ಪುಟಗಳು

ಪರಿಸರ ವಿಜ್ಞಾನಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ನ ಪ್ರಕಟಣೆಗಳು

• ವಾಯುಗುಣ ಬದಲಾವಣೆ

• ಸುಸ್ಥಿರ ಅಭಿವೃದ್ಧಿಗಾಗಿ ಜೀವಿವೈವಿಧ್ಯ

• ಬಾವಲಿಗಳು

• ಪ್ರಖ್ಯಾತ ಜೀವ ವಿಜ್ಞಾನಿಗಳು

• ಕೀಟಾಹಾರಿ ಸಸ್ಯಗಳು

• ಮರಗಳ ಪರಿಚಯ

• ಜೀವಿ ಸಂರಕ್ಷಣೆ

• ಪರಿಸರ ಪ್ರಯೋಗಗಳು

• ಗಟ್ಟಿಕಸ ನಿರ್ವಹಣೆ

• ಜೀವಿವೈವಿಧ್ಯ ನಮ್ಮ ಅಮೂಲ್ಯ ಸಂಪತ್ತು

• ಪರಿಸರಕ್ಕೊಂದು ಕಿಂಡಿ

• ಸಾಗರಕ್ಕೆ ಸಾವುಂಟೇ ?

• ಜೀವಿ ಹೇಗೆ ಹುಟ್ಟಿದರೇನಂತೆ ?

• ಜಲ ಕೃಷಿ

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು




ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು

ವಿಜ್ಞಾನಭವನ,

ನಂ.24/2 ಮತ್ತು 24/3, 21ನೇ ಮುಖ್ಯರಸ್ತೆ,

ಬನಶಂಕರಿ 2ನೇ ಹಂತಬೆಂಗಳೂರು - 560 ೦೭೦

ಟೆಲಿಫ್ಯಾಕ್ಸ್ : 080 - ೨೬೭೧೮೯೫೯

ದೂರವಾಣಿ : 080 - ೨೬೭೧೮೯೩೯

ಇ-ಮೇಲ್ : krvp.info@gmail.ಕಂ

http://vayugunabadalavane-climatechange.com/index.htm

ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಕೆಲವು ಪುಸ್ತಕಗಳ ಪಟ್ಟಿ


ನಮ್ಮ ಓದುಗರ ಕೇಳಿಕೆಯಂತೆ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಕೆಲವು ಪುಸ್ತಕಗಳ ಪಟ್ಟಿಯನ್ನು ಇಲ್ಲಿ ಕೊಡುತ್ತಿದ್ದೇವೆ
ಸೋಮುವಿನ ಸ್ವಗತ ಲಹರಿ ಮತ್ತು ಇತರ ಕವನಗಳು :ಕವನ ಸಂಕಲನ
ಬೃಹನ್ನಳೆ :ಕವನ ಸಂಕಲನ
ಯಮಳ ಪ್ರಶ್ನೆ :ನಾಟಕ
ಹುಲಿಯೂರಿನ ಸರಹದ್ದು :ಕಥಾ ಸಂಕಲನ
ಅಬಚೂರಿನ ಪೋಸ್ಟ್ ಆಫೀಸ್ :ಕಥಾ ಸಂಕಲನ
ಕಿರಗೂರಿನ ಗಯ್ಯಾಳಿಗಳು :ಕಥಾ ಸಂಕಲನ
ಗುಡುಗು ಹೇಳಿದ್ದೇನು :ಕಥಾ ಸಂಕಲನ
ಸ್ವರೂಪ :ಕಾದಂಬರಿ
ನಿಗೂಢ ಮನುಷ್ಯರು :ಕಾದಂಬರಿ
ಕರ್ವಾಲೋ :ಕಾದಂಬರಿ
ಜುಗಾರಿ ಕ್ರಾಸ್ :ಕಾದಂಬರಿ
ಚಿದಂಬರ ರಹಸ್ಯ :ಕಾದಂಬರಿ
ಅಲೆಮಾರಿಯ ಅಂಡಮಾನ್ ಮತ್ತು ನೈಲ್ ನದಿ :ಕಥಾ ಸಂಕಲನ
ಪರಿಸರದ ಕಥೆ :ಕಥಾ ಸಂಕಲನ
ಮಿಸಿಂಗ್ ಲಿಂಕ್ :ಪತ್ತೇದಾರಿ ಕಥೆ
ಏರೋಪ್ಲೇನ್ ಚಿಟ್ಟೆ ಮತ್ತು ಇತರ ಕಥೆಗಳು :ಕಥಾ ಸಂಕಲನ
ಕಾಡಿನ ಕಥೆಗಳು (1 ರಿಂದ 3) :ಅನುವಾದ
ಫ್ಲೈಯಿಂಗ್ ಸಾಸರ್ (1 ರಿಂದ 3) :ವೈಜ್ಞಾನಿಕ ಸಾಹಿತ್ಯ
ವಿಸ್ಮಯ (1 ರಿಂದ 3) :ವೈಜ್ಞಾನಿಕ ಸಾಹಿತ್ಯ
ನಡೆಯುವ ಕಡ್ಡಿ ಹಾರುವ ಎಲೆ :ವೈಜ್ಞಾನಿಕ ಸಾಹಿತ್ಯ
ಮಿಂಚುಳ್ಳಿ – ಕನ್ನಡ ನಾಡಿನ ಹಕ್ಕಿಗಳು ಭಾಗ-1 :ವೈಜ್ಞಾನಿಕ ಸಾಹಿತ್ಯ
ಹೆಜ್ಜೆ ಮೂಡದ ಹಾದಿ – ಕನ್ನಡ ನಾಡಿನ ಹಕ್ಕಿಗಳು ಭಾಗ-2:ವೈಜ್ಞಾನಿಕ ಸಾಹಿತ್ಯ
ಅಣ್ಣನ ನೆನಪು :ಜೀವನ ಚರಿತ್ರೆ
ಮಾಯಾಲೋಕ-1 :ಕಾದಂಬರಿ
ಹುಡುಕಾಟ :ವೈಚಾರಿಕ ಸಾಹಿತ್ಯ
ಜೀವನ ಸಂಗ್ರಾಮ :ವೈಚಾರಿಕ ಸಾಹಿತ್ಯ
ಪೆಸಿಫಿಕ್ ದ್ವೀಪಗಳು :ವೈಚಾರಿಕ ಸಾಹಿತ್ಯ
ಚಂದ್ರನ ಚೂರು :ವೈಚಾರಿಕ ಸಾಹಿತ್ಯ
ನೆರೆಹೊರೆಯರ ಗೆಳೆಯರು :ವೈಚಾರಿಕ ಸಾಹಿತ್ಯ
ಮಹಾಯುದ್ಧ (1 ರಿಂದ 3) :ವೈಚಾರಿಕ ಸಾಹಿತ್ಯ
ದೇಶವಿದೇಶ (1 ರಿಂದ 4) :ವೈಚಾರಿಕ ಸಾಹಿತ್ಯ
ವಿಸ್ಮಯ ವಿಶ್ವ (1 ರಿಂದ 2) :ವೈಚಾರಿಕ ಸಾಹಿತ್ಯ
ಮಹಾ ಪಲಾಯನ :ವೈಚಾರಿಕ ಸಾಹಿತ್ಯ
ಅಡ್ವೆಂಚರ್ :ವೈಚಾರಿಕ ಸಾಹಿತ್ಯ
ಸಹಜ ಕೃಷಿ – ಒಂದು ಪರಿಚಯ :ವೈಜ್ಞಾನಿಕ ಸಾಹಿತ್ಯ
ಪಾಪಿಲ್ಲಾನ್ (1 ರಿಂದ 2) :
ಹಕ್ಕಿ ಪುಕ್ಕ :ವೈಜ್ಞಾನಿಕ ಸಾಹಿತ್ಯ
ರಹಸ್ಯ ವಿಶ್ವ :ವೈಜ್ಞಾನಿಕ ಸಾಹಿತ್ಯ
ದಕ್ಷಿಣ ಭಾರತದ ಹಕ್ಕಿಗಳು :ವೈಜ್ಞಾನಿಕ ಸಾಹಿತ್ಯ

ಜಯಪ್ರಕಾಶ್ ನಾರಾಯಣ : ಒಂದು ಅಪೂರ್ಣ ಕ್ರಾಂತಿಯ ಕಥೆ



2003 ರಲ್ಲಿ ಪ್ರಕಟವಾಗಿದ್ದ ಈ ಪುಸ್ತಕದ ಪರಿಷ್ಕೃತ ಆವೃತ್ತಿ ಇದು. ಜೆಪಿ ಇನ್ನೂ ಬದುಕಿದ್ದಾಗ, ಅವರ ಸಂಪೂರ್ಣ ಕ್ರಾಂತಿಯ ಕಾವು ಇನ್ನೂ ಆರದಿದ್ದಾಗ, ದಿಲ್ಲಿಯಲ್ಲಿದ್ದ ಕಾರಣ ಅವರ ಚಳುವಳಿಯ ಸ್ವರೂಪವನ್ನು ಕಣ್ಣಾರೆ ಕಂಡು ಪ್ರಭಾವಿತರಾಗಿದ್ದ ಲೇಖಕರು ಇದೀಗ ಈ ಪುಸ್ತಕವನ್ನು ತಮ್ಮ ತಲೆಮಾರಿನವರು ಹಳೆಯ ನೆನಪುಗಳನ್ನು ಮೆಲುಕು ಹಾಕಲು, ತಮ್ಮ ಹೋರಾಟ-ಹಾರಾಟದ ದಿನಗಳನ್ನು ಪುನರ್ರಚಿಸಿಕೊಳ್ಳಲು ಹಾಗೂ ಈ ತಲೆಮಾರಿನವರು ತಮ್ಮ ಹಿಂದಿನ ತಲೆಮಾರಿನವರು ಒಂದು ರಾಷ್ಟ್ರವನ್ನು ಕಟ್ಟಲು ಏನೆಲ್ಲಾ ಆದರ್ಶಗಳನ್ನು ರೂಪಿಸಿಕೊಂಡಿದ್ದರು, ಮೌಲ್ಯಗಳನ್ನು ರೂಢಿಸಿಕೊಂಡಿದ್ದರು… ಮುಂತಾಗಿ ತಿಳಿಯಲು ಓದಬೇಕೆಂದು ಸೂಚಿಸುತ್ತಾರೆ.
ಖಂಡಿತಾ ಸರಿ. ಆದರೆ ಖಂಡತುಂಡ ವಾಕ್ಯಗಳ, ಸಂಕೀರ್ಣ ವಿಚಾರಗಳ ನಾಗಭೂಷಣ ಯಾಕೋ ಇಲ್ಲಿ sounds too much simpleton! ಆದರೂ ಪಾಶವೀ ಶಕ್ತಿಯೊಂದರ ಹಿಡಿತದಲ್ಲಿ ಇಡೀ ದೇಶವೇ ನಲುಗುತ್ತಿದ್ದಾಗ ತಮ್ಮ ಅತ್ಯಂತ ಸೌಮ್ಯ ರೂಪದಲ್ಲೇ ಅದಕ್ಕೊಂದು ಮುಕ್ತಿ ಕರುಣಿಸಿದ ಮಹಾನ್ ಚೇತನ ಜೆಪಿ ಯವರ ಕುರಿತು ಇಡೀ ಸಮುದಾಯಕ್ಕೇ ಇಂತಹುದೊಂದು ಭಕ್ತಿ-ಗೌರವಗಳಿರುವುದನ್ನು ಮರೆಯುವಂತಿಲ್ಲ. ಅತಂತ್ರ ವಿಧಾನಸಭೆಗಳ, ಅನೈತಿಕ ಮೈತ್ರಿಕೂಟ ಸರಕಾರಗಳ ಈ ಹೊತ್ತಿನಲ್ಲಿ ಅವರ `ಸಾಮಾಜಿಕ ಪುನರ್ರಚನೆ ಒಂದು ಭೌತವಾದಿ ತತ್ವಶಾಸ್ತ್ರದ ಸ್ಫೂರ್ತಿಯೊಂದಿಗೆ ಯಶಸ್ವಿಯಾಗಲಾರದು, ಅದಕ್ಕಾಗಿ ಭೌತೇತರವಾದವೊಂದರ ಅಗತ್ಯ ಇದೆ‘ ಎನ್ನುವ ವಿಚಾರ ನಿಲುಕಲಾರದಷ್ಟು ಎತ್ತರದಲ್ಲಿದೆ ಎನ್ನುವುದೂ ನಿಜ. ಇಷ್ಟಿದ್ದರೂ ಮತ್ತೊಬ್ಬ ಲೋಕನಾಯಕನ ಆಗಮನಕ್ಕಾಗಿ ಕಾಯುವುದನ್ನು ನಿಲ್ಲಿಸದಿರೋಣ.


ಶೀರ್ಷಿಕೆ : ಜಯಪ್ರಕಾಶ್ ನಾರಾಯಣ : ಒಂದು ಅಪೂರ್ಣ ಕ್ರಾಂತಿಯ ಕಥೆ

ಲೇಖಕರು : ಡಿ. ಎಸ್. ನಾಗಭೂಷಣ

ಪ್ರಕಾಶಕರು : ಅಭಿರುಚಿ ಪ್ರಕಾಶನ

ಪುಟಗಳು : 200 ಬೆಲೆ: ರೂ.120/-
ಕೃಪೆ : ವಿಜಯ ಕರ್ನಾಟಕ

ಮಾರಾಟದ ಅಂಕಿ ಸಂಖ್ಯೆಯಲ್ಲಿ ಮೊದಲ 10 ಪುಸ್ತಕಗಳು


ಜೀವ ಹೇಗೆ ಹುಟ್ಟಿದರೇನಂತೆ? (ಪತ್ತೇದಾರಿ ಕಾದಂಬರಿ)


ಜೀವದ ಹುಟ್ಟಿನ ನಿಜಸ್ಥಿತಿಯನ್ನು ವಿವರಿಸಿ, ನಿಮಗೆ ತಾಜಾ ಮಾಹಿತಿಯನ್ನೊದಗಿಸುತ್ತದೆ ಈ ಕಿರು ಪುಸ್ತಕ. ಸರಳವಾದ ಭಾಷೆ, ಕುತೂಹಲ ಕೆರಳಿಸುವ ಘಟನೆಗಳು ಹಾಗೂ ಸನ್ನಿವೇಶಗಳು, ನಿಮ್ಮ ಚಿಂತನೆಯನ್ನು ಕೆದಕುವಂತಹ ಮಂಡನೆ, ರೋಮಾಂಚಕಾರೀ ವೈಜ್ಞಾನಿಕ ಪತ್ತೇದಾರಿಯ ಸ್ವಾರಸ್ಯಮಯ ನಿರೂಪಣೆ, ವಿಜ್ಞಾನಿಗಳು ಅನುಭವಿಸಿದ ಕಷ್ಟ ನಷ್ಟಗಳು, ಅವರು ಪಟ್ಟ ಅವಮಾನ, ಅವರು ಎದುರಿಸಿದ ಘೋರ ಘರ್ಷಣೆಗಳು, ಕಾಲಾನುಕಾಲಕ್ಕೆ ಹೇಗೆ ಹೊಸ ಹೊಸ ವಿಜ್ಞಾನಿಗಳು ಅವತರಿಸಿ, ಕೆಚ್ಚಿನಿಂದ, ಕಿಚ್ಚಿನಿಂದ, ಈ ಚಕ್ರವ್ಯೂಹವನ್ನು ಭೇದಿಸಿ, ಮುನ್ನುಗ್ಗಿ, ಮೂಡನಂಬಿಕೆಗಳನ್ನು ಸಾರಾಸಗಟಾಗಿ ತರಿದು, ವೈಜ್ಞಾನಿಕ ಮನೋಭಾವವನ್ನು ಬೆಳೆಸಿದರು ಎಂಬುದೇ ಈ ಪತ್ತೇದಾರಿ ಕಾದಂಬರಿಯ ಸಾರಾಂಶ.
ಹದಿನೈದು ಹರೆಯದ ಕಿಶೋರರಿಂದ ವಯೋವೃದ್ಧರವರೆಗೆ, ಎಲ್ಲರೂ ಓದಿ, ಖುಷಿ ಪಡಬಹುದಾದ, ಸಾಮಾನ್ಯ ಜ್ಞಾನ ಹೆಚ್ಚಿಸುವ, ಅಜ್ಞಾನವನ್ನು ಅಳಿಸುವ ವೈಜ್ಞಾನಿಕ ಕಾದಂಬರಿ ಇದು. ಓದಿದಷ್ಟೂ, ಮುಂದೇನಾಯಿತು ಎಂದು ತಿಳಿಯುವ ಕಾತರ, ಇನ್ನೂ ಓದಬೇಕೆಂಬ ಆತುರ, ಇವೇ ಈ ಪುಸ್ತಕದ ಕೆಲವು ವೈಶಿಷ್ಟ್ಯಗಳು.
-ಪುಸ್ತಕದ ಬೆನ್ನುಡಿಯಿಂದ
ಶೀರ್ಷಿಕೆ: ಜೀವ ಹೇಗೆ ಹುಟ್ಟಿದರೇನಂತೆ?
ಲೇಖಕರು:ಪ್ರೊ. ಎಂ.ಜೆ.ಸುಂದರ‍್ ರಾಮ್
ಪ್ರಕಾಶಕರು:ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು
ಪುಟ:108
ಬೆಲೆ:ರೂ.೪೦/-

ಪತ್ತೇದಾರಿ ಸಾಹಿತ್ಯ - ಶಬ್ದ ದೊಳಗಣ ನಿಶ್ಯಬ್ದ

ಇವು ಕಥೆಗಳಲ್ಲ. ವಾಸ್ತವ ಘಟನೆಗಳು ಎಂದು ಲೇಖಕರು ನೆನಪಿಸಿದ್ದಾರೆ. ಕಳೆದ 26 ವರ್ಷಗಳ ಕಾಲ ಪೋಲೀಸ್ ಅಧಿಕಾರಿಯಾಗಿ ಕೈಗೊಂಡ ತನಿಖೆಗಳಲ್ಲಿ ಯಶಸ್ವಿಯಾದವುಗಳನ್ನು ಸ್ವಾರಸ್ಯಕರವಾಗಿ ಪಾಲಾಕ್ಷಯ್ಯ ಇಲ್ಲಿ ಹೇಳಿಕೊಂಡು ಹೋಗಿದ್ದಾರೆ. ಹಾಗಾಗಿ ಇವು ಕತೆಯ ಸ್ವರೂಪವನ್ನೂ ಪಡೆದಿವೆ.
ಪೋಲೀಸರಿಗೆ ಗೊತ್ತಾಗದಿದ್ದ ಕೊಲೆ, ಪತ್ತೆ ಮಾಡಲು ಸಾಧ್ಯವೇ ಇಲ್ಲವೆಂದು ಫೈಲು ಮುಚ್ಚಿ ಹಾಕಿದ್ದ ಕೊಲೆ, ಸತ್ತ ವ್ಯಕ್ತಿ ಯಾರೆಂದು ಗೊತ್ತೇ ಆಗದೆ ದಿಕ್ಕು ತಪ್ಪಿಸಿದ ಪ್ರಕರಣ – ಇನ್ನೂ ಇಂತಹದೇ ಅತಿ ಕ್ಲಿಷ್ಟಕರವಾದ 9 ಕೊಲೆ ಪ್ರಕರಣಗಳನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಜೈಲಿಗೆ ಕಳುಹಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ತಮ್ಮ ವೃತ್ತಿಯಲ್ಲಿ ದಕ್ಕಿದ ಅನುಭವಗಳನ್ನು ಹೇಳಬಲ್ಲ ಬರಹಗಾರ ಅವರೊಳಗಿದ್ದಾನೆ.
ಇಲ್ಲಿನ ಬಹುತೇಕ ಎಲ್ಲಾ ಕತೆಗಳೂ ಉದಯ ಟಿವಿ ಕ್ರೈಂ ಸ್ತೋರಿ ಧಾರಾವಾಹಿಯಲ್ಲಿ ಪ್ರಸಾರವಾಗಿ ಜನಪ್ರಿಯತೆ ಗಳಿಸಿವೆ. ಹೀಗೆ ಬೇರೆ ವೃತ್ತಿಯಲ್ಲಿ ನೈಪುಣ್ಯತೆ ಹೊಂದಿದವರು ತಮ್ಮ ಅನುಭವಗಳನ್ನು ಪರಿಣಾಮಕಾರಿಯಾಗಿ ಹೇಳಿಕೊಂಡಲ್ಲಿ ಕನ್ನಡ ಸಾಹಿತ್ಯದ ವೈವಿಧ್ಯತೆಯನ್ನು ಹೆಚ್ಚಿಸುತ್ತದೆ. ಬಯಲಾಟದ ಕಲಾವಿದರೂ ಆಗಿರುವ ಪಾಲಾಕ್ಷಯ್ಯ ಅವರ ಸಾಂಸ್ಕೃತಿಕ ಸೂಕ್ಷ್ಮ ಸಂವೇದನೆ ಅವರ ವೃತ್ತಿ ಕೌಶಲ್ಯವನ್ನೂ ಹೆಚ್ಚಿಸಿರುವುದು ಕುತೂಹಲಕಾರಿ ಬೆಳವಣಿಗೆ.

ಶೀರ್ಷಿಕೆ: ಶಬ್ದ ದೊಳಗಣ ನಿಶ್ಯಬ್ದ
ಲೇಖಕರು: ಡಿ. ಪಾಲಾಕ್ಷಯ್ಯ
ಪ್ರಕಾಶಕರು : ನೀಲಾ ಪ್ರಕಾಶನ
ಪುಟಗಳು : 179
ಬೆಲೆ:ರೂ.100/-
ಕೃಪೆ : ಸುಧಾ

ಗಂಡುಗಲಿ ಮದಕರಿನಾಯಕ

1981 ರಲ್ಲಿ ಪ್ರಕಟವಾದ ‘ಗಂಡುಗಲಿ ಮದಕರಿನಾಯಕ‘ ಕಾದಂಬರಿಯನ್ನು ಚಿತ್ರದುರ್ಗ ಸಾಹಿತ್ಯ ಸಮ್ಮೇಳನದ ನಿಮಿತ್ತ, ಮರುಮುದ್ರಣ ಮಾಡಿದ್ದಾರೆ. ಇದು ನಾಲ್ಕನೆಯ ಮುದ್ರಣ. ಸಾಹಿತ್ಯ ಸಮ್ಮೇಳನದಲ್ಲಿ ಈ ಕಾದಂಬರಿಯ 748 ಪ್ರತಿಗಳು ಮಾರಾಟವಾಗಿವೆ ಎನ್ನುತ್ತಾರೆ ಪ್ರಕಾಶಕರು.ದಲಿತ, ಬಂಡಾಯ, ಸಸ್ಪೆನ್ಸ್, ಪಾಲಿಟಿಕ್ಸ್, ಡೀಪ್ ಲವ್, ಐತಿಹಾಸಿಕ, ಕೌಟುಂಬಿಕ, ಸಂಗೀತ, ನೃತ್ಯ- ಯಾವ ಪ್ರಕಾರವನ್ನೇ ಆರಿಸಿಕೊಂಡರೂ ಅಧ್ಯಯನ ಮಾಡಿ ವಸ್ತುನಿಷ್ಟವಾಗಿಯೂ ಬರೆವ ವೇಣು ಯಾವುದೇ ಲೇಬಲ್ ಅಂಟಿಸಿಕೊಳ್ಳದ ಸೃಜನಶೀಲ ಬರಹಗಾರರು. ಐತಿಹಾಸಿಕ ಕಾದಂಬರಿಗಳ ಅವನತಿಯ ಕಾಲದಲ್ಲಿ ಓಯಸ್ಸಿಸ್ ನಂತೆ ದುರ್ಗದ ಇತಿಹಾಸ ಕುರಿತಂತೆ ಕೃತಿ ರಚನೆಗಿಳಿದು ‘ಜನಪ್ರಿಯತೆ ಮತ್ತು ಮೌಲ್ವಿಕತೆ ಬೇರೆ ಬೇರೆ ಎಂಬ ಅಭಿಪ್ರಾಯವನ್ನು ಹುಸಿಯಾಗಿಸಿ ಬೆಳೆದ ಲೇಖಕ‘ ಎಂಬ ಮೆಚ್ಚುಗೆಯ ಸಾಲುಗಳು ಈ ಲೇಖಕನ ಬಗ್ಗೆ ಮುನ್ನುಡಿಯಲ್ಲಿವೆ.ಈ ಕಾದಂಬರಿಯನ್ನು ಓದಬೇಕೆಂಬ ಆಸೆ ಹುಟ್ಟಿಸುವುದಕ್ಕೆ ಇಷ್ಟು ವಿವರಗಳು ಸಾಕಲ್ಲವೇ?
ಶೀರ್ಷಿಕೆ: ಗಂಡುಗಲಿ ಮದಕರಿನಾಯಕ
ಲೇಖಕರು:ಬಿ.ಎಲ್.ವೇಣು
ಪ್ರಕಾಶಕರು: ಗೀತಾಂಜಲಿ, ಶಿವಮೊಗ್ಗ
ಪುಟ:236,
ಬೆಲೆ:ರೂ.195/-

ಸಾತ್ವಿಕ ಆಹಾರದ ಸಮರ್ಥ ಪ್ರತಿಪಾದಕ


ಸೃಷ್ಟಿಗೆ ಸನಿಹ ಸಸ್ಯಾಹಾರ


ಜನಿವಾರದ ಹಬ್ಬ ನೂಲಹುಣ್ಣಿಮೆ


ನಡಿಗೆಯೆಂಬ ತಪಸ್ಸು ಭಂಗಕ್ಕೆ ಹಲವು ರಂಭೆಯರು


ಹಿಂದೂ ದೇವಾಲಯಗಳ ತಿದ್ದುಪಡಿ ಮಸೂದೆ - ಏನು ಎತ್ತ?


ಬಿಹೇವಿಯರ್ ಫೈನಾನ್ಸ್ - ಒಂದು ಮರು ಕೊರೆತ