ಪುಟಗಳು

ನಾಲ್ಕು ಬೆರಳಿಗೆ ನವ ರತ್ನಗಳು : ನಿಮಗ್ಯಾವ ರತ್ನ



ರತ್ನಗಳಲ್ಲಿ ಪ್ರಮುಖವಾಗಿ ಒಂಬತ್ತು ರತ್ನಗಳನ್ನು ಶುಭದಾಯಕ ಎಂಬ ಕಾರಣಕ್ಕೆ ನಾವು ಧರಿಸುತ್ತಿದ್ದೇವೆ. ಸೂರ್ಯನಿಗೆ ಮಾಣಿಕ್ಯ, ಚಂದ್ರನಿಗೆ ಮುತ್ತು, ಮಂಗಳನಿಗೆ ಕೆಂಪು ಹವಳ, ಬುಧನಿಗೆ ಮರಕತ (ಪಚ್ಚೆ), ಗುರುವಿಗೆ ಹಳದಿ ಪುಷ್ಯರಾಗ, ಶುಕ್ರನಿಗೆ ವಜ್ರ, ಶನಿಗೆ ನೀಲ, ರಾಹುವಿಗೆ ಗೋಮೇದಿಕ ಮತ್ತು ಕೇತುವಿಗೆ ವೈಢೂರ್ಯ.

ಪುಷ್ಯರಾಗ ಮಣಿಯನ್ನು (Yellow sapphire) ತರ್ಜನಿ (ತೋರು) ಬೆರಳಿಗೇ ಧರಿಸಬೇಕೆಂದು ಯಾಕೆ ಸೂಚಿಸುತ್ತಾರೆ? ಯಾಕೆಂದರೆ, ಯಾವುದೇ ವ್ಯಕ್ತಿ ಎಚ್ಚರಿಕೆ ಅಥವಾ ನಿರ್ದೇಶನ ನೀಡುವುದು ಇದೇ ಬೆರಳಿನ ಮೂಲಕ. ಇದೇ ಬೆರಳು ಜಗಳಕ್ಕೂ ಕಾರಣವಾಗುತ್ತದೆ, ಹೀಗಾಗಿ ಎಚ್ಚರದಿಂದಿರುವಂತೆ ಹೇಳಲೂ ಕೆಲಸಕ್ಕೆ ಬರುತ್ತದೆ. ಇದಕ್ಕಾಗಿ ಗುರುವಿನ ರತ್ನ ಪುಷ್ಯರಾಗವನ್ನು ಧರಿಸಬೇಕೆಂದು ಸಲಹೆ ನೀಡಲಾಗುತ್ತದೆ. ಈ ಮಣಿಯನ್ನು ಧರಿಸುವುದರಿಂದ ಆ ವ್ಯಕ್ತಿಗೆ ಗಂಭೀರತೆ ಬರುತ್ತದೆ ಮತ್ತು ಆತ ಅನ್ಯಾಯದ ವಿರುದ್ಧ ಜಾಗೃತನಾಗುತ್ತಾನೆ. ಇದು ಧರ್ಮ-ಕರ್ಮದಲ್ಲಿಯೂ ಶ್ರದ್ಧೆ ಹುಟ್ಟಿಸುತ್ತದೆ. ಗುರುವಿನ ಪ್ರಭಾವ ಹೆಚ್ಚಿಸಲು ಮತ್ತು ಅದರ ಅಶುಭ ಫಲಗಳನ್ನು ಕೊನೆಗಾಣಿಸಲು ಈ ರತ್ನವನ್ನು ಧರಿಸಲಾಗುತ್ತದೆ.

ರಾಜಕಾರಣಿಗಳು, ಅಧಿಕಾರಿಗಳು, ನ್ಯಾಯಾಧೀಶರು, ಮಂತ್ರಿಗಳು, ರಾಜನಾಯಕರು, ನಟರು ಮುಂತಾದವರ ಕೈಯಲ್ಲಿ ಈ ರತ್ನವನ್ನು ಕಾಣಬಹುದು. ಈ ರತ್ನದೊಂದಿಗೆ ಮಾಣಿಕ್ಯವನ್ನೂ ಧರಿಸಿದರೆ, ಅತಿ ಶುಭ ಫಲ ದೊರೆಯುತ್ತದೆ.

ಮಧ್ಯ ಬೆರಳಿನಲ್ಲಿ ನೀಲ ಮಣಿ ಧಾರಣೆ ಮಾಡಿದರೆ, ಅವರು ಆ ಬೆರಳಲ್ಲಿ ಅದರ ಹೊರತು ಬೇರಾವುದೇ ರತ್ನ ಧರಿಸಬಾರದು. ಇಲ್ಲವಾದರೆ ಶುಭ ಫಲ ದೊರೆಯುವುದಿಲ್ಲ. ಈ ಬೆರಳಲ್ಲಿ ಭಾಗ್ಯ ರೇಖೆಯು ಕೊನೆಗೊಳ್ಳುತ್ತದೆಯಾದುದರಿಂದ, ಯಾರಲ್ಲಿ ಭಾಗ್ಯ ರೇಖೆ ಇಲ್ಲವೋ ಅವರು ತಿಳಿದವರಲ್ಲಿ ಕೇಳಿ, ನೀಲ ಮಣಿ ಧರಿಸಿದರೆ, ಲಾಭ ಪಡೆಯಬಹುದಾಗಿದೆ.

ನೀಲಮಣಿಯು ಶನಿಯ ಶುಭ ಫಲ ದೊರಕಿಸಲು ಸಹಾಯ ಮಾಡುತ್ತದೆ. ಲೋಹದ ಉದ್ಯಮಿಗಳು, ರಾಜಕಾರಣಿಗಳು, ಆಡಳಿತಗಾರರು ಇದನ್ನು ಹೆಚ್ಚಾಗಿ ಧರಿಸುತ್ತಾರೆ. ಈ ರತ್ನವು ತ್ವರಿತ ಫಲದಾಯಕವಾಗಿದೆ ಮತ್ತು ಇದರ ಶುಭ ಅಥಲಾ ಅಶುಭ ಪರಿಣಾಮವು ಅತ್ಯಂತ ಶೀಘ್ರದಲ್ಲೇ ತಿಳಿದುಬಿಡುತ್ತದೆ ಎಂದು ಹೇಳಲಾಗುತ್ತದೆ. ಯಾವುದೇ ರತ್ನ ಶಾಸ್ತ್ರಜ್ಞರ ಸಲಹೆಯಿಲ್ಲದೆ ಇದನ್ನು ಧರಿಸಬಾರದು ಎಂದು ಹೇಳಲಾಗುತ್ತದೆ.

ಮಾಣಿಕ್ಯವನ್ನು ಅನಾಮಿಕ (ಉಂಗುರ) ಬೆರಳಿಗೆ ಧರಿಸಲಾಗುತ್ತದೆ. ಇದು ಸೂರ್ಯನ ರತ್ನ. ಬರ್ಮಾ ದೇಶದ ಮಾಣಿಕ್ಯಕ್ಕೆ ಬೆಲೆ ಹೆಚ್ಚು. ಇಂದು ಕೆಲವು ನಕಲಿ ಮಾಣಿಕ್ಯಗಳೂ ಬರ್ಮಾದವು ಎಂದು ಹೇಳಿ ಮಾರಾಟ ಮಾಡಲಾಗುತ್ತದೆ. ಈ ಬಗ್ಗೆ ಎಚ್ಚರ ವಹಿಸಬೇಕು. ಬರ್ಮಾದ ಮಾಣಿಕ್ಯವು ದಾಳಿಂಬೆ ಬೀಜದಂತಿರುತ್ತದೆ. ಇದನ್ನು ಧರಿಸುವುದರಿಂದ ಆಡಳಿತಾತ್ಮಕ ಪ್ರಭಾವ ವೃದ್ಧಿಸುತ್ತದೆ ಮತ್ತು ಶತ್ರುವಿನ ಎದುರು ಜಯ ಸಾಧಿಸಲು ಪೂರಕವಾಗುತ್ತದೆ. ಇದನ್ನು ಕೂಡ ರಾಜಕಾರಣ ಜೊತೆ ಸಂಬಂಧ ಇರುವವರು, ಉಚ್ಚ ಅಧಿಕಾರಿಗಳು, ನ್ಯಾಯಾಧೀಶರು, ಜಿಲ್ಲಾಧಿಕಾರಿಗಳು ಮುಂತಾದವರ ಬೆರಳುಗಳಲ್ಲಿ ಕಾಣಬಹುದು.

ಕನಿಷ್ಠ ಬೆರಳಿನಲ್ಲಿ ಅಂದರೆ ಕಿರು ಬೆರಳಿನಲ್ಲಿ ಪಚ್ಚೆ ರತ್ನವನ್ನು ಧರಿಸಬೇಕು. ಇದು ಬೌದ್ಧಿಕ ಗುಣಗಳನ್ನು ಹೆಚ್ಚಿಸುತ್ತದೆಯಾದುದರಿಂದ ಉದ್ಯಮಿಗಳು ಹೆಚ್ಚಾಗಿ ಧರಿಸುತ್ತಾರೆ. ಇದನ್ನು ಧರಿಸುವುದರಿಂದ ಪತ್ರಕರ್ತರು, ಸೇಲ್ಸ್‌ಮ್ಯಾನ್‌ಗಳು, ಪ್ರಕಾಶನದ ಕೆಲಸಗಾರರು, ಕಲಾವಿದರು, ವಾಕ್ಪಟುಗಳು ಹಾಗೂ ಬೌದ್ಧಿಕ ಸಾಮರ್ಥ್ಯ ಹೆಚ್ಚು ಬೇಕಾಗಿರುವ ಕೆಲಸದಲ್ಲಿ ನಿರತರಾದವರಿಗೆ ಶುಭ ಫಲಗಳಾಗುತ್ತವೆ.

ವಜ್ರ, ಮುತ್ತು, ಹವಳ, ಗೋಮೇಧಿಕ ಮತ್ತು ವೈಢೂರ್ಯ: ಹವಳವು ಶಕ್ತಿ ಹೆಚ್ಚಿಸಬಲ್ಲ, ಸಾಹಸ, ಮಹತ್ವಾಕಾಂಕ್ಷೆ ವೃದ್ಧಿ ಮಾಡಲು ಮತ್ತು ಶತ್ರುವಿನ ಮೇಲೆ ಪ್ರಭಾವ ಮಾಡಲು ನೆರವಾಗುತ್ತದೆ. ಅದರ ಮಿತ್ರರು ಗುರು ಮತ್ತು ಸೂರ್ಯ. ಮಕರ ಉಚ್ಚವಾಗಿದ್ದರೆ ಅದನ್ನು ಮಧ್ಯಮ, ಉಂಗುರ ಬೆರಳು ಅಥವಾ ಕಿರು ಬೆರಳಲ್ಲಿ ಧರಿಸಬಹುದು. ಇದನ್ನು ಹೆಚ್ಚಾಗಿ ರಾಜಕಾರಣಿಗಳು, ಪೊಲೀಸರು, ಆಡಳಿತದೊಂದಿಗೆ ಸಂಬಂಧ ಹೊಂದಿರುವವರು ಮತ್ತು ಉನ್ನತ ಅಧಿಕಾರಿಗಳು, ಭೂಮಿ ಸಂಬಂಧಿತ ವ್ಯಕ್ತಿಗಳು, ಬಿಲ್ಡರ್ ಮುಂತಾದವರ ಕೈಗಳಲ್ಲಿ ಕಾಣಬಹುದು.

ಇದನ್ನು ಮಾಣಿಕ್ಯ ಮತ್ತು ಪುಷ್ಯರಾಗದ ಜೊತೆಗೂ ಧರಿಸಬಹುದಾಗಿದೆ. ಯಾರಿಗೆ ಹೆಚ್ಚು ಕೋಪ ಬರುವುದೋ, ಅಂಥವರು ಈ ರತ್ನವನ್ನು ಧರಿಸಬಾರದು. ಹವಳವನ್ನು ಮುತ್ತಿನ ಜತೆಗೆ ಅಥವಾ ಸಂಯುಕ್ತ ರತ್ನದ ಉಂಗುರವನ್ನೂ ಧರಿಸಬಹುದಾಗಿದೆ.

ಕಿರು ಬೆರಳಿನಲ್ಲಿ ಮುತ್ತು ಧರಿಸುವುದು ಶುಭ ಫಲದಾಯಕ. ಯಾಕೆಂದರೆ, ಕನಿಷ್ಠ ಬೆರಳಿನ ಬುಡದಲ್ಲಿ ಚಂದ್ರ ಪರ್ವತ ಇರುತ್ತದೆ. ಈ ಕಾರಣದಿಂದ, ಚಂದ್ರನ ಅಶುಭ ಪರಿಣಾಮ ತಡೆಗಟ್ಟಿ ಶುಭತ್ವಕ್ಕಾಗಿ ಇದು ಲಾಭಪ್ರದವಾಗುತ್ತದೆ. ಇದನ್ನು ಉಂಗುರ ಬೆರಳಿನಲ್ಲಿ ಧರಿಸಬಾರದು. ಗುರುವಿನ ಬೆರಳಾಗಿರುವ ತೋರು ಬೆರಳಿನಲ್ಲಿಯೂ ಇದನ್ನು ಧರಿಸಬಹುದು. ಈ ರತ್ನವು ಮನಸ್ಸನ್ನು ಅಶಾಂತಿಯಿಂದ ರಕ್ಷಿಸುತ್ತದೆ ಮತ್ತು ಯಾರಿಗೆ ಹೆಚ್ಚು ಕೋಪ ಬರುವುದೋ ಅಂಥವರು, ಜಲ ಕಾರ್ಯದ ಜೊತೆ ಸಂಬಂಧ ಹೊಂದಿರುವವರು, ಹಾಲಿನ ವ್ಯಾಪಾರಿಗಳು, ಬಿಳಿ ವಸ್ತುಗಳ ವ್ಯವಹಾರದಲ್ಲಿ ತೊಡಗಿರುವವರು ಧರಿಸಬಹುದಾಗಿದೆ. ಇದನ್ನು ಪುಷ್ಯರಾಗದ ಜೊತೆ ಮತ್ತು ಮಾಣಿಕ್ಯದ ಜೊತೆಗೂ ಧರಿಸಲಾಗುತ್ತದೆ.

ವಜ್ರ ಎಂಬುದು ಎಷ್ಟು ಬೆಲೆ ಬಾಳುವ ರತ್ನವೋ ಅಷ್ಟೇ ಸುಂದರವೂ ಹೌದು. ಇದನ್ನು ಗುರುವಿನ ಬೆರಳಾಗಿರುವ ತೋರು ಬೆರಳಿನಲ್ಲಿ ಧರಿಸುತ್ತಾರೆ. ಯಾಕೆಂದರೆ, ಈ ತರ್ಜನಿ ಬೆರಳಿನ ಬುಡದಲ್ಲಿಯೇ ಶುಕ್ರ ಪರ್ವತ ಇರುತ್ತದೆ. ಶುಕ್ರನ ಅಶುಭ ಫಲವನ್ನು ನಷ್ಟವಾಗಿಸಿ ಶುಭ ಫಲ ಪಡೆಯಲು ವಜ್ರದ ಉಂಗುರ ಧರಿಸುತ್ತಾರೆ. ಇದನ್ನು ಕಲಾವಿದರು, ಸೌಂದರ್ಯ ಪ್ರಸಾಧನದೊಂದಿಗೆ ಸಂಬಂಧ ಹೊಂದಿದವರು, ಪ್ರೇಮಿಗಳು, ಇಂಜಿನಿಯರ್‌ಗಳು, ಚಿಕಿತ್ಸಕರು, ಕಲಾತ್ಮಕ ವಸ್ತುಗಳ ಮಾರಾಟಗಾರರು ಮುಂತಾದವರು ಧರಿಸುತ್ತಾರೆ.

ರಾಹುವಿನ ರತ್ನ ಗೋಮೇದಿಕವನ್ನು ಕನಿಷ್ಠ ಬೆರಳಿನಲ್ಲಿ ಅಂದರೆ ಕಿರು ಬೆರಳಿನಲ್ಲಿ ಧರಿಸಬೇಕು. ಯಾಕೆಂದರೆ, ಮಿಥುನ ರಾಶಿಯಲ್ಲಿ ಉಚ್ಚ ಸ್ಥಾನದಲ್ಲಿರುವ ಬುಧನ ಬೆರಳು ಕನಿಷ್ಠ ಬೆರಳಿನಲ್ಲಿ ಧರಿಸುವುದು ಶುಭ ಫಲದಾಯಕ. ರಾಜನೀತಿ, ಪತ್ತೆದಾರಿಕೆ, ತಂತ್ರ-ಮಂತ್ರದಲ್ಲಿ ತೊಡಗಿರುವ ಮಂದಿ ಧರಿಸುತ್ತಾರೆ. ಇದು ರಾಹುವಿನ ಅಶುಭ ಪ್ರಭಾವವನ್ನು ದೂರೀಕರಿಸುತ್ತದೆ.

ಬೆಕ್ಕಿನ ಕಣ್ಣು ಎಂದು ಆಂಗ್ಲ ಭಾಷೆಯಲ್ಲಿ ಕರೆಯಲಾಗುವ ವೈಢೂರ್ಯವನ್ನು ತೋರು ಬೆರಳಿಗೆ ಧರಿಸಬೇಕು. ಯಾಕೆಂದರೆ, ಗುರುವಿನ ರಾಶಿ ಧನುವಿನಲ್ಲಿ ಉಚ್ಚವಾಗಿರುತ್ತದೆ. ಇದು ಉನ್ನತಿಯನ್ನು ಪ್ರದಾನಿಸುತ್ತದೆ ಮತ್ತು ಶತ್ರುನಾಶಕ್ಕೆ ಕಾರಣವಾಗುತ್ತದೆ. ಈ ರತ್ನವನ್ನು ವಜ್ರದ ಜೊತೆಗೆ ಎಂದಿಗೂ ಧರಿಸಬಾರದು. ಯಾಕೆಂದರೆ, ಇದರಿಂದ ಬಾರಿಬಾರಿಗೆ ದುರ್ಘಟನೆಯ ಯೋಗ ಉಂಟಾಗುತ್ತದೆ.

ನಿದ್ದೆ ಮಂಪರಿನಲ್ಲಿ ಮಿ.ಬೀನ್ ಮಾಡಿಕೊಂಡ ಎಡವಟ್ಟು

ಲಂಡನ್, ಆ. 6: ತನ್ನ ಕಾರ್ಯಕ್ರಮದಲ್ಲಿ ಏನಾದಾರೂ ಎಡವಟ್ಟು ಮಾಡಿಕೊಳ್ಳುವ ಮಿಸ್ಟರ್ ಬೀನ್ ಖ್ಯಾತಿಯ ರೋವ್ಯಾನ್ ಅಟ್ಕಿನ್ ಸನ್ ನಿಜಜೀವನದಲ್ಲೂ ಎಡವಟ್ಟು ಮಾಡಿಕೊಂಡಿದ್ದಾರೆ. ನಿದ್ದೆಯ ಮಂಪರಿನಲ್ಲಿ ಮ್ಯಾಕ್ ಲಾರೆನ್ ಎಫ್ 1 ಕಾರನ್ನು ಚಲಾಯಿಸಿ ಮರಕ್ಕೆ ಡಿಕ್ಕಿ ಹೊಡೆದು ಭುಜಕ್ಕೆ ಗಾಯ ಮಾಡಿಕೊಂಡಿದ್ದಾರೆ.

ಅದೃಷ್ಟವಶಾತ್ ಮಿ.ಬೀನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ರೀತಿ ಎಡವಟ್ಟು ಮಾಡಿಕೊಳ್ಳುವುದು ಅವರಿಗೆ ಹೊಸದೇನಲ್ಲ, ತನ್ನ ನೆಚ್ಚಿನ ಕಾರ್ ಚಲಾಯಿಸಿ ಇದು ಎರಡನೇ ಬಾರಿ ಅವರು ಅಪಘಾತಕ್ಕೆ ಈಡಾಗುತ್ತಿರುವುದು.

ತನ್ನ ವಿಶಿಷ್ಟ ಆಂಗಿಕ ಅಭಿನಯದಿಂದ ಹಾಸ್ಯರಸ ಉಕ್ಕಿಸಿ ಜನರನ್ನು ಅದರಲ್ಲೂ ಹೆಚ್ಚಾಗಿ ಮಕ್ಕಳನ್ನು ನಗೆಯಲ್ಲಿ ತೇಲಾಡಿಸುವ ಮಿ. ಬೀನ್ ನಡೆಸುವ ಕೊಡುವ ಕಾರ್ಯಕ್ರಮ ಯುಕೆ ಭಾಗದಲ್ಲಿ ಮಾತ್ರ ಅಲ್ಲ ಭಾರತದಲ್ಲೂ ಬಹಳ ಜನಪ್ರಿಯ. ತನ್ನ ಕಾಯಕ್ರಮದಲ್ಲಿ ಪ್ರಾಪಂಚಿಕ ಜ್ಞಾನವಿಲ್ಲದಂತೆ ನಡೆಸುವ ಇವರು ಯುರೋಪ್ ಭಾಗದಲ್ಲಿ ಬಹಳ ಜನಪ್ರಿಯರು.

ಅವರ "Hair by Mr. Bean of London", "The trouble with Mr. Bean", "Mr. Bean's Holiday" ಮುಂತಾದ ಕಾರ್ಯಕ್ರಮಗಳು ಜನರನ್ನು ಸೆಳೆದಿವೆ

ಎಲ್ ಪಿಜಿ ದಾಖಲೆ ಸಲ್ಲಿಸಲು ದಿನಾಂಕ ವಿಸ್ತರಣೆ

 
ಬೆಂಗಳೂರು, ಆ. 5 : ಪಡಿತರ ಚೀಟಿ ಮತ್ತು ಎಲ್.ಪಿ.ಜಿ. ಸೌಲಭ್ಯ ಹೊಂದಿದವರು ಅವರು ವಾಸಿಸುವ ಮನೆಯ ವಿದ್ಯುತ್ ಮೀಟರ್‌ನ ಆರ್.ಆರ್. ಸಂಖ್ಯೆ, ಗೃಹ ಬಳಕೆಯ ಅನಿಲ ಗ್ರಾಹಕ ಸಂಖ್ಯೆ ಮತ್ತು ಪಡಿತರ ಚೀಟಿ ಸಂಖ್ಯೆಗಳನ್ನು ಸಲ್ಲಿಸಲು ಕೊನೆಯ ದಿನಾಂಕವನ್ನು ಆಗಸ್ಟ್ 15ರವರೆಗೆ ವಿಸ್ತರಿಸಲಾಗಿದೆ.

ಆಹಾರ ಕರ್ನಾಟಕ ವೆಬ್ ಸೈಟಿನ ಡಾಟಾ ಎಂಟ್ರಿಯಲ್ಲಿ ತಪ್ಪಾಗಿರಬಹುದಾದ ಕಾರಣಕ್ಕಾಗಿ ಸೌಲಭ್ಯಗಳನ್ನು ಅಮಾನತ್ತುಪಡಿಸಲ್ಪಟ್ಟಿದಲ್ಲಿ, ಫಲಾನುಭವಿಗಳು ಅಗತ್ಯ ದಾಖಲೆಗಳನ್ನು ಆ. 15ರೊಳಗೆ ನೇ ಆಗಸ್ಟ್ 2011ರವರೆಗೆ ಸಲ್ಲಿಸಬೇಕೆಂದು ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಿದೆ.

ದಾಖಲೆ ಸಲ್ಲಿಸಿದ್ದರೂ ವೆಬ್ ಸೈಟಿನಲ್ಲಿ ಅನೇಕರ ಎಲ್ ಪಿಜಿ ವಸ್ತುಸ್ಥಿತಿ ಸಸ್ಪೆಂಡ್ ಆಗಿದೆ ಎಂದು ತೋರಿಸುತ್ತಿದ್ದಕ್ಕಾಗಿ ಲಕ್ಷಾಂತರ ಗ್ರಾಹಕರು ತೊಂದರೆಗೀಡಾಗಿದ್ದಾರೆ. ಹಾಗಿದ್ದರೂ ಸಿಲಿಂಡರ್ ಪೂರೈಕೆಯನ್ನು ಏಜೆನ್ಸಿಗಳು ನಿಲ್ಲಿಸಿಲ್ಲ. ಆದರೆ, ವೆಬ್ ಸೈಟ್ ಮುಖಾಂತರ ಅಥವಾ ಖುದ್ದಾಗಿ ಏಜೆನ್ಸಿಗೆ ಸಸ್ಪೆಂಡ್ ಆದ ಕಾರಣಕ್ಕೆ ತಕ್ಕಂಥ ದಾಖಲೆ ಒದಗಿಸಬೇಕು.

ವೆಬ್ ಸೈಟಿನಲ್ಲಿ ಸಂಪರ್ಕ ಸ್ಥಿತಿ ತಿಳಿಸಿದ ಪುಟವನ್ನು ಪ್ರಿಂಟೌಟ್ ತೆಗೆದುಕೊಂಡು ಏಜೆನ್ಸಿಗೆ ಹೋದರೆ ಅವರು ಯಾವ ದಾಖಲೆಯನ್ನು ಸಲ್ಲಿಸಬೇಕು ಅಥವಾ ಸಲ್ಲಿಸಬೇಕೋ ಸಲ್ಲಿಸಬಾರದೋ ಎಂಬುದನ್ನು ತಿಳಿಸುತ್ತಾರೆ. ಹಾಗಾಗಿ, ವಿಚಾರಿಸಲು ಹೋದರೆ ಪ್ರಿಂಟೌಟ್ ತೆಗೆದುಕೊಂಡು ಹೋಗುವುದು ಉತ್ತಮ.

ಶ್ರೀಮಂತರಿಗೆ ಸಬ್ಸಿಡೈಸ್ಡ್ ಗ್ಯಾ ಇಲ್ಲ : ವಾರ್ಷಿಕ 6 ಲಕ್ಷಕ್ಕಿಂತ ಹೆಚ್ಚು ವರಮಾನ ಇರುವವರಿಗೆ ಮತ್ತು ಸ್ಥಿತಿವಂತರಿಗೆ ರಿಯಾಯಿತಿ ದರದಲ್ಲಿ ಗೃಹ ಬಳಕೆಯ ಅನಿಲ ನೀಡಬಾರದೆಂದು ಸಂಸದೀಯ ಮಂಡಳಿ ಶಿಫಾರಸು ಮಾಡಿದೆ. ಇದು ಜಾರಿಗೆ ಬಂದರೆ, ವರಮಾನ 6 ಲಕ್ಷಕ್ಕಿಂತ ಜಾಸ್ತಿ ಇರುವವರು ಪ್ರತಿ ಸಿಲಿಂಡರಿಗೆ ರು. 642 ನೀಡಬೇಕಾಗುತ್ತದೆ.