ಪುಟಗಳು

ಮೊಬೈಲ್ ನಲ್ಲಿ ಮಾತೃಭಾಷೆ ನೋಡಿ; ಹಾಯಾಗಿ ಹಾಡಿ

ಐಎಮ್ ಐ ಮೊಬೈಲ್ "ಮೈ ಎಸ್ ಎಮ್ ಎಸ್" ಎಂಬ ಹೊಸ ಅಪ್ಲಿಕೇಶನ್ ಬಿಡುಗಡೆ ಮಾಡಿದೆ. ಇದರ ಕಾರ್ಯ ನಿರ್ವಹಣೆ ಹೀಗಿದೆ...

ಈ ಅಪ್ಲಿಕೇಶನ್ ಗಳು ನೆಟ್ ವರ್ಕ್ ಆಪರೇಟರ್ಸ್ ಗಳಿಗೆ ಈ ಸಂಬಂಧ ಸೇವೆಗಳನ್ನು ನೀಡುವುದರ ಮೂಲಕ ಕಾರ್ಯ ನಿರ್ವಹಿಸುತ್ತವೆ. ಗ್ರಾಹಕರು ತಮ್ಮ ಮಾತೃಭಾಷೆಯನ್ನು ಎಕ್ಸೆಸ್ ಮಾಡಿಕೊಳ್ಳಬೇಕು. ಇದಕ್ಕೂ ಮೊದಲು ಸಂಬಂಧಿಸಿದ ಅಪ್ಲಿಕೇಶನ್ನನ್ನು ಡಿವೈಸ್ ಗೆ ಡೌನ್ ಲೋಡ್ ಮಾಡಿಕೊಂಡು ಕಾರ್ಯ ಪ್ರಾರಂಬಿಸಬೇಕು. ಇಷ್ಟಾದ ಮೇಲೆ ಗ್ರಾಹಕರು ತಮ್ಮ ಮಾತೃಭಾಷೆಯಲ್ಲಿ ಮೂಡಿದ ಪದಗಳನ್ನು ನೋಡಿ ಖುಷಿಪಡಬಹುದು.

ಸದ್ಯಕ್ಕೆ ಸಿಂಬಿಯನ್ ಮತ್ತು J2ME ಆಪರೇಟಿಂಗ್ ಸಿಸ್ಟಮ್ ಉಳ್ಳ ಮೊಬೈಲ್ ಉಪಯೋಗಿಸುವ ಗ್ರಾಹಕರು ಮಾತ್ರ ಇದರ ಉಪಯೋಗ ಪಡೆಯಲು ಸಾಧ್ಯ.

ಈ ಅಪ್ಲಿಕೇಶನ್ ಗಳಿಗಾಗಿ 56263 ನಂಬರಿಗೆ ಕರೆ ಮಾಡಿ. ಸಂಬಂಧಿಸಿದ ಸೆಟ್ಟಿಂಗ್ ಗಳು ಸ್ವಯಂಚಾಲಿತವಾಗಿ ಗ್ರಾಹಕರ ಮೊಬೈಲುಗಳಿಗೆ ಡೌನ್ ಲೋಡ್ ಆಗುತ್ತವೆ. ಸದ್ಯಕ್ಕೆ ಈ ಭಾಷಾ ಅಪ್ಲಿಕೇಶನ್ ಸ್ಥಳೀಯ 8 ಭಾಷಗಳಿಗೆ ಸೀಮಿತವಾಗಿದೆ. ಅವು ಇಂಗ್ಲಿಷ್, ಹಿಂದಿ, ತೆಲುಗು, ತಮಿಳ್, ಮಲೆಯಾಳಮ್, ಗುಜರಾತಿ, ಮರಾಠಿ ಹಾಗೂ ಬಂಗಾಳಿ ಭಾಷೆಗಳಲ್ಲಿ ಲಭ್ಯ.

ಇಷ್ಟು, ಸದ್ಯಕ್ಕೆ ದೊರೆತಿರುವ ಮಾಹಿತಿ. ಆದರೆ ಈ ಮೊಬೈಲ್ ಅಪ್ಲಿಕೇಶನ್ ನಿಂದ ನಿಜವಾಗಿಯೂ ಕ್ರಾಂತಿಯಾಗಬಲ್ಲದು. ಏಕೆಂದರೆ ಹೆಚ್ಚು ಓದಿಲ್ಲದ ಹಳ್ಳಿಯ ಜನರು ಅಗತ್ಯ ಮಾಹಿತಿಗಳನ್ನು ಅವರವರ ಭಾಷೆಗಳಲ್ಲೇ ಪಡೆಯಬಹುದಲ್ಲವೇ! ಮುಂದೆ ಎಲ್ಲಾ ಭಾಷೆಗಳಲ್ಲೂ ಬಂದರೆ ಇದು ಸಾಕಷ್ಟು ಸದ್ದಿ-ಸದ್ದು ಮಾಡುವುದರಲ್ಲಿ ಸಂದೇಹವೇ ಇಲ್ಲ...