ಪುಟಗಳು

ಸಂಚಾರಿ ನಿಯಮ ಉಲ್ಲಂಘಿಸಿದರೆ ಫೈನೆಷ್ಟು? ಜೈಲೆಷ್ಟು?

What Is The New Fine For Traffic Violations 
ಮೋಟರ್ ವೆಹಿಕಲ್ ಕಾಯಿದೆ ಕಠಿಣವಾಗಿದೆ. ಸಂಚಾರಿ ನಿಯಮ ಉಲ್ಲಂಘನೆಗೆ ಐದು ಪಟ್ಟು ಹೆಚ್ಚು ದಂಡ ಮತ್ತು ಜೈಲು ಶಿಕ್ಷೆ ವಿಧಿಸುವ ನೂತನ ಪ್ರಸ್ತಾಪಕ್ಕೆ ಕೇಂದ್ರ ಸಂಪುಟ ಸಮ್ಮತಿಸಿದೆ. ಈ ಕುರಿತ ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿರಿ.

ಸಂಚಾರಿ ನಿಯಮದ ತಪ್ಪುಗಳಿಗೆ ಎಷ್ಟು ದಂಡ ಮತ್ತು ಎಷ್ಟು ವರ್ಷ ಜೈಲು ಶಿಕ್ಷೆ?

* ಕುಡಿದು ವಾಹನ ಚಾಲನೆ ಮಾಡಿದರೆ 2,000 ರು.ನಿಂದ 10 ಸಾವಿರ ರು.ವರೆಗೆ ದಂಡ ಅಥವಾ ಆರು ತಿಂಗಳಿನ ವರೆಗೆ ಜೈಲು ಶಿಕ್ಷೆ(ಓದಿ: ಕುಡಿದು ಡ್ರೈವಿಂಗ್ ಮಾಡಿದ್ರೆ 4 ವರ್ಷದವರೆಗೆ ಜೈಲು! )

* ಸಿಗ್ನಲ್ ಜಂಪ್ ಮಾಡಿ ಪ್ರಪ್ರಥಮ ಬಾರಿ ಸಿಕ್ಕಿಬಿದ್ದರೆ 100 ರು.ನಿಂದ 500 ರು.ವರೆಗೆ ದಂಡ. ಮತ್ತೊಮ್ಮೆ ಇದೇ ತಪ್ಪು ಮಾಡಿ ಸಿಕ್ಕಿಬಿದ್ದರೆ 300 ರು.ನಿಂದ 1,500 ರು.ವರೆಗೆ ದಂಡ ವಿಧಿಸಲು ಅವಕಾಶವಿದೆ.

* ಮಾದಕ ದ್ರವ್ಯ ಸೇವಿಸಿ ವಾಹನ ಚಾಲನೆ ಮಾಡಿ ಸಿಕ್ಕಿಬಿದ್ದರೆ ಮೊದಲ ಪ್ರಕರಣಕ್ಕೆ ಆರು ತಿಂಗಳ ಜೈಲು ಶಿಕ್ಷೆ ಅಥವಾ ಐದು ಸಾವಿರ ರುಪಾಯಿ ದಂಡ. ಮತ್ತೊಮ್ಮೆ ಇದೇ ತಪ್ಪು ಮಾಡಿ ಸಿಕ್ಕಿಬಿದ್ದರೆ 10 ಸಾವಿರ ರು. ದಂಡ ಅಥವಾ ಆರು ತಿಂಗಳ ಸಜೆ ಮತ್ತು ಡ್ರೈವಿಂಗ್ ಲೈಸನ್ಸ್ ರದ್ದು ಮಾಡಲಾಗುತ್ತದೆ.

* ವೇಗಮಿತಿ ಮೀರಿ ವಾಹನ ಚಾಲನೆ ಮಾಡಿದರೆ ಮೊದಲಿಗೆ 400 ರು.ನಿಂದ 1 ಸಾವಿರ ರುಪಾಯಿವರೆಗೆ ದಂಡ. ಮತ್ತೊಮ್ಮೆ ಇದೇ ತಪ್ಪು ಮಾಡಿ ಸಿಕ್ಕಿಬಿದ್ದರೆ 2 ಸಾವಿರ ರು.ನಿಂದ 5 ಸಾವಿರ ರು.ವರೆಗೆ ದಂಡ.

* ಅಪಾಯಕಾರಿಯಾಗಿ ವಾಹನ ಚಾಲನೆ ಮಾಡಿದರೆ 1 ಸಾವಿರ ರುಪಾಯಿ ದಂಡ ಅಥವಾ ಆರು ತಿಂಗಳ ಸಜೆ. ಮತ್ತೊಮ್ಮೆ ಇದೇ ತಪ್ಪು ಮಾಡಿದರೆ 2 ಸಾವಿರ ರುಪಾಯಿಯಿಂದ 5 ಸಾವಿರ ರುಪಾಯಿವರೆಗೆ ದಂಡ ಅಥವಾ 2 ವರ್ಷ ಜೈಲು ಶಿಕ್ಷೆ.

* ಸೀಟ್ ಬೆಲ್ಟ್ ಧರಿಸದೇ ವಾಹನ ಚಾಲನೆ ಮಾಡಿದರೆ 500 ರುಪಾಯಿಯಿಂದ 1 ಸಾವಿರ ರುಪಾಯಿವರೆಗೆ ದಂಡ ವಿಧಿಸಲು ಅವಕಾಶವಿದೆ.

* ರಿಜಿಸ್ಟ್ರೇಷನ್ ಆಗದ ವಾಹನ ಚಲಾಯಿಸಿದರೆ 20 ಸಾವಿರ ರು. ದಂಡ ಮತ್ತು ಒಂದು ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.

* ಹೆಲ್ಮೆಟ್ ಧರಿಸದೇ ದ್ವಿಚಕ್ರವಾಹನ ಸವಾರಿ ಮಾಡಿದರೆ 500 ರುಪಾಯಿ ದಂಡ. ಇದೇ ತಪ್ಪನ್ನು ಮತ್ತೊಮ್ಮೆ ಮಾಡಿ ಸಿಕ್ಕಿಬಿದ್ದರೆ 1 ಸಾವಿರ ರು.ನಿಂದ 1,500 ರು.ವರೆಗೆ ದಂಡ ವಿಧಿಸಲಾಗುತ್ತದೆ.

ಸಂಚಾರಿ ನಿಯಮಗಳನ್ನು ಪಾಲಿಸಿ ವಾಹನ ಚಲಾಯಿಸಿ