ಪುಟಗಳು

ಮಗಳಿಗೆ 3 ಮಗು ಕರುಣಿಸಿದ್ದ ರೇಪಿಸ್ಟ್ ಫಾದರ್ ಸೆರೆ

ಬರ್ಲಿನ್, ಸೆ.15: ಅಸಹ್ಯವಾದರೂ ಇದು ಸತ್ಯ. ತನ್ನ ಮಗಳಿಗೆ ಮೂರು ಮಕ್ಕಳನ್ನು ಕರುಣಿಸಿದ್ದ, ರೇಪ್ ಮಾಡುವುದರಲ್ಲಿ ಸಿದ್ದಹಸ್ತ ಎನಿಸಿದ್ದ ಜರ್ಮನಿಯ 69 ವರ್ಷದ ವ್ಯಕ್ತಿಯನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ.

ಕಳೆದ ಒಂದು ದಶಕದಲ್ಲಿ ಸುಮಾರು 497 ಸಲ ತನ್ನ ಮಗಳ ಮೇಲೆ ಬಲಾತ್ಕಾರ ಮಾಡಿ, ಸುಮಾರು 34 ವರ್ಷಗಳ ಕಾಲ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪವನ್ನು ಆರೋಪವನ್ನು ಜರ್ಮನಿಯ ಮಹಾನ್ ತಂದೆ ಮೇಲೆ ಹೊರೆಸಲಾಗಿದೆ.
  Read:  In English 

12 ವರ್ಷ ವಯಸ್ಸಿದ್ದಾಗಲಿಂದ ತನ್ನ ಲೈಂಗಿಕ ತೃಪ್ತಿಗಾಗಿ ನನ್ನನ್ನು ನನ್ನ ತಂದೆ ಬಳಸುತ್ತಿದ್ದ. ನ್ಯೂರೆಂನ್ಬರ್ಗ್ ನ ಮನೆ ಅಥವಾ ಕಾರಿನಲ್ಲಿ ನನ್ನ ಮೇಲೆ ಲೈಂಗಿಕ ಕಿರುಕುಳ ನಡೆದಿತ್ತು ಎಂದು ಅಪ್ಪನಿಂದ ಮೂರು ಗಂಡು ಮಕ್ಕಳನ್ನು ಪಡೆದ 46 ವರ್ಷದ ಮಗಳು ಹೇಳಿಕೊಂಡಿದ್ದಾಳೆ.

ಇತ್ತೀಚೆಗೆ ತನ್ನ ಅಧಿಕಾರಿಯೊಬ್ಬರ ಬಳಿ ತಂದೆಯ ಪ್ರತಾಪದ ಗುಟ್ಟನ್ನು ಬಿಚ್ಚಿದ್ದು, ಈಗ ಎಲ್ಲೆಡೆ ಸುದ್ದಿಯಾಗಿದೆ ಎಂದು ಡೈಲಿ ಮೇಲ್ ವರದಿ ಮಾಡಿದೆ.

ಬಾಬಾ ರಾಮ್‌ದೇವ್‌ಗೆ ರಾಖಿ ಸಾವಂತ್ ಚಾಲೆಂಜ್

ಯೋಗ ಗುರು ಬಾಬಾ ರಾಮ್‌ದೇವ್ ಅವರಿಗೆ ಐಟಂ ಬೆಡಗಿ ರಾಖಿ ಸಾವಂತ್ ಸಖತ್ ಚಾಲೆಂಜ್ ಹಾಕಿದ್ದಾರೆ. ತಾಕತ್ ಇದ್ದರೆ ತಮ್ಮ ಜೊತೆ 'ಬಿಗ್ ಬಾಸ್' ರಿಯಾಲಿಟಿ ಶೋಗೆ ಬನ್ನಿ ಎಂದಿದ್ದಾರೆ. ಈ ಹಿಂದೊಮ್ಮೆ ರಾಖಿ ಸಾವಂತ್‌ಗೆ ಬಾಬಾ ತೀವ್ರ ಮುಖಭಂಗ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರಾಖಿ ತಿರುಗೇಟು ನೀಡಿದ್ದಾರೆ.

'ಬಿಗ್ ಬಾಸ್' ಅಡ್ಡಾಗೆ ಬನ್ನಿ ಮುಖಾ ಮುಖಿ ಭೇಟಿಯಾಗೋಣ. ಅಲ್ಲಿ ನೀನಾ ನಾನಾ ನೋಡೇ ಬಿಡೋಣ ಎಂದಿದ್ದಾರೆ. ಈ ಹಿಂದೆ ಬಾಬಾ ರಾಮ್‌ದೇವ್ ಮೇಲೆ ರಾಖಿಗೆ ಮನಸಾಗಿ ಮದುವೆಯಾಗುವುದಾದರೆ ಅವರನ್ನೇ ಆಗುತ್ತೇನೆ. ಇಲ್ಲದಿದ್ದರೆ 'ಕನ್ಯೆ'ಯಾಗಿಯೇ ಉಳಿದುಬಿಡುತ್ತೇನೆ ಎಂದಿದ್ದರು.
  Read:  In English 

ಇದಕ್ಕೆ ತಡವಾಗಿ ಪ್ರತಿಕ್ರಿಯಿಸಿದ ಬಾಬಾ, ಇದೊಂದು ನಡತೆಗೆಟ್ಟ ಮಾತು ಎಂದಿದ್ದರು. ಬಾಬಾ ಮಾತಿಗೆ ಕೆರಳಿದ ಸರ್ಪದಂತಾಗಿರುವ ರಾಖಿ, "ಬಾಬಾಗೆ ನಾನು ಚಾಲೆಂಜ್ ಮಾಡುತ್ತಿದ್ದೇನೆ, ನನ್ನೊಂಗಿಗೆ ಅವರು ಬಿಗ್‌ಬಾಸ್ ಮನೆಗೆ ಬರಲಿ. ವಿಶ್ವಾಮಿತ್ರನಿಗೆ ಮೇನಕೆ ತಪಸ್ಸು ಭಂಗ ಮಾಡಿದಂತೆ ಮಾಡುತ್ತೇನೆ. ನಾನು ಚಾಲೆಂಜ್ ಮಾಡುತ್ತಿದ್ದೇನೆ ಅವರ ಶೀಲ ಹರಣವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ" ಎಂದಿದ್ದಾರೆ.

ಕಲರ್ಸ್ ವಾಹಿನಿಯ ಜನಪ್ರಿಯ ಬಿಗ್ ಬಾಸ್ ರಿಯಾಲಿಟಿ ಕಾರ್ಯಕ್ರಮಕ್ಕೆ ವೆಲ್ಡ್ ಎಂಟ್ರಿ ಮೂಲಕ ಬಾಬಾ ರಾಮ್ ದೇವ್ ಹಾಗೂ ರಾಖಿ ಸಾವಂತ್ ಪ್ರವೇಶಿಸುವ ಸಾಧ್ಯತೆಗಳೂ ಇಲ್ಲದಿಲ್ಲ! ಆದರೆ ಬಾಬಾ ರಾಮ್ ದೇವ್‌ ಗಡ್ಡ ಯಾಕೋ ಇಷ್ಟವಾಗಲಿಲ್ಲ. ಅವರು ಕ್ಲೀನ್ ಆಗಿ ಶೇವ್ ಮಾಡಿಕೊಂಡು ಬಂದರೆ ಒಳಿತು ಎಂದಿದ್ದಾರೆ ಬಿಂಕದ ರಾಣಿ ರಾಖಿ.

ವಿದ್ಯಾ ಬಾಲನ್ ಮತ್ತೊಮ್ಮೆ ಕಳಚಲಿದ್ದಾರೆ ವಸ್ತ್ರ!

ಈಗಾಗಲೆ ತಮ್ಮ ಯೌವನವನ್ನು ಬೆಳ್ಳಿತೆರೆಯ ಮೇಲೆ ಪ್ರದರ್ಶಿಸಿ ಚಿತ್ರರಸಿಕರ ಹೃದಯಕ್ಕೆ ಡೈವ್ ಹೊಡೆದಿರುವ ಸಖತ್ ಹಾಟ್ ಬೆಡಗಿ ವಿದ್ಯಾ ಬಾಲನ್ ಮತ್ತೊಮ್ಮೆ ಪಡ್ಡೆಗಳ ನಿದ್ದೆ ಕೆಡಿಸಲು ಬರುತ್ತಿದ್ದಾರೆ. 'ದಿ ಡರ್ಟಿ ಪಿಕ್ಚರ್' ಬಳಿಕ ವಿದ್ಯಾ ಸಹಿ ಹಾಕಿರುವ ಮತ್ತೊಂದು ಚಿತ್ರ 'ಎಂಜಾಯ್ ಯುವರ್ ಲೈಫ್'.
  Read:  In English 

ವಿದ್ಯಾ ತಮ್ಮ ಪಾತ್ರಕ್ಕಾಗಿ ನಗ್ನವಾಗುತ್ತಿರುವುದು ಈ ಚಿತ್ರದ ವಿಶೇಷಗಳಲ್ಲಿ ಒಂದು. ಚಿತ್ರದ ಪ್ರಮುಖ ಪಾತ್ರದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡ ಕಾಣಿಸಲಿದ್ದಾರೆ. ಏತನ್ಮಧ್ಯೆ 'ದಿ ಡರ್ಟಿ ಪಿಕ್ಚರ್' ನೋಡಿರುವ ದಕ್ಷಿಣದ ನಿರ್ಮಾಪಕರು ಕಾಲ್ ಶೀಟ್‌ಗಾಗಿ ವಿದ್ಯಾ ಹಿಂದಿ ಬಿದ್ದಿದ್ದಾರೆ. ಆದರೆ ಅವರ ಬಲೆಗೆ ವಿದ್ಯಾ ಅಷ್ಟು ಸುಲಭವಾಗಿ ಸಿಗುವ ಮೀನಲ್ಲ.

'ಎಂಜಾಯ್ ಯುವರ್ ಲೈಫ್' ಚಿತ್ರದಲ್ಲಿ ವಿದ್ಯಾ ಏನೇನು ಮಾಡ್ತರೋ ಇನ್ನೇನು ತೋರಿಸ್ತಾರೋ ಎಂಬ ಕುತೂಹಲವಂತೂ ಆಕೆಯ ಅಭಿಮಾನಿಗಳಲ್ಲಿ ಇದ್ದೇ ಇದೆ. ಪ್ರೇಕ್ಷಕರು ಎಂಜಾಯ್ ಮಾಡುವುದಂತೂ ಸತ್ಯ. ಈ ಚಿತ್ರದ ವಿವರಗಳು ಇನ್ನಷ್ಟೇ ಹೊರಬೀಳಬೇಕಾಗಿದೆ. ಅಲ್ಲಿಯವೆರಗೂ ವಿದ್ಯಾ ಅಭಿಮಾನಿಗಳು ತಾಳ್ಮೆವಹಿಸಲಿ

ಬೀಟ್ ರೂಟ್ ಮದ್ಯ, ಟೊಮ್ಯಾಟೋ ಮದ್ಯ:ರೇಣು ಯೋಜನೆ


ಬೆಂಗಳೂರು, ಸೆ. 14: ಬೀಟ್‌ರೂಟ್‌ನಿಂದ ಮದ್ಯ ತಯಾರಿಕೆ ಬಗ್ಗೆ ಸುಳಿವು ಕೊಟ್ಟಿದ್ದ ಮಾನ್ಯ ಅಬಕಾರಿ ಸಚಿವರು ಬುಧವಾರ ಮತ್ತೆ ಅದೇ ರಾಗ ಹಾಡಿದ್ದಾರೆ. ಅಬಕಾರಿ ಕಾಯ್ದೆಗೆ ತಿದ್ದುಪಡಿ ತಂದು ಹೊಸ ಹೊಸ ವಿಧಾನಗಳಲ್ಲಿ ಮದ್ಯ ತಯಾರಿಕೆಗೆ ಉತ್ತೇಜನ ನೀಡಲಾಗುವುದು ಎಂದು ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರೇಣುಕಾಚಾರ್ಯ ಹೇಳಿದ್ದಾರೆ.

ಬೀಟ್‌ರೂಟ್‌ನಿಂದ ಮದ್ಯ ತಯಾರಿಕೆ ಬಗ್ಗೆ ಕಂಪೆನಿಯೊಂದು ಪ್ರಸ್ತಾವನೆ ಸಲ್ಲಿಸಿದೆ. ಇಲಾಖೆಯ ತಾಂತ್ರಿಕ ಸಮಿತಿ ಸಹ ಇದಕ್ಕೆ ಸಮ್ಮತಿಸಿದೆ. ಆದರೆ, ಹೊಸ ವಿಧಾನದ ಮದ್ಯ ತಯಾರಿಕೆಗೆ ಪ್ರಸಕ್ತ ಕಾಯ್ದೆಯಲ್ಲಿ ಅವಕಾಶಗಳಿಲ್ಲ. ಹೀಗಾಗಿ ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ರೇಣುಕಾಚಾರ್ಯ ಹೇಳಿದರು.

ಬೀಟ್ ರೂಟ್ ನಂತರ ಟೋಮ್ಯಾಟೋ : 1 ಟನ್ ಬೀಟ್‌ರೂಟ್‌ನಲ್ಲಿ 350 ಲೀಟರ್ ಮದ್ಯ ತಯಾರಿಸಬಹುದು.[ತಯಾರಿಸುವ ವಿಧಾನ ನೋಡಿ] ಈ ಮದ್ಯದಲ್ಲಿ ಶೇ.16ರಷ್ಟು ಸಕ್ಕರೆ ಅಂಶವಿರುತ್ತದೆ. ಕೋಲಾರದ ನಿವೃತ್ತ ಸೇನಾಧಿಕಾರಿಯೊಬ್ಬರು ಟೊಮ್ಯಾಟೊದಿಂದ ಮದ್ಯ ತಯಾರಿಸಲು ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಇದರ ಜೊತೆಗೆ, ರಾಜ್ಯದಲ್ಲಿ ಸಣ್ಣ ಪ್ರಮಾಣದ ಮದ್ಯ ತಯಾರಿಕಾ ಘಟಕ ಸ್ಥಾಪನೆಗೆ ಸರಕಾರ ಸಿದ್ಧತೆ ನಡೆಸಿದೆ.  ಚಾನ್ಸರಿ ಹೊಟೇಲ್, ಇಂದಿರಾನಗರದ ಫ್ರೆಶ್‌ಫೋರ್ ಮತ್ತು ನ್ಯೂ ಬಿಇಎಲ್ ರಸ್ತೆಯ ಸ್ಪಿರಿಟ್ ಬಿಯರ್ ವರ್ಲ್ಡ್ ಸಂಸ್ಥೆ ಅರ್ಜಿ ಸಲ್ಲಿಸಿದೆ ಎಂದು ಸಚಿವ ರೇಣುಕಾಚಾರ್ಯ ಹೇಳಿದ್ದಾರೆ

ನಾನೇ ಬೇರೆ ನನ್ನ ಸ್ಟೈಲೇ ಬೇರೆ : ಶಿವರಾಜ ಪಾಟೀಲ - ಸಾಗರ ದೇಸಾಯಿ. ಯಾದಗಿರಿ


ಯಾದಗಿರಿ, ಸೆ. 15 : "ಮೊದಲನೇ ಲೋಕಾಯುಕ್ತ ನ್ಯಾ. ವೆಂಕಟಾಚಲ ಅವರು ಲೋಕಾಯುಕ್ತ ಸಂಸ್ಥೆ ಇದೆ ಎನ್ನುವುದನ್ನು ತೋರಿಸಿಕೊಟ್ಟರು. ಎರಡನೇ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಸಂಸ್ಥೆ ಹೇಗೆ ಕೆಲಸ ಮಾಡಬೇಕು ಎಂಬುದನ್ನು ತೋಸಿರಿದರು. ಮೂರನೇಯವನಾಗಿ ನಾನು ಹೇಗೆ ಕೆಲಸ ಮಾಡುತ್ತೇನೆ, ನನ್ನ ಸ್ಟೈಲ್ ಹೇಗಿದೆ ಎಂಬುದನ್ನು ಕಾದು ನೋಡಿ."

ಹೀಗೆಂದು ಲೋಕಾಯುಕ್ತ ಸಂಸ್ಥೆ ಮತ್ತು ತಮ್ಮ ಕಾರ್ಯನಿರ್ವಹಣೆಯ ಬಗ್ಗೆ ವಿಚಿತ್ರ ಕುತೂಲಹ ಕೆರಳಿಸಿದವರು ಮೂರನೇ ಲೋಕಾಯುಕ್ತರಾಗಿ ಅಧಿಕಾರ ವಹಿಸಿಕೊಂಡಿರುವ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಶಿವರಾಜ ವಿ ಪಾಟೀಲ.

ಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದ ನಂತರ ಪ್ರಥಮ ಬಾರಿಗೆ ಯಾದಗಿರಿಗೆ ಭೇಟಿ ನೀಡಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು ಮತ್ತು ಸಾರ್ವಜನಿಕರೊಡನೆ ಮುಕ್ತವಾಗಿ ಸಂವಾದ ನಡೆಸಿದರು.

ಲೋಕಾಯುಕ್ತರಿಗೆ ಸರ್ವಾಧಿಕಾರ ಬೇಡ, ಆದರೆ ಸರಿಯಾದ ಅಧಿಕಾರ ಇರಬೇಕು ಮತ್ತು ಲೋಕಾಯುಕ್ತ ಕಾಯ್ದೆ ತಿದ್ದುಪಡಿ ಆಗಬೇಕು ಎಂದು ಅವರು ಅಭಿಪ್ರಾಯಪಟ್ಟರು. ನಾನು ಲೋಕಾಯುಕ್ತನಾಗಿ ಕಾರ್ಯನಿರ್ವಹಿಸುವ ರೀತಿ ಭಿನ್ನವಾಗಿರುತ್ತದೆ. ನನ್ನ ಸ್ಟೈಲ್ ನೋಡಿ ನೀವೇ ನಿರ್ಧಾರ ಮಾಡಿ ಎಂದು ಅವರು ಜನರಿಗೇ ಸವಾಲ್ ಹಾಕಿದರು.

ಪರಮಾತ್ಮ ಹಾಡು & ಸಾಹಿತ್ಯ ಸೂಪರ್ ಬಿಡಿ ಭಟ್ರೇ - ಬಾಲರಾಜ್ ತಂತ್ರಿ

ಯೋಗರಾಜ್ ಭಟ್ ಮತ್ತು ಪುನೀತ್ ಕಾಂಬಿನೇಶನ್ ಚಿತ್ರವೆಂದ ಮೇಲೆ ಪ್ರೇಕ್ಷಕರಿಗೆ ನಿರೀಕ್ಷೆ ಸಹಜ. ಭಟ್ರ ಚಿತ್ರವೆಂದರೆ ಹಾಡಿಗೆ ಪ್ರಾಮುಖ್ಯತೆ ಜಾಸ್ತಿ. ಈ ಆಲ್ಬಮ್‌ನಲ್ಲಿ ಹಾಡಿನ ಟ್ಯೂನ್ ಜೊತೆ ಸಾಹಿತ್ಯದ ಮೇಲೂ ಒಲವು ತೋರಿದ್ದಾರೆ ನಿರ್ದೇಶಕರು. ಪಡ್ಡೆ ಹುಡುಗರಿಗೆ ಮತ್ತು ಅಪ್ಪಟ ಸಂಗೀತ ಪ್ರಿಯರಿಗೆ ಸಮವಾಗುವಂತೆ ಆಲ್ಬಮ್‌ನಲ್ಲಿ ಹರಿಕೃಷ್ಣ ಸಂಗೀತ ನೀಡಿದ್ದಾರೆ. ಬಹು ನಿರೀಕ್ಷಿತ ಪರಮಾತ್ಮ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮ ಬುಧವಾರ ( ಸೆ.14) ಬೆಂಗಳೂರಿನಲ್ಲಿ ನಡೆಯಲಿದೆ.

ಯಾವನಿಗೆ ಗೊತ್ತು... ಅವ್ಳು ಸಿಕ್ತಾಳ...( ಹಾಡಿರುವವರು: ಟಿಪ್ಪು)
ಸಾಹಿತ್ಯ: ಯೋಗರಾಜ್ ಭಟ್
ವಿಶಿಷ್ಟ ಸಾಹಿತ್ಯ ಮತ್ತು ಸಂಗೀತವಿರುವ ಹಾಡು. ಸ್ಲೋ ಬಿಟ್ ನಿಂದ ಫಾಸ್ಟ್ ಬಿಟ್‌ನಲ್ಲಿ ಸಾಗುವ ಹಾಡು, ಪಡ್ಡೆ ಹುಡುಗರಿಗಾಗಿಯೇ ಭಟ್ರು ವಿಭಿನ್ನ ರೀತಿಯಲ್ಲಿ ಸಾಹಿತ್ಯ ನೀಡಿದ್ದಾರೆ.

ಪರವಶನಾದೆನು...ಅರಿಯುವ ಮುನ್ನವೇ (ಹಾಡಿರುವವರು: ಸೋನು ನಿಗಮ್)
ಸಾಹಿತ್ಯ: ಜಯಂತ್ ಕಾಯ್ಕಿಣಿ
ಮೆಲೋಡಿಯಸ್ ಟ್ಯೂನ್. ಅಬ್ಬರದ ಸಂಗೀತ ನೀಡದೆ ಶಿಸ್ತುಬದ್ಧ ಸಂಗೀತ ನೀಡಿರುವ ಹರಿಕೃಷ್ಣ ತನ್ನ ಹಿಟ್ ಹಾಡುಗಳ ಬತ್ತಳಿಕೆಗೆ ಇನ್ನೊಂದು ಹಾಡನ್ನು ಸೇರಿಸಿಕೊಂಡಿದ್ದಾರೆ. ಹಾಡಿನ ಸಾಹಿತ್ಯದ ಬಗ್ಗೆ ಕಾಯ್ಕಿಣಿ ಸಾಹೇಬ್ರುಗೆ ನಮ್ಮ ಕಡೆಯಿಂದ ಒಂದು ಸಲಾಂ.

ಕತ್ಲಲ್ಲಿ ಕರಡಿಗೆ... ಜಾಮೂನು ತಿನಿಸೋಕೆ ಯಾವತ್ತೂ ಹೋಗಬಾರ್ದೂರಿ (ಹಾಡಿರುವವರು: ಯೋಗರಾಜ್ ಭಟ್ )
ಸಾಹಿತ್ಯ: ಯೋಗರಾಜ್ ಭಟ್
ಜಾನಪದ ಬಿಟ್‌ನಲ್ಲಿ ಸಾಗುವ ಹಾಡು. ಎರಡೆರಡು ಹುಡುಗಿಯರನ್ನು ಪ್ರೀತಿಸಿದರೆ ಜೀವನ ಎಲ್ಲಿಗೆ ಸಾಗುತ್ತದೆ ಎನ್ನುವುದನ್ನು ಭಟ್ರು ತಮ್ಮ ಎಂದಿನ ಶೈಲಿಯಲ್ಲಿ ಹೇಳಿದ್ದಾರೆ ಮತ್ತು ಹಾಡಿದ್ದಾರೆ. ಹಾಡಿನ ಟ್ಯೂನ್ ಅಷ್ಟಕಷ್ಟೇ ಆದರೂ ಸಾಹಿತ್ಯದ ಮೂಲಕ ಹಿಟ್ ಆದರೆ ಅಚ್ಚರಿ ಪಡಬೇಕಾಗಿಲ್ಲ.

ಕಾಲೇಜ್ ಗೇಟಿಗೆ..ಫೇಲ್ ಆಗಿ ಬಂದವರೋ ಚೊಂಬೆಶ್ವರ (ಹಾಡಿರುವವರು: ಹರಿಕೃಷ್ಣ)
ಸಾಹಿತ್ಯ: ಯೋಗರಾಜ್ ಭಟ್
ಮಾರ್ಕ್ ಕಾರ್ಡ್ಸ್ ನಲ್ಲಿ ಸೊನ್ನೆ ರೌಂಡ್ ಆಗಿ ಕಾಣುವುದು ಏನ್ ಮಾಡ್ಲಿ..ಏನ್ಮಾ ಮಾಡ್ಲಿ... ಚೊಂಬೆಶ್ವರ. ಪಾಸ್ ಆಗಿ ಒಂದೇಸಲ ಏನ್ ಮಾಡ್ಲಿ. ದಡ್ಡ ವಿಧ್ಯಾರ್ಥಿಯೊಬ್ಬ ತನ್ನ ಪದವಿ ಮುಗಿಸಲು ಪರೆದಾಡುವ ರೀತಿಯನ್ನು ಭಟ್ರು ಹಾಡಿನ ಮೂಲಕ ತಿಳಿಸಿದ್ದಾರೆ. ಈ ಹಾಡು ಸ್ವಲ್ಪ ದಿನದಲ್ಲೇ ಕಾಲೇಜ್ ಹುಡುಗ/ಹುಡುಗಿಯರ ಬಾಯಲ್ಲಿ ಗುನುಗುವುದರಲ್ಲಿ ಅನುಮಾನವಿಲ್ಲ.

ಹೆಸರು ಪೂರ್ತಿ, ತುಟಿಯ ಕಚ್ಚಿ ಕೊಳ್ಳಲೇ (ಹಾಡಿರುವವರು: ವಾಣಿ ಹರಿಕೃಷ್ಣ)
ಸಾಹಿತ್ಯ: ಯೋಗರಾಜ್ ಭಟ್
ಕಿವಿಗೆ ಮುದ ನೀಡುವ ಹಾಡು. ಇಂತಹ ಟ್ಯೂನ್ ಇರುವ ಹಾಡನ್ನು ಶ್ರೇಯಾ ಕಂಠಸಿರಿಯಲ್ಲಿ ಕೇಳಿರುವ ನಮಗೆ ಅವರೇ ಈ ಹಾಡನ್ನು ಹಾಡಿದ್ದರೆ ಚೆನ್ನಾಗಿರುತ್ತಿತ್ತೇನೋ ಅಂದು ಅನಿಸದೇ ಇರದು.

ತನ್ಮಯಲಾದೆನು... ತಿಳಿಯುವ ಮುನ್ನವೇ ಕಣ್ಮರೆ ಆಗಲೇ ಹೇಳು... (ಹಾಡಿರುವವರು: ಶ್ರೇಯಾ ಘೋಶಾಲ್)
ಸಾಹಿತ್ಯ: ಜಯಂತ್ ಕಾಯ್ಕಿಣಿ
ಆಲ್ಬಮ್‌ನ ಮತ್ತೊಂದು ಸೂಪರ್ ಟ್ರ್ಯಾಕ್. ಎಂದಿನಂತೆ ಶ್ರೇಯಾ ಮಸ್ತ್ ಆಗಿ ಹಾಡಿದ್ದಾರೆ. ಸದ್ಯಕ್ಕಂತೂ ಮೆಲೋಡಿಯಸ್ ಹಾಡೆಂದರೆ ಅದು ಶ್ರೇಯಾ ಹಾಡಿದರನೇ ಸೂಕ್ತ ಎನ್ನುವ ಮಟ್ಟಿಗೆ ಕನ್ನಡ ಚಿತ್ರರಂಗ ಬಂದ ಹಾಗಿದೆ. ಹಾಗೇ... ಉಚ್ಚಾರ ತಪ್ಪಿಲ್ಲದೆ ಹಾಡುವ ಶ್ರೇಯಾ ಅದನ್ನು ಉಳಿಸಿಕೊಂಡಿದ್ದಾರೆ ಕೂಡಾ.

ಲೋಕಾಯುಕ್ತಕ್ಕೆ ಪರಮಾಧಿಕಾರ ಬೇಕಾಗಿಲ್ಲ: ಪಾಟೀಲ್

ಗುಲ್ಬರ್ಗಾ, ಸೆ.14: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪರಮಾಧಿಕಾರ ಎನ್ನುವುದಕ್ಕೆ ಅರ್ಥವಿರುವುದಿಲ್ಲ. ಲೋಕಾಯುಕ್ತ ಸಂಸ್ಥೆ ಪರಮಾಧಿಕಾರ ಅಥವಾ ಸರ್ವಾಧಿಕಾರ ನೀಡುವ ಅವಶ್ಯಕತೆ ಇಲ್ಲ ಎಂದು ಲೋಕಾಯುಕ್ತ ಶಿವರಾಜ್ ಪಾಟೀಲ್ ಅವರು ಹೇಳಿದ್ದಾರೆ.

ಪರಮಾಧಿಕಾರ ನೀಡುವಂತೆ ಸರ್ಕಾರವನ್ನು ಕೇಳುವುದಿಲ್ಲ. ಆದರೆ, ಮೂರು ಮುಖ್ಯ ಅಧಿಕಾರ ನೀಡಬೇಕು. ಕರ್ನಾಟಕದ ಲೋಕಾಯುಕ್ತ ಕಾಯ್ದೆ ದೇಶದಲ್ಲೇ ಉತ್ತಮವಾದ ಕಾಯ್ದೆ ಎಂದು ಶಿವರಾಜ್ ಪಾಟೀಲ್ ಅವರು ಸಾರ್ವಜನಿಕ ಅಹವಾಲು ಸ್ವೀಕರಿಸಿದ ನಂತರ ಹೇಳಿದರು.

* ಲೋಕಾಯುಕ್ತ ದಾಳಿಗೆ ಒಳಗಾದ ಅಧಿಕಾರಿ, ನೌಕರರನ್ನು ಹುದ್ದೆಗೆ ಪುನರ್ ನೇಮಕ ಮಾಡುವಾಗ ಲೋಕಾಯುಕ್ತರ ಗಮನಕ್ಕೆ ತರಬೇಕು.
* ದಾಳಿ ನಂತರ ಅಧಿಕಾರಿಗಳು, ನೌಕರರು ಯಾರೇ ಆಗಿರಲಿ ಅವರ ವಿಚಾರಣೆಗೆ ಅನುಮತಿ ನೀಡಬೇಕು.
* ಭ್ರಷ್ಟರ ವಿರುದ್ಧ ಚಾರ್ಜ್ ಶೀಟ್ ಹಾಕಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ, ವಿಚಾರಣೆ ನಡೆಸುವ ಅಧಿಕಾರ ಕಲ್ಪಿಸಬೇಕು.

ಈ ಮೂರು ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗುವುದು. ಬಾಕಿ ಉಳಿದಿರುವ ಪ್ರಕರಣಗಳನ್ನು ಇತ್ಯರ್ಥ್ಯಗೊಳಿಸಲು ಕ್ರಮ ಕೈಗೊಳ್ಳಲಾಗುವುದು.

ಉಪ ಲೋಕಾಯುಕ್ತರ ಅಧೀನದಲ್ಲಿ 12 ಸಾವಿರ ಪ್ರಕರಣಗಳಿವೆ. ಲೋಕಾಯುಕ್ತರ ಅಧೀನದಲ್ಲಿ 3000 ಪ್ರಕರಣಗಳು ಬಾಕಿ ಉಳಿದಿವೆ.

ಮಾಂಸಪ್ರಿಯರಷ್ಟೇ ಅಲ್ಲ, ಕುಟ್ಟಿಗಳು ಸಕತ್ ಎಂಡ್ಕುಡುಕರು

ತಿರುವನಂತಪುರ, ಸೆ.14 : ಈ ಬಾರಿಯ ಓಣಂ ಆರಂಭದಲ್ಲಿ ಒಂದು ದಿನ ಮಾಂಸ ತಿನ್ನುವುದನ್ನು ಕಷ್ಟಪಟ್ಟು ತಡೆದುಕೊಂಡರೂ ದೇಶದ ಟಾಪ್ ಮಾಂಸಪ್ರಿಯ ಜನ ಎನಿಸಿದ ಕುಟ್ಟಿಗಳು ಈಗ ಮದ್ಯ ಮಾರಾಟದಲ್ಲಿ ದಾಖಲೆ ಸೃಷ್ಟಿಸಿದ್ದಾರೆ.

ಸರ್ಕಾರಿ ಸ್ವಾಮ್ಯದ ಬಿವರೇಜಸ್ ನಿಗಮ(KSBC)ದ ಮಾಹಿತಿ ಪ್ರಕಾರ, ಉತ್ರಾಡಂ ದಿನ ತನಕದ 8 ದಿನಗಳ ಅವಧಿಯಲ್ಲಿ ರಾಜ್ಯದಲ್ಲಿ 236 ಕೋಟಿ ರೂಪಾಯಿನ ಮದ್ಯ ಮಾರಾಟವಾಗಿದೆ. ಕಳೆದ ಬಾರಿಗಿಂತ 48 ಕೋಟಿ ರೂಪಾಯಿ ಮದ್ಯ ಮಾರಾಟ ಅಧಿಕವಾಗಿದೆ.

ಉತ್ರಾಡಂ ದಿನ ಮಾತ್ರ 37 ಕೋಟಿ ರೂಪಾಯಿನ ಮದ್ಯ ಮಾರಾಟವಾಗಿದೆ. ಕಳೆದ ವರ್ಷ 30 ಕೋಟಿ ರೂಪಾಯಿನ ಮದ್ಯ ಮಾರಾಟವಾಗಿತ್ತು. ಕಳೆದ ವರ್ಷ 8 ದಿನಗಳ ಅವಧಿಯಲ್ಲಿ 199 ಕೋಟಿ ರೂಪಾಯಿನ ಮದ್ಯ ಮಾರಾಟವಾದರೆ ಈ ವರ್ಷ 236 ಕೋಟಿ ರೂಪಾಯಿನ ಮದ್ಯ ಮಾರಾಟವಾಗಿದೆ ಎಂದು ಅಂಕಿ ಅಂಶ ತಿಳಿಸುತ್ತಿದೆ.

ಕಳೆದ ವರ್ಷಕ್ಕಿಂತ 24.93 ಶೇಕಡಾ ಅತ್ಯಧಿಕವಾಗಿದೆ. ಕರುನಾಗಪಳ್ಳಿ ಮದ್ಯ ಮಾರಾಟದಲ್ಲಿ ಪ್ರಥಮ ಹಾಗೂ ಚಾಲಕ್ಕುಡಿ ಎರಡನೇ ಸ್ಥಾನದಲ್ಲಿದೆ. ಇಡುಕ್ಕಿ ಚಿನ್ನಕಲ ಕೊನೆಯ ಸ್ಥಾನದಲ್ಲಿದೆ. ಕೇರಳದಲ್ಲಿ ದಿನೇ ದಿನೇ
ಕುಡುಕರ ಸಂಖ್ಯೆ ಹೆಚ್ಚುತ್ತಿದೆ ಎಂಬುದು ಈ ಅಂಕಿ ಅಂಶ ತಿಳಿಸುತ್ತಿದೆ.

ಅಂಕಿಅಂಶದಂತೆ 2005-06ನೇ ಸಾಲಿನಲ್ಲಿ 2,635.81 ಕೋಟಿ ರೂಪಾಯಿನ ವ್ಯವಹಾರ ಬಿವರೇಜಸ್ ನಿಗಮದಲ್ಲಿ ನಡೆದಿದೆ. 2010-11ರ ಅವಧಿಯಲ್ಲಿ 5,239.32 ಕೋಟಿ ರೂಪಾಯಿನ ವಹಿವಾಟು
ನಡೆದಿದೆ. ಕಳೆದ ಐದು ವರ್ಷದ ಅವಧಿಯಲ್ಲಿ ಮದ್ಯದ ವಹಿವಾಟು ಮೂರುಪಟ್ಟು ಜಾಸ್ತಿಯಾಗಿದೆ ಎಂದು ಅಂಕಿಅಂಶ ತಿಳಿಸುತ್ತಿದೆ.

ಕುಡುಕರ ನಾಡಾಗುತ್ತಿರುವ ಕೇರಳಗೆ ಒಮ್ಮೆ ಯಾಕೆ ಭೇಟಿ ಕೊಟ್ಟು ಅಲ್ಲಿನ ಮದ್ಯಪ್ರಿಯ ಜನರ ರಹಸ್ಯ ತಿಳಿಯಬಾರದು ಎಂದು ನಮ್ಮ ಅಬಕಾರಿ ಸಚಿವ ರೇಣುಕಾಚಾರ್ಯ ಯೋಚಿಸಿದ್ದಾರೆ ಎಂಬ ಸುದ್ದಿಯಿದೆ.

ತಾಯಿಗೆ 'ಎಚ್ಚರ'ವಾದಾಗ ಮಗಳು ಗರ್ಭಿಣಿಯಾಗಿದ್ದಳು!


ಮುಂಬೈ, ಸೆ. 14 : ನೆರೆಹೊರೆಯ ಯುವಕ ಪ್ರತಿದಿನ ಕೊಡುತ್ತಿದ್ದ ದಾರೂವನ್ನು ಪ್ರತಿರಾತ್ರಿ ಸೇವಿಸಿ ಲೋಕವನ್ನೇ ಮೈಮರೆಯುತ್ತಿದ್ದ ಆ ಮಹಾತಾಯಿಗೆ ನಾಲ್ಕು ತಿಂಗಳಿಂದ ಮನೆಯಲ್ಲಿ ಏನು ನಡೆಯುತ್ತಿದೆ ಎಂಬುದೇ ತಿಳಿದಿರಲಿಲ್ಲ. ಆಕೆ 'ಎಚ್ಚರ'ವಾದಾಗ ಕಾಲ ಮಿಂಚಿ ಹೋಗಿತ್ತು. ಹದಿನಾರು ವರ್ಷದ ಮಗಳು ಗರ್ಭಿಣಿಯಾಗಿದ್ದಳು.

ಅಮಾಯಕರನ್ನು ದಾರಿತಪ್ಪಿಸಲು, ಅವಕಾಶದ ದುರ್ಲಾಭ ಪಡೆಯಲು ದುರುಳರು ಎಂತೆಂಥ ತಂತ್ರಗಳನ್ನು ಹೂಡುತ್ತಾರೆ ಎಂಬುದಕ್ಕೆ ಈ ಪ್ರಕರಣವೇ ತಾಜಾ ಉದಾಹರಣೆ. ಬೆಳೆದ ಹೆಣ್ಣುಮಗಳು ಮನೆಯಲ್ಲಿರುವಾಗ ಪಾಲಕರು ಎಚ್ಚರಿಕೆಯಿಂದಿರಬೇಕು ಎಂಬ ಪಾಠವನ್ನೂ ಈ ಪ್ರಕರಣ ಕಲಿಸಿದೆ.

ಆಗಿದ್ದಿಷ್ಟು : ಊಟ ವಿತರಿಸುವ ಕಂಪನಿಯ ಮ್ಯಾನೇಜರ್ ಆಗಿರುವ ರಾಮ್ ರಾಜೇಶ್ ವರ್ಮಾ ಎಂಬಾತ ಪಕ್ಕದ ಮನೆಯ ಹೆಂಗಸಿಗೆ ಪ್ರತಿರಾತ್ರಿ ಮದ್ಯ ತಂದುಕೊಡುತ್ತಿದ್ದ. ಆಕೆ ಅದನ್ನು ಹೀರಿ ಆನಂದಸಾಗರದಲ್ಲಿ ಮೈಮರೆಯುತ್ತಿದ್ದಂತೆ ತನ್ನ ರಾತ್ರಿ ಕಾರ್ಯಾಚರಣೆ ಆರಂಭಿಸುತ್ತಿದ್ದ.

ತಾಯಿ ನಿದ್ರಾಪರವಶಳಾಗುತ್ತಿದ್ದಂತೆ ಆಕೆಯ ಹದಿನಾರು ವರುಷದ ಹದಿಹರೆಯದ ಮಗಳ ಅತ್ಯಾಚಾರ ಮಾಡುತ್ತಿದ್ದ. ಇದು ನಾಲ್ಕು ತಿಂಗಳುಗಳ ಕಾಲ ಸಾಗಿದೆ. ಹದಿನಾರರ ಬಾಲಕಿಯನ್ನು ಬೆದರಿಸಿ ಬಾಯಿಮುಚ್ಚಿಸಿದ್ದಾನೆ. ಆಕೆ ಬಾಯಿ ಮುಚ್ಚಿದರೂ ಹೊಟ್ಟೆ ಕೇಳಬೇಕಲ್ಲ. ಮೂರು ತಿಂಗಳು ದಾಟುತ್ತಿದ್ದಂತೆ ಉಬ್ಬುತ್ತಾ ಸಾಗಿದೆ.

ತಾಯಿಗೆ ತನ್ನ ತಪ್ಪಿನ ಅರಿವಾಗಿ ಮಗಳನ್ನು ಮದುವೆಯಾಗುವಂತೆ ವರ್ಮಾನಿಗೆ ಧಮ್ಕಿ ಹಾಕಿದ್ದಾಳೆ. ಆತ ಓಕೆ ಓಕೆ ಅನ್ನುತ್ತಲೇ ದಿನಗಳನ್ನು ದೂಡಿದ್ದಾನೆ. ಒಂದು ದಿನ ಮೊಬೈಲಿಗೂ ಸಿಗದೆ ಪರಾರಿಯಾಗಿದ್ದಾನೆ. ಆತನನ್ನು ನಂಬಿ ಕೆಟ್ಟ ತಾಯಿ ನಂತರ ಪೊಲೀಸರಿಗೆ ದೂರು ನೀಡಿದ್ದಾಳೆ. ಈಗ ಆತ ಬೋರಿವ್ಲಿ ಪೊಲೀಸರ ಅತಿಥಿಯಾಗಿದ್ದಾನೆ.

ನೈಂಟಿ ನೋಡಿ ಥಿಯೇಟರ್‌ನಲ್ಲೇ ಪಲ್ಟಿ ಹೊಡದ ಪ್ರೇಕ್ಷಕ!

ಒಟ್ಟಿನಲ್ಲಿ 'ನೈಂಟಿ' ಚಿತ್ರ ಪ್ರೇಕ್ಷಕರಿಗೆ ಸಖತ್ ಕಿಕ್ ಕೊಟ್ಟಿದೆ. ಗಾಂಧಿನಗರ 'ನೈಂಟಿ' ಚಿತ್ರದ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ. ಈಗ ಅವರೂ ಬಾರ್‌ನಲ್ಲಿ ಕೂತು ನೈಂಟಿ ಚಿತ್ರದ ಬಗ್ಗೆ ಗಂಭೀರವಾಗಿ ಯೋಚಿಸುವಂತೆ ಮಾಡಿದೆ. ಚಿತ್ರಕ್ಕೆ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸಾಧು ಕೋಕಿಲ ಅವರ ಕಾಮಿಡಿ ಕಿಕ್‌ಗೆ ಪ್ರೇಕ್ಷಕರು ಚಿತ್ರಮಂದಿರದಲ್ಲೇ ತೂರಾಡುವಂತಾಗಿದೆ. ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದೆ. ಚಿತ್ರಕ್ಕೆ ಫ್ಯಾಮಿಲಿ ಆಡಿಯನ್ಸ್ ಕೂಡ ಬರುತ್ತಿದ್ದಾರೆ. ಚಿತ್ರದ ಸಬ್ಜೆಕ್ಟ್ ಸಖತ್ ಇಷ್ಟವಾಗಿದೆ. ನಮಗೂ ಅಷ್ಟೇ ನೈಂಟಿ ಚಾ ಕುಡಿದಷ್ಟೇ ಸಂತಸವಾಗಿದೆ ಎಂದಿದ್ದಾರೆ ಸಾಧು ಕೋಕಿಲ.

ಪ್ರೇಕ್ಷಕರಿಗೆ ಚಿತ್ರದ ಮೆಸೇಜ್ ಇಷ್ಟವಾಗಿದೆ. ಕಾಮಿಡಿ ಸೀನ್‌ಗಳಂತೂ ಅವರನ್ನು ನಗುವಿನ ಅಲೆಯಲ್ಲಿ ತೇಲಿಸಿವೆ. ನಗಿಸುವುದರ ಜೊತೆಗೆ ಕುಡಿತ ದೈಹಿಕ ಮತ್ತು ಮಾನಸಿಕವಾಗಿ ಎಷ್ಟು ಮಾರಕ ಎಂಬ ಸಂದೇಹವನ್ನು ನೀಡಿದ್ದೇವೆ ಎನ್ನುವ ಸಾಧು ಅವರು ಲಕ್ಕಿ ಶಂಕರ್ ನಿರ್ದೇಶನಕ್ಕೆ ತಲೆತೂಗಿದ್ದಾರೆ.

ಉತ್ತಮ ಕತೆ, ಜೊತೆಗೆ ಅದರ ಪ್ರೆಸೆಂಟೇಷನ್ ಚೆನ್ನಾಗಿದ್ದರೆ ಪ್ರೇಕ್ಷಕರು ಖಂಡಿತ ಚಿತ್ರಮಂದಿರಕ್ಕೆ ಬರುತ್ತಾರೆ ಎಂಬುದನ್ನು ನೈಂಟಿ ಕುಡಿ ಪಲ್ಟಿ ಹೊಡಿ ಚಿತ್ರ ನಿರೂಪಿಸಿದೆ. ಚಿತ್ರಕ್ಕೆ ನೈಂಟಿ ಕಿಕ್ ನೀಡಿದವರು ತಬಲಾ ನಾಣಿ, ರಂಗಾಯಣ ರಘು, ರಾಜು ತಾಳಿಕೋಟೆ. (ದಟ್ಸ್‌ಕನ್ನಡ ಸಿನಿವಾರ್ತೆ)