ಪುಟಗಳು

ದೇಹದ ದುರ್ವಾಸನೆಗೆ ನೈಸರ್ಗಿಕ ಪರಿಹಾರ

Home Remedies For Body Odor
ಚುಮುಚುಮು ಚಳಿ ಮುಗಿದು ಸೆಕೆ ಪ್ರಾರಂಭವಾಗಿದೆ. ಈ ಸಮಯದಲ್ಲಿ ಬೆವರಿನಿಂದಾಗಿ ದೇಹ ದುರ್ವಾಸನೆ ಬೀರುವುದು. ಈ ರೀತಿಯ ದೇಹದ ದುರ್ವಾಸನೆಯನ್ನು ಹೋಗಲಾಡಿಸಲು ಅನೇಕ ಸುಗಂಧ ದ್ರವ್ಯಗಳು ಲಭ್ಯವಿದೆ. ಆದರೆ ಅವುಗಳಲ್ಲಿ ಕೆಮಿಕಲ್ ಬಳಕೆ ಮಾಡಿರುವುದರಿಂದ ಕೆಲವರಿಗೆ ಪರ್ ಫ್ಯೂಮ್ ಹಾಕಿದರೆ ಅಲರ್ಜಿ ಉಂಟಾಗುತ್ತದೆ. ದೇಹದ ದುರ್ಗಂಧವನ್ನು ನೈಸರ್ಗಿಕವಾಗಿ ಸಿಗುವ ವಸ್ತುಗಳನ್ನು ಬಳಸಿ ಹೋಗಲಾಡಿಸಬಹುದು. ಮನೆಯಲ್ಲಿಯೆ ತಯಾರಿಸಬಹುದಾದ ಸುಗಂಧ ದ್ರವ್ಯಗಳ ಪಟ್ಟಿ ಇಲ್ಲಿದೆ ನೋಡಿ.

1. ಗ್ಲಿಸರಿನ್ ಮತ್ತು ಮೂಲಂಗಿ: ಮೂಲಂಗಿಯನ್ನು ಜ್ಯೂಸ್ ಮಾಡಿ ಅದಕ್ಕೆ 1/2 ಚಮಚ ಗ್ಲಿಸರಿನ್ ಸೇರಿಸಿ. ಈ ಮಿಶ್ರಣವನ್ನು ಕಂಕುಳ, ಕುತ್ತಿಗೆ ಮತ್ತು ಪಾದಗಳಿಗೆ ಹಚ್ಚಿದರೆ ಬೆವರಿನ ದುರ್ಗಂಧ ಬರುವುದಿಲ್ಲ.

2. ಆಲ್ಕೋಹಾಲ್ ಮತ್ತು ವಿನಿಗರ್:
ಆಲ್ಕೋಹಾಲ್ ಮತ್ತು ವಿನಿಗರ್ ಅನ್ನು ಸಮಪ್ರಮಾಣದಲ್ಲಿ ಮಿಶ್ರ ಮಾಡಿ ಮೈಗೆ ಹಚ್ಚಬಹುದು.

3. ಟೀ ಎಣ್ಣೆ ಮತ್ತು ರೀಸ್ ಮೆರಿ ಎಣ್ಣೆ:
ಟೀ ಮತ್ತು ರೋಸ್ ಮೆರಿ ಎಣ್ಣೆಯನ್ನು ಮಿಶ್ರ ಮಾಡಿ ಹಚ್ಚುವುದರಿಂದ ದೇಹದವನ್ನು ಸುವಾಸನೆ ಭರಿತವಾಗಿ ಇಡಬಹುದು.

4. ನಿಂಬೆ ಗಿಡದ ಎಲೆ:
ನಿಂಬೆ ಗಿಡದ ಎಲೆಯನ್ನು ಸ್ನಾನ ಮಾಡುವ ನೀರಿಗೆ ಹಾಕಿ ಕುದಿಸಿದರೆ ದೇಹದಲ್ಲಿ ಬೆವರಿನ ವಾಸನೆ ತಡೆಯುವುದಷ್ಟೇ ಅಲ್ಲ ತ್ವಚೆಯನ್ನು ಬ್ಯಾಕ್ಟೀರಿಯಾಗಳಿಂದ ರಕ್ಷಿಸುತ್ತದೆ.

5. ಅಡುಗೆ ಸೋಡಾ ಮತ್ತು ನಿಂಬೆ ರಸ:
1 ಚಮಚ ಅಡುಗೆ ಸೋಡಾಕ್ಕೆ 1 ಚಮಚ ನಿಂಬೆ ರಸ ಹಾಕಿ ಮಿಶ್ರ ಮಾಡಿ ಹಚ್ಚಿದರೆ ಬೆವರಿನ ಕೆಟ್ಟ ವಾಸನೆ ಇರುವುದಿಲ್ಲ. ಬೇಸಿಗೆಯಲ್ಲಿ ಈ ರೀತಿ ಮಾಡುವುದು ಅತ್ಯುತ್ತಮವಾದ ಪರಿಣಾಮವನ್ನು ಕಾಣಬಹುದು.
ಸಾಕಷ್ಟು ನೀರು ಕುಡಿಯುವ ಅಭ್ಯಾಸ ಒಳ್ಳೆಯದು.