ಹೊಸದಿಲ್ಲಿ, ಜೂನ್ 1: ಬುಧವಾರ ಮಧ್ಯ ರಾತ್ರಿಯಿಂದಲೇ ಪೆಟ್ರೋಲ್ ಬೆಲೆ ಲೀಟರ್ ಗೆ 1.35 ರುಪಾಯಿ ಏರಿಕೆಯಾಗುವುದೆಂದು ಸರಕಾರಿ ಒಡೆತನದ ಇಂಡಿಯನ್ ಆಯಿಲ್ ಕಾರ್ಪೊರೇಶನ್ ತಿಳಿಸಿದೆ. ಇದರಿಂದ ಬೆಂಗಳೂರಿನಲ್ಲಿ ಪೆಟ್ರೋಲ್ ದರ 73 ರುಪಾಯಿ ಆಗಿದೆ.
ಕಳೆದ ಮೇ 15ರಂದು ಪೆಟ್ರೋಲ್ ಬೆಲೆಯಲ್ಲಿ 5 ರೂ. ಏರಿಕೆ ಮಾಡಿದ್ದು, ಅದು ಕಚ್ಚಾ ತೈಲ ಮತ್ತದರ ಸಂಸ್ಕರಣೆ ವೆಚ್ಚವನ್ನು ಭರಿಸುವಷ್ಟು ಸಾಕಾಗುವುದಿಲ್ಲವೆಂದು ಐಒಸಿ ಅಧ್ಯಕ್ಷ ಆರ್.ಎಸ್. ಬುಟೋಲಾ ಹೇಳಿದ್ದಾರೆ. ಮೇ 14 ರಂದು ಪೆಟ್ರೋಲ್ ಬೆಲೆ ಲೀಟರ್ ಗೆ 5 ರುಪಾಯಿ ಹೆಚ್ಚಿಸಲಾಗಿತ್ತು.
ಏರಿಕೆ ಬಳಿಕವೂ ಲೀಟರಿಗೆ 4.58 ರೂ. ನಷ್ಟವಾಗುತ್ತಿದೆ. ಪೆಟ್ರೋಲ್ ಅನ್ನು ಮಾರುಕಟ್ಟೆ ಬೆಲೆಗಿಂತ ಕಡಿಮೆಗೆ ಮಾರಾಟ ಮಾಡಿದರೆ ಸರಕಾರ ಕಂಪನಿಗೆ ನಷ್ಟವನ್ನು ಭರ್ತಿ ಮಾಡಿಕೊಡುವುದಿಲ್ಲವೆಂದು ಅವರು ತಿಳಿಸಿದ್ದಾರೆ.
ಇದೇ ರೀತಿ ಅಡುಗೆ ಅನಿಲ ಮಾರಾಟದಿಂದ ಐಒಸಿಗೆ ಸಿಲಿಂಡರ್ ಗೆ 380.57 ರು. ಮತ್ತು ಪಡಿತರ ಸೀಮೆಎಣ್ಣೆಯಲ್ಲಿ ಲೀಟರಿಗೆ 25.85 ರು. ನಷ್ಟ ಉಂಟಾಗುತ್ತಿದೆ ಎಂದವರು ಹೇಳಿದ್ದಾರೆ.
ಆದಾಯ 5 ಲಕ್ಷ ರು.ಗಿಂತ ಕಡಿಮೆಯಿದ್ದರೆ ಐಟಿ ರಿಟರ್ನ್ ಅಗತ್ಯವಿಲ್ಲ
ನವದೆಹಲಿ, ಜೂ. 1 : ವಾರ್ಷಿಕ ಆದಾಯ 5 ಲಕ್ಷ ರು.ಗಿಂತ ಕಡಿಮೆ ಇರುವ 85 ಲಕ್ಷಕ್ಕೂ ಹೆಚ್ಚಿನ ಆದಾಯ ತೆರಿಗೆದಾರರು ಇನ್ನು ಮುಂದೆ ಇನ್ಕಂ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡುವ ಅಗತ್ಯವಿಲ್ಲ ಎಂದು ಹಣಕಾಸು ಸಚಿವಾಲಯ ಅಧಿಕೃತವಾಗಿ ಹೇಳಿದೆ. ಈ ಅಂಶವನ್ನು ಕಳೆದ ಕೇಂದ್ರ ಬಜೆಟ್ ನಲ್ಲಿ ಕೂಡ ಪ್ರಸ್ತಾಪಿಸಲಾಗಿತ್ತು.
"ವಾರ್ಷಿಕ 5 ಲಕ್ಷ ರು.ಗಿಂತ ಕಡಿಮೆ ಆದಾಯವಿರುವ ತೆರಿಗೆದಾರರು ರಿಟರ್ನ್ ಫೈಲ್ ಮಾಡುವ ಅಗತ್ಯವಿಲ್ಲ. ಜೂನ್ ಮೊದಲ ವಾರದಲ್ಲಿ ಈ ಕುರಿತಂತೆ ಅಧಿಕೃತ ಸುತ್ತೋಲೆ ಕಳುಹಿಸಲಾಗುವುದು" ಎಂದು ನಿವೃತ್ತರಾಗುತ್ತಿರುವ ನೇರ ತೆರಿಗೆ ಮಂಡಳಿಯ ಅಧ್ಯಕ್ಷರಾಗಿರುವ ಸುಧೀರ್ ಚಂದ್ರಾ ಅವರು ಹೇಳಿದ್ದಾರೆ.
ಇದು ಪ್ರಸ್ತುತ ಹಣಕಾಸು ವರ್ಷ 2011-12ರಿಂದ ಜಾರಿಗೆ ಬರಲಿದೆ. ಈ ಯೋಜನೆಯ ಫಲಾನುಭವಿ ಆದಾಯ ತೆರಿಗೆದಾರರು ಈ ಹಣಕಾಸು ವರ್ಷ ರಿಟರ್ನ್ ಫೈಲ್ ಮಾಡುವ ಅಗತ್ಯವಿಲ್ಲ. ಆದರೆ, ಆದಾಯ ತೆರಿಗೆ ಮರುಪಾವತಿ ಆಗಬೇಕಾದ ಪಕ್ಷದಲ್ಲಿ ರಿಟರ್ನ್ ಫೈಲ್ ಮಾಡಬೇಕಾಗುತ್ತದೆ ಎಂದು ಚಂದ್ರಾ ಅವರು ಸ್ಪಷ್ಟಪಡಿಸಿದ್ದಾರೆ.
ಡಿವಿಡೆಂಡ್ ಮತ್ತಿತರ ಆದಾಯಮೂಲಗಳಿರುವ ಸಂಬಳದಾರ ಆದಾಯ ತೆರಿಗೆ ಮರುಪಾವತಿ ಸಲ್ಲಿಸಲು ಇಚ್ಛಿಸದಿದ್ದರೆ, ಅಂತಹ ಆದಾಯಮೂಲಗಳನ್ನು ನೌಕರದಾರರಿಗೆ ತೆರಿಗೆ ಕಡಿತ ಮಾಡಲು ತಿಳಿಸಬೇಕಾದ್ದು ಸಂಬಳದಾರರ ಕರ್ತವ್ಯ. ಫಾರ್ಮ್ 16 ನೀಡುವುದನ್ನೇ ಆದಾಯ ತೆರಿಗೆ ರಿಟರ್ನ್ ಎಂದು ಪರಿಭಾವಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಸೆಲ್ ಫೋನ್ ವಿಕಿರಣ ಕ್ಯಾನ್ಸರ್ ಗೆ ಆಹ್ವಾನ
ಬೆಂಗಳೂರು, ಜೂ 1: ಸೆಲ್ ಫೋನ್ ಬಳಕೆಯಿಂದ ಕ್ಯಾನ್ಸರ್ ಸೇರಿದಂತೆ ಅನೇಕ ಮಾರಕ ರೋಗಗಳು ಬರುತ್ತದೆ ಎಂಬ ಕಾಳಜಿಯುಕ್ತ ಸುದ್ದಿಗೆ ಪುಷ್ಟಿ ಸಿಕ್ಕಿದೆ. ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆ(WHO)ನ ತಜ್ಞ ವೈದ್ಯಾಧಿಕಾರಿಗಳು ನಡೆಸಿದ ಸಂಶೋಧನೆಯಿಂದ ಇದು ಸಾಬೀತಾಗಿದ್ದು, ಸೆಲ್ ಫೋನ್ ಬಳಕೆಯಿಂದ ಕ್ಯಾನ್ಸರ್ ಹರಡುವ ಲಕ್ಷಣಗಳು ಕಂಡು ಬಂದಿದೆ. ಸೆಲ್ ಫೋನ್ ನಿಂದ ಬ್ರೈನ್ ಟ್ಯೂಮರ್ ಬರುತ್ತದೆ ಎಂಬ ಮಾತಿಗೆ WHO ಆಧಾರ ಒದಗಿಸಿದ್ದಂತಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯ International Agency for Research on Cancer(IARC) ವಿಭಾಗದ ಸುಮಾರು 14 ದೇಶಗಳ 31 ತಜ್ಞ ವಿಜ್ಞಾನಿಗಳು ಈ ಬಗ್ಗೆ ಸಮೀಕ್ಷೆ ನಡೆಸಿದ್ದಾರೆ. ರೇಡಿಯೋ ವಿಕಿರಣ ಹಾಗೂ ಎಲೆಕ್ಟ್ರೋ ಮ್ಯಾಗ್ನಟಿಕ್ ಕ್ಷೇತ್ರದಿಂದ ಉಂಟಾಗುವ ಹಾನಿ ಬಗ್ಗೆ ಫ್ರಾನ್ಸ್ ನಲ್ಲಿ ಒಂದು ವಾರಗಳ ನಡೆಸಿದ ಸಮೀಕ್ಷೆ ನಂತರ ಈ ವಿಷಯ ಹೊರ ಹಾಕಿದ್ದು, ಅತ್ಯಧಿಕವಾಗಿ ಮೊಬೈಲ್ ಫೋನ್ ಬಳಕೆ ಮಾಡುವವರಿಗೆ ಚುರುಕು ಮುಟ್ಟಿಸಿದೆ.
ಕ್ಯಾನ್ಸರ್ ಹರಡುವ carcinogenic ಪದಾರ್ಥಗಳು ಸೆಲ್ ಫೋನ್ ವಿಕರಣಗಳಲ್ಲಿ ಕಂಡು ಬಂದಿದೆ. ದಿನ ನಿತ್ಯ ಕನಿಷ್ಠ 30 ನಿಮಿಷಗಳ ನಿರಂತರವಾಗಿ ಸೆಲ್ ಫೋನ್ ಬಳಸುವವರು ಈ ಎಚ್ಚರಿಕೆ ಗಂಟೆಗೆ ಕಿವಿ ಕೊಡಲೇ ಬೇಕು ಇಲ್ಲದಿದ್ದರೆ ಅಪಾಯ ಖಂಡಿತ ಎಂದು ವಿಜ್ಞಾನಿಗಳು ಹೇಳುತ್ತಾರೆ.
ಮೊಬೈಲ್ ಕಂಪೆನಿಗಳು ಮೊಬೈಲ್ ಫೋನ್ ಬಳಕೆ ವಿಧಾನದ ಬಗ್ಗೆ ಕೂಡಾ ವಿವರಗಳನ್ನು ನೀಡಿರುತ್ತದೆ. ಕಿವಿಯ ಬಳಿ ಫೋನ್ ಇಟ್ಟುಕೊಂಡು ಮಾತನಾಡುವುದರಿಂದ ಹಿಡಿದು, ಬ್ಯಾಟರಿ ಚಾರ್ಜಿಂಗ್, ರೇಡಿಯೋ ವಿಕಿರಣ ಸೋರಿಕೆ ಬಗ್ಗೆ ಕೂಡ ವಿವರಣೆ ಇರುತ್ತದೆ. ಸೆಲ್ ಫೋನ್ ಬಳಕೆದಾರರು ತಪ್ಪದೇ ಮೊಬೈಲ್ ಬಳಕೆ ಬಗ್ಗೆ ಓದಿಕೊಳ್ಳುವುದು ಒಳಿತು.

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)