ಪುಟಗಳು

ರಹಮತ್ ತರೀಕೆರೆ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಾಗಿ ಅಭಿನಂದನೆಗಳು

ರಹಮತ್ ತರೀಕೆರೆ : ಕತ್ತಿಯಂಚಿನ ದಾರಿ (೨೦೦೬)

ಈ ಪುಸ್ತಕದ ಶೀರ್ಷಿಕೆಯು, ನಮ್ಮ ಲೇಖಕರೊಬ್ಬರು ಸಾಹಿತ್ಯ ಸಮ್ಮೇಳನದಲ್ಲಿ ಮಾಡಿದ ಭಾಷಣಕ್ಕೆ ಮಾಡಿದ ಪ್ರತಿಕ್ರಿಯೆಯಿಂದ ಬಂದಿದ್ದು;  ಇದು ನಮ್ಮ ಸುತ್ತ ಏರ್ಪಟ್ಟಿರುವ ಪರಿಸರಕ್ಕೂ ಅದನ್ನು ಮುಖಾಮುಖಿ ಮಾಡುತ್ತ ಹುಟ್ಟುತ್ತಿರುವ ನಮ್ಮ ಬರೆಹಕ್ಕೂ ನಮಗೂ ಮಧ್ಯೆ ಹುಟ್ಟಿರುವ ಬಿಕ್ಕಟ್ಟುಗಳಿಗೆ ರೂಪಕವಾಗಬಲ್ಲದು ಎಂದು ಅನಿಸಿತು. ಸಾಹಿತ್ಯ ಕೃತಿಯ ಹೊರಗಿನ ಆಕೃತಿ ಮತ್ತು ಒಳಗಿನ ಇರುವ ಆಶಯ – ಇವುಗಳ ನಡುವಣ ಸಂಬಂಧದಲ್ಲಿ ವೈರುಧ್ಯಗಳಿರುತ್ತವೆ. ಈ ವೈರುಧ್ಯಗಳ ನಡುವಣ ಸೆಳೆದಾಟಗಳ ಶೋಧ ಮಾಡುವುದು ಸಾಹಿತ್ಯ ವಿಮರ್ಶೆಗೆ ಯಾವತ್ತೂ ಸವಾಲು. ಇಲ್ಲಿನ ಲೇಖನಗಳಲ್ಲಿ ಇಂತಹದೊಂದು ಶೋಧದ ಸಣ್ಣ ಯತ್ನವಿದೆ. ಸಾಹಿತ್ಯ ವಿಮರ್ಶೆಯಲ್ಲಿ ನಿರ್ದಿಷ್ಟ ವಾದವನ್ನು ಇಟ್ಟುಕೊಂಡು ಅದಕ್ಕೆ ಬೇಕಾದ ಸಾಕ್ಷ್ಯಗಳನ್ನು ಗುಡ್ಡೆ ಹಾಕಿಕೊಂಡು ಪ್ರತಿಪಾದನೆ ಮಾಡುವುದು ಸುಲಭ. ಆದರೆ ಕೃತಿಗಳು ಬಿಟ್ಟುಕೊಡುವ ಹಲವು ವಿಭಿನ್ನ ಕೆಲವೊಮ್ಮೆ ಪರಸ್ಪರ ವಿರುದ್ಧ ದನಿಗಳನ್ನು ಹಿಡಿದು, ಒಂದಕ್ಕೆ ತೆತ್ತುಕೊಳ್ಳದೆ, ಮತ್ತೊಂದನ್ನು ಕಡೆಗಣಿಸದೆ ಅರ್ಥಮಾಡಿಕೊಳ್ಳುವುದು ಕಷ್ಟದ ಕೆಲಸ; ಈ ಕಷ್ಟ ವಿಮರ್ಶೆಯದು ಮಾತ್ರವಲ್ಲ, ನನ್ನನ್ನೂ ಒಳಗೊಂಡಂತೆ ನನ್ನ ತಲೆಮಾರಿನ ಅನೇಕರ ನಡೆ ಮತ್ತು ನುಡಿಗಳ ನಡುವೆ ಕಾಣಿಸಿರುವ ಕಷ್ಟ ಕೂಡ ಇದೊಂದು ಬಿಕ್ಕಟ್ಟಿನ ಕಾಲ; ಚರಿತ್ರೆಯಲ್ಲಿ ಬಿಕ್ಕಟ್ಟಿಲ್ಲದ ಕಾಲವಾದರೂ ಯಾವುದು? ಆದರೆ ನಮ್ಮ ನಾಡಿನ ಚರಿತ್ರೆಯಲ್ಲಿ ಯಾವತ್ತೂ ಇಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿರಲಿಲ್ಲ. ಜಗತ್ತಿನ ದೊಡ್ಡ ಮಿಲಿಟರಿ ಶಕ್ತಿಗಳು, ಕೋಮುವಾದ, ಪ್ರಭುತ್ವಗಳು ಹುಟ್ಟಿಸಿರುವ ಕ್ರೌರ್ಯ, ಅದಕ್ಕೆ ಎದುರಾಗಿ ಹುಟ್ಟಿಕೊಂಡ ಜನರ ಪ್ರತಿರೋಧಗಳು, ಮಧ್ಯಮವರ್ಗದ ಅವಕಾಶವಾದಿ ವರ್ತನೆ, ಜನರಿಗಾಗಿ ಕೆಲಸ ಮಾಡುವ ಚಳುವಳಿಗಾರರ ದಮನ – ಇವೆಲ್ಲವೂ ನಮ್ಮ ಓದು ಮತ್ತು ಬರೆಹದ ಮೇಲೆ ಹೇಗೋ ಆವರಿಸಿಕೊಂಡಿವೆ. ಇವನ್ನು ಮರೆತು ಬರೆಯುವಂತಿಲ್ಲ; ಮರೆಯದೆ ಬರೆದರೆ, ಬರೆದ ಬರೆಹವು ಆತ್ಮವಿಶ್ವಾಸ ಕೊಡುವುದಕ್ಕೆ ಬದಲಾಗಿ ಪ್ರಶ್ನೆಯಾಗಿ ಎದುರು ನಿಂತು ಕಾಡುತ್ತದೆ. ಇದನ್ನೆ ಕತ್ತಿಯಂಚಿನ ಹಾದಿಯಲ್ಲಿ ನಡೆವ ಕಷ್ಟ ಎಂದು ನಾನು ಭಾವಿಸಿದ್ದೇನೆ. ಕತ್ತಿಯಲುಗಿನ ಮೇಲೆ ನಡೆದರೆ ಕಾಲು ಕತ್ತರಿಸಿ ಹೋಗುತ್ತದೆ; ಬಾಗಿ ಎತ್ತಿಕೊಂಡರೆ ಕೈಯ ಆಯುಧವಾಗುತ್ತದೆ; ಸ್ವವಿಮರ್ಶೆಯನ್ನಾಗಿ ಮಾಡಿ ಚುಚ್ಚಿಕೊಂಡರೆ, ಒಡಲಲ್ಲಿ ಮುರಿದು ನೋವುಂಟು ಮಾಡುತ್ತದೆ……
- ರಹಮತ್ ತರೀಕೆರೆ
(ಮುನ್ನುಡಿಯಿಂದ)

ಜೀವ ಕಲಾ ಕನ್ನಡ ಸೇವಾ ಸಂಘ, ಮಣ್ಣೆ (೩ನೇ ವರ್ಷದ ಕನ್ನಡ ರಾಜ್ಯೋತ್ಸವದ ಸಂಬ್ರಮಾಚರಣೆ) KANNADA RAJYOTSAVA (JKKSS MANNE).MOV

ಕ್ರಿಕೆಟ್ ಹಾಸ್ಯ(ಮೈಸೂರ್ ಆನಂದ್)

Mimikry

ರಾಜ್,ವಿಷ್ಣು,ಅಂಬಿ ಧ್ವನಿ ಅನುಕರಣೆ( ಮಿಮಿಕ್ರಿ ದಯಾನಂದ್)

pranesh comedy part 1...Comments are most Welcome

Ninnavanu Ravi belagere3

ಕನ್ನಡ ಕನ್ನಡಿಗರ ಬದುಕಿನ ಭಾಷೆ ಆಗಬೇಕು.

ಕರ್ನಾಟಕದಲ್ಲಿ ಕನ್ನಡಿಗನಾಗಿರು

ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶದ ಸಮಯದಲ್ಲಿ ಕ.ರ.ವೇ. ಅಧ್ಯಕ್ಷರಾದ ಟಿ.ಏ. ನಾರಾಯಣ ಗೌಡರು ಮಾಡಿದ ಭಾಷಣ