ಪುಟಗಳು

ನೈಂಟಿ ಕುಡಿದು ಮಾತ್ರೆ ತಿಂದರೆ ಡೇಂಜರ್!!


Medicines
ಫ್ರೆಂಡ್ಸ್ ಜೊತೆ ಪಾರ್ಟಿಗೆ ಹೋಗುವಾಗ ಯಾವುದಾದರೂ ಕಾಯಿಲೆಗೆ ಮಾತ್ರೆ ತೆಗೆದುಕೊಂಡಿದ್ದರೂ ಸಹ ಮದ್ಯ ತೆಗೆದು ಕೊಳ್ಳುತ್ತಾರೆ. ಆದರೆ ಈ ರೀತಿ ಮದ್ಯ ಸೇವನೆ ಆ ಔಷಧಿಯೊಂದಿಗೆ ಬೆರೆತು ವಿಷವಾಗಿ ಪರಿಣಮಿಸುತ್ತದೆ.

ಅದರಲ್ಲೂ ಈ ಕೆಳಗಿನ ಸಂದರ್ಭದಲ್ಲಿ ಮದ್ಯ ಕುಡಿದರೆ ನಿಮ್ಮನ್ನು ನೀವೆ ಅಪಾಯಕ್ಕೆ ಒಡ್ಡಿದಂತಾಗುವುದು.

1. ಮಿತಿಮೀರಿ ಕುರುಕುಲು ತಿಂಡಿಗಳ ಸೇವನೆ ಹೊಟ್ಟೆಯಲ್ಲಿ ಜಂತು ಹುಳಗಳ ಚಟುವಟಿಕೆಗಳನ್ನು ಅಧಿಕ ಮಾಡುತ್ತವೆ, ಅವುಗಲ ನಿವಾರಣೆಗೆ ಔಷಧಿ ಸೇವಿಸುತ್ತಿದ್ದರೆ ಮದ್ಯ ಸೇವಿಸ ಬೇಡಿ.

2. ಹೊಟ್ಟೆ ನೋವುಗೆ ಔಷಧ ಸೇವಿಸುವಾಗ ಮದ್ಯ ಕುಡಿಯ ಬೇಡಿ. ಒಂದು ವೇಳೆ ಈ ಔಷಧಿಗಳು ಮದ್ಯದೊಂದಿಗೆ ಬೆರೆತು ಜೀವಕ್ಕೆ ಅಪಾಯ ತಂದೂಡ್ಡಬಹುದು.

3. ಒಂದು ವೇಳೆ ನೀವು ಯಾವುದಾದರೂ ಅಲರ್ಜಿಗೆ ಔಸಧಿ ಸೇವಿಸುತ್ತಿದ್ದರೆ ಮದ್ಯ ಸೇವಿಸಬೇಡಿ. ಅಲರ್ಜಿಯಿಂದ ಸೀನು, ನೆಗಡಿ ಉಂಟಾಗುತ್ತಿದ್ದು ಅದಕ್ಕೆ ನೀವು ಔಷಧಿ ತೆಗೆದು ಕೊಳ್ಳುವ ಸಮಯದಲ್ಲಿ ಮದ್ಯ ಸೇವಿಸಿದರೆ ಆ ಖಾಯಿಲೆಗಳು ಮತ್ತಷ್ಟು ಉಲ್ಬಣಗೊಳ್ಳುವುದು.

4,ಕುಡಿತದ ಚಟ ಬಿಡಲು ಔಷಧಿ ಸೇವಿಸುತ್ತಿದ್ದ ಸಂದರ್ಭದಲ್ಲಿ ಮದ್ಯಪಾನ ಮಾಡಿದರೆ ವ್ಯತಿರಿಕ್ತ ಪರಿಣಾಮ ಎದುರಿಸ ಬೇಕಾಗುತ್ತದೆ. ಮದ್ಯ ಈ ರೀತಿಯ ಔಷಧಿಯೊಂದಿಗೆ ದೇಹದಲ್ಲಿ ಬೆರೆತು ವಿಷವಾಗಿ ಪರಿಣಮಿಸುತ್ತದೆ.

ಹಿತಮಿತವಾದ ಸುರಾಪಾನ ಹೆಚ್ಚಿಸುವುದು ಆರೋಗ್ಯ


Healthy Alcoholic Drinks

ಮದ್ಯ ಆರೋಗ್ಯಕ್ಕೆ ಹಾನಿಕಾರಕ. ಮದ್ಯ ಸೇವಿಸಿದರೆ ಕಿಡ್ನಿ, ಜಠರ, ಕರಳುಗಳು ಹಾನಿಯಾಗಿ ಮನುಷ್ಯ ಬೇಗನೆ ಸಾವನ್ನಪ್ಪುತ್ತಾನೆ. ಇವೆಲ್ಲಕ್ಕಿಂತ ಕುಡಿದು ರಸ್ತೆಯಲ್ಲಿ ತೂರಾಡುವವರಿಗೆ ಅಥವಾ ಮನೆಯಲ್ಲಿ ರಂಪ ಮಾಡುವವರಿಗೆ ಯಾರೂ ಗೌರವ ಕೊಡುವುದಿಲ್ಲ. ಇಷ್ಟೆಲ್ಲ ಕೆಟ್ಟದು ಮಾಡುವ ಮದ್ಯ ಆರೋಗ್ಯಕ್ಕೆ ಒಳ್ಳೆಯದು! ಇದು ದೇಹದ ತೂಕವನ್ನು ನಿಯಂತ್ರಣದಲ್ಲಿಡುವುದರ ಜೊತೆಗೆ ಆರೋಗ್ಯವನ್ನು ಹೆಚ್ಚಿಸುತ್ತದೆ( ಮಿತಿಯಲ್ಲಿ ಕುಡಿದರೆ ಮಾತ್ರ ).

ಆರೋಗ್ಯ ಹೆಚ್ಚಿಸುವ ಆಲ್ಕೋಹಾಲ್ ಪಟ್ಟಿ ಇಲ್ಲಿದೆ ನೋಡಿ.

1. ಬೀರ್:
ಬೀರ್ ಅನ್ನು ಮಿತಿಯಲ್ಲಿ ಅಂದರೆ ವಾರಕ್ಕೆ 7 ಗ್ಲಾಸ್ ಕುಡಿದರೆ ಆರೋಗ್ಯ ಹೆಚ್ಚುತ್ತದೆ. ಇದರಲ್ಲಿರುವ antioxidant ಹೃದಯಾಘಾತ ಉಂಟಾಗದಂತೆ ತಡೆಯುತ್ತದೆ. ಬೀರ್ ನಲ್ಲಿ ವಿಟಮಿನ್ ಬಿ, ರಂಜಕ, ಮ್ಯಾಗ್ನಿಷಿಯಂ, ಕಬ್ಬಿಣದಂಶ ಇದೆ. ಬೀರ್ ಕುಡಿಯುವುದರಿಂದ ಖಿನ್ನತೆ ಕಡಿಮೆಯಾಗುತ್ತದೆ ಮತ್ತು ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು.

ಅದೇ ಮಿತಿ ಮೀರಿ ಕುಡಿದರೆ ಕರಳು ಹಾಳಾಗುವುದು ಮತ್ತು ದೇಹದ ತೂಕ ಹೆಚ್ಚುತ್ತದೆ.

2.ವೈನ್: ವೈನ್ ನಲ್ಲಿ ಕೆಂಪು ವೈನ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಪ್ರತಿನಿತ್ಯ ಒಂದು ಗ್ಲಾಸ್ ವೈನ್ ಕುಡಿದರೆ ಹೃದಯದ ಸ್ವಾಸ್ಥ್ಯ ಹೆಚ್ಚುತ್ತದೆ. ಈ ಕೆಂಪು ವೈನ್ ಅನ್ನು ದ್ರಾಕ್ಷಿಯಿಂದ ತಯಾರಿಸಲಾಗುತ್ತದೆ.

3. ವೊಡ್ಕಾ: ಬೊಜ್ಜು ಕರಗಿಸುವಲ್ಲಿ ವೊಡ್ಕಾ ತುಂಬಾ ಪರಿಣಾಮಕಾರಿಯಾದ ಆಲ್ಕೋಹಾಲ್. ಇದರಲ್ಲಿ ವಿಟಮಿನ್ ಬಿ, ರಂಜಕ, ಪೊಟ್ಯಾಷಿಯಂ ಮತ್ತು ಸೋಡಿಯಂ ಅಂಶ ಇದೆ. ಆದರೆ ವೊಡ್ಕಾ ಮಿತಿ ಮೀರಿದರೆ ಆರೋಗ್ಯಕ್ಕೆ ಹಾನಿಕಾರಕ.

4. ಬ್ಲಡಿ ಮೇರಿ: ಈ ಆಲ್ಕೋಹಾಲ್ ಅನ್ನು ಟೊಮೆಟೊದಿಂದ ತಯಾರಿಸಲಾಗುತ್ತದೆ. ಇದನ್ನು ಒಂದು ಲೋಟ ಕುಡಿದರೆ ಹಸಿವು ಕಮ್ಮಿಯಾಗುತ್ತದೆ ಮತ್ತು ಹೃದಯದ ಆರೋಗ್ಯಕ್ಕೆ ಒಳ್ಳೆಯದು

ರಮ್ಯಾ, ರಾಗಿಣಿಗೆ ಲೈನ್ ಹೊಡೆಯುವ ಸುವರ್ಣಾವಕಾಶ

Line Hodiri Program 
ಸ್ಯಾಂಡಲ್‌ವುಡ್ ನಾಯಕಿಯರಾದ ರಮ್ಯಾ, ರಾಗಿಣಿ, ಪ್ರಿಯಾಮಣಿ, ಪೂಜಾಗಾಂಧಿ, ಐಂದ್ರಿತಾ ರೇ, ನಿಧಿ ಸುಬ್ಬಯ್ಯ ಹಾಗೂ ಶರ್ಮಿಳಾ ಮಾಂಡ್ರೆಗೆ ಲೈನ್ ಹೊಡೆಯುವ ಅಪೂರ್ವ ಅವಕಾಶ ಸಿಕ್ಕಿದೆ. ಈ ಸುವರ್ಣಾವಕಾಶವನ್ನು ಕಲ್ಪಿಸಿರುವುದು 92.7 ಬಿಗ್ ಎಫ್‌ಎಂ ರೇಡಿಯೋ.

ಈ ನೂತನ ಕಾರ್ಯಕ್ರಮದ ಮೂಲಕ ಸ್ಯಾಂಡಲ್‌ವುಡ್ ನಾಯಕಿಯರೊಂದಿಗೆ ಕೇಳುಗರು ಚಲ್ಲಾಟವಾಡುವ ಅವಕಾಶ ದೊರಕಲಿದೆ. 'ಲೈನ್ ಹೊಡೀರಿ' ಕಾರ್ಯಕ್ರಮ 'ನೋ ಟೆನ್ಷನ್' ಕಾರ್ಯಕ್ರಮದ ಭಾಗವಾಗಿದೆ. ಫೆ.20ರಿಂದ ಸಂಜೆ 5ರಿಂದ 9ರವರೆಗೆ ಪ್ರಸಾರವಾಗಲಿದೆ.

ಮೊದಲ ವಾರದಲ್ಲೇ ನಿಮ್ಮ ಲೈನ್‌ಗೆ ಸಿಕ್ಕಲಿದ್ದಾರೆ ತಾರೆಯರಾದ ರಮ್ಯಾ ಹಾಗೂ ರಾಗಿಣಿ. ಶ್ರೋತೃಗಳು ಈ ತಾರೆಗಳೊಂದಿಗೆ ತುಂಟತನದಿಂದ ಮಾತನಾಡಬಹುದು. ಈ ಕಾರ್ಯಕ್ರಮ ಆರು ವಾರಗಳ ಕಾಲ ನಡೆಯಲಿದೆ. ಕಾರ್ಯಕ್ರಮದಲ್ಲಿ ತಾರೆಗಳೊಂದಿಗೆ ಹರಟೆ, ತುಂಟ ಮಾತುಗಳನ್ನಾಡಬಹುದು. ಆರ್ ಜೆ ರೋಹಿತ್ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಪುರುಷ ಶ್ರೋತೃಗಳಿಗೆ ಒಂದು ವಿಷಯವನ್ನು ನೀಡಲಾಗುತ್ತದೆ. ಆ ವಿಷಯವನ್ನು ಆಧಾರವಾಗಿಟ್ಟುಕೊಂಡು ನಾಯಕಿಯರೊಂದಿಗೆ ಮಾತನಾಡಬೇಕು. ಅಂತಿಮವಾಗಿ ನಾಯಕಿಯರು ತಮ್ಮೊಂದಿಗೆ ತುಂಟುತನದಿಂದ ಮಾತನಾಡಿದ ಶ್ರೋತೃಗಳಲ್ಲಿ ವಿಜೇತರನ್ನು ಆಯ್ಕೆ ಮಾಡಲಿದ್ದಾರೆ. ಆಯಾ ವಾರದ ಅಂತ್ಯದಲ್ಲೇ ವಿಜೇತರ ಹೆಸರನ್ನು ಘೋಷಿಸಲಾಗುತ್ತದೆ.

92.7 ಎಫ್‌ಎಂನ ಮಹಿಳಾ ಶ್ರೋತೃಗಳು ಸುಮ್ಮನೆ ಕೂರಬೇಕಾಗಿಲ್ಲ. ಮಹಿಳಾ ಶ್ರೋತೃಗಳು ನಾಯಕಿ ನಟಿಯರ ಉತ್ತಮ ಸ್ನೇಹಿತರಂತೆ ನಟಿಸಬಹುದು. ವಿಜೇತರ ಆಯ್ಕೆಯಲ್ಲಿ ನಾಯಕಿಗೆ ಸಹಕರಿಸಬಹುದು. ಆ ದಿನದ ಉತ್ತಮ ಆಯ್ಕೆಯಲ್ಲಿ ಸಹಕರಿಸಿದ ಒಬ್ಬ ಮಹಿಳಾ ಶ್ರೋತೃಗೆ ಕಾರ್ಯಕ್ರಮದಲ್ಲಿ ನಾಯಕಿಯನ್ನು ಭೇಟಿ ಮಾಡುವ ಹಾಗೂ ಮಾತನಾಡುವ ಅವಕಾಶ ಲಭಿಸಲಿದೆ. (ಒನ್‌ಇಂಡಿಯಾ ಕನ್ನಡ)