ಪುಟಗಳು

ಮೊಬೈಲ್ ನಲ್ಲಿ ಮಾತೃಭಾಷೆ ನೋಡಿ; ಹಾಯಾಗಿ ಹಾಡಿ

ಐಎಮ್ ಐ ಮೊಬೈಲ್ "ಮೈ ಎಸ್ ಎಮ್ ಎಸ್" ಎಂಬ ಹೊಸ ಅಪ್ಲಿಕೇಶನ್ ಬಿಡುಗಡೆ ಮಾಡಿದೆ. ಇದರ ಕಾರ್ಯ ನಿರ್ವಹಣೆ ಹೀಗಿದೆ...

ಈ ಅಪ್ಲಿಕೇಶನ್ ಗಳು ನೆಟ್ ವರ್ಕ್ ಆಪರೇಟರ್ಸ್ ಗಳಿಗೆ ಈ ಸಂಬಂಧ ಸೇವೆಗಳನ್ನು ನೀಡುವುದರ ಮೂಲಕ ಕಾರ್ಯ ನಿರ್ವಹಿಸುತ್ತವೆ. ಗ್ರಾಹಕರು ತಮ್ಮ ಮಾತೃಭಾಷೆಯನ್ನು ಎಕ್ಸೆಸ್ ಮಾಡಿಕೊಳ್ಳಬೇಕು. ಇದಕ್ಕೂ ಮೊದಲು ಸಂಬಂಧಿಸಿದ ಅಪ್ಲಿಕೇಶನ್ನನ್ನು ಡಿವೈಸ್ ಗೆ ಡೌನ್ ಲೋಡ್ ಮಾಡಿಕೊಂಡು ಕಾರ್ಯ ಪ್ರಾರಂಬಿಸಬೇಕು. ಇಷ್ಟಾದ ಮೇಲೆ ಗ್ರಾಹಕರು ತಮ್ಮ ಮಾತೃಭಾಷೆಯಲ್ಲಿ ಮೂಡಿದ ಪದಗಳನ್ನು ನೋಡಿ ಖುಷಿಪಡಬಹುದು.

ಸದ್ಯಕ್ಕೆ ಸಿಂಬಿಯನ್ ಮತ್ತು J2ME ಆಪರೇಟಿಂಗ್ ಸಿಸ್ಟಮ್ ಉಳ್ಳ ಮೊಬೈಲ್ ಉಪಯೋಗಿಸುವ ಗ್ರಾಹಕರು ಮಾತ್ರ ಇದರ ಉಪಯೋಗ ಪಡೆಯಲು ಸಾಧ್ಯ.

ಈ ಅಪ್ಲಿಕೇಶನ್ ಗಳಿಗಾಗಿ 56263 ನಂಬರಿಗೆ ಕರೆ ಮಾಡಿ. ಸಂಬಂಧಿಸಿದ ಸೆಟ್ಟಿಂಗ್ ಗಳು ಸ್ವಯಂಚಾಲಿತವಾಗಿ ಗ್ರಾಹಕರ ಮೊಬೈಲುಗಳಿಗೆ ಡೌನ್ ಲೋಡ್ ಆಗುತ್ತವೆ. ಸದ್ಯಕ್ಕೆ ಈ ಭಾಷಾ ಅಪ್ಲಿಕೇಶನ್ ಸ್ಥಳೀಯ 8 ಭಾಷಗಳಿಗೆ ಸೀಮಿತವಾಗಿದೆ. ಅವು ಇಂಗ್ಲಿಷ್, ಹಿಂದಿ, ತೆಲುಗು, ತಮಿಳ್, ಮಲೆಯಾಳಮ್, ಗುಜರಾತಿ, ಮರಾಠಿ ಹಾಗೂ ಬಂಗಾಳಿ ಭಾಷೆಗಳಲ್ಲಿ ಲಭ್ಯ.

ಇಷ್ಟು, ಸದ್ಯಕ್ಕೆ ದೊರೆತಿರುವ ಮಾಹಿತಿ. ಆದರೆ ಈ ಮೊಬೈಲ್ ಅಪ್ಲಿಕೇಶನ್ ನಿಂದ ನಿಜವಾಗಿಯೂ ಕ್ರಾಂತಿಯಾಗಬಲ್ಲದು. ಏಕೆಂದರೆ ಹೆಚ್ಚು ಓದಿಲ್ಲದ ಹಳ್ಳಿಯ ಜನರು ಅಗತ್ಯ ಮಾಹಿತಿಗಳನ್ನು ಅವರವರ ಭಾಷೆಗಳಲ್ಲೇ ಪಡೆಯಬಹುದಲ್ಲವೇ! ಮುಂದೆ ಎಲ್ಲಾ ಭಾಷೆಗಳಲ್ಲೂ ಬಂದರೆ ಇದು ಸಾಕಷ್ಟು ಸದ್ದಿ-ಸದ್ದು ಮಾಡುವುದರಲ್ಲಿ ಸಂದೇಹವೇ ಇಲ್ಲ...

ಕಾಜಲ್ ಅಗರವಾಲ್ ಬೆತ್ತಲೆ ಫೋಟೋ ರಿಯಲ್!


ಇತ್ತೀಚೆಗೆ ಬೆಡಗಿ ಕಾಜಲ್ ಅಗರವಾಲ್ ಕಾಮೋತ್ತೇಜಕ ಫೋಟೋಗಳನ್ನು ಎಫ್‌ಎಚ್‌‍ಎಂ ಮ್ಯಾಗಜಿನ್‌ ಪ್ರಕಟಿಸಿತ್ತು. ಸಂಚಿಕೆ ಹೊರಬರುತ್ತಿದ್ದಂತೆ ಕಾಜಲ್ ಕಂಗಾಲಾಗಿದ್ದರು. ಅವು ನನ್ನ ಫೋಟೋಗಳು ಅಲ್ಲವೆ ಅಲ್ಲ ಎಂದು ಆಕಾಶ ಭೂಮಿ ಒಂದಾಗುವಂತೆ ಹುಯಿಲೆಬ್ಬಿಸಿದ್ದರು. ಆದರೆ ಅವು ಆಕೆಯದೇ ರಿಯಲ್ ಫೋಟೋಗಳು ಎಂದು ಎಫ್‌ಎಚ್‌ಎಂ ಮ್ಯಾಗಜಿನ್ ಇದೀಗ ಸ್ಪಷ್ಟೀಕರಣ ನೀಡಿದೆ.

ಸೆಪ್ಟೆಂಬರ್ 2011ರ ಸಂಚಿಕೆಗಾಗಿ ಸ್ವತಃ ಕಾಜಲ್ ಅಗರವಾಲ್ ಅವರೇ ವಿವಿಧ ಭಂಗಿಗಳಲ್ಲಿ ತಮ್ಮ ಅಂಗಸೌಷ್ಟವನ್ನು ಪ್ರದರ್ಶಿಸಿದ್ದರು. ಆ ಫೋಟೋಗಳನ್ನೇ ತಾವು ಪ್ರಕಟಿಸಿದ್ದೇವೆ ಎಂದು ಪುರುಷರ ಮ್ಯಾಗಜಿನ್ ಸ್ಪಷ್ಟಪಡಿಸಿದೆ. ಈ ಮೂಲಕ ಕಾಜಲ್ ಅಗರವಾಲ್ ಬೆತ್ತಲೆ ಫೋಟೋ ವಿವಾದ ಮತ್ತೊಂದು ತಿರುವು ಪಡೆದಿದೆ.

ಕಾಜಲ್ ಇಮೇಜ್ ಕೆಡಿಸಲು ಪತ್ರಿಕೆ ಮಾಡಿರುವ ಗಿಮಿಕ್ ಇದು ಎಂದು ಕಾಜಲ್ ತಂಗಿ ನಟಿ ನಿಶಾ ಅಗರವಾಲ್ ಕೆಂಡಾಮಂಡಲವಾಗಿದ್ದರು. ಕನಸಿನಲ್ಲೂ ಈ ರೀತಿ ನನ್ನಕ್ಕ ಕಾಣಿಸಿಕೊಳ್ಳುವುದಿಲ್ಲ ಎಂದು ನಿಶಾ ಸ್ಪಷ್ಟವಾಗಿ ಹೇಳಿದ್ದರು. ಈಗ ಪತ್ರಿಕೆಯೇ ಕಾಜಲ್ ಫೋಟೋಗಳು ಸುಳ್ಳಲ್ಲ ಎನ್ನುತ್ತಿರುವುದು ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ. (ಏಜೆನ್ಸೀಸ್)

ಎಂಡ್ಕುಡರಿಗೆ ಹಬ್ಬ, 3 ಸಾವಿರ ಬಾರ್ ಗೆ ರೇಣು ಜೈ


ಬೆಂಗಳೂರು, ಸೆ.7:ಯಾರೂ ಏನಾದರೂ ಅಂದುಕೊಳ್ಳಲಿ, ಬಾಟ್ಲಿ ಹೊಡೆಯುವುದು, ಲೈಸನ್ಸ್ ರದ್ದು, ಟೈಮಿಂಗ್ಸ್ ಚೇಂಜ್ ಮಾಡುವುದರಲ್ಲಿ ಸಚಿವ ರೇಣುಕಾಚಾರ್ಯ ಅವರನ್ನು ಮೀರಿಸಿದವರಿಲ್ಲ.

ಈಗ ಮಾನ್ಯ ಅಬಕಾರಿ ಸಚಿವರು ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಮೂರು ಸಾವಿರದಷ್ಟು ಹೊಸ ಬಾರ್‌ ಹಾಗೂ ರೆಸ್ಟೋರೆಂಟ್ ಗಳಿಗೆ ಅನುಮತಿ ನೀಡುವ ಬಗ್ಗೆ
ಮುಖ್ಯಮಂತ್ರಿ ಸದಾನಂದ ಗೌಡರೊಂದಿಗೆ ಸಮಾಲೋಚನೆ ಮಾಡುವುದಾಗಿ ಸಚಿವ ರೇಣುಕಾಚಾರ್ಯ ಹೇಳಿದ್ದಾರೆ.

ರಾಜ್ಯದಲ್ಲಿ ಕಳೆದ 20 ವರ್ಷಗಳಿಂದ ಹೊಸದಾಗಿ ಯಾವುದೇ ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ ಲೈಸನ್ಸ್ ನೀಡಲ್ಲ ಎಂಬ ವಿಷಯವನ್ನು ಒತ್ತಿ ಒತ್ತಿ ಹೇಳಿದ ರೇಣುಕಾ, ಹೊಸ ಬಾರುಗಳ ಉದ್ಘಾಟನೆಗೆ ತಯಾರಿ ನಡೆಸಿದ್ದರಂತೆ.

ಹೊಸ ಬಾರ್ ಏಕೆ?: ಸಾರಾಯಿ ನಿಷೇಧ ಮಾಡಿದ್ದರಿಂದ ಬಾರ್‌ಗಳ ಬೇಡಿಕೆ, ಪ್ರಮಾಣ, ಹೆಚ್ಚಾಗಿದ್ದು, ಮೂರು ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ.

ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ನಗರ ಪ್ರದೇಶಗಳಿಂದ ಮದ್ಯವನ್ನು ಖರೀದಿಸಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿವೆ.

ಗ್ರಾಹಕರಿಗೆ ಹೊರೆಯಾಗುವುದನ್ನು ತಪ್ಪಿಸಲು ಹೊಸ ಲೈಸನ್ಸ್ ನೀಡುವ ಬಗ್ಗೆ ಸರ್ಕಾರ ಪರಿಶೀಲನೆ ನಡೆಸುತ್ತಿದೆ ಎಂದು ಹೇಳಿದರು.

ಮದ್ಯಸಾರ ವಿತರಣೆ: ಸುಮಾರು ಆರು ಕಂಪನಿಗಳಿಗೆ 13 ಲಕ್ಷ ಮದ್ಯಸಾರವನ್ನು ವಾರ್ಷಿಕವಾಗಿ ವಿತರಣೆ ಮಾಡಲು ಸಮ್ಮತಿ ನೀಡಲಾಗಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿರುವ ಸಕ್ಕರೆ ಕಾರ್ಖಾನೆಗಳಿಂದ 27 ಕೋಟಿ ಲೀಟರ್ ಮದ್ಯಸಾರವನ್ನು ಉತ್ಪಾದನೆ ಮಾಡುತ್ತಿದ್ದು, ಇದರಲ್ಲಿ 19 ಕೋಟಿಗೂ ಹೆಚ್ಚು ಲೀಟರ್ ಮದ್ಯಸಾರವನ್ನು ಮದ್ಯ ಉತ್ಪಾದನೆಗೆ
ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಪರ್ಯಾಯ ಇಂಧನ: ಕರ್ನಾಟಕದ ವಾಹನಗಳಿಗೆ ಸ್ಪಿರಿಟ್‌ನ್ನು ಪರ್ಯಾಯ ಇಂಧನವಾಗಿ ಬಳಸುವುದರ ಜೊತೆಗೆ ನೆರೆಯ ರಾಜ್ಯಗಳಾದ ಕೇರಳ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ಗೋವಾ ರಾಜ್ಯ ಗಳಿಗೆ ಸ್ಪಿರಿಟ್‌ನ್ನು ಮಾರಾಟ ಮಾಡಲಾಗುತ್ತಿದೆ ಎಂದು ಸಚಿವ ರೇಣುಕಾಚಾರ್ಯ ಹೇಳಿದರು.