ಪುಟಗಳು

ಸಿದ್ದಗಂಗಾ ಶ್ರೀ ನಿವೃತ್ತಿ ಘೋಷಣೆ

ತುಮಕೂರು, ಆ. 04 : 81 ವರ್ಷಗಳಿಂದ ಸಿದ್ದಗಂಗಾ ಮಠದ ಆಡಳಿತ ನಡೆಸುತ್ತಿರುವ 104 ವಸಂತಗಳನ್ನು ಕಂಡಿರುವ 'ಕರ್ಮಯೋಗಿ' ಶ್ರೀ ಶಿವಕುಮಾರ ಸ್ವಾಮೀಜಿಯವರು ಅಧಿಕಾರ ಹಸ್ತಾಂತರಿಸುವ ಮಹತ್ತರ ನಿರ್ಣಯವನ್ನು ನಾಗರಪಂಚಮಿಯ ದಿನದಂದು ಗುರುವಾರ ತೆಗೆದುಕೊಂಡಿದ್ದಾರೆ.

ಅವರ ಉತ್ತರಾಧಿಕಾರಿಯಾಗಿ ಕಿರಿಯ ಶ್ರೀಗಳಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರು ಅಧಿಕಾರ ಸ್ವೀಕರಿಸಿದ್ದಾರೆ ಎಂದು ಸಿದ್ದಗಂಗಾ ಮಠದ ಮೂಲಗಳು ತಿಳಿಸಿವೆ. ಮಠದ ಉತ್ತರಾಧಿಕಾರಿ ಯಾರಾಗಬೇಕು ಎಂಬ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಹಿಂದೆ ಉತ್ತರಾಧಿಕಾರಿಯಾಗಬೇಕಿದ್ದ ಗೌರಿಶಂಕರ ಸ್ವಾಮೀಜಿ ವಿವಾದಗಳಿಗೆ ಸಿಲುಕಿ ಮಠದಿಂದ ಹೊರನಡೆದಿದ್ದರು.

ನಡೆದಾಡುವ ದೇವರು ಎಂದೇ ಜನಜನಿತರಾಗಿರುವ ಶಿವಕುಮಾರ ಸ್ವಾಮೀಜಿಗಳು 81 ವರ್ಷಗಳುದ್ದಕ್ಕೂ ಶೈಕ್ಷಣಿಕ, ಸಾಮಾಜಿಕ ಕ್ಷೇತ್ರದಲ್ಲಿ ಅಸಾಮಾನ್ಯ ಸೇವೆ ಸಲ್ಲಿಸಿದ್ದಾರೆ. ಈ ಇಳಿವಯಸ್ಸಿನಲ್ಲಿಯೂ ಅತ್ಯಂತ ಚಟುವಟಿಕೆಯಿಂದ ಇದ್ದ ಶ್ರೀಗಳು ಈಗ ವಿಶ್ರಾಂತ ಜೀವನಕ್ಕೆ ಕಾಲಿಡುತ್ತಿದ್ದಾರೆ