ಪುಟಗಳು

ಎದ್ದ ಕೂಡಲೆ ನ್ಯೂಸ್ ಪೇಪರ್ ಓದಬಾರದು!

Healthy Tips From Robin Sharma
ಎಲ್ಲಾ ದೇಶಗಿಂತ ದೊಡ್ಡ ದೇಶ ಉಪದೇಶ. ಆದರೆ ಅನುಭವಿ ವ್ಯಕ್ತಿಗಳ ಮಾತು ಉಪದೇಶ ಎಂದು ಕಡೆಗಣಿಸಿದರೆ ನಷ್ಟ ನಮಗೆ. ಸರಳವಾದ ವಿಧಾನಗಳು ನಮ್ಮ ಬದುಕನ್ನು ಉತ್ತಮ ಪಡಿಸುತ್ತದೆ ಎಂದಾದರೆ ಅದನ್ನು ಪಾಲಿಸುವುದರಲ್ಲಿ ತಪ್ಪೇನಿದೆ?

ದಿನ ಬೆಳಗಾದರೆ ಟಾರ್ಗೆಟ್, ಡೆಡ್ ಲೈನ್ ಅಂತ ಯೋಚಿಸುತ್ತಾ ಟೆನ್ಷನ್ ಹೆಚ್ಚಿ ಮಾಡುವುದರಿಂದ ಆರೋಗ್ಯ ಹಾಳಾಗುವುದು. ಜೀವನವನ್ನು ಸಂತೋಷದಿಂದ ಕಳೆಯಲು ಮತ್ತು ಸವಾಲುಗಳನ್ನು ಧೈರ್ಯವಾಗಿ ಎದುರಿಸಲು ಅಂತಾರಾಷ್ಟ್ರೀಯ ಖ್ಯಾತಿಯ ಲೀಡರ್ಶಿಪ್ ಗುರು ರಾಬಿನ್ ಶರ್ಮ ಅನುಸರಿಸುವ ಸರಳ ವಿಧಾನ ನೋಡಿ ಇಲ್ಲಿದೆ:

1. ಮುಂಜಾನೆ ಬೇಗನೆ ಏಳುವುದು: ಮುಂಜಾನೆ ಬೇಗನೆ ಏಳುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹೆಚ್ಚಾಗುವುದು. ಲೇಟಾಗಿ ಎದ್ದು ಅವಸರವಾಗಿ ಕೆಲಸ ಕಾರ್ಯವನ್ನು ಮಾಡುವುದರಿಂದ ಮಾನಸಿಕ ಒತ್ತಡ ಹೆಚ್ಚುವುದು.

2. ಒಂದು ಲೋಟ ನೀರು ಕುಡಿಯುವುದು: ಬೆಳಗ್ಗೆ ಎದ್ದ ಕೂಡಲೇ ಬಾಯಿ ಕೂಡ ತೊಳೆಯದೆ ಒಂದು ಲೋಟ ನೀರು ಕುಡಿದರೆ ದೇಹ ಶುದ್ಧಿಯಾಗುತ್ತದೆ. ಇದರಿಂದ ದೇಹದಲ್ಲಿ ಚೈತನ್ಯ ಹೆಚ್ಚಾಗುವುದು.

3. ನ್ಯೂಸ್ ಪೇಪರ್ ಓದಬಾರದು: ಹೌದು ಇದನ್ನು ಕೇಳಿದರೆ ಆಶ್ಚರ್ಯವಾಗುವುದು ದಿಟ. ಆದರೆ ಬೆಳಗ್ಗೆ ಎದ್ದ ಕೂಡಲೆ ನ್ಯೂಸ್ ಪೇಪರ್ ನೋಡಿದರೆ ಅದರಲ್ಲಿರುವ ವಿಷಯಗಳೇ ಮನಸ್ಸನ್ನು ಕೊರೆಯುವುದು.

ಇದರ ಬಗ್ಗೆ ಒಂದು ಸಮೀಕ್ಷೆಯೊಂದು ನಡೆಸಲಾಗಿದೆ. ಅದರಲ್ಲಿ ದಿನಾ ಬೆಳಗ್ಗೆ ನ್ಯೂಸ್ ಪೇಪರ್ ಓದುವವರಿಗೆ ಮತ್ತು ಓದದವರಿಗೆ ಒಂದೇ ರೀತಿಯ ಪೋಟೊಗಳನ್ನು ತೋರಿಸಲಾಗಿತ್ತು. ಅದರಲ್ಲಿ ನ್ಯೂಸ್ ಪೇಪರ್ ನೋಡಿದವರಿಗಿಂತ ನೋಡದವರು ಆ ಫೋಟೊಗಳನ್ನು ನೋಡಿ ಹೆಚ್ಚು ಆನಂದಿಸುತ್ತಿದ್ದರು.

ಇವರ ಪ್ರಕಾರ ಎದ್ದ ಕೂಡಲೆ ನ್ಯೂಸ್ ಪೇಪರ್ ನಲ್ಲಿ ತಲೆದೂರಿಸುವುದಕ್ಕಿಂತ ಸುತ್ತಮುತ್ತಲಿನ ಸಣ್ಣ-ಪುಟ್ಟ ವಿಷಯಗಳನ್ನು ಮೊದಲು ಆನಂದಿಸಿ. ತಿಂಡಿಯ ನಂತರ ಪೇಪರ್ ನೋಡುವುದು ಒಳ್ಳೆಯದು.

4. 200% ಕೆಲಸ: ಮಾಡುವ ಕೆಲಸ ಯಾವುದೇ ಆಗಿರಲಿ ಅದನ್ನು 200% ಶೃದ್ಧೆಯಿಂದ ಮಾಡಬೇಕು. ಆಗ ಯಶಸ್ವು ತನ್ನಿಂದ ತಾನೆ ಬರುವುದು.

                                                                                                                                              One India Kannada

ಸಂಚಾರಿ ನಿಯಮ ಉಲ್ಲಂಘಿಸಿದರೆ ಫೈನೆಷ್ಟು? ಜೈಲೆಷ್ಟು?

What Is The New Fine For Traffic Violations 
ಮೋಟರ್ ವೆಹಿಕಲ್ ಕಾಯಿದೆ ಕಠಿಣವಾಗಿದೆ. ಸಂಚಾರಿ ನಿಯಮ ಉಲ್ಲಂಘನೆಗೆ ಐದು ಪಟ್ಟು ಹೆಚ್ಚು ದಂಡ ಮತ್ತು ಜೈಲು ಶಿಕ್ಷೆ ವಿಧಿಸುವ ನೂತನ ಪ್ರಸ್ತಾಪಕ್ಕೆ ಕೇಂದ್ರ ಸಂಪುಟ ಸಮ್ಮತಿಸಿದೆ. ಈ ಕುರಿತ ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿರಿ.

ಸಂಚಾರಿ ನಿಯಮದ ತಪ್ಪುಗಳಿಗೆ ಎಷ್ಟು ದಂಡ ಮತ್ತು ಎಷ್ಟು ವರ್ಷ ಜೈಲು ಶಿಕ್ಷೆ?

* ಕುಡಿದು ವಾಹನ ಚಾಲನೆ ಮಾಡಿದರೆ 2,000 ರು.ನಿಂದ 10 ಸಾವಿರ ರು.ವರೆಗೆ ದಂಡ ಅಥವಾ ಆರು ತಿಂಗಳಿನ ವರೆಗೆ ಜೈಲು ಶಿಕ್ಷೆ(ಓದಿ: ಕುಡಿದು ಡ್ರೈವಿಂಗ್ ಮಾಡಿದ್ರೆ 4 ವರ್ಷದವರೆಗೆ ಜೈಲು! )

* ಸಿಗ್ನಲ್ ಜಂಪ್ ಮಾಡಿ ಪ್ರಪ್ರಥಮ ಬಾರಿ ಸಿಕ್ಕಿಬಿದ್ದರೆ 100 ರು.ನಿಂದ 500 ರು.ವರೆಗೆ ದಂಡ. ಮತ್ತೊಮ್ಮೆ ಇದೇ ತಪ್ಪು ಮಾಡಿ ಸಿಕ್ಕಿಬಿದ್ದರೆ 300 ರು.ನಿಂದ 1,500 ರು.ವರೆಗೆ ದಂಡ ವಿಧಿಸಲು ಅವಕಾಶವಿದೆ.

* ಮಾದಕ ದ್ರವ್ಯ ಸೇವಿಸಿ ವಾಹನ ಚಾಲನೆ ಮಾಡಿ ಸಿಕ್ಕಿಬಿದ್ದರೆ ಮೊದಲ ಪ್ರಕರಣಕ್ಕೆ ಆರು ತಿಂಗಳ ಜೈಲು ಶಿಕ್ಷೆ ಅಥವಾ ಐದು ಸಾವಿರ ರುಪಾಯಿ ದಂಡ. ಮತ್ತೊಮ್ಮೆ ಇದೇ ತಪ್ಪು ಮಾಡಿ ಸಿಕ್ಕಿಬಿದ್ದರೆ 10 ಸಾವಿರ ರು. ದಂಡ ಅಥವಾ ಆರು ತಿಂಗಳ ಸಜೆ ಮತ್ತು ಡ್ರೈವಿಂಗ್ ಲೈಸನ್ಸ್ ರದ್ದು ಮಾಡಲಾಗುತ್ತದೆ.

* ವೇಗಮಿತಿ ಮೀರಿ ವಾಹನ ಚಾಲನೆ ಮಾಡಿದರೆ ಮೊದಲಿಗೆ 400 ರು.ನಿಂದ 1 ಸಾವಿರ ರುಪಾಯಿವರೆಗೆ ದಂಡ. ಮತ್ತೊಮ್ಮೆ ಇದೇ ತಪ್ಪು ಮಾಡಿ ಸಿಕ್ಕಿಬಿದ್ದರೆ 2 ಸಾವಿರ ರು.ನಿಂದ 5 ಸಾವಿರ ರು.ವರೆಗೆ ದಂಡ.

* ಅಪಾಯಕಾರಿಯಾಗಿ ವಾಹನ ಚಾಲನೆ ಮಾಡಿದರೆ 1 ಸಾವಿರ ರುಪಾಯಿ ದಂಡ ಅಥವಾ ಆರು ತಿಂಗಳ ಸಜೆ. ಮತ್ತೊಮ್ಮೆ ಇದೇ ತಪ್ಪು ಮಾಡಿದರೆ 2 ಸಾವಿರ ರುಪಾಯಿಯಿಂದ 5 ಸಾವಿರ ರುಪಾಯಿವರೆಗೆ ದಂಡ ಅಥವಾ 2 ವರ್ಷ ಜೈಲು ಶಿಕ್ಷೆ.

* ಸೀಟ್ ಬೆಲ್ಟ್ ಧರಿಸದೇ ವಾಹನ ಚಾಲನೆ ಮಾಡಿದರೆ 500 ರುಪಾಯಿಯಿಂದ 1 ಸಾವಿರ ರುಪಾಯಿವರೆಗೆ ದಂಡ ವಿಧಿಸಲು ಅವಕಾಶವಿದೆ.

* ರಿಜಿಸ್ಟ್ರೇಷನ್ ಆಗದ ವಾಹನ ಚಲಾಯಿಸಿದರೆ 20 ಸಾವಿರ ರು. ದಂಡ ಮತ್ತು ಒಂದು ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.

* ಹೆಲ್ಮೆಟ್ ಧರಿಸದೇ ದ್ವಿಚಕ್ರವಾಹನ ಸವಾರಿ ಮಾಡಿದರೆ 500 ರುಪಾಯಿ ದಂಡ. ಇದೇ ತಪ್ಪನ್ನು ಮತ್ತೊಮ್ಮೆ ಮಾಡಿ ಸಿಕ್ಕಿಬಿದ್ದರೆ 1 ಸಾವಿರ ರು.ನಿಂದ 1,500 ರು.ವರೆಗೆ ದಂಡ ವಿಧಿಸಲಾಗುತ್ತದೆ.

ಸಂಚಾರಿ ನಿಯಮಗಳನ್ನು ಪಾಲಿಸಿ ವಾಹನ ಚಲಾಯಿಸಿ

ಮಾ.15 ರಿಂದ ಮಾ.30 ರ ತನಕ II ಪಿಯೂ ಪರೀಕ್ಷೆ

 2nd PUC 2012 Exam Time Table
 
ಬೆಂಗಳೂರು, ಮಾ.4: ದ್ವೀತಿಯ ಪಿಯುಸಿ ಪರೀಕ್ಷೆ ಮಾ.15ರಿಂದ 30ರ ವರೆಗೆ ನಡೆಯಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
  
ದ್ವಿತೀಯ ಪಿಯುಸಿ ಪರೀಕ್ಷೆ ಈಗಾಗಲೇ ಪವಿ ಪೂರ್ವ ಪರೀಕ್ಷಾ ಮಂಡಳಿ(KBPUE) ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಜ್ಯದ ಒಟ್ಟು 923 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಪ್ರಸಕ್ತ ಸಾಲಿನಲ್ಲಿ ಒಟ್ಟು 5,96,739 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಪರೀಕ್ಷಾ ಅಕ್ರಮ ತಡೆಗೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸೇರಿದಂತೆ ಅಧಿಕಾರಿಗಳ ಜಾಗೃತದಳ ರಚಿಸಲಾಗಿದೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಮಾಹಿತಿ ನೀಡಿದರು.

ವೇಳಾ ಪಟ್ಟಿ ಹೀಗಿದೆ:
ದಿನಾಂಕವಿಷಯ
ಮಾ.15ಇತಿಹಾಸ
ಮಾ.16ಜೀವಶಾಸ್ತ್ರ / ಬಿಸಿನೆಸ್ ಸ್ಟಡೀಸ್
ಮಾ.17ರಾಜ್ಯಶಾಸ್ತ್ರ/ ಗಣಿತ(basic)
ಮಾ.19ಅರ್ಥಶಾಸ್ತ್ರ / ಭೂಗರ್ಭಶಾಸ್ತ್ರ
ಮಾ.20ಗಣಿತ / ಭೂಗೋಳ ಶಾಸ್ತ್ರ
ಮಾ.21ಸಮಾಜಶಾಸ್ತ್ರ/ Statistics
ಮಾ.22ಭೌತಶಾಸ್ತ್ರ / ಶಾಸ್ತ್ರೀಯ ಸಂಗೀತ/ಹಿಂದೂಸ್ತಾನಿ ಸಂಗೀತ/ಮನೋವಿಜ್ಞಾನ
ಮಾ.24ಎಲೆಕ್ಟ್ರಾನಿಕ್ಸ್ / ಕಂಪ್ಯೂಟಕ್ ವಿಜ್ಞಾನ
ಮಾ.26ಇಂಗ್ಲೀಷ್
ಮಾ.28ರಸಾಯನಶಾಸ್ತ್ರ / ಐಚ್ಛಿಕ ಕನ್ನಡ
ಮಾ.29ಕನ್ನಡ / ತಮಿಳು / ಮಲೆಯಾಳಂ / ಮರಾಠಿ /ಅರೇಬಿಕ್ / ಫ್ರೆಂಚ್
ಮಾ.30ಹಿಂದಿ / ಉರ್ದು / ತೆಲುಗು / ಸಂಸ್ಕೃತ