ಪುಟಗಳು

ಮರೆತ ವಿಮೊಚಕಿ - ಸಾವಿತ್ರಿಬಾಯಿ ಪುಲೆಯ ಜೀವನ ಮತ್ತು ಹೋರಾಟ


ಇಂದಿನ ವಿಶ್ವ ಸಾಕ್ಷರತಾ ದಿನವನ್ನು ಯುನೆಸ್ಕೋ ಮಹಿಳಾ ಸಾಕ್ಷರತೆಯ ದಿನವಾಗಿ ಆಚರಿಸುತ್ತಿದೆ. ಮಹಿಳಾ ಸಾಕ್ಷರತೆಯ ಬಗ್ಗೆ ಮಾತನಾಡಿದಾಗ ಭಾರತೀಯ ಮಹಿಳೆಯರು ಮೊದಲು ನೆನಸಬೇಕಾದ ವ್ಯಕ್ತಿ ಸಾವಿತ್ರೀಬಾಯಿ ಫುಲೆ. ದೇಶದ ಮೊಟ್ಟ ಮೊದಲ ಮಹಿಳಾ ಗುರುವೆಂಬ ಖ್ಯಾತಿಗೆ ಪಾತ್ರರಾದ ಸಾವಿತ್ರೀಬಾಯಿ ಫುಲೆ ಅವರು ತನ್ನ ಕಾರ್ಯದಲ್ಲಿ ಸಾಕಷ್ಟು ವಿಘ್ನಗಳನ್ನು ಎದುರಿಸಿದ್ದರು. ಅವರೇ ಸ್ಥಾಪಿಸಿದ ಹೆಣ್ಣುಮಕ್ಕಳ ಶಾಲೆಗೆ ಓದಿಸಲು ಹೋಗುವಾಗ ಮೇಲು ಜಾತಿಯ ಗಂಡಸರು ಅವರ ಮೇಲೆ ಕೆಸರು, ಮಣ್ಣು, ಧೂಳುಗಳನ್ನು ಎಸೆಯುತ್ತಿದ್ದರಂತೆ. ಅಂತಹ ಸಂದರ್ಭದಲ್ಲೂ ದೃತಿಗೆಡದೆ ಮಹಿಳಾ ಸಾಕ್ಷರತೆಗಾಗಿ ದುಡಿದ ಮಹಾನ್ ಮಹಿಳೆ ಅವರು.
ಏಳಿ, ಎದ್ದೇಳಿ, ಶಿಕ್ಷಣ ಪಡೆಯಿರಿ,ಸಂಪ್ರದಾಯಗಳನ್ನು ಸದೆಬಡಿಯಿರಿ,ಮುಕ್ತಿ ಹೊಂದಿರಿ!-ಸಾವಿತ್ರೀಬಾಯಿ ಫುಲೆವಿಶ್ವ ಮಹಿಳಾ ಸಾಕ್ಷರತೆಯ ದಿನವಾದ ಇಂದು ಸಾವಿತ್ರೀ ಬಾಯಿ ಫುಲೆ ಅವರನ್ನು ನೆನಸಿಕೊಳ್ಳೋಣ.
ಈ ಪ್ರಬಂಧಗಳ ಸಂಗ್ರಹಣೆಯು ಸಾವಿತ್ರೀಬಾಯಿ ಫುಲೆಯವರ ಜೀವನ ಮತ್ತು ಹೋರಾಟವನ್ನು ಜೀವಂತವಾಗಿ ಇರಿಸುವ ಒಂದು ಪ್ರಯತ್ನವಾಗಿದೆ. ಪ್ರಾಯಶಃ ಹತ್ತೊಂಬತ್ತನೇ ಶತಮಾನ ಕಂಡ ಶ್ರೇಷ್ಟ ಭಾರತೀಯ ಮಹಿಳೆ ಸಾವಿತ್ರಿ. ಸಾವಿತ್ರಿಬಾಯಿ ಫುಲೆ (1821-1897) ಆ ಕಾಲದ ಅಮನಾನವೀಯ, ಪಿತೃಪ್ರಧಾನ ಮತ್ತು ದಬ್ಬಾಳಿಕೆಯ ಸಂಪ್ರದಾಯಿಕ ಶಕ್ತಿಗಳ ವಿರುದ್ಧ ಹೋರಾಟವನ್ನು ಆಯೋಜಿಸಿದರು. ಅಲ್ಲಿಂದ ಆಕೆ ಆಧುನಿಕ ಭಾರತದ ಮೊದಲ ಮಹಿಳಾ ಗುರುವಾಗಿ ಹಾಗೂ ದಲಿತರ, ಕೆಳಜಾತಿಗಳ, ಕಾರ್ಮಿಕರ, ಕೃಷಿಕರ ನಾಯಕಿಯಾಗಿ ಹೊರಹೊಮ್ಮಿದರು. ಕ್ರಾಂತಿಕಾರಿಯಾದ ತನ್ನ ಗಂಡ ಮಹಾತ್ಮಾ ಜ್ಯೋತಿ ಬಾ ಫುಲೆಯವರ ಜತೆಯಲ್ಲಿ ಹೋರಾಟ ಮತ್ತು ದುಃಖ ಅನುಭವಿಸಿದರು. ಆದರೆ ಆಕೆಯೂ ತನ್ನದೇ ಪ್ರತ್ಯೇಕ, ಕರುಣಾಮಯಿ ಮತ್ತು ಕ್ರಿಯಾಶೀಲ ವ್ಯಕ್ತಿತ್ವವನ್ನು ರೂಢಿಸಿಕೊಂಡಿದ್ದರು.
ಮೇಲ್ವರ್ಗದವರ ಶತಮಾನಗಳ ದಬ್ಬಾಳಿಕೆಯ ನಂತರ ತಳಮಟ್ಟದಲ್ಲಿ ನ್ಯಾಯಯುತ ಮತ್ತು ಮಾನವೀಯ ಸಮಾಜಕ್ಕಾಗಿ ಸಾವಿತ್ರಿಬಾಯಿ ಫುಲೆಯವರು ಮಾಡಿದ ಕಿಚ್ಚಿನ ಹೋರಾಟ, ಬದಲಾವಣೆಗಾಗಿ ಜನರ ಯೋಚನೆಗೆ ಕಿಚ್ಚು ಹೊತ್ತಿಸುತ್ತದೆ. ಕ್ರಾಂತಿಜ್ಯೋತಿಯೆಂಬ ಹೆಗ್ಗಳಿಕೆಗೆ ಪಾತ್ರರಾದ ಸಾವಿತ್ರೀಬಾಯಿ, ಆಧುನಿಕ ಮಹಾರಾಷ್ಟ್ರದ ಪ್ರೀತಿಮಯಿ ವಾತ್ಸಲ್ಯ ಮೂರ್ತಿಯಾಗಿದ್ದಾರೆ, ಮತ್ತು ಮಹಿಳೆಯರ, ದಲಿತರ ಮತ್ತು ಇತರೇ ಹಿಂದುಳಿದ ವರ್ಗಗಳ ಹೋರಾಟಗಳಲ್ಲಿ ಸ್ಪೂರ್ತಿಯ ಸೆಲೆಯಾಗಿದ್ದಾರೆ.
ಈ ಪುಸ್ತಕದಲ್ಲಿ ಕ್ರಾಂತಿಕಾರಿ ಬರಹಗಾರರ ಸಮೂಹವು ಈ ಅತ್ಯದ್ಭುತ ಮಹಿಳೆಯ ಜೀವನ ಮತ್ತು ಹೋರಾಟದ ವಿವಿಧ ಮಜಲುಗಳನ್ನು ವಿಶ್ಲೇಷಿಸಿ ಕಣ್ಣಿಗೆ ಕಟ್ಟುವಂತೆ ಅರ್ಪಿಸಿದ್ದಾರೆ.
ಶೀರ್ಷಿಕೆ: ಮರೆತ ವಿಮೋಚಕಿ-ಸಾವಿತ್ರಿಬಾಯಿ ಫುಲೆಯ ಜೀವನ ಮತ್ತು ಹೋರಾಟ

ಸಂಪಾದಕರು:ಬ್ರಜ್ ರಂಜನ್ ಮಣಿ,ಪ್ಯಾಮೆಲ ಸರ್ದಾರ್

ಕನ್ನಡಕ್ಕೆ:alemaaripraqaashaqaru : ಟ್ರೈನಿಂಗ್, ಎಡಿಟೋರಿಯಲ್ ಅಂಡ್ ಡೆವಲಪ್ ಮೆಂಟ್ ಸರ್ವಿಸಸ್ಪುಟ : 80 ಬೆಲೆ: ರೂ.60/-

ಹಿಡಿಯದ ಹಾದಿ - ಗಿರಡ್ಡಿ ಗೋವಿಂದರಾಜ - ಪ್ರಭಂದಗಳು


ಕನ್ನಡ ಜಗತ್ತು - ಅರ್ಧ ಶತಮಾನ - ಕೆ.ವಿ.ನಾರಾಯಣ


ಸದ್ಯ ಮತ್ತು ಶಾಶ್ವತ - ಯು.ಆರ್.ಅನಂತಮೂರ್ತಿ


ಮದುವೆಯ ಆಲ್ಬಮ್ - ಗಿರೀಶ ಕಾರ್ನಾಡ - ನಾಟಕ


ಕ್ರೌಂಚ ಪಕ್ಷಿಗಳು - ವೈದೇಹಿ - ಕಥಾ ಸಂಕಲನಗಳು


ತೂಫಾನ್ ಮೇಲ್ - ಜಯಂತ್ ಕಾಯ್ಕಿಣಿ - ಕಥಾ ಸಂಕಲನಗಳು


ರಾಮಾಯಣದ ಹಲವು ಮುಖಗಳು


ಪೋಲಿಸ್ ಇಲಾಖೆಯಲ್ಲಿ ಬ್ರಷ್ಟಾಚಾರ ಓಂದು ಅದ್ಯಯನ


ಪತ್ರಿಕೋದ್ಯಮ ಶಿಕ್ಷಣವೇಕೆ ಫಲಿಸುತ್ತಿಲ್ಲ


ನವ ಭಾರತ ಶಿಲ್ಪಿ ಸರ್.ಎಂ.ವಿಶ್ವೇಶ್ವರಯ್ಯ


ವನ್ಯಜೀವಿಗಳ ಬೇಟೆ - ಮಹಿಳೆಯರದ್ದೇ ಮೇಲುಗೈ


ಕಾಸು ಕುಡಿಕೆ (ಎಫ್ ಎಂ ಪಿ)


KPSC PIO LIST







APPLICATION FOR A MARRIAGE UNDER SECTION 15 OF THE SPECIAL MARRIAGE ACT 1954 (FORM III)


ಮಕ್ಕಳ ಹಕ್ಕು (ಬೇಲಿಯೇ ಎದ್ದು ಹೊಲ . . . . )


ಮಾಹಿತಿ ಪಡೆಯಲು ಯಾರು ಅರ್ಹರು ?


ಗಾಂಧೀ ಕ್ಲಾಸು : ಕುಂ.ವೀರಭದ್ರಪ್ಪ