ಪುಟಗಳು

AKSHAYA TRITIYA

ಅಕ್ಷಯ ತೃತೀಯ

ಏ.27ರಂದು ಕೆಎಸ್ಸಾರ್ಟಿಸಿ, ಬಿಎಂಟಿಸಿ ಬಸ್ ಇಲ್ಲ

 
KSRTC, BMTC bus employees strike

ಬೆಂಗಳೂರು, ಏ.22: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಅದರ ಅಂಗ ಸಂಸ್ಥೆಗಳಾದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ), ವಾಯುವ್ಯ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ, ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ಬಸ್ ಗಳು ಶುಕ್ರವಾರ, ಏ.27ರಂದು ರಸ್ತೆಗಿಳಿಯುವುದು ಅನುಮಾನ. ಈ ಎಲ್ಲಾ ಸಂಸ್ಥೆಯ ಲಕ್ಷಾಂತರ ನೌಕರರು ಅನಿರ್ಧಿಷ್ಟ ಕಾಲ ಮುಷ್ಕರ ಹೂಡುತ್ತಿದ್ದಾರೆ.

ಏ.27ರ ಮುಂಜಾನೆಯಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವಂತೆ, ಸಂಸ್ಥೆಯ ಆರು ಕಾರ್ಮಿಕ ಸಂಘಗಳ ಜಂಟಿ ಕಾರ್ಯಕಾರಿ ಸಮಿತಿ ಭಾನುವಾರ(ಏ.22) ಕರೆ ನೀಡಿದೆ.

ಮುಷ್ಕರಕ್ಕೆ ಕಾರಣಗಳೇನು?: ಸಾರ್ವಜನಿಕ ಕ್ಷೇತ್ರದಲ್ಲಿ ಸಾರಿಗೆ ಸಂಸ್ಥೆಗಳನ್ನು ಸ್ಥಾಪಿಸಿದ ಮೂಲ ಉದ್ದೇಶವನ್ನು ಮರೆತು ಲಾಭ ಗಳಿಸುವುದೇ ಏಕೈಕ ಗುರಿ ಎಂಬಂತೆ ಪ್ರಯಾಣಿಕರನ್ನು ಸುಲಿಗೆ ಮಾಡಲಾಗುತ್ತಿದೆ.

* ದಕ್ಷಿಣ ಭಾರತದ ಯಾವುದೇ ರಾಜ್ಯದಲ್ಲಿ ವಿಧಿಸಿರುವ ದರ ಕ್ಕಿಂತ ಶೇ 20 ರಿಂದ 35ರಷ್ಟು ಪ್ರಯಾಣದರ ಹಾಗೂ ಲಗೇಜ್ ದರವನ್ನು ಹೆಚ್ಚಿಸಲಾಗಿದೆ.

* ಸಂಸ್ಥೆಯ ನೀತಿಯ ಕಾರಣ, ಪ್ರಯಾಣಿಕರು ಖಾಸಗಿ ವಾಹನ, ಸ್ವಂತ ವಾಹನ ಬಳಸುತ್ತಿದ್ದಾರೆ. ಸಾರ್ವಜನಿಕ ವಾಹನಕ್ಕೆ ಬೆಲೆ ಇಲ್ಲದ್ದಂತಾಗಿದೆ.

* ಸಂಸ್ಥೆ ನೌಕರರನ್ನು ಆಡಳಿತಾತ್ಮಕ ಕಾರಣ ನೀಡಿ ಎಲ್ಲೆಂದರಲ್ಲಿ ವರ್ಗಾವಣೆ ಮಾಡಿ ಶೋಷಣೆ ನೀಡಲಾಗುತ್ತಿದೆ.

ಸರ್ಕಾರದ ಪ್ರತಿನಿಧಿಗಳು, ಸಂಸ್ಥೆ ಪ್ರತಿನಿಧಿಗಳು ಮತ್ತು ಕಾರ್ಮಿಕ ಸಂಘಗಳ ಜಂಟಿ ಸಮಿತಿ ಪ್ರತಿನಿಧಿಗಳ ತ್ರಿಪಕ್ಷೀಯ ಒಪ್ಪಂದ ವಾಗಬೇಕು. ಇಲ್ಲವೇ ಸಾರ್ವಜನಿಕರನ್ನೂ ಸೇರಿಸಿಕೊಂಡು ಚತುಷ್ಪಕ್ಷೀಯ ಒಪ್ಪಂದ ಆಗುವ ತನಕ ಮುಷ್ಕರ ಮುಂದುವರೆಯಲಿದೆ ಎಂದು ಜಂಟಿ ಸಮಿತಿ ಪರವಾಗಿ ವಿನಯ್ ಕುಮಾರ್ ಹೇಳಿದ್ದಾರೆ.

ಈ ಮುಷ್ಕರಕ್ಕೆ AITUC, CITU, Indian National Trade union congress (INTUC), ಎಸ್ ಸಿ/ಎಸ್ ಟಿ ಸಂಘಟನೆ ಬೆಂಬಲ ವ್ಯಕ್ತಪಡಿಸಿದೆ.

ಯಾರಿಗೆ ಸಾಲುತ್ತೆ ಸಂಬಳ: 30 ವರ್ಷ ಅನುಭವ ಇದ್ದರೂ 30 ಸಾವಿರ ರು ಸಂಬಳ ಕೈಗೆ ಸಿಗುತ್ತಿಲ್ಲ. ಡ್ರೈವರ್, ಕಂಡೆಕ್ಟರ್ ಸಂಬಳ 5-6 ಸಾವಿರ ರು ಇರುತ್ತೆ. ಟಿಸಿಗಳು 4,500 ರು ಸಂಬಳ ಹೆಚ್ಚಿಗೆ ಬೇಕು ಎನ್ನುತ್ತಿದ್ದಾರೆ.

ಸಾರಿಗೆ ಸಂಸ್ಥೆ ತಲೆ ಕೆಡಿಸಿಕೊಂಡಿಲ್ಲ: 1,10,000 ಚಾಲಕರು ಮುಷ್ಕರ ಹೂಡಿದರೆ ಅದು ದೊಡ್ಡ ದಾಖಲೆ ಎನ್ನಬಹುದು. ನೋಡ್ತಾ ಇರಿ 400 ಜನ ಬರೋಲ್ಲ ಸ್ಟ್ರೈಕ್ ಗೆ. ಪ್ರತಿ ದಿನ 4-5000 ಜನ ರಜೆಯಲ್ಲಿರುತ್ತಾರೆ. ಸಾರ್ವಜನಿಕರು ಆತಂಕ ಪಡಬೇಕಾಗಿಲ್ಲ ಎಂದು ಕೆಎಸ್ಸಾರ್ಟಿಸಿ ಅಧಿಕಾರಿಗಳು ಹೇಳುತ್ತಿದ್ದಾರೆ. ಏನಾಗುತ್ತೋ ಕಾದು ನೋಡಬೇಕಿದೆ.

ಶ್ರೀ ಮಣ್ಣೆಮ್ಮ ದೇವಿಯ ಜಾತ್ರಾ ಮಹೋತ್ಸವ

ಶ್ರೀ ಮಣ್ಣೆಮ್ಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ 
ಶ್ರೀ ರತ್ನಪುರಿ ಸೋಮನಾಥ ಕೃಪಾ ಪೋಷಿತ ನಾಟಕ ಮಂಡಳಿಯ ವತಿಯಿಂದ 
ಶ್ರೀ ಕೃಷ್ಣ ಸಂಧಾನ ಅಥವಾ ಕುರುಕ್ಷೇತ್ರ 
ಎಂಬ ಪೌರಾಣಿಕ ನಾಟಕವನ್ನು ಅಭಿನಯಿಸುತ್ತಲಿದ್ದೇವೆ. 
ಕಲಾಭಿಮಾನಿಗಳಾದ ತಾವುಗಳು ಹೆಚ್ಚಿನ ಜನಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂಬುದಾಗಿ ಸವಿನಯ ಪ್ರಾರ್ಥನೆ.
ದಿನಾಂಕ: ೧೩.೦೪.೨೦೧೨ 
ಸ್ಥಳ:ಶ್ರೀ ಮಣ್ಣೆಮ್ಮ ದೇವಿ ರಥೋತ್ಸವ ಬೀದಿ ಮಣ್ಣೆ.

 

ಹುರ್ರೆ, ಆದಾಯ ತೆರಿಗೆ ಮಿತಿ 2 ಲಕ್ಷ ರು.ಗೆ ಏರಿಕೆ




Tax exemption limit raised to Rs. 2 lakhs
ನವದೆಹಲಿ, ಮಾ. 16 : ದೇಶದ 85 ಲಕ್ಷ ಸಂಬಳದಾರರಲ್ಲಿ ನಗು ಅರಳುವಂತೆ ಮಾಡಿರುವ ಕೇಂದ್ರ ವಿತ್ತ ಸಚಿವ ಪ್ರಣಬ್ ಮುಖರ್ಜಿ ಅವರು, 2012-13ನೇ ಸಾಲಿನ ಬಜೆಟ್ ಮಂಡನೆಯಲ್ಲಿ, ನಿರೀಕ್ಷೆಯಂತೆ ಆದಾಯ ತೆರಿಗೆ ಮಿತಿಯನ್ನು 1.8 ಲಕ್ಷ ರು.ನಿಂದ 2 ಲಕ್ಷ ರು.ಗೆ ಏರಿಸಿದ್ದಾರೆ. ಸಂಸದೀಯ ಸ್ಥಾಯಿ ಸಮಿತಿ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 3 ಲಕ್ಷ ರು.ಗೆ ಏರಿಸಬೇಕೆಂದು ಶಿಫಾರಸು ಮಾಡಿತ್ತು.

ಇದರ ಪ್ರಕಾರ, 2 ಲಕ್ಷ ರು.ವರೆಗೆ ಸಂಬಳ ಪಡೆಯುವವರು ಆದಾಯ ತೆರಿಗೆ ಕಟ್ಟಬೇಕಾಗಿಲ್ಲ. 2ರಿಂದ 5 ಲಕ್ಷ ರು. ಸಂಬಳ ಪಡೆಯುವವರು ಶೇ.10ರಷ್ಟು ತೆರಿಗೆ ಕಟ್ಟಬೇಕು. 5 ಲಕ್ಷ ರು.ನಿಂದ 10 ಲಕ್ಷ ರು. ಸಂಬಳ ಗಳಿಸುವವರು ಶೇ.20ರಷ್ಟು ಮತ್ತು 10 ಲಕ್ಷ ರು.ಗಿಂತ ಹೆಚ್ಚು ಆದಾಯ ಪಡೆಯುವವರು ಶೇ.30ರಷ್ಟು ಸಂಬಳ ಪಡೆಯಬೇಕು.

ಕಳೆದ ಮುಂಗಡ ಪತ್ರದಲ್ಲಿ ಶೇ.20ರಷ್ಟು ತೆರಿಗೆ ಕಟ್ಟಬೇಕಾದವರ ಆದಾಯ ಮಿತಿಯನ್ನು 8 ಲಕ್ಷಕ್ಕೆ ನಿಗದಿಪಡಿಸಲಾಗಿತ್ತು. ಈ ಬಾರಿ ಆ ವರ್ಗದವರಿಗೆ ಭರ್ತಿ 2 ಲಕ್ಷ ರು. ಏರಿಕೆ ದೊರೆತಿದೆ. ಅಂದರೆ, ಕಳೆದ ಬಾರಿ 8 ಲಕ್ಷಕ್ಕಿಂತ ಹೆಚ್ಚಿಗೆ ಆದಾಯವಿದ್ದ ನೌಕರರು ಶೇ.20ರಷ್ಟು ತೆರಿಗೆ ಕಟ್ಟಬೇಕಾಗಿತ್ತು. ಆದರೆ, ಈ ಬಾರಿಯಿಂದ 10 ಲಕ್ಷ ರು.ಗಿಂತ ಆದಾಯ ಹೆಚ್ಚಿರುವವರು ಶೇ.20ರಷ್ಟು ತೆರಿಗೆ ಕಟ್ಟಬೇಕು.

ಆದಾಯ ತೆರಿಗೆ ಮಿತಿಯನ್ನು 2 ಲಕ್ಷ ರು.ಗೆ ಏರಿಸಿದ್ದಾರಾದರೂ, ಇದು ಮಹಿಳಾ ನೌಕರರಿಗೆ ಮತ್ತು ಹಿರಿಯ ನಾಗರಿಕರಿಗೂ ಅನ್ವಯವಾಗುತ್ತದಾ ಎಂಬುದನ್ನು ಪ್ರಣಬ್ ಮುಖರ್ಜಿ ಪ್ರಸ್ತಾಪಿಸಿಲ್ಲ. ಮತ್ತೊಂದು ಗಮನಾರ್ಹ ಸಂಗತಿಯೆಂದರೆ, 5 ಲಕ್ಷ ರು.ವರೆಗೆ ಸಂಬಳ ಪಡೆಯುವವರು ಯಾವುದೇ ಇನ್ಕಂ ಟ್ಯಾಕ್ಸ್ ರಿಟರ್ನ್ ಫಾರಂ ತುಂಬಬೇಕಾಗಿಲ್ಲ.

ರಿಟರ್ನ್ ಫೈಲ್ ಮಾಡುವುದು ಕ್ಷೇಮ : 5 ಲಕ್ಷಕ್ಕಿಂತ ಕಡಿಮೆ ಆದಾಯ ಇರುವವರು ರಿಟರ್ನ್ ಫೈಲ್ ಮಾಡಬೇಕಾಗಿಲ್ಲವಾದರೂ, ನಮ್ಮ ಹೂಡಿಕೆಯ ಆಧಾರದ ಮೇಲೆ ರಿಫಂಡ್ ಬರಬೇಕಿದ್ದರೆ ಅಥವಾ ಯಾವುದೇ ಸಾಲ ಪಡೆಯಲು ಯತ್ನಿಸುತ್ತಿದ್ದರೆ ಅಂಥವರು ಇನ್ಕಂ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡುವುದು ಒಳಿತು.

ಬಜೆಟ್: ಯಾವುದು ಅಗ್ಗ, ಯಾವುದು ತುಟ್ಟಿ?


 

Union Budget 2012-13
ನವದೆಹಲಿ, ಮಾ.16: ಬಜೆಟ್ ನಂತರ ಜನ ಸಾಮಾನ್ಯರು ಕೇಳುವ ಮೊಟ್ಟ ಮೊದಲ ಪ್ರಶ್ನೆ ಯಾವ ವಸ್ತು ಬೆಲೆ ಏರಿದೆ? ಯಾವುದು ಕಡಿಮೆಯಾಗಿದೆ?.

ಐಷಾರಾಮಿ ವಸ್ತು, ಪ್ರಯಾಣ, ವಾಸ್ತವ್ಯದ ಮೇಲೆ ತೆರಿಗೆ ಹೆಚ್ಚಿಸಿ ದುಬಾರಿಯಾಗಿಸಿರುವ ಪ್ರಣಬ್, ದೈನಂದಿನ ಅಗತ್ಯ ವಸ್ತುಗಳ ಬೆಲೆ ಇಳಿಕೆಗೆ ಹೆಚ್ಚು ಒತ್ತು ನೀಡಿದ್ದಾರೆ. ಈ ಮೂಲಕ ಮಧ್ಯಮ ವರ್ಗದ ಜನ ಆಶೋತ್ತರಕ್ಕೆ ಅನುಗುಣವಾಗಿ ಬಜೆಟ್ ನಲ್ಲಿ ಏರಿಕೆ, ಇಳಿಕೆ ಮಾಡಲಾಗಿದೆ.

ತುಟ್ಟಿ:* ಚಿನ್ನ, ಸಿಗರೇಟ್, ಮದ್ಯ, ಸುಗಂಧ ದ್ರವ್ಯ, ವಜ್ರ, ಆಮದು ಸೈಕಲ್, ಕಂಪ್ಯೂಟರ್ ತುಟ್ಟಿ.
* ಬೈಸಿಕಲ್ ಬೆಲೆ ಏರಿಕೆ. ವಿದೇಶಿ ಸೈಕಲ್ ತೆರಿಗೆ ಶೇ 10 ರಿಂದ ಶೇ. 30ಕ್ಕೆ ಏರಿಕೆ.
* ವಿಮಾನಯಾನ, ಹೋಟೆಲ್, ಕಾರು, ಟಿವಿ, ಎಸಿ, ಫ್ರೀಡ್ಜ್ ಹಾಗೂ ನಗರವಾಸಿಗಳ ಸೌಲಭ್ಯಗಳು ತುಟ್ಟಿ.
* ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನಯಾನ, ಬ್ರಾಂಡೆಡ್ ಬಟ್ಟೆ ತುಟ್ಟಿ.
* ದೊಡ್ಡ ಕಾರುಗಳ ತೆರಿಗೆ ಶೇ 22 ರಿಂದ ಶೇ 24ಕ್ಕೆ ಏರಿಕೆ.
* ವಾಹನ ಆಮದು ತೆರಿಗೆ ಶೇ. 50 ರಿಂದ 75ಕ್ಕೆ ಏರಿದೆ.
* ಬ್ಯಾಂಕಿಂಗ್ ಸೇವೆ ತುಟ್ಟಿ.
* ಚಿನ್ನದ ಗ್ರಾಹಕ ತೆರಿಗೆ ಶೇ 2 ರಿಂದ ಶೇ 4ಕ್ಕೆ ಏರಿಕೆ.

ಅಗ್ಗ:
* ಕ್ಯಾನ್ಸರ್, ಎಚ್ ಐವಿ ಔಷಧಿಗಳು ಬೆಲೆ ಇಳಿಕೆ.
* ಐಯೋಡಿನ್ ಯುಕ್ತ ಉಪ್ಪು, ಬೆಂಕಿಪೆಟ್ಟಿಗೆ, ಸೋಯಾ ಉತ್ಪನ್ನಗಳು ಅಗ್ಗ.
* ಸೌರ ಶಕ್ತಿ ದೀಪ, ಎಲ್ ಇಡಿ ಬಲ್ಬ್, ಸಿಎಫ್ ಎಲ್ ಅಗ್ಗ.
* ಸೋಲಾರ್ ಉಪಕರಣ, ಸಾಬೂನು, ಎಲ್ ಸಿಡಿ, ಎಲ್ ಇಡಿ ಟಿವಿ ಅಗ್ಗ