ಪುಟಗಳು

ಟೈರ್ ಪಂಕ್ಚರ್ ಸಮಸ್ಯೆ ಇನ್ನಿಲ್ಲ, ಈ ಜೆಲ್ ಬಳಸಿ

Never Get a Puncture Again Through Puncture Killer
ವಾಹನ ಹೊಂದಿರುವರು ಪಂಕ್ಚರ್ ಅಂದ್ರೆ ಬೆಚ್ಚಿ ಬೀಳುತ್ತಾರೆ. ಅರ್ಜೆಂಟಾಗಿ ಎಲ್ಲೋ ಹೋಗುತ್ತಿದ್ದಾಗ, ರಾತ್ರಿ ಪ್ರಯಾಣ ಮಾಡುತ್ತಿರುವಾಗ, ದೂರ ಪ್ರವಾಸ ಹೊರಟಾಗ ಬೈಕ್ ಅಥವಾ ಕಾರು ಪಂಕ್ಚರ್ ಆದರೆ ಕಷ್ಟ.

ವಾಹನಗಳ ಟೈರ್ ಯಾವಾಗ ಠುಸ್ಸ್ ಅನ್ನುತ್ತೆ ಎಂದು ಹೇಳೋದು ಕಷ್ಟ. ರಸ್ತೆಯಲ್ಲಿರುವ ಕಲ್ಲುಮುಳ್ಳು ಚುಚ್ಚಿದರೂ ಟೈರ್ ಪಂಕ್ಚರ್ ಆಗುತ್ತದೆ. ಆಮೇಲೆ ಪಂಕ್ಚರ್ ಹಾಕೋ ಗ್ಯಾರೇಜ್ ಹುಡುಕುವುದು ಕಷ್ಟ. ಆದರೆ ಪಂಕ್ಚರ್ ಆದ ತಕ್ಷಣ ತನ್ನಷ್ಟಕ್ಕೆ ಟೈರ್ ಸರಿಯಾದರೆ ಚೆನ್ನಾಗಿತ್ತು ಅಲ್ಲವೇ.

ಇದೀಗ ಮಾರುಕಟ್ಟೆಗೆ ಪಂಕ್ಚರ್ ಕಿಲ್ಲರ್ ಅನ್ನೋ ಉತ್ಪನ್ನ ಬಂದಿದೆ. ಟೈರ್ ಪಂಕ್ಚರ್ ಆದ ಜಾಗವನ್ನು ಇದು ಸ್ವಯಂಚಾಲಿತವಾಗಿ ತಕ್ಷಣ ಬ್ಲಾಕ್ ಮಾಡುತ್ತದೆ. ಯಾವುದೇ ಟೆನ್ಶನ್ ಇಲ್ಲದೇ ಸವಾರಿ ಮಾಡಬಹುದು. ಮತ್ತೆ ಪಂಕ್ಚರ್ ಹಾಕಲು ಗ್ಯಾರೇಜ್ ಹುಡುಕುವ ಅವಶ್ಯಕತೆಯಿಲ್ಲ.

ಪಂಕ್ಚರ್ ಕಿಲ್ಲರ್ ಉತ್ಪನ್ನ ಒಂದು ರೀತಿಯ ಜೆಲ್. ಇದನ್ನು ಟೈರಿನೊಳಗೆ ಇಂಜೆಕ್ಟ್ ಮಾಡಲಾಗುತ್ತದೆ. ಯಾವುದಾದರೂ ಚೂಪಾದ ವಸ್ತು ಟೈರಿಗೆ ಚುಚ್ಚಿ ಪಂಕ್ಚರ್ ಆಗೋ ಸಾಧ್ಯತೆ ಇರುವಾಗ ಈ ಜೆಲ್ ಆ ತೂತನ್ನು ಬ್ಲಾಕ್ ಮಾಡುತ್ತದೆ.

ಪಂಕ್ಚರ್ ಕಿಲ್ಲರ್ ಕೇವಲ ಪಂಕ್ಚರ್ ಹಾಕಲು ಮಾತ್ರ ಉಪಯೋಗವಲ್ಲ. ಇದು ಟೈರಿನಲ್ಲಿರುವ ಅಪಾಯಕಾರಿ ತೂತುಗಳನ್ನೆಲ್ಲ ಬ್ಲಾಕ್ ಮಾಡುತ್ತದೆ. ಟೈರಿನೊಳಗಿನ ಗಾಳಿಯ ಒತ್ತಡ ಈ ಜೆಲ್ಲಿನ ಮೇಲೆ ಒತ್ತಡ ಹಾಕುತ್ತದೆ.

ಟೈರ್ ನಲ್ಲಿ ಯಾವುದೇ ರಂದ್ರವಾದರೂ ತಕ್ಷಣ ಆ ಕ್ಷೇತ್ರಕ್ಕೆ ಪ್ರವೇಶಿಸಿ ಬ್ಲಾಕ್ ಮಾಡಿಬಿಡುತ್ತದೆ. ಪಂಕ್ಚರ್ ಕಿಲ್ಲರ್ ಹಾಕಿರೋ ಟೈರ್ ಇದ್ರೆ ಯಾವುದೇ ಭಯ ಇಲ್ಲದೇ ಪ್ರಯಾಣ ಮಾಡಬಹುದು.

ಪಂಕ್ಚರ್ ಕಿಲ್ಲರ್ ವಿಶೇಷತೆ

* ಪಂಕ್ಚರ್ ಮತ್ತು ಲೀಕ್ ನಿಂದ ಟೈರನ್ನು ರಕ್ಷಿಸುತ್ತದೆ.
* ಟೈರ್ ಬಾಳಿಕೆ ಹೆಚ್ಚಿಸುತ್ತದೆ
* ವಾಹನದ ಇಂಧನ ದಕ್ಷತೆ ಹೆಚ್ಚಿಸುತ್ತದೆ.
* ಸಾಮಾನ್ಯ ಟೈರ್ ಕೂಡ ಪಂಕ್ಚರ್ ಪ್ರೂಫ್ ಟೈರಾಗುತ್ತದೆ.
* ಟೈರಿನೊಳಗಿನ ಅಗತ್ಯ ಗಾಳಿಯ ಒತ್ತಡವನ್ನು ರಕ್ಷಿಸುತ್ತದೆ.
* ಇದು ಪರಿಸರ ಸ್ನೇಹಿ, ಪರಿಸರಕ್ಕೆ ಹಾನಿಯಿಲ್ಲ.
* ಇದನ್ನು ಟ್ಯೂಬ್ ಮತ್ತು ಟ್ಯೂಬ್ ಲೆಸ್ ಟೈರ್ ಎರಡಕ್ಕೂ ಬಳಸಬಹುದು.
* ಆರಾಮವಾದ ರೈಡಿಗೆ ಸಹಕರಿಸುತ್ತದೆ.

ಈ ವಿಶೇಷ ಉತ್ಪನ್ನದ ಕುರಿತು ಕಂಪನಿಯನ್ನು ಸಂಪರ್ಕಿಸಿದಾಗ ಹೆಚ್ಚಿನ ಮಾಹಿತಿ ದೊರಕಿದೆ. ಅಂದ್ರೆ ಕಾರ್ ಟೈರಿಗೆ ಒಂದು ಲೀಟರ್ ಪಂಕ್ಚರ್ ಕಿಲ್ಲರ್ ಜೆಲ್ ಮತ್ತು ದ್ವಿಚಕ್ರ ವಾಹನಗಳಿಗೆ 600 ಎಂಎಲ್ ಜೆಲ್ ಇಂಜೆಕ್ಟ್ ಮಾಡಬೇಕಂತೆ. ಬೆಂಗಳೂರಿನಲ್ಲೂ ಪಂಕ್ಚರ್ ಕಿಲ್ಲರ್ ಪ್ರತಿನಿಧಿಗಳಿದ್ದಾರೆ.

ಈ ಪಂಕ್ಚರ್ ಕಿಲ್ಲರ್ ದರ ಪ್ರತಿಲೀಟರ್ ಗೆ ಸುಮಾರು 1,399 ರುಪಾಯಿ ಇದೆ. ಸದ್ಯ ಇದು ಪ್ರಮುಖ ನಗರಗಳಲ್ಲಿ ದೊರಕುತ್ತಿದೆ. ಕಂಪನಿಯನ್ನು ಸಂಪರ್ಕಿಸಿದರೆ ಅವರೇ ಬಂದು ಟೈರಿಗೆ ಜೆಲ್ ಇಂಜೆಕ್ಟ್ ಮಾಡುತ್ತಾರೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಸಿಎಲ್ ಟಿ20 ಕ್ರಿಕೆಟ್ ಸಂಪೂರ್ಣ ವೇಳಾಪಟ್ಟಿ

ಬೆಂಗಳೂರು, ಸೆ.21: ಚಾಂಪಿಯನ್ಸ್ ಲೀಗ್ ಟ್ವೆಂಟಿ 20 ಕ್ರಿಕೆಟ್ ನ ಬಿಸಿ ಸೆ.23 ರಿಂದ ಆರಂಭವಾಗಲಿದೆ. ಮೂರನೇ ಆವೃತ್ತಿಯ ಅರ್ಹತಾ ಸುತ್ತಿನ ಪಂದ್ಯಗಳು ಸೆ.21ರಂದು ಕೊನೆಗೊಳ್ಳಲಿದೆ.

* ಸೆ. 23 ರಿಂದ ಅಕ್ಟೋಬರ್ 3 ರವರೆಗೆ ಬೆಂಗಳೂರು, ಚೆನ್ನೈ, ಹೈದರಾಬಾದ್ ಹಾಗೂ ಕೋಲ್ಕತ್ತಾದಲ್ಲಿ ಪಂದ್ಯಾವಳಿಗಳು ನಡೆಯಲಿವೆ.
* ಅರಂಭದ ಪಂದ್ಯ ಸೆ. 23 ರಂದು ಬೆಂಗಳೂರಿನಲ್ಲಿ ನಡೆಯಲಿದೆ.
* ಚೆನ್ನೈನಲ್ಲಿ ಅಕ್ಟೋಬರ್ 9 ರಂದು ಫೈನಲ್ ನಡೆಯಲಿದೆ.
* 13 ತಂಡಗಳು ಭಾಗವಹಿಸಲಿದ್ದು, 6 ತಂಡಗಳು ಅರ್ಹತಾ ಸುತ್ತಿನಲ್ಲಿ ಆಡಲಿದೆ.
* ಮೊದಲ ಹಂತದಲ್ಲಿ ಅರ್ಹತಾ ಸುತ್ತು ಹೈದರಾಬಾದಿನಲ್ಲಿ ಸೆ. 19 ರಿಂದ 21ರ ವರೆಗೆ ನಡೆಯಲಿದೆ.

ಎ ಗುಂಪು: ಚೆನ್ನೈ ಸೂಪರ್ ಕಿಂಗ್ಸ್(ಭಾರತ), ಕೇಪ್ ಕೋಬ್ರಾಸ್(ದಕ್ಷಿಣ ಆಫ್ರಿಕಾ), ನ್ಯೂ ಸೌಥ್ ವೇಲ್ಸ್(ಆಸ್ಟ್ರೇಲಿಯಾ), ಮುಂಬೈ ಇಂಡಿಯನ್ಸ್(ಭಾರತ), ಟ್ರಿನಿಡಾಡ್ ಮತ್ತು ಟೊಬ್ಯಾಗೋ(ವೆಸ್ಟ್ ಇಂಡೀಸ್)

ಬಿ ಗುಂಪು: ರಾಯಲ್ ಚಾಲೆಂಜರ್ಸ್ ಬೆಂಗಳೂರು(ಭಾರತ), ವಾರಿಯರ್ಸ್(ದಕ್ಷಿಣ ಆಫ್ರಿಕಾ), ಸೌಥ್ ಆಸ್ಟ್ರೇಲಿಯನ್ ರೆಡ್ ಬ್ಯಾಕ್ಸ್(ಆಸ್ಟ್ರೇಲಿಯಾ), Q1, Q2
ದಿನಾಂಕತಂಡಗಳುಸ್ಥಳಸಮಯ
ಸೆ.23, ಶುಕ್ರವಾರಆರ್ ಸಿಬಿ vs ವಾರಿಯರ್ಸ್ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರುರಾತ್ರಿ 8 ಗಂಟೆ
ಸೆ.24, ಶನಿವಾರಕೇಪ್ ಕೋಬ್ರಾಸ್ vs ನ್ಯೂ ಸೌಥ್ ವೇಲ್ಸ್ ಬ್ಲೂಸ್ಚಿದಂಬರಂ ಸ್ಟೇಡಿಯಂ, ಚೆನ್ನೈಸಂಜೆ 4 ಗಂಟೆ
ಸೆ.24, ಶನಿವಾರಚೆನ್ನೈ ಸೂಪರ್ ಕಿಂಗ್ಸ್ vs ಮುಂಬೈ ಇಂಡಿಯನ್ಸ್ಚಿದಂಬರಂ ಸ್ಟೇಡಿಯಂ, ಚೆನ್ನೈರಾತ್ರಿ 8 ಗಂಟೆ
ಸೆ.25, ಭಾನುವಾರಆಸ್ಟ್ರೇಲಿಯನ್ ರೆಡ್ ಬ್ಯಾಕ್ಸ್ vs ವಾರಿಯರ್ಸ್ಹೈದರಾಬಾದ್ಸಂಜೆ 4 ಗಂಟೆ
ಸೆ.25, ಭಾನುವಾರQ1 vs Q3ಹೈದರಾಬಾದ್ರಾತ್ರಿ 8 ಗಂಟೆ
ಸೆ.26, ಸೋಮವಾರಮುಂಬೈ ಇಂಡಿಯನ್ಸ್ vs ಟ್ರಿನಿಡಾಡ್ ಅಂಡ್ ಟೊಬಾಗೊಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರುರಾತ್ರಿ 8 ಗಂಟೆ
ಸೆ.27, ಮಂಗಳವಾರQ1 vs ಸೌಥ್ ಆಸ್ಟ್ರೇಲಿಯನ್ ರೆಡ್ ಬ್ಯಾಕ್ಸ್ಹೈದರಾಬಾದ್ರಾತ್ರಿ 8 ಗಂಟೆ
ಸೆ.28, ಬುಧವಾರNSW ಬ್ಲೂಸ್ vs ಟ್ರಿನಿಡಾಡ್ ಅಂಡ್ ಟೊಬಾಗೊಚಿದಂಬರಮ್ ಕ್ರೀಡಾಂಗಣ, ಚೆನ್ನೈಸಂಜೆ 4 ಗಂಟೆ
ಸೆ.28, ಬುಧವಾರಚೆನ್ನೈ ಸೂಪರ್ ಕಿಂಗ್ಸ್ vs ಕೇಪ್ ಕೋಬ್ರಾಸ್ಚಿದಂಬರಮ್ ಕ್ರೀಡಾಂಗಣ, ಚೆನ್ನೈರಾತ್ರಿ 8 ಗಂಟೆ
ಸೆ.29, ಗುರುವಾರQ1 vs ರಾಯಲ್ ಚಾಲೆಂಜರ್ಸ್ ಬೆಂಗಳೂರುಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರುರಾತ್ರಿ 8 ಗಂಟೆ
ಸೆ.30, ಶನಿವಾರಮುಂಬೈ ಇಂಡಿಯನ್ಸ್ vs ಕೇಪ್ ಕೋಬ್ರಾಸ್ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರುರಾತ್ರಿ 8 ಗಂಟೆ
ಅ.1, ಶನಿವಾರಸೌಥ್ ಅಸ್ಟ್ರೇಲಿಯನ್ ರೆಡ್ ಬ್ಯಾಕ್ಸ್ vs Q3ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರುಸಂಜೆ 4 ಗಂಟೆ
ಅ.2, ಭಾನುವಾರಮುಂಬೈ ಇಂಡಿಯನ್ಸ್ vs NSW ಬ್ಲೂಸ್ಚಿದಂಬರಂ ಸ್ಟೇಡಿಯಂ, ಚೆನ್ನೈಸಂಜೆ 4 ಗಂಟೆ
ಅ.2, ಭಾನುವಾರಚೆನ್ನೈ ಸೂಪರ್ ಕಿಂಗ್ಸ್ vs ಟ್ರಿನಿಡಾಡ್ ಅಂಡ್ ಟೊಬ್ಯಾಗೊಚಿದಂಬರಂ ಸ್ಟೇಡಿಯಂ, ಚೆನ್ನೈರಾತ್ರಿ 8 ಗಂಟೆ
ಅ.3, ಸೋಮವಾರಆರ್ ಸಿಬಿ vs Q3ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರುರಾತ್ರಿ 8 ಗಂಟೆ
ಅ.4, ಮಂಗಳವಾರಕೇಪ್ ಕೋಬ್ರಾಸ್ vs ಟ್ರಿನಿಡಾಡ್ ಅಂಡ್ ಟೊಬ್ಯಾಗೊಚಿದಂಬರಂ ಸ್ಟೇಡಿಯಂ, ಚೆನ್ನ್ನೈಸಂಜೆ 4 ಗಂಟೆ
ಅ.4, ಮಂಗಳವಾರಚೆನ್ನೈ ಸೂಪರ್ ಕಿಂಗ್ಸ್ vs NSW ಬ್ಲೂಸ್ಚಿದಂಬರಂ ಸ್ಟೇಡಿಯಂ, ಚೆನ್ನ್ನೈರಾತ್ರಿ 8 ಗಂಟೆ
ಅ.5, ಬುಧವಾರQ3 vs ವಾರಿಯರ್ಸ್ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರುಸಂಜೆ 4 ಗಂಟೆ
ಅ.5, ಬುಧವಾರಆರ್ ಸಿಬಿ vs ಸೌಥ್ ಆಸ್ಟ್ರೇಲಿಯನ್ ರೆಡ್ ಬ್ಯಾಕ್ಸ್ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರುರಾತ್ರಿ 8 ಗಂಟೆ
ಅ.7, ಶುಕ್ರವಾರಗ್ರೂಪ್ B1 vs ಗ್ರೂಪ್ A2ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರುರಾತ್ರಿ 8 ಗಂಟೆ
ಅ.8, ಶನಿವಾರಗ್ರೂಪ್ A1 vs ಗ್ರೂಪ್ B2ಚಿದಂಬರಂ ಸ್ಟೇಡಿಯಂ, ಬೆಂಗಳೂರುರಾತ್ರಿ 8 ಗಂಟೆ
ಅ.9, ಭಾನುವಾರSF1 vs SF2ಚಿದಂಬರಂ ಸ್ಟೇಡಿಯಂ, ಬೆಂಗಳೂರುರಾತ್ರಿ 8 ಗಂಟೆ
 

ಅಂಕಿತ ಹೊಸ ಪುಸ್ತಕ ಬಿಡುಗಡೆ

ಕನ್ನಡ ಮಾತಿನ ಮಲ್ಲ ಸ್ಪರ್ದೆಗೆ ಆಹ್ವಾನ

ಅನಕ್ಷರಸ್ತರಿಗೊಂದು ಉಚಿತ ಫೋನ್

ಹುಷಾರು! ನಾಸಾ ಉಪಗ್ರಹ ಅವಶೇಷ ತಲೆ ಮೇಲೆ ಬೀಳಬಹುದು

ಹೈದರಾಬಾದ್, ಸೆ.21: ಮೇಲ್ಮೈ ವಾತಾವರಣ ಸಂಶೋಧನಾ ಉಪಗ್ರಹದ (ಯುಎಆರ್ಎಸ್‌) ಭಗ್ನಾವಶೇಷಗಳು ಮುಂದಿನ ಕೆಲವು ದಿನಗಳಲ್ಲಿ (ಸೆ.23) ಭೂಮಿಗೆ ಬಡಿಯುವ ನಿರೀಕ್ಷೆಯಿದೆ ಎಂದು ನಗರದ ಬಿಎಂ ಬಿರ್ಲಾ ವಿಜ್ಞಾನ ಕೇಂದ್ರದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಮೆರಿಕದ ನಾಸಾ ವಿಜ್ಞಾನಿಗಳ ಪ್ರಕಾರ ಅದು ಯಾವುದಾದರೂ ಸಾಗರ, ಸಮುದ್ರದಲ್ಲಿ ಬೀಳುವ ಸಾಧ್ಯತೆಗಳು ದಟ್ಟವಾಗಿವೆ.

ಬಸ್ಸಿನ ಗಾತ್ರದ ಈ ಉಪಗ್ರಹವನ್ನು 1991ರಲ್ಲಿ ಅಮೆರಿಕದ ನಾಸಾ ವಿಜ್ಞಾನಿಗಳು ಉಡಾವಣೆ ಮಾಡಿದ್ದರು. ಅದು 2005ರ ತನಕ ಕಾರ್ಯಾಚರಣೆ ನಡೆಸುತ್ತಿತ್ತು. ಆದರೆ ಅದು ನಿಧಾನವಾಗಿ ಭೂಮಿಯ ವಾತಾವರಣಕ್ಕೆ ಜಾರಲಾರಂಭಿಸಿತು. ಈ ಪ್ರಕ್ರಿಯೆಯಲ್ಲಿ ಅದು ಛಿದ್ರಗೊಂಡಿದೆ ಎಂದು ಸಂಸ್ಥೆಯ ಮಹಾನಿರ್ದೇಶಕ ಬಿಜಿ ಸಿದ್ದಾರ್ಥ ಅವರು ಹೇಳಿದ್ದಾರೆ.

'5.6 ಟನ್ ತೂಕದ ಈ ಉಪಗ್ರಹದ ಅವಶೇಷಗಳ ಸಣ್ಣ ತುಣುಕುಗಳು ಭೂಮಿಯನ್ನು ತಲಪುವ ಮೊದಲೇ ಉರಿದುಹೋಗಬಹುದು. ಆದರೆ ದೊಡ್ಡ ತುಣುಕುಗಳು ಭೂಮಿಯನ್ನು ತಲಪಬಹುದು. ಯಾವುದೇ ಸ್ಥಳ ಅಥವಾ ವ್ಯಕ್ತಿ ಮೇಲೆ ಇಂಥ ತುಣುಕು ಬೀಳುವ ಸಾಧ್ಯತೆ ಸಾವಿರ ಶತಕೋಟಿಯಲ್ಲಿ ಒಂದಕ್ಕಿಂತಲೂ ಕಡಿಮೆಯಿದೆ. ಆದರೆ ಅವಶೇಷಗಳು ಭೂಮಿಯ ಯಾವುದೋ ಒಂದು ಸ್ಥಳದಲ್ಲಿ ಬೀಳುವ ಸಾಧ್ಯತೆ ಅಧಿಕವಾಗಿದೆ' ಎಂದು ಅವರು ಎಚ್ಚರಿಸಿದ್ದಾರೆ.

ಬಾಹ್ಯಾಕಾಶದಿಂದ ಅವಶೇಷಗಳು ಭೂಮಿಗೆ ಬಡಿಯುವ ಇಂಥ ಘಟನೆ ಈ ಹಿಂದೆಯೂ ಸಂಭವಿಸಿತ್ತು. 1970ರಲ್ಲಿ ಸ್ಕೈಲ್ಯಾಬ್‌ ವ್ಯೋಮನೌಕೆ ಭೂಮಿಗೆ ಬಿದ್ದಿತ್ತಾದರೂ ಯಾವುದೇ ಜೀವಹಾನಿ ಅಥವಾ ಸೊತ್ತು ಹಾನಿ ಸಂಭವಿಸಿರಲಿಲ್ಲ.

ತೀರಾ ಈಚೆಗೆ ವ್ಯೋಮಯಾತ್ರಿ ಕಲ್ಪನಾ ಚಾವ್ಲಾ ಮತ್ತು ಇತರ ಸಿಬ್ಬಂದಿಯನ್ನು ಹೊತ್ತಿದ್ದ ವ್ಯೋಮನೌಕೆ 'ಕೊಲಂಬಿಯಾ' ವಾಯುಮಂಡಲವನ್ನು ಪ್ರವೇಶಿಸುವ ವೇಳೆ ಸ್ಫೋಟಗೊಂಡು ಅದರ ಅವಶೇಷಗಳು ಭೂಮಿಯ ಕೆಲವೆಡೆ ಬಿದ್ದಿತ್ತು. ಆಗ ಕೂಡ ಭೂಮಿಯಲ್ಲಿ ಯಾವುದೇ ಹಾನಿ ಸಂಭವಿಸಿರಲಿಲ್ಲ. ಈ ಬಾರಿಯೂ ಇದು ನಿಜವಾಗಲಿದೆ ಎಂದೂ ಅವರು ವಿಶ್ವಾಸ ಹೊಂದಿದ್ದಾರೆ.

ರಾಧಿಕನ್ ಗಂಡ ಮೇಲೆ ರಾಧಿಕಾ ಕುಮಾರಸ್ವಾಮಿ ಗರಂ

ಹಾಸ್ಯ ಕಲಾವಿದ ಕೋಮಲ್ ಕುಮಾರ್ ವಿರುದ್ಧ ಕನ್ನಡ ಚಿತ್ರರಂಗದ ನಟಿ ಕಮ್ ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಗರಂ ಆಗಿದ್ದಾರೆ. ಆಕೆಯ ಕೋಪಕ್ಕೆ ಕಾರಣವಾಗಿರುವುದು ಕೋಮಲ್ ಕೈಗೆತ್ತಿಕೊಂಡಿರುವ 'ರಾಧಿಕನ್ ಗಂಡ' ಎಂಬ ಚಿತ್ರ. ಈ ಚಿತ್ರದ ಟೈಟಲ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ರಾಧಿಕಾ, ಚಿತ್ರದ ಶೀರ್ಷಿಕೆ ಕೂಡಲೆ ಬದಲಾಯಿಸುವಂತೆ ಎಚ್ಚರಿಸಿದ್ದಾರೆ.

ಒಂದು ವೇಳೆ ಚಿತ್ರದ ಟೈಟಲ್ ಬದಲಾಯಿಸಲಿಲ್ಲ ಎಂದರೆ ಉಗ್ರ ಹೋರಾಟ ನಡೆಸುವುದಾಗಿ ರಾಧಿಕಾ ಸಂದೇಶ ರವಾನಿಸಿದ್ದಾರೆ. ಈ ಬಗ್ಗೆ ಫಿಲಂ ಚೇಂಬರ್ ಮೆಟ್ಟಿಲನ್ನೂ ಹತ್ತಿರುವ ರಾಧಿಕಾ ದೂರು ಸಲ್ಲಿಸಿದ್ದಾರೆ. ಈ ಚಿತ್ರದ ಶೀರ್ಷಿಕೆ ಮೂಲಕ ತಮ್ಮ ತೇಜೋವಧೆ ಮಾಡುತ್ತಿದ್ದಾರೆ ಎಂದು ರಾಧಿಕಾ ದೂರಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ನಟ ಕೋಮಲ್, ಇದೊಳ್ಳೆ ಕತೆ ಆಯ್ತಲ್ಲ. ಕುಂಬಳಕಾಯಿ ಕಳ್ಳ ಅಂದ್ರೆ ನೀವ್ಯಾಕೆ ಹೆಗಲು ಮುಟ್ಟಿಕೊಳ್ಳುತ್ತೀರಾ. ಇದು ನನ್ನ ಗೆಳೆಯ ರಂಗನಾಥ್ ಭಾರದ್ವಾಜ್ ಕತೆಯಾಕಾಗಿರಬಾರದು? ಆತನ ಪತ್ನಿಯ ಹೆಸರೂ ರಾಧಿಕಾ. ನೀವು ಏನೇ ಹೇಳಿದರು ಚಿತ್ರದ ಶೀರ್ಷಿಕೆ ಮಾತ್ರ ಬದಲಾಯಿಸಲ್ಲ ಎಂದಿದ್ದಾರೆ.

ಇನ್ನೊಂದು ಗಮನಾರ್ಹ ಸಂಗತಿ ಎಂದರೆ ಈ ಸಂಬಂಧ ರಾಧಿಕಾ ನಿರ್ಮಾಪಕರ ಸಂಘಕ್ಕೂ ಒಂದು ಪತ್ರ ಬರೆದಿರುವುದು. ಆ ಪತ್ರದ ಕೆಳಗೆ ರಾಧಿಕಾ ಕುಮಾರಸ್ವಾಮಿ ಎಂದು ಸಹಿಹಾಕಿರುವುದು! ನಿರ್ಮಾಪಕರ ಸಂಘ ಅದನ್ನು ಸೀರಿಯಸ್ಸಾಗಿ ತೆಗೆದುಕೊಂಡಿರುವುದು. ಈಗಾಗಲೆ ನಿಖಿತಾರನ್ನು ಬ್ಯಾನ್ ಮಾಡಿ ನಗೆಪಾಟಲಿಗೀಡಾಗಿದ್ದ ಸಂಘ ಈಗ ಮತ್ತೊಮ್ಮೆ ನಗುವವರ ಮುಂದೆ ಎಡವಿಬೀಳುವಂತಾಗಿದೆ. (ದಟ್ಸ್‌ಕನ್ನಡ ಸಿನಿವಾರ್ತೆ)