ಪುಟಗಳು

ಹೆಣ್ಣು ಹೆಣ್ಣು ಮದುವೆಗೆ ಸಾಕ್ಷಿಯಾದ ನೇಪಾಳ

ಕಠ್ಮಂಡು ಜೂ 21: ಅಮೆರಿಕ ಮೂಲದ ಸಲಿಂಗ ಜೋಡಿಯೊಂದು ಇಲ್ಲಿನ ಪ್ರಸಿದ್ಧ ದಕ್ಷಿಣಕಾಳಿ ದೇವಸ್ಥಾನದಲ್ಲಿ ಹಿಂದೂ ವೈದಿಕ ಸಂಪ್ರದಾಯದಂತೆ ಹಸೆಮಣೆ ಏರಿದ ಘಟನೆ ಸೋಮವಾರ ನಡೆದಿದೆ. ಸಾರ್ವಜನಿಕವಾಗಿ ಲೆಸ್ಬಿಯನ್ ಗಳ ಮದುವೆ ನೇಪಾಳದಲ್ಲಿ ನಡೆದಿದ್ದು ಇದೆ ಮೊದಲು. ಬ್ಲ್ಯೂಡೈಮಂಡ್ ಸೊಸೈಟಿ ಹಾಗೂ ಪಿಂಕ್ ಮೌಂಟೇನ್ ಟ್ರಾವೆಲ್ಸ್ ಜಂಟಿಯಾಗಿ ಆಯೋಜಿಸಿದ್ದ ಈ ವಿವಾಹ ಯಶಸ್ವಿಯಾಗಿ ನೆರವೇರಿತು. 48 ವರ್ಷದ ವಕೀಲೆಯಾಗಿರುವ ಸಾರಾ ವೆಲ್ಟನ್ ಹಾಗೂ ಕೊಲೊರೋಡೋದ ಮನಃಶಾಸ್ತ್ರಜ್ಞ 41 ವರ್ಷದ ಕರ್ಟ್ನಿ ಮಿಚೆಲ್ ಮದುವೆಯಾದ ಹೆಣ್ಣು ಸಲಿಂಗಿಗಳು.

ನನಗೆ ನೇಪಾಳ ಎಂದರೆ ಇಷ್ಟ. ಇಲ್ಲಿನ ಸಂಪ್ರದಾಯ, ಪದ್ಧತಿಗೆ ಮನಸೋತಿದ್ದೇನೆ ಹಾಗಾಗಿ ನಮ್ಮ ವಿವಾಹ ಇಲ್ಲಿ ನೇರವೇರಿತ್ತು ಸಂತಸದ ವಿಷ್ಯ ಎಂದು ಮಿಚೆಲ್ ಹೇಳುತ್ತಾರೆ. ಹಿಂದೂ ಪುರಾಣಗಳಲ್ಲಿ ಸಲಿಂಗ ಮದುವೆಗಳ ಉಲ್ಲೇಖ ಇದೆ ಎಂದು ಮಿಚೆಲ್ ಖುಷಿಯಾಗಿ ಹೇಳುತ್ತಾರೆ.

ಕಾನೂನಿನ ನೆರವು: ಐದು ವರ್ಷ ಹಳೆಯದಾದ ಇವರ ಸ್ನೇಹ ಮದುವೆಯಾಗಿ ತಿರುಗಿದೆ ಆದರೆ, ಇದಕ್ಕೆ ಮಾನ್ಯತೆ ಎಲ್ಲೆಡೆ ಸಿಗುವುದು ಕಷ್ಟ. ಹಾಗಾಗಿ ಅಮೆರಿಕದ ಲೊವಾ ಪ್ರದೇಶದ ಕಾನೂನಿನಲ್ಲಿ ಸಲಿಂಗಿಗಳ ಮದುವೆಗೆ ಮಾನ್ಯತೆಯಿದೆ. ಅಲ್ಲಿ ಮದುವೆ ನೋಂದಾಯಿಸಲು ಕರ್ಟ್ನಿ ಹಾಗೂ ಮಿಚೆಲ್ ನಿರ್ಧರಿಸಿದ್ದಾರೆ.

ವಿಶೇಷವೆಂದರೆ ನೇಪಾಳದಲ್ಲಿ ಈ ಮುಂಚೆ ಕೂಡಾ ಗೇಗಳ ಮದುವೆ ಜರುಗಿತ್ತು. ನೇಪಾಳದಲ್ಲಿ ನಡೆಯುತ್ತಿರುವ ಜನಗಣತಿಯಲ್ಲಿ ಗೇ ಹಾಗೂ ಲೆಸ್ಬಿಯನ್ ಗಳಿಗೆ ಪ್ರತ್ಯೇಕ ಕಾಲಂ ಕೂಡಾ ಇದೆ. ಆದರೆ, ಸಲಿಂಗಿಗಳ ಮದುವೆಗೆ ಕಾನೂನಿನಲ್ಲಿ ಮಾನ್ಯತೆ ಸಿಕ್ಕಿಲ್ಲ.