ಪುಟಗಳು

ಎಂ.ಎಸ್. ಧೋನಿ ಭಾರತೀಯ ಸೇನೆಗೆ ಭರ್ತಿ

ಜಾರ್ಖಂಡ್‌, ಜೂನ್ 24: ಭಾರತೀಯ ಕ್ರಿಕೆಟ್ ಸೇನೆಯ ಸಾರಥ್ಯವನ್ನು ಯಶಸ್ವಿಯಾಗಿ ಹೆಗಲಮೇಲೆ ಹೊತ್ತು ಮೆರೆಯುತ್ತಿರುವ ತಂಡದ ನಾಯಕ ಎಂ. ಎಸ್. ಧೋನಿ ಅವರೀಗ ಸೇನಾ ದಂಡನಾಯಕರಾಗಿಯೂ ನೇಮಕಗೊಳ್ಳಲಿದ್ದಾರೆ. ವಿಶ್ವ್ ಕಪ್ ಅನ್ನು ಭಾರತದ ಮಾಡಿಲಿಗೆ ಹಾಕಿದ ಅಗ್ರಗಣ್ಯ ಆಟಗಾರ ಕಪಿಲ್ ದೇವ್ ಮತ್ತು ಮೊನ್ನೆಯ ವಿಶ್ವ್ ಕಪ್ ಗೆಲುವನ್ನು ತಮ್ಮ ಹೆಸರಿಗೆ ಬರೆಸಿಕೊಂಡ ಪ್ರಚಂಡ ಆಟಗಾರ ಸಚಿನ್ ತೆಂಡೂಲ್ಕರ್ ಈ ಹಿಂದೆಯೇ ಸೇನೆಗೆ ಭರ್ತಿ ಆಗಿದ್ದಾರೆ.

ಭಾರತಕ್ಕೆ ಎರಡನೆಯ ಬಾರಿಗೆ ವಿಶ್ವ್ ಕಪ್ ಗೆದ್ದುಕೊಟ್ಟ ತಂಡದ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ಲೆಫ್ಟಿನೆಂಟ್ ಕರ್ನಲ್ ಗೌರವಕ್ಕೆ ಪಾತ್ರರಾಗಲಿದ್ದಾರೆ. ಈ ಸಂಬಂಧ ಜಾರ್ಖಂಡ್ ಮುಖ್ಯಮಂತ್ರಿ ಅರ್ಜುನ್ ಮುಂಡಾ ಅವರು ರಕ್ಷಣಾ ಇಲಾಖೆಗೆ ಗುರುವಾರ ಪತ್ರ ಬರೆದಿದ್ದಾರೆ. 2008ರಲ್ಲಿ ಕಪಿಲ್ ಗೆ ಪ್ರಾಂತೀಯ ಸೇನೆಯಲ್ಲಿ ಮತ್ತು 2010 ರಲ್ಲಿ ವಾಯುಪಡೆಯಲ್ಲಿ ಗೌರವ ಸ್ಥಾನ ಪಡೆದಿದ್ದಾರೆ.

ಅಳಿವಿನಂಚಿನಲ್ಲಿರುವ ಹುಲಿಗಳ ಉಳಿವಿಗಾಗಿ ಈಗಾಗಲೇ ಧೋನಿ ಜಾರ್ಖಂಡ್ ಮತ್ತು ಉತ್ತರಾಕಾಂಡ್ ನಲ್ಲಿ ರಾಯಭಾರಿಯಾಗಿದ್ದಾರೆ. ಈ ಮಧ್ಯೆ, ಬಿಹಾರ ಮತ್ತು ಜಾರ್ಖಂಡಿನಲ್ಲಿ ಕಳೆದ ಎರಡು ಆರ್ಥಿಕ ವರ್ಷಗಳಲ್ಲಿ ಧೋನಿ ಅತ್ಯಧಿಕ ಆದಾಯ ತೆರಿಗೆ ಪಾವತಿಸಿದ ದಾಖಲೆಗೆ ಪಾತ್ರರಾಗಿದ್ದಾರೆ. ಇಲಾಖೆ ಇನ್ನೂ ಹೆಚ್ಚಿಗೆ ಇದರ ಪ್ರಯೋಜನ ಪಡೆಯಲು ನಿರ್ಧರಿಸಿದ್ದು, ಧೋನಿ ಅವರನ್ನು ತೆರಿಗೆ ಪಾವತಿಗಾಗಿ ಇಲಾಖೆಯ ಪರವಾಗಿ ರಾಯಭಾರಿಯನ್ನಾಗಿ ನೇಮಕ ಮಾಡಿಕೊಳ್ಳುವ ಪ್ರಯತ್ನದಲ್ಲಿದೆ.