ಪುಟಗಳು

ಗಂಡಸರೇ ಹುಷಾರು..

ವಿಶ್ವಕಪ್ ಕ್ರಿಕೆಟ್ ಹಂಗಾಮ

ಪೇಸ್ ಬುಕ್ ಉಪೇಂದ್ರ

ಸೋನಿಯಾಳ ದೊಂಬರಾಟ..

ಮುಂಗಾರು ಮಳೆ ಸಿದ್ರಾಮಣ್ಣ

ನೀವು ಸುಪರೋ ಅಣ್ಣಾ

ಅಮೇರಿಕಾದಲ್ಲಿ " ಹುಡುಗುರು

ಸಮ್ಮೋಹ ಮಾಡಿ ಸಂಭೋಗಿಸಿದ ಹಜರತ್ ಬಾಬಾಗೆ ಗೂಸಾ

ನಾಗಪುರ, ಜುಲೈ25: ನನಗೊಂದು ಮದುವೆ ಮಾಡಿಸಿಕೊಡಿ ಎಂದು ಅಲವತ್ತುಕೊಂಡಿದ್ದ 32 ವರ್ಷದ ಯುವತಿಯ ಮೇಲೆ ಅತ್ಯಾಚಾರವೆಸಗಿ, ಸುಲಿಗೆ ಮಾಡಿದ ಆರೋಪದ ಮೇಲೆ 52 ವರ್ಷದ ಹಜರತ್ ಬಾಬಾವೊಬ್ಬನನ್ನು ಬಂಧಿಸಿಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಯುವತಿ ವಾಸವಾಗಿದ್ದ ಮಾಮಿನಪುರ ಬಡಾವಣೆಯ ನಿವಾಸಿಗಳು ಹಜರತ್ ಬಾಬಾನನ್ನು ದರದರನೆ ಹೊರಗೆಳೆದು, ಮನಸಾರೆ ಬಡಿದಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.

ಆರೋಪಿ ಹಜರತ್ ಮೊಹಮದ್ ವಲೀವುಲ್ಲಾ ಸಮೀರುಲ್ಲಾ ಸಹ ಇದೇ ಬಡಾವಣೆಯವನು. ಹೆಂಗೆಳೆಯರಿಂದ ಗೂಸಾ ತಿಂದು ಮೇಯೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಬಾಧಿತ ಯುವತಿ 11 ಮಕ್ಕಳ ಪೈಕಿ ಕೊನೆಯವಳು. ಅವಳ ಅಪ್ಪ-ಅಮ್ಮ ಎಷ್ಟೂ ಗಂಡುಗಳನ್ನು ನೋಡಿದರೂ ಯಾವುದೂ ಬರಕತ್ತಾಗಲಿಲ್ಲ. ಇದರಿಂದ ಬೇಸತ್ತ ಯುವತಿ ಜೂನ್ ಮೊದಲ ವಾರದಲ್ಲಿ ಬಾಬಾ ಬಳಿ ತನ್ನ ಗೋಳನ್ನು ನಿವೇದಿಸಿಕೊಂಡಳು.

ಬಾಬಾ, ರಾತ್ರಿ ವೇಳೆ ಮನೆಗೆ ಬರುವಂತೆ ಯುವತಿಗೆ ಪುಸಲಾಯಿಸಿದ. ಅಲ್ಲಿ ಒಂದಷ್ಟು ಮಂತ್ರಗಳನ್ನು ಹೇಳುತ್ತಾ ಯುವತಿಯ ಮೇಲೆ ಹಿಪ್ನಾಟಿಸಂ ಮಾಡಿ, ತನ್ನ ಕಾರ್ಯಾಚರಣೆಗೆ ಇಳಿದಿದ್ದ. ಯುವತಿಯು ಭೌತಿಕವಾಗಿ ಬಾಬಾ ವಶವಾದಳು. ಕೆಲವೊಂದು ಭಂಗಿಗಳಲ್ಲಿ ಫೋಟೋಗಳನ್ನೂ ತೆಗೆದಿದ್ದ. ಆ ಫೋಟೋಗಳನ್ನು ತೋರಿಸಿ, ನನ್ನನ್ನು ಬ್ಲ್ಯಾಕ್ ಮೇಲ್ ಮಾಡತೊಡಗಿದ್ದ. ಕೊನೆಗೆ ಅತ್ಯಾಚಾರವನ್ನೂ ಮಾಡಿದ ಎಂದು ಯುವತಿ ಪೊಲೀಸರಿಗೆ ದೂರು ಮೂಲಕ ತಿಳಿಸಿದ್ದಾಳೆ.

ಅಪಾಯವನ್ನರಿತ ಯುವತಿ ಘಟನೆಯ ಬಳಿಕ ಬಾಬಾನತ್ತ ಸುಳಿಯುವುದನ್ನು ಬಿಟ್ಟಳು. ಆದರೆ ಅವ ಫೋಟೋ ತೋರಿಸಿ, ಬೆದರಿಕೆಯೊಡ್ಡತೊಡಗಿದ. ಅಷ್ಟೇ ಅಲ್ಲ 30,000 ರುಪಾಯಿ ಹಣ ನಿಡುವಂತೆಯೂ ಪೀಡಿಸತೊಡಗಿದ. ಜತೆಗೆ, ಮದುವೆಗೆಂದು ತೆಗೆದಿರಿಸಿರುವ ಆಭರಣಗಳನ್ನೂ ಕೊಡುವಂತೆ ಕೇಳಿದ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.

ಆದರೆ ಯುವತಿ ಇದ್ಯಾವುದಕ್ಕೂ ಬಗ್ಗಲಿಲ್ಲ. ಕೊನೆಗೆ ಮನೆಯವರಿಗೂ ಕಳೆದ ಗುರುವಾರ ವಿಷಯ ತಿಳಿಸಿದಳು. ನೆರೆಹೊರೆಯವರೂ ಜತೆಯಾಗಿ ಪೊಲೀಸರ ಸಹಾಯ ಪಡೆಯುವುದಕ್ಕೂ ಮುನ್ನ ಬಾಬಾ ಮನೆಗೆ ತೆರಳಿ, ಅವನಿಗೆ ಸರಿಯಾಗಿ ಗೂಸಾ ಕೊಟ್ಟರು. ಸ್ವಲ್ಪ ಸಮಯದ ನಂತರ ಬಂದ ಪೊಲೀಸರು ಬಾಬಾನನ್ನು ಆಸ್ಪತ್ರೆಗೆ ಸೇರಿಸಿ, ಅವನ ವಿರುದ್ಧ ಕೇಸು ದಾಖಲಿಸಿದ್ದಾರೆ

ಈ ಸುದ್ದಿ ಚಿತ್ರವನ್ನು ನೀವು ನೋಡದಿರುವುದೇ ಲೇಸು

ಬೆಂಗಳೂರು, ಜುಲೈ 5: ಈ ಸುಂದರ, ಸುಕೋಮಲ ನಗ್ನ ಯುವತಿಯ ಚಿತ್ರ ಜಗತ್ತಿನಾದ್ಯಂತ ಇಂಟರ್ನೆಟ್‌ ನೋಡುಗರನ್ನು ಭಾವೋದ್ರಕಗೊಳಿಸುತ್ತಿದೆ. ಈ ರೋಮಾಂಚನ ಸೋಂಕಿನಂತೆ ಹಬ್ಬುತ್ತಿದೆ.

ಮೊದಲ ಏಟಿಗೆ ಅಲ್ಲಲ್ಲ ನೋಟಕ್ಕೆ ದಪ್ಪ ಮಹಿಳೆಯನ್ನು ಯುವತಿಯೊಬ್ಬಳು ಆಪ್ಯಾಯಮಾನದಿಂದ ಬಳಸಿಕೊಂಡು ನಿಂತಂತಿದೆ. ಅವಳ ಮಾನ ಮುಚ್ಚ. ಅದೆಂಗೆ ಅಷ್ಟು ಮಂದಿಯ ಮಧ್ಯೆ ನಗ್ನಳಾಗಿದ್ದಾಳೆ ಎಂದು ಮೂಗು ಮುರಿಯಬೇಡಿ. ದಿಟ್ಟ ಪೋಸ್ ನೀಡಿರುವ ಈ ಯುವತಿಯತ್ತ ಸ್ವಲ್ಪ ಸಾವಕಾಶವಾಗಿ ಮತ್ತೊಮ್ಮೆ, ಮಗದೊಮ್ಮೆ ದಿಟ್ಟಿಸಿ ನೋಡಿ. ಥತ್ ನಿಮ್ಮ... 'ಅದು' ಆಯಮ್ಮನ ನಗ್ನ ತೋಳು ಕಣ್ರಿ!

'ಆಕ್ವರ್ಡ್ ಮೊಮೆಂಟ್' ಎಂಬ ಅಡಿಬರಹದ ಈ ಚಿತ್ರ ಈಗಾಗಲೇ ಪಡ್ಡೆ ಹುಡುಗರ ಕೈಗೆ ಸಿಕ್ಕಿ ನಜ್ಜುಗೊಜ್ಜಾಗಿದೆ. ನೀವೂ ವಸಿ ನೋಡಿ ಆನಂದಿಸಿ. ಆದರೆ ಹೆಂಗೆಳೆಯರಿಗೆ ಒಂದು ಎಚ್ಚರಿಕೆ! ದಢೂತಿಯರ ಪಕ್ಕದಲ್ಲಿ ನಿಂತು ಪೋಸ್ ಕೊಡುವ ಮುನ್ನ ಯಾವ ಭಂಗಿಯಲ್ಲಿ ನಿಂತಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಅವರಿಗೆ ಎಲ್ಲೆಲ್ಲಿ ಟೈರುಗಳು ಬಂದಿರುತ್ತವೆ ಎಂದು ಹೇಳಲಾಗದು. ಇಲ್ಲವಾದಲ್ಲಿ, ಅನ್ಯಥಾ ಮುಜುಗರಂ ನಿಮ್ಮದಾಗುವುದುಂ...

ಇಷ್ಟಕ್ಕೂ ಅಯಮ್ಮ ಯಾರು? ಈ ಬಾಲೆ ಯಾಕಾಗಿ ಆ ದೊಡ್ಡಮ್ಮನ ಮೇಲೆ ಬಳ್ಳಿಯಂತೆ ಬಾಗಿ ನಿಂತಿದ್ದಾಳೆ? ಸಂದರ್ಭ ಏನು? ಎಂಬ ಪ್ರಶ್ನೆಗಳನ್ನು ಕೇಳುತ್ತಾ ಸಮಯ ಹಾಳು ಮಾಡಬೇಡಿ, ಹಾಗೇ ಸುಮ್ಮನೇ ನೋಡುತ್ತಾ ಎಂಜಾಯ್ ಮಾಡಿ!

ವಿಂಡೋಸ್ ಎಕ್ಸ್ ಪಿ ಸಾಯಲು ಸಾವಿರ ದಿನ ಬಾಕಿ

ಸ್ಯಾನ್ ಫ್ರಾನ್ಸಿಸ್ಕೋ ಜು 15: ಸಾಫ್ ವೇರ್ ದಿಗ್ಗಜ ಮೈಕ್ರೋಸಾಫ್ಟ್ ತನ್ನ ಬಹು ಜನಪ್ರಿಯ ಆಪರೇಟಿಂಗ್ ಸಿಸ್ಟಮ್ ವಿಂಡೋಸ್ ಎಕ್ಸ್ ಪಿಗೆ ಡೇತ್ ಡೇ ಫಿಕ್ಸ್ ಮಾಡಿದೆ. ಕಂಪನಿ ಮೂಲಗಳ ಪ್ರಕಾರ, ವಿಂಡೋಸ್ ಎಕ್ಸ್ ಪಿ ಇನ್ನು ಉಳಿದಿರುವುದು ಸಾವಿರ ದಿನಗಳು ಮಾತ್ರ. ಜು.11 ರಿಂದ ಎಕ್ಸ್ ಪಿ ಸಾವಿನ ದಿನಗಳ ಎಣಿಕೆ ಆರಂಭವಾಗಿದೆ. ನಂತರ ಎಕ್ಸ್ ಪಿ ಸೇವೆ ಸಂಪೂರ್ಣ ನಿಲ್ಲಿಸಲಾಗುವುದು ಎಂದು ಮೈಕ್ರೋ ಸಾಫ್ಟ್ ಸಂಸ್ಥೆಯ ಸ್ಟೀಫನ್ ರೋಸ್ ಹೇಳಿದ್ದಾರೆ.
  Read:  In English 
ವಿಂಡೋಸ್ 7 ಗೆ ಹೆಚ್ಚಿನ ಪ್ರಚಾರ ನೀಡಬೇಕಿದೆ. ಎಕ್ಸ್ ಪಿ ಬದಲಿಗೆ ಹೆಚ್ಚಿನ ಸೌಲಭ್ಯವುಳ್ಳ ಇತರೆ ಆಪರೇಟಿಂಗ್ ಸಿಸ್ಟಮ್ ಬಳಕೆಗೆ ಅವಕಾಶ ಕಲ್ಪಿಸಲಾಗುವುದು. ಲಕ್ಷಾಂತರ ಕಂಪ್ಯೂಟರ್ ಗಳ ಮೊದಲ ಆಯ್ಕೆಯಾಗಿ ಇಂದಿಗೂ ವಿಂಡೋಸ್ ಎಕ್ಸ್ ಪಿ ಜನಪ್ರಿಯತೆ ಉಳಿಸಿಕೊಂಡಿದೆ. ಆದರೆ, 2014ರ ನಂತರ ಎಕ್ಸ್ ಪಿ ಸಂಪೂರ್ನ ನಿರ್ನಾಮವಾಗಲಿದೆ.

ಮೈಕ್ರೋಸಾಫ್ಟ್ ಕಡೆಯಿಂದ ಯಾವುದೇ ಪ್ಯಾಚ್ ಹಾಗೂ ತಾಂತ್ರಿಕ ಬೆಂಬಲ ಗ್ರಾಹಕರಿಗೆ ಸಿಗುವುದಿಲ್ಲ. ಒಂದು ವೇಳೆ ಎಕ್ಸ್ ಪಿ ಬಳಸಿದರೂ ಸುರಕ್ಷತೆ ಇರುವುದಿಲ್ಲ. ಬದಲಿಗೆ ವಿಂಡೋಸ್ 7 ಬಳಸಲೇ ಬೇಕಾದ ಅನಿವಾರ್ಯತೆ ಉಂಟಾಗಲಿದೆ. ಈ ಮಧ್ಯೆ ಮೈಕ್ರೋಸಾಫ್ಟ್ ವಿಂಡೋಸ್ 7 ಜನಪ್ರಿಯತೆ ನಂತರ ವಿಂಡೋಸ್ 8 ಅನ್ನು 2012ರಲ್ಲಿ ಹೊರ ತರಲಿದೆ.

ಅಪ್ಪಟ ಕನ್ನಡ ಪತ್ರಿಕೆ ಕರವೇ 'ನಲ್ನುಡಿ'ಯ ಜುಲೈ ಸೊಬಗು

ಪಕ್ಕದಲ್ಲಿದೆ ಜುಲೈ ತಿಂಗಳ ಕರವೇ ನಲ್ನುಡಿ. ಅಮಾವಾಸ್ಯೆಯ ರಾತ್ರಿಯಲ್ಲಿ ಹೊಳೆಯುವ ತಾರೆಗಳಂತೆ ಕಪ್ಪು ಹಿನ್ನೆಲೆಯಲ್ಲಿ ಬಣ್ಣಬಣ್ಣದ ಫೋಟೋಗಳಿರುವ ವಿನ್ಯಾಸ ಮತ್ತು ಕಲೆಯ ಮುದ್ರಣದ ಮುದ್ದಾದ 'ಮುಖಪುಟ'. ಮುಖವನ್ನು ಆಚೀಚೆ ಅಲ್ಲಾಡಿಸಲು ಬಿಡದಂತೆ ಚಿತ್ರಗಳಿಗೆ ಹೊಂದಿಕೊಂಡ 'ಶೀರ್ಷಿಕೆಗಳು'. ಆಹಾ!... ನಮಗೇಕೆ ಎರಡೇ ಎರಡು ಕಣ್ಣುಗಳು ಎನಿಸದಿರದು.

ಮೊದಲ ಪುಟದಲ್ಲಿ, ಪ್ರಸ್ತುತ ವಿದ್ಯಮಾನದ ವಿಷಯಕ್ಕೆ ಸಂಬಂಧಿಸಿದ, ವಿಶೇಷ ಅಧ್ಯಯನದಿಂದ ಮಂಡಿಸಲ್ಪಟ್ಟ, ಸಾಮಾಜಿಕ ಕಳಕಳಿಯಿಂದ ಕೂಡಿದ ದೂರದೃಷ್ಟಿಯುಳ್ಳ ಸಂಪಾದಕಿ ವಿಶಾಲಾಕ್ಷಿ ಅವರ ಸಂಪಾದಕೀಯ. 'ಒಳಪುಟಗಳಲ್ಲಿ ಏನೇನಿದೆ' ಎಂಬ ವಿವರಣೆ ಸಂಪಾದಕೀಯದ ಮುಂದಿನ ಪುಟದಲ್ಲಿ. ಅದು ಹತ್ತಿಯ ಮೇಲಿರುವ ಹವಳದಂತೆ. ಏನಿಲ್ಲ, ಏನಿದೆ ಅಂತ ನೋಡ ಹೊರಟರೆ ಅದೊಂದು ಫುಲ್ ಮೀಲ್ಸ್. ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾಗಿರುವ ಟಿ. ಎ. ನಾರಾಯಣಗೌಡರ 'ನೇರನುಡಿ' ಯಿಂದ ಪ್ರಾರಂಭವಾಗಿ ಸಮಾಜಮುಖಿ 'ಒಡಲನುಡಿ' ಯೊಂದಿಗೆ ಕೊನೆಗೊಳ್ಳುವ ಈ ಮಾಸಿಕ ನಿಜವಾಗಿಯೂ ಒಂದು ಅಚ್ಚರಿ, ಅಮೂಲ್ಯ ರತ್ನ.

ಈ ಸಂಚಿಕೆಯ ಒಳಪುಟಗಳಲ್ಲಿ ಡಾ.ದೊಡ್ಡರಂಗೇಗೌಡ ಅವರ " ಅನನ್ಯ ಕಲಾಕೃತಿ ಮೂಡಬೇಕಾದರೆ ಅಸಾಧ್ಯ ಪರಿಶ್ರಮ ಬೇಕೇ ಬೇಕು " ಎಂಬ ಅನುಭವದ ಹೊನ್ನುಡಿ. ಅಪ್ಪಗೆರೆ ತಿಮ್ಮರಾಜುರವರ " ಮೂಲ ಜಾನಪದ ಕಲಾವಿದರ ದುಃಖ ದುಮ್ಮಾನಗಳು ಎಂಬ ಸ್ವಾನುಭವದ ಹಿನ್ನೆಲೆಯಿಂದ ಮೂಡಿರುವ ಜಾನಪದ ಕಲಾವಿದರ ಜೀವನದ ಅನಾವರಣ. ಕರ್ನಾಟಕ ಪ್ರಶಸ್ತಿಯ ಪ್ರತಿಭೆಯಲ್ಲಿ ದೇಜಗೌ ಅವರನ್ನು ಕುರಿತ ಬರಹ. 'ಸ್ವಾಮಿಗಳು ಮಠದಲಿಲ್ಲ' ಎಂಬ ತೀರ್ಪುಗಾರರ ಮೆಚ್ಚುಗೆ ಪಡೆದಿರುವ ಕಥೆ, ಡಾ. ಜಿ.ಎಂ. ಹೆಗಡೆಯವರ ಕನ್ನಡ ಪರಿಚಾರಿಕೆ, ಕಲೆ, ಕಾವ್ಯ, ವೈಚಾರಿಕ ಲೇಖನ. ರಂಗನುಡಿ ಹೀಗೆ ಒಂದೇ ಎರಡೇ! ಸಾಕಷ್ಟು ಸಾಧ್ಯತೆಗಳ ಸಂಗ್ರಹ ಈ ಮಾಸಿಕ.

ಹಿಂದಿನ ಸಂಚಿಕೆಯನ್ನು ಹುಡುಕುವಂತೆ, ಮುಂದಿನ ಸಂಚಿಕೆಯನ್ನು ಕಾಯುವಂತೆ ಮಾಡಿರುವ ಈ ಸಂಚಿಕೆ ಈಗ ದಿನವಿಡೀ ಕಾಡುತ್ತಿರುವುದೂ ನಿಜ! ಮಾಡಲೇಬೇಕಾಗಿರುವ ಮಾಧ್ಯಮಗಳ ಕೆಲವು ಕರ್ತವ್ಯಗಳಿಗೇ ಇದು ಒಂದು ಕನ್ನಡಿ, ಮಾಡಬೇಕಾಗಿರುವ ಕೆಲಸಗಳಿಗೆ ಮನ್ನುಡಿಯೂ ಎನ್ನಬಹುದು.

'ಕರ್ನಾಟಕ ರಕ್ಷಣಾ ವೇದಿಕೆ'ಯಿಂದ ಹೊರಬರುತ್ತಿರುವ ಈ ಮಾಸಿಕ ಕರ್ನಾಟಕದ ಜನರಿಗೆ ಇದರಲ್ಲಿರುವ ವೈವಿಧ್ಯಮಯ ಬರಹಗಳ ಮೂಲಕ 'ರಕ್ಷಣೆಯ' ಬೆಚ್ಚನೆ ಭಾವವನ್ನು ಕೊಡುತ್ತಿರುವುದು ಮೆಚ್ಚಲೇಬೇಕಾದ ಅಂಶ. ಮುಂದಿನ ಸಂಚಿಕೆಗಳಲ್ಲೂ ಇದೇ ವೈವಿಧ್ಯತೆ, ಕಾಳಜಿ ಇರಲೆಂದು ಆಶಿಸುವ ಕರ್ನಾಟಕದ ಜನತೆಗೆ ನಿರಾಶೆಯಾಗಲಾರದೆಂದು ನಾವೂ ಆಶಿಸುತ್ತೇವೆ

ವಿವಾಹಿತ ವ್ಯಕ್ತಿಗಳ ಅಕ್ರಮ ಸಂಬಂಧ ಸಮ್ಮತವಲ್ಲ:ಕೋರ್ಟ್

ಮುಂಬೈ, ಜು 12: ಇಬ್ಬರು ವಿವಾಹಿತ ವ್ಯಕ್ತಿಗಳಿಗೆ ಅನೈತಿಕ ವೈವಾಹಿಕ ಸಂಬಂಧವಿರಿಸಿಕೊಳ್ಳುವ ಸ್ವಾತಂತ್ರ್ಯ ಇಲ್ಲ ಎಂದು ಮುಂಬೈ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ವ್ಯಭಿಚಾರ ದಂಡನಾರ್ಹವಾಗಿರುವ ಐಪಿಸಿ ಸೆಕ್ಷನ್‌ 497ರ ಸಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ನಗರದ ಉದ್ಯಮಿಯೊಬ್ಬರು ಹೂಡಿದ ದಾವೆಯನ್ನು ಉಚ್ಚ ನ್ಯಾಯಾಲಯ ವಜಾಗೊಳಿಸಿ, ಈ ತೀರ್ಪು ನೀಡಿದೆ.

ವ್ಯಭಿಚಾರ ವಿವಾಹದ ಪವಿತ್ರತೆಗೆ ವಿರುದ್ಧವಾಗಿದೆ ಎಂದು ಪರಿಗಣಿಸಲಾಗಿದೆ. ವ್ಯಭಿಚಾರ ದಂಡನಾರ್ಹ ಅಲ್ಲವೆಂದು ಮಾಡಿದರೆ ಅನೈತಿಕ ವೈವಾಹಿಕ ಸಂಬಂಧಗಳಿಗೆ ಯಾವುದೇ ನಿರ್ಬಂಧವಿಲ್ಲ ಎಂದು ಮಾಡಿದಂತಾಗುತ್ತದೆ. ಇದು ವಿವಾಹ ಸಂಬಂಧದ ಸ್ಥಿರತೆ ಮೇಲೆ ಪರಿಣಾಮ ಬೀರಲಿದೆ ಎಂದು ವಿಭಾಗೀಯ ನ್ಯಾಯಪೀಠದ ಜಸ್ಟೀಸ್‌ ಬಿ.ಎಚ್‌. ಮರ್ಲಪಳ್ಳೆ ಮತ್ತು ಯು.ಡಿ.ಸಾಳ್ವಿ ಅಭಿಪ್ರಾಯಪಟ್ಟರು.

ವಿವಾಹಿತ ಪರ ಸ್ತ್ರೀಯೊಂದಿಗೆ ಅನೈತಿಕ ಸಂಬಂಧವಿರಿಸಿದ ಆರೋಪದಲ್ಲಿ 497 ಸೆಕ್ಷನ್‌ ಪ್ರಕಾರ ಕ್ರಿಮಿನಲ್‌ ವಿಚಾರಣೆ ಎದುರಿಸುತ್ತಿರುವ ಈ ಉದ್ಯಮಿ ಅರ್ಜಿ ಹೂಡಿದ್ದರು. ಪ್ರೌಢ ವ್ಯಕ್ತಿಯೊಂದಿಗೆ ಸಹಮತದ ಲೈಂಗಿಕ ಸಂಬಂಧ ಬೆಳೆಸುವುದು ಜೀವನದ ಮೂಲಭೂತ ಹಕ್ಕಾಗಿದೆ ಎಂದು ಅವರು ವಾದಿಸಿದ್ದರು.

ಐಪಿಸಿ ಸೆಕ್ಷನ್‌ 497 ವ್ಯಕ್ತಿಯ ಸಂವಿಧಾನಬದ್ಧ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ ಎಂದು ಮಂಡಿಸಿದ ವಾದಗಳಲ್ಲಿ ನಮಗೆ ಯಾವುದೇ ದೃಢವಾದ ಆಧಾರ ಸಿಕ್ಕಿಲ್ಲ. ವ್ಯಭಿಚಾರ ಕೆಲವು ರಾಷ್ಟ್ರಗಳಲ್ಲಿ ಮಾತ್ರ ಅಪರಾಧವಾಗಿದೆ‌ ಎನ್ನುವ ಕಾರಣಕ್ಕೆ ಮಾತ್ರ ಐಪಿಸಿ 497 ಸೆಕ್ಷನ್‌ ಅನ್ನು ಅಸಿಂಧು ಮಾಡಲಾಗದು ಎಂದು ಮರ್ಲಪಳ್ಳೆ ಹೇಳಿದರು

ಅನಂತ ಗುಪ್ತ ನಿಧಿ: ಕಾಡತೊಡಗಿದೆ ಸಂರಕ್ಷಣೆಯ ಭೀತಿ


ತಿರುವನಂತಪುರಂ, ಜುಲೈ 4: ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದ ರಹಸ್ಯ ಕೊಠಡಿಗಳಲ್ಲಿ ಪತ್ತೆಯಾಗಿರುವ ಅಪಾರ ಪ್ರಮಾಣದ ಸಂಪತ್ತನ್ನು ಸಂರಕ್ಷಿಸುವುದು ಹೇಗೆಂಬುದು ಈಗ ಎಲ್ಲರ ಚಿಂತೆಯ ವಿಷಯ.

ರಹಸ್ಯ ಕೊಠಡಿಯ ತೆರೆಯುವ ತನಕ ಈ ದೇವಸ್ಥಾನಕ್ಕೆ ಸಾಧಾರಣವಾದ ಬಂದೋಬಸ್ತಿನ ವ್ಯವಸ್ಥೆಯಿತ್ತು. ಆದರೆ ಈಗ ಅಬೇಧ್ಯ ರಕ್ಷಣಾ ವ್ಯವಸ್ಥೆಯನ್ನು ಮಾಡಲಾಗಿದ್ದರೂ ಸುದೀರ್ಘ‌ ಕಾಲ ಸಂಪತ್ತನ್ನು ರಕ್ಷಿಸಿಡಬೇಕಾದ ಚಿಂತೆ ಸರಕಾರವನ್ನು ಕಾಡುತ್ತಿದೆ. ಒಟ್ಟಾರೆ ಸುಮಾರು 1 ಲಕ್ಷ ಕೋಟಿ ರುಪಾಯಿ ಮೇಲ್ಪಟ್ಟು ಬೆಲೆಬಾಳುವ ಸಂಪತ್ತು ದೇವಸ್ಥಾನದ ರಹಸ್ಯ ಕೊಠಡಿಗಳಲ್ಲಿದೆ.

ಸುಪ್ರೀಂ ಕೋರ್ಟ್‌ ನೇಮಿಸಿರುವ ಏಳು ಸದಸ್ಯರ ಸಮಿತಿ ಸಂಪತ್ತಿನ ತಪಶೀಲು ಪಟ್ಟಿ ತಯಾರಿಸುತ್ತಿದ್ದು, ಶನಿವಾರದ ತನಕ ಸುಮಾರು 1 ಲಕ್ಷ ಕೋಟಿ ರು. ಸಂಪತ್ತು ಸಿಕ್ಕಿದೆ. ಭಾನುವಾರ ತಪಶೀಲು ಪಟ್ಟಿ ತಯಾರಿಸುವ ಪ್ರಕ್ರಿಯೆಗೆ ವಿರಾಮ ನೀಡಲಾಗಿದ್ದು, ಸೋಮವಾರ ಮುಂದುವರಿಯುತ್ತದೆ.

ಜಗತ್ತಿನ ಅತ್ಯಂತ ಶ್ರೀಮಂತ ಹಿಂದು ದೇವಸ್ಥಾನವಾಗಿ ಮೂಡಿ ಬಂದಿರುವ ಹಿನ್ನೆಲೆಯಲ್ಲಿ ಅಬೇಧ್ಯ ರಕ್ಷಣಾ ವ್ಯವಸ್ಥೆಯನ್ನು ಮಾಡುವ ಅಗತ್ಯವೂ ತಲೆದೋರಿದೆ. ಐತಿಹಾಸಿಕ ಮಹತ್ವವುಳ್ಳ ಈ ದೇವಾಲಯ ಮತ್ತು ಇಲ್ಲಿ ದೊರೆತಿರುವ ಭಾರಿ ಸಂಪತ್ತಿನ ಸಂರಕ್ಷಣೆ ಹೇಗೆ ಎನ್ನುವ ಪ್ರಶ್ನೆ ಇತಿಹಾಸಕಾರರು, ಪ್ರಾಧ್ಯಾಪಕರು ಹಾಗೂ ದೇವಾಲಯ ಸಂಸ್ಕೃತಿ ಕುರಿತ ಕುತೂಹಲಿಗಳನ್ನು ಕಾಡತೊಡಗಿದೆ.

ಸ್ವಾತಂತ್ರ್ಯಪೂರ್ವದ ಇತರ ಹಲವು ರಾಜಮನೆತನಗಳಲ್ಲಿ ಈ ರೀತಿ ಅಪಾರ ಪ್ರಮಾಣದ ಸಂಪತ್ತು ಇತ್ತು. ಆದರೆ ಅದು ದಾಳಿಕೋರರ ಪಾಲಾಗಿದೆ ಅಥವ ರಾಜಮನೆತನದವರೇ ಅವುಗಳನ್ನು ಬಳಸಿಕೊಂಡಿದ್ದಾರೆ. ಆದರೆ ಈ ಖಜಾನೆ ತಿರುವಾಂಕೂರು ಸಂಸ್ಥಾನವನ್ನಾಳಿದವರ ಪ್ರಾಮಾಣಿಕತೆ ಮತ್ತು ಸರಳತೆಯ ಸಂಕೇತದಂತಿದೆ. ಅವರು ಈ ಸ್ವತ್ತಿನಲ್ಲಿ ಏನೊಂದನ್ನೂ ತೆಗೆದುಕೊಂಡು ಹೋಗಿಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

'ಶತಮಾನಗಳಿಂದ ದೇವಾಲಯದ ನೆಲಮಾಳಿಗೆಯಲ್ಲಿದ್ದ ಈ ಭಂಡಾರವನ್ನು ಮುಂದಿನ ಪೀಳಿಗೆಗಾಗಿ ಸಂರಕ್ಷಿಸಬೇಕು' ಎಂದು ಇತಿಹಾಸಕಾರ ಮತ್ತು ಲೇಖಕ ಎಂ.ಜಿ. ಶಶಿಭೂಷಣ್ ಹೇಳಿದ್ದಾರೆ.

ಈ ಸಂಪತ್ತನ್ನು ಬಹಳ ಎಚ್ಚರಿಕೆ ಹಾಗೂ ಕಾಳಜಿಯಿಂದ ಸಂರಕ್ಷಿಸಿಡಬೇಕೆಂದು ಇಂಡಿಯನ್‌ ಹಿಸ್ಟರಿ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ನಾರಾಯಣನ್‌ ಸಹಿತ ಹಲವು ಇತಿಹಾಸಕಾರರು ಒತ್ತಾಯಿಸಿದ್ದಾರೆ. ಇದು ತಿರುವಾಂಕೂರು ರಾಜಮನೆತನದವರ ಆಧೀನದಲ್ಲಿರುವ ದೇವಸ್ಥಾನಕ್ಕೆ ಸಂಪತ್ತಾಗಿರುವುದರಿಂದ ಇಷ್ಟರ ತನಕ ಪಾಲಿಸಿಕೊಂಡು ಬಂದಿರುವ ಪರಂಪರೆಯ ಪ್ರಕಾರ ಸರಕಾರ ಅದನ್ನು ವಶಪಡಿಸಿಕೊಳ್ಳುವಂತಿಲ್ಲ. ಸರಕಾರದ ಆಧೀನಕ್ಕೊಳಪಟ್ಟ ದೇವಸ್ಥಾನಗಳು ದುರಾಡಳಿತದಿಂದ ನಾಶವಾಗಿರುವ ಅನೇಕ ಉದಾಹರಣೆಗಳು ನಮ್ಮೆದುರಿಗಿವೆ. ಅನಂತಪದ್ಮನಾಭ ಸ್ವಾಮಿ ದೇವಸ್ಥಾನಕ್ಕೆ ಈ ಗತಿಯಾಗಬಾರದು ಎಂದು ನಾರಾಯಣನ್‌ ಹೇಳಿದ್ದಾರೆ.

ರಹಸ್ಯ ಕೊಠಡಿಗಳಲ್ಲಿ ಪತ್ತೆಯಾಗಿರುವ ಕೆಲವೊಂದು ವಸ್ತುಗಳನ್ನು ವಸ್ತು ಸಂಗ್ರಹಾಲಯದಲ್ಲಿ ಸಾರ್ವಜನಿಕ ವೀಕ್ಷಣೆಗಾಗಿ ಇಡಬಹುದು. ಉಳಿದ ಸಂಪತ್ತನ್ನು ಸುರಕ್ಷಿತವಾಗಿ ಕಾಪಿಡಬೇಕೆಂದು ಅವರು ಸಲಹೆ ಮಾಡಿದ್ದಾರೆ.

1947ರ ಬಳಿಕ ಹೆಚ್ಚಿನೆಲ್ಲ ದೇವಸ್ಥಾನಗಳ ಆಡಳಿತವನ್ನು ತಿರುವಾಂಕೂರು ದೇವಸ್ವಂ ಬೋರ್ಡ್‌ಗೆ ಬಿಟ್ಟುಕೊಡಲಾಗಿದ್ದರೂ ಅನಂತ ಪದ್ಮನಾಭಸ್ವಾಮಿ ದೇವಸ್ಥಾನದ ಆಡಳಿತ ಮಾತ್ರ ರಾಜಮನೆತನದವರ ಆಧೀನದಲ್ಲಿತ್ತು.ಕೊನೆಯ ರಾಜ ಚಿತ್ತಿರಾ ತಿರುನಾಲ್‌ ಬಲರಾಮ ವರ್ಮ ಅವರನ್ನು ದೇವಸ್ಥಾನಗಳ ವಿಲಯನದ ಬಳಿಕ ರಾಜಪ್ರಮುಖರೆಂದು ಹೆಸರಿಸಿದರೂ ಅವರು ರಹಸ್ಯ ಕೊಠಡಿಗಳಲ್ಲಿರುವ ಸಂಪತ್ತನ್ನು ಮುಟ್ಟಿಲ್ಲ.

ಈ ನಡುವೆ ವಿಶ್ವಹಿಂದು ಪರಿಷತ್‌, ನಾಯರ್ ಸರ್ವಿಸ್‌ ಸೊಸೈಟಿ, ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ ಮುಂತಾದ ಸಂಘಟನೆಗಳು ಸಂಪತ್ತನ್ನು ಸರಕಾರ ವಶಪಡಿಸಿಕೊಳ್ಳಬಾರದು ಎಂದು ಎಚ್ಚರಿಸಿವೆ

ಉಕ್ಕಿನ ಬಾಗಿಲು ಅಡ್ಡ: ಅನಂತ ನಿಧಿ ಪರಿಶೋಧನೆ ಶುಕ್ರವಾರಕ್ಕೆ

ತಿರುವನಂತಪುರಂ, ಜುಲೈ 5: ಇಲ್ಲಿನ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ ನೆಲಮಾಳಿಗೆಯ ಇನ್ನೂ ಒಂದು ಕೊಠಡಿಯಲ್ಲಿರುವ ನಿಧಿಯ ಪರಿಶೋಧನೆಯನ್ನು ಸದ್ಯಕ್ಕೆ ಕೈಬಿಟ್ಟಿದ್ದು, ಶುಕ್ರವಾರ ಮುಂದುವರಿಸಲು ನಿರ್ಧರಿಸಲಾಗಿದೆ. 'ಬಿ' ಕೊಠಡಿಯ ಎರಡು ಮರದ ಬಾಗಿಲುಗಳನ್ನು ತೆರೆಯಲು ಸಾಧ್ಯವಾದರೂ ಪ್ರಾಚೀನ ಕಾಲದ ಉಕ್ಕಿನಿಂದ ಮಾಡಿರುವ ಮೂರನೇ ಬಾಗಿಲಿನ ಬೀಗ ತೆಗೆಯಲು ಸಾಧ್ಯವಾಗದ ಕಾರಣ ವಿಳಂವಾಗಿದೆ.

ಆರು ಕೊಠಡಿಯೊಳಗಿನ ವಸ್ತುಗಳ ಪರಿಶೀಲನೆ ಮೇಲ್ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್ ನೇಮಿಸಿದ ವಿಶೇಷ ಸಮಿತಿಯು ಸೋಮವಾರದವರೆಗೆ ಐದು ಕೊಠಡಿಗಳ ಅವಲೋಕನ ಪೂರ್ಣಗೊಳಿಸಿದೆ. ರಹಸ್ಯ ಕೊಠಡಿ 'ಬಿ' ತೆರೆಯಲು ವಿಶೇಷ ಪರಿಣತಿ ಅಗತ್ಯವಾದ್ದರಿಂದ ಶುಕ್ರವಾರ ಸಭೆ ಸೇರಿ ಆ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದಾಗಿ ಸಮಿತಿ ನೇತೃತ್ವ ವಹಿಸಿರುವ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಂ.ಎನ್. ಕೃಷ್ಣನ್ ತಿಳಿಸಿದ್ದಾರೆ.

ದೇವಸ್ಥಾನದ ಆಸ್ತಿ ಕಬಳಿಸುವ ಯತ್ನ ನಡೆಯುತ್ತಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿ, ಸುಪ್ರೀಂಕೋರ್ಟ್ ನ್ಯಾಯವಾದಿ ಟಿ.ಪಿ. ಸುಂದರರಾಜನ್ ಅವರು ಕೋರ್ಟ್ ಮೊರೆ ಹೋದ ಪರಿಣಾಮ ಪದ್ಮನಾಭಸ್ವಾಮಿ ದೇಗುಲದ ಅನಂತ ಸಂಪತ್ತು ಒಂದೊಂದಾಗಿ ಪತ್ತೆಯಾಗುತ್ತಿದೆ.

ಅನಂತ ನಿಧಿ: 'ಬಿ' ಉಗ್ರಾಣ ತೆಗೆಯುವುದು ಅಪಶಕುನ

ತಿರುವನಂತಪುರ, ಜುಲೈ 6: ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಆರನೇ ರಹಸ್ಯ ಉಗ್ರಾಣ ತೆರೆಯುವುದನ್ನು ಮುಂದೂಡಲು ಪುರಾಣ ಪ್ರತೀತಿ, ನಂಬಿಕೆಯೇ ಕಾರಣ ಎಂದು ತಿಳಿದುಬಂದಿದೆ.

ನಂಬಿಕೆಗಳ ಪ್ರಕಾರ 'ಬಿ' ಉಗ್ರಾಣವನ್ನು ತೆರೆಯುವುದು ಅಪಾಯಕಾರಿ. ಈ ಕೊಠಡಿಯ ಪ್ರಧಾನ ಬಾಗಿಲಿನಲ್ಲಿ ಹಾವಿನ ಮಾದರಿಯೊಂದಿದೆ. ಅದನ್ನು ತೆರೆದರೆ ಅಪಶಕುನ ಕಟ್ಟಿಟ್ಟಬುತ್ತಿ ಎನ್ನಲಾಗುತ್ತಿದೆ. ಅಂತೆಯೇ ಈ ಉಗ್ರಾಣದ ತಳದಲ್ಲಿ ರಹಸ್ಯ ಸುರಂಗವಿದ್ದು, ಇದು ನೇರವಾಗಿ ಸಮುದ್ರಕ್ಕೆ ಕರೆದುಕೊಂಡು ಹೋಗುತ್ತದೆ ಎಂಬಿತ್ಯಾದಿ ನಂಬಿಕೆಗಳಿವೆ.

'ಬಿ' ಉಗ್ರಾಣ ತೆರೆಯುವುದರಿಂದ ಅನಾಹುತಗಳಾಗಬಹುದು ಎಂದು ರಾಜಮನೆತನದವರೂ ಈ ಕೊಠಡಿಯನ್ನು ತೆರೆಯುವುದಕ್ಕೆ ಆಕ್ಷೇಪ ಎತ್ತಿದ್ದಾರೆಂದು ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಸಮಿತಿ ತಜ್ಞರ ಅಭಿಪ್ರಾಯ ಪಡೆದುಕೊಂಡು ಮುಂದುವರಿಯುವ ತೀರ್ಮಾನಕ್ಕೆ ಬಂದಿದೆ.

ಸರ್ವೋಚ್ಚ ನ್ಯಾಯಾಲಯದ ಆದೇಶದ ಪ್ರಕಾರ ದೇವಸ್ಥಾನದ ನೆಲಮಾಳಿಗೆಯ ಉಗ್ರಾಣಗಳಲ್ಲಿರುವ ಸಂಪತ್ತನ್ನು ಎಣಿಸುತ್ತಿರುವ ಏಳು ಜನರ ಸಮಿತಿ ಏಳನೇ ದಿನವಾದ ಸೋಮವಾರ ಹಠಾತ್‌ ಕಾರ್ಯಸ್ಥಗಿತಗೊಳಿಸಿ ಶುಕ್ರವಾರ 'ಬಿ' ಕೊಠಡಿಯ ಬಾಗಿಲು ತೆರೆಯುವ ಕುರಿತು ತೀರ್ಮಾನ ಕೈಗೊಳ್ಳಲು ನಿರ್ಧರಿಸಿದೆ. ಈಗಾಗಲೇ ತೆರೆದಿರುವ ಐದು ಕೊಠಡಿಗಳಲ್ಲಿರುವ ವಸ್ತುಗಳನ್ನು ಎಣಿಸುವ ಕಾರ್ಯ ಮುಗಿದಿದ್ದು, ಒಂದು ಲಕ್ಷ ಕೋಟಿ ರೂ ಮೇಲ್ಪಟ್ಟು ಸಂಪತ್ತು ಸಿಕ್ಕಿದೆ. ಈ ಹಿನ್ನೆಲೆಯಲ್ಲಿ 'ಬಿ' ಉಗ್ರಾಣದಲ್ಲಿ ಎಷ್ಟು ಸಂಪತ್ತು ಇರಬಹುದು ಎಂಬ ಕುತೂಹಲ ಕೆರಳಿರುವಾಗಲೇ ಸಮಿತಿ ಎಣಿಕೆಯ ಕಾರ್ಯವನ್ನು ಅನಿರೀಕ್ಷಿತವಾಗಿ ಮುಂದೂಡಿದೆ.

ಸುಪ್ರೀಂಕೋರ್ಟ್‌ ನೇಮಿಸಿರುವ ಏಳು ಸದಸ್ಯರ ಸಮಿತಿ ಶುಕ್ರವಾರ ಸಮಾಲೋಚಿಸಿ ಮುಂದಿನ ನಡೆಯ ಬಗ್ಗೆ ನಿರ್ದಾರ ಕೈಗೊಳ್ಳಲಿದೆ. ದೇವಸ್ಥಾನಕ್ಕೆ ಸಂಬಂಧಿಸಿದಂತೆ ಜನರಲ್ಲಿ ಅನೇಕ ನಂಬಿಕೆಗಳಿರುವುದರಿಂದ ಸಮಿತಿ ಏಕಪಕ್ಷೀಯವಾಗಿ ವರ್ತಿಸುವುದಿಲ್ಲ. ಅಂತೆಯೇ ಆರನೇ ಉಗ್ರಾಣದ ಬಾಗಿಲು ತೆರೆಯಲು ಕೆಲವೊಂದು ರೀತಿಯ ತಂತ್ರಜ್ಞಾನದ ಅರಿವು ಹೊಂದಿರುವುದು ಕೂಡ ಅಗತ್ಯ ಎಂದು ಸಮಿತಿಯಲ್ಲಿರುವ ನಿವೃತ್ತ ನ್ಯಾಯಾಧೀಶ ಎಂ. ಎನ್‌. ಕೃಷ್ಣನ್‌ ಹೇಳಿದ್ದಾರೆ

'ಪದ್ಮನಾಭ ದೇಗುಲ ರಹಸ್ಯಗಳೆಲ್ಲ 1941ರಲ್ಲೇ ಪ್ರಕಟವಾಗಿತ್ತು'

ತಿರುವನಂತಪುರಂ, ಜುಲೈ 6: ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ನೆಲಮಾಳಿಗೆಯ ರಹಸ್ಯ ಕೊಠಡಿಗಳಲ್ಲಿ ಸಿಕ್ಕಿರುವ ಅಮೂಲ್ಯ ವಸ್ತುಗಳ ಪೈಕಿ ಹೆಚ್ಚಿನವುಗಳ ವಿವರ ಪುರಾತನ 'ಮತಿಲಾಕಂ ರೆಕಾರ್ಡ್ಸ್‌' ಕೃತಿಯಲ್ಲಿ ಭದ್ರವಾಗಿ ಲಾಕ್ ಆಗಿವೆ.

ಮತಿಲಾಕಂ ಎಂದರೆ ಅರಮನೆಯ ದಾಖಲೆಗಳು ಎಂದರ್ಥ. ತಿರುವಾಂಕೂರು ರಾಜಮನೆತನ ಮತ್ತು ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಇತಿಹಾಸದ ದಾಖಲೆಗಳನ್ನು ಮಲಯಾಳಂ ಕವಿ ಉಳ್ಳೂರು ಎಸ್‌. ಪರಮೇಶ್ವರನ್‌ ಅಯ್ಯರ್ 1941ರಲ್ಲಿ ಸಂಕಲಿಸಿ ಪ್ರಕಟಿಸಿದ್ದಾರೆ. ಅಂತೆಯೇ 12 ಆವೃತ್ತಿಗಳಲ್ಲಿರುವ 'ಕೊಟ್ಟಾರಂ' ದಾಖಲೆಯಲ್ಲೂ ಸಂಪತ್ತಿನ ವಿವರಗಳಿವೆ.

ತಿರುವಾಂಕೂರು ಅರಮನೆ ಮತ್ತು ಅನಂತ ಪದ್ಮನಾಭಸ್ವಾಮಿ ಪ್ರತ್ಯೇಕಿಸಿ ನೋಡಲು ಸಾಧ್ಯವಿಲ್ಲ. ತಿರುವಾಂಕೂರಿನ ಇತಿಹಾಸ ಬರೆಯುವಾಗ ಅದರಲ್ಲಿ ದೇವಸ್ಥಾನದ ಇತಿಹಾಸವೂ ಅಂತರ್ಗತವಾಗಿರುತ್ತದೆ. ಮತಿಲಾಕಂನಲ್ಲಿ ದೀರ್ಘ‌ ಕಾಲದಿಂದ ತೆರೆದಿರದಿದ್ದ ರಹಸ್ಯ ಉಗ್ರಾಣಗಳಲ್ಲಿರುವ ವಸ್ತುಗಳ ವಿವರಗಳಿವೆ ಎಂದು ಸಂಕೇತ ಭಾಷೆಯನ್ನು ಓದಿರುವ ಸಾಹಿತಿ ಉಳ್ಳೂರು ಹೇಳಿದ್ದಾರೆ. ಪದ್ಮನಾಭನಿಗೆ ಕಾಣಿಕೆಯಾಗಿ ಸಿಕ್ಕಿರುವ ಎಲ್ಲ ಆಭರಣಗಳ ವಿವರಗಳು ಮತಿಲಾಕಂನಲ್ಲಿದೆ. ಸರಪಳಿಯಂತಹ ಚಿನ್ನದ ಸರಗಳು ತೂಕ, ಉದ್ದ, ಗಾತ್ರ ಹಾಗೂ ಅದಕ್ಕೆ ಪೋಣಿಸಿರುವ ವಜ್ರ, ಮುತ್ತುರತ್ನಗಳ ವಿವರಗಳನ್ನು ಮತಿಲಾಕಂನಲ್ಲಿ ಬರೆದಿಟ್ಟಿದ್ದಾರೆ.

ತಿರುವಾಂಕೂರು ಅರಸರು ಬಹಳ ಜತನದಿಂದ ಹಾಗೂ ಭಯಭಕ್ತಿಯಿಂದ ಅನಂತ ಪದ್ಮನಾಭನ ಸಂಪತ್ತನ್ನು ಸಂರಕ್ಷಿಸಿಟ್ಟಿರುವುದಕ್ಕೆ ಇತಿಹಾಸದಲ್ಲಿ ಅನೇಕ ನಿದರ್ಶನಗಳು ಸಿಗುತ್ತವೆ. ಈ ಪೈಕಿ ಒಂದು ಇಂತಿದೆ. ರಾಜಮನೆತನದ ಸದಸ್ಯರು ಅನಂತ ಪದ್ಮನಾಭನ ದರ್ಶನ ಮಾಡಿ ಹೊರಬರುವಾಗ ಕಾಲಿನಲ್ಲಿರುವ ಮಣ್ಣನ್ನು ಕೂಡ ಅಲ್ಲಿಯೇ ಕೊಡವಿಕೊಳ್ಳುತ್ತಾರೆ. ದೇವರಿಗೆ ಸೇರಿದ ಧೂಳಿನ ಕಣವನ್ನು ಕೂಡ ತಾವು ಒಯ್ದಿಲ್ಲ ಎನ್ನುವುದನ್ನು ತೋರಿಸಿಕೊಡುವ ಸಾಂಕೇತಿಕ ವಿಧಿ ಇದು. ರಾಜ ಮನೆತನದವರು ಈಗಲೂ ಈ ವಿಧಿಯನ್ನು ಪಾಲಿಸುತ್ತಾರೆ.

ಈಗ ರಾಜಮನೆತನಕ್ಕೆ ಮುಖ್ಯಸ್ಥರಾಗಿರುವ ಉತ್ರದಾಮ್‌ ತಿರುನಾಳ್‌ ಮಾರ್ತಾಂಡ ವರ್ಮ ಒಂದು ದಿನ ಅನಂತ ಪದ್ಮನಾಭ ದೇವರ ದರ್ಶನ ಮಾಡಲು ಸಾಧ್ಯವಾಗದಿದ್ದರೆ 151.55 ಪೈಸೆ ತಪ್ಪುಕಾಣಿಕೆ ಒಪ್ಪಿಸುವ ಕ್ರಮವನ್ನು ವಿಧಿವತ್ತಾಗಿ ಪಾಲಿಸಿಕೊಂಡು ಬಂದಿದ್ದಾರೆ. ಅರವನೆಯ ಖರ್ಚು ವೆಚ್ಚಗಳನ್ನು ಸಂಬಾರ ವ್ಯಾಪಾರದಿಂದ ಬರುವ ವರಮಾನದಿಂದ ನಿಭಾಯಿಸಿಕೊಳ್ಳಬೇಕೆ ಹೊರತು, ರಾಜ್ಯದ ಬೊಕ್ಕಸದ ಹಣವನ್ನು ಬಳಸಬಾರದು ಎಂಬ ಅಲಿಖಿತ ನಿಮಯ ಅಂದಿನ ದಿನಗಳಲ್ಲಿ ತಿರುವಾಂಕೂರು ಅರಮನೆಯಲ್ಲಿ ಜಾರಿಯಲ್ಲಿತ್ತು.

ಪ್ರಾಚೀನ ಮಲಯಾಳಂ ಭಾಷೆಯಲ್ಲಿ ಬರೆದಿರುವ ಮತಿಲಾಕಂ ಆಭರಣ ಹಾಗೂ ಮತ್ತಿತರ ವಸ್ತುಗಳ ಸಂಖ್ಯೆ, ರೂಪ, ಗಾತ್ರ ಮತ್ತಿತರ ವಿವರಗಳನ್ನು ಒದಗಿಸುತ್ತಿದೆ. ಉದಾಹರಣೆಗೆ ಹೇಳುವುದಾದರೆ ಸಮಿತಿಗೆ ಸಿಕ್ಕಿರುವ ಭಾರೀ ಗಾತ್ರದ ಸರಕ್ಕೆ ಮತಿಲಾಕಂನಲ್ಲಿ 'ಪೊನ್ನಾಲಿ ಪಟ್ಟತ್ತಾಳಿ' ಎಂಬ ಹೆಸರಿದೆ. ಪೊನ್ನಾಲಿ ಪಟ್ಟತ್ತಾಳಿಗೆ ಪೋಣಿಸಿರುವ ಹವಳ, ಮರಕತ ಮತ್ತು ನೀಲಮಣಿಗಳ ವಿವರವೂ ಅದರಲ್ಲಿದೆ

'ಅನಂತ' ದೇಗುಲ ನಿಧಿ ಬೆಳಕಿಗೆ ಬರಲು ಕಾರಣವೇನು?


ತಿರುವನಂತಪುರಂ, ಜುಲೈ 3: ಕೇರಳ ರಾಜಧಾನಿ ತಿರುವನಂತಪುರಂನ ಅನಂತ ಪದ್ಮನಾಭಸ್ವಾಮಿ ಸದ್ಯಕ್ಕೆ 1 ಲಕ್ಷ ಕೋಟಿ ರು. ನಷ್ಟು ಶ್ರೀಮಂತ! ಮುಂದೆ ಇನ್ನೂ ಹೆಚ್ಚಾಗಬಹುದು. ಇಷ್ಟಕ್ಕೂ ಶತಮಾನಗಳಿಂದ ಕತ್ತಲೆಯ ಕೋಟೆಯಲ್ಲಿ ಗುಪ್ತವಾಗಿದ್ದ ಈ ನಿಧಿ ಈಗ ಬೆಳಕಿಗೆ ಬರುತ್ತಿರುವುದಕ್ಕೆ ಕಾರಣವಾದರೂ ಏನು ಎಂಬ ಕುತೂಹಲದ ಪ್ರಶ್ನೆಗೆ ಉತ್ತರ ...

ಟಿ.ಪಿ. ಸುಂದರರಾಜನ್ ಎಂಬ ವಕೀಲರು ಈ ದೇವಸ್ಥಾನದ ಆಸ್ತಿ ದುರ್ಬಳಕೆ ಆಗುತ್ತಿದೆ ಎಂದು ಕೋರ್ಟ್ ಮೊರೆಹೋಗಿದ್ದರು. ಆಗ ನೆಲಮಾಳಿಗೆಯನ್ನು ತೆರೆದು ಒಳಗೇನಿದೆಯೋ ಪರಿಶೋಧಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿತು. ಅದರಂತೆ ಈಗ ಶೋಧ ಕಾರ್ಯ ಆರಂಭವಾಗಿದೆ ಎಂದು ಸರಳವಾಗಿ ಹೇಳಬಹುದು.

ಅದಕ್ಕೂ ಮುನ್ನ 2007ರಲ್ಲಿ ಏನಾಗಿತ್ತೆಂದರೆ... ಮಾರ್ತಾಂಡ ವರ್ಮಾ ನೇತೃತ್ವದ ದೇವಸ್ಥಾನದ ಟ್ರಸ್ಟ್ ಸದಸ್ಯರು ನೆಲಮಾಳಿಗೆಯನ್ನು ತೆರೆದು ನಿಧಿಗಳ ಫೋಟೋ ತೆಗೆದು ಆಲ್ಬಂ ತಯಾರಿಸಲು ನಿರ್ಧರಿಸಿದ್ದರು. ಟ್ರಸ್ಟ್ ಸೂಚನೆಯಂತೆ ಗ್ಯಾಸ್ ಕಟ್ಟರ್ ಬಳಸಿ ಶತಮಾನಗಳಿಂದ ಮುಚ್ಚಿಡಲಾದ ನೆಲಮಾಳಿಗೆಯ ಬಾಗಿಲನ್ನು ಒಡೆದು ಸುರಂಗ ಮಾರ್ಗದಲ್ಲಿ ಒಳಗಿನ ಗುಹೆಗೆ ಇಳಿದಾಗ ಯಾವುದೇ ನಿಧಿ ಕಾಣಿಸಿರಲಿಲ್ಲ. ಕೇವಲ ಕಲ್ಲು ಮಣ್ಣು ತುಂಬಿತ್ತು. ಗುಪ್ತ ನಿಧಿ ಅಂಥಹುದೇನೂ ಇಲ್ಲವೆಂದು ಟ್ರಸ್ಟ್ ಸದಸ್ಯರು ಸುಮ್ಮನಾದರು.

ಆದರೆ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಯಿತು. 2007ರ ಆಗಸ್ಟ್ 3ರಂದು ಈ ಕುರಿತು ದೇವಸ್ಥಾನದ ಎಕ್ಸಿಕ್ಯೂಟಿವ್ ಅಧಿಕಾರಿ ಮಾರ್ತಾಂಡ ವರ್ಮಾ ಒಂದು ಸರ್ಕ್ಯುಲರ್ ಹೊರಡಿಸಿ, ಇದೆಲ್ಲ ಟ್ರಸ್ಟ್ ನ ಹಕ್ಕು ಎಂದು ಪ್ರತಿಪಾದಿಸಿದರು. ಆದರೆ ಇದರ ವಿರುದ್ಧ ಸುಂದರರಾಜನ್ ನ್ಯಾಯಾಲಯದಲ್ಲಿ ದಾವೆ ಹೂಡಿದರು. ಆಗ 2007ರ ಡಿಸೆಂಬರ್ ತಿಂಗಳಲ್ಲಿ ಸ್ಥಳೀಯ ನ್ಯಾಯಾಲಯ ಸರ್ಕ್ಯುಲರ್ ಕ್ರಮಕ್ಕೆ ತಡೆಯಾಜ್ಞೆ ನೀಡಿತು.

ಇದರ ವಿರುದ್ಧ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ ಮರ್ತಾಂಡ ವರ್ಮರಿಂದಾಗಿ ಕ್ಷೇತ್ರಾಡಳಿತ ಟ್ರಸ್ಟ್ ಅಧೀನದಲ್ಲೇ ಉಳಿಯಿತು. ಆದರೆ ದೇವಸ್ಥಾನದ ವ್ಯಾಪ್ತಿಯಲ್ಲಿರುವ ನಿಧಿಯ ಗಣತಿ ನಡೆಸುವಂತೆ ಕೋರ್ಟ್ ಆದೇಶಿಸಿತು.

ಸುಪ್ರೀಂಕೋರ್ಟ್ ನಿಯೋಜಿಸಿದ ಆಯೋಗದ ಸದಸ್ಯರು ನೆಲಮಾಳಿಗೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದರು. ಆ ಸಂದರ್ಭದಲ್ಲಿ ಚಪ್ಪಡಿಯಾಕಾರದ ಕಗ್ಗಲ್ಲನ್ನು ಕಂಡು ಕುತೂಹಲಗೊಂಡ ಸದಸ್ಯರು ಅದನ್ನು ಸರಿಸಿದಾಗ ಕಿರಿದಾದ ಸುರಂಗ ಮಾರ್ಗ ಕಾಣಿಸಿಕೊಂಡಿತು. ಆ ಮಾರ್ಗವಾಗಿ ಇಳಿದುಹೋದಾಗ ಈ ಮಹಾ ಸಂಪತ್ತು ಬೆಳಕಿಗೆ ಬಂದಿದೆ.

ನೆಲಮಾಳಿಗೆಯಲ್ಲಿ ಒಟ್ಟು 6 ಕೊಠಡಿಗಳಿದ್ದು, 20 ಅಡಿಗೂ ಹೆಚ್ಚು ಆಳದಲ್ಲಿ ಸಂತ್ತನ್ನು ಹುದುಗಿಡಿಸಲಾಗಿದೆ. ಎ, ಬಿ, ಸಿ, ಡಿ ಮತ್ತು ಇ ಎಂದು ಕೊಠಡಿಗಳಿಗೆ ನಾಮಕರಣ ಮಾಡಲಾಗಿದೆ. ಇದುವರೆಗೆ ಐದು ಕೊಠಡಿಗಳ ತಲಾಶೆ ನಡೆದಿದೆ. ಜುಲೈ 10ರೊಳಗಾಗಿ ಸಂಪೂರ್ಣ ಶೋಧ ಕಾರ್ಯ ಮುಕ್ತಾಯವಾಗುವ ಅಂದಾಜಿದೆ.

ಈ ಮಧ್ಯೆ, ನೆಲ ಮಾಳಿಗೆಗೆ ಕಾಂಕ್ರೀಟ್ ಮಾಡಲು ತೀರ್ಮಾನಿಸಲಾಗಿದೆ. ಸುರಂಗ ಮಾರ್ಗದ ಮೂಲಕ ಮೇಲಿನ ದೇವಸ್ಥಾನಕ್ಕೆ ಅಪಾಯವಾಗುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ. ಇದರ ಜತೆಗೆ ನೆಲಮಾಳಿಗೆಯೊಳಗೆ ಅತ್ಯಾಧುನಿಕ ಭದ್ರತಾ ವ್ಯವಸ್ಥೆ ಕಲ್ಪಿಸುವ ಬಗ್ಗೆ ಚಿಂತನೆ ನಡೆದಿದೆ. ಅಂತಿಮವಾಘಿ ಅಷ್ಟೂ ನಿಧಿನ್ನು ಆಯಾ ನೆಲ ಮಾಳಿಗೆಗಳ ಒಳಗಡೆಯೇ ಸಂರಕ್ಷಿಸಿಡಲು ತೀರ್ಮಾನಿಸಲಾಗಿದೆ

ಶ್ರೀಕೃಷ್ಣದೇವರಾಯನ ನಿಧಿ ಅನಂತಪದ್ಮನಾಭ ದೇವಸ್ಥಾನದಲ್ಲಿ ಪತ್ತೆ!

ತಿರುವನಂತಪುರಂ, ಜುಲೈ 4: ಇಲ್ಲಿನ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ಪತ್ತೆಯಾಗಿರುವ ಸುಮಾರು 1 ಲಕ್ಷ ಕೋಟಿ ರುಪಾಯಿಗೂ ಹೆಚ್ಚು ಬೆಲೆಬಾಳುವ ಸಂಪತ್ತಿಗೆ ಹಂಪಿ ವಿಜಯನಗರ ಸಾಮ್ರಾಜ್ಯದ ರಾಜ ಶ್ರೀ ಕೃಷ್ಣದೇವರಾಯನೂ ಕೊಡುಗೆ ಸಲ್ಲಿಸಿದ್ದಾನೆ. ಕೃಷ್ಣದೇವರಾಯನ ಆಡಳಿತ ಕಾಲದ ಚಿನ್ನದ ನಾಣ್ಯಗಳೂ ಇಲ್ಲಿ ಪತ್ತೆಯಾಗಿವೆ ಎಂದು ಅಧಿಕೃತ ಮೂಲಗಳನ್ನು ಉಲ್ಲೇಖಿಸಿ 'ದಿ ಹಿಂದೂ' ಪತ್ರಿಕೆ ಸೋಮವಾರ ವರದಿ ಮಾಡಿದೆ.

'ಶ್ರೀ ಕೃಷ್ಣದೇವರಾಯ ಆಡಳಿತ ಕಾಲದ ಚಿನ್ನದ ನಾಣ್ಯಗಳೂ ಪತ್ತೆಯಾಗಿವೆ. 29- 9-1109 ಎಂಬ ದಿನಾಂಕವಿರುವ ಕೆತ್ತನೆಯೂ ಲಭಿಸಿದೆ. ವಿಜಯನಗರ ಸಾಮ್ರಾಜ್ಯದ ಹಲವು ಆಭರಣಗಳು ಮುಖ್ಯಪ್ರಾಣ ದೇವ ಅನಂತಪದ್ಮನಾಭ ಸ್ವಾಮಿಯನ್ನು ಅಲಂಕರಿಸಿವೆ' ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದರಿಂದ, ಶ್ರೀ ಕೃಷ್ಣದೇವರಾಯ ತನಗೆ ಆಪತ್ತು ಒದಗಿರುವುದನ್ನು ಅರಿತು ತನ್ನ ಸಾಮ್ರಾಜ್ಯದ ಸಂಪತ್ತನ್ನು ಅನೇಕ ಆನೆಗಳ ಮೇಲೆ ಸಾಗಿಸಿದನು ಎಂಬುದಕ್ಕೆ ಇದು ಪುಷ್ಟಿ ನೀಡುತ್ತದೆ. ತನ್ನ ವಿಜಯನಗರ ಸಾಮ್ರಾಜ್ಯದ ಸಂಪತ್ತನ್ನು ಕೃಷ್ಣದೇವರಾಯನ ತಿರುಪತಿ ಬೆಟ್ಟಕ್ಕೂ ಸಾಗಿಸಿದ್ದ ಎಂದೂ ಅನೇಕ ಇತಿಹಾಸಕಾರರು ಈಗಾಗಲೇ ಅಭಿಪ್ರಾಯಪಟ್ಟಿರುವುದು ಇಲ್ಲಿ ದಾಖಲಾರ್ಹ

'ಅನಂತ' ನಿಧಿ: ಕರ್ನಾಟಕ ದೇಗುಲಗಳ ಮೇಲೂ ಬಿತ್ತು ಕಣ್ಣು!

vijaynagar kingdom
ಬೆಂಗಳೂರು, ಜುಲೈ 4: ಕೇರಳದ ಅನಂತ ಪದ್ಮನಾಭ ದೇವಸ್ಥಾನದ ಖಜಾನೆಯಲ್ಲಿ ಒಂದು ಲಕ್ಷ ಕೋಟಿ ಸಂಪತ್ತು ಸಿಕ್ಕಿರುವ ಬೆನ್ನಲ್ಲೇ ಕರ್ನಾಟಕದ ಪ್ರಾಚೀನ ದೇವಾಲಯಗಳಲ್ಲಿನ ನಿಧಿ ಸಂಪತ್ತು ಬಗ್ಗೆ ಜಿಜ್ಞಾಸೆ ಶುರುವಾಗಿದೆ. ಅದರಲ್ಲಿಯೂ ಹಂಪಿ ಸಾಮ್ರಾಜ್ಯ ಮತ್ತು ಅಲ್ಲಿನ ಪ್ರಾಚೀನ ದೇವಾಲಯಗಳ ಚಿನ್ನಾಭರಣ, ವಜ್ರ ವೈಢೂರ್ಯಗಳ ಬಗ್ಗೆ ಇತಿಹಾಸಕಾರರು ಪ್ರಶ್ನಿಸಿದ್ದಾರೆ.

ದಕ್ಷಿಣ ಭಾರತದ ಅತ್ಯಂತ ಶ್ರೀಮಂತ ರಾಜಮನೆತನ ಹಂಪಿ ವಿಜಯನಗರ ಸಾಮ್ರಾಜ್ಯ. 13ನೇ ಶತಮಾನದಲ್ಲಿ ರಾಜರು ಕಟ್ಟಿಸಿದ ಅತ್ಯಂತ ಪ್ರಾಚೀನವಾದ ಬಹಳಷ್ಟು ದೇವಸ್ಥಾನಗಳು ಈಗಲೂ ಹಂಪಿಯಲ್ಲಿವೆ. ಅಲ್ಲದೆ ಕರ್ನಾಟಕದಲ್ಲಿ ರಾಜ ಮನೆತನದ ಆಳ್ವಿಕೆಯಲ್ಲಿ ಅತಿ ಹೆಚ್ಚು ದೇವಾಲಯಗಳು ಇದ್ದಿದ್ದು ಕೂಡ ಹಂಪಿಯಲ್ಲೇ.

ಶಾಸನಗಳ ಪ್ರಕಾರ ಹಂಪಿಯಲ್ಲಿ ಪ್ರಾಚೀನ ಕಾಲದ 70ಕ್ಕೂ ಅಧಿಕ ದೇವಸ್ಥಾನಗಳಿವೆ. ಆ ಎಲ್ಲಾ ದೇವಾಲಯಗಳಿಗೂ ರಾಜರು ದಾನ ರೂಪದಲ್ಲಿ ಚಿನ್ನದ ನಾಣ್ಯ, ವಜ್ರ, ವೈಢೂರ್ಯ ನೀಡುತ್ತಿದ್ದರು. ಆದರೆ ಈಗ ಹಂಪಿಯಲ್ಲಿ ನಾಲ್ಕೈದು ದೇವಾಲಯ ಹೊರತುಪಡಿಸಿದರೆ ಉಳಿದೆಲ್ಲವೂ ಪಾಳು ಬಿದ್ದಿವೆ. ಇವುಗಳ ಉತ್ಖನನ ನಡೆಸಿದರೆ ಪದ್ಮನಾಭ ದೇವಸ್ಥಾನದ ಹತ್ತು ಪಟ್ಟು ಸಂಪತ್ತು ಸಿಗಬಹುದು ಎನ್ನುವುದು ಇತಿಹಾಸಜ್ಞರ ಅಭಿಪ್ರಾಯ.

ತಿರುವಾಂಕೂರಿನ ರಾಜ ಮಾರ್ತಾಂಡ ವರ್ಮ ಕಟ್ಟಿಸಿದ್ದ ಸಣ್ಣ ಪದ್ಮನಾಭ ದೇವಸ್ಥಾನದಲ್ಲಿ ಟನ್‌ಗಟ್ಟಲೆ ಚಿನ್ನಾಭರಣ ಸಿಕ್ಕಿರಬೇಕಾದರೆ ದಕ್ಷಿಣ ಭಾರತದಲ್ಲೇ ಅತ್ಯಂತ ಶ್ರೀಮಂತ ರಾಜ ಮನೆತನಕ್ಕೆ ಸೇರಿದ ವಿರೂಪಾಕ್ಷ ದೇವಸ್ಥಾನದ ಸಂಪತ್ತು ಎಲ್ಲಿ ಹೋಗಿವೆ ಎನ್ನುವ ಪ್ರಶ್ನೆ ಸಹಜ.

ಇತಿಹಾಸಕಾರರು ಹಾಗೂ ಶಾಸನ ತಜ್ಞರು ಹೇಳುವ ಪ್ರಕಾರ ಹಂಪಿಯಲ್ಲಿ ಬಹಳಷ್ಟು ಕಡೆ ಅಪಾರ ಸಂಪತ್ತು ಸಂಗ್ರಹದ ನಿಧಿಗಳು ಇರುವುದು ಗ್ಯಾರಂಟಿ. ಅದರಲ್ಲಿಯೂ ವಿರೂಪಾಕ್ಷನ ಗುಡಿ, ಕಮಲಾಪುರದ ರಾಜರ ಅರಮನೆಯಾದ ಮಹಾನವಮಿ ದಿಬ್ಬ, ಅನೆಗೊಂದಿ ಆಂಜನೇಯ ಗುಡಿ, ಕೃಷ್ಣಸ್ವಾಮಿ ದೇವಸ್ಥಾನ, ತುಂಗಭದ್ರ ದಡದ ವಿಜಯ ವಿಠಲ ದೇವಸ್ಥಾನ, ಕಮಲಾಪುರದ ಪಟ್ಟಾಭಿರಾಮ ದೇವಸ್ಥಾನ, ಮಾತಂಗ ಪರ್ವತದ ಬುಡದಲ್ಲಿರುವ ಅಚ್ಚುತರಾಯ ದೇವಾಲಯ ಸುತ್ತಮುತ್ತ ಇಂಥ ಸಂಪತ್ತಿನ ನಿಧಿ ಇರುವುದು ಖಚಿತ. ಆದರೆ ಅವು ನಿರ್ಧಿಷ್ಟವಾಗಿ ಎಲ್ಲಿವೆ ಎನ್ನುವುದು ಯಾರಿಗೂ ಗೊತ್ತಿಲ್ಲ.

ಈ ಮಧ್ಯೆ ವಿಜಯನಗರ ಸಾಮ್ರಾಜ್ಯದ ಖಜಾನೆ ಎಲ್ಲಿದೆ ಎನ್ನುವುದು ಶಾಸನ, ದಾಖಲೆಗಳಲ್ಲಿಯೂ ಇಲ್ಲ. ಸುರಕ್ಷತೆ ದೃಷ್ಟಿಯಿಂದ ರಾಜರು ತಮ್ಮ ಖಜಾನೆಯನ್ನು ಬಹಳ ಗೌಪ್ಯವಾಗಿಟ್ಟಿದ್ದರು. ಆದರೆ ವಿಶಾಲ ಹಂಪಿಯಲ್ಲಿ ಖಜಾನೆ ಇತ್ತು ಮತ್ತು ಅದನ್ನು ಸಂಪೂರ್ಣವಾಗಿ ಬ್ರಿಟಿಷರಿಂದ ದೋಚಲು ಆಗಿರಲಿಲ್ಲ. ಹಾಗಾದರೆ ರಾಜರ ಖಜಾನೆ ಎಲ್ಲಿದೆ ಎನ್ನುವುದು ಕೂಡ ಬಿಲಿಯನ್‌ ಡಾಲರ್ ಪ್ರಶ್ನೆಯಾಗಿ ಉಳಿದಿದೆ.

ವಿರೂಪಾಕ್ಷನ ದೇವಸ್ಥಾನದ ಭುವನೇಶ್ವರಿ ಗರ್ಭಗುಡಿ ಪೂರ್ವ ದಿಕ್ಕಿಗೆ ಸುಮಾರು 100 ಮೀಟರ್ ದೂರದಲ್ಲಿ ಅಪಾರ ಸಂಪತ್ತಿನ ಸಂಗ್ರಹ ಇದೆ ಎಂದು ಹೇಳಲಾಗುತ್ತಿದೆ. ಹಂಪಿ ಸುತ್ತಮುತ್ತ ಬಹಳಷ್ಟು ಕಡೆ ಸುವರ್ಣ ನಾಣ್ಯ ಹೂತಿಟ್ಟಿರುವ ಬಗ್ಗೆ ಶಾಸನಗಳು ಉಲ್ಲೇಖಿಸಿವೆ.

ಈ ಮಧ್ಯೆ, 'ಆದರೆ ಹಂಪಿಯಲ್ಲಿ ಇರಬಹುದಾದ ಸಂಪತ್ತು ಶೋಧನೆ ವೈಜ್ಞಾನಿಕವಾಗಿ ನಡೆಯಬೇಕು. ಶೋಧನೆಯಿಂದ ಯಾವುದೇ ಕಾರಣಕ್ಕೂ ಹಂಪಿ ಪರಂಪರೆ, ಸ್ಮಾರಕ ಅಥವಾ ಇತಿಹಾಸಕ್ಕೆ ಧಕ್ಕೆಯಾಗಬಾರದ್ದು' ಎಂದು ಡಾ. ಡಿ.ವಿ. ಪರಮಶಿವಮೂರ್ತಿ, ಹಂಪಿ ಕನ್ನಡ ವಿವಿ ಶಾಸನಶಾಸ್ತ್ರ ವಿಭಾಗ ಮುಖ್ಯಸ್ಥರು ಎಚ್ಚರಿಸಿದ್ದಾರೆ.