬಂಧಿ ನೇಮಕ ಪರೀಕ್ಷೆಗೆ ಅರ್ಜಿ

KIMS Staff Nurse Recruitment Notification

ದೇವರಾಯನದುರ್ಗದಲ್ಲಿ ಉರುಳಿಗೆ ಬಲಿಯಾದ ಚಿರತೆ

Leopard killed in Devarayanadurga
 
ತುಮಕೂರು, ನ. 28 : ತುಮಕೂರು ನಗರಕ್ಕೆ ಕೇವಲ 16 ಕಿ.ಮೀ. ದೂರವಿರುವ ಸುಪ್ರಸಿದ್ಧ ಪ್ರವಾಸಿ ತಾಣ ದೇವರಾಯನದುರ್ಗದಲ್ಲಿ ನವೆಂಬರ್ 27ರಂದು ಬೆಳಿಗ್ಗೆ ಉರುಳಿಗೆ ಬಲಿಯಾದ ಚಿರತೆಯ ಮೃತದೇಹ ಪತ್ತೆಯಾಗಿದ್ದು, ನಿಸರ್ಗಪ್ರಿಯರನ್ನು ಬೆಚ್ಚಿಬೀಳಿಸಿದೆ.

ದೇವರಾಯನದುರ್ಗದ ಕಾಳಿಕಾಂಬ ದೇವಾಲಯದ ಹಿಂಭಾಗದ ಅರಣ್ಯ ಪ್ರದೇಶದಲ್ಲಿ ಸುಮಾರು 8ರಿಂದ 10 ವರ್ಷದ ಹೆಣ್ಣು ಚಿರತೆಯ ಕೊಳೆಯುತ್ತಿರುವ ಶವ ಪತ್ತೆಯಾಗಿದೆ. ಕಾಡುಪ್ರಾಣಿಗಳ ಬೇಟೆಗಾಗಿ ಕೇಬಲ್ ವೈರ್ ಬಳಸಿಕೊಂಡು ಇಡಲಾಗಿದ್ದ ಉರುಳಿಗೆ ಈ ಚಿರತೆ ಸಿಕ್ಕಿಬಿದ್ದಿದೆ. ಅಲ್ಲಿಂದ ಬಚಾವಾಗಲು ಭಾರೀ ಪ್ರಯತ್ನ ನಡೆಸಿ ವಿಫಲಗೊಂಡ ಚಿರತೆ ಅಲ್ಲೇ ನರಳಾಡಿ ಸತ್ತಿದೆ.

ಈ ಘಟನೆ ನಡೆದು ಸುಮಾರು ಐದಾರು ದಿನಗಳಾಗಿರಬಹುದು ಎಂದು ಅಂದಾಜಿಸಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ತುಮಕೂರಿನ ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆಯ ಬಿ.ವಿ.ಗುಂಡಪ್ಪ, ಗುರುಪ್ರಸಾದ್, ಮಲ್ಲಿಕಾರ್ಜುನ್ ಮೊದಲಾದವರು ತಕ್ಷಣವೇ ಸ್ಥಳಕ್ಕೆ ಧಾವಿಸಿದರು. ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಆಗಮಿಸಿ ಮುಂದಿನ ಕ್ರಮ ಕೈಗೊಂಡರು.

ಈ ಯುವತಿಯ ತುಟಿಗಳು ವಿಶ್ವದಲ್ಲೇ ಅತಿ ದೊಡ್ಡವು!


russia-woman-with-world-biggest-lips
 
ಸೆಂಟ್ ಪೀಟರ್ಸ್ ಬರ್ಗ್, ನ. 25: ಶಸ್ತ್ರಚಿಕಿತ್ಸೆಯಿಂದ ಯುವತಿಯರು ತಮ್ಮ ಸ್ತನಗಳನ್ನು ದೊಡ್ಡದು ಮಾಡಿಕೊಳ್ಳುರುತ್ತಾರೆ ಎಂಬುದನ್ನು ಕಂಡು, ಕೇಳಿದ್ದ ಮಹಾಜನತೆಗೆ ಇಲ್ಲೊಂದು ಕುತೂಹಲಕಾರಿ ಸುದ್ದಿಯಿದೆ. ಇಲ್ಲೊಬ್ಬ ಯುವತಿ ಚಿಕಿತ್ಸೆ ಮೂಲಕ ತನ್ನ ತುಟಿಗಳನ್ನು ದೊಡ್ಡದು ಮಾಡಿಸಿಕೊಂಡಿದ್ದು, ಮುಂದೆ ಸ್ತನಕ್ಕೂ ಚಿಕಿತ್ಸೆ ಕೊಡಿಸಿಕೊಳ್ಳುವುದಾಗಿ ಘೋಷಿಸಿದ್ದಾಳೆ.

ಕ್ರಿಸ್ಟಿನಾ ರೆ ಎಂಬ 22 ವರ್ಷದ ಯುವತಿ ವಿಶ್ವದಲ್ಲೇ ಅತಿ ದೊಡ್ಡ ತುಟಿಗಳನ್ನು ಹೊಂದಿರುವ ಕುಖ್ಯಾತಿಗೆ ಪಾತ್ರಳಾಗಿದ್ದಾಳೆ (ಒಮ್ಮೆ ಪಕ್ಕದ ಚಿತ್ರ ನೋಡಿ). ಕ್ರಿಸ್ಟಿನಾ ರೆ ಎಂಬ ಈ ಯುವತಿ ಇದಕ್ಕಾಗಿ 4,000 ಪೌಂಡ್ ಹಣ ಕರ್ಚು ಮಾಡಿ 100ಕ್ಕೂ ಹೆಚ್ಚು ಸಿಲಿಕೋನ್ ಇಂಜೆಕ್ಷನ್ ಗಳನ್ನು ತೆಗೆದುಕೊಂಡು ತನ್ನ ತುಟಿಗಳನ್ನು ಬದಲಾಯಿಸಿಕೊಂಡಿದ್ದಾಳೆ.

ಆ ಇಂಜೆಕ್ಷನ್ ಗಳನ್ನು ತೆಗೆದುಕೊಳ್ಳುವಾಗ ಯಮ ಬಾಧೆಯಾಗುತ್ತಿತ್ತು. ಆದರೂ ದಾಖಲೆಗಾಗಿ ನಾನು ಈ ದುಸ್ಸಾಹಸಕ್ಕೆ ಕೈಹಾಕಿದೆ ಎಂದು ರಷ್ಯಾದ ಸೆಂಟ್ ಪೀಟರ್ಸ್ ಬರ್ಗಿನ ಕ್ರಿಸ್ಟಿನಾ ಹೇಳುತ್ತಾಳೆ.

ಅಂದಹಾಗೆ ಈ ತುಟಿ ಚಿಕಿತ್ಸೆಯ ನಂತರ ಆಕೆ ಗುರುತೇ ಸಿಗದಂತಾಗಿದ್ದಾಳೆ. ಆದರೂ, 'ನಾನೀಗ ಅದ್ಭುತವಾಗಿ ಕಾಣಿಸುತ್ತಿದ್ದೇನೆ. ರಸ್ತೆಯಲ್ಲಿ ಹೋಗುವಾಗ ಜನ ನನ್ನನ್ನೇ ದುರುಗುಟ್ಟಿಕೊಂಡು ನೋಡುತ್ತಿದ್ದಾರೆ. ನನಗೇನೂ ಮುಜುಗರವಿಲ್ಲ. ಎಂಜಾಯ್ ಮಾಡುತ್ತಿದ್ದೇನೆ' ಎಂದು ತನ್ನ ಕೆಳ ತುಟಿಯನ್ನು ಕಚ್ಚುತ್ತಾಳೆ.

ಸದ್ಯದಲ್ಲೇ ಸ್ತನಗಳಿಗೂ ಚಿಕಿತ್ಸೆ: 'ನನ್ನು ತುಟಿಗಳು ತುಂಬಾ ಚಿಕ್ಕದಾಗಿದ್ದವು. ನನ್ನ ಗೆಳತಿಯರದ್ದು ದೊಡ್ಡದಾಗಿದ್ದವು. ಇದರಿಂದ ಕೀಳರಿಮೆ ನನ್ನನ್ನು ಕಾಡುತ್ತಿತ್ತು. ಅದರಿಂದ ಹೊರಬರಲು ನನ್ನ ತುಟಿಗಳನ್ನು ಹಿಗ್ಗಿಸಿಕೊಂಡೆ. ಏನೇ ಆಗಲಿ ತುಟಿಗಳು (ನನ್ನತರ) ದೊಡ್ಡದಾಗಿದ್ದು, ಆಕರ್ಷಕವಾಗಿರಬೇಕು ಬಿಡ್ರಿ' ಎಂದು ಪ್ಚ್ ಎನ್ನುತ್ತಾಳೆ ಕ್ರಿಸ್ಟಿನಾ.

'ನಾನು ಇಷ್ಟಕ್ಕೇ ಸುಮ್ಮನಾಗುವುದಿಲ್ಲ. ಅವುಗಳನ್ನು ಇನ್ನೂ ದೊಡ್ಡದಾಗಿ ಮಾಡಿಸಿಕೊಳ್ಳುತ್ತೇನೆ' ಎಂಬ ಬೆದರಿಕೆಯನ್ನೂ ಹಾಕಿದ್ದಾಳೆ ಈ ಪುಣ್ಯಾತ್ತಗಿತ್ತಿ! ಅಷ್ಟೇ ಅಲ್ಲ. 'ನನ್ನ ಸ್ತನಗಳನ್ನೂ ದೊಡ್ಡದಾಗಿಸಿಕೊಳ್ಳುತ್ತೇನೆ. ಸದ್ಯಕ್ಕೆ C ಆಕಾರದಲ್ಲಿರುವ ನನ್ನ ಸ್ತನಗಳನ್ನು DD ಆಕಾರಕ್ಕೆ ತೀಡಿಕೊಳ್ಳುವೆ' ಎಂದು ಕುಲುಕುತ್ತಾಳೆ ತುಟಿ ಬ್ಯೂಟಿ ಕ್ರಿಸ್ಟಿನಾ.