ಪುಟಗಳು

ಶ್ರೀರಾಮುಲು ಬಿಎಸ್ಆರ್ ಸೇರಲಿರುವ ಪ್ರೇಮ್-ರಕ್ಷಿತಾ

Prem Rakshita

ಬಿ ಶ್ರೀರಾಮುಲು ನೇತೃತ್ವದ ಬಡವ, ಶ್ರೀಮಂತ, ಶ್ರಮಿಕರ ಪಕ್ಷ (ಬಿಎಸ್ಆರ್ ಪಕ್ಷ)ಕ್ಕೆ ನಿರ್ದೇಶಕ ಪ್ರೇಮ್ ಹಾಗೂ ಅವರ ತಾರಾಪತ್ನಿ ರಕ್ಷಿತಾ ಪ್ರೇಮ್ ಸೇರಲಿದ್ದಾರೆ.

ಬೆಂಗಳೂರಿನ ರಾಜಾಜಿನಗರದಲ್ಲಿರುವ ಶ್ರೀರಾಮುಲು ಆಫೀಸಿನಲ್ಲಿ ಮಾರ್ಚ್ 9 ರಂದು ಅಧಿಕೃತವಾಗಿ ಪ್ರೇಮ್-ರಕ್ಷಿತಾ ದಂಪತಿಗಳು ಪಕ್ಷ ಸೇರಲಿದ್ದಾರೆ ಎಂದು ವಿಶ್ವಸನೀಯವಾಗಿ ಗೊತ್ತಾಗಿದೆ. ರಾಷ್ಟ್ರೀಯ ಪಕ್ಷಗಳನ್ನು ಬಿಟ್ಟು ಶ್ರೀರಾಮುಲು ಅವರ ಪ್ರಾದೇಶಿಕ ಪಕ್ಷವನ್ನು ಈ ದಂಪತಿಗಳು ಸೇರುತ್ತಿರುವ ಔಚಿತ್ಯವೇನೆಂಬುದು ಸದ್ಯಕ್ಕೆ ಸಸ್ಪೆನ್ಸ್.

ರಾಜಕೀಯದ ಅಂಗಳಕ್ಕೆ ಇದೀಗ ತಾರಾಮೆರಗು ಹೆಚ್ಚುತ್ತಿದೆ. ನಟಿ ರಮ್ಯಾ ಕಾಂಗ್ರೆಸ್ ಸೇರಿದ್ದಾಗಿದೆ. ಇತ್ತೀಚಿಗೆ ನಟಿ ಪೂಜಾ ಗಾಂಧಿ ಜೆಡಿಎಸ್ ಪಕ್ಷ ಸೇರಿಕೊಂಡಿದ್ದಾರೆ. ಮೊನ್ನೆ ಮೊನ್ನೆ ನಟಿ ಮಾಳವಿಕಾ ಕೂಡ ಜೆಡಿಎಸ್ ಸೇರಿದ್ದು ಹೊಸ ಬೆಳವಣಿಗೆ ಎನಿಸಿತ್ತು. ಇದೀಗ ಪ್ರೇಮ್, ರಕ್ಷಿತಾ ಸೇರುವ ಸುದ್ದಿಯೊಂದಿಗೆ ಹೊಸ ಸಂಚಲನ ಮೂಡಿದಂತಾಗಿದೆ.

ಈಗಾಗಲೇ ನಟಿ ಉಮಾಶ್ರೀ ರಾಜಕೀಯ ವಲಯದಲ್ಲಿ ಹೆಸರು ಮಾಡಿದ್ದಾರೆ. ನಟಿ ಶ್ರುತಿಗೆ ಕೂಡ ಜೆಡಿಎಸ್ ಪಕ್ಷಕ್ಕೆ ಬಹಿರಂಗವಾಗಿವೇ ಎಚ್ ಡಿ ಕುಮಾರಸ್ವಾಮಿ ಆಮಂತ್ರಿಸಿದ್ದಾಗಿದೆ. ಇನ್ನೇನು ಸದ್ಯದಲ್ಲೇ ಶ್ರುತಿ ಕೂಡ ರಾಜಕೀಯ ಸೇರಲಿದ್ದಾರೆಂಬ ವದಂತಿ ದಟ್ಟವಾಗಿದೆ. ಚುನಾವಣೆಗೆ ಕಾಲ ಸನ್ನಿಹಿತವಾಗುತ್ತಿದ್ದಂತೆ ಇನ್ನೆಷ್ಟು ಜನ ಯಾವ ಯಾವ ಪಕ್ಷಕ್ಕೆ ಸೇರಲಿದ್ದಾರೋ ಎಂಬ ಜಿಜ್ಞಾಸೆ ಪ್ರಾರಂಭವಾಗಿದೆ. (ಒನ್ ಇಂಡಿಯಾ ಕನ್ನಡ)

ಎದ್ದ ಕೂಡಲೆ ನ್ಯೂಸ್ ಪೇಪರ್ ಓದಬಾರದು!

Healthy Tips From Robin Sharma
ಎಲ್ಲಾ ದೇಶಗಿಂತ ದೊಡ್ಡ ದೇಶ ಉಪದೇಶ. ಆದರೆ ಅನುಭವಿ ವ್ಯಕ್ತಿಗಳ ಮಾತು ಉಪದೇಶ ಎಂದು ಕಡೆಗಣಿಸಿದರೆ ನಷ್ಟ ನಮಗೆ. ಸರಳವಾದ ವಿಧಾನಗಳು ನಮ್ಮ ಬದುಕನ್ನು ಉತ್ತಮ ಪಡಿಸುತ್ತದೆ ಎಂದಾದರೆ ಅದನ್ನು ಪಾಲಿಸುವುದರಲ್ಲಿ ತಪ್ಪೇನಿದೆ?

ದಿನ ಬೆಳಗಾದರೆ ಟಾರ್ಗೆಟ್, ಡೆಡ್ ಲೈನ್ ಅಂತ ಯೋಚಿಸುತ್ತಾ ಟೆನ್ಷನ್ ಹೆಚ್ಚಿ ಮಾಡುವುದರಿಂದ ಆರೋಗ್ಯ ಹಾಳಾಗುವುದು. ಜೀವನವನ್ನು ಸಂತೋಷದಿಂದ ಕಳೆಯಲು ಮತ್ತು ಸವಾಲುಗಳನ್ನು ಧೈರ್ಯವಾಗಿ ಎದುರಿಸಲು ಅಂತಾರಾಷ್ಟ್ರೀಯ ಖ್ಯಾತಿಯ ಲೀಡರ್ಶಿಪ್ ಗುರು ರಾಬಿನ್ ಶರ್ಮ ಅನುಸರಿಸುವ ಸರಳ ವಿಧಾನ ನೋಡಿ ಇಲ್ಲಿದೆ:

1. ಮುಂಜಾನೆ ಬೇಗನೆ ಏಳುವುದು: ಮುಂಜಾನೆ ಬೇಗನೆ ಏಳುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹೆಚ್ಚಾಗುವುದು. ಲೇಟಾಗಿ ಎದ್ದು ಅವಸರವಾಗಿ ಕೆಲಸ ಕಾರ್ಯವನ್ನು ಮಾಡುವುದರಿಂದ ಮಾನಸಿಕ ಒತ್ತಡ ಹೆಚ್ಚುವುದು.

2. ಒಂದು ಲೋಟ ನೀರು ಕುಡಿಯುವುದು: ಬೆಳಗ್ಗೆ ಎದ್ದ ಕೂಡಲೇ ಬಾಯಿ ಕೂಡ ತೊಳೆಯದೆ ಒಂದು ಲೋಟ ನೀರು ಕುಡಿದರೆ ದೇಹ ಶುದ್ಧಿಯಾಗುತ್ತದೆ. ಇದರಿಂದ ದೇಹದಲ್ಲಿ ಚೈತನ್ಯ ಹೆಚ್ಚಾಗುವುದು.

3. ನ್ಯೂಸ್ ಪೇಪರ್ ಓದಬಾರದು: ಹೌದು ಇದನ್ನು ಕೇಳಿದರೆ ಆಶ್ಚರ್ಯವಾಗುವುದು ದಿಟ. ಆದರೆ ಬೆಳಗ್ಗೆ ಎದ್ದ ಕೂಡಲೆ ನ್ಯೂಸ್ ಪೇಪರ್ ನೋಡಿದರೆ ಅದರಲ್ಲಿರುವ ವಿಷಯಗಳೇ ಮನಸ್ಸನ್ನು ಕೊರೆಯುವುದು.

ಇದರ ಬಗ್ಗೆ ಒಂದು ಸಮೀಕ್ಷೆಯೊಂದು ನಡೆಸಲಾಗಿದೆ. ಅದರಲ್ಲಿ ದಿನಾ ಬೆಳಗ್ಗೆ ನ್ಯೂಸ್ ಪೇಪರ್ ಓದುವವರಿಗೆ ಮತ್ತು ಓದದವರಿಗೆ ಒಂದೇ ರೀತಿಯ ಪೋಟೊಗಳನ್ನು ತೋರಿಸಲಾಗಿತ್ತು. ಅದರಲ್ಲಿ ನ್ಯೂಸ್ ಪೇಪರ್ ನೋಡಿದವರಿಗಿಂತ ನೋಡದವರು ಆ ಫೋಟೊಗಳನ್ನು ನೋಡಿ ಹೆಚ್ಚು ಆನಂದಿಸುತ್ತಿದ್ದರು.

ಇವರ ಪ್ರಕಾರ ಎದ್ದ ಕೂಡಲೆ ನ್ಯೂಸ್ ಪೇಪರ್ ನಲ್ಲಿ ತಲೆದೂರಿಸುವುದಕ್ಕಿಂತ ಸುತ್ತಮುತ್ತಲಿನ ಸಣ್ಣ-ಪುಟ್ಟ ವಿಷಯಗಳನ್ನು ಮೊದಲು ಆನಂದಿಸಿ. ತಿಂಡಿಯ ನಂತರ ಪೇಪರ್ ನೋಡುವುದು ಒಳ್ಳೆಯದು.

4. 200% ಕೆಲಸ: ಮಾಡುವ ಕೆಲಸ ಯಾವುದೇ ಆಗಿರಲಿ ಅದನ್ನು 200% ಶೃದ್ಧೆಯಿಂದ ಮಾಡಬೇಕು. ಆಗ ಯಶಸ್ವು ತನ್ನಿಂದ ತಾನೆ ಬರುವುದು.

                                                                                                                                              One India Kannada

ಸಂಚಾರಿ ನಿಯಮ ಉಲ್ಲಂಘಿಸಿದರೆ ಫೈನೆಷ್ಟು? ಜೈಲೆಷ್ಟು?

What Is The New Fine For Traffic Violations 
ಮೋಟರ್ ವೆಹಿಕಲ್ ಕಾಯಿದೆ ಕಠಿಣವಾಗಿದೆ. ಸಂಚಾರಿ ನಿಯಮ ಉಲ್ಲಂಘನೆಗೆ ಐದು ಪಟ್ಟು ಹೆಚ್ಚು ದಂಡ ಮತ್ತು ಜೈಲು ಶಿಕ್ಷೆ ವಿಧಿಸುವ ನೂತನ ಪ್ರಸ್ತಾಪಕ್ಕೆ ಕೇಂದ್ರ ಸಂಪುಟ ಸಮ್ಮತಿಸಿದೆ. ಈ ಕುರಿತ ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿರಿ.

ಸಂಚಾರಿ ನಿಯಮದ ತಪ್ಪುಗಳಿಗೆ ಎಷ್ಟು ದಂಡ ಮತ್ತು ಎಷ್ಟು ವರ್ಷ ಜೈಲು ಶಿಕ್ಷೆ?

* ಕುಡಿದು ವಾಹನ ಚಾಲನೆ ಮಾಡಿದರೆ 2,000 ರು.ನಿಂದ 10 ಸಾವಿರ ರು.ವರೆಗೆ ದಂಡ ಅಥವಾ ಆರು ತಿಂಗಳಿನ ವರೆಗೆ ಜೈಲು ಶಿಕ್ಷೆ(ಓದಿ: ಕುಡಿದು ಡ್ರೈವಿಂಗ್ ಮಾಡಿದ್ರೆ 4 ವರ್ಷದವರೆಗೆ ಜೈಲು! )

* ಸಿಗ್ನಲ್ ಜಂಪ್ ಮಾಡಿ ಪ್ರಪ್ರಥಮ ಬಾರಿ ಸಿಕ್ಕಿಬಿದ್ದರೆ 100 ರು.ನಿಂದ 500 ರು.ವರೆಗೆ ದಂಡ. ಮತ್ತೊಮ್ಮೆ ಇದೇ ತಪ್ಪು ಮಾಡಿ ಸಿಕ್ಕಿಬಿದ್ದರೆ 300 ರು.ನಿಂದ 1,500 ರು.ವರೆಗೆ ದಂಡ ವಿಧಿಸಲು ಅವಕಾಶವಿದೆ.

* ಮಾದಕ ದ್ರವ್ಯ ಸೇವಿಸಿ ವಾಹನ ಚಾಲನೆ ಮಾಡಿ ಸಿಕ್ಕಿಬಿದ್ದರೆ ಮೊದಲ ಪ್ರಕರಣಕ್ಕೆ ಆರು ತಿಂಗಳ ಜೈಲು ಶಿಕ್ಷೆ ಅಥವಾ ಐದು ಸಾವಿರ ರುಪಾಯಿ ದಂಡ. ಮತ್ತೊಮ್ಮೆ ಇದೇ ತಪ್ಪು ಮಾಡಿ ಸಿಕ್ಕಿಬಿದ್ದರೆ 10 ಸಾವಿರ ರು. ದಂಡ ಅಥವಾ ಆರು ತಿಂಗಳ ಸಜೆ ಮತ್ತು ಡ್ರೈವಿಂಗ್ ಲೈಸನ್ಸ್ ರದ್ದು ಮಾಡಲಾಗುತ್ತದೆ.

* ವೇಗಮಿತಿ ಮೀರಿ ವಾಹನ ಚಾಲನೆ ಮಾಡಿದರೆ ಮೊದಲಿಗೆ 400 ರು.ನಿಂದ 1 ಸಾವಿರ ರುಪಾಯಿವರೆಗೆ ದಂಡ. ಮತ್ತೊಮ್ಮೆ ಇದೇ ತಪ್ಪು ಮಾಡಿ ಸಿಕ್ಕಿಬಿದ್ದರೆ 2 ಸಾವಿರ ರು.ನಿಂದ 5 ಸಾವಿರ ರು.ವರೆಗೆ ದಂಡ.

* ಅಪಾಯಕಾರಿಯಾಗಿ ವಾಹನ ಚಾಲನೆ ಮಾಡಿದರೆ 1 ಸಾವಿರ ರುಪಾಯಿ ದಂಡ ಅಥವಾ ಆರು ತಿಂಗಳ ಸಜೆ. ಮತ್ತೊಮ್ಮೆ ಇದೇ ತಪ್ಪು ಮಾಡಿದರೆ 2 ಸಾವಿರ ರುಪಾಯಿಯಿಂದ 5 ಸಾವಿರ ರುಪಾಯಿವರೆಗೆ ದಂಡ ಅಥವಾ 2 ವರ್ಷ ಜೈಲು ಶಿಕ್ಷೆ.

* ಸೀಟ್ ಬೆಲ್ಟ್ ಧರಿಸದೇ ವಾಹನ ಚಾಲನೆ ಮಾಡಿದರೆ 500 ರುಪಾಯಿಯಿಂದ 1 ಸಾವಿರ ರುಪಾಯಿವರೆಗೆ ದಂಡ ವಿಧಿಸಲು ಅವಕಾಶವಿದೆ.

* ರಿಜಿಸ್ಟ್ರೇಷನ್ ಆಗದ ವಾಹನ ಚಲಾಯಿಸಿದರೆ 20 ಸಾವಿರ ರು. ದಂಡ ಮತ್ತು ಒಂದು ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.

* ಹೆಲ್ಮೆಟ್ ಧರಿಸದೇ ದ್ವಿಚಕ್ರವಾಹನ ಸವಾರಿ ಮಾಡಿದರೆ 500 ರುಪಾಯಿ ದಂಡ. ಇದೇ ತಪ್ಪನ್ನು ಮತ್ತೊಮ್ಮೆ ಮಾಡಿ ಸಿಕ್ಕಿಬಿದ್ದರೆ 1 ಸಾವಿರ ರು.ನಿಂದ 1,500 ರು.ವರೆಗೆ ದಂಡ ವಿಧಿಸಲಾಗುತ್ತದೆ.

ಸಂಚಾರಿ ನಿಯಮಗಳನ್ನು ಪಾಲಿಸಿ ವಾಹನ ಚಲಾಯಿಸಿ

ಮಾ.15 ರಿಂದ ಮಾ.30 ರ ತನಕ II ಪಿಯೂ ಪರೀಕ್ಷೆ

 2nd PUC 2012 Exam Time Table
 
ಬೆಂಗಳೂರು, ಮಾ.4: ದ್ವೀತಿಯ ಪಿಯುಸಿ ಪರೀಕ್ಷೆ ಮಾ.15ರಿಂದ 30ರ ವರೆಗೆ ನಡೆಯಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
  
ದ್ವಿತೀಯ ಪಿಯುಸಿ ಪರೀಕ್ಷೆ ಈಗಾಗಲೇ ಪವಿ ಪೂರ್ವ ಪರೀಕ್ಷಾ ಮಂಡಳಿ(KBPUE) ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಜ್ಯದ ಒಟ್ಟು 923 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಪ್ರಸಕ್ತ ಸಾಲಿನಲ್ಲಿ ಒಟ್ಟು 5,96,739 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಪರೀಕ್ಷಾ ಅಕ್ರಮ ತಡೆಗೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸೇರಿದಂತೆ ಅಧಿಕಾರಿಗಳ ಜಾಗೃತದಳ ರಚಿಸಲಾಗಿದೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಮಾಹಿತಿ ನೀಡಿದರು.

ವೇಳಾ ಪಟ್ಟಿ ಹೀಗಿದೆ:
ದಿನಾಂಕವಿಷಯ
ಮಾ.15ಇತಿಹಾಸ
ಮಾ.16ಜೀವಶಾಸ್ತ್ರ / ಬಿಸಿನೆಸ್ ಸ್ಟಡೀಸ್
ಮಾ.17ರಾಜ್ಯಶಾಸ್ತ್ರ/ ಗಣಿತ(basic)
ಮಾ.19ಅರ್ಥಶಾಸ್ತ್ರ / ಭೂಗರ್ಭಶಾಸ್ತ್ರ
ಮಾ.20ಗಣಿತ / ಭೂಗೋಳ ಶಾಸ್ತ್ರ
ಮಾ.21ಸಮಾಜಶಾಸ್ತ್ರ/ Statistics
ಮಾ.22ಭೌತಶಾಸ್ತ್ರ / ಶಾಸ್ತ್ರೀಯ ಸಂಗೀತ/ಹಿಂದೂಸ್ತಾನಿ ಸಂಗೀತ/ಮನೋವಿಜ್ಞಾನ
ಮಾ.24ಎಲೆಕ್ಟ್ರಾನಿಕ್ಸ್ / ಕಂಪ್ಯೂಟಕ್ ವಿಜ್ಞಾನ
ಮಾ.26ಇಂಗ್ಲೀಷ್
ಮಾ.28ರಸಾಯನಶಾಸ್ತ್ರ / ಐಚ್ಛಿಕ ಕನ್ನಡ
ಮಾ.29ಕನ್ನಡ / ತಮಿಳು / ಮಲೆಯಾಳಂ / ಮರಾಠಿ /ಅರೇಬಿಕ್ / ಫ್ರೆಂಚ್
ಮಾ.30ಹಿಂದಿ / ಉರ್ದು / ತೆಲುಗು / ಸಂಸ್ಕೃತ
 

ಆಗಬಾರದ್ದು ಆಗಿಬಿಟ್ತು, ಕಾರಂತಜ್ಜನ ಮನೆ ನೆಲಸಮ

Kota Shivaram Karanth House
 
ಉಡುಪಿ, ಮಾ.1: "ಕಡಲ ತೀರದ ಭಾರ್ಗವ" ಎಂದು ಪ್ರಸಿದ್ಧರಾದ, ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡದ ಹೆಮ್ಮೆಯ ಸಾಹಿತಿ ಕೋಟ ಶಿವರಾಮ ಕಾರಂತರ ಕೋಟದಲ್ಲಿರುವ ಮೂಲ ಮನೆ ಬುಡಕ್ಕೆ ಸರ್ಕಾರ ಕೈ ಹಾಕಿದೆ. ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಹಿನ್ನೆಲೆಯಲ್ಲಿ ಕಾರಂತರ ಮನೆ ಮುಂಭಾಗ ನೆಲಸಮವಾಗಿದೆ.

ರಾಷ್ಟ್ರೀಯ ಹೆದ್ದಾರಿ-66ರ ಚತುಷ್ಪಥ ಕಾಮಗಾರಿಗಾಗಿ ಗಿಳಿಯಾರು ಮತ್ತು ಕೋಟತಟ್ಟು ಗ್ರಾಮ ವ್ಯಾಪ್ತಿಯಲ್ಲಿನ ಕಾರಂತರ ಮನೆ ತೆರವುಗೊಳಿಸದಂತೆ ಸಾಹಿತ್ಯಾಸಕ್ತರು, ಕನ್ನಡಪರ ಸಂಘಟನೆಗಳು ಸ್ಥಳೀಯರ ವಿರೋಧ ವ್ಯಕ್ತಪಡಿಸಿದ್ದರು.

ಆದರೆ, ಆಗಬಾರದ್ದು ಆಗಿಬಿಟ್ಟಿದೆ. ನಡುವೆಯೂ ಚತುಷ್ಪಥ ರಸ್ತೆ ಕಾಮಗಾರಿಗೆ ಕಾರಂತಜ್ಜನ ಮೂಲಮನೆ ಬಲಿಯಾಗಿದೆ. ಕಾರಂತರ ಮನೆ ಸ್ಮಾರಕವಾಗಿ ಉಳಿಸಬೇಕೆಂದು ಸಾಹಿತ್ಯ ವಲಯ ಇಟ್ಟಿದ್ದ ಬಹುದಿನಗಳ ಬೇಡಿಕೆ ಸರ್ಕಾರದ ಕಿವಿಗೆ ಬಿದ್ದಿಲ್ಲ.

ಜ್ಞಾನಪೀಠ ಪ್ರಶಸ್ತಿ ಗಳಿಸಿರುವ ಎಂಟು ಮಂದಿ ಕನ್ನಡ ಸಾಹಿತಿಗಳಲ್ಲಿ ಒಬ್ಬರಾದ ಶಿವರಾಮ ಕಾರಂತ ಅವರ ಮೂಲ ಮನೆ 'ಸುಹಾಸ್' ಈಗ ಕಾಲಗರ್ಭಕ್ಕೆ ಸೇರಿದೆ.  ಕಾರಂತರ ಪುತ್ತೂರಿನ ಮನೆಯಾದ 'ಹರ್ಷ' ವನ್ನು ಈಗಾಗಲೇ ಸ್ಮಾರಕವನ್ನಾಗಿ ಮಾಡಲಾಗಿದೆ.

ಆದರೆ ಕಾರಂತರ ಕೋಟದ ಮೂಲ ಮನೆಯಲ್ಲಿರುವ ಗ್ರಂಥಾಲಯ, ಅವರ ನೆನಪು ಸದಾ ಉಳಿಯಬೇಕಾದರೆ ಮತ್ತು ಮುಂದಿನ ಪೀಳಿಗೆಗೆ ಕಾರಂತರ ಕುರಿತು ತಿಳಿಯಬೇಕಾದರೆ ಈ ಮನೆ ಉಳಿಸುವುದು ಅನಿವಾರ್ಯವಾಗಿದೆ ಎಂಬುದು ಕಾರಂತ ಅಭಿಮಾನಿಗಳ ಅಭಿಪ್ರಾಯವಾಗಿದೆ.

ಆರೋಗ್ಯದ ಐಶ್ವರ್ಯಕ್ಕೆ ಕಲ್ಲುಪ್ಪು ಸೇವಿಸಿ!

ಕಲ್ಲುಪ್ಪು ನೈಸರ್ಗಿಕವಾದ ಉಪ್ಪು. ಆದರೆ ಅಯೋಡಿನ್ ಭರಿತ ಉಪ್ಪನ್ನೇ ಸೇವಿಸಿ ಘೋಷಣೆಯ ಹೊಡೆತಕ್ಕೆ ಸಿಲುಕಿ ಕಲ್ಲುಪ್ಪು ಕಾಣೆಯಾಗಿದೆ. ಸಕ್ಕರೆಗಿಂತ ಕಲ್ಲು ಸಕ್ಕರೆ ಹೆಚ್ಚು ಆರೋಗ್ಯಕಾರಿಯಾಗಿರುವಂತೆ, ಪುಡಿ ಉಪ್ಪಿಗಿಂತ ಕಲ್ಲುಪ್ಪು ಉತ್ತಮವಾಗಿದೆ. ಇವತ್ತು ನಾವು ಕಲ್ಲುಪ್ಪಿನ ಆರೋಗ್ಯಕರ ಗುಣಗಳ ಬಗ್ಗೆ ತಿಳಿಯೋಣ.

ಕಲ್ಲುಪ್ಪಿನ ಪ್ರಯೋಜನಗಳು:

1. ಕಲ್ಲುಪ್ಪಿನಲ್ಲಿ ಕ್ಯಾಲ್ಸಿಯಂ ಮತ್ತು ಮ್ಯಾಗ್ನಿಷಿಯಂ ಅಧಿಕವಾಗಿ ಇರುವುದರಿಂದ ದೇಹವು ಸರಿಯಾಗಿ ಕಾರ್ಯ ನಿರ್ವಹಿಸಲು ಸಾಕಾಗುವಷ್ಟು ಆಮ್ಲಜನಕವನ್ನು ಪೂರೈಕೆ ಮಾಡುತ್ತದೆ.

2. ಕಲ್ಲುಪ್ಪು ದೇಹದ ಅಂಗಗಳು ಚಟುವಟಿಕೆಯಿಂದ ಕಾರ್ಯನಿರ್ವಯಿಸುವಂತೆ ಮಾಡುತ್ತದೆ.

3. ಕಲ್ಲುಪ್ಪು ಸೇವಿಸಿದರೆ ದೇಹವು ನೀರನ್ನು ಹೀರಿಕೊಂಡು ಜೀರ್ಣಕ್ರಿಯೆ ಸರಾಗವಾಗಿ ನಡೆಯುವಂತೆ ಮಾಡುತ್ತದೆ.

4. ನಾನು ಉಸಿರಾಡುವ ಗಾಳಿಯಲ್ಲಿರುವ ಹಾನಿಕಾರಕ ಕಣಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.

5. ಅಸ್ತಮಾ ಅಥವಾ ಉಸಿರಾಟದ ತೊಂದರೆ ಇರುವವರು ಅಡುಗೆಯಲ್ಲಿ ಕಲ್ಲುಪ್ಪು ಬಳಸುವುದು ಒಳ್ಳೆಯದು.

6. ಉಪ್ಪುನಲ್ಲಿರುವ ಖನಿಜಾಂಶಗಳು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

7. ಕಲ್ಲುಪ್ಪಿನಲ್ಲಿರುವ ಖನಿಜಾಂಶಗಳು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ.

ದೇಹದ ದುರ್ವಾಸನೆಗೆ ನೈಸರ್ಗಿಕ ಪರಿಹಾರ

Home Remedies For Body Odor
ಚುಮುಚುಮು ಚಳಿ ಮುಗಿದು ಸೆಕೆ ಪ್ರಾರಂಭವಾಗಿದೆ. ಈ ಸಮಯದಲ್ಲಿ ಬೆವರಿನಿಂದಾಗಿ ದೇಹ ದುರ್ವಾಸನೆ ಬೀರುವುದು. ಈ ರೀತಿಯ ದೇಹದ ದುರ್ವಾಸನೆಯನ್ನು ಹೋಗಲಾಡಿಸಲು ಅನೇಕ ಸುಗಂಧ ದ್ರವ್ಯಗಳು ಲಭ್ಯವಿದೆ. ಆದರೆ ಅವುಗಳಲ್ಲಿ ಕೆಮಿಕಲ್ ಬಳಕೆ ಮಾಡಿರುವುದರಿಂದ ಕೆಲವರಿಗೆ ಪರ್ ಫ್ಯೂಮ್ ಹಾಕಿದರೆ ಅಲರ್ಜಿ ಉಂಟಾಗುತ್ತದೆ. ದೇಹದ ದುರ್ಗಂಧವನ್ನು ನೈಸರ್ಗಿಕವಾಗಿ ಸಿಗುವ ವಸ್ತುಗಳನ್ನು ಬಳಸಿ ಹೋಗಲಾಡಿಸಬಹುದು. ಮನೆಯಲ್ಲಿಯೆ ತಯಾರಿಸಬಹುದಾದ ಸುಗಂಧ ದ್ರವ್ಯಗಳ ಪಟ್ಟಿ ಇಲ್ಲಿದೆ ನೋಡಿ.

1. ಗ್ಲಿಸರಿನ್ ಮತ್ತು ಮೂಲಂಗಿ: ಮೂಲಂಗಿಯನ್ನು ಜ್ಯೂಸ್ ಮಾಡಿ ಅದಕ್ಕೆ 1/2 ಚಮಚ ಗ್ಲಿಸರಿನ್ ಸೇರಿಸಿ. ಈ ಮಿಶ್ರಣವನ್ನು ಕಂಕುಳ, ಕುತ್ತಿಗೆ ಮತ್ತು ಪಾದಗಳಿಗೆ ಹಚ್ಚಿದರೆ ಬೆವರಿನ ದುರ್ಗಂಧ ಬರುವುದಿಲ್ಲ.

2. ಆಲ್ಕೋಹಾಲ್ ಮತ್ತು ವಿನಿಗರ್:
ಆಲ್ಕೋಹಾಲ್ ಮತ್ತು ವಿನಿಗರ್ ಅನ್ನು ಸಮಪ್ರಮಾಣದಲ್ಲಿ ಮಿಶ್ರ ಮಾಡಿ ಮೈಗೆ ಹಚ್ಚಬಹುದು.

3. ಟೀ ಎಣ್ಣೆ ಮತ್ತು ರೀಸ್ ಮೆರಿ ಎಣ್ಣೆ:
ಟೀ ಮತ್ತು ರೋಸ್ ಮೆರಿ ಎಣ್ಣೆಯನ್ನು ಮಿಶ್ರ ಮಾಡಿ ಹಚ್ಚುವುದರಿಂದ ದೇಹದವನ್ನು ಸುವಾಸನೆ ಭರಿತವಾಗಿ ಇಡಬಹುದು.

4. ನಿಂಬೆ ಗಿಡದ ಎಲೆ:
ನಿಂಬೆ ಗಿಡದ ಎಲೆಯನ್ನು ಸ್ನಾನ ಮಾಡುವ ನೀರಿಗೆ ಹಾಕಿ ಕುದಿಸಿದರೆ ದೇಹದಲ್ಲಿ ಬೆವರಿನ ವಾಸನೆ ತಡೆಯುವುದಷ್ಟೇ ಅಲ್ಲ ತ್ವಚೆಯನ್ನು ಬ್ಯಾಕ್ಟೀರಿಯಾಗಳಿಂದ ರಕ್ಷಿಸುತ್ತದೆ.

5. ಅಡುಗೆ ಸೋಡಾ ಮತ್ತು ನಿಂಬೆ ರಸ:
1 ಚಮಚ ಅಡುಗೆ ಸೋಡಾಕ್ಕೆ 1 ಚಮಚ ನಿಂಬೆ ರಸ ಹಾಕಿ ಮಿಶ್ರ ಮಾಡಿ ಹಚ್ಚಿದರೆ ಬೆವರಿನ ಕೆಟ್ಟ ವಾಸನೆ ಇರುವುದಿಲ್ಲ. ಬೇಸಿಗೆಯಲ್ಲಿ ಈ ರೀತಿ ಮಾಡುವುದು ಅತ್ಯುತ್ತಮವಾದ ಪರಿಣಾಮವನ್ನು ಕಾಣಬಹುದು.
ಸಾಕಷ್ಟು ನೀರು ಕುಡಿಯುವ ಅಭ್ಯಾಸ ಒಳ್ಳೆಯದು.

ಮಸೂದೆಯಲ್ಲಿ ತಿದ್ದುಪಡಿ:ಗೋಹತ್ಯೆ ಬೇಡ,ಎಮ್ಮೆ ಹತ್ಯೆ ಓಕೆ

Ads by Google
Download Google Chrome 
Searching is fast and easy with Google's web browser.www.Google.com/Chrome
ತುಮಕೂರು, ಫೆ 21: ಗೋಹತ್ಯೆ ನಿಷೇಧ ಶಾಸನಕ್ಕೆ ರಾಷ್ಟ್ರ ಮಟ್ಟದಲ್ಲಿ ಕೆಲವೊಂದು ರಾಜಕೀಯ ಪಕ್ಷಗಳ ಪ್ರಬಲ ವಿರೋಧವಿದ್ದರೂ, ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಕಾಯಿದೆಗೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಪರೋಕ್ಷವಾಗಿ ಹಸಿರು ನಿಶಾನೆ ತೋರಿದ್ದಾರೆ. ಎಮ್ಮೆಯನ್ನು ಹೊರತು ಪಡಿಸಿ ವಿಧೇಯಕ ರೂಪಿಸಲು ರಾಷ್ಟ್ರಪತಿ ಸರಕಾರಕ್ಕೆ ಸಲಹೆ ನೀಡಿದ್ದಾರೆ.

ರಾಷ್ಟ್ರಪತಿಗಳ ಸಲಹೆಯ ಮೇರೆಗೆ ಮುಂದಿನ ಬಜೆಟ್ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ತಿದ್ದುಪಡಿ ವಿಧೇಯಕವನ್ನು ಮಂಡಿಸಲಾಗುವುದು ಎಂದು ಸಿಎಂ ಸದಾನಂದ ಗೌಡ ತುಮಕೂರಿನಲ್ಲಿ ಹೇಳಿಕೆ ನೀಡಿದ್ದಾರೆ. ಗೋಹತ್ಯೆ ನಿಷೇಧ ವಿಧೇಯಕ ರಾಷ್ಟ್ರಪತಿಗಳಿಂದ ರಾಜ್ಯಕ್ಕೆ ವಾಪಾಸ್ ಬಂದಿರುವುದು ನಿಜ. ಅವರ ಸಲಹೆ ಮೇರೆಗೆ ವಿಧೇಯಕದಲ್ಲಿ ತಿದ್ದುಪಡಿ ತಂದು ಈ ಬಜೆಟ್ ಅಧಿವೇಶನದಲ್ಲೇ ಮಂಡಿಸಲಾಗುವುದು ಎಂದು ಸಿಎಂ ಸ್ಪಷ್ಟ ಪಡಿಸಿದ್ದಾರೆ.

ಕರ್ನಾಟಕ ವಿಧಾನಮಂಡಲದಲ್ಲಿ ಅಂಗೀಕಾರ ಗೊಂಡಿರುವ ಗೋಹತ್ಯೆ ನಿಷೇಧ ವಿಧೇಯಕದಲ್ಲಿ ಎಮ್ಮೆ ಸೇರ್ಪಡೆಯಾಗಿದೆ. ಆದರೆ ಈ ವಿಧೇಯಕದಲ್ಲಿ ಉಲ್ಲೇಖವಾಗಿರುವ ಎಮ್ಮೆಯನ್ನು ಹೊರತುಪಡಿಸಿ ಈ ವಿಧೇಯಕ ತಿದ್ದುಪಡಿಯಾದರೆ ಒಳ್ಳೆಯದು ಎಂದು ಸಲಹೆ ನೀಡಿದ್ದೇವೆ ಎಂದು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಹೇಳಿದ್ದಾರೆ.

ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಈ ವಿಧೇಯಕವನ್ನು ಶಾಸನ ಸಭೆಯಲ್ಲಿ ಮಂಡಿಸಿದಾಗ ವಿಧೇಯಕದ ಪರವಾಗಿ ಕಾಂಗ್ರೆಸ್ ನ ಕೆಲ ಸದಸ್ಯರೂ ಸ್ವಾಗತಿಸಿದ್ದರು. ಹಿಂದೂಗಳಿಗೆ ಗೋಮಾತೆಯಾಗಿರುವ ಹಸುಗಳನ್ನು ಕೊಲ್ಲುವುದು ಪರಮಪಾಪ. ಹಸುಗಳನ್ನು ಕಾಪಾಡಲು ನಮ್ಮ ಸರಕಾರ ಬದ್ದವಾಗಿದೆ ಎಂದು ಮುಖ್ಯಮಂತ್ರಿ ಈ ಸಂದರ್ಭದಲ್ಲಿ ಹೇಳಿಕೆ ನೀಡಿದ್ದಾರೆ

ವೀರ್ಯ ದಾನಕ್ಕೆ ಸಜ್ಜಾದ ನಟ ಜಾನ್ ಅಬ್ರಹಾಂ

John Abraham
ಬಾಲಿವುಡ್ ಹ್ಯಾಂಡ್ ಸಮ್ ಬಾಯ್ ಜಾನ್ ಅಬ್ರಹಾಂ ವೀರ್ಯ ದಾನಕ್ಕೆ ಮುಂದಾಗಿದ್ದಾರೆ. ಯಾರಿಗೆ? ಯಾಕೆ, ಎಂದು ತಲೆಕೆಡಿಸಿಕೊಳ್ಳುವ ಮುನ್ನ ಮುಂದೆ ಓದಿ. ಅವರು 'ವೀರ್ಯ ದಾನದ ಕಥಾವಸ್ತುವನ್ನಿಟ್ಟುಕೊಂಡು ಸಿನಿಮಾ ಮಾಡುತ್ತಿದ್ದಾರೆ. ಅದು ಬಾಲಿವುಡ್ ಸಿನಿಮಾ ಎಂಬ ನಿಮ್ಮ ಊಹೆ ಖಂಡಿತ ನಿಜ. ಸಂತಾನ ಹೀನತೆ ಹಾಗೂ ವೀರ್ಯ ದಾನದ ಕಥೆಯನ್ನೊಳಗೊಂಡ ಈ ಚಿತ್ರಕ್ಕೆ 'ವಿಕ್ಕಿ ಡೋನರ್' ಎಂದು ಹೆಸರಿಟ್ಟಿದ್ದಾರೆ.

ಸದಾ ಪ್ರಯೋಗಾತ್ಮಕ್ಕೆ ಪಾತ್ರದಲ್ಲಿ ಕಾಣಿಸಿಕೊಳ್ಳುವ ಜಾನ್, ಈ ಹಿಂದೆ ಅಭಿಷೇಕ್ ಬಚ್ಚನ್ ಜತೆ 'ದೋಸ್ತಾನಾ' ಚಿತ್ರದಲ್ಲಿ 'ಸಲಿಂಗ ಕಾಮಿ'ಯಾಗಿ ಕಾಣಿಸಿಕೊಂಡಿದ್ದರು. ಈಗ ಅವರ ನಿರ್ಮಾಣದ ಮೊದಲ ಸಿನಿಮಾವನ್ನು ಸಾಮಾಜಿಕ ಸಮಸ್ಯೆಯೊಂದರ ಸುತ್ತವೇ ಸುತ್ತಲಿದ್ದಾರೆ. ಸಂಕೀರ್ಣ ಹಾಗೂ ಸೂಕ್ಷ್ಮ ವಿಷಯಗಳೆಂದರೆ ಜಾನ್ ಗೆ ಇಷ್ಟ. ಅವರು ಸಿನಿಮಾಗಳು ಯಾವುದಾದರೊಂದು ವಿವಾದಾತ್ಮಕ ಕಥೆಯ ಸುತ್ತವೇ ಕೇಂದ್ರೀಕೃತವಾಗಿರುತ್ತವೆ.

ಜಾನ್ ನಿರ್ಮಾಣದ ಈ ಚಿತ್ರದಲ್ಲಿ ಅವರೇ ನಾಯಕರು ಎಂದುಕೊಂಡರೆ ನಿಮ್ಮ ಊಹೆ ತಪ್ಪು. ಹೊಸ ಹುಡುಗ ವಿ ಜೆ ಆಯುಷ್ಮಾನ್ ಖುರಾನಾ ಈ ಚಿತ್ರದ ಹೀರೋ ಆಗಿ ಆಯ್ಕೆಯಾಗಿದ್ದು, ವೀರ್ಯಾ ದಾನಿ ಪಾತ್ರದಲ್ಲಿ ನಟಿಸಲಿದ್ದಾರೆ. ನಾಯಕಿಯಾಗಿ ಕಿರುತೆರೆಯ ನಟಿ ಯಾಮಿ ಗೌತಮ್ ಇದ್ದಾರೆ. ಚಿತ್ರದ ಉಳಿದ ಸಂಗತಿಗಳು ಸದ್ಯಕ್ಕೆ ಸಸ್ಪೆನ್ಸ್. (ಏಜೆನ್ಸೀಸ್)