ಪುಟಗಳು

ಕೇಂದ್ರ ರೈಲ್ವೆ ಬಜೆಟ್ 2012-13 ಮುಖ್ಯಾಂಶಗಳು

Union Railway Budget 2012-13
ನವದೆಹಲಿ, ಮಾ.14: ಕೇಂದ್ರ ರೈಲ್ವೆ ಸಚಿವ ದಿನೇಶ್ ತ್ರಿವೇದಿ ತಮ್ಮ ಚೊಚ್ಚಲ ರೈಲ್ವೆ ಬಜೆಟ್ ಮಂಡಿಸಿದ್ದಾರೆ. ರವೀಂದ್ರನಾಥ ಠಾಗೋರ್ ಕಾವ್ಯವನ್ನು ವಾಚಿಸುತ್ತಾ, ಸದನದ ಮುಂದೆ ಭಾರತೀಯ ರೈಲ್ವೆ 2012-13 ಮಂಡಿಸಿದರು.

ಕರ್ನಾಟಕಕ್ಕೆ ಸಿಕ್ಕಿರುವ ಹೊಸ ಮಾರ್ಗ ಭರವಸೆ: ಗೇಜ್ ಪರಿವರ್ತನೆ, ಡಬ್ಲಿಂಗ್, ವಿದ್ಯುತ್ ರೈಲು ಮಾರ್ಗ ಮಾಹಿತಿ ಇಲ್ಲಿದೆ:
* ಗುಲ್ಬರ್ಗಾ-ಸುಲ್ತಾನ್ ಪುರ,
* ಹಿರಿಸಾವೆ-ಶ್ರವಣಬೆಳಗೊಳ,
* ಕಡೂರು- ಚಿಕ್ಕಮಗಳೂರು.

ಯೋಜನಾ ಆಯೋಗ ಅನುಮತಿಗೆ ಕಾದಿರುವ ಮಾರ್ಗಗಳು:
* ಗದಗ-ಹಾವೇರಿ
* ಪುಟ್ಟಪರ್ತಿ-ಚಿಕ್ಕಬಳ್ಳಾಪುರ
* ಶ್ರೀನಿವಾಸಪುರ-ಮದನಪಲ್ಲಿ

ಹೊಸ ಮಾರ್ಗ ಸರ್ವೆ:
* ಹಾವೇರಿ-ಶಿರಸಿ
* ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು
* ಮಧುಗಿರಿ-ಗೌರಿಬಿದನೂರು

ಗೇಜ್ ಪರಿವರ್ತನೆ:
* ಕೋಲಾರ-ಚಿಂತಾಮಣಿ
* ಚಿಕ್ಕಬಳ್ಳಾಪುರ-ಶಿಡ್ಲಘಟ್ಟ
* ಚಿಂತಾಮಣಿ-ಶಿಡ್ಲಘಟ್ಟ(2012-13ರಲ್ಲಿ ಪೂರ್ಣ)

ಜೋಡಿ ಮಾರ್ಗ ಪರಿವರ್ತನೆ:
* ರಾಮನಗರ-ಚೆನ್ನಪಟ್ಟಣ
* ಮೈಸೂರು-ನಾಗನಹಳ್ಳಿ
* ಮದ್ದೂರು-ಹನಕೆರೆ
* ಬಳ್ಳಕೆರೆ-ಬೀರೂರು
* ಬೀರೂರು-ಅಜ್ಜಂಪುರ(2012-13 ರಲ್ಲಿ ಪೂರ್ಣ)
* ಚನ್ನಪಟ್ಟಣ-ಶೆಟ್ಟಿಹಳ್ಳಿ
* ಮಂಡ್ಯ-ಎಲಿಯೂರು
* ನಾಗವಂಗಲ- ಅಜ್ಜಂಪುರ
* ಅಜ್ಜಂಪುರ-ಶಿವಾನಿ
* ಗದಗ- ಸೋಲಾಪುರ

2.15: ಕರ್ನಾಟಕಕ್ಕೆ 6 ಹೊಸ ಎಕ್ಸ್ ಪ್ರೆಸ್ 3 ಪ್ಯಾಸೆಂಜರ್ ರೈಲು
* ಯಶವಂತಪುರ ಕೊಚುವೆಲಿ(ಎಸಿ) ವಾರಕ್ಕೊಮ್ಮೆ
* ಚೆನ್ನೈ ಬೆಂಗಳೂರು ಎಸಿ ಡಬ್ಬರ್ ಡೆಕ್ಕರ್(ಪ್ರತಿದಿನ)
* ಇಂದೋರ್ ಯಶವಂತಪುರ ಎಕ್ಸ್ ಪ್ರೆಸ್ (ವಾರಕ್ಕೊಮ್ಮೆ)
* ಪುರಿ ಯಶವಂತ ಗರೀಬ್ ರಥ (ವಾರಕ್ಕೊಮ್ಮೆ)
* ಮೈಸೂರು-ಸಾಯಿನಗರ ಶಿರಡಿ (ವಾರಕ್ಕೊಮ್ಮೆ)
* ಸೋಲಾಪುರ ಯಶವಂತಪುರ ಗುಲ್ಬಾರ್ಗಾ(೩ ಬಾರಿ)

3 ಪ್ಯಾಸೆಂಜರ್ ರೈಲು:
* ಮೈಸೂರು ಚಾಮರಾಜನಗರ
* ಮೈಸೂರು ಬೀರೂರು ವಯಾ ಅರಸೀಕೆರೆ
* ಬೆಂಗಳೂರು- ಹಾಸನ ವಯಾ ಶ್ರವಣಬೆಳಗೊಳ

ಇತರೆ ಮಾರ್ಗಗಳು : ಕಡೂರು-ಚಿಕ್ಕಮಗಳೂರು-ಸಕಲೇಶಪುರ, ಬೆಂಗಳೂರು-ಹಾಸನ(via ಶ್ರವಣಬೆಳಗೊಳ)
* ಮೈಸೂರು-ಬೆಂಗಳೂರು ಪ್ಯಾಸೆಂಜರ್ ವಾರಪೂರ್ತಿ ಓಡಾಟ.
* ಬೆಂಗಳೂರು -ಅರಸೀಕೆರೆ ವಾರಪೂರ್ತಿ ಪ್ರಯಾಣ.
* ಗುಲ್ಬರ್ಗಾ-ಸುಲ್ತಾನ್ ಪುರ, ರಾಯಚೂರು-ಗದ್ವಾಲ್ ಮಾರ್ಗ ಮುಂದಿನ ವರ್ಷ ಪೂರ್ಣ. ಹೊಸಮಾರ್ಗಗಳ ಮಾಹಿತಿಗೆ ಓದಿ

2.00: ಹಾವೇರಿಯಿಂದ ಶಿರಸಿಗೆ ಹೊಸ ರೈಲು ಮಾರ್ಗ.
* ಪುರಿ-ಯಶವಂತಪುರಕ್ಕೆ ಹೊಸ ರೈಲು
* ಬೀದರ್ -ಸಿಕಂದರಾಬಾದ್  ಇಂಟರ್ ಸಿಟಿ ರೈಲು.
* ಚೆನ್ನೈ -ಮಂಗಳೂರು ವಾರಪೂರ್ತಿ ಪ್ರಯಾಣ ಸಾಧ್ಯ.
* 20 ರೈಲು ಮಾರ್ಗಗಳಿಗೆ ವಿದ್ಯುತೀಕರಣ ಸರ್ವೆ.
* ಫಾಲ್ಗಾಟ್ ಮಂಗಳೂರು ರೈಲು ಕೊಯಮತ್ತೂರಿಗೆ ವಿಸ್ತರಣೆ

1.40: ರೈಲು ಪ್ರಯಾಣ ದರ ಅಲ್ಪ ಪ್ರಮಾಣ ಏರಿಕೆ, ಪ್ರತಿ ಕಿ.ಮೀ. ಗೆ 2 ಪೈಸೆ ಹೆಚ್ಚಳ. ಪ್ಲಾಟ್ ಫಾರಂ ದರ 3 ರೂ. ನಿಂದ 5 ರೂ.ಗೆ ಏರಿಸಲಾಗಿದೆ. [ವಿವರಗಳನ್ನು ಓದಿ]

1.30: ಬೆಂಗಳೂರಿನಲ್ಲಿ ಸುರಕ್ಷತಾ ಕೇಂದ್ರ ಸ್ಥಾಪನೆ.

1.20: 85 ಹೊಸ ಎಕ್ಸ್ ಪ್ರೆಸ್ ರೈಲು, 21 ಪ್ಯಾಸೆಂಜರ್ ರೈಲು ಘೋಷಣೆ.
*  ಪ್ರಸಕ್ತ ವರ್ಷ 1 ಲಕ್ಷ ಜನರಿಗೆ ಉದ್ಯೋಗವಾಕಾಶ ಲಭ್ಯ.

1.15 :
ರಿಯಲ್ ಟೈಮ್ ನಲ್ಲಿ ರೈಲು ಸಂಚಾರ ಮಾಹಿತಿ ಲಭ್ಯ. 36 ರೈಲುಗಳಿಗೆ ಅಳವಡಿಕೆ. ಮುಂದಿನ 18 ತಿಂಗಳಲ್ಲಿ ಪ್ರಯಾಣಿಕರಿಗೆ ಎಸ್ ಎಂಎಸ್ ಹಾಗೂ ಇಮೇಲ್ ಮೂಲಕ ಮಾಹಿತಿ ರವಾನೆ.

1.00: 
825 ಕಿ.ಮೀ ಗೇಜ್ ಪರಿವರ್ತನೆ ಕಾರ್ಯ ಪೂರ್ಣ.
*
ಹೈದರಾಬಾದ್- ಸಿಕಂದ್ರಾಬಾದ್ MMTC ಗೆ ಅನುಮೋದನೆ.. ಬೆಂಗಳೂರು-ಮೈಸೂರು ಯೋಜನೆಗೆ ಮಾದರಿ.

12.50:
ಕೇರಳಕ್ಕೆ ನಾಲ್ಕು ಹೊಸ ರೈಲ್ವೆ ಕೋಚ್ ಫ್ಯಾಕ್ಟರಿ. ಕೋಲಾರದಲ್ಲೂ ಹಾಗೂ ನವಿ ಮುಂಬೈಗೆ ಒಂದು ಫ್ಯಾಕ್ಟರಿ ಘೋಷಣೆ.
* 114 ಹೊಸ ರೈಲ್ವೆ ಮಾರ್ಗಗಳ ಸರ್ವೆ ಜಾರಿಯಲ್ಲಿದೆ. 5 ವರ್ಷಗಳಲ್ಲಿ 1 ಸಾವಿರ ಹೊಸ ನಿಲ್ದಾಣಗಳು.
* 17 ಗೇಜ್ ಪರಿವರ್ತನೆ ಕಾರ್ಯ ಹಾಗೂ 45 ಯೋಜನೆಗಳು 2012-13 ರಲ್ಲಿ ಪೂರ್ಣ.
* 17,000 ಕಿ.ಮೀ ಹೊಸ ರೈಲು ಮಾರ್ಗ ನಿರ್ಮಾಣ.

12.45:
ಆರ್ಥಿಕ ಕೊರತೆಯಿಂದ 482 ಯೋಜನೆಗಳು ನೆನಗುದಿಗೆ. 487 ಯೋಜನೆಗಳು ಅನುಷ್ಠಾನ ಹಂತದಲ್ಲಿದೆ.
* ಗ್ರಾಮೀಣ ಮತ್ತು ಗಡಿ ಭಾಗಕ್ಕೆ ರೈಲು ಸಂಪರ್ಕ ಒದಗಿಸಲು 5.5 ಲಕ್ಷ ಕೋಟಿ ರು ಮೀಸಲು.

12.30 :
1 ಲಕ್ಷಕ್ಕೂ ಅಧಿಕ ಕಿ.ಮೀ ಗಳಲ್ಲಿ 19,000 ಕಿ.ಮೀ ದೂರ ರೈಲ್ವೆ ಅಧುನೀಕರಣ ಮಾಡಲಾಗುವುದು.(ಸ್ಯಾಂ ಪಿತ್ರೋಡಾ ಸಮಿತಿ ಶಿಫಾರಸು)
*  ರು. 5.6 ಲಕ್ಷ ಕೋಟಿ ರು ರೈಲ್ವೆ ಆಧುನೀಕರಣಕ್ಕೆ ಬಳಕೆ ಮಾಡಲಾಗುವುದು.
* ರೈಲ್ವೆ ಅಪಘಾತವನ್ನು ಶೂನ್ಯಗೊಳಿಸುವುದು ನಮ್ಮ ಗುರಿ. ಶೇ 60 ರಷ್ಟು ಸಾವು ಲೆವೆಲ್ ಕ್ರಾಸಿಂಗ್ ನಲ್ಲಿ ಸಂಭವಿಸುತ್ತಿದೆ.
  Read:  In English 
12.25: Haath ki lakeeron se zindagi nahi banti; humara bhi kuch hissa hain zindagi banane mein ಕವನ ಸಾಲು ಉದ್ಗಾರ
12.20: ಹಿಮಾಲಯ ಇಲ್ಲದ ಭಾರತ, ಗಂಗಾ ನದಿ ಇಲ್ಲದ ಭಾರತ ಊಹಿಸಲು ಸಾಧ್ಯವಿಲ್ಲ. ಅದರಂತೆ ರೈಲ್ವೆ ಇಲ್ಲದೆ ಭಾರತವನ್ನು ಊಹಿಸಲಾಗದು

* ರೈಲ್ವೆ ಸಂಶೋಧನಾ ಮತ್ತು ಅಭಿವೃದ್ಧಿ ಕೌನ್ಸಿಲ್ ಗೆ 7.35 ಲಕ್ಷ ಕೋಟಿ ರು ಬಂಡವಾಳ ಹೂಡಿಕೆ

12.10: ಅನಿಲ್ ಕಾಕೊಡ್ಕರ್ ಅವರ ರೈಲ್ವೆ ಸುರಕ್ಷತಾ ಸಮಿತಿ ನೀಡಿದ ಶಿಫಾರಸುಗಳನ್ನು ಅಳವಡಿಸಲು ಸಿದ್ಧ.