ಪುಟಗಳು

ದೇಹದ ದುರ್ವಾಸನೆಗೆ ನೈಸರ್ಗಿಕ ಪರಿಹಾರ

Home Remedies For Body Odor
ಚುಮುಚುಮು ಚಳಿ ಮುಗಿದು ಸೆಕೆ ಪ್ರಾರಂಭವಾಗಿದೆ. ಈ ಸಮಯದಲ್ಲಿ ಬೆವರಿನಿಂದಾಗಿ ದೇಹ ದುರ್ವಾಸನೆ ಬೀರುವುದು. ಈ ರೀತಿಯ ದೇಹದ ದುರ್ವಾಸನೆಯನ್ನು ಹೋಗಲಾಡಿಸಲು ಅನೇಕ ಸುಗಂಧ ದ್ರವ್ಯಗಳು ಲಭ್ಯವಿದೆ. ಆದರೆ ಅವುಗಳಲ್ಲಿ ಕೆಮಿಕಲ್ ಬಳಕೆ ಮಾಡಿರುವುದರಿಂದ ಕೆಲವರಿಗೆ ಪರ್ ಫ್ಯೂಮ್ ಹಾಕಿದರೆ ಅಲರ್ಜಿ ಉಂಟಾಗುತ್ತದೆ. ದೇಹದ ದುರ್ಗಂಧವನ್ನು ನೈಸರ್ಗಿಕವಾಗಿ ಸಿಗುವ ವಸ್ತುಗಳನ್ನು ಬಳಸಿ ಹೋಗಲಾಡಿಸಬಹುದು. ಮನೆಯಲ್ಲಿಯೆ ತಯಾರಿಸಬಹುದಾದ ಸುಗಂಧ ದ್ರವ್ಯಗಳ ಪಟ್ಟಿ ಇಲ್ಲಿದೆ ನೋಡಿ.

1. ಗ್ಲಿಸರಿನ್ ಮತ್ತು ಮೂಲಂಗಿ: ಮೂಲಂಗಿಯನ್ನು ಜ್ಯೂಸ್ ಮಾಡಿ ಅದಕ್ಕೆ 1/2 ಚಮಚ ಗ್ಲಿಸರಿನ್ ಸೇರಿಸಿ. ಈ ಮಿಶ್ರಣವನ್ನು ಕಂಕುಳ, ಕುತ್ತಿಗೆ ಮತ್ತು ಪಾದಗಳಿಗೆ ಹಚ್ಚಿದರೆ ಬೆವರಿನ ದುರ್ಗಂಧ ಬರುವುದಿಲ್ಲ.

2. ಆಲ್ಕೋಹಾಲ್ ಮತ್ತು ವಿನಿಗರ್:
ಆಲ್ಕೋಹಾಲ್ ಮತ್ತು ವಿನಿಗರ್ ಅನ್ನು ಸಮಪ್ರಮಾಣದಲ್ಲಿ ಮಿಶ್ರ ಮಾಡಿ ಮೈಗೆ ಹಚ್ಚಬಹುದು.

3. ಟೀ ಎಣ್ಣೆ ಮತ್ತು ರೀಸ್ ಮೆರಿ ಎಣ್ಣೆ:
ಟೀ ಮತ್ತು ರೋಸ್ ಮೆರಿ ಎಣ್ಣೆಯನ್ನು ಮಿಶ್ರ ಮಾಡಿ ಹಚ್ಚುವುದರಿಂದ ದೇಹದವನ್ನು ಸುವಾಸನೆ ಭರಿತವಾಗಿ ಇಡಬಹುದು.

4. ನಿಂಬೆ ಗಿಡದ ಎಲೆ:
ನಿಂಬೆ ಗಿಡದ ಎಲೆಯನ್ನು ಸ್ನಾನ ಮಾಡುವ ನೀರಿಗೆ ಹಾಕಿ ಕುದಿಸಿದರೆ ದೇಹದಲ್ಲಿ ಬೆವರಿನ ವಾಸನೆ ತಡೆಯುವುದಷ್ಟೇ ಅಲ್ಲ ತ್ವಚೆಯನ್ನು ಬ್ಯಾಕ್ಟೀರಿಯಾಗಳಿಂದ ರಕ್ಷಿಸುತ್ತದೆ.

5. ಅಡುಗೆ ಸೋಡಾ ಮತ್ತು ನಿಂಬೆ ರಸ:
1 ಚಮಚ ಅಡುಗೆ ಸೋಡಾಕ್ಕೆ 1 ಚಮಚ ನಿಂಬೆ ರಸ ಹಾಕಿ ಮಿಶ್ರ ಮಾಡಿ ಹಚ್ಚಿದರೆ ಬೆವರಿನ ಕೆಟ್ಟ ವಾಸನೆ ಇರುವುದಿಲ್ಲ. ಬೇಸಿಗೆಯಲ್ಲಿ ಈ ರೀತಿ ಮಾಡುವುದು ಅತ್ಯುತ್ತಮವಾದ ಪರಿಣಾಮವನ್ನು ಕಾಣಬಹುದು.
ಸಾಕಷ್ಟು ನೀರು ಕುಡಿಯುವ ಅಭ್ಯಾಸ ಒಳ್ಳೆಯದು.

ಮಸೂದೆಯಲ್ಲಿ ತಿದ್ದುಪಡಿ:ಗೋಹತ್ಯೆ ಬೇಡ,ಎಮ್ಮೆ ಹತ್ಯೆ ಓಕೆ

Ads by Google
Download Google Chrome 
Searching is fast and easy with Google's web browser.www.Google.com/Chrome
ತುಮಕೂರು, ಫೆ 21: ಗೋಹತ್ಯೆ ನಿಷೇಧ ಶಾಸನಕ್ಕೆ ರಾಷ್ಟ್ರ ಮಟ್ಟದಲ್ಲಿ ಕೆಲವೊಂದು ರಾಜಕೀಯ ಪಕ್ಷಗಳ ಪ್ರಬಲ ವಿರೋಧವಿದ್ದರೂ, ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಕಾಯಿದೆಗೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಪರೋಕ್ಷವಾಗಿ ಹಸಿರು ನಿಶಾನೆ ತೋರಿದ್ದಾರೆ. ಎಮ್ಮೆಯನ್ನು ಹೊರತು ಪಡಿಸಿ ವಿಧೇಯಕ ರೂಪಿಸಲು ರಾಷ್ಟ್ರಪತಿ ಸರಕಾರಕ್ಕೆ ಸಲಹೆ ನೀಡಿದ್ದಾರೆ.

ರಾಷ್ಟ್ರಪತಿಗಳ ಸಲಹೆಯ ಮೇರೆಗೆ ಮುಂದಿನ ಬಜೆಟ್ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ತಿದ್ದುಪಡಿ ವಿಧೇಯಕವನ್ನು ಮಂಡಿಸಲಾಗುವುದು ಎಂದು ಸಿಎಂ ಸದಾನಂದ ಗೌಡ ತುಮಕೂರಿನಲ್ಲಿ ಹೇಳಿಕೆ ನೀಡಿದ್ದಾರೆ. ಗೋಹತ್ಯೆ ನಿಷೇಧ ವಿಧೇಯಕ ರಾಷ್ಟ್ರಪತಿಗಳಿಂದ ರಾಜ್ಯಕ್ಕೆ ವಾಪಾಸ್ ಬಂದಿರುವುದು ನಿಜ. ಅವರ ಸಲಹೆ ಮೇರೆಗೆ ವಿಧೇಯಕದಲ್ಲಿ ತಿದ್ದುಪಡಿ ತಂದು ಈ ಬಜೆಟ್ ಅಧಿವೇಶನದಲ್ಲೇ ಮಂಡಿಸಲಾಗುವುದು ಎಂದು ಸಿಎಂ ಸ್ಪಷ್ಟ ಪಡಿಸಿದ್ದಾರೆ.

ಕರ್ನಾಟಕ ವಿಧಾನಮಂಡಲದಲ್ಲಿ ಅಂಗೀಕಾರ ಗೊಂಡಿರುವ ಗೋಹತ್ಯೆ ನಿಷೇಧ ವಿಧೇಯಕದಲ್ಲಿ ಎಮ್ಮೆ ಸೇರ್ಪಡೆಯಾಗಿದೆ. ಆದರೆ ಈ ವಿಧೇಯಕದಲ್ಲಿ ಉಲ್ಲೇಖವಾಗಿರುವ ಎಮ್ಮೆಯನ್ನು ಹೊರತುಪಡಿಸಿ ಈ ವಿಧೇಯಕ ತಿದ್ದುಪಡಿಯಾದರೆ ಒಳ್ಳೆಯದು ಎಂದು ಸಲಹೆ ನೀಡಿದ್ದೇವೆ ಎಂದು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಹೇಳಿದ್ದಾರೆ.

ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಈ ವಿಧೇಯಕವನ್ನು ಶಾಸನ ಸಭೆಯಲ್ಲಿ ಮಂಡಿಸಿದಾಗ ವಿಧೇಯಕದ ಪರವಾಗಿ ಕಾಂಗ್ರೆಸ್ ನ ಕೆಲ ಸದಸ್ಯರೂ ಸ್ವಾಗತಿಸಿದ್ದರು. ಹಿಂದೂಗಳಿಗೆ ಗೋಮಾತೆಯಾಗಿರುವ ಹಸುಗಳನ್ನು ಕೊಲ್ಲುವುದು ಪರಮಪಾಪ. ಹಸುಗಳನ್ನು ಕಾಪಾಡಲು ನಮ್ಮ ಸರಕಾರ ಬದ್ದವಾಗಿದೆ ಎಂದು ಮುಖ್ಯಮಂತ್ರಿ ಈ ಸಂದರ್ಭದಲ್ಲಿ ಹೇಳಿಕೆ ನೀಡಿದ್ದಾರೆ