ಪುಟಗಳು

Bhavageethe - ni hinga nodabyda ನೀ ಹಿಂಗ ನೋಡ ಬ್ಯಾಡ ನನ್ನ...

Bhavageethe - onde baari nanna ಒಂದೆ ಬಾರಿ ನನ್ನ ನೋಡಿ...

Maari Nodaka Baara

PREETIYA PARIWALA.MPG

sadArame - Kalla's Part. ಸದಾರಮೆ ಕಳ್ಳನ ಭಾಗ. Scene 6.

ಡೆಂಗ್ಯು ಜ್ವರ ಮತ್ತು ಚಿಕ್ಕನ್ಗುನ್ಯ

Tumkur One

World Aids Day-2011

ಪೇಜಾವರಶ್ರೀಗಳಿಗೆ ದಲಿತರ ಬಹಿರಂಗ ಸವಾಲ್


Dalits challenge Pejawar Seer
 
ಸುಳ್ಯ, ನ.30: ಕುಕ್ಕೆ ಸುಬ್ರಮಣ್ಯ ಕ್ಷೇತ್ರದಲ್ಲಿ ನಡೆಯುವ ಮಡೆಸ್ನಾನವನ್ನು ಬೆಂಬಲಿಸಿ ಹೇಳಿಕೆ ನೀಡಿರುವ ಪೇಜಾವರ ಶ್ರೀ ವಿಶ್ವೇಶತೀರ್ಥರಿಗೆ ದಲಿತ ಸಂಘಟನೆ ಮುಖಂಡರು ಬಹಿರಂಗ ಸವಾಲು ಎಸೆದಿದ್ದಾರೆ.

ದಲಿತ ಕೇರಿಗಳಲ್ಲಿ ಪಾದಯಾತ್ರೆ, ಅಸ್ಪೃಶ್ಯತೆ ವಿರೋಧ, ಉಪವಾಸ ಸತ್ಯಾಗ್ರಹ ಮಾಡುವ ಪೇಜಾವರಶ್ರೀಗಳು ಸುಬ್ರಹ್ಮಣ್ಯದಲ್ಲಿ ಮಾತ್ರ ಮೂಢನಂಬಿಕೆ ಬಿತ್ತುತ್ತಿರುವುದು ಏಕೆ?

ಪುರೋಹಿತಶಾಹಿಗಳ ಮಡೆಸ್ನಾನದ ಬಗ್ಗೆ ಯಾಕೆ ಮೌನ ವಹಿಸಿದ್ದಾರೆ? ಕುಕ್ಕೆ ಮಠದ ಸ್ವಾಮಿಯ ಆದೇಶದ ಮೇರೆಗೆ ನಡೆಯುವ ಈ ಅನಿಷ್ಠವನ್ನು ನೈತಿಕತೆ ಬದ್ಧತೆ, ದೈರ್ಯವಿದ್ದರೆ ಪೇಜಾವರರು ವಿರೋಧಿಸಲಿ. ಆಗ ನಿಮ್ಮ ದಲಿತ ಕಾಳಜಿ ಬೂಟಾಟಿಕೆಯೋ, ಅಸಲಿಯೋ ಗೊತ್ತಾಗುತ್ತದೆ.

ತಪ್ಪಿದಲ್ಲಿ ಪೇಜಾವರ ಶ್ರೀ ಸಭೆಗಳಿಗೆ ಕಪ್ಪು ಭಾವುಟ ತೋರಿಸಿ ಪ್ರತಿಭಟಿಸಲಾಗುವುದು. ಈ ಪದ್ಧತಿ ಅನಿಷ್ಟವಲ್ಲ ಎಂಬುದಾದರೆ ಸ್ವಾಮೀಜಿಗಳು ಹರಕೆ ಹೊತ್ತುಕೊಂಡು ಸೇವೆ ಉರುಳು ಸೇವೆ ಕೈಗೊಳ್ಳಲಿ, ದಲಿತರ ಅಜ್ಞಾನವನ್ನು ಬಂಡವಾಳ ಮಾಡಿಕೊಂಡು ನಾಟಕವಾಡುವುದನ್ನು ನಿಲ್ಲಿಸಲಿ ಎಂದು ದಲಿತ ಮುಖಂಡ ಶಿವರಾಮು ಗುಡುಗಿದ್ದಾರೆ

World Aids Day