ಪುಟಗಳು

ಶ್ರೀಗಣೇಶ ಏಕದಂತ ಹೇಗೆ ಆದರು?

ಕಾರ್ತವೀರ್ಯನನ್ನು ವಧೆ ಮಾಡಿ ಕೃತಾರ್ಥರಾದ ಪರಶುರಾಮರು ಕೈಲಾಸಕ್ಕೆ ಹೋದರು. ಅಲ್ಲಿ ಅವರಿಗೆ ಗಣಗಳ ಮತ್ತು ಗಣಾಧೀಶನಾದ ಗಣಪತಿಯ ಭೇಟಿ ಆಯಿತು. ಪರಶುರಾಮರಿಗೆ ಭಗವಾನ ಶಂಕರನ ಭೇಟಿ ಮಾಡುವ ಇಚ್ಛೆ ಇತ್ತು, ಆದರೆ ಆ ಸಮಯದಲ್ಲಿ ಶಿವ-ಪಾರ್ವತಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು.
ಶ್ರೀ ಪರಶುರಾಮರು ಗಣೇಶನಿಗೆ ಹೀಗೆ ಹೇಳಿದರು "ಪರಮೇಶ್ವರನಿಗೆ ನಮಸ್ಕಾರ ಮಾಡಲು ಅಂತಃಪುರಕ್ಕೆ ಹೊರಟಿದ್ದೇನೆ, ಅವರಿಗೆ ವಂದಿಸಿ ಶೀಘ್ರವಾಗಿ ಹಿಂತಿರುಗುವೆನು. ಯಾರ ಕೃಪೆಯಿಂದ ನಾನು ಕಾರ್ತವೀರ್ಯನನ್ನು ವಧಿಸಿ, ಇಪ್ಪತ್ತೊಂದು ಬಾರಿ ಭೂಮಿಯನ್ನು ಕ್ಷತ್ರೀಯ ರಹಿತ ಮಾಡಿದೆನೋ ಅಂಥಾ ಜಗದ್ಗುರುವಿಗೆ ನಾನು ಶೀಘ್ರವಾಗಿ ಭೇಟಿ ಆಗಲೇಬೇಕು". ಇದನ್ನು ಕೇಳಿದ ಗಣೇಶನು "ನೀವು ಸ್ವಲ್ಪ ಸಮಯ ಕಾಯ್ದಿರಿ", ಎಂದನು.
ಆದರೆ ಗಣೇಶನ ಮಾತು ಕೇಳದೆ ಪರಶುರಾಮನು ಪರಶು ಹಿಡಿದು ನಿರ್ಭಯತೆಯಿಂದ ಹೊರಟರು. ಗಣೇಶನು ಅವರನ್ನು ತಡೆದು ಪ್ರೇಮ ಮತ್ತು ನಮ್ರತೆಯಿಂದ ಕೇಳಿಕೊಂಡನು. ಗಣೇಶನಿಗೆ ಹೊಡೆಯಲು ಪರಶುರಾಮನು ಪರಶು ಎತ್ತಿದನು. ಗಣೇಶನು ಧರ್ಮದ ಸಾಕ್ಷಿಯಾಗಿ ಪುನಃ ಪರಶುರಾಮನನ್ನು ಅವಸರದಲ್ಲಿ ಹೋಗಬೇಡಿ ಎಂದು ಮತ್ತೆ ತಡೆದನು. ಆದರೂ ಪರಶುರಾಮರು ನಿರಾಕರಿಸಿದರು. ಆಗ ಗಣೇಶನು ತನ್ನ ಸೊಂಡಿಲನ್ನು ಕೋಟಿ ಯೋಜನದಷ್ಟು ದೊಡ್ಡದಾಗಿ ಮಾಡಿ ಅದರಲ್ಲಿ ಪರಶುರಾಮರನ್ನು ಸಿಲುಕಿಸಿ ಸಪ್ತಲೋಕಗಳಲ್ಲಿ ಅವರನ್ನು ತಿರುಗಿಸುತ್ತಾನೆ. ಆ ಭ್ರಮಣದಿಂದ ಕೋಪಗೊಂಡ ಪರಶುರಾಮನು ಸಾವಧಾನರಾಗಿ ಗುರುದತ್ತರು ಹೇಳಿರುವ ಸ್ತೋತ್ರಕವಚ ಓದಿ ಗಣೇಶನ ಮೇಲೆ ಪರಶು ಎಸೆದರು. ಅದನ್ನು ವ್ಯರ್ಥ ಮಾಡಬೇಕೆಂದು ಗಣೇಶನು ತನ್ನ ಎಡಗಡೆಯ ದಂತವನ್ನು ಮುಂದೆ ಮಾಡಿದರು. ಆಗ ಪರಶು ವ್ಯರ್ಥವಾಯಿತು, ಆದರೆ ಗಣೇಶನ ದಂತ ಮುರಿಯಿತು.
ಈದನ್ನು ತಿಳಿದ ಎಲ್ಲಾ ದೇವ-ದೇವತೆಗಳು ಒಂದು ಕಡೆ ಸೇರಿದರು. ಶಿವ-ಪಾರ್ವತಿ ಕೂಡ ಹೊರಗೆ ಬಂದರು. ನಡೆದ ಘಟನೆ ತಿಳಿದ ಮೇಲೆ ಪಾರ್ವತಿಯು ಪರಶುರಾಮನಿಗೆ "ಅರೇ ರಾಮ, ನಿನ್ನ ಜನ್ಮವು ಬ್ರಾಹ್ಮಣವಂಶದಲ್ಲಿ ಆಗಿದೆ, ನೀನು ಪಂಡಿತನಾಗಿದ್ದು, ಜಮದಗ್ನಿಯ ಪುತ್ರನು ಮತ್ತು ಯೋಗಿರಾಜನ ಶಿಷ್ಯನೂ ಹೌದು. ನಿನ್ನ ತಾಯಿ, ಮಾಮಾ, ಅಜ್ಜ ಎಲ್ಲರೂ ಶ್ರೇಷ್ಠರು. ಆದರೂ ನೀನು ಯಾವ ದೋಷದ ಕಾರಣದಿಂದ ಹೀಗೆ ಮಾಡಿದೆ? ಅಮೋಘವಾದ ಪರಶುವಿನಿಂದ ಯಾರದರೂ ಸಿಂಹವನ್ನು ಹೊಡೆಯಬಹುದು, ಅಂತ ಪರಶುವನ್ನು ನೀನು ಗಣೇಶನ ಮೇಲೆ ಪ್ರಯೋಗ ಮಾಡಿದಿ! ನಿನ್ನಂತ ಕೋಟಿ ಕೋಟಿ ರಾಮರಿಗೆ ಹೊಡೆಯಲು ಗಣೇಶನು ಸಮರ್ಥನಾಗಿದ್ದಾನೆ. ಅರೇ, ಈ ಗಣೇಶನು ಕೃಷ್ಣನ ಅಂಶ. ದೊಡ್ಡ ವ್ರತದ ಕಾರಣದಿಂದ ಇವನ ಜನ್ಮವಾಗಿದೆ", ಎಂದಳು.
ಆಗ ಶ್ರೀವಿಷ್ಣು "ಹೇ ದೇವಿ ಪಾರ್ವತಿ, ನಿಮಗೆ ಗಣೇಶ ಮತ್ತು ಕಾರ್ತಿಕೇಯ ಹೇಗೊ, ಹಾಗೆ ಪರಶುರಾಮ ಕೂಡ, ಇವರ ಸ್ನೇಹ ಮತ್ತು ಪ್ರೇಮದಲ್ಲಿ ಯಾವ ಬೇಧವೂ ಇಲ್ಲ. ಇಂದಿನಿಂದ ನಿಮ್ಮ ಪುತ್ರನ ಹೆಸರು ಏಕದಂತ ಎಂದಾಗಿದೆ. ಇವರ ಕುಲದಲ್ಲಿ ಎಂಟು ನಾಮಗಳಿವೆ-ಗಣೇಶ, ಏಕದಂತ, ಹೇರಂಬ, ವಿಘ್ನನಾಯಕ, ಲಂಬೊಧರ, ಶೂರ್ಪಕರ್ಣ, ಗಜವಕ್ರ, ಗೃಹಗಜ", ಎಂದರು. ಶ್ರೀವಿಷ್ಣು ಗಣೇಶಸ್ತೋತ್ರ ಕಥೆ ಪಠಣ ಮಾಡಿ ಹೀಗೆ ಹೇಳಿದರು "ಹೇ ದುರ್ಗೇ, ಈ ಪರಶುರಾಮನ ಮೇಲೆ ಸಿಟ್ಟು ಮಾಡಬೇಡ. ಈ ಘಟನೆಯಿಂದಲೇ ಗಣೇಶನಿಗೆ ’ ಏಕದಂತ’ ನಾಮವು ಪ್ರಾಪ್ತವಾಗಿದೆ. ನೀವು ಪುತ್ರನಾದ ಪರಶುರಾಮನಿಗೆ ಅಭಯ ಹಸ್ತ ನೀಡಿ", ಎಂದರು. ಅಂದಿನಿಂದ ಶ್ರೀ ಗಣೇಶನಿಗೆ ಏಕದಂತ ಎಂದೂ ಹೆಸರು ಬಂತು.

ಚಿಕ್ಕಂದಿನಿಂದಲೇ ಅಲೌಕಿಕ ತತ್ವಹೊಂದಿದ ಸ್ವಾಮಿ (ಆದ್ಯಗುರು) ಶಂಕರಾಚಾರ್ಯರು




ಬಾಲಮಿತ್ರರೇ, ಭಗವಾನ ಶಂಕರಾಚಾರ್ಯರು ಭರತವರ್ಷ ಭೂಮಿಯ ಒಂದು ದಿವ್ಯ ವಿಭೂತಿಯಾಗಿದ್ದಾರೆ. ಅವರ ಕೌಶಲ್ಯ ಬುದ್ಧಿಯು ಈ ಘಟನೆಯಿಂದ ತಿಳಿಯುತ್ತದೆ. ಏಳನೇ ವಯಸ್ಸಿನಲ್ಲಿಯೇ ಶಂಕರರ ಪ್ರಖಂಡ ಪಾಂಡಿತ್ಯ ಮತ್ತು ಜ್ಞಾನಸಾಮರ್ಥ್ಯದ ಕೀರ್ತಿ ಎಲ್ಲ ಕಡೆಗಳಲ್ಲಿ ಹಬ್ಬಿತು. ಈ ಜ್ಞಾನ ಮತ್ತು ಕೀರ್ತಿ ಕೇರಳದ ರಾಜ ರಾಜಶೇಖರನ ಕಿವಿಗೆ ಬಿದ್ದಿತು. ರಾಜನು ಶಾಸ್ತ್ರಗಳಲ್ಲಿ ರುಚಿ ಇದ್ದವರಿಗೆ, ವಿದ್ವಾನರಿಗೆ, ಈಶ್ವರ ಭಕ್ತರಿಗೆ, ಶ್ರದ್ಧಾವಾನರಿಗೆ ಮತ್ತು ಪಂಡಿತರಿಗೆ ಆದರದಿಂದ ನೋಡುತ್ತಿದ್ದನು. ಅದಕ್ಕಾಗಿ ರಾಜನಿಗೆ ಈ ಬಾಲಕನನ್ನು ನೋಡುವ ತೀವ್ರ ಇಚ್ಛೆ ಇತ್ತು.
ರಾಜ ರಾಜಶೇಖರನು ಶಂಕರನನ್ನು ಆಸ್ಥಾನಕ್ಕೆ ಕರೆದು ತರಲು ತನ್ನ ಪ್ರಧಾನ ಮತ್ತು ಆನೆಯ ಜೊತೆಗೆ ಆಮಂತ್ರಣವನ್ನು ಕಳುಹಿಸಿದನು. ಪ್ರಧಾನನು ಶಂಕರನ ಮನೆಗೆ ಹೋಗಿ ನಮ್ರತೆಯಿಂದ ರಾಜನು ಕೊಟ್ಟ ಸಂದೇಶವನ್ನು ತಿಳಿಸಿದನು. ಸಂದೇಶವನ್ನು ನೋಡಿ ಶಂಕರನು "ಉಪಜೀವನ ಮಾಡಲು ಭಿಕ್ಷೆಯೇ ಯಾರ ಸಾಧನೆಯಾಗಿದೆಯೋ, ತ್ರಿಕಾಲ ಸಂಧ್ಯಾ ಈಶ್ವರ ಚಿಂತನ, ಪೂಜೆ-ಅರ್ಚನೆ ಮತ್ತು ಗುರುಸೇವೆಯೇ ಯಾರ ಜೀವನದ ನಿತ್ಯ ವ್ರತವಾಗಿದೆಯೋ ಅವರಿಗೆ ಈ ಆನೆಯ ಸವಾರಿ ಯಾಕೆ? ನಾಲ್ಕು ವರ್ಣದ ಸರ್ವ ಕರ್ತವ್ಯಗಳ ಪಾಲನೆ ಮಾಡಿ ಬ್ರಾಹ್ಮಣಾದಿ ಧರ್ಮಮಯ ಜೀವನ ಜೀವಿಸಲು ವ್ಯವಸ್ತೆ ಮಾಡುವುದು ರಾಜನ ಕರ್ತವ್ಯವಾಗಿದೆ. ನನ್ನ ಈ ಸಂದೇಶವನ್ನು ನಿನ್ನ ಸ್ವಾಮಿಗೆ ಹೇಳು", ಎಂದರು. ಈ ಸಂದೇಶದ ಜೊತೆಗೆ ರಾಜ ರಾಜಶೇಖರನು ಕಳಿಸಿರುವ ರಾಜಪ್ರಸಾದ ಆಮಂತ್ರಣಕ್ಕೆ ಸ್ಪಶ್ಟವಾಗಿ ನಿರಾಕರಿಸಿದನು.
ಈ ಉತ್ತರದಿಂದ ರಾಜನು ಅತ್ಯಧಿಕ ಪ್ರಸನ್ನನಾದನು. ಅವನ ಮನಸ್ಸಿನಲ್ಲಿ ಶಂಕರನ ಪ್ರತಿ ಇನ್ನೂ ಶ್ರದ್ಧೆ ಬೆಳೆಯಿತು. ಸ್ವತಃ ರಾಜನೆ ತನ್ನ ಪ್ರಧಾನನ ಜೊತೆ ಶಂಕರನಿಗೆ ಭೇಟಿಯಾಗಲು ಕಾಲ್ನಡಿಗೆಯಲ್ಲಿ ಹೋದನು. ರಾಜನು ಅಲ್ಲಿ ಕುಳಿತಿರುವ ತೇಜಸ್ವಿ ಬಾಲಕ ಮತ್ತು ಅವನ ಸುತ್ತಲೂ ಕುಳಿತಿರುವ ಬ್ರಾಹ್ಮಣರು ವೇದಾಧ್ಯಯನ ಮಾಡುವುದನ್ನು ಕಂಡನು. 
ರಾಜನು ಬರುವುದನ್ನು ಕಂಡು ಶಂಕರನು ನಮ್ರತೆಯಿಂದ ಸಮ್ಮಾನಪೂರ್ವಕ ಸ್ವಾಗತ ಮಾಡಿದನು. ರಾಜನಿಗೆ ಶಂಕರನ ಜೊತೆ ಚರ್ಚೆ ಮಾಡಿದಾಗ ಅವನ ಪ್ರಖಂಡ ಪಾಂಡಿತ್ಯ ಮತ್ತು ಅಲೌಕಿಕ ವಿಚಾರ ಶಕ್ತಿಯ ಅನುಭವವಾಯಿತು. ರಾಜನು ಅಲ್ಲಿಂದ ಹೊರಡುವಾಗ ರತ್ನದ ಮುದ್ರೆಗಳನ್ನು ಶಂಕರನ ಚರಣದಲ್ಲಿ ಅರ್ಪಣೆ ಮಾಡಿ ಸ್ವೀಕರಿಸಲು ವಿನಂತಿಸಿಕೊಂಡನು. ಆಗ ಶಂಕರನು ರಾಜನಿಗೆ "ಮಹಾರಾಜರೇ, ನಾನು ಬ್ರಾಹ್ಮಣ ಮತ್ತು ಬ್ರಹ್ಮಚಾರಿಯಾಗಿದ್ದೇನೆ, ಇದರಿಂದ ನನಗೇನು ಉಪಯೋಗವಿದೆ? ನೀವು ದೇವರ ಪೂಜೆಗೆ ಕೊಟ್ಟಿರುವ ಭೂಮಿ ನನಗೆ ಮತ್ತು ನನ್ನ ತಾಯಿಗೆ ಸಾಕು. ನಿಮ್ಮ ಕೃಪೆಯಿಂದ ನನಗೆ ಯಾವ ಪ್ರಕಾರದ ಅಭಾವವಾಗಿಲ್ಲ", ಎಂದರು.
ಶಂಕರನ ಉತ್ತರ ರಾಜನಿಗೆ ತಿಳಿಯಲಿಲ್ಲ. ಕೊನೆಗೆ ರಾಜನು ಶಂಕರನಿಗೆ ಕೈಮುಗಿದು "ನಿಮ್ಮ ದರ್ಶನದಿಂದ ನಾನು ಧನ್ಯನಾದೆ", ಎಂದು ಹೇಳಿ ಅವರಿಗೆ ದುಡ್ಡನ್ನು ಅರ್ಪಣೆಮಾಡಿ "ಒಂದು ಸಲ ಅರ್ಪಣೆ ನೀಡಿ ಅದನ್ನು ಮತ್ತೆ ನಾನು ತೆಗೆದುಕೊಳ್ಳುವುದು ಸರಿಯಲ್ಲಾ, ಅದಕ್ಕೆ ನೀವೇ ಆ ಹಣವನ್ನು ಯೋಗ್ಯ ವ್ಯಕ್ತಿಗೆ ಕೊಡಿರಿ", ಎಂದನು. ಮುಗುಳ್ನಗುತ್ತಾ ಶಂಕರರು "ಮಹಾರಾಜರೆ, ನೀವು ರಾಜರಾಗಿದ್ದು ಯಾರು ಸುಪಾತ್ರರು, ಯಾರು ಯೋಗ್ಯರಂದು ನಿಮಗೆ ತಿಳಿದಿರಬೇಕು, ನನ್ನಂಥ ಬ್ರಹ್ಮಚಾರಿಗೇನು ಇಂಥಹ ಜ್ಞಾನ ಇರಬಹುದು? ವಿದ್ಯಾದಾನವೇ ಬ್ರಾಹ್ಮಣನ ಧರ್ಮ ಮತ್ತು ಸತ್ಪಾತ್ರೆ ದಾನವೇ ರಾಜಧರ್ಮವಾಗಿದೆ. ನೀವೆ ಯೋಗ್ಯ ಸತ್ಪಾತ್ರನಿಗೆ ಈ ಧನವನ್ನು ನೀಡಿ", ಎಂದರು. ರಾಜನು ನಿರುತ್ತರನಾಗಿ ಶಂಕರನಿಗೆ ವಂದಿಸಿ ಅಲ್ಲಿರುವ ಬ್ರಾಹ್ಮಣರಿಗೆ ಆ ಧನವನ್ನು ಹಂಚಿದನು.
ಮಕ್ಕಳೇ, ನಿರಪೇಕ್ಷೆಯಿಂದ ವಿದ್ಯಾದಾನ ಮಾಡುವ ಮಹತ್ವ ಈಗ ನಿಮಗೆ ತಿಳಿದಿರಬಹುದು. ನಾವು ಕೂಡ ಹೀಗೆ ಮಾಡಬಹುದು. ಯಾವ ವಿಷಯದಲ್ಲಿ ನಿಮಗೆ ಅಧಿಕ ಜ್ಞಾನವಿದೆಯೋ ಅದನ್ನು ತಿಳಿಯದವರಿಗೆ ನೀವು ತಿಳಿಸಿ ಅವರಿಗೆ ಸಹಾಯ ಮಾಡಬಹುದು.

ಅಸಾಮಾನ್ಯ ಪರಾಕ್ರಮದಿಂದ ಸತತ ಸ್ಫೂರ್ತಿ ನೀಡುವ ಝಾನ್ಸೀರಾಣಿ ಲಕ್ಷ್ಮೀಬಾಯಿ !



             ನಮ್ಮ ಹಿಂದೂಸ್ಥಾನದಲ್ಲಿ ೧೮೫೭ರಲ್ಲಿ ನಮಗೆಲ್ಲರಿಗೆ ಆದರ್ಶಪ್ರಾಯರಾಗಿ ಅನೇಕ ವೀರ ಪರಾಕ್ರಮಿಗಳು ಪ್ರಜ್ವಲಿಸಿದರು.
ಜನ್ಮ ಮತ್ತು ಬಾಲ್ಯ
         ಎರಡನೇ ಬಾಜೀರಾವ ಪೇಶ್ವೆಯವರ ಸಂಬಂಧಿ ಚಿಮಾಜೀ ಅಪ್ಪಾರವರ ವ್ಯವಸ್ಥಾಪಕರಾಗಿದ್ದ ಮೋರೊಪಂತ ತಾಂಬೆ ಮತ್ತು ಭಗೀರಥಿ ಬಾಯಿಯವರಿಗೆ ಕಾರ್ತಿಕ ಕೃಷ್ಣ ೧೪, ೧೭೫೭ ವರ್ಷ ಅಂದರೆ ಆಂಗ್ಲ ಪಂಚಾಂಗನುಸಾರ ೧೯ ನವೆಂಬರ ೧೮೩೫ ರಂದು ರಾಣಿ ಲಕ್ಷ್ಮೀಬಾಯಿಯ ಜನನವಾಯಿತು. ಆಕೆಗೆ ‘ಮಣಿಕರ್ಣಿಕಾ’ ಎಂದು ಹೆಸರಿಟ್ಟರು. ಮೋರೋಪಂತರು ಅವಳನ್ನು ಪ್ರೀತಿಯಿಂದ ‘ಮನುತಾಯಿ’  ಎಂದು ಕರೆಯುತ್ತಿದ್ದರು. ಮನುತಾಯಿಯು ನೋಡಲು ಸುಂದರ ಮತ್ತು ತುಂಬಾ ಬುದ್ಧಿವಂತೆಯಾಗಿದ್ದಳು. ಮನುತಾಯಿಗೆ ೩-೪ ವರ್ಷವಿರುವಾಗಲೇ ತಾಯಿವಿಯೋಗ ಅನುಭವಿಸಬೇಕಾಯಿತು. ಅವಳು ಮುಂದೆ ಬ್ರಹ್ಮಾವರ್ತಾದಲ್ಲಿನ ಎರಡನೇ ಬಾಜೀರಾವ ಪೇಶ್ವೆಯವರ ಆಶ್ರಯದಲ್ಲಿ ಬೆಳೆದಳು.
 ಯುದ್ಧಕಲೆಯ ಶಿಕ್ಷಣ
        ಬ್ರಹ್ಮಾವರ್ತಾದಲ್ಲಿ ನಾನಾಸಾಹೇಬ ಪೇಶ್ವೆ ತಮ್ಮ ಬಂಧು ರಾವಸಾಹೇಬರವರೊಂದಿಗೆ ಕತ್ತಿವರಸೆ, ದಾಂಡಪಟ್ಟಿ, ಬಂದೂಕು ಚಲಾಯಿಸುವುದನ್ನು ಮತ್ತು ಕುದುರೆ ಸವಾರಿಯನ್ನು ಕಲಿಯುತ್ತಿದ್ದರು. ಮನುತಾಯಿಯೂ ಸಹ ಅವರೊಂದಿಗೆ ಎಲ್ಲ ಯುದ್ಧಕಲೆಗಳನ್ನು ಕಲಿತು ಅದರಲ್ಲಿ ನಿಪುಣತೆಯನ್ನು ಪಡೆದುಕೊಂಡಳು. ಅವರ ಜೊತೆಯಲ್ಲಿಯೇ ಮನುತಾಯಿ ವಿದ್ಯಾಭ್ಯಾಸವನ್ನು ಮಾಡಿದಳು.
 ವಿವಾಹ
        ಮನುತಾಯಿಗೆ ೭ ವರ್ಷವಿರುವಾಗ ಝಾನ್ಸೀ ಸಂಸ್ಥಾನದ ಅಧಿಪತಿ ಗಂಗಾಧರರಾವ ನೆವಾಳಕರರವರೊಂದಿಗೆ ಅವಳ ವಿವಾಹವು ನೆರವೇರಿತು. ಮೋರೋಪಂತ ತಾಂಬೆಯವರ ಮನುತಾಯಿ ವಿವಾಹದ ನಂತರ ಝಾನ್ಸೀಯ ರಾಣಿಯಾದಳು. ವಿವಾಹದ ನಂತರ ಆಕೆಯನ್ನು ’ಲಕ್ಷ್ಮೀಬಾಯಿ’ ಎಂದು ಸಂಬೋಧಿಲಾಯಿತು.

ಪುತ್ರವಿಯೋಗದ ದುಃಖ
        ರಾಣಿಲಕ್ಷ್ಮೀಬಾಯಿಯು ಒಂದು ಗಂಡು ಮಗುವಿಗೆ ಜನ್ಮವಿತ್ತಳು. ಪುತ್ರನ ಜನನದಿಂದ ಅಧಿಕಾರಕ್ಕೆ ವಾರಸುದಾರ ಸಿಕ್ಕನೆಂದು ಗಂಗಾಧರರಾವಗೆ ತುಂಬಾ ಆನಂದವಾಯಿತು. ಆದರೆ ಮಗು ಮೂರು ತಿಂಗಳಿರುವಾಗಲೇ ಮರಣಿಸಿತು. ಹಾಗಾಗಿ ರಾಣಿಲಕ್ಷ್ಮೀಬಾಯಿ ಮತ್ತು ಗಂಗಾಧರರಾವ ಇವರು ಪುತ್ರವಿಯೋಗ ಅನುಭವಿಸಬೇಕಾಯಿತು.

ಪತಿವಿಯೋಗದ ದುಃಖ ಮತ್ತು ಮಗನನ್ನು ದತ್ತು ತೆಗೆದುಕೊಳ್ಳುವುದು
        ಪುತ್ರವಿಯೋಗವನ್ನು ಸಹಿಸದೆ ಗಂಗಾಧರರಾವ ಹಾಸಿಗೆ ಹಿಡಿದರು. ಗಂಗಾಧರರಾವ ಅವರ ಇಚ್ಛೆಯಂತೆ ವಾರಸುದಾರನಾಗಿ ನೆವಾಳಕರ ವಂಶದ ಆನಂದರಾವನನ್ನು ದತ್ತು ಪಡೆದು ಅವನಿಗೆ ’ದಾಮೋದರರಾವ’ ಎಂದು ಹೆಸರಿಟ್ಟರು. ದತ್ತು ಪಡೆದ ನಂತರ ಕೆಲವು ಸಮಯದಲ್ಲೇ ಗಂಗಾಧರರಾವ ಮರಣ ಹೊಂದಿದರು. ಪತಿ ವಿಯೋಗದಿಂದ ರಾಣಿಲಕ್ಷ್ಮೀಬಾಯಿಯು ೧೮ ವರ್ಷದಲ್ಲೇ ವೈಧವ್ಯ ಅನುಭವಿಸಬೇಕಾಯಿತು.

"ನನ್ನ ಝಾನ್ಸೀಯನ್ನು ನಾನು ಎಂದಿಗೂ ಕೊಡುವುದಿಲ್ಲ"
        ಆಂಗ್ಲರು ಹೊರಡಿಸಿದ ಹೊಸ ರಾಜಘೋಷಣೆಯನುಸಾರ ರಾಜ್ಯದ ಉತ್ತರಾಧಿಕಾರಿಯಾಗಿ ರಾಜನ ದತ್ತು ಪುತ್ರನಿಗೆ ಮಾನ್ಯತೆ ಸಿಗಲಾರದು. ಈ ರಾಜಘೋಷಣೆಯ ಕುರಿತು ರಾಣಿಲಕ್ಷ್ಮೀಬಾಯಿಗೆ ತಿಳಿಸಲು ಆಂಗ್ಲ ಅಧಿಕಾರಿ ಮೇಜರ ಎಲಿಸ ಭೇಟಿಯಾಗಲು ಬಂದನು. ರಾಣಿಗೆ ಸ್ವಂತ ಮಕ್ಕಳಿಲ್ಲದ ಕಾರಣ ಝಾನ್ಸೀಯನ್ನು ತಾವು ವಶಪಡೆಸಿಕೊಳ್ಳುವುದಾಗಿ ರಾಜಘೋಷಣೆಯನ್ನು ಮಾಡಿದನು. ರಾಣಿಯು ಸಂತಾಪದಿಂದ ದುಃಖಿತಳಾದಳು ಆದರೆ ಮರುಕ್ಷಣವೇ ಸಿಂಹಿಣಿಯಂತೆ ಘರ್ಜಿಸುತ್ತಾ ಹೇಳಿದಳು, "ನನ್ನ ಝಾನ್ಸೀಯನ್ನು ನಾನು ಎಂದಿಗೂ ಕೊಡುವುದಿಲ್ಲ", ಇದನ್ನು ಕೇಳಿದ ಮೇಜರ ಎಲಿಸನು ಭಯಗ್ರಸ್ತನಾಗಿ ಹಿಂತಿರುಗಿ ಹೋದನು.

೧೮೫೭ ಸಂಗ್ರಾಮ

        ೧೮೫೭ರ ಜನವರಿಯಲ್ಲಿ ಪ್ರಾರಂಭಗೊಂಡ ಸ್ವಾತಂತ್ರ ಸಂಗ್ರಾಮವು ಮೇ ೧೦ನೇ ತಾರೀಖಿನಂದು ಮೀರತನಲ್ಲಿ ಕಾಲಿಟ್ಟಿತ್ತು. ಮೀರತದಿಲ್ಲಿ, ಬರೇಲಿಯು ಕೂಡಲೇ ಆಂಗ್ಲರಿಂದ ಸ್ವತಂತ್ರವಾಯಿತು. ರಾಣಿಲಕ್ಷ್ಮೀಬಾಯಿಯು ಆಂಗ್ಲರ ಸಂಭವನೀಯ ಹಲ್ಲೆಯಿಂದ ಝಾನ್ಸೀಯ ರಕ್ಷಣೆಗಾಗಿ ಸಿದ್ಧತೆಯನ್ನು ಮಾಡತೊಡಗಿದಳು. ಆಂಗ್ಲರು ರಾಣಿಲಕ್ಷ್ಮೀಬಾಯಿಯನ್ನು ಜೀವಂತವಾಗಿ ಹಿಡಿದು ತರಲು ಸರ‍್ ಹ್ಯೂ ರೋಜ್ ಇವರನ್ನು ನೇಮಕ ಮಾಡಿದರು. ಸರ‍್ ಹ್ಯೂ ರೋಜ್ ಇವರ ಸೈನ್ಯವು ಝಾನ್ಸೀಯಿಂದ ಮೂರು ಮೈಲು ದೂರದಲ್ಲಿ ಬೀಡುಬಿಟ್ಟಿತು ಮತ್ತು ರಾಣಿಗೆ ಶರಣಾಗಲು ಸಂದೇಶ ಕಳಿಸಿತು. ಆದರೆ ಝಾನ್ಸೀ ರಾಣಿಯು ಶರಣಾಗದೆ ತಾನೇ ಮುಂದೆ ನಿಂತು ಎಲ್ಲರಿಗೆ ಹೋರಾಡಲು ಸ್ಫೂರ್ತಿ ನೀಡಿದಳು. ಯುದ್ಧ ಪ್ರಾರಂಭವಾಯಿತು. ಝಾನ್ಸೀಯ ಸೈನಿಕರು ಸತತವಾಗಿ ಫಿರಂಗಿಯಿಂದ ಗುಂಡುಗಳನ್ನು ಆಂಗ್ಲರ ಮೇಲೆ ಸಿಡಿಸಲು ಪ್ರಾರಂಭಿಸಿದರು. ಮೂರು ದಿವಸದ ನಂತರವೂ ಆಂಗ್ಲರಿಗೆ ಕೋಟೆಯ ಮೇಲೆ ವಿಜಯ ಸಾಧಿಸಲು ಸಾಧ್ಯವಾಗದಿದ್ದಾಗ ಸರ‍್ ಹ್ಯೂ ರೋಜ್ ಮೋಸದ ಮಾರ್ಗ ಹಿಡಿದರು. ಹೀಗೆ ಆಂಗ್ಲರು ಝಾನ್ಸೀಯ ಮೇಲೆ ವಿಜಯ ಸಾಧಿಸಿದರು. ಆಗ ರಾಣಿಯು ದತ್ತು ಪುತ್ರ ದಾಮೋದರನನ್ನು ಬೆನ್ನಿಗೆ ಕಟ್ಟಿ ಕುದುರೆಯನ್ನೇರಿ ’ಜಯ ಶಂಕರ’ ಎಂಬ ಘೋಷಣೆಯನ್ನು ಮಾಡುತ್ತಾ ಆಂಗ್ಲ ಸೈನ್ಯವನ್ನು ಭೇದಿಸಿ ಮುನ್ನೆಡೆದಳು. ಈ ಸಮಯದಲ್ಲಿ ರಾಣಿಲಕ್ಷ್ಮೀಬಾಯಿಯ ತಂದೆ ಮೋರೋಪಂತರು ಅವಳೊಂದಿಗೆ ಇದ್ದರು. ಆದರೆ ಆಂಗ್ಲರೊಂದಿಗಿನ ಯುದ್ಧದಲ್ಲಿ ಮೋರೋಪಂತರು ಗಾಯಗೊಂಡು ಆಂಗ್ಲರ ಕೈಗೆ ಸಿಕ್ಕುಬಿದ್ದರು. ನಂತರ ಅವರಿಗೆ ನೇಣುಹಾಕಲಾಯಿತು.

ಕಾಲ್ಪಿಯ ಯುದ್ಧ
            ರಾಣಿ ಲಕ್ಷ್ಮೀಬಾಯಿಯು ೨೪ ಗಂಟೆಗಳಲ್ಲಿ ೧೦೨ ಮೈಲಿಗಳಷ್ಟು ದೂರ ಕುದುರೆ ಸವಾರಿ ಮಾಡಿ ’ಕಾಲ್ಪಿ’ ಎಂಬ ಊರು ತಲುಪಿದಳು. ಪೇಶ್ವೆಯವರು ಪರಿಸ್ಥಿತಿಯ ಅಭ್ಯಾಸವನ್ನು ಮಾಡಿ ರಾಣಿ ಲಕ್ಷ್ಮೀಬಾಯಿಗೆ ಎಲ್ಲ ರೀತಿಯ ಸಹಾಯ ಮಾಡಲು ತೀರ್ಮಾನಿಸಿದರು. ರಾಣಿ ಕೇಳಿದಷ್ಟು ಸೈನಿಕರನ್ನು ಅವಳಿಗೆ ನೀಡಿದರು. ಮೇ ೨೨ರಂದು ಸರ‍್ ಹ್ಯೂ ರೋಜ್ ಕಾಲ್ಪಿಯ ಮೇಲೆ ದಾಳಿ ಮಾಡಿದನು. ಯುದ್ಧ ಪ್ರಾರಂಭವಾದದ್ದನ್ನು ನೋಡಿ ರಾಣಿ ಲಕ್ಷ್ಮೀಬಾಯಿಯು ಕೈಯಲ್ಲಿ ಕತ್ತಿ ಹಿಡಿದು ಶರವೇಗದಿಂದ ಮುನ್ನುಗ್ಗಿದಳು. ರಾಣಿಯ ಹಲ್ಲೆಯನ್ನು ನೋಡಿ ಆಂಗ್ಲ ಸೈನ್ಯವು ಹಿಂದೆ ಓಡಿಹೋದರು. ಈ ಪರಾಭವದಿಂದ ದಿಗ್ಭ್ರಾಂತನಾದ ಸರ‍್ ಹ್ಯೂ ರೋಜ್ ಬಾಕಿ ಇದ್ದ ಸೈನ್ಯವನ್ನು ಯುದ್ಧಭೂಮಿಗೆ ಕೂಡಲೇ ಕರೆಸಿದನು. ಹೊಸ ಸೈನ್ಯದ ಮುಂದೆ ದಣಿದಿದ್ದ ಕ್ರಾಂತಿಕಾರರ ಆವೇಶ ಕಡಿಮೆಯಾಯಿತು. ಮೇ ೨೪ರಂದು ಕಾಲ್ಪಿಯನ್ನು ಆಂಗ್ಲರು ತಮ್ಮ ವಶಕ್ಕೆ ಪಡೆದುಕೊಂಡರು.
        ಕಾಲ್ಪಿಯಲ್ಲಿ ಪರಾಭವಗೊಂಡ ರಾವಸಾಹೇಬ ಪೇಶ್ವೆ, ಬಾಂದ್ಯದ ನವಾಬ, ತಾತ್ಯಾ ಟೋಪೆ, ಝಾನ್ಸೀಯ ರಾಣಿ ಮತ್ತು ಇತರ ಪ್ರಮುಖ ಸರದಾರರೆಲ್ಲರು ಗೊಪಾಳಪುರದಲ್ಲಿ ಒಂದು ಕಡೆ ಸೇರಿದರು. ಝಾನ್ಸೀರಾಣಿಯು ಗ್ವಾಲಿಯರನ್ನು ಆಂಗ್ಲರಿಂದ ವಶಕ್ಕೆ ಪಡೆಯಬೇಕೆಂದು ಸೂಚನೆ ನೀಡಿದಳು. ಗ್ವಾಲಿಯರಿನ ರಾಜ ಶಿಂದೆ ಬ್ರಿಟಿಷರ ಅನುಕರಣೆ ಮಾಡುತ್ತಿದ್ದರು. ರಾಣಿಲಕ್ಷ್ಮೀಬಾಯಿಯು ಮುಂದಾಳತ್ವ ವಹಿಸಿ ಗ್ವಾಲಿಯರನ್ನು ಗೆದ್ದು ಪೇಶ್ವೆಯವರ ಕೈಗಿಟ್ಟಳು.

ಸ್ವಾತಂತ್ರವೀರರ ಬಲಿದಾನ
        ಗ್ವಾಲಿಯರನ್ನು ರಾಣಿ ಗೆದ್ದ ಸುದ್ದಿ ಸರ‍್ ಹ್ಯೂ ರೋಜ್ ಗೆ ತಲುಪಿತು. ಇನ್ನು ಸಮಯ ವ್ಯರ್ಥ ಮಾಡಿದರೆ ಆಂಗ್ಲರ ನಾಶವಾಗುವುದೆಂದು ಅರಿತು, ಅವನು ತನ್ನ ಸೈನ್ಯವನ್ನು ಗ್ವಾಲಿಯರನ ಕಡೆ ತಿರುಗಿಸಿದನು. ಜೂನ್ ೧೬ರಂದು ಆಂಗ್ಲರ ಸೈನ್ಯವು ಗ್ವಾಲಿಯರ‍ ತಲುಪಿತು. ರಾಣಿಲಕ್ಷ್ಮೀಬಾಯಿ ಮತ್ತು ಪೇಶ್ವೆಯವರು ಸರ‍್ ಹ್ಯೂ ರೋಜ್ ನನ್ನು ಎದುರಿಸಲು ಸಿದ್ಧರಾದರು. ಗ್ವಾಲಿಯರನ ಪೂರ್ವ ಭಾಗವನ್ನು ರಕ್ಷಿಸುವ ಸಂಪೂರ್ಣ ಹೊಣೆಯನ್ನು ರಾಣಿ ತನ್ನ ಮೇಲೆ ಹೊತ್ತಳು. ಯುದ್ಧದಲ್ಲಿ ಲಕ್ಷ್ಮೀಬಾಯಿಯ ಧೈರ್ಯ ನೋಡಿ ಸೈನಿಕರಿಗೆ ಸ್ಫೂರ್ತಿ ಸಿಕ್ಕಿತು. ರಾಣಿಯ ದಾಸಿಯರಾದ ಮಂದಾರ ಮತ್ತು ಕಾಶಿಯೂ ಪುರುಷರ ವೇಷ ಧರಿಸಿ ಯುದ್ಧ ಮಾಡಲು ಬಂದರು. ರಾಣಿಯ ಶೌರ್ಯದಿಂದಾಗಿ ಆ ದಿನ ಆಂಗ್ಲರು ಪರಾಜಯ ಹೊಂದಬೇಕಾಯಿತು.
        ಜೂನ್ ೧೮ ರಂದು ರಾಣೀ ಲಕ್ಷ್ಮೀಬಾಯಿಯ ಶೌರ್ಯದಿಂದ ಹತಾಶರಾದ ಆಂಗ್ಲರು ಗ್ವಾಲಿಯರನ್ನು ಎಲ್ಲ ದಿಕ್ಕುಗಳಿಂದ ಒಟ್ಟಿಗೆ ಆಕ್ರಮಿಸಿದರು. ಆಗ ರಾಣಿಯು ಆಂಗ್ಲರಿಗೆ ಶರಣಾಗದೆ ಅವರನ್ನು ಬೇಧಿಸಿ ಹೊರಗೆ ಹೋಗಲು ನಿರ್ಧರಿಸಿದಳು. ಶತ್ರುಗಳನ್ನು ಬೇಧಿಸಿ ಹೊರಹೋಗುವಾಗ ಒಂದು ನೀರಿನ ಪ್ರವಾಹ ನಡುವೆ ಬಂದಿತು. ರಾಣಿಯ ಬಳಿ ಯಾವಾಗಲೂ ಇರುವ ಕುದುರೆ ’ರಾಜರತ್ನ’ ಇರದ ಕಾರಣ ಮತ್ತೊಂದು ಕುದುರೆಯ ಜೊತೆ ರಾಣಿಯು ಇದ್ದಳು. ಆ ಕುದುರೆಗೆ ನೀರಿನ ಪ್ರವಾಹ ದಾಟಲು ಸಾಧ್ಯವಾಗದೆ ಅಲ್ಲಿಯೇ ಸುತ್ತಲೂ ಶುರುಮಾಡಿತು. ಮುಂದೇನಾಗಬಹುದೆಂದು ಅರಿತ ರಾಣಿ ತನ್ನನ್ನು ಬೆಂಬತ್ತಿ ಬರಿತ್ತಿದ್ದ ಸೈನ್ಯವನ್ನು ಎದುರಿಸಿದಳು. ಆಕೆಗೆ ಬಿದ್ದ ಹೊಡೆತದಿಂದಾಗಿ ರಕ್ತಸಿಕ್ತಳಾಗಿ ಕೆಲಗೆ ಬಿದ್ದಳು. ಪುರುಷರ ವೇಷ ಧರಿಸಿದ್ದ ಕಾರಣ ಸೈನಿಕರಿಗೆ ಅದು ರಾಣಿ ಎಂಬುದು ತಿಳಿಯಲಿಲ್ಲ. ಹಾಗಾಗಿ ಅವಳು ಬಿದ್ದ ತಕ್ಷಣ ಆಂಗ್ಲರು ಹೊರಟು ಹೋದರು. ರಾಣಿಯ ಸೇವಕರು ಆಕೆಯನ್ನು ಸಮೀಪವಿದ್ದ ಗಂಗಾದಾಸರ ಮಠಕ್ಕೆ ಕರೆದುಕೊಂಡು ಹೋದರು ಮತ್ತು ಆಕೆಗೆ ಗಂಗಾಜಲವನ್ನು ನೀಡಿದರು. ತನ್ನ ಶರೀರ ಆಂಗ್ಲರ ಕೈಗೆ ಸಿಗಬಾರದೆಂಬ ಇಚ್ಛೆಯನ್ನು ವ್ಯಕ್ತಪಡಿಸಿ ರಾಣಿಯು ವೀರಮರಣವನ್ನಪ್ಪಿದಳು.
        ಜಗತ್ತಿನಾದ್ಯಂತದ ಕ್ರಾಂತಿಕಾರರಿಗೆಲ್ಲ ಭಗತ ಸಿಂಗನ ತ್ಯಾಗ, ನೇತಾಜಿ ಸುಭಾಶ್ಚಂದ್ರ ಬೋಸ್ ರವರ ಸಂಘಟನಾ ಶಕ್ತಿ ಹಾಗೆಯೇ ಝಾಂಸಿರಾಣಿಯ ಶೌರ್ಯವು ಸ್ಫೂರ್ತಿಯನ್ನು ನೀಡಿದೆ. ಇಂತಹ ವೀರಾಂಗನೆ ರಾಣಿಲಕ್ಷ್ಮೀಬಾಯಿಯ ಚರಣಗಳಲ್ಲಿ ನಮನಗಳು.

೧೮೫೭ ಸ್ವಾತಂತ್ರ ಸಂಗ್ರಾಮದಲ್ಲಿ ಪ್ರಾಣಾರ್ಪಣೆ ಮಾಡಿದ ವೀರರ ಗೌರವಾರ್ಥ ಭಾರತ ಸರಕಾರ ಬಿಡುಗಡೆ ಮಾಡಿದ ಅಂಚೆಚೀಟಿ


 
ಝಾನ್ಸೀ ರಾಣಿಯ ಗೌರವಾರ್ಥ ಭಾರತದ ಸ್ಟಾಂಪ್

ಝಾನ್ಸೀ ರಾಣಿಯ ಮೂಲ ಚಿತ್ರ

ತಿರುಪತಿ ತಿಮ್ಮಪ್ಪನ ಹುಂಡಿಯಲ್ಲಿ 162 ವಜ್ರಗಳು

!
Tirupati Temple
 
ತಿರುಮಲ, ನ.24: ಅನಾಮಧೇಯ ಭಕ್ತನೊಬ್ಬ ಸುಮಾರು 160ಕ್ಕೂ ಅಧಿಕ ವಜ್ರಗಳನ್ನು ಕಲಿಯುಗ ದೈವ ಶ್ರೀವೆಂಕಟೇಶ್ವರ ಸ್ವಾಮಿ ಹುಂಡಿಯಲ್ಲಿ ಹಾಕಿ ಕೈ ಮುಗಿದು ಹೋಗಿದ್ದಾನೆ.

ಸುಮಾರು 1 ಕೋಟಿ ರೂ ಅಧಿಕ ರೂ ಬೆಲೆ ಬಾಳುವ ಈ ವಜ್ರಗಳು ತಿಮ್ಮಪ್ಪನ ಹುಂಡಿಯಲ್ಲಿ ಕಾಣಿಸಿದೆ. ನುಣುಪಾದ ಬ್ಯಾಗ್ ನಲ್ಲಿದ್ದ ಕಣ್ಣು ಕೋರೈಸುವ ವಜ್ರಗಳ ಬಗ್ಗೆ ಟಿಟಿಡಿ ಸಿಬ್ಬಂದಿ ಖಚಿತಪಡಿಸಿದ್ದಾರೆ.
 
ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ)ಜಗತ್ತಿನ ಶ್ರೀಮಂತ ದೇಗುಲಗಳಲ್ಲಿ ಒಂದಾಗಿದೆ. ವಾರ್ಷಿಕವಾಗಿ ಸುಮಾರು 700ಕೋಟಿ ರೂ.ಗೂ ಅಧಿಕ ಆದಾಯವನ್ನು ಈ ದೇಗುಲ ಹೊಂದಿದೆ.

ತಿಮ್ಮಪ್ಪನಿಗೆ ವಜ್ರಗಳನ್ನು ಅರ್ಪಿಸಿದ ಭಕ್ತನ ಬಗ್ಗೆ ವಿವರಗಳು ಇನ್ನೂ ತಿಳಿದುಬಂದಿಲ್ಲ. ವಜ್ರಗಳ ನೈಜತೆ ಅಳೆಯುವ ಪ್ರಮಾಣ ಪತ್ರ ಕೂಡಾ ಆ ಬ್ಯಾಗ್ ನಲ್ಲಿತ್ತು ಎಂಬುದು ವಿಶೇಷ. ಬಹುಶಃ ಮಂಗಳವಾರ(ನ.22) ಈ ವಿಶೇಷ ಕಾಣಿಕೆಯನ್ನು ದೇವರಿಗೆ ಅರ್ಪಿಸುವ ಸಾಧ್ಯತೆಯಿದೆ ಎಂದು ಟಿಟಿಡಿ ಹೇಳಿದೆ.