ಫ್ರಿಜ್ ಶುದ್ಧತೆಗೆ ಬಳಸಿ ಈ ಸರಳ ವಿಧಾನ
1. ಫ್ರಿಜ್ ನಲ್ಲಿರುವ ಕೊಳೆತ ಹಣ್ಣು ತರಕಾರಿಗಳನ್ನು ಬಿಸಾಡಬೇಕು. ನಂತರ ಶೆಲ್ಫ್ ಮತ್ತು ಡ್ರಾಯರ್ ಗಳನ್ನು ಹೊರ ತೆಗೆದು ಬಿಸಿ ನೀರಿನಲ್ಲಿ ಸ್ವಲ್ಪ ಸೋಪು ಹಾಕಿ ತೊಳೆಯಬೇಕು. ಗ್ಲಾಸ್ ಶೆಲ್ಫ್ ಗಳನ್ನು ಹೊರ ತೆಗೆದು ಆರಿದ ಮೇಲೆ ತೊಳೆದು ಒಣಗಿಸಬೇಕು. ಫ್ರಿಜ್ ನಿಂದ ಹೊರ ತೆಗೆದ ತಕ್ಷಣ ತೊಳೆದರೆ ಗಾಜುನಲ್ಲಿ ಬಿರುಕು ಬೀಳಬಹುದು.
2. ಅಂಟಿರುವ ಕೊಳೆಯನ್ನು ತೆಗೆಯಲು ಸ್ಕ್ರಬ್ಬರ್ (ಚೇರಿ) ಹಾಕಿ ಉಜ್ಜಿ. ನಂತರ ಕಾಟನ್ ಬಟ್ಟೆಯನ್ನು ನೆನೆಸಿ ಉಜ್ಜಬೇಕು. ಶುದ್ಧವಾದ ಮೇಲೆ ಒಣ ಬಟ್ಟೆಯಿಂದ ಒರೆಸಿ ಇಡಬೇಕು.
3. ಫ್ರಿಜ್ ಒಳಗಡೆ ಕ್ಲೀನ್ ಮಾಡಲು ಸಹ ಈ ವಿಧಾನ ಬಳಸಿ.
4. ಶೆಲ್ಫ್ , ಡ್ರಾಯರ್ ಮತ್ತು ಫ್ರಿಜ್ ಒಳಗಡೆ ಒಣ ಬಟ್ಟೆಯಿಂದ ಒರೆಸಿ ಸಂಪೂರ್ಣ ಒಣಗಿದ ಮೇಲೆ ಅವುಗಳನ್ನು ಮೊದಲಿದ್ದ ಜಾಗದಲ್ಲಿ ಇಡಬೇಕು. ಈ ರೀತಿ ತಿಂಗಳಿಗೊಮ್ಮೆ ಮಾಡುತ್ತಿದ್ದರೆ ಫ್ರಿಜ್ ಕೆಟ್ಟ ವಾಸನೆ ಬೀರುವುದಿಲ್ಲ.
ಈ ಗ್ರಾಮದಲ್ಲಿ ಮದ್ಯ ನಿಷಿದ್ಧ, ಕುಡಿದರೆ ಕಟ್ಟಿ ದಂಡ!
ಯಾದಗಿರಿ, ಮಾ. 12 : ಈ ಗ್ರಾಮದಲ್ಲಿ ಇನ್ನು ಮುಂದೆ ಮದ್ಯ ಮಾರುವಂತಿಲ್ಲ, ಗ್ರಾಮದವರಾರೂ ಕುಡಿಯುವಂತಿಲ್ಲ. ಒಂದು ವೇಳೆ ಮದ್ಯ ಮಾರಿದರೆ ಸಾವಿರ ರು., ಕುಡಿದರೆ ಐನೂರು ರು. ದಂಡ. ದಂಡ ತೆರಲು ಸಿದ್ಧರಿರುವವರು ಮದ್ಯ ಮಾರಬಹುದು ಮತ್ತು ಕುಡಿಯಬಹುದು.
ಯಾದಗಿರಿ ಜಿಲ್ಲೆಯ ಶಹಾಪುರ್ ತಾಲ್ಲೂಕಿನ ಪುಟ್ಟ ಹಳ್ಳಿ ಹುಂಡೇಕಲ್‌ನಲ್ಲಿ ಇಂತಹ ದಿಟ್ಟ ನಿರ್ಣಯ ತೆಗೆದುಕೊಂಡಿರುವವರು ಸರಕಾರ ಅಧಿಕಾರಿಗಳಲ್ಲ, ಸ್ವತಃ ಗ್ರಾಮಸ್ಥರೇ ಇಂತಹ ಒಂದು ಗಟ್ಟಿ ನಿರ್ಣಯವನ್ನು ಕೈಗೊಂಡು ಎಲ್ಲರ ಗಮನ ಸೆಳೆದಿದ್ದಾರೆ. ಇಲ್ಲಿನ ಜನಸಂಖ್ಯೆ ಕೇವಲ ಎರಡು ಸಾವಿರವಿದ್ದೀತು, ಮತದಾರರು 1,400 ಮಂದಿ. ಇಷ್ಟಿದ್ದರೂ ಕುಡಿಯುವವರು ಕಮ್ಮಿಯಿರಲಿಲ್ಲ.
ಈ ಗ್ರಾಮದಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡಲಾಗುತಿತ್ತು. ಬಡ ಕುಟುಂಬಗಳೇ ಅಧಿಕವಾಗಿರುವ ಇಲ್ಲಿ ಮನೆಯ ದೊಡ್ಡವರು, ಚಿಕ್ಕವರೆನ್ನದೇ ಎಲ್ಲರೂ ಮದ್ಯದ ದಾಸರೇ ಆಗಿದ್ದರು. ಮನೆಗಳಲ್ಲಿ ಜಗಳ ತಕರಾರು ಇಲ್ಲಿ ಸಾಮಾನ್ಯವಾಗಿತ್ತು. ಹಲವು ಕುಟುಂಬಗಳು ಬೀದಿ ಪಾಲಾಗಿ, ಯುವಕರು ಕುಡಿತದ ಚಟಕ್ಕೆ ದಾಸರಾಗಿ ಕುಟುಂಬಗಳ ನೆಮ್ಮದಿ ಕೆಡಿಸಿತ್ತು.
ಗ್ರಾಮದ ಪ್ರಜ್ಞಾವಂತ ನಾಗರಿಕರು ಯುವಕರನ್ನು ಈ ಚಟದಿಂದ ಬಿಡಿಸಲು ಹಾಗೂ ಅವರ ಬದುಕು ಸುಧಾರಿಸಲು ನಿರ್ಧರಿಸಿ ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಶನಿವಾರ ಸಭೆ ಸೇರಿದ್ದರು. ಕುಡಿತದ ದುಷ್ಪರಿಣಾಮಗಳನ್ನು ಮನವರಿಕೆ ಮಾಡಿಕೊಟ್ಟರು. ಎಲ್ಲರ ಮನವೊಲಿಸಿ, ಗ್ರಾಮದವರಾರೂ ಕುಡಿಯಬಾರದು, ಗ್ರಾಮದಲ್ಲಿ ಮದ್ಯ ಮಾರಾಟ ಮಾಡಬಾರದು ಎಂಬ ನಿರ್ಣಯ ಕೈಗೊಂಡೇ ಬಿಟ್ಟರು.
ಮಾರಿದರೆ 1,000 ರು. ಮತ್ತು ಕುಡಿದರೆ 500 ರು. ದಂಡ ಪಾವತಿಸಬೇಕೆಂದು ನಿರ್ಣಯ ಅಂಗೀಕರಿಸಲಾಯಿತು. ಕೆಲ ಯುವಕರೂ ಹಿರಿಯರ ಮಾತಿಗೆ ಬೆಲೆ ಕೊಟ್ಟು ಮದ್ಯ ಸೇವನೆ ಬಿಡುವುದಾಗಿ ಮಾತು ಕೊಟ್ಟಿದ್ದಾರೆ. ಮನಸ್ಸಿದ್ದಲ್ಲಿ ಮಾರ್ಗ ಎಂಬ ಗಾದೆಯನ್ನು ಹಳ್ಳಿಯ ಹಿರಿಯರು ನಿಜ ಮಾಡಿ ತೋರಿಸಿದ್ದಾರೆ. ಭಲೇ ಗ್ರಾಮಸ್ಥರೆ.
ಕಾಸರವಳ್ಳಿ ಕೂರ್ಮಾವತಾರಕ್ಕೆ ರಾಷ್ಟ್ರೀಯ ಪ್ರಶಸ್ತಿ
ಖ್ಯಾತ ಗಿರೀಶ್ ಕಾಸರವಳ್ಳಿ ಅವರ ಹೊಚ್ಚ ಹೊಸ ಚಲನಚಿತ್ರ 'ಕೂರ್ಮಾವತಾರ'ಕ್ಕೆ ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರ ಪ್ರಶಸ್ತಿ ಲಭಿಸಿದೆ.
ಡರ್ಟಿ ಪಿಕ್ಚರ್ ನ ಅಭಿನಯಕ್ಕಾಗಿ ನಟಿ ವಿದ್ಯಾಬಾಲನ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ. ಉಳಿದಂತೆ ಪಟ್ಟಿ ಹೀಗಿದೆ.
* ಶ್ರೇಷ್ಠ ನಟ-ಗಿರೀಶ್ ಕುಲಕರ್ಣಿ-ಚಿತ್ರ ಡೆಯೊಲ್(ಮರಾಠಿ)
* ಶ್ರೇಷ್ಠ ಬಾಲ ಕಲಾವಿದ-ಪಾರ್ಥೋ ಗುಪ್ತೆ-ಸ್ಟ್ಯಾನಿ ಕ ಡಬ್ಬಾ ಹಾಗೂ ಚಿಲ್ಲರ್ ಪಾರ್ಟಿ ಚಿತ್ರದ ಮಕ್ಕಳು
* ಅತ್ಯುತ್ತಮ ಚಿತ್ರ: ಡೆಯೊಲ್ ಹಾಗೂ ಬ್ಯಾರಿ
* ಅತ್ಯುತ್ತಮ ಮಕ್ಕಳ ಚಿತ್ರ: ಚಿಲ್ಲರ್ ಪಾರ್ಟಿ
* ಅತ್ಯುತ್ತಮ ಚಿತ್ರಕಥೆ: ವಿಕಾಸ್ ಬೆಹಲ್ ಹಾಗೂ ನಿತೇಶ್ ತಿವಾರಿ(ಚಿಲ್ಲರ್ ಪಾರ್ಟಿ)
* ಅತ್ಯುತ್ತಮ ಸ್ಪೆಷಲ್ ಎಫೆಕ್ಟ್ಸ್: ರಾ ಒನ್
* ಅತ್ಯುತ್ತಮ ಸಂಭಾಷಣೆ: ಗಿರೀಶ್ ಕುಲಕರ್ಣಿ (ಡೆಯೋಲ್)
* ಅತ್ಯುತ್ತಮ ಸಂಕಲನ: ಪ್ರವೀಣ್ ಕೆಎಲ್ ಹಾಗೂ ಎನ್ ಬಿ ಶ್ರೀಕಾಂತ್ (ಅರಣ್ಯ ಕಾಂಡಂ)
* ಅತ್ಯುತ್ತಮ ಬೆಂಗಾಳಿ ಚಿತ್ರ: ರಂಜನಾ ಅಮಿ ಅರ್ ಅಶ್ಬೊನ
* ಅತ್ಯುತ್ತಮ ಡೊಗ್ರಿ ಚಿತ್ರ: ದಿಲೆಶ್ ಬಸಿಯಾ ಕೊಯಿ
* ಅತ್ಯುತ್ತಮ ಹಿಂದಿ ಚಿತ್ರ: ಐ ಯಾಮ್
* ಅತ್ಯುತ್ತಮ ಕನ್ನಡ ಚಿತ್ರ: ಕೂರ್ಮಾವತಾರ
* ಅತ್ಯುತ್ತಮ ಮಣಿಪುರಿ ಚಿತ್ರ: ಫಿಜಿಗೀ ಮಣಿ
* ಅತ್ಯುತ್ತಮ ತಮಿಳು ಚಿತ್ರ: ವಾಗೈ ಸೂಡಾ ವಾ
* ಅತ್ಯುತ್ತಮ ಪಂಜಾಬಿ ಚಿತ್ರ: ಅನ್ನೆ ಗೊಡೆ ಡ ಡಾನ್
* ಶ್ರೇಷ್ಠ ನೃತ್ಯ ಸಂಯೋಜಕ: ಬಾಸ್ಕೋ ಹಾಗೂ ಸೀಸರ್ 'ಸೆನೊರೀಟಾ' ಹಾಡು 'ಜಿಂದಗಿ ನಾ ಮಿಲೆಗಿ ದೊಬಾರಾ' ಚಿತ್ರ
* ಜ್ಯೂರಿ ವಿಶೇಷ ಚಿತ್ರ: ರಂಜನಾ ಅಮಿ ಅರ್ ಅಶ್ಬೊನ
* ಶ್ರೇಷ್ಠ ಗೀತ ಸಾಹಿತ್ಯ: ಅಮಿತಾಬ್ ಭಟ್ಟಾಚಾರ್ಯ 'ಅಗರ್ ಜಿಂದಗಿ' ಐಯಾಮ್ ಚಿತ್ರ
* ಶ್ರೇಷ್ಠ ಸಂಗೀತ: ನೀಲ್ ದತ್ತ 'ರಂಜೊನಾ..'
* ಅತ್ಯುತ್ತಮ ಪ್ರಸಾಧನ: ವಿಕ್ರಮ ಗಾಯಕ್ವಾಡ್ 'ಬಾಲ್ ಗಂಧರ್ವ' ಹಾಗೂ 'ದ ಡರ್ಟಿ ಪಿಕ್ಚರ್'
* ಅತ್ಯುತ್ತಮ ಕಾಸ್ಟ್ಯೂಮ್ : ನೀತ ಲುಲ್ಲಾ 'ಬಾಲ್ ಗಂಧರ್ವ' ಮತ್ತು ನಿಹಾರಿಕಾ ಖಾನ್ 'ದ ಡರ್ಟಿ ಪಿಕ್ಚರ್'
* ಅತ್ಯುತ್ತಮ ಸಹ ಕಲಾವಿದ: ಅಪ್ಪು ಕುಟ್ಟಿ
* ಶ್ರೇಷ್ಠ ಹಿನ್ನೆಲೆ ಗಾಯಕಿ: ರೂಪಾ ಗಂಗೂಲಿ
ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ಮುಖ್ಯಸ್ಥೆ ರೋಹಿಣಿ ಹಟ್ಟಂಗಡಿ ಅವರು ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭ ಮೇ.3ರಂದು ನವದೆಹಲಿಯಲ್ಲಿ ಜರುಗಲಿದೆ.
ಶ್ರೀರಾಮುಲು ಬಿಎಸ್ಆರ್ ಸೇರಲಿರುವ ಪ್ರೇಮ್-ರಕ್ಷಿತಾ
ಬಿ ಶ್ರೀರಾಮುಲು ನೇತೃತ್ವದ ಬಡವ, ಶ್ರೀಮಂತ, ಶ್ರಮಿಕರ ಪಕ್ಷ (ಬಿಎಸ್ಆರ್ ಪಕ್ಷ)ಕ್ಕೆ ನಿರ್ದೇಶಕ ಪ್ರೇಮ್ ಹಾಗೂ ಅವರ ತಾರಾಪತ್ನಿ ರಕ್ಷಿತಾ ಪ್ರೇಮ್ ಸೇರಲಿದ್ದಾರೆ.
ಬೆಂಗಳೂರಿನ ರಾಜಾಜಿನಗರದಲ್ಲಿರುವ ಶ್ರೀರಾಮುಲು ಆಫೀಸಿನಲ್ಲಿ ಮಾರ್ಚ್ 9 ರಂದು ಅಧಿಕೃತವಾಗಿ ಪ್ರೇಮ್-ರಕ್ಷಿತಾ ದಂಪತಿಗಳು ಪಕ್ಷ ಸೇರಲಿದ್ದಾರೆ ಎಂದು ವಿಶ್ವಸನೀಯವಾಗಿ ಗೊತ್ತಾಗಿದೆ. ರಾಷ್ಟ್ರೀಯ ಪಕ್ಷಗಳನ್ನು ಬಿಟ್ಟು ಶ್ರೀರಾಮುಲು ಅವರ ಪ್ರಾದೇಶಿಕ ಪಕ್ಷವನ್ನು ಈ ದಂಪತಿಗಳು ಸೇರುತ್ತಿರುವ ಔಚಿತ್ಯವೇನೆಂಬುದು ಸದ್ಯಕ್ಕೆ ಸಸ್ಪೆನ್ಸ್.
ರಾಜಕೀಯದ ಅಂಗಳಕ್ಕೆ ಇದೀಗ ತಾರಾಮೆರಗು ಹೆಚ್ಚುತ್ತಿದೆ. ನಟಿ ರಮ್ಯಾ ಕಾಂಗ್ರೆಸ್ ಸೇರಿದ್ದಾಗಿದೆ. ಇತ್ತೀಚಿಗೆ ನಟಿ ಪೂಜಾ ಗಾಂಧಿ ಜೆಡಿಎಸ್ ಪಕ್ಷ ಸೇರಿಕೊಂಡಿದ್ದಾರೆ. ಮೊನ್ನೆ ಮೊನ್ನೆ ನಟಿ ಮಾಳವಿಕಾ ಕೂಡ ಜೆಡಿಎಸ್ ಸೇರಿದ್ದು ಹೊಸ ಬೆಳವಣಿಗೆ ಎನಿಸಿತ್ತು. ಇದೀಗ ಪ್ರೇಮ್, ರಕ್ಷಿತಾ ಸೇರುವ ಸುದ್ದಿಯೊಂದಿಗೆ ಹೊಸ ಸಂಚಲನ ಮೂಡಿದಂತಾಗಿದೆ.
ಈಗಾಗಲೇ ನಟಿ ಉಮಾಶ್ರೀ ರಾಜಕೀಯ ವಲಯದಲ್ಲಿ ಹೆಸರು ಮಾಡಿದ್ದಾರೆ. ನಟಿ ಶ್ರುತಿಗೆ ಕೂಡ ಜೆಡಿಎಸ್ ಪಕ್ಷಕ್ಕೆ ಬಹಿರಂಗವಾಗಿವೇ ಎಚ್ ಡಿ ಕುಮಾರಸ್ವಾಮಿ ಆಮಂತ್ರಿಸಿದ್ದಾಗಿದೆ. ಇನ್ನೇನು ಸದ್ಯದಲ್ಲೇ ಶ್ರುತಿ ಕೂಡ ರಾಜಕೀಯ ಸೇರಲಿದ್ದಾರೆಂಬ ವದಂತಿ ದಟ್ಟವಾಗಿದೆ. ಚುನಾವಣೆಗೆ ಕಾಲ ಸನ್ನಿಹಿತವಾಗುತ್ತಿದ್ದಂತೆ ಇನ್ನೆಷ್ಟು ಜನ ಯಾವ ಯಾವ ಪಕ್ಷಕ್ಕೆ ಸೇರಲಿದ್ದಾರೋ ಎಂಬ ಜಿಜ್ಞಾಸೆ ಪ್ರಾರಂಭವಾಗಿದೆ. (ಒನ್ ಇಂಡಿಯಾ ಕನ್ನಡ)
ಎದ್ದ ಕೂಡಲೆ ನ್ಯೂಸ್ ಪೇಪರ್ ಓದಬಾರದು!
ದಿನ ಬೆಳಗಾದರೆ ಟಾರ್ಗೆಟ್, ಡೆಡ್ ಲೈನ್ ಅಂತ ಯೋಚಿಸುತ್ತಾ ಟೆನ್ಷನ್ ಹೆಚ್ಚಿ ಮಾಡುವುದರಿಂದ ಆರೋಗ್ಯ ಹಾಳಾಗುವುದು. ಜೀವನವನ್ನು ಸಂತೋಷದಿಂದ ಕಳೆಯಲು ಮತ್ತು ಸವಾಲುಗಳನ್ನು ಧೈರ್ಯವಾಗಿ ಎದುರಿಸಲು ಅಂತಾರಾಷ್ಟ್ರೀಯ ಖ್ಯಾತಿಯ ಲೀಡರ್ಶಿಪ್ ಗುರು ರಾಬಿನ್ ಶರ್ಮ ಅನುಸರಿಸುವ ಸರಳ ವಿಧಾನ ನೋಡಿ ಇಲ್ಲಿದೆ:
1. ಮುಂಜಾನೆ ಬೇಗನೆ ಏಳುವುದು: ಮುಂಜಾನೆ ಬೇಗನೆ ಏಳುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹೆಚ್ಚಾಗುವುದು. ಲೇಟಾಗಿ ಎದ್ದು ಅವಸರವಾಗಿ ಕೆಲಸ ಕಾರ್ಯವನ್ನು ಮಾಡುವುದರಿಂದ ಮಾನಸಿಕ ಒತ್ತಡ ಹೆಚ್ಚುವುದು.
2. ಒಂದು ಲೋಟ ನೀರು ಕುಡಿಯುವುದು: ಬೆಳಗ್ಗೆ ಎದ್ದ ಕೂಡಲೇ ಬಾಯಿ ಕೂಡ ತೊಳೆಯದೆ ಒಂದು ಲೋಟ ನೀರು ಕುಡಿದರೆ ದೇಹ ಶುದ್ಧಿಯಾಗುತ್ತದೆ. ಇದರಿಂದ ದೇಹದಲ್ಲಿ ಚೈತನ್ಯ ಹೆಚ್ಚಾಗುವುದು.
3. ನ್ಯೂಸ್ ಪೇಪರ್ ಓದಬಾರದು: ಹೌದು ಇದನ್ನು ಕೇಳಿದರೆ ಆಶ್ಚರ್ಯವಾಗುವುದು ದಿಟ. ಆದರೆ ಬೆಳಗ್ಗೆ ಎದ್ದ ಕೂಡಲೆ ನ್ಯೂಸ್ ಪೇಪರ್ ನೋಡಿದರೆ ಅದರಲ್ಲಿರುವ ವಿಷಯಗಳೇ ಮನಸ್ಸನ್ನು ಕೊರೆಯುವುದು.
ಇದರ ಬಗ್ಗೆ ಒಂದು ಸಮೀಕ್ಷೆಯೊಂದು ನಡೆಸಲಾಗಿದೆ. ಅದರಲ್ಲಿ ದಿನಾ ಬೆಳಗ್ಗೆ ನ್ಯೂಸ್ ಪೇಪರ್ ಓದುವವರಿಗೆ ಮತ್ತು ಓದದವರಿಗೆ ಒಂದೇ ರೀತಿಯ ಪೋಟೊಗಳನ್ನು ತೋರಿಸಲಾಗಿತ್ತು. ಅದರಲ್ಲಿ ನ್ಯೂಸ್ ಪೇಪರ್ ನೋಡಿದವರಿಗಿಂತ ನೋಡದವರು ಆ ಫೋಟೊಗಳನ್ನು ನೋಡಿ ಹೆಚ್ಚು ಆನಂದಿಸುತ್ತಿದ್ದರು.
ಇವರ ಪ್ರಕಾರ ಎದ್ದ ಕೂಡಲೆ ನ್ಯೂಸ್ ಪೇಪರ್ ನಲ್ಲಿ ತಲೆದೂರಿಸುವುದಕ್ಕಿಂತ ಸುತ್ತಮುತ್ತಲಿನ ಸಣ್ಣ-ಪುಟ್ಟ ವಿಷಯಗಳನ್ನು ಮೊದಲು ಆನಂದಿಸಿ. ತಿಂಡಿಯ ನಂತರ ಪೇಪರ್ ನೋಡುವುದು ಒಳ್ಳೆಯದು.
4. 200% ಕೆಲಸ: ಮಾಡುವ ಕೆಲಸ ಯಾವುದೇ ಆಗಿರಲಿ ಅದನ್ನು 200% ಶೃದ್ಧೆಯಿಂದ ಮಾಡಬೇಕು. ಆಗ ಯಶಸ್ವು ತನ್ನಿಂದ ತಾನೆ ಬರುವುದು.
One India Kannada
ಸಂಚಾರಿ ನಿಯಮ ಉಲ್ಲಂಘಿಸಿದರೆ ಫೈನೆಷ್ಟು? ಜೈಲೆಷ್ಟು?
ಮೋಟರ್ ವೆಹಿಕಲ್ ಕಾಯಿದೆ ಕಠಿಣವಾಗಿದೆ. ಸಂಚಾರಿ ನಿಯಮ ಉಲ್ಲಂಘನೆಗೆ ಐದು ಪಟ್ಟು ಹೆಚ್ಚು ದಂಡ ಮತ್ತು ಜೈಲು ಶಿಕ್ಷೆ ವಿಧಿಸುವ ನೂತನ ಪ್ರಸ್ತಾಪಕ್ಕೆ ಕೇಂದ್ರ ಸಂಪುಟ ಸಮ್ಮತಿಸಿದೆ. ಈ ಕುರಿತ ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿರಿ.
ಸಂಚಾರಿ ನಿಯಮದ ತಪ್ಪುಗಳಿಗೆ ಎಷ್ಟು ದಂಡ ಮತ್ತು ಎಷ್ಟು ವರ್ಷ ಜೈಲು ಶಿಕ್ಷೆ?
* ಕುಡಿದು ವಾಹನ ಚಾಲನೆ ಮಾಡಿದರೆ 2,000 ರು.ನಿಂದ 10 ಸಾವಿರ ರು.ವರೆಗೆ ದಂಡ ಅಥವಾ ಆರು ತಿಂಗಳಿನ ವರೆಗೆ ಜೈಲು ಶಿಕ್ಷೆ(ಓದಿ: ಕುಡಿದು ಡ್ರೈವಿಂಗ್ ಮಾಡಿದ್ರೆ 4 ವರ್ಷದವರೆಗೆ ಜೈಲು! )
* ಸಿಗ್ನಲ್ ಜಂಪ್ ಮಾಡಿ ಪ್ರಪ್ರಥಮ ಬಾರಿ ಸಿಕ್ಕಿಬಿದ್ದರೆ 100 ರು.ನಿಂದ 500 ರು.ವರೆಗೆ ದಂಡ. ಮತ್ತೊಮ್ಮೆ ಇದೇ ತಪ್ಪು ಮಾಡಿ ಸಿಕ್ಕಿಬಿದ್ದರೆ 300 ರು.ನಿಂದ 1,500 ರು.ವರೆಗೆ ದಂಡ ವಿಧಿಸಲು ಅವಕಾಶವಿದೆ.
* ಮಾದಕ ದ್ರವ್ಯ ಸೇವಿಸಿ ವಾಹನ ಚಾಲನೆ ಮಾಡಿ ಸಿಕ್ಕಿಬಿದ್ದರೆ ಮೊದಲ ಪ್ರಕರಣಕ್ಕೆ ಆರು ತಿಂಗಳ ಜೈಲು ಶಿಕ್ಷೆ ಅಥವಾ ಐದು ಸಾವಿರ ರುಪಾಯಿ ದಂಡ. ಮತ್ತೊಮ್ಮೆ ಇದೇ ತಪ್ಪು ಮಾಡಿ ಸಿಕ್ಕಿಬಿದ್ದರೆ 10 ಸಾವಿರ ರು. ದಂಡ ಅಥವಾ ಆರು ತಿಂಗಳ ಸಜೆ ಮತ್ತು ಡ್ರೈವಿಂಗ್ ಲೈಸನ್ಸ್ ರದ್ದು ಮಾಡಲಾಗುತ್ತದೆ.
* ವೇಗಮಿತಿ ಮೀರಿ ವಾಹನ ಚಾಲನೆ ಮಾಡಿದರೆ ಮೊದಲಿಗೆ 400 ರು.ನಿಂದ 1 ಸಾವಿರ ರುಪಾಯಿವರೆಗೆ ದಂಡ. ಮತ್ತೊಮ್ಮೆ ಇದೇ ತಪ್ಪು ಮಾಡಿ ಸಿಕ್ಕಿಬಿದ್ದರೆ 2 ಸಾವಿರ ರು.ನಿಂದ 5 ಸಾವಿರ ರು.ವರೆಗೆ ದಂಡ.
* ಅಪಾಯಕಾರಿಯಾಗಿ ವಾಹನ ಚಾಲನೆ ಮಾಡಿದರೆ 1 ಸಾವಿರ ರುಪಾಯಿ ದಂಡ ಅಥವಾ ಆರು ತಿಂಗಳ ಸಜೆ. ಮತ್ತೊಮ್ಮೆ ಇದೇ ತಪ್ಪು ಮಾಡಿದರೆ 2 ಸಾವಿರ ರುಪಾಯಿಯಿಂದ 5 ಸಾವಿರ ರುಪಾಯಿವರೆಗೆ ದಂಡ ಅಥವಾ 2 ವರ್ಷ ಜೈಲು ಶಿಕ್ಷೆ.
* ಸೀಟ್ ಬೆಲ್ಟ್ ಧರಿಸದೇ ವಾಹನ ಚಾಲನೆ ಮಾಡಿದರೆ 500 ರುಪಾಯಿಯಿಂದ 1 ಸಾವಿರ ರುಪಾಯಿವರೆಗೆ ದಂಡ ವಿಧಿಸಲು ಅವಕಾಶವಿದೆ.
* ರಿಜಿಸ್ಟ್ರೇಷನ್ ಆಗದ ವಾಹನ ಚಲಾಯಿಸಿದರೆ 20 ಸಾವಿರ ರು. ದಂಡ ಮತ್ತು ಒಂದು ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.
* ಹೆಲ್ಮೆಟ್ ಧರಿಸದೇ ದ್ವಿಚಕ್ರವಾಹನ ಸವಾರಿ ಮಾಡಿದರೆ 500 ರುಪಾಯಿ ದಂಡ. ಇದೇ ತಪ್ಪನ್ನು ಮತ್ತೊಮ್ಮೆ ಮಾಡಿ ಸಿಕ್ಕಿಬಿದ್ದರೆ 1 ಸಾವಿರ ರು.ನಿಂದ 1,500 ರು.ವರೆಗೆ ದಂಡ ವಿಧಿಸಲಾಗುತ್ತದೆ.
ಸಂಚಾರಿ ನಿಯಮಗಳನ್ನು ಪಾಲಿಸಿ ವಾಹನ ಚಲಾಯಿಸಿ

ಮಾ.15 ರಿಂದ ಮಾ.30 ರ ತನಕ II ಪಿಯೂ ಪರೀಕ್ಷೆ
ಬೆಂಗಳೂರು, ಮಾ.4: ದ್ವೀತಿಯ ಪಿಯುಸಿ ಪರೀಕ್ಷೆ ಮಾ.15ರಿಂದ 30ರ ವರೆಗೆ ನಡೆಯಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ. ದ್ವಿತೀಯ ಪಿಯುಸಿ ಪರೀಕ್ಷೆ ಈಗಾಗಲೇ ಪವಿ ಪೂರ್ವ ಪರೀಕ್ಷಾ ಮಂಡಳಿ(KBPUE) ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಜ್ಯದ ಒಟ್ಟು 923 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಪ್ರಸಕ್ತ ಸಾಲಿನಲ್ಲಿ ಒಟ್ಟು 5,96,739 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಪರೀಕ್ಷಾ ಅಕ್ರಮ ತಡೆಗೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸೇರಿದಂತೆ ಅಧಿಕಾರಿಗಳ ಜಾಗೃತದಳ ರಚಿಸಲಾಗಿದೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಮಾಹಿತಿ ನೀಡಿದರು.
ವೇಳಾ ಪಟ್ಟಿ ಹೀಗಿದೆ:
ಪರೀಕ್ಷಾ ಅಕ್ರಮ ತಡೆಗೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸೇರಿದಂತೆ ಅಧಿಕಾರಿಗಳ ಜಾಗೃತದಳ ರಚಿಸಲಾಗಿದೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಮಾಹಿತಿ ನೀಡಿದರು.
ವೇಳಾ ಪಟ್ಟಿ ಹೀಗಿದೆ:
| ದಿನಾಂಕ | ವಿಷಯ |
| ಮಾ.15 | ಇತಿಹಾಸ |
| ಮಾ.16 | ಜೀವಶಾಸ್ತ್ರ / ಬಿಸಿನೆಸ್ ಸ್ಟಡೀಸ್ |
| ಮಾ.17 | ರಾಜ್ಯಶಾಸ್ತ್ರ/ ಗಣಿತ(basic) |
| ಮಾ.19 | ಅರ್ಥಶಾಸ್ತ್ರ / ಭೂಗರ್ಭಶಾಸ್ತ್ರ |
| ಮಾ.20 | ಗಣಿತ / ಭೂಗೋಳ ಶಾಸ್ತ್ರ |
| ಮಾ.21 | ಸಮಾಜಶಾಸ್ತ್ರ/ Statistics |
| ಮಾ.22 | ಭೌತಶಾಸ್ತ್ರ / ಶಾಸ್ತ್ರೀಯ ಸಂಗೀತ/ಹಿಂದೂಸ್ತಾನಿ ಸಂಗೀತ/ಮನೋವಿಜ್ಞಾನ |
| ಮಾ.24 | ಎಲೆಕ್ಟ್ರಾನಿಕ್ಸ್ / ಕಂಪ್ಯೂಟಕ್ ವಿಜ್ಞಾನ |
| ಮಾ.26 | ಇಂಗ್ಲೀಷ್ |
| ಮಾ.28 | ರಸಾಯನಶಾಸ್ತ್ರ / ಐಚ್ಛಿಕ ಕನ್ನಡ |
| ಮಾ.29 | ಕನ್ನಡ / ತಮಿಳು / ಮಲೆಯಾಳಂ / ಮರಾಠಿ /ಅರೇಬಿಕ್ / ಫ್ರೆಂಚ್ |
| ಮಾ.30 | ಹಿಂದಿ / ಉರ್ದು / ತೆಲುಗು / ಸಂಸ್ಕೃತ |
ಆಗಬಾರದ್ದು ಆಗಿಬಿಟ್ತು, ಕಾರಂತಜ್ಜನ ಮನೆ ನೆಲಸಮ
ರಾಷ್ಟ್ರೀಯ ಹೆದ್ದಾರಿ-66ರ ಚತುಷ್ಪಥ ಕಾಮಗಾರಿಗಾಗಿ ಗಿಳಿಯಾರು ಮತ್ತು ಕೋಟತಟ್ಟು ಗ್ರಾಮ ವ್ಯಾಪ್ತಿಯಲ್ಲಿನ ಕಾರಂತರ ಮನೆ ತೆರವುಗೊಳಿಸದಂತೆ ಸಾಹಿತ್ಯಾಸಕ್ತರು, ಕನ್ನಡಪರ ಸಂಘಟನೆಗಳು ಸ್ಥಳೀಯರ ವಿರೋಧ ವ್ಯಕ್ತಪಡಿಸಿದ್ದರು.
ಆದರೆ, ಆಗಬಾರದ್ದು ಆಗಿಬಿಟ್ಟಿದೆ. ನಡುವೆಯೂ ಚತುಷ್ಪಥ ರಸ್ತೆ ಕಾಮಗಾರಿಗೆ ಕಾರಂತಜ್ಜನ ಮೂಲಮನೆ ಬಲಿಯಾಗಿದೆ. ಕಾರಂತರ ಮನೆ ಸ್ಮಾರಕವಾಗಿ ಉಳಿಸಬೇಕೆಂದು ಸಾಹಿತ್ಯ ವಲಯ ಇಟ್ಟಿದ್ದ ಬಹುದಿನಗಳ ಬೇಡಿಕೆ ಸರ್ಕಾರದ ಕಿವಿಗೆ ಬಿದ್ದಿಲ್ಲ.
ಜ್ಞಾನಪೀಠ ಪ್ರಶಸ್ತಿ ಗಳಿಸಿರುವ ಎಂಟು ಮಂದಿ ಕನ್ನಡ ಸಾಹಿತಿಗಳಲ್ಲಿ ಒಬ್ಬರಾದ ಶಿವರಾಮ ಕಾರಂತ ಅವರ ಮೂಲ ಮನೆ 'ಸುಹಾಸ್' ಈಗ ಕಾಲಗರ್ಭಕ್ಕೆ ಸೇರಿದೆ. ಕಾರಂತರ ಪುತ್ತೂರಿನ ಮನೆಯಾದ 'ಹರ್ಷ' ವನ್ನು ಈಗಾಗಲೇ ಸ್ಮಾರಕವನ್ನಾಗಿ ಮಾಡಲಾಗಿದೆ.
ಆದರೆ ಕಾರಂತರ ಕೋಟದ ಮೂಲ ಮನೆಯಲ್ಲಿರುವ ಗ್ರಂಥಾಲಯ, ಅವರ ನೆನಪು ಸದಾ ಉಳಿಯಬೇಕಾದರೆ ಮತ್ತು ಮುಂದಿನ ಪೀಳಿಗೆಗೆ ಕಾರಂತರ ಕುರಿತು ತಿಳಿಯಬೇಕಾದರೆ ಈ ಮನೆ ಉಳಿಸುವುದು ಅನಿವಾರ್ಯವಾಗಿದೆ ಎಂಬುದು ಕಾರಂತ ಅಭಿಮಾನಿಗಳ ಅಭಿಪ್ರಾಯವಾಗಿದೆ.
ಆರೋಗ್ಯದ ಐಶ್ವರ್ಯಕ್ಕೆ ಕಲ್ಲುಪ್ಪು ಸೇವಿಸಿ!
ಕಲ್ಲುಪ್ಪು ನೈಸರ್ಗಿಕವಾದ ಉಪ್ಪು. ಆದರೆ ಅಯೋಡಿನ್ ಭರಿತ ಉಪ್ಪನ್ನೇ ಸೇವಿಸಿ ಘೋಷಣೆಯ ಹೊಡೆತಕ್ಕೆ ಸಿಲುಕಿ ಕಲ್ಲುಪ್ಪು ಕಾಣೆಯಾಗಿದೆ. ಸಕ್ಕರೆಗಿಂತ ಕಲ್ಲು ಸಕ್ಕರೆ ಹೆಚ್ಚು ಆರೋಗ್ಯಕಾರಿಯಾಗಿರುವಂತೆ, ಪುಡಿ ಉಪ್ಪಿಗಿಂತ ಕಲ್ಲುಪ್ಪು ಉತ್ತಮವಾಗಿದೆ. ಇವತ್ತು ನಾವು ಕಲ್ಲುಪ್ಪಿನ ಆರೋಗ್ಯಕರ ಗುಣಗಳ ಬಗ್ಗೆ ತಿಳಿಯೋಣ.
ಕಲ್ಲುಪ್ಪಿನ ಪ್ರಯೋಜನಗಳು:
1. ಕಲ್ಲುಪ್ಪಿನಲ್ಲಿ ಕ್ಯಾಲ್ಸಿಯಂ ಮತ್ತು ಮ್ಯಾಗ್ನಿಷಿಯಂ ಅಧಿಕವಾಗಿ ಇರುವುದರಿಂದ ದೇಹವು ಸರಿಯಾಗಿ ಕಾರ್ಯ ನಿರ್ವಹಿಸಲು ಸಾಕಾಗುವಷ್ಟು ಆಮ್ಲಜನಕವನ್ನು ಪೂರೈಕೆ ಮಾಡುತ್ತದೆ.
2. ಕಲ್ಲುಪ್ಪು ದೇಹದ ಅಂಗಗಳು ಚಟುವಟಿಕೆಯಿಂದ ಕಾರ್ಯನಿರ್ವಯಿಸುವಂತೆ ಮಾಡುತ್ತದೆ.
3. ಕಲ್ಲುಪ್ಪು ಸೇವಿಸಿದರೆ ದೇಹವು ನೀರನ್ನು ಹೀರಿಕೊಂಡು ಜೀರ್ಣಕ್ರಿಯೆ ಸರಾಗವಾಗಿ ನಡೆಯುವಂತೆ ಮಾಡುತ್ತದೆ.
4. ನಾನು ಉಸಿರಾಡುವ ಗಾಳಿಯಲ್ಲಿರುವ ಹಾನಿಕಾರಕ ಕಣಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.
5. ಅಸ್ತಮಾ ಅಥವಾ ಉಸಿರಾಟದ ತೊಂದರೆ ಇರುವವರು ಅಡುಗೆಯಲ್ಲಿ ಕಲ್ಲುಪ್ಪು ಬಳಸುವುದು ಒಳ್ಳೆಯದು.
6. ಉಪ್ಪುನಲ್ಲಿರುವ ಖನಿಜಾಂಶಗಳು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
7. ಕಲ್ಲುಪ್ಪಿನಲ್ಲಿರುವ ಖನಿಜಾಂಶಗಳು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ.

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)