ಪುಟಗಳು

ಸ್ತಿತ ಪ್ರಜ್ಞ ಆರ್ಥಿಕ ತಜ್ಞ ಮತ್ತು ಸ್ಥಿತಿ ಇಲ್ಲದ ಪ್ರಧಾನಿ

ಪಡಿತರ -ಗ್ಯಾಸ್ ಸಂಪರ್ಕ ದಾಖಲಾತಿ ಸಲ್ಲಿಕೆ ಆ. 20ರವರೆಗೆ

ಬೆಂಗಳೂರು, ಆಗಸ್ಟ್ 16: ನಕಲಿ ಪಡಿತರ ಚೀಟಿ ಮತ್ತು ನಕಲಿ ಅಡುಗೆ ಅನಿಲ ಸಂಪರ್ಕಗಳನ್ನು ಪತ್ತೆ ಮಾಡುವ ಸಲುವಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕೈಗೊಂಡಿರುವ ಎಲ್‌ಪಿಜಿ ಮತ್ತು ವಿದ್ಯುತ್ ಸಂಪರ್ಕ ಸಂಖ್ಯೆ ಪರಶೀಲನೆಗಾಗಿ ನಾಗರಿಕರು ಸರಿಯಾದ ದಾಖಲಾತಿಗಳನ್ನು ಸಲ್ಲಿಸಲು ನಿಗದಿ ಪಡಿಸಿದ್ದ ಕೊನೆಯ ದಿನಾಂಕವನ್ನು (ಆಗಸ್ಟ್ 15) ಈ ತಿಂಗಳ 20ರವರೆಗೆ ವಿಸ್ತರಿಸಲಾಗಿದೆ ಎಂದು ಇಲಾಖೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆನ್‌ಲೈನ್ ಮೂಲಕ ದಾಖಲಾತಿಗಳನ್ನು ಸಲ್ಲಿಸುವಾಗ ವೆಬ್‌ಸೈಟ್ ಮೇಲೆ ಅಧಿಕ ಒತ್ತಡ ಬಿದ್ದಿರುವುದು ಮತ್ತಿತರ ಕಾರಣಗಳಿಂದಾಗಿ ಅನೇಕ ನಾಗರಿಕರು ತೊಂದರೆ ಅನುಭವಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಕಾಲಾವಧಿ ವಿಸ್ತರಣೆ ಮಾಡಲಾಗಿದೆ.

ಆಹಾರ ಇಲಾಖೆಯ ಐದು ವಲಯ ಕಚೇರಿಗಳ ವಿಳಾಸ-ದೂರವಾಣಿ ಸಂಖ್ಯೆ:
ಬೆಂಗಳೂರು ಕೇಂದ್ರ ವಲಯ: ಮೋಹನ್ ಮ್ಯಾನ್ಷನ್ ಕಟ್ಟಡ, ಕಸ್ತೂರಾಬಾ ರಸ್ತೆ. ದೂರವಾಣಿ: 2221 4431
ಪಶ್ಚಿಮ ವಲಯ: ಸಹಕಾರಿ ಭವನ, ಭಾಷ್ಯಂ ವೃತ್ತದ ಬಳಿ, ರಾಜಾಜಿನಗರ. ದೂ: 2315 3259
ಉತ್ತರ ವಲಯ: 11ನೇ ಸಿ ಕ್ರಾಸ್, ವೈಯಾಲಿಕಾವಲ್. ದೂ: 2344 5702
ದಕ್ಷಿಣ ವಲಯ: 3ನೇ ಮುಖ್ಯ ರಸ್ತೆ, ಚಾಮರಾಜಪೇಟೆ. ದೂ: 2661 3531
ಪೂರ್ವ ವಲಯ: ಪಾಲಿಕೆ ಕಟ್ಟಡ, ಸೆಂಟ್ ಜಾನ್ ರಸ್ತೆ. ದೂ: 2536 0750

ದಾಖಲಾತಿ ಸಲ್ಲಿಸದೇ ಇರುವುದು, ದಾಖಲಾತಿ ಸಲ್ಲಿಸಿದ್ದರೂ ತಪ್ಪಾಗಿ ನಮೂದಾಗಿರುವುದು ಮತ್ತಿತರ ಕಾರಣಗಳಿಂದ ಅಮಾನತಿನ ಸ್ಥಿತಿಯಲ್ಲಿರುವ ಪಡಿತರ ಚೀಟಿದಾರರು ಮತ್ತು ಎಲ್‌ಪಿಜಿ ಗ್ರಾಹಕರು ಖುದ್ದಾಗಿ ಅಥವಾ ಆನ್‌ಲೈನ್ (http://ahara.kar.nic.in/) ಮೂಲಕ ದಾಖಲಾತಿಗಳನ್ನು ಸಲ್ಲಿಸುವಂತೆ ಕೋರಲಾಗಿದೆ.

ನಗರದಲ್ಲಿರುವ ಆಹಾರ ಇಲಾಖೆಯ ಐದು ವಲಯ ಕಚೇರಿಗಳಲ್ಲಿ ಪಡಿತರ ಚೀಟಿ ಸಂಖ್ಯೆ ಅಥವಾ ಅನಿಲ ಸಂಪರ್ಕದ ಸಂಖ್ಯೆ ಜತೆ ವಿದ್ಯುತ್ ಮೀಟರ್‌ನ ಆರ್.ಆರ್. ಸಂಖ್ಯೆ ಇರುವ ವಿದ್ಯುತ್ ಬಿಲ್ ರಸೀದಿ ಸಲ್ಲಿಸಬೇಕು

ಆಧಾರ್ ಕಾರ್ಡಿಗಾಗಿ mad rush ಬೇಡ!

 
ಬೆಂಗಳೂರು, ಆಗಸ್ಟ್ 14 : ದೇಶ ವಾಸಿಗಳನ್ನೆಲ್ಲ ಏಕರೂಪದಲ್ಲಿ ಗುರುತಿಸುವ ಸಲುವಾಗಿ ಕೇಂದ್ರ ಸರಕಾರ ಕೊಡಮಾಡುತ್ತಿರುವ ಆಧಾರ್ ವಿಶಿಷ್ಟ ಗುರುತಿನ ಚೀಟಿಗಾಗಿ ಜನ ಎದ್ನೋ ಬಿದ್ನೋ ಎಂದು ಐಡಿ ಕಾರ್ಡ್ ವಿತರಿಸುವ ಕೇಂದ್ರಗಳಿಗೆ ಎಡತಾಕುತ್ತಿದ್ದಾರೆ. ಆದರೆ ಇವತ್ತೇ ಇದನ್ನು ತೆಗೆದುಕೊಂಡರೆ ನಾಳೆನೇ ಅಷ್ಟೈಶ್ವರ್ಯ ಕುಲಾಯಿಸುತ್ತದೆ ಎಂದೇನೂ ಇಲ್ಲ.

ಸೋ, ಮ್ಯಾಡ್ ರಶ್ ಬೇಡ. ಸುಮ್ಮನೆ ಯುಐಡಿ ಕಾರ್ಡ್ ವಿತರಣೆ ಕೇಂದ್ರಗಳಿಗೆ ಹೋಗಿ ನಿಮ್ಮ ಅಮೂಲ್ಯ ಸಮಯ ಹಾಳುಮಾಡಿಕೊಳ್ಳಬೇಡಿ. ಏಕೆಂದರೆ ಈಗಿನ ರಷ್ ನೋಡಿದರೆ ಈ ಕಾರ್ಡ್ ಪಡೆಯುವುದು ಆಲ್ ಮೋಸ್ಟ್ ಒಂದು ದಿನದ ಪ್ರೋಗ್ರಾಂ ಆಗುತ್ತದೆ. ಆದ್ದರಿಂದ ಪುರುಸೊತ್ತಿದ್ದರೆ ಮಾತ್ರ ಅತ್ತ ಹೆಜ್ಜೆ ಹಾಕಿ. ಅಷ್ಟಕ್ಕೂ ಇವತ್ತಲ್ಲದಿದ್ದರೆ ನಾಳೆ ಪಡೆದರಾಯಿತು.

ಏಕೆಂದರೆ ಇದು ಕೇವಲ ಒಂದೆರಡು ವಾರದ ಯೋಜನೆ ಅಲ್ಲ. ಆದ್ದರಿಂದ ಇಂದೇ ಪಡೆಯೋಣ ಎಂಬ ಧಾವಂತ ಖಂಡಿತಾ ಬೇಡ. ಆಧಾರ್ ಕಾರ್ಡು ಪಡೆಯುವುದು ಒಳ್ಳೆಯದೇ. ಅದು ಕಡ್ಡಾಯವೂ ಆಗಲಿದೆ. ಆದರೆ ತಿಂಗಳು ಬಿಟ್ಟು ಪಡೆದರಾಯಿತು. urgent ಆಗಿರುವವರು ಹೋಗಿ ಕಾರ್ಡ್ ಪಡೆಯಲಿ. ನೀವು ನಿಧಾನಕ್ಕೆ ಹೋದರಾಯಿತು. ಏನಂತೀರಿ!?

ಅನಂತ ಪ್ರಶ್ನೆ: ಧರ್ಮ ಸಂಕಟದಲ್ಲಿ ಸುಪ್ರೀಂಕೋರ್ಟ್

padmanabha-wealth-ashtamangala-supreme-court
ತಿರುವನಂತಪುರ, ಆಗಸ್ಟ್ 14: ಅನಂತ ಸಂಪತ್ತು ಪ್ರಶ್ನೆಯ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ನಿಜಕ್ಕೂ ಪೀಕಲಾಟಕ್ಕೆ ಸಿಕ್ಕಿದೆ. ದೇಗುಲದ ನೆಲಮಾಳಿಗೆಯಲ್ಲಿನ ಅನಂತ ಸಂಪತ್ತಿನ ಬಗ್ಗೆ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಿರುವ ತೀರ್ಪನ್ನು ಸುಪ್ರೀಂಕೋರ್ಟ್ ಒಪ್ಪಿಕೊಳ್ಳುವುದೇ? ಎಂಬ ಪ್ರಶ್ನೆ ಕಾಡುತ್ತಿದೆ. ಅಷ್ಟಮಂಗಲ ಪ್ರಶ್ನೆ ಪ್ರಕಾರ ಸಂಪತ್ತು ಶೋಧದಿಂದ ದೇವರು ಮುನಿದಿದ್ದಾರೆ ಹಾಗೂ ಬಿ ಉಗ್ರಾಣನ್ನು ತೆರೆದರೆ ಭಾರೀ ಅವಘಡಗಳು ಸಂಭವಿಸಲಿವೆ.

ಆದರೆ ಈ ಎಚ್ಚರಿಕೆಯನ್ನು ನ್ಯಾಯಾಲಯ ಪರಿಗಣಿಸೀತೆ? ಪರಿಗಣಿಸಿದರೆ ನ್ಯಾಯಾಂಗಕ್ಕಿಂತ ಅಷ್ಟಮಂಗಲ ಪ್ರಶ್ನೆಯೇ ಮಿಗಿಲು ಎಂದಾಗುತ್ತದೆ. ಪರಿಗಣಿಸದೆ ಬಿ ಉಗ್ರಾಣವನ್ನು ತೆರೆಯಲು ಮುಂದಾದರೆ ದೇವರನ್ನು ಧಿಕ್ಕರಿಸಿ ಹೋದಂತಾಗುತ್ತದೆ. ಸೋ, ಹೇಗೆ ನೋಡಿದರೂ ನ್ಯಾಯಾಂಗದ ಪಾಲಿಗೆ ಇದು ಧರ್ಮ ಸಂಕಟದ ವಿಚಾರವಾಗಿ ಪರಿಣಮಿಸಲಿದೆ.

ಮೂರು ದಿನಗಳ ಕಾಲ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲಿ ನೆಲಮಾಳಿಗೆಯಲ್ಲಿರುವ ಸಂಪತ್ತು ಶೋಧಿಸಿರುವುದರಿಂದ ಅನಂತ ಪದ್ಮನಾಭ ಮುನಿದಿದ್ದಾನೆ. ಅಂತೆಯೇ ಅತ್ಯಂತ ಮುಖ್ಯವಾಗಿರುವ ಬಿ ಉಗ್ರಾಣವನ್ನು ತೆರೆದರೆ ಅದನ್ನು ತೆರೆದವರ ವಂಶ ನಾಶವಾಗುತ್ತದೆ ಹಾಗೂ ಇನ್ನಿತರ ಅವಘಡಗಳು ಸಂಭವಿಸುತ್ತವೆ. ಸಂಪತ್ತಿನ ಫೊಟೊ ತೆಗೆಯುವುದು ಮತ್ತು ವಿಡಿಯೋ ಶೂಟಿಂಗ್‌ ಮಾಡುವುದು ಕೂಡ ದೇವ ಸಮ್ಮತವಲ್ಲ ಎಂದು ಕಂಡು ಬಂದಿದೆ.

ಬಿ ಉಗ್ರಾಣದಲ್ಲಿ ಅನಂತ ಪದ್ಮನಾಭನ ಇನ್ನೊಂದು ಬೃಹತ್‌ ವಿಗ್ರಹವಿದೆ. ಅನಾದಿ ಕಾಲದಿಂದ ಈ ವಿಗ್ರಹವನ್ನು ಇಲ್ಲಿ ಸಂರಕ್ಷಿಸಿಡಲಾಗಿದೆ. ಸಾಕ್ಷಾತ್‌ ನರಸಿಂಹಸ್ವಾಮಿಯೇ ಈ ಉಗ್ರಾಣವನ್ನು ಕಾವಲು ಕಾಯುತ್ತಿದ್ದಾನೆ. ಅಲ್ಲದೆ ಭಯಂಕರ ಸರ್ಪಗಳ ಕಾವಲು ಈ ಉಗ್ರಾಣಕ್ಕಿದೆ. ದೇಗುಲದ ಚೈತನ್ಯವಿರುವುದು ಕೂಡ ಈ ಉಗ್ರಾಣದಲ್ಲಿ. ಜತೆಗೆ ಈಗ ಸಿಕ್ಕಿರುವುದಕ್ಕಿಂತಲೂ ಹಲವು ಪಟ್ಟು ಹೆಚ್ಚು ಸಂಪತ್ತು ಬಿ ಉಗ್ರಾಣದಲ್ಲಿದೆ. ಆದರೆ ಇದನ್ನು ಯಾವ ಕಾರಣಕ್ಕೂ ತೆರೆದು ನೋಡಬಾರದು. ಹಾಗೇನಾದರೂ ತೆರೆದರೆ ನಾನಾ ರೀತಿಯ ಕೆಡುಕುಗಳು ತಲೆದೋರಲಿವೆ ಹಾಗೂ ಕ್ಷೇತ್ರಕ್ಕೂ ಧಕ್ಕೆಯಿದೆ ಎಂದು ಅಷ್ಟಮಂಗಲ ಪ್ರಶ್ನೆಯಿಟ್ಟಿರುವ ದೈವಜ್ಞರು ಎಚ್ಚರಿಸಿದ್ದಾರೆ.

ರಕ್ಷಾ ಬಂಧನ: ಇದು ಮಧುರವಾದ ಭಾವಾನುಬಂಧ

Raksha bandhan
ಇದು ಅಣ್ಣ, ತಂಗಿಯರ ನವಿರಾದ ಭಾವನೆಗಳನ್ನು ರಕ್ಷಾ ಬಂಧನದ ಮೂಲಕ ಗಟ್ಟಿಗೊಳಿಸುವ ದಿನ. ಅಣ್ಣ-ತಂಗಿಯರಿಗೆ ಈ ದಿನ ಸಂಭ್ರಮವೋ ಸಂಭ್ರಮ. ಬಾಂಧವ್ಯದ ಸಂಕೇತದ ಈ ದಿನವನ್ನ ಇಡೀ ಭಾರತದಾದ್ಯಂತ ಆಚರಿಸಲಾಗುತ್ತದೆ.

ತನ್ನ ಸೋದರನ ಅಭಿವೃದ್ಧಿಗೆ, ನೆಮ್ಮದಿಗೆ ಹಾರೈಸುವ ಅಕ್ಕ ತಂಗಿಯರು ತಮ್ಮ ಅಣ್ಣತಮ್ಮಂದಿರಿಗೆ ರಾಖಿ ಕಟ್ಟಿ, ಸಿಹಿ ವಿನಿಯಮ ಮಾಡಿಕೊಂಡು ಉಡುಗೊರೆ ಪಡೆದು ಸಂತಸ ಪಡುವ ರಕ್ಷಾ ಬಂಧನ ಹಬ್ಬ ಬರುವುದು ಶ್ರಾವಣ ಹುಣ್ಣಿಮೆಯಂದು. ರಾಖಿ ಹಬ್ಬ, ನೂಲು ಹುಣ್ಣಿಮೆ ಎಂದು ಕರೆಸಿಕೊಳ್ಳುವ ಈ ಹಬ್ಬಕ್ಕೆ ಭಾವನೆಯೇ ಬೆಂಬಲ.

ಇದು ತಂಗಿಯೆಡೆಗಿನ ವಿಶೇಷ ಕಾಳಜಿ, ಪ್ರೀತಿಯನ್ನು ಪ್ರತಿನಿಧಿಸುವ ಹಬ್ಬ. ಆದ್ದರಿಂದ ಈ ಆಚರಣೆಯನ್ನು ಇನ್ನೂ ಉಳಿಸಿಕೊಂಡು ಬರಲಾಗಿದೆ. ನಾಗರ ಪಂಚಮಿಯಂದೂ ಅಣ್ಣ ತಂಗಿಯರು ಸಿಹಿ ವಿನಿಮಯ ಮಾಡಿಕೊಳ್ಳುವ ರೂಢಿಯಿದ್ದು, ಇದು ರಕ್ಷಾಬಂಧನಕ್ಕೆ ಮುನ್ನುಡಿ ಬರೆದಂತೆ. ಇದೇ ದಿನ ಬ್ರಾಹ್ಮಣರು ಇದನ್ನು ಋಗ್ವೇದ ಉಪಕರ್ಮವೆಂದು ಜನಿವಾರವನ್ನು ಬದಲಿಸಿ ಹೊಸ ಜನಿವಾರವನ್ನು ಹಾಕಿಕೊಂಡು ನಡೆಸಿಕೊಂಡು ಬರುವುದು ಇಂದಿಗೂ ಇದೆ.

ಎಸ್ ಎಲ್ ಭೈರಪ್ಪ ಅವರ ಆವರಣ ಹಿಂದಿಗೆ ಅನುವಾದ

SL Bhyrappa
ಕನ್ನಡದಲ್ಲಿ ವಾದ-ವಿವಾದಗಳಿಗೆ ಕಾರಣವಾಗಿದ್ದ ಎಸ್. ಎಲ್. ಭೈರಪ್ಪನವರ ‘ಆವರಣ’ ಹಿಂದಿ ಜಗತ್ತನ್ನೂ ಪ್ರವೇಶಿಸಿದೆ. ಈ ಹಿಂದೆಯೇ ತಮಿಳು, ಮರಾಠಿ, ಸಂಸ್ಕೃತ ಭಾಷೆಗೆ ಆವರಣ ಹೋದ ಸುದ್ದಿ ಇತ್ತು.

ಮುಸ್ಲಿಂ ನವಾಬರ 'ಜನಾನ'ದ ವರೆಗೆ ಕಥೆ ಪ್ರವೇಶಿಸಿದ್ದು ಒಂದು ಕಡೆಯಾದರೆ ಮತ್ತೊಂದೆಡೆ ಬುದ್ಧಿಜೀವಿಗಳ ಹರಕು-ಹುಳುಕನ್ನು ಕಾದಂಬರಿ ಹರಾಜು ಹಾಕಿ ವಿವಾದಕ್ಕೆ ಕಾರಣವಾಗಿತ್ತು. ಒಂದೇ ವರ್ಷದಲ್ಲಿ 20ಕ್ಕೂ ಹೆಚ್ಚು ಮುದ್ರಣಗಳಿಗೂ ಹೋಗಿತ್ತು.

ಮೂಲಕಥೆ ಉತ್ತರ ಭಾರತದ ಹಿಂದಿ ಜಗತ್ತಿನದೇ. ಇದೀಗ ಕಾದಂಬರಿ ಹಿಂದಿ ಜಗತ್ತನ್ನು ಪ್ರವೇಶಿಸಿದೆ. ಕುವೆಂಪು ಭಾಷಾ ಭಾರತಿಯ ಅಧ್ಯಕ್ಷರಾಗಿರುವ ಡಾ. ಪ್ರಧಾನ ಗುರುದತ್ ಹಿಂದಿಗೆ ಅನುವಾದಿಸಿದ್ದಾರೆ.

ಇಂಡಿಯಾ ಟುಡೇ ಹಿಂದಿ ಅವತರಣಿಕೆಯ ಈ ವಾರದ ಸಂಚಿಕೆ ಅರ್ಧ ಪುಟದ ವಿಮರ್ಶೆ ಪ್ರಕಟಿಸಿದೆ. ವಿಮರ್ಶಕ ಶಶಿಭೂಷಣ ದ್ವಿವೇದಿಗೆ ಪ್ರಧಾನರ ಅನುವಾದ ಸಮಾಧಾನ ತಂದಿಲ್ಲವಂತೆ.

ಇದೇ ಅಗಸ್ಟ್ 16ರಂದು ಕೇರಳದ ಕೊಚ್ಚಿನ್ ನಲ್ಲಿ ಆವರಣದ ಸಂಸ್ಕೃತ ಆವೃತ್ತಿಗೆ ಕೇಂದ್ರ ಸಾಹಿತ್ಯ ಅಕಾಡಮಿಯ ‘ಅತ್ಯುತ್ತಮ ಅನುವಾದ’ ಪುರಸ್ಕಾರ ಸಿಗಲಿದೆ ಎಂದು ಗೊತ್ತಾಗಿದೆ.

ವರಮಹಾಲಕ್ಷ್ಮಿ ಹಬ್ಬದ ಪೂಜೆಗಾಗಿ ಅಷ್ಟಲಕ್ಷ್ಮೀ ಸ್ತೋತ್ರ


ಶ್ರೀ ವರಮಹಾಲಕ್ಷ್ಮಿ ಪೂಜಾವಿಧಾನ

ಆಷಾಢ ಮಾಸದ ಕೊನೆಯ ದಿನ ಭೀಮನ ಅಮವಾಸ್ಯೆ ಕಳೆಯುತ್ತಿದ್ದ ಹಾಗೆ ಶ್ರಾವಣ ಮಾಸ ಪ್ರಾರಂಭ. ಹಬ್ಬಗಳ ಸಾಲೇ ಸಾಲು. ಹೂವು ಹಣ್ಣು, ತರಕಾರಿ ರೇಟುಗಳು ಗಗನಕ್ಕೇರಿದ್ದರೂ ಶ್ರಾವಣದ ಎರಡನೇ ಶುಕ್ರವಾರದಂದು ಬರುವ ವರಮಹಾಲಕ್ಷ್ಮಿ ಹಬ್ಬವನ್ನು ಬಿಡುವಂತೆಯೇ ಇಲ್ಲ.

ಹಣ್ಣು, ಹೂವು, ತರಕಾರಿಗಳ ಮೇಲೆ ಹಣ ಸುರಿದು ಜೇಬು ಖಾಲಿಯಾಗಿದ್ದರೂ 'ಭಾಗ್ಯದ ಲಕ್ಷ್ಮಿ ಬಾರಮ್ಮ..' ಎಂದು ಮಹಾಲಕ್ಷ್ಮಿಯನ್ನು ಮನೆಗೆ ತುಂಬಿಸಿಕೊಳ್ಳುವ ಸಡಗರ. ಮನೆಮನೆಗಳಲ್ಲಿ ಸಂಭ್ರಮದ ವಾತಾವರಣ. ಕೆಲಸಕ್ಕೆ ಹೋಗುವ ಹೆಂಗಸಾದರೂ ಸಾಧ್ಯವಾದಷ್ಟು ಬೇಗ ಎದ್ದು ಪೂಜೆ ಮುಗಿಸಿ ಗಡಿಬಿಡಿಯಿಂದ ಬಗೆಬಗೆಯ ತಿನಿಸುಗಳನ್ನು ಮಾಡಿ, ಇನ್ನರ್ಧ ಗಂಟೆ ಲೇಟಾಗಿ ಬರುತ್ತೇನೆಂದು ಬಾಸ್‌ಗೆ ಫೋನಾಯಿಸಿ, ಮನೆಮಂದಿಗೆ ಮೃಷ್ಟಾನ್ನ ಬಡಿಸುವ ಸಡಗರ. 'ಕಮಲದಾ ಮೊಗದೋಳೆ ಕಮಲದಾ ಕಣ್ಣೋಳೆ ಕಮಲವಾ ಕೈಯಲ್ಲಿ ಹಿಡಿದೋಳೆ' ಎಂದು ದೇವಿಯನ್ನು ಪರಿಪರಿಯಾಗಿ ಸ್ತುತಿಸುತ್ತ 'ಆರತಿ ಬೆಳಗಿರೆ ನಾರಿಯರು..' ಎಂದು ಹಾಡುತ್ತ ಧನ್ಯತಾಭಾವ ತುಂಬಿಕೊಳ್ಳುವ ಹೆಂಗಸರಿಗೆ ಕೈತುಂಬಾ ಕೆಲಸ.

ಈ ಬಾರಿಯಾದರೂ ಇನ್ಕ್ರಿಮೆಂಟು ಸಿಗಲಪ್ಪಾ ಅಂತ ಒಬ್ಬ, ಫಾರಿನ್‌ಗೆ ಹೋಗುವ ಹಾಗೆ ಹರಸಮ್ಮ ತಾಯಿ ಅಂತ ಮತ್ತೊಬ್ಬಾಕೆ. ವೀಸಾ ಸಿಗಲಪ್ಪಾ ದೇವರೇ ಅಂತ ಬೇಡಿಕೊಳ್ಳುವವಳು ಇನ್ನೊಬ್ಬಾಕೆ. ಅಂಗಡಿ ಮುಂಗಟ್ಟುಗಳಲ್ಲಿ ನಾನಾ ಬಗೆಯ ಆಫರುಗಳ ಆಸೆಯನ್ನು ತೋರಿಸಿ ಲಾಭ ಮಾಡಿಕೊಳ್ಳುವ ಸ್ಟಂಟುಗಳು. ತಾಯಿ ಲಕ್ಷ್ಮಿ ಒಲಿಯಬೇಕೆಂದು ಯಾರಿಗೆ ಹಂಬಲವಿರುವುದಿಲ್ಲ ಹೇಳಿ? ವರಮಹಾಲಕ್ಷ್ಮಿ ಹಬ್ಬದಂದು ಅಕ್ಕ ಸುಷ್ಮಾ ಸ್ವರಾಜ್ ಬಳ್ಳಾರಿಗೆ ಬರ್ತಾರಾ?

ಪೂಜಾ ವಿಧಾನ : ಅಂದಿನ ದಿನ ಮುಂಜಾನೆ ಚುಮುಚುಮು ಬೆಳಕಿರುವಾಗಲೇ ಎದ್ದು, ಮನೆಯ ಮುಂದಿನ ಬಾಗಿಲಿಗೆ ಥಳಿ ರಂಗೋಲಿ ಹಾಕಿ, ಬಾಗಿಲಿಗೆ ಹಸಿರು ತೋರಣ ಕಟ್ಟಿದಾಗ ಮನೆಗೆ ಒಂದು ಬಗೆಯ ಕಳೆ. ಹೆಣ್ಣುಮಕ್ಕಳು ಅಭ್ಯಂಜನ ಮುಗಿಸಿಕೊಂಡು ರೇಷಿಮೆ ಬಟ್ಟೆ ಧರಿಸಿಕೊಂಡು ಸರಬರ ಓಡಾಡುತ್ತಾ ಪೂಜಾ ಸಾಮಗ್ರಿಗಳನ್ನೆಲ್ಲಾ ತಯಾರು ಮಾಡಿಕೊಂಡು ಪೂಜೆಗೆ ಸಿದ್ಧರಾಗುತ್ತಾರೆ.

ಆಭರಣಗಳಿಂದ ಭೂಷಿತೆಯಾದ ಲಕ್ಷ್ಮಿದೇವಿಯ ಮುಖವಾಡವನ್ನು ಒಂದು ಕಲಶದಲ್ಲಿರಿಸಿ ಅದಕ್ಕೆ ಚೆಂದವಾದ ಜರತಾರಿಯ ಅಂಚು ಸೆರಗು ಇರುವ ಸೀರೆಯನ್ನು ಉಡಿಸಲಾಗುತ್ತದೆ. ಹೀಗೆ ಅಲಂಕೃತಳಾದ ಶ್ರೀವಲ್ಲಭೆ ಬಾಳೆಯ ದಿಂಡಿನಿಂದ ಶೋಭಿತವಾದ ಒಂದು ಮಂಟಪದಲ್ಲಿ ಸ್ಥಾಪಿತಳಾಗುತ್ತಾಳೆ. ಆ ಮಂಟಪದ ಮೇಲ್ಭಾಗಕ್ಕೆ ಕಟ್ಟಿದ ಮಾವಿನ ತೋರಣ ಅದರ ಸೊಬಗನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಹೀಗೆ ಸ್ಥಾಪಿತವಾದ ಹರಿದ್ರಕುಂಕುಮಶೋಭಿತಳಾದ ಲಕ್ಷ್ಮಿದೇವಿಗೆ ಅರಿಶಿನ ಕುಂಕುಮ ಗೆಜ್ಜೆ ವಸ್ತ್ರ ಏರಿಸಿ ಪೂಜೆ ಮಾಡಲಾಗುತ್ತದೆ. ಸುಮಧುರ ಸುವಾಸನೆಯುಳ್ಳ ಸೇವಂತಿಗೆ, ಮಲ್ಲಿಗೆ, ಸಂಪಿಗೆ ಹೂವುಗಳಿಂದ ತಾಯಿ ಅಲಂಕೃತಳಾಗುತ್ತಾಳೆ. ಭಾಗ್ಯದ ಲಕ್ಷ್ಮಿ ಬಾರಮ್ಮ... ಎಂದು ಹಾಡುತ್ತ ಅತ್ಯಂತ ಹರ್ಷದಿಂದ, ಭಕ್ತಿಭಾವದಿಂದ ತಮ್ಮ ತಮ್ಮ ಮನೆಗಳಲ್ಲಿ ಶಾಶ್ವತವಾಗಿ ನೆಲೆಸಿ ಹರಿಸಲಿ ಎಂದು ಆಕೆಯನ್ನು ಬರಮಾಡಿಕೊಳ್ಳುತ್ತಾರೆ.

ನೈವೇದ್ಯಕ್ಕಾಗಿ ವಿಧವಿಧವಾದ ಸಿಹಿತಿನಿಸುಗಳನ್ನು ಮಾಡಿ ಆಕೆಗೆ ಮೀಸಲಿಡಲಾಗುತ್ತದೆ. ಅದರಲ್ಲೂ ಪುಟಾಣಿ ಸಕ್ಕರೆಯೆಂದರೆ ಸರ್ವಾಲಂಕಾರಭೂಷಿತೆಗೆ ಬಹಳ ಪ್ರಿಯ. ಹೀಗೆ ಬಗೆಬಗೆಯ ಹಣ್ಣು, ಕಾಯಿ, ಸಿಹಿತಿನಿಸು, ಹಾಲುಸಕ್ಕರೆಗಳನ್ನು ಆಕೆಗೆ ಸಮರ್ಪಿಸಲಾಗುತ್ತದೆ. ಈ ದಿನ ಮುತ್ತೈದೆಯರನ್ನು ಮನೆಗೆ ಆಮಂತ್ರಿಸಿ ಅವರಿಗೆ ಅರಿಶಿನ ಕುಂಕುಮದ ಜೊತೆಗೆ ಮರದ ಬಾಗಣವನ್ನು ಕೊಡಲಾಗುತ್ತದೆ.

ನಂತರ ಕೊನಗೆ, ತಮ್ಮ ಸಂಕಷ್ಟಗಳನ್ನು ದೂರಮಾಡಿ ಸುಖ ಶಾಂತಿ ಶಾಶ್ವತವಾಗಿ ನೆಲೆಸಲಿ, ಸಮೃದ್ಧಿಯನ್ನು ದಯಪಾಲಿಸಲಿ ಎಂದು ಹೆಂಗಳೆಯರು ಆರತಿ ಬೆಳಗುತ್ತ..

ಆರತಿ ಬೆಳಗಿರೆ ನಾರಿಯರು ಬೇಗ ಆದಿ
ಕೊಲ್ಹಾಪುರದ ಮಹಾಲಕ್ಷ್ಮಿಗೆ
ಹಾಡುತ ಪಾಡುತ ಜಾಣೆಯರೆಲ್ಲರು ಆದಿ ನಾರಾಯಣ ಪ್ರಿಯಳಿಗೆ...

ಎಂದು ಹಾಡುತ್ತಾರೆ.

ಆನಂದತೀರ್ಥ ವರದೇ ದಾನ ವಾರಣ್ಯ ಪಾವಕೆ
ಜ್ಞಾನದಾಯಿನಿ ಸರ್ವೇಶೇ ಶ್ರೀನಿವಾಸೇಸ್ತು ಮೇಮನಃ
ಶ್ರೀ ವೆಂಕಟೇಶಂ ಲಕ್ಷ್ಮೀಶಂ ಅನಿಷ್ಟಘ್ನಮಭೀಷ್ಟದಂ
ಚತುರ್ಮುಖೇರ ತನಯಂ ಶ್ರೀನಿವಾಸಂ ಭಜೇ ನಿಶಂ

ಈ ಮಂತ್ರವನ್ನು ಪಠಿಸಿದರೆ ಶ್ರೀವರಮಹಾಲಕ್ಷ್ಮಿ ಎಲ್ಲರಿಗೆ ಅನುಗ್ರಹ ಮಾಡುತ್ತಾಳೆ ಎಂಬ ನಂಬಿಕೆ.

ಜೋಕಿನಂಗಳ

ವನಜಮ್ಮ:ಏನು ಅನ್ಯಾಯ ಇದೂ ಸರಸ್ವತಮ್ಮಾ ಮಲ್ಲೇಶ್ವರಮ್ ನಲ್ಲಿ ಇವತ್ತು 17ಸಲ ಕರಂಟ್ ಹೋಯ್ತಂತೆ
ಸರಸ್ವತಮ್ಮ: ಯಾಕ್ರಿ ಅನ್ಯಾಯ ವನಜಮ್ಮ 16ಸಲ ವಾಪಸ್ ಬಂತಲ್ಲ,ಅದು ನ್ಯಾಯ ತಾನೆ?


ತಿಮ್ಮ:ನಮ್ಮ PWD ಗುಮಾಸ್ತ ಸುಳ್ಳು ಲೆಕ್ಕ ಬರೆದಿದ್ದಾನೆ, ಕಡಿಮೆ ಅಂದ್ರೆ ಐದು ಸಾವಿನ ನುಂಗಿದ್ದಾನೆ
ಗುಂಡ:ನಿಂಗೆ ಹೇಗೆ ಗೊತ್ತಾಯ್ತು?
ತಿಮ್ಮ:ಆ ಭೂಪಾ ರೋಡ್ ರೋಲರ್ ಪಂಚರ್ ಗೆ ಲೆಕ್ಕ ಬರೆದಿದ್ದನೆ ನೋಡು

ಸೇಲ್ಸ್ ಮ್ಯಾನ್:ಸಾರ್ ನಿಮಗೆ ಪೌಡರ್ ಬೇಕಾ?
ಗುಂಡ:ಯಾರಿಗೆ ಇದು?
ಸೇಲ್ಸ್ ಮ್ಯಾನ್:ಇಲಿಗಳಿಗೆ ಸಾರ್
ಗುಂಡ:ಬೇಡ ಇವತ್ತು ಪೌಡರ್ ಕೊಟ್ರೆ ನಾಳೆ ಲಿಪ್ಸ್ ಟಿಕ್ ಕೇಳಬಹುದು....

ಗುಂಡ:ನಿನಗೆ ಎಷ್ಟು ಮಾರ್ಕ್ಸ್ ಬಂತು?
ತಿಮ್ಮ: 99%
ಗುಂಡ:ಅಬ್ಬ ಅಷ್ಟರಲ್ಲಿ ಮೂರುಜನ ಪಾಸ್ ಆಗಬಹುದಿತ್ತು


ಗಂಡ ಹೆಂಡಿರ ಜಗಳ ಗಂಡ" ನಾನು ಹೊರಟು ಹೋದರೆ ನನ್ನಂಥಾ ಗಂಡ ಹುಡುಗಿದರೂ ನಿನಗೆ ಸಿಕ್ಕಲ್ಲ ನೋಡ್ತಿರು" ಹೆಂಡ್ತಿ "ನಿನ್ನಂಥಾ ಗಂಡನ್ನ ಹುಡುಕೋದಾದ್ರೂ ಯಾರು?"

"ನೀವು ಕುಡೀತೀರಾ" ಭಾವೀ ಅಳಿಯನನ್ನು ಮಾವ ಕೇಳಿದ.ಅದಕ್ಕೆ ಅಳಿಯ "ಇದು ಪ್ರಶ್ನೆನೋ ಆಹ್ವಾನನೋ ತಿಳೀ ಲಿಲ್ಲ" ಎಂದ

ಹೆಂಡತಿ ಕಾವಲಿಯ ಮೇಲೆ ದೋಸೆ ಹಾಕುತ್ತಿರಲು ಗಂಡ ಅಲ್ಲಿಗೆ ಬಂದು"ಏಯ್ ಸ್ವಲ್ಪ ತಾಳು ಬಿಸಿ ಆಗ್ಲಿ,ಈಗ ಹಾಕು ಎಣ್ಣೆ ಹಾಕು ಸರಿಯಾಗಿ ಹಿಟ್ಟು ಕಲಕಿ ಕಲಕಿ ಸೌಟು ಸುರಿ,ತಿರುವು, ಹಾಗೆ, ಅಲ್ಲ ನಿಧಾನ ,ತಟ್ಟೆ ಮುಚ್ಚು,ತಾಳು ತಟ್ಟೆ ತೆಗಿ, ಇಲ್ಲ ಇನ್ನೂ ಆಗಿಲ್ಲ, ಈಗ ಸರಿಯಾಗಿ ಕೆಂಪಗೆ ಆಗಿಲ್ಲ ಗರಿಗರಿ ಆಗಬೇಕು...."ಹೆಂದತಿಗೆ ರೇಗಿತು"ಏನ್ರಿ ಯಾವತ್ತೂ ದೋಸೆನೇ ಮಾಡಿಲ್ವ ನಾನು ಹೀಗೆ ಟೀಚ್ ಮಾಡ್ತಿದ್ದೀರಾ" ಅದಕ್ಕೆ ಗಂಡ"ನಾನು ಡ್ರೈವ್ ಮಾಡುವಾಗ ದಿನಾ ನೀನು ನನಗೆ....ಎದೇ ರೀತಿ ಅಲ್ವಾ ಟೀಚ್ ಮಾಡೋದು"ಅಂದ.

ಅಪ್ಪ: ಲೋ ತಿಮ್ಮ ನಾಯಿ ಬಾಲಕ್ಕೆ ಯಾಕೋ ಪೈಪ್ ಹಾಕ್ತಾ ಇದ್ದೀಯಾ,ಅದು ಯಾವತ್ತೂ ನೆಟ್ಟಗೆ ಆಗೋಲ್ಲ
ತಿಮ್ಮ:ಅದಕ್ಕೇ ಅಪ್ಪ ಪೈಪ್ ಸೊಟ್ಟ ಮಾಡ್ತಾ ಇದ್ದೀನಿ

ಗುಂಡ: ನಮ್ಮ ಅಜ್ಜ ಸಾಯೋವಾಗ ತುಂಬ ಆಸ್ತಿ ಬಿಟ್ಟು ಹೋದ,ನಿನ್ನಜ್ಜ?
ತಿಮ್ಮ: ನನ್ನಜ್ಜ ಸಾಯೋವಾಗ ಲೋಕಾನೇ ಬಿಟ್ಟು ಹೋದ

ಪ್ರೀತಿ:ಯಾಕೆ ಗುಂಡ ನನ್ನ ಹತ್ರ ಮಾತೇ ಆಡ್ತಾ ಇಲ್ಲ
ಗುಂಡ: ನೀನೇ ಹೇಳಿದ್ಯಲ್ಲ?ಪ್ರೀತಿಗಿಂತ ಸ್ನೇಹಾನೇ ಶಾಶ್ವತ ಅಂತ.....ಅದಕ್ಕೆ ನಿನ್ನ ಬಿಟ್ಟು ಸ್ನೇಹಾನ ಲವ್ ಮಾಡ್ತಿದ್ದೀನಿ


ನ್ಯಾಯಾಧೀಶ: ಈತನಿಗೆ ಎರಡೂ ಕಿವಿಗಳನ್ನು ಕತ್ತರಿಸಿ
ಗುಂಡ:ಅಯ್ಯೋ ಬೇಡಾ ಸ್ವಾಮಿ ನಾನು ಕುರುಡ ಆಗೋಗ್ತೀನಿ
ನ್ಯಾಯಾಧೀಶ:ಮೂರ್ಖ ಕಿವಿ ಕತ್ತರಿಸಿದರೆ ಕುರುಡು ಹೇಗೆ ಆಗ್ತಾರೆ?
ಗುಂಡ:ಆಮೇಲೆ ಕನ್ನಡಕ ಎಲ್ಲಿ ಹಾಕಲಿ?

ಪೋಲೀಸ್:ನೀನು ಯಾವಾಗ್ಲೂ ಅವರ ಮನೇಲೇ ಯಾಕೆ ಕಳ್ಳತನ ಮಾಡ್ತಿದ್ಯಾ
ಕಳ್ಳ:ಎಲ್ಲರಿಗೂ ಫ್ಯಾಮಿಲಿ ಡಾಕ್ಟರ್, ಲಾಯರ್ ಇರ್ತಾರಲ್ಲ ಹಾಗೆ ನಾನು ಅವರ ಫ್ಯಾಮಿಲಿ ಕಳ್ಳ

ಗುಂಡ ಪೋಲೀಸ್ ಸ್ಟೇಷನ್ ಮುಂದೆ ನಿಂತು ಸುಸು ಮಾಡ್ತಿದ್ದ
ಪೋಲೀಸ್:ಏ ಗುಂಡ ಸ್ಟೇಷನ್ ಮುಂದೆ ಹೀಗೆ ಸುಸು ಮಾಡಿದ್ರೆ ಹಿಡ್ಕೊಂದ್ ಬಿಡ್ತೀನಿ ಹುಷಾರ್
ಗುಂಡ: ಹಿಡ್ಕೊಂಡ್ ಹೋಗಿ ಸಾರ್ ಸುಮ್ಮನೆ ವೇಸ್ಟ್ ಆಗ್ತಿದೆ

ಗುಂಡ: ಅಪ್ಪಾ ನೀನು ಈಜಿಪ್ಟ್ ಗೆ ಹೋಗಿದ್ಯಾ?
ಅಪ್ಪ: ಇಲ್ಲಾ ಕಣೋ,ಯಾಕೆ?
ಗುಂಡ:ಹಾಗಿದ್ರೆ ಈ ಮಮ್ಮಿ ನಿನ್ನಹತ್ರ ಹ್ಯಾಗೆ ಬಂದಳು?

ತಿಮ್ಮ:ನಮ್ಮ PWD ಗುಮಾಸ್ತ ಸುಳ್ಳು ಲೆಕ್ಕ ಬರೆದಿದ್ದಾನೆ, ಕಡಿಮೆ ಅಂದ್ರೆ ಐದು ಸಾವಿನ ನುಂಗಿದ್ದಾನೆ
ಗುಂಡ:ನಿಂಗೆ ಹೇಗೆ ಗೊತ್ತಾಯ್ತು?
ತಿಮ್ಮ:ಆ ಭೂಪಾ ರೋಡ್ ರೋಲರ್ ಪಂಚರ್ ಗೆ ಲೆಕ್ಕ ಬರೆದಿದ್ದನೆ ನೋಡು

ಬಾಸ್ - ನಮಗೆ ಒಬ್ಬ ಜವಾಬ್ದಾರಿಯುತ ನೌಕರ ಬೇಕಾಗಿದೆ
ಗುಂಡ - ಹಾಗಿದ್ರೆ ನಾನೇ ಅದಕ್ಕೆ ಲಾಯಕ್ಕು ಸ್ವಾಮಿ, ನನ್ನ ಹಿಂದಿನ ಕೆಲಸದಲ್ಲಿ ಎಲ್ಲಾ ತಪ್ಪಿಗೂ ನಾನೆ ಜವಾಬ್ದಾರಿ ಅಂತಿದ್ರು....ಊ..


ಹೆಂಡತಿ - ರೀ ನಿಮ್ಮ ತಲೇಲಿ ಬರೀ ಗೊಬ್ಬರಾನೇ ತುಂಬಿದೆ.
ಗಂಡ - ಮತ್ಯಾಕೆ ಅದನ್ನೇ ತಿಂತೀಯಾ?

ಗುಂಡ ಹಜಾಮನ ಬಳಿಹೋಗಿ "ಹೇರ್ ಕಟ್ ಗೆ ಎಷ್ಟು?" ಎಂದ   ಹಜಾಮ:"20 ರೂಪಾಯಿ"  ಗುಂಡ:"ಶೇವಿಂಗ್ ಗೆ?"   ಹಜಾಮ:"10 ರೂಪಾಯಿ"     ಗುಂಡ:"ಹಾಗಾದರೆ ಇಡೀ ತಲೇಗೇ ಶೇವಿಂಗೇ ಮಾಡಿ" ತಲೆಯನ್ನು ಸವರಿಕೊಳ್ಳುತ್ತಾ

ರೀ ನಾನು ದೂರ ಹೋದಾಗ ಕಳೆದು ಹೋದ್ರೆ?....ಪೇಪರ್ನಲ್ಲಿ ಹಾಕಿಸ್ತೀನಿ.....”ಏನಂತ?”....... ”ಎಲ್ಲೇ ಇರು ಹೇಗೇ ಇರು ಅಲ್ಲೇ ಹಾಯಾಗಿರು ಅಂತ”.

ಗೆಳೆಯನನ್ನು ಆಸ್ಪತ್ರೆಯಲ್ಲಿ ನೋಡಲು ಹೋದ ಗುಂಡ ನರ್ಸ್ ನನ್ನು ಕರೆದು ಕೇಳಿದ."ಅಲ್ಲಾ ಅದ್ಯಾಕೆ ನೀವು ಎದೆ ಮೇಲೆ ಹಿಂಭಾಗದಲ್ಲಿ ಅಷ್ಟೊಂದು ಪಿನ್ ಗಳನ್ನ ಚುಚ್ಚಿಕೊಂಡಿದ್ದೀರಿ " ಅದಕ್ಕೆ ನರ್ಸ್ ಕೇಳಿದಳು"ಏನಿಲ್ಲಾ ಡಾಕ್ಟರ್ ಗಳನ್ನ ದೂರ ಇಡೋಕೆ"

ಇಬ್ಬರು ಸ್ನೇಹಿತರಿಗೆ 3 ಬಾಂಬುಗಳು ಸಿಕ್ಕಿದವು. ಪೋಲೀಸರಿಗೆ ಒಪ್ಪಿಸಲು ತೆಗೆದುಕೊಂಡು ಹೋಗುವಾಗ ಒಬ್ಬ ಹೇಳಿದ
`ಅಕಸ್ಮಾತ್ ದಾರಿಯಲ್ಲಿ 1 ಬಾಂಬ್ ಢಂ ಅಂದ್ಬಿಟ್ರೆ ಏನ್ ಮಾಡೋದು ?'
ಇನೊಬ್ಬ : 3 ರಲ್ಲಿ ಎರಡೇ ಸಿಕ್ಕಿದ್ದು ಅನ್ನೋದು ಅಷ್ಟೇ” !!!

ತಂದೆ:"ಶಾಲೆ ಬಾಗಿಲು ಯಾವಾಗ ತೆಗೆಯುತ್ತದೆಯೋ?" ಮಗ:"ಅದಕ್ಕೇನಪ್ಪಾ ಬೀಗದ ಕೈ ಇದ್ದರೆ ಯಾವಾಗ ಬೇಕಾದ್ರೂ ತೆಗೀಬಹುದು"