ಪುಟಗಳು

ಬ್ರೇಕಿಂಗ್ ನ್ಯೂಸ್: ವೈಶಾಲಿ ಕಾಸರವಳ್ಳಿ ನಿಧನ


ವೈಶಾಲಿ ಕಾಸರವಳ್ಳಿ ;
ಹುಟ್ಟಿದ್ದು ಗುಲ್ಬರ್ಗ ದಲ್ಲಿ.
ತಂದೆ: ಡಾ. ವೆಂಕಟರಾವ್ ಚಿಟಗೋಪಿ
ತಾಯಿ : ನಿರ್ಮಲಾ ಚಿಟಗೋಪಿ
ದಿನಾಂಕ 12. 04.1952.
ಡಾ ವೆಂಕಟರಾವ್ ಚಿಟಗೋಪಿಯವರು ವೃತ್ತಿಯಲ್ಲಿ ಡಾಕ್ಟರರಾದರೂ ನಾಟಕ ಸಿನೆಮಾ ಕ್ಷೇತ್ರವೆಂದರೆ ಅವರಿಗೆ ಬಹಳ ಅಕರಾಸ್ಥೆ. ಹೈದರಾಬಾದ್ ಸಂಸ್ಥಾನದಲ್ಲಿನ ಅಧಿಕಾರಿಯೊಬ್ಬರ ಮಗನಾಗಿದ್ದ ಅವರು ಸಿನಿಮಾದ ಗೀಳು ಹಿಡಿಸಿ ಕೊಂಡು ಕೊಲ್ಲಾಪುರಕ್ಕೆ 1940ರ ಸುಮಾರಿಗೆ ಹೋಗಿ ವಿ.ಶಾಂತಾರಾಂ ರ ಒಂದು ಸಿನಿಮಾಕ್ಕೆ ಸಹಾಯಕರಾಗಿ ಕೆಲಸ ಮಾಡುತ್ತಾರೆ. ನಂತರ ಗುಬ್ಬಿ ಕಂಪನಿಯ ಸಂಪರ್ಕ ಬಂದು ಆ ಕಂಪನಿಯ ರೆಸಿಡೆಂಟ್ ಡಾಕ್ಟರ್ ಆಗುತ್ತಾರೆ. ನಾಟಕಗಳಲ್ಲಿ ಪಾತ್ರವಹಿಸಲೂ ಆರಂಭಿಸುತ್ತಾರೆ. ಆಗ ಕುಂದಾಪುರದ ನಿರ್ಮಲಾ ರ ಪರಿಚಯವಾಗಿ ಅವರನ್ನು ಮದುವೆಯಾಗುತ್ತಾರೆ. ಅವರ ಏಕಮಾತ್ರ ಪುತ್ರಿ ವೈಶಾಲಿ.
ನಿರ್ಮಲಾ ಅವರು ಉತ್ತಮ ಹಾಡುಗಾರ್ತಿಯಾಗಿದ್ದರು. ಆಗ ಗುಬ್ಬಿ ಕಂಪನಿಯಲ್ಲಿ ಪಾತ್ರ ಮಾಡುತ್ತಿದ್ದ ಬಿ,ವಿ.ಕಾರಂತರು ಇವರ ಮನೆಗೆ ಬರುತ್ತಿದ್ದರು. ಚಿಕ್ಕ ಬಾಲಕಿ ವೈಶಾಲಿಗೆ ಅವರೇ ಪ್ರಥಮ ಗುರು. ಅಕ್ಷರಾಭ್ಯಾಸ ಮಾಡಿಸಿದ್ದೂ ಅವರೇ. ಸಂಜೆ ಪಾಠ ಮಾಡುತ್ತಿದ್ದುದೂ ಅವರೇ. ವೈಶಾಲಿ ಚಿಕ್ಕವಳಿದ್ದಾಗ ಗುಬ್ಬಿ ಕಂಪನಿಯ ಚಿಕ್ಕ ಚಿಕ್ಕ ಪಾತ್ರಗಳನ್ನೂ ಮಾಡುತ್ತಿದ್ದರು. ಕುರುಕ್ಷೇತ್ರ ನಾಟಕದಲ್ಲಿ ಬಿ.ಜಯಶ್ರೀ ಹಾಗೂ ವೈಶಾಲಿ ವಟುಗಳ ಪಾತ್ರ ಮಾಡುತ್ತಿದ್ದರು.
ಮಗಳು 8 ವರ್ಷದವಳಾಗಿದ್ದಾಗ ತಾಯಿ ನಿರ್ಮಲಾ ರವರು ಮಗಳನ್ನು ಓದಿಸುವ ಉದ್ದೇಶದಿಂದ ಕಂಪನಿ ಜೊತೆಗೆ ತಿರುಗಾಟ ನಿಲ್ಲಿಸಿ ಎಲ್ಲಾದರೂ ಮನೆ ಮಾಡಿ ಎಂದು ಒತ್ತಾಯ ಮಾಡಿದಾಗ ಡಾ ಚಿಟಗೋಪಿಯವರು ಆರಿಸಿ ಕೊಂಡ ಊರು ತಮ್ಮ ಹುಟ್ಟೂರಾದ ಚಿಟಗೋಪಾದ ಹತ್ತಿರದ ಗುಲ್ಬರ್ಗಾ. ವೈಶಾಲಿಯವರ ಶಿಕ್ಷಣವೆಲ್ಲಾ ನಡೆದ್ದ್ದು ಗುಲ್ಬರ್ಗಾದಲ್ಲೇ. ಶರಣ ಬಸಪ್ಪಾ ಶಾಲೆ ಪ್ರಾಥಮಿಕ ಶಿಕ್ಷಣ, ನೂತನ ಮಹಿಳಾ ವಿದ್ಯಾಲಯದಲ್ಲಿ ಬಿ.ಎ ಮುಗಿಸಿದರು. ಶಾಲಾ ದಿನಗಳಲ್ಲೇ ನಾಟಕ, ಏಕ ಪಾತ್ರಾಭಿನಯ ದಲ್ಲಿ ಅಭಿನಯಿಸಿ ಅನೇಕ ಪಾರಿತೋಷಕ ಪಡೆದಿದ್ದರು. ವೈಶಾಲಿ ಅಭಿನಯಿಸಿದರೆ ಬೇರಾರಿಗೂ ಪಾರಿತೋಷಕ ಬಿಟ್ಟು ಕೊಡುವುದಿಲ್ಲ ಎನ್ನುವ ಮಾತು ಶಾಲಾ ದಿನಗಳಲ್ಲಿ ಚಾಲ್ತಿಯಲ್ಲಿತ್ತು.
1967ಕ್ಕೆ ಡಾ ಚಿಟಗೋಪಿಯವರು ಬೆಂಗಳೂರಿಗೆ ಬಂದು ನೆಲೆಸಿದರು. ವೈದ್ಯ ವೃತ್ತಿಯೊಂದಿಗೇ ಕನ್ನಡ ಸಿನಿಮಾದ ಸಂಪರ್ಕ ಬಂತು. ಕೆ.ಸಿ.ಎನ್ ಮೂವೀಸ್, ವೀರಾಸಾಮಿಯವರ ಈಶ್ವರಿ ಪಿಕ್ಚರ್ಸ್ ಸಂಸ್ತೆಯ ಕೆಲವು ಚಿತ್ರಗಳಲ್ಲಿ ದುಡಿದರು. ಡಾ. ಚಿಟಗೋಪಿಯವರಿಗಿದ್ದ ಇಂಗ್ಲೀಷ್,ಹಿಂದಿ ಹಾಗೂ ಮರಾಠಿ ಮೇಲಿನ ಪ್ರಭುತ್ವ ಅವರಿಗೊಂದು ವಿಶೇಷ ಸ್ಥಾನ ದೊರಕಿಸಿ ಕೊಡುವಲ್ಲಿ ಸಹಕಾರಿಯಾಗಿತ್ತು. ಕೆಲವು ಮರಾಠಿ ಸಿನಿಮಾಗಳ ಹಕ್ಕನ್ನು ಪಡೆಯುವಲ್ಲಿಯೂ ಅವರ ನೆರವು ವಿಶೇಷವಾಗಿತ್ತು.
ವೈಶಾಲಿಯವರ ನಾಟಕರಂಗದ ಸಾಧನೆಗಳು
1967ರ ಸುಮಾರಿಗೆ ರಾಷ್ಟ್ರಮಟ್ಟದಲ್ಲಿ ಬಹು ದೊಡ್ಡ ಹೆಸರಾಗಿದ್ದ ಬಿ. ವಿ.ಕಾರಂತರು ದೆಹಲಿಯಿಂದ ತಮ್ಮ ವಾಸ್ತವ್ಯವನ್ನು ಬೆಂಗಳೂರಿಗೆ ಬದಲಾಯಿಸಿದಾಗ ಬಿಟ್ಟು ಹೋಗಿದ್ದ ಹಳೆಯ ನೆಂಟು ಮತ್ತೆ ಚಿಗುರಿತು.ಹವ್ಯಾಸಿ ರಂಗ ಭೂಮಿಯ ನಾಟಕಗಳಲ್ಲಿ ನಟಿಸಲು ಬಿ. ವಿ. ಕಾರಂತರಿಂದ ಒತ್ತಾಯ ಬಂದಾಗ ತಂದೆ ತಾಯಿಯರ ಒಪ್ಪಿಗೆ ದೊರೆತು ವೈಶಾಲಿ ಬೆಂಗಳೂರಿನ ರಂಗಭೂಮಿಯಲ್ಲಿ ಪಾದಾರ್ಪಣೆ ಮಾಡಿದರು. ಕಾರಂತ ನಿರ್ದೇಶನದಲ್ಲಿ ರೂಪಗೊಂಡ ಪಿರಾಂಡಲೋ ನ ‘ನಾಟಕಕಾರನ ಶೋಧನೆಯಲ್ಲಿ ಆರು ಪಾತ್ರಗಳು’ ನಾಟಕ ವೈಶಾಲಿಯವರ ಮೊದಲ ನಾಟಕ. ಅಲ್ಲಿಂದ ಅನೇಕ ನಾಟಕಗಳು ಒಂದರ ಹಿಂದೊಂದರಂತೆ ರಂಗವೇರ ತೊಡಗಿದವು. ಬಿ.ವಿ.ಕಾರಂತ್ ನಿರ್ದೇಶಿಸಿದ ಗಿರೀಶ್ ಕಾರ್ನಾಡ್ ರ ‘ಹಯವದನ’ ನಾಟಕ ವೈಶಾಲಿಯವರಿಗೆ ವಿಶೇಷ ಹೆಸರು ತಂದು ಕೊಟ್ಟಿತ್ತು. ಆ ನಾಟಕದ ಪದ್ಮಿನಿ ಪಾತ್ರ ನಿರ್ವಹಣೆಗಾಗಿ ಅಖಿಲ ಭಾರತ ವಿಮರ್ಶಕರ ಸಂಸ್ಥೆ(ಕೊಲತ್ತಾ) ಶ್ರೇಷ್ಠ ರಂಗಭೂಮಿ ನಟಿ ಪ್ರಶಸ್ತಿ ಪಡೆದರು. ಆನಂತರ ಸಿ.ಆರ್.ಸಿಂಹ. ಪ್ರಸನ್ನ, ನಾಗೇಶ್, ಫ್ರಿಟ್ಜ್ ಬೆನೆವಿಟ್ಜ್, ಲೋಕನಾಥ್, ಶ್ರೀನಿವಾಸ ಪ್ರಭು, ರಣಜಿತ್ ಕಪೂರ್ ಮೊದಲಾದವರ ನಿರ್ದೇಶನದಲ್ಲಿ ನೂರಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದರು.
ಪ್ರಸನ್ನ, ಕಪ್ಪಣ್ಣ ಮೊದಲಾದವರ ಜೊತೆ ಸೇರಿ ಕನ್ನಡದ ಮೊದಲ ರೆಪರ್ಟರಿಯನ್ನೂ ಆರಂಭಿಸಿದರು. ಆದರೆ ಈ ರೆಪರ್ಟರಿ ದುರದೃಷ್ಟದಿಂದ ಬಹು ಕಾಲ ಬಾಳಲಿಲ್ಲ.
ಅಭಿನಯಿಸಿದ ಮುಖ್ಯ ನಾಟಕಗಳು
ಹಯವದನ
ಜೋಕುಮಾರ ಸ್ವಾಮಿ,
ಮಿಡ್ ಸಮ್ಮರ್ ನೈಟ್ಸ್ ಡ್ರೀಮ್
ದಂಗೆಯ ಮುಂಚಿನ ದಿನಗಳು
ನಾಟಕಕಾರನ ಶೋಧನೆಯಲ್ಲಿಆರು ಪಾತ್ರಗಳು
ನಾನೇನೋ ಹೇಳಬೇಕು,
ಎಲ್ಲರೂ ನಮ್ಮವರೇ.
ನಿರ್ದೇಶಿಸಿದ ನಾಟಕ
ಸೇವಂತಿ ಪ್ರಸಂಗ
ಅನುವಾದಿಸಿದ ನಾಟಕ
ಜಸ್ಮಾ ಓಡನ್. ( ಹಿಂದಿ ಯಿಂದ)
ನಾನೇನೋ ಹೇಳಬೇಕು ( ಮರಾಠಿಯಿಂದ)
ಸಂಧ್ಯಾಕಾಲ ( ಮರಾಠಿಯಿಂದ
ಬ್ಯಾರಿಸ್ಟರ್ ( ಮರಾಠಿಯಿಂದ)
ಸಿನಿಮಾ ರಂಗದ ಸಾಧನೆಗಳು
ಮೊದಲ ಚಿತ್ರ ಪ್ರೊಫೆಸರ್ ಹುಚ್ಚೂರಾಯದಿಂದ ಆರಂಭ ಗೊಂಡ ಇವರ ಚಿತ್ರ ಜೀವನದಲ್ಲಿ ಸುಮಾರು 60 ಕ್ಕೂ ಮೇಲ್ಪಟ್ಟ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಗಿರೀಶ್ ಕಾಸರವಳ್ಳಿ ನಿರ್ದೇಶನದ ಆಕ್ರಮಣ ಚಿತ್ರದಲ್ಲಿನ ಇವರ ಪ್ರಬುದ್ದ ಅಭಿನಯಕ್ಕಾಗಿ ಶ್ರೇಷ್ಠ ನಟಿ ರಾಜ್ಯ ಪ್ರಶಸ್ತಿಯನ್ನೂ ಪಡೆದಿದ್ದಾರೆ.
ಪ್ರೊ. ಹುಚ್ಚೂರಾಯ
ಭೂತಯ್ಯನ ಮಗ ಅಯ್ಯು
ಬಂಗಾರದ ಪಂಜರ
ಹೊಂಬಿಸಿಲು
ಶಂಕರ್ ಗುರು
ಪರಿವರ್ತನೆ
ಫಲಿತಾಂಶ
ಆಕ್ರಮಣ( ರಾಜ್ಯ ಪ್ರಶಸ್ತಿ- ಶ್ರೇಷ್ಠ ನಟಿ)
ಕಿಟ್ಟು ಪುಟ್ಟು
ತಬರನ ಕಥೆ
ಮಾನಸ ಸರೋವರ
ಮಮತೆಯ ಮಡಿಲು
ಯಾರಿಗೂ ಹೇಳ್ಬೇಡಿ
ಗಣೇಶನ ಮದುವೆ
ಗಣೇಶ- ಸುಬ್ರಹ್ಮಣ್ಯ
ಶ್ರುತಿ
ಹೊಸ ಜೀವನ
ನಮ್ಮಮ್ಮನ ಸೊಸೆ
ಕುಬಿ ಮತ್ತು ಇಯಾಲ
ತವರು ಮನೆ ಉಡುಗೊರೆ
ಎರಡು ಕನಸು
ಮಹಾ ದಾಸೋಹಿ ಶರಣ ಬಸಪ್ಪ
ಹೆಣ್ಣೇ ನಿನಗೇನು ಬಂಧನ
ಚಿರಂಜೀವಿ ಸುಧಾಕರ
ಕಾಡಿನ ಬೆಂಕಿ
ಶರವೇಗದ ಸರದಾರ
ಡಾ. ಕೃಷ್ಣ
ಆಸೆಗೊಬ್ಬ- ಮೀಸೆಗೊಬ್ಬ
ಅಗ್ನಿ ಪಂಜರ
ಅಂಗೈಲಿ ಅಪ್ಸರೆ
ಅನುಕೂಲಕ್ಕೊಬ್ಬ ಗಂಡ
ಟಿ.ವಿ.ಧಾರಾವಾಹಿಯ ಸಾಧನೆಗಳು
ಸುಮಾರು 50ಕ್ಕೂ ಮೇಲ್ಪಟ್ಟು ಧಾರಾವಾಹಿ ಗಳಲ್ಲಿ ಅಭಿನಯಿಸಿದ್ದಾರೆ.
ಅವುಗಳಲ್ಲಿ ಮುಖ್ಯವಾದವು
ನಮ್ಮ ನಮ್ಮಲ್ಲಿ
ಕಸ ಮುಸುರೆ ಸರೋಜಾ
ಮಾಲ್ಗುಡಿ ಡೇಸ್ ( ಹಿಂದಿ)
ಕ್ಷಮಯಾ ಧರಿತ್ರಿ
ಮಾಯಾ ಮ್ರುಗ,
ಮನ್ವಂತರ
ಸಾಧನೆ
ನಿರ್ದೇಶಿಸಿದ ಕೃತಿಗಳು :
ನಾಟಕ ಸೇವಂತಿ ಪ್ರಸಂಗ
ಸಾಕ್ಷ ಚಿತ್ರ ನೆಮ್ಮದಿಯ ಬದುಕು
ಯಕ್ಷಗಾನ ಬಯಲಾಟ
ಟಿ.ವಿ ಚಿತ್ರ ನೂರೊಂದು ಬಾಗಿಲು
ಟಿ. ವಿ ಧಾರಾವಾಹಿ ಗೂಡಿನಿಂಡ ಗಗನಕ್ಕೆ
ಮೂಕ ರಾಗ
ಮೂಡಲ ಮನೆ
ಮುತ್ತಿನ ತೋರಣ
ಸಹನಿರ್ದೇಶಕರಾಗಿ ದುಡಿದ ಚಿತ್ರಗಳು
ತುಕ್ರ (ನಿರ್ದೇಶನ : ಬಿ.ವಿ.ಕಾರಂತ್)
ಬಣ್ಣದ ವೇಷ
ತಾಯಿ ಸಾಹೇಬ
ವಸ್ತ್ರ ವಿನ್ಯಾಸಕಿಯಾಗಿ
ಬಣ್ಣದ ವೇಷ
ಮನೆ
ಕುಬಿ ಮತ್ತು ಇಯಾಲ
ಕೌರ್ಯ
ತಾಯಿ ಸಾಹೇಬ (ವಸ್ತ್ರ ವಿನ್ಯಾಸಕ್ಕಾಗಿ ರಾಷ್ಟ್ರ ಪ್ರಶಸ್ತಿ )
ದ್ವೀಪ
ಕನಸೆಂಬೋ ಕುದುರೆಯನೇರಿ
ಸಂದ ಪ್ರಶಸ್ತಿಗಳು :
ರಾಜ್ಯೋತ್ಸವ ಪ್ರಶಸ್ತಿ 2004
ನಾಟಕ ಅಕಾಡೆಮಿ ಪ್ರಶಸ್ತಿ 2005
ಆಕ್ರಮಣ ಚಿತ್ರಕ್ಕಾಗಿ ಶ್ರೇಷ್ಠ ನಟಿ ರಾಜ್ಯ ಪ್ರಶಸ್ತಿ 1979
ತಾಯಿ ಸಾಹೇಬ ಚಿತ್ರದ ವಸ್ತ್ರ ವಿನ್ಯಾಸಕ್ಕಾಗಿ ರಾಷ್ಟ್ರಪ್ರಶಸ್ತಿ 1998
ಕೋ.ಮ ಕಾರಂತ ಪ್ರಶಸ್ತಿ 2005
ಅಖಿಲ ಭಾರತ ವಿಮರ್ಶಕರ ಪ್ರಶಸ್ತಿ
ಹಯವದನ ನಾಟಕದಲ್ಲಿನ ಅಭಿನಯಕ್ಕಾಗಿ 1977
ಒನಿಡಾ ಟಿ ವಿ ಪ್ರಶಸ್ತಿ ಟಿ.ವಿ ಧಾರಾವಾಹಿಯ ನಟನೆಗಾಗಿ
ಆರ್ಯ ಭಟ ಪ್ರಶಸ್ತಿ ಮೂಡಲ ಮನೆ ನಿದರ್ೇಶನಕ್ಕಾಗಿ
ಕನ್ನಡ ಚಿತ್ರ ರಸಿಕರ ಪ್ರಶಸ್ತಿ – ಕಿಟ್ಟು ಪುಟ್ಟು ಚಿತ್ರ ಹಾಗೂ ಹೊಂಬಿಸಿಲು ಚಿತ್ರಕ್ಕಾಗಿ
ವಾರಂಬಳ್ಳಿ ಪ್ರಶಸ್ತಿ
ರಾಣಿ ಬೆನ್ನೂರಿನಲ್ಲಿ ಬೆಳ್ಳಿ ಕಿರೀಟ ಪ್ರಧಾನ- ಮೂಡಲ ಮನೆ ಧಾರಾವಾಹಿಗಾಗಿ
ವೈಶಾಲಿ ಕಾಸರವಳ್ಳಿ ;ಹುಟ್ಟಿದ್ದು ಗುಲ್ಬರ್ಗ ದಲ್ಲಿ. ತಂದೆ: ಡಾ. ವೆಂಕಟರಾವ್ ಚಿಟಗೋಪಿತಾಯಿ : ನಿರ್ಮಲಾ ಚಿಟಗೋಪಿ ದಿನಾಂಕ 12. 04.1952.ಡಾ ವೆಂಕಟರಾವ್ ಚಿಟಗೋಪಿಯವರು ವೃತ್ತಿಯಲ್ಲಿ ಡಾಕ್ಟರರಾದರೂ ನಾಟಕ ಸಿನೆಮಾ ಕ್ಷೇತ್ರವೆಂದರೆ ಅವರಿಗೆ ಬಹಳ ಅಕರಾಸ್ಥೆ. ಹೈದರಾಬಾದ್ ಸಂಸ್ಥಾನದಲ್ಲಿನ ಅಧಿಕಾರಿಯೊಬ್ಬರ ಮಗನಾಗಿದ್ದ ಅವರು ಸಿನಿಮಾದ ಗೀಳು ಹಿಡಿಸಿ ಕೊಂಡು ಕೊಲ್ಲಾಪುರಕ್ಕೆ 1940ರ ಸುಮಾರಿಗೆ ಹೋಗಿ ವಿ.ಶಾಂತಾರಾಂ ರ ಒಂದು ಸಿನಿಮಾಕ್ಕೆ ಸಹಾಯಕರಾಗಿ ಕೆಲಸ ಮಾಡುತ್ತಾರೆ. ನಂತರ ಗುಬ್ಬಿ ಕಂಪನಿಯ ಸಂಪರ್ಕ ಬಂದು ಆ ಕಂಪನಿಯ ರೆಸೆಡೆಂಟ್ ಡಾಕ್ಟರ್ ಆಗುತ್ತಾರೆ. ನಾಟಕಗಳಲ್ಲಿ ಪಾತ್ರವಹಿಸಲೂ ಆರಂಭಿಸುತ್ತಾರೆ. ಆಗ ಕುಂದಾಪುರದ ನಿರ್ಮಲಾ ರ ಪರಿಚಯವಾಗಿ ಅವರನ್ನು ಮದುವೆಯಾಗುತ್ತಾರೆ. ಅವರ ಏಕ ಮಾತ್ರಾ ಪುತ್ರಿ ವೈಶಾಲಿ. ನಿರ್ಮಲಾ ಅವರು ಉತ್ತಮ ಹಾಡುಗಾತರ್ಿಯಾಗಿದ್ದರು. ಆಗ ಗುಬ್ಬಿ ಕಂಪನಿಯಲ್ಲಿ ಪಾತ್ರ ಮಾಡುತ್ತಿದ್ದ ಶ್ರೀ ಬಿ,ವಿ.ಕಾರಂತರು ಇವರ ಮನೆಗೆ ಬರುತ್ತಿದ್ದರು. ಚಿಕ್ಕ ಬಾಲಕಿ ವೈಶಾಲಿಗೆ ಅವರೇ ಪ್ರಥಮ ಗುರು. ಅಕ್ಷರಾಭ್ಯಾಸ ಮಾಡಿಸಿದ್ದೂ ಅವರೇ. ಸಂಜೆ ಪಾಠ ಮಾಡುತ್ತಿದ್ದಿದ್ದೂ ಅವರೆ. ವೈಶಾಲಿ ಚಿಕ್ಕವಳಿದ್ದಾಗ ಗುಬ್ಬಿ ಕಂಪನಿಯ ಚಿಕ್ಕ ಚಿಕ್ಕ ಪಾತ್ರಗಳನ್ನೂ ಮಾಡುತ್ತಿದ್ದರು. ಕುರುಕ್ಷೇತ್ರ ನಾಟಕದಲ್ಲಿ ಬಿ.ಜಯಶ್ರೀ ಹಾಗೂ ವೈಶಾಲಿ ವಟುಗಳ ಪಾತ್ರ ಮಾಡುತ್ತಿದ್ದರು. ಮಗಳು 8 ವರ್ಷದವಳಾಗಿದ್ದಾಗ ತಾಯಿ ನಿರ್ಮಲಾ ರವರು ಮಗಳನ್ನು ಓದಿಸುವ ಉದ್ದೇಶದಿಂದ ಕಂಪನಿ ಜೊತೆಗೆ ತಿರುಗಾಟ ನಿಲ್ಲಿಸಿ ಎಲ್ಲಾದರೂ ಮನೆ ಮಾಡಿ ಎಂದು ಒತ್ತಾಯ ಮಾಡಿದಾಗ ಡಾ ಚಿಟಗೋಪಿಯವರು ಆರಿಸಿ ಕೊಂಡ ಊರು ತಮ್ಮ ಹುಟ್ಟೂರಾದ ಚಿಟಗೋಪಾದ ಹತ್ತಿರದ ಗುಲ್ಬಗರ್ಾ. ವೈಶಾಲಿಯವರ ಶಿಕ್ಷಣವೆಲ್ಲಾ ನಡೆದ್ದ್ದು ಗುಲ್ಬಗರ್ಾದಲ್ಲೇ. ಶರಣ ಬಸಪ್ಪಾ ಶಾಲೆ ಪ್ರಾಥಮಿಕ ಶಿಕ್ಷಣ, ನೂತನ ಮಹಿಳಾ ವಿದ್ಯಾಲಯದಲ್ಲಿ ಬಿ.ಎ ಮುಗಿಸಿದರು. ಶಾಲಾ ದಿನಗಳಲ್ಲೇ ನಾಟಕ, ಏಕ ಪಾತ್ರಾಭಿನಯ ದಲ್ಲಿ ಅಭಿನಯಿಸಿ ಅನೇಕ ಪಾರಿತೋಷಕ ಪಡೆದಿದ್ದರು. ವೈಶಾಲಿ ಅಭಿನಯಿಸಿದರೆ ಬೇರಾರಿಗೂ ಪಾರಿತೋಷಕ ಬಿಟ್ಟು ಕೊಡುವುದಿಲ್ಲ ಎನ್ನುವ ಮಾತು ಶಾಲಾ ದಿನಗಳಲ್ಲಿ ಚಾಲ್ತಿಯಲ್ಲಿತ್ತು. 1967ಕ್ಕೆ ಡಾ ಚಿಟಗೋಪಿಯವರು ಬೆಂಗಳೂರಿಗೆ ಬಂದು ನೆಲೆಸಿದರು. ವೈದ್ಯ ವ್ರುತ್ತಿಯೊಂದಿಗೇ ಕನ್ನಡ ಸಿನಿಮಾದ ಸಂಪರ್ಕ ಬಂತು. ಕೆ.ಸಿ.ಎನ್ ಮೂವೀಸ್, ವೀರಾಸಾಮಿಯವರ ಈಶ್ವರಿ ಪಿಕ್ಚಸರ್್ ಸಂಸ್ತೆಯ ಕೆಲವು ಚಿತ್ರಗಳಲ್ಲಿ ದುಡಿದರು. ಡಾ, ಚಿಟಗೋಪಿಯವರಿಗಿದ್ದ ಇಂಗ್ಲೀಷ್,ಹಿಂದಿ ಹಾಗೂ ಮರಾಠಿ ಮೇಲಿನ ಪ್ರಭುತ್ವ ಅವರಿಗೊಂದು ವಿಶೇಷ ಸ್ಥಾನ ದೊರಕಿಸಿ ಕೊಡುವಲ್ಲಿ ಸಹಕಾರಿಯಾಗಿತ್ತು. ಕೆಲವು ಮರಾಠಿ ಸಿನಿಮಾಗಳ ಹಕ್ಕನ್ನು ಪಡೆಯುವಲ್ಲಿಯೂ ಅವರ ನೆರವು ವಿಶೇಷವಾಗಿತ್ತು.
ವೈಶಾಲಿಯವರ ನಾಟಕರಂಗದ ಸಾಧನೆಗಳು1967ರ ಸುಮಾರಿಗೆ ರಾಷ್ಟ್ರಮಟ್ಟದಲ್ಲಿ ಬಹು ದೊಡ್ಡ ಹೆಸರಾಗಿದ್ದ ಬಿ. ವಿ.ಕಾರಂತರು ದೆಹಲಿಯಿಂದ ತಮ್ಮ ವಾಸ್ತವ್ಯವನ್ನು ಬೆಂಗಳೂರಿಗೆ ಬದಲಾಯಿಸಿದಾಗ ಬಿಟ್ಟು ಹೋಗಿದ್ದ ಹಳೆಯ ನೆಂಟು ಮತ್ತೆ ಚಿಗುರಿತು.ಹವ್ಯಾಸಿ ರಂಗ ಭೂಮಿಯ ನಾಟಕಗಳಲ್ಲಿ ನಟಿಸಲು ಬಿ. ವಿ. ಕಾರಂತರಿಂದ ಒತ್ತಾಯ ಬಂದಾಗ ತಂದೆ ತಾಯಿಯರ ಒಪ್ಪಿಗೆ ದೊರೆತು ವೈಶಾಲಿ ಬೆಂಗಳೂರಿನ ರಂಗಭೂಮಿಯಲ್ಲಿ ಪಾದಾರ್ಪಣೆ ಮಾಡಿದರು. ಕಾರಂತ ನಿದರ್ೇಶನದಲ್ಲಿ ರೂಪಗೊಂಡ ಪಿರಾಂಡಲ್ಲೋ ನ ‘ನಾಟಕಕಾರನ ಶೋಧನೆಯಲ್ಲಿ ಆರು ಪಾತ್ರಗಳು’ ನಾಟಕ ವೈಶಾಲಿಯವರ ಮೊದಲ ನಾಟಕ. ಅಲ್ಲಿಂದ ಅನೇಕ ನಾಟಕಗಳು ಒಂದರ ಹಿಂದೊಂದರಂತೆ ರಂಗವೇರ ತೊಡಗಿದವು. ಬಿ.ವಿ.ಕಾರಂತ ಬರು ನಿದರ್ೇಷಿಸಿದ ಗಿರೀಶ್ ಕಾನರ್ಾಡ್ ರ ‘ಹಯವದನ’ ನಾಟಕ ವೈಶಾಲಿಯವರಿಗೆ ವಿಶೇಶ ಹೆಸರು ತಂದು ಕೊಟ್ಟಿತ್ತು. ಆ ನಾಟಕದ ಪದ್ಮಿನಿ ಪಾತ್ರ ನಿರ್ವಹಣೆಗಾಗಿ ಅಖಿಲ ಭಾರತ ವಿಮರ್ಶಕರ ಸಂಸ್ಥೆ(ಕೊಲತ್ತಾ) ಶ್ರೇಷ್ಠ ರಂಗಭೂಮಿ ನಟಿ ಪ್ರಶಸ್ತಿ ಪಡೆದರು. ಆನಂತರ ಸಿ.ಆರ್.ಸಿಂಹ. ಪ್ರಸನ್ನ, ನಾಗೇಶ್, ಫé್ರಿಟ್ಜ್ ಬೆನೆವಿಟ್ಜ್, ಲೋಕನಾಥ್, ಶ್ರೀನಿವಾಸ ಪ್ರಭು, ರಣಜಿತ್ ಕಪೂರ್ ಮೊದಲಾದವರ ನಿದರ್ೇಶನದಲ್ಲಿ ನೂರಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದರು.ಪ್ರಸನ್ನ, ಕಪ್ಪಣ್ಣ ಮೊದಲಾದವರ ಜೊತೆ ಸೇರಿ ಕನ್ನಡದ ಮೊದಲ ರೆಪರ್ಟರಿಯನ್ನೂ ಆರಂಭಿಸಿದರು. ಆದರೆ ಈ ರೆಪರ್ಟರಿ ದುರದೃಷ್ಟದಿಂದ ಬಹು ಕಾಲ ಬಾಳಲಿಲ್ಲ.ಅಭಿನಯಿಸಿದ ಮುಖ್ಯ ನಾಟಕಗಳು ಹಯವದನ ಜೋಕುಮಾರ ಸ್ವಾಮಿ, ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ ದಂಗೆಯ ಮುಂಚಿನ ದಿನಗಳು ನಾಟಕಕಾರನ ಶೋಧನೆಯಲ್ಲಿಆರು ಪಾತ್ರಗಳು ನಾನೇನೋ ಹೇಳಬೇಕು, ಎಲ್ಲರೂ ನಮ್ಮವರೇ.
ನಿದರ್ೇಶಿಸಿದ ನಾಟಕಸೇವಂತಿ ಪ್ರಸಂಗ
ಅನುವಾದಿಸಿದ ನಾಟಕ ಜಸ್ಮಾ ಓಡನ್. ( ಹಿಂದಿ ಯಿಂದ) ನಾನೇನೋ ಹೇಳಬೇಕು ( ಮರಾಠಿಯಿಂದ) ಸಂಧ್ಯಾಕಾಲ ( ಮರಾಠಿಯಿಂದ ಬ್ಯಾರಿಸ್ಟರ್ ( ಮರಾಠಿಯಿಂದ)
ಸಿನಿಮಾ ರಂಗದ ಸಾಧನೆಗಳು
ಮೊದಲ ಚಿತ್ರ ಪ್ರೊಫéೆಸ್ಸರ್ ಹುಚ್ಚೂರಾಯದಿಂದ ಆರಂಭ ಗೊಂಡ ಇವರ ಚಿತ್ರ ಜೀವನದಲ್ಲಿ ಸುಮಾರು 60 ಕ್ಕೂ ಮೇಲ್ಪಟ್ಟ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಗಿರೀಶ್ ಕಾಸರವಳ್ಳಿ ನಿದರ್ೇಶನದ ಆಕ್ರಮಣ ಚಿತ್ರದಲ್ಲಿನ ಇವರ ಪ್ರಭುದ್ದ ಅಭಿನಯಕ್ಕಾಗಿ ಶ್ರೇಷ್ಠ ನಟಿ ರಾಜ್ಯ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಪ್ರೊ. ಹುಚ್ಚೂರಾಯ ಭೂತಯ್ಯನ ಮಗ ಅಯ್ಯು ಬಂಗಾರದ ಪಂಜರ ಹೊಂಬಿಸಿಲು ಶಂಕರ ಗುರು ಪರಿವರ್ಥನೆ ಫಲಿತಾಂಶ ಆಕ್ರಮಣ( ರಾಜ್ಯ ಪ್ರಶಸ್ತಿ- ಶ್ರೇಷ್ಠ ನಟಿ) ಕಿಟ್ಟು ಪುಟ್ಟು ತಬರನ ಕಥೆ ಮಾನಸ ಸರೋವರ ಮಮತೆಯ ಮಡೀಲು ಯಾರಿಗೂ ಹೇಳ್ಬೇಡಿ ಗಣೇಶನ ಮದುವೆ ಗಣೇಶ- ಸುಬ್ರಹ್ಮಣ್ಯ ಶ್ರುತಿ ಹೊಸ ಜೀವನ ನಮ್ಮಮ್ಮನ ಸೊಸೆ ಕುಬಿ ಮತ್ತು ಇಯಾಲ ತವರು ಮನೆ ಉಡುಗೊರೆ ಎರಡು ಕನಸು ಮಹಾ ದಾಸೋಹಿ ಶರಣ ಬಸಪ್ಪ ಹೆಣ್ಣೇ ನಿನಗೇನು ಬಂಧನ ಚಿರಂಜೀವಿ ಸುಧಾಕರ ಕಾಡಿನ ಬೆಂಕಿ ಶರವೇಗದ ಸರದಾರ ಡಾ. ಕೃಷ್ಣ ಆಸೆಗೊಬ್ಬ- ಮೀಸೆಗೊಬ್ಬ ಅಗ್ನಿ ಪಂಜರ ಅಂಗೈಲಿ ಅಪ್ಸರೆ ಅನುಕೂಲಕ್ಕೊಬ್ಬ ಗಂಡ
ಟಿ.ವಿ.ಧಾರಾವಾಹಿಯ ಸಾಧನೆಗಳುಸುಮಾರು 50ಕ್ಕೂ ಮೇಲ್ಪಟ್ಟು ಧಾರಾವಾಹಿ ಗಳಲ್ಲಿ ಅಭಿನಯಿಸಿದ್ದಾರೆ. ಅವುಗಳಲ್ಲಿ ಮುಖ್ಯವಾದವು ನಮ್ಮ ನಮ್ಮಲ್ಲಿ ಕಸ ಮುಸುರೆ ಸರೋಜಾ ಮಾಲ್ಗುಡಿ ಡೇಯ್ಸ್ ( ಹಿಂದಿ) ಕ್ಷಮಯಾ ಧರಿತ್ರಿ ಮಾಯಾ ಮ್ರುಗ, ಮನ್ವಂತರ ಸಾಧನೆ ನಿದರ್ೇಶಿಸಿದ ಕೃತಿಗಳು :ನಾಟಕ ಸೇವಂತಿ ಪ್ರಸಂಗಸಾಕ್ಷ ಚಿತ್ರ ನೆಮ್ಮದಿಯ ಬದುಕು ಯಕ್ಷಗಾನ ಬಯಲಾಟ
ಟಿ.ವಿ ಚಿತ್ರ ನೂರೊಂದು ಬಾಗಿಲುಟಿ. ವಿ ಧಾರಾವಾಹಿ ಗೂಡಿನಿಂಡ ಗಗನಕ್ಕೆ ಮೂಕ ರಾಗ ಮೂಡಲ ಮನೆ ಮುತ್ತಿನ ತೋರಣ ಸಹನಿದರ್ೇಶಕರಾಗಿ ದುಡಿದ ಚಿತ್ರಗಳು ತುಕ್ರ (ನಿದರ್ೇಶನ : ಬಿ.ವಿ.ಕಾರಂತ್) ಬಣ್ಣದ ವೇಷ ತಾಯಿ ಸಾಹೇಬ ವಸ್ತ್ರ ವಿನ್ಯಾಸಕಿಯಾಗಿ ಬಣ್ಣದ ವೇಷ ಮನೆ ಕುಬಿ ಮತ್ತು ಇಯಾಲ ಕೌರ್ಯ ತಾಯಿ ಸಾಹೇಬ (ವಸ್ತ್ರ ವಿನ್ಯಾಸಕ್ಕಾಗಿ ರಾಷ್ಟ್ರ ಪ್ರಶಸ್ತಿ ) ದ್ವೀಪ ಕನಸೆಂಬೋ ಕುದುರೆಯನೇರಿ
ಸಂದ ಪ್ರಶಸ್ತಿಗಳು : ಕನರ್ಾಟಕ ರಾಜ್ಯೋತ್ಸವ ಪ್ರಶಸ್ತಿ 2004 ಕನರ್ಾಟಕ ನಾಟಕ ಅಕಾಡೆಮಿ ಪ್ರಶಸ್ತಿ 2005 ಆಕ್ರಮಣ ಚಿತ್ರಕ್ಕಾಗಿ ಶ್ರೇಷ್ಠ ನಟಿ ರಾಜ್ಯ ಪ್ರಶಸ್ತಿ 1979 ತಾಯಿ ಸಾಹೇಬ ಚಿತ್ರದ ವಸ್ತ್ರ ವಿನ್ಯಾಸಕ್ಕಾಗಿ ರಾಷ್ಟ್ರಪ್ರಶಸ್ತಿ 1998 ಕೋ.ಮ ಕಾರಂತ ಪ್ರಶಸ್ತಿ 2005 ಅಖಿಲ ಭಾರತ ವಿಮರ್ಶಕರ ಪ್ರಶಸ್ತಿ (ಂಟಟ ಟಿಜಚಿ ಅಡಿಣಛಿ ಂಠಛಿಚಿಣಠಟಿ, ಏಠಟಞಚಿಣಚಿ)ಹಯವದನ ನಾಟಕದಲ್ಲಿನ ಅಭಿನಯಕ್ಕಾಗಿ 1977 ಒನಿಡಾ ಟಿ ವಿ ಪ್ರಶಸ್ತಿ ಟಿ.ವಿ ಧಾರಾವಾಹಿಯ ನಟನೆಗಾಗಿ ಆರ್ಯ ಭಟ ಪ್ರಶಸ್ತಿ ಮೂಡಲ ಮನೆ ನಿದರ್ೇಶನಕ್ಕಾಗಿ ಕನ್ನಡ ಚಿತ್ರ ರಸಿಕರ ಪ್ರಶಸ್ತಿ – ಕಿಟ್ಟು ಪುಟ್ಟು ಚಿತ್ರ ಹಾಗೂ ಹೊಂಬಿಸಿಲು ಚಿತ್ರಕ್ಕಾಗಿ ವಾರಂಬಳ್ಳಿ ಪ್ರಶಸ್ತಿ ರಾಣಿ ಬೆನ್ನೂರಿನಲ್ಲಿ ಬೆಳ್ಳಿ ಕಿರೀಟ ಪ್ರಧಾನ- ಮೂಡಲ ಮನೆ ಧಾರಾವಾಹಿಗಾಗಿ

ನಲ್ನುಡಿ ಕಥಾಸ್ಪರ್ಧೆ-2010


ಕರ್ನಾಟಕ ರಕ್ಷಣಾ ವೇದಿಕೆಯ ಮುಖವಾಣಿ ‘ಕರವೇ ನಲ್ನುಡಿ ಮಾಸಪತ್ರಿಕೆ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ವಿಶೇಷಾಂಕವನ್ನು ಹೊರತರುತ್ತಿದ್ದು, ಕಥಾ ಸ್ಪರ್ಧೆಯನ್ನು ಏರ್ಪಡಿಸಿದ್ದು, ಕಥೆಗಾರರಿಂದ ಕಥೆಗಳನ್ನು ಆಹ್ವಾನಿಸಿದೆ. ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ. ಕಥೆಗಳನ್ನು ಕಳುಹಿಸಲು ಕಡೆಯ ದಿನಾಂಕ ಅಕ್ಟೋಬರ್ 20.ಪ್ರಥಮ ಬಹುಮಾನ 25,೦೦೦ ರೂ., ದ್ವಿತೀಯ ಬಹುಮಾನ15,೦೦೦ ರೂ., ತೃತೀಯ ಬಹುಮಾನ 1೦,೦೦೦ ರೂ. ಕನ್ನಡದ ಶ್ರೇಷ್ಠ ವಿಮರ್ಶಕರ ತಂಡವೊಂದು ಕಥಾಸ್ಪರ್ಧೆಯ ತೀರ್ಪು ನೀಡಲಿದ್ದು, ತೀರ್ಪುಗಾರರ ನಿರ್ಧಾರವೇ ಅಂತಿಮವಾಗಿರುತ್ತದೆ. ಮೆಚ್ಚುಗೆ ಪಡೆದ ಕಥೆಗಳನ್ನು ‘ನಲ್ನುಡಿ ಮಾಸಿಕದಲ್ಲಿ ಪ್ರಕಟಿಸಲಾಗುವುದು.
ಹಾಳೆಯ ಒಂದೇ ಮಗ್ಗುಲಲ್ಲಿ ಸ್ಫುಟವಾಗಿ ಬರೆದ ಕಥೆಗಳನ್ನು ಸಂಪಾದಕರು, ನಲ್ನುಡಿ ಕಥಾಸ್ಪರ್ಧೆ-೨೦೧೦, ಕರವೇ ನಲ್ನುಡಿ ಮಾಸಪತ್ರಿಕೆ, ಕನಸು ಕ್ರಿಯೇಷನ್ಸ್, ನಂ.೬/೨, ಶಿವಾನಂದ ವೃತ್ತ, ಕುಮಾರಕೃಪ ರಸ್ತೆ, ಬೆಂಗಳೂರು-೧ ಈ ವಿಳಾಸಕ್ಕೆ ಕಳುಹಿಸ ಬೇಕು
ಹೆಚ್ಹಿನ ಮಾಹಿತಿಗಾಗಿ 080-2234 1762 ಗೆ ಸಂಪರ್ಕಿಸಬಹುದು