ಪುಟಗಳು

ಕುವೆಂಪು






"ಕನ್ನಡಕೆ ಹೋರಾಡು ಕನ್ನಡದ ಕಂದಾ
ಕನ್ನಡವ ಕಾಪಾಡು ನನ್ನ ಆನಂದ
ಜೋಗುಳದ ಹರಕೆಯಿದು ಮರೆಯದಿರು ಚಿನ್ನಾ
ಮರೆತೆಯಾದರೆ, ಅಯ್ಯೋ ಮರೆತಂತೆ ನನ್ನಾ" 

-ಕುವೆಂಪು

ಜಿ.ಪಿ.ರಾಜರತ್ನಂ



 "ನರಕಕ್ಕಿಳ್ಸಿ ನಾಲಗೆ ಸೀಳ್ಸಿ ಬಾಯ್ ವೋಲ್ಸಾಕಿದ್ರೂನೆ
ಮೂಗ್ನಲ್ ಕನ್ನಡ ಪದವಾಡ್ತೀನಿ ನನ್ ಮನಸನ್ನೀ ಕಾಣೆ"

- ಜಿ.ಪಿ.ರಾಜರತ್ನಂ

ಸಮಸ್ತ ಕನ್ನಡದ ಕುಲಭಾಂದವರಿಗೆಲ್ಲರೆಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು


"ಸಾವಿರ ಪರ್ಪಂಚ ಸತ್ತು ಹುಟ್ಟಿದರು
ಲೆಕ್ಕವಿಲ್ದಂಗೆ ಲೋಕ ಸೃಷ್ಟಿಯಾದರು
ಸಾಯೋಕಿಲ್ಲ ನಮ್ಮ ಕನ್ನಡ."
"ಜೈ ಕರ್ನಾಟಕ ಮಾತೆ"


ಕನ್ನಡದ ನುಡಿಮುತ್ತುಗಳು:-
೧. ಏನೇ ಬರಲಿ ಕನ್ನಡ ನಮ್ಮೊಂದಿಗಿರಲಿ
೨. ಯಾರಿಗೆ ಕನ್ನಡ ಬೇಡ, ಅವ್ರು ನಮಗೂ ಬೇಡ
೩. ಓ ಕನ್ನಡಿಗ, ನಿರಭಿಮಾನದಿಂದ ಸೇವಕನಾಗಿದ್ದು ಸಾಕು, ಕನ್ನಡಾಭಿಮಾನದಿಂದ ರಾಜನಾಗು
೪. ಕನ್ನಡವೇ ನಮ್ಮ ತಾಯಿ-ತಂದೆ, ಅದು ಬರದೆ ಇದ್ರೆ ಜಾಗ ಇಲ್ಲ ಇಲ್ಲಿ ಇನ್ನು ಮುಂದೆ
೫. ಕನ್ನಡವೇ ನಮ್ಮ ಉಸಿರು, ಇರಲಿ ಎಲ್ಲೆಡೆ ಇದರ ಹಸಿರು
೬. ಕನ್ನಡಕ್ಕಾಗಿ ಹೋರಾಡು, ಹೇ-ಕನ್ನಡದ ಹೆಬ್ಬುಲಿ
೭. ಕನ್ನಡ ಉಳಿದರೆ, ನಾವು ಉಳಿದೇವು
೮. ಕನ್ನಡವೆನ್ನಿರಿ ಜೊತೆಯಲಿ ಬನ್ನಿರಿ
೯. ಕನ್ನಡದ ತಾಯಿ ನಮ್ಮನ್ನು ಕಾಯಿ
೧೦. ಕನ್ನಡಿಗರಿಗೆ ಕನ್ನಡವೇ ಜಾತಿ, ಕನ್ನಡವೇ ಧರ್ಮ