ಪುಟಗಳು

ವರಮಹಾಲಕ್ಷ್ಮಿ ಹಬ್ಬದ ಪೂಜೆಗಾಗಿ ಅಷ್ಟಲಕ್ಷ್ಮೀ ಸ್ತೋತ್ರ


ಶ್ರೀ ವರಮಹಾಲಕ್ಷ್ಮಿ ಪೂಜಾವಿಧಾನ

ಆಷಾಢ ಮಾಸದ ಕೊನೆಯ ದಿನ ಭೀಮನ ಅಮವಾಸ್ಯೆ ಕಳೆಯುತ್ತಿದ್ದ ಹಾಗೆ ಶ್ರಾವಣ ಮಾಸ ಪ್ರಾರಂಭ. ಹಬ್ಬಗಳ ಸಾಲೇ ಸಾಲು. ಹೂವು ಹಣ್ಣು, ತರಕಾರಿ ರೇಟುಗಳು ಗಗನಕ್ಕೇರಿದ್ದರೂ ಶ್ರಾವಣದ ಎರಡನೇ ಶುಕ್ರವಾರದಂದು ಬರುವ ವರಮಹಾಲಕ್ಷ್ಮಿ ಹಬ್ಬವನ್ನು ಬಿಡುವಂತೆಯೇ ಇಲ್ಲ.

ಹಣ್ಣು, ಹೂವು, ತರಕಾರಿಗಳ ಮೇಲೆ ಹಣ ಸುರಿದು ಜೇಬು ಖಾಲಿಯಾಗಿದ್ದರೂ 'ಭಾಗ್ಯದ ಲಕ್ಷ್ಮಿ ಬಾರಮ್ಮ..' ಎಂದು ಮಹಾಲಕ್ಷ್ಮಿಯನ್ನು ಮನೆಗೆ ತುಂಬಿಸಿಕೊಳ್ಳುವ ಸಡಗರ. ಮನೆಮನೆಗಳಲ್ಲಿ ಸಂಭ್ರಮದ ವಾತಾವರಣ. ಕೆಲಸಕ್ಕೆ ಹೋಗುವ ಹೆಂಗಸಾದರೂ ಸಾಧ್ಯವಾದಷ್ಟು ಬೇಗ ಎದ್ದು ಪೂಜೆ ಮುಗಿಸಿ ಗಡಿಬಿಡಿಯಿಂದ ಬಗೆಬಗೆಯ ತಿನಿಸುಗಳನ್ನು ಮಾಡಿ, ಇನ್ನರ್ಧ ಗಂಟೆ ಲೇಟಾಗಿ ಬರುತ್ತೇನೆಂದು ಬಾಸ್‌ಗೆ ಫೋನಾಯಿಸಿ, ಮನೆಮಂದಿಗೆ ಮೃಷ್ಟಾನ್ನ ಬಡಿಸುವ ಸಡಗರ. 'ಕಮಲದಾ ಮೊಗದೋಳೆ ಕಮಲದಾ ಕಣ್ಣೋಳೆ ಕಮಲವಾ ಕೈಯಲ್ಲಿ ಹಿಡಿದೋಳೆ' ಎಂದು ದೇವಿಯನ್ನು ಪರಿಪರಿಯಾಗಿ ಸ್ತುತಿಸುತ್ತ 'ಆರತಿ ಬೆಳಗಿರೆ ನಾರಿಯರು..' ಎಂದು ಹಾಡುತ್ತ ಧನ್ಯತಾಭಾವ ತುಂಬಿಕೊಳ್ಳುವ ಹೆಂಗಸರಿಗೆ ಕೈತುಂಬಾ ಕೆಲಸ.

ಈ ಬಾರಿಯಾದರೂ ಇನ್ಕ್ರಿಮೆಂಟು ಸಿಗಲಪ್ಪಾ ಅಂತ ಒಬ್ಬ, ಫಾರಿನ್‌ಗೆ ಹೋಗುವ ಹಾಗೆ ಹರಸಮ್ಮ ತಾಯಿ ಅಂತ ಮತ್ತೊಬ್ಬಾಕೆ. ವೀಸಾ ಸಿಗಲಪ್ಪಾ ದೇವರೇ ಅಂತ ಬೇಡಿಕೊಳ್ಳುವವಳು ಇನ್ನೊಬ್ಬಾಕೆ. ಅಂಗಡಿ ಮುಂಗಟ್ಟುಗಳಲ್ಲಿ ನಾನಾ ಬಗೆಯ ಆಫರುಗಳ ಆಸೆಯನ್ನು ತೋರಿಸಿ ಲಾಭ ಮಾಡಿಕೊಳ್ಳುವ ಸ್ಟಂಟುಗಳು. ತಾಯಿ ಲಕ್ಷ್ಮಿ ಒಲಿಯಬೇಕೆಂದು ಯಾರಿಗೆ ಹಂಬಲವಿರುವುದಿಲ್ಲ ಹೇಳಿ? ವರಮಹಾಲಕ್ಷ್ಮಿ ಹಬ್ಬದಂದು ಅಕ್ಕ ಸುಷ್ಮಾ ಸ್ವರಾಜ್ ಬಳ್ಳಾರಿಗೆ ಬರ್ತಾರಾ?

ಪೂಜಾ ವಿಧಾನ : ಅಂದಿನ ದಿನ ಮುಂಜಾನೆ ಚುಮುಚುಮು ಬೆಳಕಿರುವಾಗಲೇ ಎದ್ದು, ಮನೆಯ ಮುಂದಿನ ಬಾಗಿಲಿಗೆ ಥಳಿ ರಂಗೋಲಿ ಹಾಕಿ, ಬಾಗಿಲಿಗೆ ಹಸಿರು ತೋರಣ ಕಟ್ಟಿದಾಗ ಮನೆಗೆ ಒಂದು ಬಗೆಯ ಕಳೆ. ಹೆಣ್ಣುಮಕ್ಕಳು ಅಭ್ಯಂಜನ ಮುಗಿಸಿಕೊಂಡು ರೇಷಿಮೆ ಬಟ್ಟೆ ಧರಿಸಿಕೊಂಡು ಸರಬರ ಓಡಾಡುತ್ತಾ ಪೂಜಾ ಸಾಮಗ್ರಿಗಳನ್ನೆಲ್ಲಾ ತಯಾರು ಮಾಡಿಕೊಂಡು ಪೂಜೆಗೆ ಸಿದ್ಧರಾಗುತ್ತಾರೆ.

ಆಭರಣಗಳಿಂದ ಭೂಷಿತೆಯಾದ ಲಕ್ಷ್ಮಿದೇವಿಯ ಮುಖವಾಡವನ್ನು ಒಂದು ಕಲಶದಲ್ಲಿರಿಸಿ ಅದಕ್ಕೆ ಚೆಂದವಾದ ಜರತಾರಿಯ ಅಂಚು ಸೆರಗು ಇರುವ ಸೀರೆಯನ್ನು ಉಡಿಸಲಾಗುತ್ತದೆ. ಹೀಗೆ ಅಲಂಕೃತಳಾದ ಶ್ರೀವಲ್ಲಭೆ ಬಾಳೆಯ ದಿಂಡಿನಿಂದ ಶೋಭಿತವಾದ ಒಂದು ಮಂಟಪದಲ್ಲಿ ಸ್ಥಾಪಿತಳಾಗುತ್ತಾಳೆ. ಆ ಮಂಟಪದ ಮೇಲ್ಭಾಗಕ್ಕೆ ಕಟ್ಟಿದ ಮಾವಿನ ತೋರಣ ಅದರ ಸೊಬಗನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಹೀಗೆ ಸ್ಥಾಪಿತವಾದ ಹರಿದ್ರಕುಂಕುಮಶೋಭಿತಳಾದ ಲಕ್ಷ್ಮಿದೇವಿಗೆ ಅರಿಶಿನ ಕುಂಕುಮ ಗೆಜ್ಜೆ ವಸ್ತ್ರ ಏರಿಸಿ ಪೂಜೆ ಮಾಡಲಾಗುತ್ತದೆ. ಸುಮಧುರ ಸುವಾಸನೆಯುಳ್ಳ ಸೇವಂತಿಗೆ, ಮಲ್ಲಿಗೆ, ಸಂಪಿಗೆ ಹೂವುಗಳಿಂದ ತಾಯಿ ಅಲಂಕೃತಳಾಗುತ್ತಾಳೆ. ಭಾಗ್ಯದ ಲಕ್ಷ್ಮಿ ಬಾರಮ್ಮ... ಎಂದು ಹಾಡುತ್ತ ಅತ್ಯಂತ ಹರ್ಷದಿಂದ, ಭಕ್ತಿಭಾವದಿಂದ ತಮ್ಮ ತಮ್ಮ ಮನೆಗಳಲ್ಲಿ ಶಾಶ್ವತವಾಗಿ ನೆಲೆಸಿ ಹರಿಸಲಿ ಎಂದು ಆಕೆಯನ್ನು ಬರಮಾಡಿಕೊಳ್ಳುತ್ತಾರೆ.

ನೈವೇದ್ಯಕ್ಕಾಗಿ ವಿಧವಿಧವಾದ ಸಿಹಿತಿನಿಸುಗಳನ್ನು ಮಾಡಿ ಆಕೆಗೆ ಮೀಸಲಿಡಲಾಗುತ್ತದೆ. ಅದರಲ್ಲೂ ಪುಟಾಣಿ ಸಕ್ಕರೆಯೆಂದರೆ ಸರ್ವಾಲಂಕಾರಭೂಷಿತೆಗೆ ಬಹಳ ಪ್ರಿಯ. ಹೀಗೆ ಬಗೆಬಗೆಯ ಹಣ್ಣು, ಕಾಯಿ, ಸಿಹಿತಿನಿಸು, ಹಾಲುಸಕ್ಕರೆಗಳನ್ನು ಆಕೆಗೆ ಸಮರ್ಪಿಸಲಾಗುತ್ತದೆ. ಈ ದಿನ ಮುತ್ತೈದೆಯರನ್ನು ಮನೆಗೆ ಆಮಂತ್ರಿಸಿ ಅವರಿಗೆ ಅರಿಶಿನ ಕುಂಕುಮದ ಜೊತೆಗೆ ಮರದ ಬಾಗಣವನ್ನು ಕೊಡಲಾಗುತ್ತದೆ.

ನಂತರ ಕೊನಗೆ, ತಮ್ಮ ಸಂಕಷ್ಟಗಳನ್ನು ದೂರಮಾಡಿ ಸುಖ ಶಾಂತಿ ಶಾಶ್ವತವಾಗಿ ನೆಲೆಸಲಿ, ಸಮೃದ್ಧಿಯನ್ನು ದಯಪಾಲಿಸಲಿ ಎಂದು ಹೆಂಗಳೆಯರು ಆರತಿ ಬೆಳಗುತ್ತ..

ಆರತಿ ಬೆಳಗಿರೆ ನಾರಿಯರು ಬೇಗ ಆದಿ
ಕೊಲ್ಹಾಪುರದ ಮಹಾಲಕ್ಷ್ಮಿಗೆ
ಹಾಡುತ ಪಾಡುತ ಜಾಣೆಯರೆಲ್ಲರು ಆದಿ ನಾರಾಯಣ ಪ್ರಿಯಳಿಗೆ...

ಎಂದು ಹಾಡುತ್ತಾರೆ.

ಆನಂದತೀರ್ಥ ವರದೇ ದಾನ ವಾರಣ್ಯ ಪಾವಕೆ
ಜ್ಞಾನದಾಯಿನಿ ಸರ್ವೇಶೇ ಶ್ರೀನಿವಾಸೇಸ್ತು ಮೇಮನಃ
ಶ್ರೀ ವೆಂಕಟೇಶಂ ಲಕ್ಷ್ಮೀಶಂ ಅನಿಷ್ಟಘ್ನಮಭೀಷ್ಟದಂ
ಚತುರ್ಮುಖೇರ ತನಯಂ ಶ್ರೀನಿವಾಸಂ ಭಜೇ ನಿಶಂ

ಈ ಮಂತ್ರವನ್ನು ಪಠಿಸಿದರೆ ಶ್ರೀವರಮಹಾಲಕ್ಷ್ಮಿ ಎಲ್ಲರಿಗೆ ಅನುಗ್ರಹ ಮಾಡುತ್ತಾಳೆ ಎಂಬ ನಂಬಿಕೆ.

ಜೋಕಿನಂಗಳ

ವನಜಮ್ಮ:ಏನು ಅನ್ಯಾಯ ಇದೂ ಸರಸ್ವತಮ್ಮಾ ಮಲ್ಲೇಶ್ವರಮ್ ನಲ್ಲಿ ಇವತ್ತು 17ಸಲ ಕರಂಟ್ ಹೋಯ್ತಂತೆ
ಸರಸ್ವತಮ್ಮ: ಯಾಕ್ರಿ ಅನ್ಯಾಯ ವನಜಮ್ಮ 16ಸಲ ವಾಪಸ್ ಬಂತಲ್ಲ,ಅದು ನ್ಯಾಯ ತಾನೆ?


ತಿಮ್ಮ:ನಮ್ಮ PWD ಗುಮಾಸ್ತ ಸುಳ್ಳು ಲೆಕ್ಕ ಬರೆದಿದ್ದಾನೆ, ಕಡಿಮೆ ಅಂದ್ರೆ ಐದು ಸಾವಿನ ನುಂಗಿದ್ದಾನೆ
ಗುಂಡ:ನಿಂಗೆ ಹೇಗೆ ಗೊತ್ತಾಯ್ತು?
ತಿಮ್ಮ:ಆ ಭೂಪಾ ರೋಡ್ ರೋಲರ್ ಪಂಚರ್ ಗೆ ಲೆಕ್ಕ ಬರೆದಿದ್ದನೆ ನೋಡು

ಸೇಲ್ಸ್ ಮ್ಯಾನ್:ಸಾರ್ ನಿಮಗೆ ಪೌಡರ್ ಬೇಕಾ?
ಗುಂಡ:ಯಾರಿಗೆ ಇದು?
ಸೇಲ್ಸ್ ಮ್ಯಾನ್:ಇಲಿಗಳಿಗೆ ಸಾರ್
ಗುಂಡ:ಬೇಡ ಇವತ್ತು ಪೌಡರ್ ಕೊಟ್ರೆ ನಾಳೆ ಲಿಪ್ಸ್ ಟಿಕ್ ಕೇಳಬಹುದು....

ಗುಂಡ:ನಿನಗೆ ಎಷ್ಟು ಮಾರ್ಕ್ಸ್ ಬಂತು?
ತಿಮ್ಮ: 99%
ಗುಂಡ:ಅಬ್ಬ ಅಷ್ಟರಲ್ಲಿ ಮೂರುಜನ ಪಾಸ್ ಆಗಬಹುದಿತ್ತು


ಗಂಡ ಹೆಂಡಿರ ಜಗಳ ಗಂಡ" ನಾನು ಹೊರಟು ಹೋದರೆ ನನ್ನಂಥಾ ಗಂಡ ಹುಡುಗಿದರೂ ನಿನಗೆ ಸಿಕ್ಕಲ್ಲ ನೋಡ್ತಿರು" ಹೆಂಡ್ತಿ "ನಿನ್ನಂಥಾ ಗಂಡನ್ನ ಹುಡುಕೋದಾದ್ರೂ ಯಾರು?"

"ನೀವು ಕುಡೀತೀರಾ" ಭಾವೀ ಅಳಿಯನನ್ನು ಮಾವ ಕೇಳಿದ.ಅದಕ್ಕೆ ಅಳಿಯ "ಇದು ಪ್ರಶ್ನೆನೋ ಆಹ್ವಾನನೋ ತಿಳೀ ಲಿಲ್ಲ" ಎಂದ

ಹೆಂಡತಿ ಕಾವಲಿಯ ಮೇಲೆ ದೋಸೆ ಹಾಕುತ್ತಿರಲು ಗಂಡ ಅಲ್ಲಿಗೆ ಬಂದು"ಏಯ್ ಸ್ವಲ್ಪ ತಾಳು ಬಿಸಿ ಆಗ್ಲಿ,ಈಗ ಹಾಕು ಎಣ್ಣೆ ಹಾಕು ಸರಿಯಾಗಿ ಹಿಟ್ಟು ಕಲಕಿ ಕಲಕಿ ಸೌಟು ಸುರಿ,ತಿರುವು, ಹಾಗೆ, ಅಲ್ಲ ನಿಧಾನ ,ತಟ್ಟೆ ಮುಚ್ಚು,ತಾಳು ತಟ್ಟೆ ತೆಗಿ, ಇಲ್ಲ ಇನ್ನೂ ಆಗಿಲ್ಲ, ಈಗ ಸರಿಯಾಗಿ ಕೆಂಪಗೆ ಆಗಿಲ್ಲ ಗರಿಗರಿ ಆಗಬೇಕು...."ಹೆಂದತಿಗೆ ರೇಗಿತು"ಏನ್ರಿ ಯಾವತ್ತೂ ದೋಸೆನೇ ಮಾಡಿಲ್ವ ನಾನು ಹೀಗೆ ಟೀಚ್ ಮಾಡ್ತಿದ್ದೀರಾ" ಅದಕ್ಕೆ ಗಂಡ"ನಾನು ಡ್ರೈವ್ ಮಾಡುವಾಗ ದಿನಾ ನೀನು ನನಗೆ....ಎದೇ ರೀತಿ ಅಲ್ವಾ ಟೀಚ್ ಮಾಡೋದು"ಅಂದ.

ಅಪ್ಪ: ಲೋ ತಿಮ್ಮ ನಾಯಿ ಬಾಲಕ್ಕೆ ಯಾಕೋ ಪೈಪ್ ಹಾಕ್ತಾ ಇದ್ದೀಯಾ,ಅದು ಯಾವತ್ತೂ ನೆಟ್ಟಗೆ ಆಗೋಲ್ಲ
ತಿಮ್ಮ:ಅದಕ್ಕೇ ಅಪ್ಪ ಪೈಪ್ ಸೊಟ್ಟ ಮಾಡ್ತಾ ಇದ್ದೀನಿ

ಗುಂಡ: ನಮ್ಮ ಅಜ್ಜ ಸಾಯೋವಾಗ ತುಂಬ ಆಸ್ತಿ ಬಿಟ್ಟು ಹೋದ,ನಿನ್ನಜ್ಜ?
ತಿಮ್ಮ: ನನ್ನಜ್ಜ ಸಾಯೋವಾಗ ಲೋಕಾನೇ ಬಿಟ್ಟು ಹೋದ

ಪ್ರೀತಿ:ಯಾಕೆ ಗುಂಡ ನನ್ನ ಹತ್ರ ಮಾತೇ ಆಡ್ತಾ ಇಲ್ಲ
ಗುಂಡ: ನೀನೇ ಹೇಳಿದ್ಯಲ್ಲ?ಪ್ರೀತಿಗಿಂತ ಸ್ನೇಹಾನೇ ಶಾಶ್ವತ ಅಂತ.....ಅದಕ್ಕೆ ನಿನ್ನ ಬಿಟ್ಟು ಸ್ನೇಹಾನ ಲವ್ ಮಾಡ್ತಿದ್ದೀನಿ


ನ್ಯಾಯಾಧೀಶ: ಈತನಿಗೆ ಎರಡೂ ಕಿವಿಗಳನ್ನು ಕತ್ತರಿಸಿ
ಗುಂಡ:ಅಯ್ಯೋ ಬೇಡಾ ಸ್ವಾಮಿ ನಾನು ಕುರುಡ ಆಗೋಗ್ತೀನಿ
ನ್ಯಾಯಾಧೀಶ:ಮೂರ್ಖ ಕಿವಿ ಕತ್ತರಿಸಿದರೆ ಕುರುಡು ಹೇಗೆ ಆಗ್ತಾರೆ?
ಗುಂಡ:ಆಮೇಲೆ ಕನ್ನಡಕ ಎಲ್ಲಿ ಹಾಕಲಿ?

ಪೋಲೀಸ್:ನೀನು ಯಾವಾಗ್ಲೂ ಅವರ ಮನೇಲೇ ಯಾಕೆ ಕಳ್ಳತನ ಮಾಡ್ತಿದ್ಯಾ
ಕಳ್ಳ:ಎಲ್ಲರಿಗೂ ಫ್ಯಾಮಿಲಿ ಡಾಕ್ಟರ್, ಲಾಯರ್ ಇರ್ತಾರಲ್ಲ ಹಾಗೆ ನಾನು ಅವರ ಫ್ಯಾಮಿಲಿ ಕಳ್ಳ

ಗುಂಡ ಪೋಲೀಸ್ ಸ್ಟೇಷನ್ ಮುಂದೆ ನಿಂತು ಸುಸು ಮಾಡ್ತಿದ್ದ
ಪೋಲೀಸ್:ಏ ಗುಂಡ ಸ್ಟೇಷನ್ ಮುಂದೆ ಹೀಗೆ ಸುಸು ಮಾಡಿದ್ರೆ ಹಿಡ್ಕೊಂದ್ ಬಿಡ್ತೀನಿ ಹುಷಾರ್
ಗುಂಡ: ಹಿಡ್ಕೊಂಡ್ ಹೋಗಿ ಸಾರ್ ಸುಮ್ಮನೆ ವೇಸ್ಟ್ ಆಗ್ತಿದೆ

ಗುಂಡ: ಅಪ್ಪಾ ನೀನು ಈಜಿಪ್ಟ್ ಗೆ ಹೋಗಿದ್ಯಾ?
ಅಪ್ಪ: ಇಲ್ಲಾ ಕಣೋ,ಯಾಕೆ?
ಗುಂಡ:ಹಾಗಿದ್ರೆ ಈ ಮಮ್ಮಿ ನಿನ್ನಹತ್ರ ಹ್ಯಾಗೆ ಬಂದಳು?

ತಿಮ್ಮ:ನಮ್ಮ PWD ಗುಮಾಸ್ತ ಸುಳ್ಳು ಲೆಕ್ಕ ಬರೆದಿದ್ದಾನೆ, ಕಡಿಮೆ ಅಂದ್ರೆ ಐದು ಸಾವಿನ ನುಂಗಿದ್ದಾನೆ
ಗುಂಡ:ನಿಂಗೆ ಹೇಗೆ ಗೊತ್ತಾಯ್ತು?
ತಿಮ್ಮ:ಆ ಭೂಪಾ ರೋಡ್ ರೋಲರ್ ಪಂಚರ್ ಗೆ ಲೆಕ್ಕ ಬರೆದಿದ್ದನೆ ನೋಡು

ಬಾಸ್ - ನಮಗೆ ಒಬ್ಬ ಜವಾಬ್ದಾರಿಯುತ ನೌಕರ ಬೇಕಾಗಿದೆ
ಗುಂಡ - ಹಾಗಿದ್ರೆ ನಾನೇ ಅದಕ್ಕೆ ಲಾಯಕ್ಕು ಸ್ವಾಮಿ, ನನ್ನ ಹಿಂದಿನ ಕೆಲಸದಲ್ಲಿ ಎಲ್ಲಾ ತಪ್ಪಿಗೂ ನಾನೆ ಜವಾಬ್ದಾರಿ ಅಂತಿದ್ರು....ಊ..


ಹೆಂಡತಿ - ರೀ ನಿಮ್ಮ ತಲೇಲಿ ಬರೀ ಗೊಬ್ಬರಾನೇ ತುಂಬಿದೆ.
ಗಂಡ - ಮತ್ಯಾಕೆ ಅದನ್ನೇ ತಿಂತೀಯಾ?

ಗುಂಡ ಹಜಾಮನ ಬಳಿಹೋಗಿ "ಹೇರ್ ಕಟ್ ಗೆ ಎಷ್ಟು?" ಎಂದ   ಹಜಾಮ:"20 ರೂಪಾಯಿ"  ಗುಂಡ:"ಶೇವಿಂಗ್ ಗೆ?"   ಹಜಾಮ:"10 ರೂಪಾಯಿ"     ಗುಂಡ:"ಹಾಗಾದರೆ ಇಡೀ ತಲೇಗೇ ಶೇವಿಂಗೇ ಮಾಡಿ" ತಲೆಯನ್ನು ಸವರಿಕೊಳ್ಳುತ್ತಾ

ರೀ ನಾನು ದೂರ ಹೋದಾಗ ಕಳೆದು ಹೋದ್ರೆ?....ಪೇಪರ್ನಲ್ಲಿ ಹಾಕಿಸ್ತೀನಿ.....”ಏನಂತ?”....... ”ಎಲ್ಲೇ ಇರು ಹೇಗೇ ಇರು ಅಲ್ಲೇ ಹಾಯಾಗಿರು ಅಂತ”.

ಗೆಳೆಯನನ್ನು ಆಸ್ಪತ್ರೆಯಲ್ಲಿ ನೋಡಲು ಹೋದ ಗುಂಡ ನರ್ಸ್ ನನ್ನು ಕರೆದು ಕೇಳಿದ."ಅಲ್ಲಾ ಅದ್ಯಾಕೆ ನೀವು ಎದೆ ಮೇಲೆ ಹಿಂಭಾಗದಲ್ಲಿ ಅಷ್ಟೊಂದು ಪಿನ್ ಗಳನ್ನ ಚುಚ್ಚಿಕೊಂಡಿದ್ದೀರಿ " ಅದಕ್ಕೆ ನರ್ಸ್ ಕೇಳಿದಳು"ಏನಿಲ್ಲಾ ಡಾಕ್ಟರ್ ಗಳನ್ನ ದೂರ ಇಡೋಕೆ"

ಇಬ್ಬರು ಸ್ನೇಹಿತರಿಗೆ 3 ಬಾಂಬುಗಳು ಸಿಕ್ಕಿದವು. ಪೋಲೀಸರಿಗೆ ಒಪ್ಪಿಸಲು ತೆಗೆದುಕೊಂಡು ಹೋಗುವಾಗ ಒಬ್ಬ ಹೇಳಿದ
`ಅಕಸ್ಮಾತ್ ದಾರಿಯಲ್ಲಿ 1 ಬಾಂಬ್ ಢಂ ಅಂದ್ಬಿಟ್ರೆ ಏನ್ ಮಾಡೋದು ?'
ಇನೊಬ್ಬ : 3 ರಲ್ಲಿ ಎರಡೇ ಸಿಕ್ಕಿದ್ದು ಅನ್ನೋದು ಅಷ್ಟೇ” !!!

ತಂದೆ:"ಶಾಲೆ ಬಾಗಿಲು ಯಾವಾಗ ತೆಗೆಯುತ್ತದೆಯೋ?" ಮಗ:"ಅದಕ್ಕೇನಪ್ಪಾ ಬೀಗದ ಕೈ ಇದ್ದರೆ ಯಾವಾಗ ಬೇಕಾದ್ರೂ ತೆಗೀಬಹುದು"


ಕನ್ನಡ ಕ್ಯಾಲೆಂಡರ್ 2011

2011, ಜನವರಿ
ಶ್ರೀ ವಿಕೃತಿ ನಾಮ ಸಂವತ್ಸರ, ದಕ್ಷಿಣಾಯಣ/ಉತ್ತರಾಯಣ,
ಹೇಮಂತ/ಶಿಶಿರ ಋತು, ಮಾರ್ಗಶಿರ/ಪುಷ್ಯ ಮಾಸ

01 ಶ - (ದ್ವಾದಶಿ) ಆಂಗ್ಲ ಹೊಸವರ್ಷ ಆರಂಭ
04 ಮಂ - ಅಮಾವಾಸ್ಯೆ
05 ಬು - ಪುಷ್ಯ ಮಾಸ ಆರಂಭ
12 ಬು - ಸ್ವಾಮಿ ವಿವೇಕಾನಂದ ಜಯಂತಿ
15 ಶ - ಮಕರ ಸಂಕ್ರಾಂತಿ
15 ಶ - ಸರ್ವತ್ರ ಏಕಾದಶಿ
19 ಬು - ಹುಣ್ಣಿಮೆ
22 ಶ - ಸಂಕಷ್ಟ ಚತುರ್ಥಿ
29 ಶ - ಸರ್ವತ್ರ ಏಕಾದಶಿ

2011, ಫೆಬ್ರವರಿ
ಶ್ರೀ ವಿಕೃತಿ ನಾಮ ಸಂವತ್ಸರ, ಉತ್ತರಾಯಣ,
ಶಿಶಿರ ಋತು, ಪುಷ್ಯ/ಮಾಘ ಮಾಸ

02 ಬು - ಅಮಾವಾಸ್ಯೆ, ಗರುಡಜಯಂತಿ, ಪುರಂದರ ದಾಸರ ಪುಣ್ಯದಿನ
03 ಗು - ಮಾಘ ಮಾಸ ಆರಂಭ,
08 ಮಂ - ವಸಂತ ಪಂಚಮಿ
10 ಗು - ರಥ ಸಪ್ತಮಿ
14 ಸೋ - ಸರ್ವತ್ರ ಏಕಾದಶಿ, ವಾಲೆನ್ಟೈನ್ಸ್ ಡೇ
15/20 ಮಂ/ಭಾ - ಮಿಲದ್ ಇನ್ ನಾಬಿ, ಸುನ್ನಿ/ಶಿಯಾ
16 ಬು - ಈದ್ ಮಿಲಾದ್
18 ಶು - ಹುಣ್ಣಿಮೆ
21 ಸೋ - ಸಂಕಷ್ಟ ಚತುರ್ಥಿ
28 ಸೋ - ಸರ್ವತ್ರ ಏಕಾದಶಿ

2011,ಮಾರ್ಚ್
ಶ್ರೀ ವಿಕೃತಿ ನಾಮ ಸಂವತ್ಸರ, ಉತ್ತರಾಯಣ,
ಶಿಶಿರ ಋತು, ಮಾಘ/ಫಾಲ್ಗುಣ ಮಾಸ

02 ಬು - ಮಹಾಶಿವರಾತ್ರಿ
03 ಗು - ಶನೇಶ್ವರ ಜಯಂತಿ
05 ಶ - ಫಾಲ್ಗುಣ ಮಾಸ ಆರಂಭ
 08 ಮಂ - ಅಂ.ರಾ.ಮಹಿಳಾ ದಿನ
16 ಬು - ಸರ್ವತ್ರ ಏಕಾದಶಿ
19 ಶ - ಹೋಳಿ ಹುಣ್ಣಿಮೆ
22 ಮಂ - ಸಂಕಷ್ಟ ಚತುರ್ಥಿ
30 ಬು - ಸರ್ವತ್ರ ಏಕಾದಶಿ

2011,ಏಪ್ರಿಲ್
ಶ್ರೀ ವಿಕೃತಿ/ಶ್ರೀ ಖರ ನಾಮ ಸಂವತ್ಸರ, ಉತ್ತರಾಯಣ,
ಶಿಶಿರ/ವಸಂತ ಋತು, ಫಾಲ್ಗುಣ/ಚೈತ್ರ ಮಾಸ

03 ಭಾ - ಅಮಾವಾಸ್ಯೆ
04 ಸೋ - ಚಾಂದ್ರಮಾನ ಯುಗಾದಿ,ಚೈತ್ರಮಾಸ, ಖರ ನಾಮ ಸಂವತ್ಸರ ಆರಂಭ
06 ಬು - ಮತ್ಸ್ಯ ಜಯಂತಿ
12 ಮಂ - ಶ್ರೀ ರಾಮ ನವಮಿ
14 ಗು - ಸರ್ವತ್ರ ಏಕಾದಶಿ, ಸೌರ ಯುಗಾದಿ
17 ಭಾ - ಮಹಾವೀರ ಜಯಂತಿ
18 ಸೋ - ಹನುಮದ್ ಜಯಂತಿ, ಹುಣ್ಣಿಮೆ
21 ಗು - ಸಂಕಷ್ಟ ಚತುರ್ಥಿ
22 ಶು - ಗುಡ್ ಫ್ರೈಡೇ
23 ಶ - ಹೋಲಿ ಸಾಟರ್ಡೇ
25 ಸೋ - ಈಸ್ಟರ್ ಮಂಡೆ
27 ಬು - ಸರ್ವತ್ರ ಏಕಾದಶಿ

2011,ಮೇ
ಶ್ರೀ ಖರ ನಾಮ ಸಂವತ್ಸರ, ಉತ್ತರಾಯಣ,
ವಸಂತ ಋತು, ಚೈತ್ರ/ವೈಶಾಖ ಮಾಸ

02 ಸೋ – ಬೋಧಾಯಣ ಅಮಾವಾಸ್ಯೆ
04 ಬು - ವೈಶಾಖ ಮಾಸ ಆರಂಭ
06 ಶು – ಬಸವ ಜಯಂತಿ,ಅಕ್ಷಯ ತದಿಗೆ
07 ಶ – ರಾಮಾನುಜ ಜಯಂತಿ
08 ಭಾ – ಶಂಕರ ಜಯಂತಿ
13 ಶು – ಮೋಹಿನಿ ಏಕಾದಶಿ
14 ಶ – ಶಂಕರಾಚಾರ್ಯ ಅರಾಧನ
17 ಮಂ – ಬುದ್ಧ ಪೌರ್ಣಿಮೆ
20 ಶು – ಸಂಕಷ್ಟ ಚತುರ್ಥಿ
28 ಶ – ಅಪಾರ ಏಕಾದಶಿ

2011,ಜೂನ್
ಶ್ರೀ ಖರ ನಾಮ ಸಂವತ್ಸರ, ಉತ್ತರಾಯಣ,
ವಸಂತ/ಗ್ರೀಶ್ಮ ಋತು, ವೈಶಾಖ/ಜ್ಯೇಷ್ಠ ಮಾಸ

01 ಬು – ಬಾದಾಮಿ ಅಮಾವಾಸ್ಯೆ
02 ಗು – ಜ್ಯೇಷ್ಠ ಮಾಸ ಆರಂಭ
12 ಭಾ – ಸರ್ವತ್ರ ಏಕಾದಶಿ
15 ಬು - ಕರ ಹುಣ್ಣಿಮೆ
19 ಭಾ - ಸಂಕಷ್ಟ ಚತುರ್ಥಿ
27 ಸೋ – ಯೋಗಿನಿ ಏಕಾದಶಿ
30 ಗು - ಅಮಾವಾಸ್ಯೆ

2011,ಜುಲೈ
ಶ್ರೀ ಖರ ನಾಮ ಸಂವತ್ಸರ, ಉತ್ತರಾಯಣ/ದಕ್ಷಿಣಾಯಣ,
ಗ್ರೀಶ್ಮ/ವರ್ಷ ಋತು, ಆಶಾಢ/ಶ್ರಾವಣ ಮಾಸ

01ಶು – ಮಣ್ಣೆತ್ತಿನ ಅಮಾವಾಸ್ಯೆ
02 ಶ – ಆಶಾಢ ಮಾಸ ಅರಂಭ
11 ಸೋ - ಸರ್ವತ್ರ ಏಕಾದಶಿ
15 ಶು – ಗುರು ಪೂರ್ಣಿಮ
18 ಸೋ - ಸಂಕಷ್ಟ ಚತುರ್ಥಿ
26 ಮಂ - ಸರ್ವತ್ರ ಏಕಾದಶಿ
30 ಶ – ನಾಗರ ಅಮಾವಾಸ್ಯೆ
31 ಶ – ಶ್ರಾವಣ ಮಾಸ ಆರಂಭ

2011, ಆಗಸ್ಟ್
ಶ್ರೀ ಖರ ನಾಮ ಸಂವತ್ಸರ, ದಕ್ಷಿಣಾಯಣ,
ವರ್ಷ ಋತು, ಶ್ರಾವಣ/ಭಾದ್ರಪದ ಮಾಸ

02,09,16,23 ಮಂ – ಮಂಗಳಗೌರಿ ವ್ರತ
04 ಗು – ನಾಗ-ಗರುಡ ಪಂಚಮಿ
06,13,20,27 ಶ – ಶ್ರಾವಣ ಶನಿವಾರ
09 ಮಂ – ಪವಿತ್ರ ಏಕಾದಶಿ
12 ಶು – ವರಮಹಾಲಕ್ಷ್ಮಿ ವ್ರತ
13 ಶ – ಋಗ್ ಯಜುರ್ ಉಪಾಕರ್ಮ
15 ಸೋ – ಭಾರತ ಸ್ವಾತಂತ್ರ್ಯದಿನಾಚರಣೆ
17 ಬು - ಸಂಕಷ್ಟ ಚತುರ್ಥಿ
22 ಸೋ – ಶ್ರೀಕೃಷ್ಣ ಜನ್ಮಷ್ಟಮಿ
25 ಗು - ಸರ್ವತ್ರ ಏಕಾದಶಿ
28 ಭಾ - ಬೆನಕ ಅಮಾವಾಸ್ಯೆ
30 ಮಂ – ಭಾದ್ರಪದ ಮಾಸ ಆರಂಭ
31 ಬು – ಸ್ವರ್ಣಗೌರಿ ವ್ರತ, ಕುತುಬ್-ಇ-ರಂಜಾನ್

2011,ಸೆಪ್ಟೆಂಬರ್
ಶ್ರೀ ಖರ ನಾಮ ಸಂವತ್ಸರ, ದಕ್ಷಿಣಾಯಣ,
ವರ್ಷ/ಶರದ್ ಋತು, ಭಾದ್ರಪದ/ಆಶ್ವೀಜ ಮಾಸ

01 ಗು – ವರಸಿದ್ಧಿ ವಿನಾಯಕ ವ್ರತ
08 ಗು - ಸರ್ವತ್ರ ಏಕಾದಶಿ
09 ಶು – ತಿರು ಓಣಂ
11 ಭಾ – ಅನಂತಪದ್ಮನಾಭ ವ್ರತ
12 ಸೋ – ಅನಂತನ ಹುಣ್ಣೀಮೆ
13 ಮಂ – ಪಿತೃ ಪಕ್ಷ ಆರಂಭ
16 ಶು - ಸಂಕಷ್ಟ ಚತುರ್ಥಿ
23 ಶು - ಸರ್ವತ್ರ ಏಕಾದಶಿ
27 ಮಂ – ಮಹಾಲಯ ಅಮಾವಾಸ್ಯೆ
28 ಬು – ಅಶ್ವೀಜ ಮಾಸ ಮತ್ತು ನವರಾತ್ರಿ ಹಬ್ಬ ಆರಂಭ

2011,ಅಕ್ಟೋಬರ್
ಶ್ರೀ ಖರ ನಾಮ ಸಂವತ್ಸರ, ದಕ್ಷಿಣಾಯಣ,
ಶರದ್ ಋತು,ಆಶ್ವೀಜ/ಕಾರ್ತೀಕ ಮಾಸ

05 ಬು - ಮಹಾನವಮಿ
06 ಗು – ವಿಜಯ ದಶಮಿ
07 ಶು - ಸರ್ವತ್ರ ಏಕಾದಶಿ
11 ಮಂ - ಪೌರ್ಣಿಮೆ
15 ಶ - ಸಂಕಷ್ಟ ಚತುರ್ಥಿ
18 ಮಂ - ತುಲಾಸಂಕ್ರಮಣ
23 ಭಾ - ಸರ್ವತ್ರ ಏಕಾದಶಿ
25 ಮಂ – ನರಕ ಚತುರ್ದಶಿ
26 ಬು – ದೀಪಾವಳಿ ಲಕ್ಷ್ಮೀ ಪೂಜೆ
27 ಗು – ಬಲಿ ಪಾಡ್ಯಮಿ,ಕಾರ್ತೀಕ ಮಾಸ ಆರಂಭ

2011,ನವೆಂಬರ್
ಶ್ರೀ ಖರ ನಾಮ ಸಂವತ್ಸರ, ದಕ್ಷಿಣಾಯಣ,
ಶರದ್/ಹೇಮಂತ ಋತು,ಕಾರ್ತೀಕ/ಮಾರ್ಗಶಿರ ಮಾಸ

01 ಮಂ – ಕನ್ನಡ ರಾಜ್ಯೋತ್ಸವ
06 ಭಾ - ಸರ್ವತ್ರ ಏಕಾದಶಿ
07 ಸೋ - ಬಕ್ರೀದ್
10 ಗು – ಗೌರೀ ಹುಣ್ಣಿಮೆ, ಗುರುನಾನಕ್ ಜಯಂತಿ
13 ಭಾ – ಕನಕದಾಸ ಜಯಂತಿ
14 ಸೋ - ಸಂಕಷ್ಟ ಚತುರ್ಥಿ
21 ಸೋ - ಸರ್ವತ್ರ ಏಕಾದಶಿ
24 ಗು – ಬೋಧಾಯಣ ಅಮಾವಾಸ್ಯೆ
25 ಶು - ಸೂರ್ಯ ಗ್ರಹಣ
26 ಶ – ಮಾರ್ಗಶಿರ ಮಾಸ ಆರಂಭ

2011,ಡಿಸೆಂಬರ್
ಶ್ರೀ ಖರ ನಾಮ ಸಂವತ್ಸರ, ಉತ್ತರಾಯಣ,
ಹೇಮಂತ/ಶಿಶಿರ ಋತು, ಮಾರ್ಗಶಿರ/ಪುಷ್ಯ ಮಾಸ

06 ಮಂ - ಸರ್ವತ್ರ ಏಕಾದಶಿ
10 ಶ – ದತ್ತಜಯಂತಿ, ಚಂದ್ರ ಗ್ರಹಣ
20/21 ಮಂ/ಬು - ಸರ್ವತ್ರ ಏಕಾದಶಿ
24 ಶ – ಎಳ್ಳಮಾವಾಸ್ಯೆ, ಕ್ರಿಸ್ಮಸ್ ಈವ್
25 ಭಾ - ಕ್ರಿಸ್ಮಸ್,ಪುಷ್ಯ ಮಾಸ ಆರಂಭ

Varamahalakshmi Vrata / ವರಮಹಾಲಕ್ಷ್ಮಿ ವ್ರತ



ವರಮಹಾಲಕ್ಷ್ಮಿ ವ್ರತ - ಹೆಸರೇ ಸೂಚಿಸುವಂತೆ ವರಗಳನ್ನು ಕೊಡುವ ಲಕ್ಷ್ಮಿ ದೇವಿಯ ವ್ರತ ಇದು.ಈ ವ್ರತವನ್ನು ಶ್ರಾವಣ ಮಾಸದ ಶುಕ್ಲ ಪಕ್ಷದ ಶುಕ್ರವಾರ ಮಾಡುತ್ತಾರೆ. ಪೂರ್ಣಿಮೆಯ ಹಿಂದಿನ ಶುಕ್ರವಾರ ಮಾಡಬೇಕು. ಕೆಲವರ ಮನೆಯಲ್ಲಿ ವ್ರತ ಮಾಡುವ ಪದ್ಧತಿಗೆ ಇರುತ್ತೆ, ವ್ರತ ಮಾಡುವ ಪದ್ಧತಿ ಇಲ್ಲದಿದ್ದರೆ ಲಕ್ಷ್ಮಿ ದೇವಿಗೆ ಪೂಜೆ ಮಾಡಿ.
ಈ ದಿನ ಬೆಳಿಗ್ಗೆ ಎದ್ದು ಮಂಗಳ ಸ್ನಾನ ಮಾಡಬೇಕು. ವ್ರತ ಮಾಡುವವರು ಕಲಶ ಸ್ಥಾಪನೆ ಮಾಡಬೇಕು. ಪೂಜೆ ಮಾಡುವ ಸ್ಥಳವನ್ನು ಸ್ವಚ್ಚಗೊಳಿಸಿ, ಬಾಳೆ ಕಂದು, ಮಾವಿನ ಎಲೆಗಳಿಂದ ಸಿಂಗರಿಸಿ. ಅಷ್ಟದಳ ಪದ್ಮದ ರಂಗವಲ್ಲಿ ಹಾಕಬೇಕು. ಇದರ ಮೇಲೆ ಕಲಶ ಸ್ಥಾಪಿಸಬೇಕು. ಒಂದು ಚೊಂಬಿನಲ್ಲಿ ಸ್ವಲ್ಪ ನೀರು/ಅಕ್ಕಿ ಹಾಕಿ, ಜೊತೆಗೆ ಅರಿಶಿನದ ಗೊನೆ, ಅಡಿಕೆ, ಬೆಳ್ಳಿ ನಾಣ್ಯ / ಯಾವುದೇ ನಾಣ್ಯ(coin) ಹಾಕಿ.ಅದರ ಮೇಲೆ ಅರಿಶಿನ ಕುಂಕುಮ ಸವರಿದ ತೆಂಗಿನಕಾಯಿ ಇಟ್ಟು, ಇದರ ಮೇಲೆ ಮುಖದ ಆಕಾರದ ಚಿತ್ರ ಬರೆಯಬಹುದು ಅಥವಾ ಲಕ್ಷ್ಮಿ ದೇವಿಯ ಬೆಳ್ಳಿಯ ಮುಖವಾಡ ಇದ್ದರೆ ಅದನ್ನು ಈ ತೆಂಗಿನಕಾಯಿಗೆ ಜೋಡಿಸಿ. ಕಳಶದ ಬಾಯಿಗೆ ವೀಳ್ಯದ ಎಲೆ , ಮಾವಿನ ಎಲೆಗಳನ್ನು ಇಡಬೇಕು. ಈ ಕಳಶವನ್ನು ಅಕ್ಕಿ ಹರಡಿರುವ ತಟ್ಟೆಯ ಮೇಲೆ ಇಡಬೇಕು. ಈ ತಟ್ಟೆಯನ್ನು ಅಷ್ಟದಳ ರಂಗೋಲಿಯ ಮೇಲೆ ಇಡಬೇಕು. ಈ ಕಲಶಕ್ಕೆ ಹೊಸ ರವಿಕೆ ಬಟ್ಟೆ ಅಥವಾ ಸೀರೆ ಉಡಿಸಿ , ವಡವೆ ಹಾಕಿ ಅಲಂಕಾರ ಮಾಡಬಹುದು. ಈ ಕಲಶಕ್ಕೆ ಶ್ರೀ ಲಕ್ಷ್ಮಿಯನ್ನು ಆವಾಹನೆ ಮಾಡಿ, ಕಲಶವನ್ನು ಪೂಜೆ ಮಾಡಬೇಕು. ವರಮಹಾಲಕ್ಷ್ಮಿ ಪೂಜೆಯ ಚಿತ್ರ ಕೆಳಗಿದೆ.

ವರಮಹಾಲಕ್ಷ್ಮಿ ಕಲಶ ಸ್ಥಾಪನೆ , ಪೂಜೆ (karnataka.com)
ಸಾಮನ್ಯವಾಗಿ ಉಪಯೋಗಿಸುವ ಪೂಜಾ ಸಾಮಗ್ರಿಗಳ ಜೊತೆಗೆ, 9 ಗಂಟಿನ ದಾರ ಇಟ್ಟು ಪೂಜೆ ಮಾಡಬೇಕು, ಪೂಜೆ ನಂತರ ಈ ದಾರವನ್ನು ಕೈಗೆ ಕಟ್ಟಿಕೊಳ್ಳಬೇಕು. ವಿನಾಯಕನಿಗೆ ಪೂಜೆ ಮಾಡಿ ನಂತರ ವರಮಹಾಲಕ್ಷ್ಮಿ ದೇವಿಗೆ ಪೂಜೆ ಮಾಡಿ.ಪೂಜೆಯ ನಂತರ ಕಥಾ ಶ್ರವಣ ಮಾಡಬೇಕು. ಸುಮಂಗಲಿಯರಿಗೆ ಅರಿಶಿನ ಕುಂಕುಮ ಕೊಡಬೇಕು.
ಪೂಜೆಯ ಮಾರನೆಯ ದಿನ ಶನಿವಾರ, ದೇವರ ವಿಸರ್ಜನೆ ಮಾಡಿ, ನಂತರ ಕಲಶ ಪಾತ್ರೆಯ ಅಕ್ಕಿಯನ್ನು ಅಡಿಗೆಯಲ್ಲಿ ಉಪಯೋಗಿಸಿ, ಕಲಶಕ್ಕೆ ಇಟ್ಟ ತೆಂಗಿನಕಾಯಿಯಿಂದ ಸಿಹಿ ತಿಂಡಿಯನ್ನು ಮಾಡಿ. ವ್ರತದ ದಿನ ಪೂಜೆ ಮಾಡಲು ಆಗದಿದ್ದರೆ, ಶ್ರಾವಣದಲ್ಲಿ ಇನ್ನೊಂದು ಶುಕ್ರವಾರ ಈ ವ್ರತ ಮಾಡಬಹುದು.
ವರಮಹಾಲಕ್ಷ್ಮಿಯು ನಮ್ಮೆಲ್ಲರನ್ನು ಅನುಗ್ರಹಿಸಿ ಕಾಪಾಡಲಿ :)