ಪುಟಗಳು

ವಿಳಾಸ ಇಲ್ಲದವರ ಹುಡುಕುತ್ತ - ಕತೆಗಳು - ಗವಿಸಿದ್ದ.ಬಿ.ಹೊಸಿಮನಿ


ಅಖಿಲ ಭಾರತ ಕನ್ನಡ ಸಣ್ಣಕಥೆ ಮತ್ತು ಕಾವ್ಯ ಸ್ಪರ್ಧೆ

ಗೋಕುಲವಾಣಿಯ ಅಖಿಲ ಭಾರತ ಕನ್ನಡ ಸಣ್ಣಕಥೆ ಮತ್ತು ಕಾವ್ಯ ಸ್ಪರ್ಧೆಮುಂಬಯಿಯ ಬಿ.ಎಸ್.ಕೆ.ಬಿ. ಅಸೋಸಿಯೇಶನ್‌ನ  ಮಾಸಪತ್ರಿಕೆ ಗೋಕುಲವಾಣಿ ತನ್ನ ಯುಗಾದಿ ವಿಶೇಷ ಪುರವಣಿಗಾಗಿ (ಸೌರಯುಗಾದಿ -ಎಪ್ರಿಲ್ ೨೦೧೧) ಈ ಸ್ಪರ್ಧೆಯನ್ನು ಆಯೋಜಿಸಿದ್ದು , ಪ್ರಥಮ, ದ್ವಿತೀಯ, ತೃತೀಯ ಉತ್ತಮ ಕೃತಿ ಎಂದು  ಸಣ್ಣಕಥೆಗಾಗಿ ತಲಾ ರೂ. ೫೦೦೦/-, ರೂ.೩೦೦೦/- ಮತ್ತು ರೂ. ೨೦೦೦/-, ಹಾಗೂ  ಕವಿತೆಗಾಗಿ ತಲಾ ರೂ.೨೦೦೦/-, ರೂ.೧೦೦೦/- ಮತ್ತು ರೂ. ೫೦೦/- ಮೊತ್ತದ ಬಹುಮಾನಗಳನ್ನು  ನಿಗದಿಪಡಿಸಿದೆ .

ನಿಯಮಗಳು:೧)ಸ್ವತಂತ್ರ ಕೃತಿಯಾಗಿರಬೇಕು.೨)ಸ್ಫುಟವಾದ ಕೈಬರಹದಲ್ಲಿ ೧೦೦೦ ಪದಗಳಿಗೆ ಕತೆ  ಸೀಮಿತವಾಗಿರಬೇಕು. ಗಣಕಯಂತ್ರ, ಬೆರಳಚ್ಚು  ಬಳಸಬಹುದು .ಕ್ಸೆರಾಕ್ಸ್  ಪ್ರತಿಯನ್ನು  ಸ್ವೀಕರಿಸಲಾಗುವುದಿಲ್ಲ .೩)ಕವಿತೆ  ಒಂದು ಫುಲ್ಸ್ಕೇಪ್ ಹಾಳೆಯನ್ನು ಮೀರಿರಬಾರದು. ದೊಡ್ಡ ಕೈಬರಹವಿದ್ದಲ್ಲಿ  ಎರಡು ಪುಟಗಳ ಮಿತಿ.೪) ಕಥೆ ,ಕವಿತೆ ಪುಟಗಳಲ್ಲಿ ಎಲ್ಲೂ ಲೇಖಕರ ಹೆಸರು ಇರಬಾರದು.
ಇದ್ದಲ್ಲಿ ಅದನ್ನು  ತಿರಸ್ಕರಿಸಲಾಗುವುದು . ಹೆಸರು , ವಿಳಾಸವನ್ನು ಬೇರೆಯೇ ಹಾಳೆಯಲ್ಲಿ ಬರೆದು ಲಗತ್ತಿಸಬೇಕು.೫)ಬಹುಮಾನ ಪಡೆದವರಿಗೆ ಚೆಕ್ ಮೂಲಕ ಹಣದ ಮೊತ್ತ ಮತ್ತು ಪ್ರಮಾಣಪತ್ರವನ್ನು ಕಳಿಸಲಾಗುವುದು .೬)ಬಹುಮಾನಿತ ಕೃತಿ ಹಾಗೂ ಮೆಚ್ಚುಗೆ ಗಳಿಸಿದ ಬರಹವನ್ನು ಪ್ರಕಟಿಸುವ ಹಕ್ಕು ಗೋಕುಲವಾಣಿಗಿದೆ .೭)ಯಾವುದೇ ಬರಹಗಳನ್ನು ಹಿಂದಿರುಗಿಸಲಾಗುವುದಿಲ್ಲ .೮)ತೀರ್ಪುಗಾರರ ನಿರ್ಣಯವೇ  ಅಂತಿಮ. ಪತ್ರ ವ್ಯವಹಾರಕ್ಕೆ ಅವಕಾಶವಿಲ್ಲ . ಬರಹಗಳನ್ನು ಸ್ವೀಕರಿಸಲು ಕೊನೆಯ ದಿನ :ಫೆಬ್ರವರಿ ೧೦,೨೦೧೧.ಕಳಿಸಬೇಕಾದ ವಿಳಾಸ( ಇಂಗ್ಲಿಷಿನಲ್ಲಿರಲಿ):
Hon. Editor ,
“Gokulavani” / Sahitya Spardhe ,
B.S.K.B. Association , Gokul Marg, Sion(E),
Mumbai 400022