ಪುಟಗಳು

ದಶಮಾನೋತ್ಸವ ಸಂಭ್ರಮದಲ್ಲಿ ಕರವೇ ಕಾರ್ಯಕರ್ತರು



karave
ಬೆಂಗಳೂರು, ಜೂನ್ 21: ಹತ್ತು ವರ್ಷಗಳ ಹಿಂದೆ ನಡೆದ ಕಾವೇರಿ ನದಿ ನೀರು ಹೋರಾಟದ ಫಲವಾಗಿ ಮೊಳಕೆಯೊಡೆದ ಕರ್ನಾಟಕ ರಕ್ಷಣಾ ವೇದಿಕೆಯ (ಕರವೇ) ಇಂದು ರಾಜ್ಯಾದ್ಯಂತ ಟಿಸಿಲೊಡೆದು ಹೆಮ್ಮರವಾಗಿ ಬೆಳೆಯುತ್ತಿದೆ.

ಹತ್ತು ವರ್ಷಗಳ ಸಾರ್ಥಕ ಪಯಣದಲ್ಲಿ ಕರವೇ ಅನುಭವ, ಹೋರಾಟಗಳು, ಯಶಸ್ಸುಗಳು - ಈ ಎಲ್ಲವನ್ನೂ ದಶಮಾನೋತ್ಸವದ ಒಂದು ಸಂಭ್ರಮ ಜಾತ್ರೆಯಲ್ಲಿ ಹಂಚಿಕೊಳ್ಳುವ ಸಮಯ ಹತ್ತಿರವಾಗಿದೆ.

ಜೂನ್ 22 ಮತ್ತು 23 ರಂದು ಬೆಂಗಳೂರಿನಲ್ಲಿ ಅರಮನೆ ಮೈದಾನದಲ್ಲಿ (ಗಾಯತ್ರಿ ವಿಹಾರ) ದಶಮಾನೋತ್ಸವ ಸಂಭ್ರಮಾಚರಣೆ ಆಯೋಜಿಸಲಾಗಿದೆ. ಉತ್ಸವದಲ್ಲಿ ಸಮಸ್ತ ಕನ್ನಡಿಗರು ಪಾಲ್ಗೊಂಡು, ಕರ್ನಾಟಕದ ಜಾನಪದ ಸೊಗಡನ್ನು ಸವಿಯಬಹುದಾಗಿದೆ.

ಕಾರ್ಯಕ್ರಮದ ವಿವರಗಳು: ಬುಧವಾರ ಸಂಜೆ 5 ಗಂಟೆಗೆ ಜಾನಪದ ಜಾತ್ರೆ ಉದ್ಘಾಟನೆ. ಗುರುವಾರ ಬೆಳಗ್ಗೆ 11ಗಂಟೆಗೆ ರಾಷ್ಟ್ರೀಯ ವಿಚಾರ ಸಂಕಿರಣ. ಗುರುವಾರ ಸಂಜೆ 5.30ಕ್ಕೆ ಸಮಾರೋಪ ಸಮಾರಂಭ.

ಕರವೇ ವಿಳಾಸ:
ಕರ್ನಾಟಕ ರಕ್ಷಣಾ ವೇದಿಕೆ, ನಂ 29, ಪ್ರವೀಣ್ ಕಟ್ಟಡ, 5ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು.
ದೂರವಾಣಿ: 080-2237 0032.