ಪುಟಗಳು

ಮುಂದಿನ ತಿಂಗಳು ಮತ್ತೆ ಪೆಟ್ರೋಲ್ ದರ ಏರಿಕೆ

ನವದೆಹಲಿ, ಮೇ 31: ಪೆಟ್ರೋಲ್ ಬೆಲೆ ಏರಿಕೆ ಮಾಡಿ ಇನ್ನು ಹದಿನೈದು ದಿನ ಕಳೆದಿಲ್ಲ ಆದರೆ, ಈಗ ಭಾರತದ ಬೃಹತ್ ರೀಟೈಲರ್ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮತ್ತೆ ಬೆಲೆ ಏರಿಕೆ ರಾಗವನ್ನು ಹಾಡುತ್ತಿದೆ. ಮೇ 15 ರಂದು ಪೆಟ್ರೋಲ್ ದರವನ್ನು ಪ್ರತಿ ಲೀಟರ್ ಗೆ ರು.5 ರಂತೆ ಏರಿಕೆ ಮಾಡಲಾಗಿತ್ತು.

ಅಂತಾರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರಗಳು ತೀವ್ರವಾಗಿ ಏರಿಕೆಯಾಗಿದ್ದು ಈಗಿನ ದರದಲ್ಲಿ ಮಾರಾಟ ಮಾಡುತ್ತಿರುವದರಿಂದ ಪ್ರತೀ ಲೀಟರ್ ಪೆಟ್ರೋಲ್ ಗೆ ಕಂಪೆನಿ ರು 4.58 ಹಾಗೂ ವ್ಯಾಟ್ ನಂತರ ರು 5.50 ರಷ್ಟು ನಷ್ಟ ಅನುಭವಿಸುತ್ತಿದೆ ಎಂದು ಐಒಸಿ ಅಧ್ಯಕ್ಷ ಆರ್ ಎಸ್ ಬಟೋಲ ಹೇಳಿದ್ದಾರೆ.

ಜೂನ್ 1 ರಿಂದ ಕಂಪೆನಿ ಪ್ರತೀ ಲೀಟರ್ ಡೀಸೆಲ್ ಮಾರಾಟದಿಂದ ರು.12.64 ನಷ್ಟ ಅನುಭವಿಸಲಿದೆ. ಈಗಿನ ನಷ್ಟ ಪ್ರತೀ ಲೀಟರಿಗೆ ರು 14.66 ರಷ್ಟಿದೆ ಎಂದಿದ್ದಾರೆ. ಪ್ರತೀ ಅಡುಗೆ ಅನಿಲ ಸಿಲಿಂಡರ್ ಮಾರಾಟದಿಂದ ರು 380.57 ಹಾಗೂ ಸೀಮೆಎಣ್ಣೆ ಮಾರಾಟದಿಂದ ಪ್ರತೀ ಲೀಟರಿಗೆ ರು 25.85 ರಷ್ಟು ನಷ್ಟ ಆಗುತ್ತಿದೆ ಎಂದರು.
ಜೂನ್ 9 ರಂದು ಡೀಸೆಲ್, ಸೀಮೆ ಎಣ್ಣೆ, ಎಲ್ ಪಿಜಿ ಬೆಲೆ ಏರಿಕೆ ಕುರಿತಾದ ಉನ್ನತಾಧಿಕಾರದ ಸಚಿವರ ಸಮಿತಿಮಹತ್ವದ ಸಭೆ ಹಣಕಾಸು ಸಚಿವ ಪ್ರಣಬ್ ಮುರ್ಖಿ ನೇತೃತ್ವದಲ್ಲಿ ಜರುಗಲಿದೆ