ಈ ಕೆಳಗಿನ ಕೊಂಡಿಯನ್ನು ಅನುಸರಿಸಿ
http://www.atimysore.gov.in/
ತಲಕಾಡಿನ ಗಂಗರು
ತಲಕಾಡಿನ ಗಂಗರು ಕರ್ನಾಟಕವನ್ನು ಸುಮಾರು 600 ವರ್ಷಗಳ ಧೀರ್ಘಕಾಲ (ಕ್ರಿ.ಶ. 350-999) ಆಳಿದರು. ಆರಂಭದಲ್ಲಿ ಸ್ವತಂತ್ರರಾಗಿಯೂ ತದನಂತರ ಬಾದಾಮಿ ಚಾಲುಕ್ಯ ಮತ್ತು ರಾಷ್ಟ್ರಕೂಟರ ಸಾಮಂತರಾಗಿಯೂ ಆಳಿದರು. ಅವರ ಅನುಕೂಲಕ್ಕೆ ತಕ್ಕಂತೆ ತಮ್ಮ ರಾಜಧಾನಿಯನನ್ನು ಬದಲಿಸುತ್ತಿದ್ದರು. ಕೋಲಾರ (ಕುವಲಾಲ) ಅವರ ಪ್ರಥಮ ರಾಜಧಾನಿ. ಕಾವೇರಿ ನದಿತೀರದ ಮೈಸೂರು ಜಿಲ್ಲೆಯ ತಲಕಾಡು (ತವಲನಪುರ) ಅವರ ಎರಡನೇ ರಾಜಧಾನಿ. ಚನ್ನಪಟ್ಟಣ ಬಳಿಯ ಮಾಕುಂದ, ಬೆಂಗಳೂರು ಜಿಲ್ಲೆಯ ನೆಲಮಂಗಲ ಬಳಿಯ ಮಾನ್ಯಪುರ (ಈಗಿನ ಮಣ್ಣೆ) ಅವರ ಇತರ ರಾಜಧಾನಿಗಳು. ಆದರೂ ತಲಕಾಡೇ ಅವರ ಧೀರ್ಘ ಹಾಗೂ ಮುಖ್ಯ ಆಡಳಿತ ಕೇಂದ್ರವಾಗಿದ್ದರಿಂದ ಅವರನ್ನು ತಲಕಾಡಿನ ಗಂಗರು ಎಂದು ಕರೆಯುತ್ತಾರೆ. ಮದಗಜ ಅವರ ರಾಜಮುದ್ರೆ ಅಥವಾ ಲಾಂಛನ.
ದಕ್ಷಿಣ ಕರ್ನಾಟಕವನ್ನು ಪಲ್ಲವರು ಮತ್ತು ಚೋಳರ ಆಕ್ರಮಣಗಳಿಂದ ತಡೆಹಿಡಿದಿದ್ದವರು ಗಂಗರು. ಈ ವಂಶದ ಪ್ರಖ್ಯಾತ ದೊರೆ ದುರ್ವೀನಿತ (ಕ್ರಿ.ಶ. 555 -605) ಸ್ವತಃ ವಿದ್ವಾಂಸನಾಗಿದ್ದು, ಕನ್ನಡ ಮತ್ತು ಸಂಸ್ಕೃತಗಳೆರಡನ್ನೂ ಗ್ರಂಥ ರಚಿಸಿದ್ದಾನೆ. ಈ ವಂಶದಲ್ಲಿ ಪ್ರಯತ್ನಿಸಿದ ರಾಷ್ಟ್ರಕೂಟರನ್ನು ವಿರೋಧಿಸಿ ಶ್ರೀಪುರುಷನು ಪಲ್ಲವ ಇಮ್ಮಡಿ ಪರಮೇಶ್ವರವರ್ಮನನ್ನು ವಿಶಲದೆಯಲ್ಲಿ 731ರಲ್ಲಿ “ಪೆರ್ಮಾಡಿ” ಎಂಬ ಬಿರುದನ್ನು ಪಡೆದುಕೊಂಡನು. ಇವನು ಆನೆಗಳಿಗೆ ಸಂಭಂಧಿಸಿದಂತೆ “ಗಜಶಾಸ್ತ್ರ” ಎಂಬ ಸಂಸ್ಕೃತ ಗ್ರಂಥವನ್ನು ಬರೆದಿದ್ದಾನೆ.
ಗಂಗರು ತಮ್ಮ ರಾಜ್ಯದಲ್ಲಿ ಅನೇಕ ಕೆರೆಗಳನ್ನು ಕಟ್ಟಿಸಿದರು. ಅವರ ರಾಜ್ಯದ ಕೇಂದ್ರವಾಗಿದ್ದ ಕೋಲಾರ ಮತ್ತು ಮೈಸೂರು ಅವರ ದೇವಾಲಯಗಳನ್ನು ಇಂದಿಗೂ ಇವೆ. ಅವರ ಕಾಲದ ಸುಂದರ ದೇವಾಲಯಗಳನ್ನು ಇಂದಿಗೂ ಕೋಲಾರ, ತಲಕಾಡು, ಬೇಗೂರು, ನಾಗಪುರ ಮತ್ತು ನರಸಮಂಗಲಗಳಲ್ಲಿ ಕಾಣಬಹುದು. ಶ್ರವಣಬೆಳಗೊಳದಲ್ಲಿ 58ಅಡಿ ಎತ್ತರ ಗೊಮ್ಮಟನ ಏಕಶಿಲಾ ಮೂರ್ತಿಯನ್ನು ಕ್ರಿ.ಶ. 982ರಲ್ಲಿ ಚಾವುಂಡರಾಯನು ನಿರ್ಮಿಸಿದನು. ಕ್ರಿ.ಶ. 999ರಲ್ಲಿ ರಾಜ್ಯವು ಚೋಳರಿಂದ ವಶಪಡಿಸಿಕೊಳ್ಳಲ್ಪಟ್ಟು ಗಂಗರ ಆಳ್ವಿಕೆ ಕೊನೆಗೊಂಡಿತು.
ಮೂಲ:
ಗಂಗರ ರಾಜಧಾನಿ ತಲಕಾಡು ದಕ್ಷಿಣ ಗಂಗೆ “ಕಾವೇರಿ” ನದಿಯ ದಡದಲ್ಲಿದ್ದರಿಂದ ಅವರ ವಂಶಕ್ಕೆ ಗಂಗ ಹೆಸರಿಟ್ಟಿರಬಹುದು. ಆರಂಭ ಗಂಗರಸರು, ಶೈವರು, ಶಿವನ ಪತ್ನಿ ಗಂಗೆಯ ಆರಾಧಕರಾಗಿ ಈ ವಂಶಕ್ಕೆ ಅದೇ ಹೆಸರಿಟ್ಟಿರಬಹುದೆಂದು ಸಹ ಶಂಕಿಸಲಾಗಿದೆ.
ಸಾಯಿ ಅಮೃತವಾಣಿ: ಬೆಂಗಳೂರಿನ ಸಾಯಿಮಂದಿರ - ಶ್ರೀ ದ್ವಾರಕಾಮಾಯಿ ಸೇವಾ ಟ್ರಸ್ಟ...
ಸಾಯಿ ಅಮೃತವಾಣಿ: ಬೆಂಗಳೂರಿನ ಸಾಯಿಮಂದಿರ - ಶ್ರೀ ದ್ವಾರಕಾಮಾಯಿ ಸೇವಾ ಟ್ರಸ್ಟ...: "ಬೆಂಗಳೂರಿನ ಸಾಯಿಮಂದಿರ - ಶ್ರೀ ದ್ವಾರಕಾಮಾಯಿ ಸೇವಾ ಟ್ರಸ್ಟ್, ರಾಜಾಜಿನಗರ, ಬೆಂಗಳೂರು - ಕೃಪೆ - ಶ್ರೀ.ರಾಜೇಶ್ ಶ್ರೀ ದ್ವಾರಕಾಮಾಯಿ ಸೇವಾ ಟ್ರಸ್ಟ್, ರಾಜಾಜಿನಗರ, ಬೆಂ..."
" ಸ್ಪರ್ಧಾರ್ಥಿ ": SDA & FDA Study Material (ಎಸ್.ಡಿ.ಎ. & ಎಫ್.ಡಿ.ಎ. ಪರ...
SDA & FDA Study Material (ಎಸ್.ಡಿ.ಎ. & ಎಫ್.ಡಿ.ಎ. ಪರ...: ":: SDA & FDA :: 1. ಮೊದಲನೆಯದಾಗಿ ಹುದ್ದೆಯ ಸ್ವರೂಪದ ಬಗ್ಗೆ ತಿಳಿದುಕೊಳ್ಳೋಣ. SDC / SDA / JUNIOR ASSISTANT ( Second Division Clerk/Assistant ) ..."
ರಹಮತ್ ತರೀಕೆರೆ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಾಗಿ ಅಭಿನಂದನೆಗಳು
ರಹಮತ್ ತರೀಕೆರೆ : ಕತ್ತಿಯಂಚಿನ ದಾರಿ (೨೦೦೬)
ಈ ಪುಸ್ತಕದ ಶೀರ್ಷಿಕೆಯು, ನಮ್ಮ ಲೇಖಕರೊಬ್ಬರು ಸಾಹಿತ್ಯ ಸಮ್ಮೇಳನದಲ್ಲಿ ಮಾಡಿದ ಭಾಷಣಕ್ಕೆ ಮಾಡಿದ ಪ್ರತಿಕ್ರಿಯೆಯಿಂದ ಬಂದಿದ್ದು; ಇದು ನಮ್ಮ ಸುತ್ತ ಏರ್ಪಟ್ಟಿರುವ ಪರಿಸರಕ್ಕೂ ಅದನ್ನು ಮುಖಾಮುಖಿ ಮಾಡುತ್ತ ಹುಟ್ಟುತ್ತಿರುವ ನಮ್ಮ ಬರೆಹಕ್ಕೂ ನಮಗೂ ಮಧ್ಯೆ ಹುಟ್ಟಿರುವ ಬಿಕ್ಕಟ್ಟುಗಳಿಗೆ ರೂಪಕವಾಗಬಲ್ಲದು ಎಂದು ಅನಿಸಿತು. ಸಾಹಿತ್ಯ ಕೃತಿಯ ಹೊರಗಿನ ಆಕೃತಿ ಮತ್ತು ಒಳಗಿನ ಇರುವ ಆಶಯ – ಇವುಗಳ ನಡುವಣ ಸಂಬಂಧದಲ್ಲಿ ವೈರುಧ್ಯಗಳಿರುತ್ತವೆ. ಈ ವೈರುಧ್ಯಗಳ ನಡುವಣ ಸೆಳೆದಾಟಗಳ ಶೋಧ ಮಾಡುವುದು ಸಾಹಿತ್ಯ ವಿಮರ್ಶೆಗೆ ಯಾವತ್ತೂ ಸವಾಲು. ಇಲ್ಲಿನ ಲೇಖನಗಳಲ್ಲಿ ಇಂತಹದೊಂದು ಶೋಧದ ಸಣ್ಣ ಯತ್ನವಿದೆ. ಸಾಹಿತ್ಯ ವಿಮರ್ಶೆಯಲ್ಲಿ ನಿರ್ದಿಷ್ಟ ವಾದವನ್ನು ಇಟ್ಟುಕೊಂಡು ಅದಕ್ಕೆ ಬೇಕಾದ ಸಾಕ್ಷ್ಯಗಳನ್ನು ಗುಡ್ಡೆ ಹಾಕಿಕೊಂಡು ಪ್ರತಿಪಾದನೆ ಮಾಡುವುದು ಸುಲಭ. ಆದರೆ ಕೃತಿಗಳು ಬಿಟ್ಟುಕೊಡುವ ಹಲವು ವಿಭಿನ್ನ ಕೆಲವೊಮ್ಮೆ ಪರಸ್ಪರ ವಿರುದ್ಧ ದನಿಗಳನ್ನು ಹಿಡಿದು, ಒಂದಕ್ಕೆ ತೆತ್ತುಕೊಳ್ಳದೆ, ಮತ್ತೊಂದನ್ನು ಕಡೆಗಣಿಸದೆ ಅರ್ಥಮಾಡಿಕೊಳ್ಳುವುದು ಕಷ್ಟದ ಕೆಲಸ; ಈ ಕಷ್ಟ ವಿಮರ್ಶೆಯದು ಮಾತ್ರವಲ್ಲ, ನನ್ನನ್ನೂ ಒಳಗೊಂಡಂತೆ ನನ್ನ ತಲೆಮಾರಿನ ಅನೇಕರ ನಡೆ ಮತ್ತು ನುಡಿಗಳ ನಡುವೆ ಕಾಣಿಸಿರುವ ಕಷ್ಟ ಕೂಡ ಇದೊಂದು ಬಿಕ್ಕಟ್ಟಿನ ಕಾಲ; ಚರಿತ್ರೆಯಲ್ಲಿ ಬಿಕ್ಕಟ್ಟಿಲ್ಲದ ಕಾಲವಾದರೂ ಯಾವುದು? ಆದರೆ ನಮ್ಮ ನಾಡಿನ ಚರಿತ್ರೆಯಲ್ಲಿ ಯಾವತ್ತೂ ಇಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿರಲಿಲ್ಲ. ಜಗತ್ತಿನ ದೊಡ್ಡ ಮಿಲಿಟರಿ ಶಕ್ತಿಗಳು, ಕೋಮುವಾದ, ಪ್ರಭುತ್ವಗಳು ಹುಟ್ಟಿಸಿರುವ ಕ್ರೌರ್ಯ, ಅದಕ್ಕೆ ಎದುರಾಗಿ ಹುಟ್ಟಿಕೊಂಡ ಜನರ ಪ್ರತಿರೋಧಗಳು, ಮಧ್ಯಮವರ್ಗದ ಅವಕಾಶವಾದಿ ವರ್ತನೆ, ಜನರಿಗಾಗಿ ಕೆಲಸ ಮಾಡುವ ಚಳುವಳಿಗಾರರ ದಮನ – ಇವೆಲ್ಲವೂ ನಮ್ಮ ಓದು ಮತ್ತು ಬರೆಹದ ಮೇಲೆ ಹೇಗೋ ಆವರಿಸಿಕೊಂಡಿವೆ. ಇವನ್ನು ಮರೆತು ಬರೆಯುವಂತಿಲ್ಲ; ಮರೆಯದೆ ಬರೆದರೆ, ಬರೆದ ಬರೆಹವು ಆತ್ಮವಿಶ್ವಾಸ ಕೊಡುವುದಕ್ಕೆ ಬದಲಾಗಿ ಪ್ರಶ್ನೆಯಾಗಿ ಎದುರು ನಿಂತು ಕಾಡುತ್ತದೆ. ಇದನ್ನೆ ಕತ್ತಿಯಂಚಿನ ಹಾದಿಯಲ್ಲಿ ನಡೆವ ಕಷ್ಟ ಎಂದು ನಾನು ಭಾವಿಸಿದ್ದೇನೆ. ಕತ್ತಿಯಲುಗಿನ ಮೇಲೆ ನಡೆದರೆ ಕಾಲು ಕತ್ತರಿಸಿ ಹೋಗುತ್ತದೆ; ಬಾಗಿ ಎತ್ತಿಕೊಂಡರೆ ಕೈಯ ಆಯುಧವಾಗುತ್ತದೆ; ಸ್ವವಿಮರ್ಶೆಯನ್ನಾಗಿ ಮಾಡಿ ಚುಚ್ಚಿಕೊಂಡರೆ, ಒಡಲಲ್ಲಿ ಮುರಿದು ನೋವುಂಟು ಮಾಡುತ್ತದೆ……
- ರಹಮತ್ ತರೀಕೆರೆ
(ಮುನ್ನುಡಿಯಿಂದ)
- ರಹಮತ್ ತರೀಕೆರೆ
(ಮುನ್ನುಡಿಯಿಂದ)
ನಾಚಿಕೆಯಿಂದ ತಲೆತಗ್ಗಿಸುವ ದಿನ
ಡಿಸೆಂಬರ‍್ 6, 1992.
ತಮ್ಮ ಜಾತ್ಯಾತೀತ ಸಂವಿಧಾನದ ಬಗ್ಗೆ ಹೆಮ್ಮೆ ಪಡುವಂತಹ ಭಾರತೀಯರೆಲ್ಲರೂ ನಾಚಿಕೆಯಿಂದ ತಲೆತಗ್ಗಿಸುವ ದಿನ. ಈ ದಿನದಂದು ಭಾರತೀಯರ ಹೆಮ್ಮೆಯ ಜಾತ್ಯಾತೀತ, ಪ್ರಜಾಪ್ರಭುತ್ವ ಹಾಗೂ ಸಂವಿಧಾನ ನಿಷ್ಟೆಯ ಮಹಾ ಗೋಪುರಗಳು ನೆಲಕಚ್ಚಿದ ದಿನ.
ರೇಡಿಯೋ ಅಂಗಡಿಯಿಂದ ಆಕಸ್ಮಿತವಾಗಿ ವ್ಯಂಗ್ಯಲೋಕಕ್ಕೆ ಜಿಗಿದ ಪಿ. ಮಹಮ್ಮದ್ ಇಂದು ನಮ್ಮೊಂದಿಗಿನ ಅತ್ಯುತ್ತಮ ವ್ಯಂಗ್ಯಚಿತ್ರಕಾರರಲ್ಲೊಬ್ಬರು. ದಕ್ಷಿಣ ಕನ್ನಡ ಜಿಲ್ಲೆಯ ಪಡುಬಿದ್ರಿಯ ಮಹಮ್ಮದ್ ಇಂದು ಪರಿಚಿತ ಹೆಸರು. `ಸಂಯುಕ್ತ ಕರ್ನಾಟಕ’, `ಮುಂಗಾರು’ ಪತ್ರಿಕೆಗಳಲ್ಲಿ ವ್ಯಂಗ್ಯಚಿತ್ರಕಾರರಾಗಿ ದುಡಿದಿರುವ ಮಹಮ್ಮದ್ ಖ್ಯಾತ ಆಂಗ್ಲ ದೈನಿಕ `ಹಿಂದುಸ್ತಾನ್ ಟೈಮ್ಸ್’ನ ಪ್ರತಿಷ್ಟಿತ ವ್ಯಂಗ್ಯಚಿತ್ರ ಪ್ರಶಸ್ತಿಯನ್ನು ಕರ್ನಾಟಕಕ್ಕೆ 3 ಬಾರಿ ತಂದುಕೊಟ್ಟ ಹೆಮ್ಮೆ ಇವರದ್ದು. ಹೆಸರಾಂತ ವ್ಯಂಗ್ಯಚಿತ್ರಕಾರ ಆರ‍್.ಕೆ.ಲಕ್ಷ್ಮಣರ ರೇಖೆಗಳಿಗೆ ಮಾರುಹೋದ ಇವರು ಸದಾ ಸಮಾಜದ ನೋವಿಗೆ ಸ್ಪಂದಿಸಿದರು. ಕೇಂದ್ರ ಸರ್ಕಾರದ ಆರ್ಥಿಕ ನೀತಿಯಿಂದ ಹಿಡಿದು ಅಯೊದ್ಯೆಯವರೆಗೆ ಇವರ ಬತ್ತಳಿಕೆಯಲ್ಲಿ ಹಲವು ವ್ಯಂಗ್ಯಬಾಣಗಳು.
ಕೋಮುವಾದ ತನ್ನ ಕರಾಳ ಹಸ್ತಗಳನ್ನು ಎಲ್ಲೆಡೆ ಚಾಚುತ್ತಿರುವುದನ್ನು ಕಂಡ ಖ್ಯಾತ ವ್ಯಂಗ್ಯಚಿತ್ರಕಾರ ಅಬಿದ್ ಸುರ್ತಿ `ನನ್ನ ಜೋಳಿಗೆಯಲ್ಲಿ ಇನ್ನು ವ್ಯಂಗ್ಯದ ಬಾಣಗಳಿಲ್ಲ’ ಎಂದು ಕಣ್ಣೀರಿಟ್ಟರು. ಅಂತೆಯೇ ಪಿ. ಮಹಮ್ಮದ್ ವ್ಯಂಗ್ಯರೇಖೆಗಳಲ್ಲಿ ಕಂಡ ವಿಷಾದದ ಚಿತ್ರಗಳು ಈ ಪುಸ್ತಕದಲ್ಲಿವೆ.
-ಪುಸ್ತಕದ ಬೆನ್ನುಡಿಯಿಂದ
ಶೀರ್ಷಿಕೆ: ಅಯೊಧ್ಯಾ ಕಣೀರ ಕಾಂಡ ಕಲಾವಿದರು:ಪಿ. ಮಹಮ್ಮದ್ ಪ್ರಕಾಶಕರು:ಜನಸ್ನೇಹ ಪ್ರಕಾಶನ ಪುಟ:28 ಮೊದಲ ಮುದ್ರಣ:1993 ಬೆಲೆ:ರೂ.3/-

ಹೊಸ ಮಡಿಯ ಮೇಲೆ ಚದುರಂಗ … -ಡಾ.ಅರುಣ್ ಜೋಳದ ಕೂಡ್ಲಿಗಿ
ಇತ್ತೀಚೆಗೆ ಕನ್ನಡದಲ್ಲಿ ಜಾನಪದ ಅಧ್ಯಯನ ಕುರಿತು ಬಂದ ಗಂಭೀರ ಪುಸ್ತಕಗಳಲ್ಲಿ ಕನ್ನಡದ ವಿಮರ್ಶಕರಾದ ಡಾ. ಸಿ.ಎನ್. ರಾಮಚಂದ್ರನ್ ಅವರ ಕೃತಿ ‘ಹೊಸಮಡಿಯ ಮೇಲೆ ಚದುರಂಗ’ . ಇದು ಜಗತ್ತಿನ ಇಪ್ಪತ್ತೈದು ಜನಪದ ಮಹಾಕಾವ್ಯಗಳನ್ನು ಅಧ್ಯಯನ ಮಾಡಿದ ಕೃತಿ.
ಈ ಕೃತಿಯಲ್ಲಿ ಕನ್ನಡದ ಮಲೆ ಮದೇಶ್ವರ, ಮಂಟೇಸ್ವಾಮಿ, ಹಾಲುಮತ ಮಹಾಕಾವ್ಯ, ಜುಂಜಪ್ಪ, ಕುಮಾರರಾಮ, ಕೃಷ್ಣಗೊಲ್ಲರ ಕಾವ್ಯ, ತುಳು ಭಾಷೆಯ ಸಿರಿ, ತೆಲುಗಿನ ಪಲ್ನಾಟಿ ವೀರುಲ ಕಥಾ, ತಮಿಳಿನ ಅಣ್ಣನ್ ಮಾರ್ ಕತೈ, ರಾಜಾಸ್ಥಾನಿಯಪಾಬೂಜಿ, ಅವಧಿ ಭಾಷೆಯ ಚನೈನಿ, ಟಿಬೆಟನ್ ಮಂಗೋಲಿಯನ್ ನ ಗೆಸೆರ್ ರಾಜ, ಅರಾಬಿಕ್ ನ ಅಂತರ್,ಕಿರ್ಘೀಜ್ ನ ಮನಸ್, ಫಿನಿಷ್ ನ ಕಲೆವಲ, ಮಾಲಿಯ ಸುನ್ಜಾತ, ದಕ್ಷಿಣ ಅಮೇರಿಕಾದ ಮೊಹಾವೆ ಮಹಾಕಾವ್ಯ, ಜಪಾನ್ ಐನು ಕೋಟನ್ ಉಟುನ್ನೈ ಇಷ್ಟು ಮಹಾಕಾವ್ಯಗಳನ್ನು ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ.
ಕನ್ನಡದ ಜಾನಪದ ಮಹಾಕಾವ್ಯಗಳ ಅಧ್ಯಯನ ಕುರಿತಂತೆ ಇದೊಂದು ಮಹಾತ್ವಾಕಾಂಕ್ಷೆಯ ಕೃತಿ. ಕನ್ನಡದ ಜನಪದ ಮಹಾಕಾವ್ಯಗಳನ್ನು ಜಾಗತಿಕ ಜನಪದ ಮಹಾಕಾವ್ಯಗಳ ಜತೆ ಅಧ್ಯಯನ ಮಾಡಿರುವುದು ಈ ಕೃತಿಯ ಮೌಲ್ಯ ಹೆಚ್ಚಲು ಕಾರಣವಾಗಿದೆ. ಸಿ.ಎನ್. ಆರ್ ಅವರು ಮೂಲತಃ ಸೃಜನಶೀಲ ಸಾಹಿತ್ಯ, ವಿಮರ್ಶೆ, ಅನುವಾದ ಕ್ಷೇತ್ರದಲ್ಲಿ ಪರಿಚಿತರು. ಇವರು ಜಾನಪದ ಅಧ್ಯಯನದ ಸೆಳೆತಕ್ಕೆ ಒಳಗಾದದ್ದು ಈ ಕ್ಷೇತ್ರಕ್ಕೆ ಒಳ್ಳೆಯದೇ ಆಗಿದೆ. ಕಾರಣ ಕನ್ನಡದ ಸಾಹಿತ್ಯ ವಿಮರ್ಶೆಯು ಸಾಂಸ್ಕೃತಿಕ ವಿಮರ್ಶೆಯಾಗಿ ರೂಪಾಂತರಗೊಳ್ಳುತ್ತಿರುವ ಈ ಹೊತ್ತಿನಲ್ಲಿ ಇಂತಹ ಬಹುಶಿಸ್ತೀಯ ಸೆಳೆತ ಸಹಜವಾಗಿದೆ.
ಅದು ಎಲ್ಲರೊಳಗೂ ಆಗಬೇಕಾದುದೆ. ಕನ್ನಡದಲ್ಲಿ ಶಂಬಾ ಜೋಶಿ, ಡಿ. ಆರ್.ನಾಗರಾಜ್ ಮುಂತಾದವರನ್ನು ಮೊದಲುಗೊಂಡಂತೆ, ಕೆ.ವಿ. ನಾರಾಯಣ, ಎಚ್.ಎಸ್.ಆರ್ , ರಹಮತ್ ತರೀಕೆರೆ, ರಾಜೇಂದ್ರ ಚೆನ್ನಿ , ಮೊಗಳ್ಳಿ ಗಣೇಶ್ ಮುಂತಾದವರ ಸಂಶೋಧನೆ, ವಿಮರ್ಶೆಯಲ್ಲಿ ದೇಸಿ ಚಿಂತನೆಯ ಹುಡುಕಾಟದ ನೆಲೆಗಳು ಭಿನ್ನ ದಾರಿಗಳಲ್ಲಿ ಕ್ರಮಿಸಿವೆ ಮತ್ತು ಕ್ರಮಿಸುತ್ತಿವೆ. ಅದು ಸಿ.ಎನ್. ಆರ್ ಅವರಲ್ಲಿ ಇನ್ನೊಂದು ಮಗ್ಗಲು ಪಡೆಯುತ್ತಿರುವುದು ಆಶಾದಾಯಕ ಬೆಳವಣಿಗೆ.
ಈ ಕೃತಿಯನ್ನು ಕುರಿತಂತೆ ” ಜನಪದ ಮಹಾಕಾವ್ಯಗಳನ್ನು ವಿಶ್ವಾತ್ಮಕ ನೆಲೆಯಲ್ಲಿ, ಭಾರತೀಯ ನೆಲೆಯಲ್ಲಿ, ಮತ್ತು ಸ್ಥಳೀಯ ನೆಲೆಯಲ್ಲಿ ನೋಡಿದ ಕ್ರಮಗಳಿಂದಾಗಿ ಹೊಸ ಅನುಭವಗಳು ಇಲ್ಲಿ ದೊರೆಯುತ್ತವೆ. ಬದಲಾದ ನಿ ಯೋಗಗಳಿಂದಾಗಿ ಹೊಸ ಸಾಹಿತ್ಯ ನಿರ್ಮಾಣವಾಗುವುದು, ಹೊಸ ರಂಗ ಹುಟ್ಟಿಕೊಳ್ಳುವುದು, ಗಂಡು ಹೆಣ್ಣಿನ ಸಂಬಂಧಗಳು ಪಲ್ಲಟಗೊಳ್ಳುವುದು, ಜನಾಂಗಿಕ ಅಸ್ಮಿತೆಯನ್ನು ಕಟ್ಟಿಕೊಳ್ಳುವುದು –ಹೀಗೆ ಆಧುನಿಕತೆಯ ಜಗತ್ತಿನಲ್ಲಿ ಆಧುನಿಕ ರೂಪಕಗಳು ಇಂತಹ ಮೌಖಿಕ ಮಹಾಕಾವ್ಯಗಳಿಂದ ನಿರಂತರವಾಗಿ ಹುಟ್ಟಿಕೊಳ್ಳುತ್ತಲೇ ಇರುತ್ತವೆ.
ಡಾ. ಸಿ.ಎನ್. ರಾಮಚಂದ್ರನ್ ಅವರು ಬದಲಾಗುತ್ತಿರುವ ಇಂತಹ ನಿಯೋಗಗಳನ್ನು ಮತ್ತು ರೂಪಾಂತರಗಳನ್ನು ಹಿಡಿದಿಟ್ಟಿದ್ದಾರೆ. ಮತ್ತು ನಾವು ಹೊಸದಾಗಿ ಹಿಡಿಯಲು ಅವಕಾಶ ಕಲ್ಪಿಸಿದ್ದಾರೆ” ಎಂದು ಪ್ರೊ.ಬಿ.ಎ. ವಿವೇಕ ರೈ ಅವರು ಮುನ್ನುಡಿಯಲ್ಲಿ ಹೇಳುತ್ತಾರೆ. ಇದು ಈ ಕೃತಿಯ ಪ್ರಾಮುಖ್ಯತೆಯನ್ನು ಗುರುತಿಸುತ್ತದೆ. ಮುಖ್ಯವಾಗಿ ಕನ್ನಡದಲ್ಲಿ ಜಾಗತಿಕ ಜಾನಪದ ಮಹಾಕಾವ್ಯಗಳ ಹೊಟ್ಟೆಯೊಳಗಿಂದ ಹುಟ್ಟಿದ ವ್ಯಾಖ್ಯಾನಗಳ ಮೂಲಕ ಜನಪದ ಮಹಾಕಾವ್ಯಗಳನ್ನು ಪರಿಶೀಲಿಸುವ ತೀರಾ ಸವಕಲು ವಿಶ್ಲೇಷಣಾ ವಿಧಾನವೊಂದಿತ್ತು. ಅಂತಹ ಹಳೆ ವಿಧಾನವನ್ನು ಸಿ.ಎನ್.ಆರ್ ಅವರು ಬಳಸಿಲ್ಲ ಎನ್ನುವುದು ಸಮಾಧಾನಕರ ಸಂಗತಿ. ಹಾಗಾಗಿ ಅವರ ವಿಶ್ಲೇಷಣೆಯಲ್ಲಿ ಹೊಸ ಹುಡುಕಾಟದ ಸೆಳಕುಗಳು ಕಾಣಿಸಿಕೊಳ್ಳುತ್ತವೆ.
ಮಹಾಕಾವ್ಯಗಳ ಕುರಿತಂತೆ ಇಂತಹ ವ್ಯಾಪಕ ಅಧ್ಯಯನದಿಂದ ಹುಟ್ಟಬಹುದಾದ ಫಲಿತಗಳು ಈ ಕೃತಿಯಲ್ಲಿ ಸಾಧ್ಯವಾಗಿಲ್ಲ.ಕಾರಣ ಇಲ್ಲಿನ ವಿಶ್ಲೇಷಣೆಯಲ್ಲಿ ಜನಪದ ಮಹಾವ್ಯಗಳ ಪರಿಚಯ, ಹೋಲಿಕೆ ಸಾಮ್ಯಗಳ ತುಲನೆಯ ಆಚೆ ಗಂಭೀರ ಒಳನೋಟಗಳು ಕಾಣುವುದಿಲ್ಲ. ಆಯಾ ಜನಪದ ಮಹಾಕಾವ್ಯಗಳು ಅಲ್ಲಲ್ಲಿನ ಸಾಂಸ್ಕೃತಿಕ ಮತ್ತು ರಾಜಕೀಯದ ಚಾರಿತ್ರಿಕ ಕಾರಣದ ಹಿನ್ನೆಯಲ್ಲಿ ಹುಟ್ಟಿರುತ್ತವೆ, ಆ ಚಾರಿತ್ರಿಕ ಹಿನ್ನೆಲೆಯ ಪರಿಚಯವಿಲ್ಲದೆ ಕೇವಲ ಮಹಾಕಾವ್ಯಗಳನ್ನು ವಿಶ್ಲೇಷಣೆಗೆ ಒಳಗು ಮಾಡಿದರೆ ಉಂಟಾಗಬಹುದಾದ ಅಪಾಯ ಈ ಕೃತಿಯಲ್ಲಿ ಕಾಣುತ್ತದೆ.
ಮುಖ್ಯವಾಗಿ ಒಟ್ಟು ಜನಪದ ಮಹಾಕಾವ್ಯಗಳ ಒಳನೇಯ್ಗೆಯಲ್ಲಿ ಇರಬಹುದಾದ ಸಮಾನ ಎಳೆ ಯಾವುದು ಎನ್ನುವುದು ಕೃತಿಯಲ್ಲಿ ಸ್ಪಷ್ಟಗೊಳ್ಳುವುದಿಲ್ಲ. ಹಾಗಾಗಿ ಇಲ್ಲಿ ವಿಮರ್ಶಾತ್ಮಕ ನೆಲೆ ಹೆಚ್ಚಾಗಿ, ಸಂಶೋಧನಾತ್ಮಕ ಅಧ್ಯಯನದ ಆಳ ಇಲ್ಲವಾಗಿದೆ. ಸಿ.ಎನ್.ಆರ್ ಕೃತಿಯ ಮೊದಲಿಗೆ ತಮ್ಮ ಅಧ್ಯಯನಕ್ಕೆ ಇರಬಹುದಾದ ಮಿತಿಗಳನ್ನು ವಿನಯದಿಂದಲೇ ಹೇಳಿಕೊಂಡಿದ್ದಾರೆ. ಅಂತೆಯೇ ಇಂತಹ ಬೃಹತ್ ಕಥನಗಳನ್ನು ಅಧ್ಯಯನಕ್ಕೆ ಆಯ್ದುಕೊಂಡಾಗ ಇರಬಹುದಾದ ಸಮಸ್ಯೆಯೂ ಇಲ್ಲಿ ಕಾಣುತ್ತದೆ.
ಇಂತಹ ಕೆಲವು ಮಿತಿಗಳಾಚೆಯೂ ಕೃತಿಯ ಹೆಚ್ಚುಗಾರಿಕೆಯ ದೃಷ್ಟಿಯಿಂದ ಇದೊಂದು ಮಹತ್ವದ ಕೃತಿಯಾಗಿದೆ. ಜನಪದ ಮಹಾಕಾವ್ಯದ ಅಧ್ಯಯನಕಾರರಿಗೊಂದು ಉತ್ತಮ ಪ್ರವೇಶಿಕೆಯನ್ನೂ ಇದು ಒದಗಿಸುತ್ತದೆ. ಡಾ. ಸಿ.ಎನ್. ರಾಮಚಂದ್ರನ್ ಅವರ ಅಪಾರ ಶ್ರಮ, ಶ್ರದ್ಧೆ ಈ ಅಧ್ಯಯನದಲ್ಲಿ ಕಾಣುತ್ತದೆ. ಈ ಎಲ್ಲಾ ಕಾರಣಗಳಿಗಾಗಿ ಅವರು ಅಭಿನಂದನಾರ್ಹರು

ಅಖಿಲ ಭಾರತ ಕನ್ನಡ ಸಣ್ಣಕಥೆ ಮತ್ತು ಕಾವ್ಯ ಸ್ಪರ್ಧೆ
ಗೋಕುಲವಾಣಿಯ ಅಖಿಲ ಭಾರತ ಕನ್ನಡ ಸಣ್ಣಕಥೆ ಮತ್ತು ಕಾವ್ಯ ಸ್ಪರ್ಧೆಮುಂಬಯಿಯ ಬಿ.ಎಸ್.ಕೆ.ಬಿ. ಅಸೋಸಿಯೇಶನ್‌ನ ಮಾಸಪತ್ರಿಕೆ ಗೋಕುಲವಾಣಿ ತನ್ನ ಯುಗಾದಿ ವಿಶೇಷ ಪುರವಣಿಗಾಗಿ (ಸೌರಯುಗಾದಿ -ಎಪ್ರಿಲ್ ೨೦೧೧) ಈ ಸ್ಪರ್ಧೆಯನ್ನು ಆಯೋಜಿಸಿದ್ದು , ಪ್ರಥಮ, ದ್ವಿತೀಯ, ತೃತೀಯ ಉತ್ತಮ ಕೃತಿ ಎಂದು ಸಣ್ಣಕಥೆಗಾಗಿ ತಲಾ ರೂ. ೫೦೦೦/-, ರೂ.೩೦೦೦/- ಮತ್ತು ರೂ. ೨೦೦೦/-, ಹಾಗೂ ಕವಿತೆಗಾಗಿ ತಲಾ ರೂ.೨೦೦೦/-, ರೂ.೧೦೦೦/- ಮತ್ತು ರೂ. ೫೦೦/- ಮೊತ್ತದ ಬಹುಮಾನಗಳನ್ನು ನಿಗದಿಪಡಿಸಿದೆ .
ನಿಯಮಗಳು:೧)ಸ್ವತಂತ್ರ ಕೃತಿಯಾಗಿರಬೇಕು.೨)ಸ್ಫುಟವಾದ ಕೈಬರಹದಲ್ಲಿ ೧೦೦೦ ಪದಗಳಿಗೆ ಕತೆ ಸೀಮಿತವಾಗಿರಬೇಕು. ಗಣಕಯಂತ್ರ, ಬೆರಳಚ್ಚು ಬಳಸಬಹುದು .ಕ್ಸೆರಾಕ್ಸ್ ಪ್ರತಿಯನ್ನು ಸ್ವೀಕರಿಸಲಾಗುವುದಿಲ್ಲ .೩)ಕವಿತೆ ಒಂದು ಫುಲ್ಸ್ಕೇಪ್ ಹಾಳೆಯನ್ನು ಮೀರಿರಬಾರದು. ದೊಡ್ಡ ಕೈಬರಹವಿದ್ದಲ್ಲಿ ಎರಡು ಪುಟಗಳ ಮಿತಿ.೪) ಕಥೆ ,ಕವಿತೆ ಪುಟಗಳಲ್ಲಿ ಎಲ್ಲೂ ಲೇಖಕರ ಹೆಸರು ಇರಬಾರದು.
ಇದ್ದಲ್ಲಿ ಅದನ್ನು ತಿರಸ್ಕರಿಸಲಾಗುವುದು . ಹೆಸರು , ವಿಳಾಸವನ್ನು ಬೇರೆಯೇ ಹಾಳೆಯಲ್ಲಿ ಬರೆದು ಲಗತ್ತಿಸಬೇಕು.೫)ಬಹುಮಾನ ಪಡೆದವರಿಗೆ ಚೆಕ್ ಮೂಲಕ ಹಣದ ಮೊತ್ತ ಮತ್ತು ಪ್ರಮಾಣಪತ್ರವನ್ನು ಕಳಿಸಲಾಗುವುದು .೬)ಬಹುಮಾನಿತ ಕೃತಿ ಹಾಗೂ ಮೆಚ್ಚುಗೆ ಗಳಿಸಿದ ಬರಹವನ್ನು ಪ್ರಕಟಿಸುವ ಹಕ್ಕು ಗೋಕುಲವಾಣಿಗಿದೆ .೭)ಯಾವುದೇ ಬರಹಗಳನ್ನು ಹಿಂದಿರುಗಿಸಲಾಗುವುದಿಲ್ಲ .೮)ತೀರ್ಪುಗಾರರ ನಿರ್ಣಯವೇ ಅಂತಿಮ. ಪತ್ರ ವ್ಯವಹಾರಕ್ಕೆ ಅವಕಾಶವಿಲ್ಲ . ಬರಹಗಳನ್ನು ಸ್ವೀಕರಿಸಲು ಕೊನೆಯ ದಿನ :ಫೆಬ್ರವರಿ ೧೦,೨೦೧೧.ಕಳಿಸಬೇಕಾದ ವಿಳಾಸ( ಇಂಗ್ಲಿಷಿನಲ್ಲಿರಲಿ):
Hon. Editor ,
“Gokulavani” / Sahitya Spardhe ,
B.S.K.B. Association , Gokul Marg, Sion(E),
Mumbai 400022

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)