ಪುಟಗಳು

ಜರಾಸಂಧ ಮ್ಯೂಸಿಕ್ ರಿವ್ಯೂ: ಮೊದಲ ಹಾಡು ಸೂಪರ್

 
 
ಶಶಾಂಕ್ ನಿರ್ದೇಶನದ, ದುನಿಯಾ ವಿಜಯ್ ಮತ್ತು ಪ್ರಣೀತಾ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರದ ಆಲ್ಬಮ್ ನಲ್ಲಿರುವ ಮೂರು ಹಾಡು ಚೆನ್ನಾಗಿದ್ದು, ಆಲ್ಬಮ್ ನ ಮೊದಲ ಹಾಡು ಸೂಪರ್ ಹಿಟ್ ಆಗುವುದರಲ್ಲಿ ಡೌಟೇ ಇಲ್ಲ. ಕನ್ನಡದ ರೆಹಮಾನ್ ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಚಿತ್ರದಲ್ಲಿ ಉಪೇಂದ್ರ ಕಂಠಸಿರಿಯಿಂದ ಒಂದು ಹಾಡು ಮೂಡಿಬಂದಿರುವುದು ವಿಶೇಷ.

1 . ನೀ ಊರಿಗೆ ಬಾರೋ ಚನ್ನಿ ಹಿಡ್ಕೊಂಡು (ಅರ್ಜುನ್ ಜನ್ಯ, ಶಮಿತಾ ಮಲ್ನಾಡ್)
ಸಾಹಿತ್ಯ:
ಶಶಾಂಕ್

ಗ್ರಾಮ್ಯ ಭಾಷೆಯ ಶೈಲಿಯಲ್ಲಿರುವ ಸಾಹಿತ್ಯ.ಜಾನಪದ ಮೆಲೋಡಿಯಸ್ ನಲ್ಲಿರುವ ಈ ಹಾಡು ಕಿವಿಗೆ ಇಂಪು ಮತ್ತು ರಸವತ್ತಾಗಿದೆ. ಒಮ್ಮೆ ಕೇಳಿದರೆ ಮತ್ತೆ ಮತ್ತೆ ಕೇಳಬೇಕಿನ್ನಿಸುತ್ತದೆ. ಈ ಹಾಡು ಚಿತ್ರ ಬಿಡುಗಡೆಗೆ ಮುನ್ನವೇ ಹಿಟ್ ಆಗುವುದರಲ್ಲಿ ಸಂದೇಹವೇ ಬೇಡ.

2 . ಅವರಿವರ ಜೊತೆ ಸೇರದೆ, ನುಡಿ ಕೇಳದೆ (ಸೋನು ನಿಗಮ್, ಅನುರಾಧ ಭಟ್)
ಸಾಹಿತ್ಯ: ಶಶಾಂಕ್

ಸೋನು ನಿಗಮ್ ಟ್ರೇಡ್ ಮಾರ್ಕ್ ಟ್ಯೂನ್. ಹಾಡಿನ ಸಾಹಿತ್ಯ ಕೂಡಾ ಅರ್ಥಪೂರ್ಣವಾಗಿದೆ. ಹಾಡಿನ ಅನುಪಲ್ಲವಿ ಫಾಸ್ಟ್ ಟ್ರ್ಯಾಕ್ ನಲ್ಲಿದ್ದು, ಹಾಡು ಉತ್ತಮವಾಗಿ ಮೂಡಿ ಬಂದಿದೆ.

3. ಪದೇ ಪದೇ ಫೋನಿನಲಿ (ಉಪೇಂದ್ರ, ಪ್ರಿಯಾ ಹಿಮೇಶ್)
ಸಾಹಿತ್ಯ: ಶಶಾಂಕ್ ಮತ್ತು ಪ್ರಹ್ಲಾದ್ ರಾಜ್

ನಾಯಕಿಯನ್ನು ನಾಯಕ ಸದಾ ಕಾಯುತ್ತಿರುತ್ತಾನೆ. ಫೋನಲ್ಲಿ ನಡೆಸುವ ಸಂಭಾಷಣೆ ಈ ಹಾಡಿನ ಸಾಹಿತ್ಯ. ಟ್ಯೂನ್ ಬಗ್ಗೆ ಸಂಗೀತ ನಿರ್ದೇಶಕರು ತಲೆ ಕೆಡಿಸಿ ಕೊಳ್ಳದೆ ಉಪೇಂದ್ರ ಇಮೇಜ್‌ಗೆ ತಕ್ಕಂತೆ ಸಂಗೀತ ನೀಡಿದ್ದಾರೆ. ಹಾಡು ಸುಮಾರಾಗಿದೆ.

4. ಹಳೇ ಹುಬ್ಬಳ್ಳಿ ಬಸ್ಟ್ಯಾಂಡ್ ಮೇಲೆ ನಿಂತಿದ್ದೆ (ಅರ್ಜುನ್ ಜನ್ಯ)
ಸಾಹಿತ್ಯ: ಯೋಗರಾಜ್ ಭಟ್

ಈ ಹಾಡು ಪಕ್ಕಾ ಮಾಸ್ ಗೆ. ಉತ್ತರ ಕರ್ನಾಟಕ ಶೈಲಿಯಲ್ಲಿರುವ ಈ ಹಾಡು ಆ ಭಾಗದ ಜನರನ್ನು ಸೆಳೆಯುವುದರಲ್ಲಿ ಸಂಶಯ ಬೇಡ. ಹಾಡು ಸಂಪೂರ್ಣ ಫಾಸ್ಟ್ ಪಿಚ್ ನಲ್ಲಿದೆ. ಹುಬ್ಬಳ್ಳಿ ಕನ್ನಡ ಭಾಷೆ, ಜೀವನಶೈಲಿಗೆ ತಕ್ಕಂತೆ ಭಟ್ರು ಉತ್ತಮ ಸಾಹಿತ್ಯ ನೀಡಿದ್ದಾರೆ.

5. ಯಾರಾದ್ರೂ ಹಾಳಾಗೋಗ್ಲಿ ನಾವಿಷ್ಟೇ ಇದ್ರೆ ಸಾಕು (ಕೈಲಾಶ್ ಖೇರ್, ಶಶಾಂಕ್ ಶೇಷಗಿರಿ, ಹರ್ಷ ಸದಾನಂದ )
ಸಾಹಿತ್ಯ: ಶಶಾಂಕ್

ಯಾರು ಹೇಗೇ ಇರಲಿ, ಬೇನಾಮಿ ಆಸ್ತಿ ಮಾಡಿ ತಾನು ಸಾಚಾ ಎಂದು ಗಂಟೆ ಹೊಡಿಯ ಬೇಕು, ಪ್ರಳಯ ಕೂಡಾ ಆಗ್ತಿಲ್ಲ. ಕುಡಿತದ ಬಗ್ಗೆ ಕೂಡಾ ಸಾಹಿತ್ಯ ವಿರುವ ಹಾಡು. ಇಂದಿನ ಪ್ರಾಪಂಚಿಕ ಜಗತ್ತಿನ ಬಗ್ಗೆ ಶಶಾಂಕ್ ಹಾಡಿನ ಮೂಲಕ ಪ್ರೇಕ್ಷಕರಿಗೆ ತಿಳಿಸಿದ್ದಾರೆ.

ಫೇಸ್‌ಬುಕ್‌ನಲ್ಲಿ ಗಂಡನ ಸಮಸ್ಯೆ ಹೇಳಿದ ಸೆಕ್ಸಿ ತಾರೆ

ಫೇಸ್‌ಬುಕ್ಕನ್ನು ಹೀಗೂ ಬಳಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಬಾಲಿವುಡ್‌ನ ಅಂದಕಾಲತ್ತಿಲ್ ಸೆಕ್ಸಿ ತಾರೆ ಮನೀಷಾ ಕೋಯಿರಾಲಾ. ಈಗಾಗಲೆ ನಲವತ್ತು ಪ್ಲಸ್ ವಯಸ್ಸು ದಾಟಿರುವ ಈಕೆ ಮದುವೆಯಾಗಿ ಒಂದು ವರ್ಷ ಕಳೆಯುವಷ್ಟರಲ್ಲೆ ತನ್ನ ಸಂಸಾರದ ಗುಟ್ಟುಗಳನ್ನು ಫೇಸ್‌ಬುಕ್‌ನಲ್ಲಿ ಬಿಚ್ಚಿಟ್ಟಿದ್ದಾರೆ.

ಅನಿವಾಸಿ ಭಾರತೀಯ ಉದ್ಯಮಿ ಸಾಮ್ರಾಟ್ ದಹಲ್‌ ಕೈಹಿಡಿದ ಬಳಿಕ ಮನಿಷಾ ಸಂಸಾರದಲ್ಲಿ ಅಪಸ್ವರಗಳೂ ಕೇಳಿಬಂದಿದ್ದವು. ಬಳಿಕ ಇದೆಲ್ಲಾಯಾರೋ ಹಬ್ಬಿಸುತ್ತಿರುವ ಪುಕಾರು ಎಂದು ಮನೀಷಾ ಸ್ಪಷ್ಟಪಡಿಸಿದ್ದರು. ಈಗ ಮತ್ತೊಮ್ಮೆ ತನ್ನ ಗಂಡನ ಬಗ್ಗೆ ಫೇಸ್ ಬುಕ್‌ನಲ್ಲಿ ಸಣ್ಣ ಸುದ್ದಿ ಲೀಕ್ ಮಾಡಿದ್ದಾರೆ.

"ನನ್ನ ಗಂಡ ನನಗೆ ಶತ್ರುವಾಗಿ ಪರಿಣಮಿಸಿದ್ದಾನೆ. ಮಹಿಳೆಗೆ ಇದಕ್ಕಿಂತ ದುಃಖದ ಸಂಗತಿ ಇನ್ನೇನು ಇರಲಿಕ್ಕೆ ಸಾಧ್ಯ?" ಎಂದಿದ್ದಾರೆ. ಈ ಹಿಂದೊಮ್ಮೆ ಇಬ್ಬರೂ ಶರಂಪರ ಕಿತ್ತಾಡಿ ಇನ್ನೇನು ಇವರಸಂಸಾರ ಬೀದಿಗೆ ಬೀಳಬೇಕು, ಅಷ್ಟರಲ್ಲಿ ಇವರಿಬ್ಬರಸಂಬಂಧಿಕರು ಮಧ್ಯೆ ಪ್ರವೇಶಿಸಿ ಹಳಿ ತಪ್ಪಿದ್ದ ಸಂಸಾರವನ್ನು ಸರಿ ಮಾಡಿದ್ದರು. ಈಗ ಮತ್ತೊಮ್ಮೆ ಇವರಿಬ್ಬರ ನಡುವೆ ಹೊಗೆಯಾಡುತ್ತಿವೆ

ಬೆತ್ತಲೆ ಚಿತ್ರ ಕಂಡು ಕಂಗಾಲಾದ ನಟಿ ಕಾಜಲ್

ಬಾಲಿವುಡ್ ನ ಥಳಕು ಬಳಕಿನ ಪ್ರಪಂಚದ ಚಾಲ್ ಗಳನ್ನು ಈಗಷ್ಟೇ ಕಲಿಯುತ್ತಿರುವ ಸಿಂಗಂ ಚಿತ್ರ ಖ್ಯಾತಿಯ ಕಾಜಲ್ ಅಗರವಾಲ್ ತೆರೆದೆದೆಯ ಚಿತ್ರವನ್ನು ಮುಂಬೈ ಮೂಲದ ಪತ್ರಿಕೆ ಮುಖಪುಟದಲ್ಲಿ ಪ್ರಕಟಿಸಿದೆ.

ಪುರುಷರಿಗಾಗಿ ಇರುವ ಎಫ್ ಎಚ್ ಎಂ ಮ್ಯಾಗಜೀನ್ ನ ಮುಖಪುಟದಲ್ಲಿ ಕಾಜಲ್ ತನ್ನ ಸ್ತನಗಳನ್ನು ಕೈಗಳಿಂದ ಅಡ್ಡಡ್ಡವಾಗಿ ಮುಚ್ಚಿಟ್ಟುಕೊಂಡಿರುವ ಚಿತ್ರವಿದೆ. ಆದರೆ, ಇದು ಕೀಳುಮಟ್ಟದ ವರದಿಗಾರಿಕೆ, ನಾನು ಆ ರೀತಿ ಎಂದಿಗೂ ಪೋಸ್ ನೀಡಿಲ್ಲ ಎಂದು ನಟಿ ಕಾಜಲ್ ಹೇಳಿದ್ದಾರೆ.

ಕಾಜಲ್ ಅವರ ಮುಖವನ್ನು ಬೇರೆ ಯಾರದೋ ದೇಹಕ್ಕೆ ಅಂಟಿಸಿ ಮಾರ್ಫ್ ಮಾಡಲಾದ ಚಿತ್ರವನ್ನು ಬಳಸಲಾಗಿದೆ. ಈಗಷ್ಟೇ ಹಿಂದಿ ಚಿತ್ರರಂಗಕ್ಕೆ ಕಾಲಿಡುತ್ತಿರುವ ಕಾಜಲ್ ಮುಖಭಂಗ ಮಾಡಲು ಯಾರೋ ಕುಹಕಿಗಳು ಈ ರೀತಿ ಮಾಡಿದ್ದಾರೆ.

ಅಕ್ಕನಿಗೆ ತಂಗಿ ಸಾಥ್: ಕಾಜಲ್ ಇಮೇಜ್ ಕೆಡಿಸಲು ಪತ್ರಿಕೆ ಮಾಡಿರುವ ಗಿಮಿಕ್ ಇದು ಎಂದು ಕಾಜಲ್ ತಂಗಿ ನಟಿ ನಿಶಾ ಅಗರವಾಲ್ ಹೇಳಿದ್ದಾರೆ. ಕನಸಿನಲ್ಲೂ ಈ ರೀತಿ ನನ್ನಕ್ಕ ಕಾಣಿಸಿಕೊಳ್ಳುವುದಿಲ್ಲ ಎಂದು ನಿಶಾ ಸ್ಪಷ್ಟವಾಗಿ ಹೇಳುತ್ತಾರೆ.

ಮ್ಯಾಗಜೀನ್ ನಲ್ಲಿ ಆ ರೀತಿ ಚಿತ್ರ ಕಾಣಿಸಿಕೊಂಡ ಮೇಲೆ ಕುಟುಂಬದ ಸದಸ್ಯರು ಕಂಗಾಲಾಗಿದ್ದಾರೆ. ಆಪ್ತೇಷ್ಟರಿಂದ ಕರೆಗಳು ಬರುತ್ತಿದೆ. ಎಲ್ಲರಿಗೂ ಉತ್ತರ ಕೊಡುವಷ್ಟರಲ್ಲಿ ಸಾಕಾಗಿ ಹೋಗಿದೆ. ಜನಕ್ಕೆ ನಿಜಕ್ಕಿಂತ ಸುಳ್ಳಿನ ಮೇಲೆ ನಂಬಿಕೆ ಹೆಚ್ಚು ಏನು ಮಾಡೋದು. ಪತ್ರಿಕೆ ವಿರುದ್ಧ ದೂರು ನೀಡಲು ಚಿಂತನೆ ನಡೆದಿದೆ ಎಂದು ನಿಶಾ ಹೇಳುತ್ತಾರೆ.

ಬಾಲಿವುಡ್ ನಲ್ಲಿ ಬಿಗ್ ಆಫರ್ ಗಳಿಸಲು ಕಾಜಲ್ ಈ ರೀತಿ ಮಾಡಿರಬಹುದು ಎಂದು ತಿಳಿದಿದ್ದ ಬಾಲಿವುಡ್ ನ ಕೆಲ ಮಂದಿಗೆ ಕಾಜಲ್ ನಿರಾಕರಿಸಿದ ಮೇಲೆ ಒಂದಿಷ್ಟು ನಿರಾಶೆಯಾಗಿದೆ. ಕಾಜಲ್ ಮಾತ್ರ ಪತ್ರಿಕೆಯನ್ನು ಶಪಿಸುತ್ತಾ ಮನೆಯಲ್ಲೇ ಕೂತಿದ್ದಾರೆ.

ಕಿರಿಕಿರಿ ಕರೆ, ಎಸ್ಎಂಎಸ್ ಗೆ ಬಿತ್ತು ಕಡಿವಾಣ

ನವದೆಹಲಿ, ಸೆ.6: ಸೆ.27ರಿಂದ ಅನಪೇಕ್ಷಿತ ಕಿರಿಕಿರಿ ಕರೆ ಹಾಗೂ ಎಸ್ಎಂಎಸ್ ನಿಷೇಧ ಜಾರಿಗೊಳಿಸಲು ಭಾರತೀಯ ದೂರವಾಣಿ ನಿಯಂತ್ರಣ ಪ್ರಾಧಿಕಾರ 'ಟ್ರಾಯ್' ನಿರ್ಧರಿಸಿದೆ.

ಟೆಲಿ ಮಾರುಕಟ್ಟೆ ಕಂಪೆನಿಗಳಿಂದ ಮೊಬೈಲ್ ಮತ್ತು ಸ್ಥಿರ ದೂರವಾಣಿಗಳಿಗೆ ಬರುವ ವಾಣಿಜ್ಯ ಕರೆ ಮತ್ತು 'ಎಸ್‌ಎಂಎಸ್'ಗಳಿಂದ ಗ್ರಾಹಕರು ಮುಕ್ತರಾಗಬಹುದು.

ಕಿರಿಕಿರಿ ಕರೆ ತಪ್ಪಿಸಿಕೊಳ್ಳಲು ರಾಷ್ಟ್ರೀಯ ಗ್ರಾಹಕ ಆದ್ಯತಾ ನೋಂದಣಿಯಲ್ಲಿ (ಎನ್‌ಸಿಪಿಆರ್) ನೋಂದಾಯಿಸಿಕೊಂಡರೆ ಸಾಕು. ವಾಣಿಜ್ಯ ಕರೆಗಳ ಕಿರಿಕಿರಿ ತಪ್ಪಲಿದೆ.

ದೇಶದಲ್ಲಿ 850 ದಶಲಕ್ಷ ಮೊಬೈಲ್ ಮತ್ತು 34 ದಶಲಕ್ಷ ಸ್ಥಿರ ದೂರವಾಣಿ ಚಂದಾದಾರರಿದ್ದಾರೆ. ಟೆಲಿ ಮಾರುಕಟ್ಟೆ ಕರೆಗಳಿಗೆ ಟ್ರಾಯ್ '140' ಸಂಖ್ಯಾ ಸರಣಿ ನಿಗದಿಪಡಿಸಿದೆ. ಈ ಸಂಖ್ಯೆಗಳಿಂದ ಅಂತ್ಯಗೊಳ್ಳುವ ಕರೆಗಳನ್ನು ಗ್ರಾಹಕರು ಸುಲಭವಾಗಿ ಗುರುತಿಸಿ, ಆ ಸಂಖ್ಯೆಗಳ ನಿಷೇಧಕ್ಕೆ ಮನವಿ ಸಲ್ಲಿಸಬಹುದು.
  Read:  In English 
ಭಾರಿ ದಂಡ : ನಿಯಮ ಉಲ್ಲಂಘಿಸುವ ಟೆಲಿ ಮಾರುಕಟ್ಟೆ ಸಂಸ್ಥೆಗಳಿಗೆ 25 ಸಾವಿರ ರೂ.ನಿಂದ 2.5 ಲಕ್ಷ ರೂ ವರೆಗೂ ದಂಡ ವಿಧಿಸಲಾಗುವುದು ಎಂದು ಟ್ರಾಯ್ ಎಚ್ಚರಿಕೆ ನೀಡಿದೆ.

ಸುಮಾರು 130 ದಶಲಕ್ಷ ಮೊಬೈಲ್ ಚಂದಾದಾರರು ಅನಪೇಕ್ಷಿತ ಕರೆ ನಿಷೇಧಕ್ಕಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಪ್ರತಿ ತಿಂಗಳು ಸುಮಾರು 47 ಸಾವಿರ ದೂರುಗಳು ದಾಖಲಾಗುತ್ತಿವೆ. ಸುಮಾರು 72 ಸಾವಿರ ನೋಂದಾಯಿತ ಟೆಲಿ ಮಾರುಕಟ್ಟೆ ಸಂಪರ್ಕಗಳನ್ನು ಟ್ರಾಯ್ ರದ್ದುಗೊಳಿಸಿದೆ.

ಕತ್ತಲಗರ್ಭದ ಮಿಂಚು ಬಿಡುಗಡೆ..

ಸೆ.೧೧ರಂದು ಸಂಜೆ ೫.೩೦ಕ್ಕೆ ಬೆಂಗಳೂರಿನ ಕನ್ನಡ ಭವನದ ನಾಟಕ ಅಕಾಡೆಮಿ ಚಾವಡಿಯಲ್ಲಿ ಹನುಮಂತ ಹಾಲಿಗೇರಿಯವರ  ಕಥಾಸಂಕಲನ “ಕತ್ತಲಗರ್ಭದ ಮಿಂಚು” ಬಿಡುಗಡೆಯಾಗುತ್ತಿದೆ.
ಇದರಲ್ಲಿನ ೬ ಕಥೆಗಳು ಕಥಾಸ್ಪರ್ದೆಯಲ್ಲಿ ಭಾಗವಹಿಸಿ ಬಹುಮಾನಗಳು ಪಡೆದುಕೊಂಡಿವೆ. ಈ ಸಂಕಲನ ಪ್ರಕಟಣೆಯ ಮುನ್ನ ಕನ್ನಡ ಪುಸ್ತಕ ಪ್ರಾದಿಕಾರದ ಪ್ರೊತ್ಸಾಹ ಧನ ಪಡೆದುಕೊಂಡಿದ್ದು, ಪ್ರಕಟಣೆಯ ನಂತರ ಕನ್ನಡ ಸಾಹಿತ್ಯ ಪರಿಷತ್ತಿನ ಬಿಳಗಿ ಘಟಕದ ದತ್ತಿ ಪ್ರಶಸ್ತಿಯನ್ನು ಬಾಚಿಕೊಂಡಿದ.. . ಇಲ್ಲಿನ ಎಲ್ಲ ಕಥೆಗಳು ಶೋಷಣೆಯ ದವಡೆಯಲ್ಲಿ ಸಿಕ್ಕ ದಲಿತರ ಮತ್ತು ಸ್ತ್ರೀಯರ ಹೋರಾಟ ಮತ್ತು ಜೀವನ ಪ್ರೀತಿಯನ್ನು ಒಟ್ಟೊಟ್ಟಿಗೆ ವಿವರಿಸುವ ಕಥಾವಸ್ತುವನ್ನು ಒಳಗೊಂಡಿವೆ.
ಕತೆಗಾರ ನಾಗತಿಹಳ್ಳಿ ಚಂದ್ರಶೇಖರ್ ಪುಸ್ತಕ ಬಿಡುಗಡೆ ಮಾಡಲಿದ್ದು, ಕವಿ ಎಲ್.ಎನ್.ಮುಕುಂದರಾಜ್ ಕಥೆಗಳ ಕುರಿತು ಮಾತನಾಡಲಿದ್ದಾರೆ. ಮೇಸ್ಟ್ರು ಎಸ್.ಜಿ.ಸಿದ್ದರಾಮಯ್ಯ ಅಧ್ಯಕ್ಷತೆವಹಿಸಲಿದ್ದಾರೆ.

M S Subbulakshmi Bhagyada Lakshmi PUrandara

ಪ್ರಕಟಣೆ