ಪುಟಗಳು

ಅಂಕಿತ ಹೊಸ ಪುಸ್ತಕ ಬಿಡುಗಡೆ

ಕನ್ನಡ ಮಾತಿನ ಮಲ್ಲ ಸ್ಪರ್ದೆಗೆ ಆಹ್ವಾನ

ಅನಕ್ಷರಸ್ತರಿಗೊಂದು ಉಚಿತ ಫೋನ್

ಹುಷಾರು! ನಾಸಾ ಉಪಗ್ರಹ ಅವಶೇಷ ತಲೆ ಮೇಲೆ ಬೀಳಬಹುದು

ಹೈದರಾಬಾದ್, ಸೆ.21: ಮೇಲ್ಮೈ ವಾತಾವರಣ ಸಂಶೋಧನಾ ಉಪಗ್ರಹದ (ಯುಎಆರ್ಎಸ್‌) ಭಗ್ನಾವಶೇಷಗಳು ಮುಂದಿನ ಕೆಲವು ದಿನಗಳಲ್ಲಿ (ಸೆ.23) ಭೂಮಿಗೆ ಬಡಿಯುವ ನಿರೀಕ್ಷೆಯಿದೆ ಎಂದು ನಗರದ ಬಿಎಂ ಬಿರ್ಲಾ ವಿಜ್ಞಾನ ಕೇಂದ್ರದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಮೆರಿಕದ ನಾಸಾ ವಿಜ್ಞಾನಿಗಳ ಪ್ರಕಾರ ಅದು ಯಾವುದಾದರೂ ಸಾಗರ, ಸಮುದ್ರದಲ್ಲಿ ಬೀಳುವ ಸಾಧ್ಯತೆಗಳು ದಟ್ಟವಾಗಿವೆ.

ಬಸ್ಸಿನ ಗಾತ್ರದ ಈ ಉಪಗ್ರಹವನ್ನು 1991ರಲ್ಲಿ ಅಮೆರಿಕದ ನಾಸಾ ವಿಜ್ಞಾನಿಗಳು ಉಡಾವಣೆ ಮಾಡಿದ್ದರು. ಅದು 2005ರ ತನಕ ಕಾರ್ಯಾಚರಣೆ ನಡೆಸುತ್ತಿತ್ತು. ಆದರೆ ಅದು ನಿಧಾನವಾಗಿ ಭೂಮಿಯ ವಾತಾವರಣಕ್ಕೆ ಜಾರಲಾರಂಭಿಸಿತು. ಈ ಪ್ರಕ್ರಿಯೆಯಲ್ಲಿ ಅದು ಛಿದ್ರಗೊಂಡಿದೆ ಎಂದು ಸಂಸ್ಥೆಯ ಮಹಾನಿರ್ದೇಶಕ ಬಿಜಿ ಸಿದ್ದಾರ್ಥ ಅವರು ಹೇಳಿದ್ದಾರೆ.

'5.6 ಟನ್ ತೂಕದ ಈ ಉಪಗ್ರಹದ ಅವಶೇಷಗಳ ಸಣ್ಣ ತುಣುಕುಗಳು ಭೂಮಿಯನ್ನು ತಲಪುವ ಮೊದಲೇ ಉರಿದುಹೋಗಬಹುದು. ಆದರೆ ದೊಡ್ಡ ತುಣುಕುಗಳು ಭೂಮಿಯನ್ನು ತಲಪಬಹುದು. ಯಾವುದೇ ಸ್ಥಳ ಅಥವಾ ವ್ಯಕ್ತಿ ಮೇಲೆ ಇಂಥ ತುಣುಕು ಬೀಳುವ ಸಾಧ್ಯತೆ ಸಾವಿರ ಶತಕೋಟಿಯಲ್ಲಿ ಒಂದಕ್ಕಿಂತಲೂ ಕಡಿಮೆಯಿದೆ. ಆದರೆ ಅವಶೇಷಗಳು ಭೂಮಿಯ ಯಾವುದೋ ಒಂದು ಸ್ಥಳದಲ್ಲಿ ಬೀಳುವ ಸಾಧ್ಯತೆ ಅಧಿಕವಾಗಿದೆ' ಎಂದು ಅವರು ಎಚ್ಚರಿಸಿದ್ದಾರೆ.

ಬಾಹ್ಯಾಕಾಶದಿಂದ ಅವಶೇಷಗಳು ಭೂಮಿಗೆ ಬಡಿಯುವ ಇಂಥ ಘಟನೆ ಈ ಹಿಂದೆಯೂ ಸಂಭವಿಸಿತ್ತು. 1970ರಲ್ಲಿ ಸ್ಕೈಲ್ಯಾಬ್‌ ವ್ಯೋಮನೌಕೆ ಭೂಮಿಗೆ ಬಿದ್ದಿತ್ತಾದರೂ ಯಾವುದೇ ಜೀವಹಾನಿ ಅಥವಾ ಸೊತ್ತು ಹಾನಿ ಸಂಭವಿಸಿರಲಿಲ್ಲ.

ತೀರಾ ಈಚೆಗೆ ವ್ಯೋಮಯಾತ್ರಿ ಕಲ್ಪನಾ ಚಾವ್ಲಾ ಮತ್ತು ಇತರ ಸಿಬ್ಬಂದಿಯನ್ನು ಹೊತ್ತಿದ್ದ ವ್ಯೋಮನೌಕೆ 'ಕೊಲಂಬಿಯಾ' ವಾಯುಮಂಡಲವನ್ನು ಪ್ರವೇಶಿಸುವ ವೇಳೆ ಸ್ಫೋಟಗೊಂಡು ಅದರ ಅವಶೇಷಗಳು ಭೂಮಿಯ ಕೆಲವೆಡೆ ಬಿದ್ದಿತ್ತು. ಆಗ ಕೂಡ ಭೂಮಿಯಲ್ಲಿ ಯಾವುದೇ ಹಾನಿ ಸಂಭವಿಸಿರಲಿಲ್ಲ. ಈ ಬಾರಿಯೂ ಇದು ನಿಜವಾಗಲಿದೆ ಎಂದೂ ಅವರು ವಿಶ್ವಾಸ ಹೊಂದಿದ್ದಾರೆ.

ರಾಧಿಕನ್ ಗಂಡ ಮೇಲೆ ರಾಧಿಕಾ ಕುಮಾರಸ್ವಾಮಿ ಗರಂ

ಹಾಸ್ಯ ಕಲಾವಿದ ಕೋಮಲ್ ಕುಮಾರ್ ವಿರುದ್ಧ ಕನ್ನಡ ಚಿತ್ರರಂಗದ ನಟಿ ಕಮ್ ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಗರಂ ಆಗಿದ್ದಾರೆ. ಆಕೆಯ ಕೋಪಕ್ಕೆ ಕಾರಣವಾಗಿರುವುದು ಕೋಮಲ್ ಕೈಗೆತ್ತಿಕೊಂಡಿರುವ 'ರಾಧಿಕನ್ ಗಂಡ' ಎಂಬ ಚಿತ್ರ. ಈ ಚಿತ್ರದ ಟೈಟಲ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ರಾಧಿಕಾ, ಚಿತ್ರದ ಶೀರ್ಷಿಕೆ ಕೂಡಲೆ ಬದಲಾಯಿಸುವಂತೆ ಎಚ್ಚರಿಸಿದ್ದಾರೆ.

ಒಂದು ವೇಳೆ ಚಿತ್ರದ ಟೈಟಲ್ ಬದಲಾಯಿಸಲಿಲ್ಲ ಎಂದರೆ ಉಗ್ರ ಹೋರಾಟ ನಡೆಸುವುದಾಗಿ ರಾಧಿಕಾ ಸಂದೇಶ ರವಾನಿಸಿದ್ದಾರೆ. ಈ ಬಗ್ಗೆ ಫಿಲಂ ಚೇಂಬರ್ ಮೆಟ್ಟಿಲನ್ನೂ ಹತ್ತಿರುವ ರಾಧಿಕಾ ದೂರು ಸಲ್ಲಿಸಿದ್ದಾರೆ. ಈ ಚಿತ್ರದ ಶೀರ್ಷಿಕೆ ಮೂಲಕ ತಮ್ಮ ತೇಜೋವಧೆ ಮಾಡುತ್ತಿದ್ದಾರೆ ಎಂದು ರಾಧಿಕಾ ದೂರಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ನಟ ಕೋಮಲ್, ಇದೊಳ್ಳೆ ಕತೆ ಆಯ್ತಲ್ಲ. ಕುಂಬಳಕಾಯಿ ಕಳ್ಳ ಅಂದ್ರೆ ನೀವ್ಯಾಕೆ ಹೆಗಲು ಮುಟ್ಟಿಕೊಳ್ಳುತ್ತೀರಾ. ಇದು ನನ್ನ ಗೆಳೆಯ ರಂಗನಾಥ್ ಭಾರದ್ವಾಜ್ ಕತೆಯಾಕಾಗಿರಬಾರದು? ಆತನ ಪತ್ನಿಯ ಹೆಸರೂ ರಾಧಿಕಾ. ನೀವು ಏನೇ ಹೇಳಿದರು ಚಿತ್ರದ ಶೀರ್ಷಿಕೆ ಮಾತ್ರ ಬದಲಾಯಿಸಲ್ಲ ಎಂದಿದ್ದಾರೆ.

ಇನ್ನೊಂದು ಗಮನಾರ್ಹ ಸಂಗತಿ ಎಂದರೆ ಈ ಸಂಬಂಧ ರಾಧಿಕಾ ನಿರ್ಮಾಪಕರ ಸಂಘಕ್ಕೂ ಒಂದು ಪತ್ರ ಬರೆದಿರುವುದು. ಆ ಪತ್ರದ ಕೆಳಗೆ ರಾಧಿಕಾ ಕುಮಾರಸ್ವಾಮಿ ಎಂದು ಸಹಿಹಾಕಿರುವುದು! ನಿರ್ಮಾಪಕರ ಸಂಘ ಅದನ್ನು ಸೀರಿಯಸ್ಸಾಗಿ ತೆಗೆದುಕೊಂಡಿರುವುದು. ಈಗಾಗಲೆ ನಿಖಿತಾರನ್ನು ಬ್ಯಾನ್ ಮಾಡಿ ನಗೆಪಾಟಲಿಗೀಡಾಗಿದ್ದ ಸಂಘ ಈಗ ಮತ್ತೊಮ್ಮೆ ನಗುವವರ ಮುಂದೆ ಎಡವಿಬೀಳುವಂತಾಗಿದೆ. (ದಟ್ಸ್‌ಕನ್ನಡ ಸಿನಿವಾರ್ತೆ)