ಪುಟಗಳು

ಎದ್ದ ಕೂಡಲೆ ನ್ಯೂಸ್ ಪೇಪರ್ ಓದಬಾರದು!

Healthy Tips From Robin Sharma
ಎಲ್ಲಾ ದೇಶಗಿಂತ ದೊಡ್ಡ ದೇಶ ಉಪದೇಶ. ಆದರೆ ಅನುಭವಿ ವ್ಯಕ್ತಿಗಳ ಮಾತು ಉಪದೇಶ ಎಂದು ಕಡೆಗಣಿಸಿದರೆ ನಷ್ಟ ನಮಗೆ. ಸರಳವಾದ ವಿಧಾನಗಳು ನಮ್ಮ ಬದುಕನ್ನು ಉತ್ತಮ ಪಡಿಸುತ್ತದೆ ಎಂದಾದರೆ ಅದನ್ನು ಪಾಲಿಸುವುದರಲ್ಲಿ ತಪ್ಪೇನಿದೆ?

ದಿನ ಬೆಳಗಾದರೆ ಟಾರ್ಗೆಟ್, ಡೆಡ್ ಲೈನ್ ಅಂತ ಯೋಚಿಸುತ್ತಾ ಟೆನ್ಷನ್ ಹೆಚ್ಚಿ ಮಾಡುವುದರಿಂದ ಆರೋಗ್ಯ ಹಾಳಾಗುವುದು. ಜೀವನವನ್ನು ಸಂತೋಷದಿಂದ ಕಳೆಯಲು ಮತ್ತು ಸವಾಲುಗಳನ್ನು ಧೈರ್ಯವಾಗಿ ಎದುರಿಸಲು ಅಂತಾರಾಷ್ಟ್ರೀಯ ಖ್ಯಾತಿಯ ಲೀಡರ್ಶಿಪ್ ಗುರು ರಾಬಿನ್ ಶರ್ಮ ಅನುಸರಿಸುವ ಸರಳ ವಿಧಾನ ನೋಡಿ ಇಲ್ಲಿದೆ:

1. ಮುಂಜಾನೆ ಬೇಗನೆ ಏಳುವುದು: ಮುಂಜಾನೆ ಬೇಗನೆ ಏಳುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹೆಚ್ಚಾಗುವುದು. ಲೇಟಾಗಿ ಎದ್ದು ಅವಸರವಾಗಿ ಕೆಲಸ ಕಾರ್ಯವನ್ನು ಮಾಡುವುದರಿಂದ ಮಾನಸಿಕ ಒತ್ತಡ ಹೆಚ್ಚುವುದು.

2. ಒಂದು ಲೋಟ ನೀರು ಕುಡಿಯುವುದು: ಬೆಳಗ್ಗೆ ಎದ್ದ ಕೂಡಲೇ ಬಾಯಿ ಕೂಡ ತೊಳೆಯದೆ ಒಂದು ಲೋಟ ನೀರು ಕುಡಿದರೆ ದೇಹ ಶುದ್ಧಿಯಾಗುತ್ತದೆ. ಇದರಿಂದ ದೇಹದಲ್ಲಿ ಚೈತನ್ಯ ಹೆಚ್ಚಾಗುವುದು.

3. ನ್ಯೂಸ್ ಪೇಪರ್ ಓದಬಾರದು: ಹೌದು ಇದನ್ನು ಕೇಳಿದರೆ ಆಶ್ಚರ್ಯವಾಗುವುದು ದಿಟ. ಆದರೆ ಬೆಳಗ್ಗೆ ಎದ್ದ ಕೂಡಲೆ ನ್ಯೂಸ್ ಪೇಪರ್ ನೋಡಿದರೆ ಅದರಲ್ಲಿರುವ ವಿಷಯಗಳೇ ಮನಸ್ಸನ್ನು ಕೊರೆಯುವುದು.

ಇದರ ಬಗ್ಗೆ ಒಂದು ಸಮೀಕ್ಷೆಯೊಂದು ನಡೆಸಲಾಗಿದೆ. ಅದರಲ್ಲಿ ದಿನಾ ಬೆಳಗ್ಗೆ ನ್ಯೂಸ್ ಪೇಪರ್ ಓದುವವರಿಗೆ ಮತ್ತು ಓದದವರಿಗೆ ಒಂದೇ ರೀತಿಯ ಪೋಟೊಗಳನ್ನು ತೋರಿಸಲಾಗಿತ್ತು. ಅದರಲ್ಲಿ ನ್ಯೂಸ್ ಪೇಪರ್ ನೋಡಿದವರಿಗಿಂತ ನೋಡದವರು ಆ ಫೋಟೊಗಳನ್ನು ನೋಡಿ ಹೆಚ್ಚು ಆನಂದಿಸುತ್ತಿದ್ದರು.

ಇವರ ಪ್ರಕಾರ ಎದ್ದ ಕೂಡಲೆ ನ್ಯೂಸ್ ಪೇಪರ್ ನಲ್ಲಿ ತಲೆದೂರಿಸುವುದಕ್ಕಿಂತ ಸುತ್ತಮುತ್ತಲಿನ ಸಣ್ಣ-ಪುಟ್ಟ ವಿಷಯಗಳನ್ನು ಮೊದಲು ಆನಂದಿಸಿ. ತಿಂಡಿಯ ನಂತರ ಪೇಪರ್ ನೋಡುವುದು ಒಳ್ಳೆಯದು.

4. 200% ಕೆಲಸ: ಮಾಡುವ ಕೆಲಸ ಯಾವುದೇ ಆಗಿರಲಿ ಅದನ್ನು 200% ಶೃದ್ಧೆಯಿಂದ ಮಾಡಬೇಕು. ಆಗ ಯಶಸ್ವು ತನ್ನಿಂದ ತಾನೆ ಬರುವುದು.

                                                                                                                                              One India Kannada