ಪುಟಗಳು

KSTRC Paper Less Ticket

ಕೆಎಸ್ಆರ್ಟಿಸಿ ಪೇಪರ್ಲೆಸ್ ಟಿಕೆಟ್, ಎಸ್ಎಂಎಸ್ ತೋರಿಸಿ ಸಾಕುದೇಶದಲ್ಲಿ ಮೊತ್ತಮೊದಲ ಬಾರಿಗೆ ಪೇಪರ್ಲೆಸ್ ಟಿಕೆಟ್ ಸೇವೆಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಆರ್ಟಿಸಿ) ಪರಿಚಯಿಸಿದೆ. ಟಿಕೆಟ್ ಬುಕ್ಕಿಂಗ್ ಮಾಡಿದ ನಂತರ ಪ್ರಿಂಟೌಟ್ ತೆಗಿಸುವ ಅಗತ್ಯನೂ ಇಲ್ಲ.

ಏನ್ರಿ ಇದು: ಇದು ಮೊಬೈಲ್ ಟಿಕೆಟ್. ಅಂದ್ರೆ ಕೆಎಸ್ಆರ್ಟಿಸಿ ಟಿಕೆಟ್ ಬುಕ್ಕಿಂಗ್ ಮಾಡಿದಾಗ ಪಡೆದ
ಎಸ್ಎಂಎಸ್ ಮತ್ತು ನಿಮ್ಮ ಗುರುತಿನ ಚೀಟಿಯನ್ನು ಬಸ್ ನಿರ್ವಾಹಕರಿಗೆ ತೋರಿಸಿದರೆ ಸಾಕು. ಪ್ರಿಂಟೌಟ್ ತೆಗೆದ ಟಿಕೆಟ್ ಬೇಕಿಲ್ಲ. ಪೇಪರ್ ಬಳಕೆಯಿಲ್ಲ. ಹೀಗಾಗಿ ಇದು ಪರಿಸರ ಸ್ನೇಹಿ ಟಿಕೆಟ್.

ಏನು ಮಾಡಬೇಕು?: ಕೆಎಸ್ಆರ್ಟಿಸಿ ವೆಬ್ಸೈಟ್(www.ksrtc.in) ನಲ್ಲಿ ಇ-ಟಿಕೆಟ್ ಬುಕ್ಕಿಂಗ್ ಮಾಡಬಹುದು. ಅದರಲ್ಲಿ ಮೊಬೈಲ್ ನಂಬರ್, ಜನ್ಮದಿನಾಂಕ ಮತ್ತು ವಿಳಾಸ ಸೇರಿದಂತೆ ವೈಯಕ್ತಿಕ ಮಾಹಿತಿ ನೀಡಬೇಕು. ಜಿಪಿಆರ್ಎಸ್ ಸೌಲಭ್ಯವಿರುವ ಮೊಬೈಲ್ ನಲ್ಲೂ ಟಿಕೆಟ್ ಬುಕ್ಕಿಂಗ್/ಕ್ಯಾನ್ಸಲ್ ಮಾಡಬಹುದು.

ಹೀಗೆ ಟಿಕೆಟ್ ಬುಕ್ಕಿಂಗ್ ಮಾಡಿದ ನಂತರ
ನಿಮ್ಮ ಮೊಬೈಲ್ ಗೆ ಸಂದೇಶವೊಂದು ಬರುತ್ತದೆ. ಅದರಲ್ಲಿ ಬಸ್ ನಂಬರ್, ಸೀಟ್ ನಂಬರ್, ಪ್ರಯಾಣದ ದಿನಾಂಕ, ತಲುಪಬೇಕಾದ ಸ್ಥಳ ಸೇರಿದಂತೆ ಅಗತ್ಯ ಮಾಹಿತಿಗಳೆಲ್ಲ ಇರುತ್ತದೆ. ಇದನ್ನೇ ಕಂಡೆಕ್ಟರ್ ಗೆ ತೋರಿಸಿದರೆ ಸಾಕು. [ಓದಿ: ನಿಮ್ಮ ಮೊಬೈಲ್ ನಲ್ಲಿ ದಟ್ಸ್ ಕನ್ನಡ ಪ್ರತ್ಯಕ್ಷ ]

ಏನು ಲಾಭ: ಬಸ್ ಟಿಕೆಟ್ ಬುಕ್ಕಿಂಗ್ ಮಾಡಿದ ನಂತರ ಸೈಬರ್ ಕೆಫೆ ಇತ್ಯಾದಿ ಕಡೆ ಹೋಗಿ ಪ್ರಿಂಟೌಟ್ ತೆಗೆಸಬೇಕಾಗುತ್ತದೆ. ಆದರೆ ನೂತನ ಯೋಜನೆಯಲ್ಲಿ ಅಂತಹ ಕಷ್ಟವಿಲ್ಲ. ಪೇಪರ್ ಬಳಕೆಯಿಲ್ಲ. ಮರ ಕಡಿಯೋದು ಕಡಿಮೆಯಾಗುತ್ತದೆ. ಪರಿಸರ ಉಳಿಯುತ್ತದೆ. ಪ್ರಯಾಣಿಕನಿಗೆ ಹೆಚ್ಚಿನ ಕಿರಿಕಿರಿಯಿಲ್ಲ. ವಾಟ್ ಆನ್ ಐಡಿಯಾ