ಸಿಎಲ್ ಟಿ20 ಕ್ರಿಕೆಟ್ ಸಂಪೂರ್ಣ ವೇಳಾಪಟ್ಟಿ
ಬೆಂಗಳೂರು, ಸೆ.21: ಚಾಂಪಿಯನ್ಸ್ ಲೀಗ್ ಟ್ವೆಂಟಿ 20 ಕ್ರಿಕೆಟ್ ನ ಬಿಸಿ ಸೆ.23 ರಿಂದ ಆರಂಭವಾಗಲಿದೆ. ಮೂರನೇ ಆವೃತ್ತಿಯ ಅರ್ಹತಾ ಸುತ್ತಿನ ಪಂದ್ಯಗಳು ಸೆ.21ರಂದು ಕೊನೆಗೊಳ್ಳಲಿದೆ.
* ಸೆ. 23 ರಿಂದ ಅಕ್ಟೋಬರ್ 3 ರವರೆಗೆ ಬೆಂಗಳೂರು, ಚೆನ್ನೈ, ಹೈದರಾಬಾದ್ ಹಾಗೂ ಕೋಲ್ಕತ್ತಾದಲ್ಲಿ ಪಂದ್ಯಾವಳಿಗಳು ನಡೆಯಲಿವೆ.
* ಅರಂಭದ ಪಂದ್ಯ ಸೆ. 23 ರಂದು ಬೆಂಗಳೂರಿನಲ್ಲಿ ನಡೆಯಲಿದೆ.
* ಚೆನ್ನೈನಲ್ಲಿ ಅಕ್ಟೋಬರ್ 9 ರಂದು ಫೈನಲ್ ನಡೆಯಲಿದೆ.
* 13 ತಂಡಗಳು ಭಾಗವಹಿಸಲಿದ್ದು, 6 ತಂಡಗಳು ಅರ್ಹತಾ ಸುತ್ತಿನಲ್ಲಿ ಆಡಲಿದೆ.
* ಮೊದಲ ಹಂತದಲ್ಲಿ ಅರ್ಹತಾ ಸುತ್ತು ಹೈದರಾಬಾದಿನಲ್ಲಿ ಸೆ. 19 ರಿಂದ 21ರ ವರೆಗೆ ನಡೆಯಲಿದೆ.
ಎ ಗುಂಪು: ಚೆನ್ನೈ ಸೂಪರ್ ಕಿಂಗ್ಸ್(ಭಾರತ), ಕೇಪ್ ಕೋಬ್ರಾಸ್(ದಕ್ಷಿಣ ಆಫ್ರಿಕಾ), ನ್ಯೂ ಸೌಥ್ ವೇಲ್ಸ್(ಆಸ್ಟ್ರೇಲಿಯಾ), ಮುಂಬೈ ಇಂಡಿಯನ್ಸ್(ಭಾರತ), ಟ್ರಿನಿಡಾಡ್ ಮತ್ತು ಟೊಬ್ಯಾಗೋ(ವೆಸ್ಟ್ ಇಂಡೀಸ್)
ಬಿ ಗುಂಪು: ರಾಯಲ್ ಚಾಲೆಂಜರ್ಸ್ ಬೆಂಗಳೂರು(ಭಾರತ), ವಾರಿಯರ್ಸ್(ದಕ್ಷಿಣ ಆಫ್ರಿಕಾ), ಸೌಥ್ ಆಸ್ಟ್ರೇಲಿಯನ್ ರೆಡ್ ಬ್ಯಾಕ್ಸ್(ಆಸ್ಟ್ರೇಲಿಯಾ), Q1, Q2

| ದಿನಾಂಕ | ತಂಡಗಳು | ಸ್ಥಳ | ಸಮಯ |
| ಸೆ.23, ಶುಕ್ರವಾರ | ಆರ್ ಸಿಬಿ vs ವಾರಿಯರ್ಸ್ | ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು | ರಾತ್ರಿ 8 ಗಂಟೆ |
| ಸೆ.24, ಶನಿವಾರ | ಕೇಪ್ ಕೋಬ್ರಾಸ್ vs ನ್ಯೂ ಸೌಥ್ ವೇಲ್ಸ್ ಬ್ಲೂಸ್ | ಚಿದಂಬರಂ ಸ್ಟೇಡಿಯಂ, ಚೆನ್ನೈ | ಸಂಜೆ 4 ಗಂಟೆ |
| ಸೆ.24, ಶನಿವಾರ | ಚೆನ್ನೈ ಸೂಪರ್ ಕಿಂಗ್ಸ್ vs ಮುಂಬೈ ಇಂಡಿಯನ್ಸ್ | ಚಿದಂಬರಂ ಸ್ಟೇಡಿಯಂ, ಚೆನ್ನೈ | ರಾತ್ರಿ 8 ಗಂಟೆ |
| ಸೆ.25, ಭಾನುವಾರ | ಆಸ್ಟ್ರೇಲಿಯನ್ ರೆಡ್ ಬ್ಯಾಕ್ಸ್ vs ವಾರಿಯರ್ಸ್ | ಹೈದರಾಬಾದ್ | ಸಂಜೆ 4 ಗಂಟೆ |
| ಸೆ.25, ಭಾನುವಾರ | Q1 vs Q3 | ಹೈದರಾಬಾದ್ | ರಾತ್ರಿ 8 ಗಂಟೆ |
| ಸೆ.26, ಸೋಮವಾರ | ಮುಂಬೈ ಇಂಡಿಯನ್ಸ್ vs ಟ್ರಿನಿಡಾಡ್ ಅಂಡ್ ಟೊಬಾಗೊ | ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು | ರಾತ್ರಿ 8 ಗಂಟೆ |
| ಸೆ.27, ಮಂಗಳವಾರ | Q1 vs ಸೌಥ್ ಆಸ್ಟ್ರೇಲಿಯನ್ ರೆಡ್ ಬ್ಯಾಕ್ಸ್ | ಹೈದರಾಬಾದ್ | ರಾತ್ರಿ 8 ಗಂಟೆ |
| ಸೆ.28, ಬುಧವಾರ | NSW ಬ್ಲೂಸ್ vs ಟ್ರಿನಿಡಾಡ್ ಅಂಡ್ ಟೊಬಾಗೊ | ಚಿದಂಬರಮ್ ಕ್ರೀಡಾಂಗಣ, ಚೆನ್ನೈ | ಸಂಜೆ 4 ಗಂಟೆ |
| ಸೆ.28, ಬುಧವಾರ | ಚೆನ್ನೈ ಸೂಪರ್ ಕಿಂಗ್ಸ್ vs ಕೇಪ್ ಕೋಬ್ರಾಸ್ | ಚಿದಂಬರಮ್ ಕ್ರೀಡಾಂಗಣ, ಚೆನ್ನೈ | ರಾತ್ರಿ 8 ಗಂಟೆ |
| ಸೆ.29, ಗುರುವಾರ | Q1 vs ರಾಯಲ್ ಚಾಲೆಂಜರ್ಸ್ ಬೆಂಗಳೂರು | ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು | ರಾತ್ರಿ 8 ಗಂಟೆ |
| ಸೆ.30, ಶನಿವಾರ | ಮುಂಬೈ ಇಂಡಿಯನ್ಸ್ vs ಕೇಪ್ ಕೋಬ್ರಾಸ್ | ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು | ರಾತ್ರಿ 8 ಗಂಟೆ |
| ಅ.1, ಶನಿವಾರ | ಸೌಥ್ ಅಸ್ಟ್ರೇಲಿಯನ್ ರೆಡ್ ಬ್ಯಾಕ್ಸ್ vs Q3 | ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು | ಸಂಜೆ 4 ಗಂಟೆ |
| ಅ.2, ಭಾನುವಾರ | ಮುಂಬೈ ಇಂಡಿಯನ್ಸ್ vs NSW ಬ್ಲೂಸ್ | ಚಿದಂಬರಂ ಸ್ಟೇಡಿಯಂ, ಚೆನ್ನೈ | ಸಂಜೆ 4 ಗಂಟೆ |
| ಅ.2, ಭಾನುವಾರ | ಚೆನ್ನೈ ಸೂಪರ್ ಕಿಂಗ್ಸ್ vs ಟ್ರಿನಿಡಾಡ್ ಅಂಡ್ ಟೊಬ್ಯಾಗೊ | ಚಿದಂಬರಂ ಸ್ಟೇಡಿಯಂ, ಚೆನ್ನೈ | ರಾತ್ರಿ 8 ಗಂಟೆ |
| ಅ.3, ಸೋಮವಾರ | ಆರ್ ಸಿಬಿ vs Q3 | ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು | ರಾತ್ರಿ 8 ಗಂಟೆ |
| ಅ.4, ಮಂಗಳವಾರ | ಕೇಪ್ ಕೋಬ್ರಾಸ್ vs ಟ್ರಿನಿಡಾಡ್ ಅಂಡ್ ಟೊಬ್ಯಾಗೊ | ಚಿದಂಬರಂ ಸ್ಟೇಡಿಯಂ, ಚೆನ್ನ್ನೈ | ಸಂಜೆ 4 ಗಂಟೆ |
| ಅ.4, ಮಂಗಳವಾರ | ಚೆನ್ನೈ ಸೂಪರ್ ಕಿಂಗ್ಸ್ vs NSW ಬ್ಲೂಸ್ | ಚಿದಂಬರಂ ಸ್ಟೇಡಿಯಂ, ಚೆನ್ನ್ನೈ | ರಾತ್ರಿ 8 ಗಂಟೆ |
| ಅ.5, ಬುಧವಾರ | Q3 vs ವಾರಿಯರ್ಸ್ | ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು | ಸಂಜೆ 4 ಗಂಟೆ |
| ಅ.5, ಬುಧವಾರ | ಆರ್ ಸಿಬಿ vs ಸೌಥ್ ಆಸ್ಟ್ರೇಲಿಯನ್ ರೆಡ್ ಬ್ಯಾಕ್ಸ್ | ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು | ರಾತ್ರಿ 8 ಗಂಟೆ |
| ಅ.7, ಶುಕ್ರವಾರ | ಗ್ರೂಪ್ B1 vs ಗ್ರೂಪ್ A2 | ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು | ರಾತ್ರಿ 8 ಗಂಟೆ |
| ಅ.8, ಶನಿವಾರ | ಗ್ರೂಪ್ A1 vs ಗ್ರೂಪ್ B2 | ಚಿದಂಬರಂ ಸ್ಟೇಡಿಯಂ, ಬೆಂಗಳೂರು | ರಾತ್ರಿ 8 ಗಂಟೆ |
| ಅ.9, ಭಾನುವಾರ | SF1 vs SF2 | ಚಿದಂಬರಂ ಸ್ಟೇಡಿಯಂ, ಬೆಂಗಳೂರು | ರಾತ್ರಿ 8 ಗಂಟೆ |
ಹುಷಾರು! ನಾಸಾ ಉಪಗ್ರಹ ಅವಶೇಷ ತಲೆ ಮೇಲೆ ಬೀಳಬಹುದು
ಹೈದರಾಬಾದ್, ಸೆ.21: ಮೇಲ್ಮೈ ವಾತಾವರಣ ಸಂಶೋಧನಾ ಉಪಗ್ರಹದ (ಯುಎಆರ್ಎಸ್) ಭಗ್ನಾವಶೇಷಗಳು ಮುಂದಿನ ಕೆಲವು ದಿನಗಳಲ್ಲಿ (ಸೆ.23) ಭೂಮಿಗೆ ಬಡಿಯುವ ನಿರೀಕ್ಷೆಯಿದೆ ಎಂದು ನಗರದ ಬಿಎಂ ಬಿರ್ಲಾ ವಿಜ್ಞಾನ ಕೇಂದ್ರದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಮೆರಿಕದ ನಾಸಾ ವಿಜ್ಞಾನಿಗಳ ಪ್ರಕಾರ ಅದು ಯಾವುದಾದರೂ ಸಾಗರ, ಸಮುದ್ರದಲ್ಲಿ ಬೀಳುವ ಸಾಧ್ಯತೆಗಳು ದಟ್ಟವಾಗಿವೆ.
ಬಸ್ಸಿನ ಗಾತ್ರದ ಈ ಉಪಗ್ರಹವನ್ನು 1991ರಲ್ಲಿ ಅಮೆರಿಕದ ನಾಸಾ ವಿಜ್ಞಾನಿಗಳು ಉಡಾವಣೆ ಮಾಡಿದ್ದರು. ಅದು 2005ರ ತನಕ ಕಾರ್ಯಾಚರಣೆ ನಡೆಸುತ್ತಿತ್ತು. ಆದರೆ ಅದು ನಿಧಾನವಾಗಿ ಭೂಮಿಯ ವಾತಾವರಣಕ್ಕೆ ಜಾರಲಾರಂಭಿಸಿತು. ಈ ಪ್ರಕ್ರಿಯೆಯಲ್ಲಿ ಅದು ಛಿದ್ರಗೊಂಡಿದೆ ಎಂದು ಸಂಸ್ಥೆಯ ಮಹಾನಿರ್ದೇಶಕ ಬಿಜಿ ಸಿದ್ದಾರ್ಥ ಅವರು ಹೇಳಿದ್ದಾರೆ.
'5.6 ಟನ್ ತೂಕದ ಈ ಉಪಗ್ರಹದ ಅವಶೇಷಗಳ ಸಣ್ಣ ತುಣುಕುಗಳು ಭೂಮಿಯನ್ನು ತಲಪುವ ಮೊದಲೇ ಉರಿದುಹೋಗಬಹುದು. ಆದರೆ ದೊಡ್ಡ ತುಣುಕುಗಳು ಭೂಮಿಯನ್ನು ತಲಪಬಹುದು. ಯಾವುದೇ ಸ್ಥಳ ಅಥವಾ ವ್ಯಕ್ತಿ ಮೇಲೆ ಇಂಥ ತುಣುಕು ಬೀಳುವ ಸಾಧ್ಯತೆ ಸಾವಿರ ಶತಕೋಟಿಯಲ್ಲಿ ಒಂದಕ್ಕಿಂತಲೂ ಕಡಿಮೆಯಿದೆ. ಆದರೆ ಅವಶೇಷಗಳು ಭೂಮಿಯ ಯಾವುದೋ ಒಂದು ಸ್ಥಳದಲ್ಲಿ ಬೀಳುವ ಸಾಧ್ಯತೆ ಅಧಿಕವಾಗಿದೆ' ಎಂದು ಅವರು ಎಚ್ಚರಿಸಿದ್ದಾರೆ.
ಬಾಹ್ಯಾಕಾಶದಿಂದ ಅವಶೇಷಗಳು ಭೂಮಿಗೆ ಬಡಿಯುವ ಇಂಥ ಘಟನೆ ಈ ಹಿಂದೆಯೂ ಸಂಭವಿಸಿತ್ತು. 1970ರಲ್ಲಿ ಸ್ಕೈಲ್ಯಾಬ್ ವ್ಯೋಮನೌಕೆ ಭೂಮಿಗೆ ಬಿದ್ದಿತ್ತಾದರೂ ಯಾವುದೇ ಜೀವಹಾನಿ ಅಥವಾ ಸೊತ್ತು ಹಾನಿ ಸಂಭವಿಸಿರಲಿಲ್ಲ.
ತೀರಾ ಈಚೆಗೆ ವ್ಯೋಮಯಾತ್ರಿ ಕಲ್ಪನಾ ಚಾವ್ಲಾ ಮತ್ತು ಇತರ ಸಿಬ್ಬಂದಿಯನ್ನು ಹೊತ್ತಿದ್ದ ವ್ಯೋಮನೌಕೆ 'ಕೊಲಂಬಿಯಾ' ವಾಯುಮಂಡಲವನ್ನು ಪ್ರವೇಶಿಸುವ ವೇಳೆ ಸ್ಫೋಟಗೊಂಡು ಅದರ ಅವಶೇಷಗಳು ಭೂಮಿಯ ಕೆಲವೆಡೆ ಬಿದ್ದಿತ್ತು. ಆಗ ಕೂಡ ಭೂಮಿಯಲ್ಲಿ ಯಾವುದೇ ಹಾನಿ ಸಂಭವಿಸಿರಲಿಲ್ಲ. ಈ ಬಾರಿಯೂ ಇದು ನಿಜವಾಗಲಿದೆ ಎಂದೂ ಅವರು ವಿಶ್ವಾಸ ಹೊಂದಿದ್ದಾರೆ.

ರಾಧಿಕನ್ ಗಂಡ ಮೇಲೆ ರಾಧಿಕಾ ಕುಮಾರಸ್ವಾಮಿ ಗರಂ
ಹಾಸ್ಯ ಕಲಾವಿದ ಕೋಮಲ್ ಕುಮಾರ್ ವಿರುದ್ಧ ಕನ್ನಡ ಚಿತ್ರರಂಗದ ನಟಿ ಕಮ್ ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಗರಂ ಆಗಿದ್ದಾರೆ. ಆಕೆಯ ಕೋಪಕ್ಕೆ ಕಾರಣವಾಗಿರುವುದು ಕೋಮಲ್ ಕೈಗೆತ್ತಿಕೊಂಡಿರುವ 'ರಾಧಿಕನ್ ಗಂಡ' ಎಂಬ ಚಿತ್ರ. ಈ ಚಿತ್ರದ ಟೈಟಲ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ರಾಧಿಕಾ, ಚಿತ್ರದ ಶೀರ್ಷಿಕೆ ಕೂಡಲೆ ಬದಲಾಯಿಸುವಂತೆ ಎಚ್ಚರಿಸಿದ್ದಾರೆ.
ಒಂದು ವೇಳೆ ಚಿತ್ರದ ಟೈಟಲ್ ಬದಲಾಯಿಸಲಿಲ್ಲ ಎಂದರೆ ಉಗ್ರ ಹೋರಾಟ ನಡೆಸುವುದಾಗಿ ರಾಧಿಕಾ ಸಂದೇಶ ರವಾನಿಸಿದ್ದಾರೆ. ಈ ಬಗ್ಗೆ ಫಿಲಂ ಚೇಂಬರ್ ಮೆಟ್ಟಿಲನ್ನೂ ಹತ್ತಿರುವ ರಾಧಿಕಾ ದೂರು ಸಲ್ಲಿಸಿದ್ದಾರೆ. ಈ ಚಿತ್ರದ ಶೀರ್ಷಿಕೆ ಮೂಲಕ ತಮ್ಮ ತೇಜೋವಧೆ ಮಾಡುತ್ತಿದ್ದಾರೆ ಎಂದು ರಾಧಿಕಾ ದೂರಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ನಟ ಕೋಮಲ್, ಇದೊಳ್ಳೆ ಕತೆ ಆಯ್ತಲ್ಲ. ಕುಂಬಳಕಾಯಿ ಕಳ್ಳ ಅಂದ್ರೆ ನೀವ್ಯಾಕೆ ಹೆಗಲು ಮುಟ್ಟಿಕೊಳ್ಳುತ್ತೀರಾ. ಇದು ನನ್ನ ಗೆಳೆಯ ರಂಗನಾಥ್ ಭಾರದ್ವಾಜ್ ಕತೆಯಾಕಾಗಿರಬಾರದು? ಆತನ ಪತ್ನಿಯ ಹೆಸರೂ ರಾಧಿಕಾ. ನೀವು ಏನೇ ಹೇಳಿದರು ಚಿತ್ರದ ಶೀರ್ಷಿಕೆ ಮಾತ್ರ ಬದಲಾಯಿಸಲ್ಲ ಎಂದಿದ್ದಾರೆ.
ಇನ್ನೊಂದು ಗಮನಾರ್ಹ ಸಂಗತಿ ಎಂದರೆ ಈ ಸಂಬಂಧ ರಾಧಿಕಾ ನಿರ್ಮಾಪಕರ ಸಂಘಕ್ಕೂ ಒಂದು ಪತ್ರ ಬರೆದಿರುವುದು. ಆ ಪತ್ರದ ಕೆಳಗೆ ರಾಧಿಕಾ ಕುಮಾರಸ್ವಾಮಿ ಎಂದು ಸಹಿಹಾಕಿರುವುದು! ನಿರ್ಮಾಪಕರ ಸಂಘ ಅದನ್ನು ಸೀರಿಯಸ್ಸಾಗಿ ತೆಗೆದುಕೊಂಡಿರುವುದು. ಈಗಾಗಲೆ ನಿಖಿತಾರನ್ನು ಬ್ಯಾನ್ ಮಾಡಿ ನಗೆಪಾಟಲಿಗೀಡಾಗಿದ್ದ ಸಂಘ ಈಗ ಮತ್ತೊಮ್ಮೆ ನಗುವವರ ಮುಂದೆ ಎಡವಿಬೀಳುವಂತಾಗಿದೆ. (ದಟ್ಸ್‌ಕನ್ನಡ ಸಿನಿವಾರ್ತೆ)

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)