ಪುಟಗಳು

ಜೀವ ಹೇಗೆ ಹುಟ್ಟಿದರೇನಂತೆ? (ಪತ್ತೇದಾರಿ ಕಾದಂಬರಿ)


ಜೀವದ ಹುಟ್ಟಿನ ನಿಜಸ್ಥಿತಿಯನ್ನು ವಿವರಿಸಿ, ನಿಮಗೆ ತಾಜಾ ಮಾಹಿತಿಯನ್ನೊದಗಿಸುತ್ತದೆ ಈ ಕಿರು ಪುಸ್ತಕ. ಸರಳವಾದ ಭಾಷೆ, ಕುತೂಹಲ ಕೆರಳಿಸುವ ಘಟನೆಗಳು ಹಾಗೂ ಸನ್ನಿವೇಶಗಳು, ನಿಮ್ಮ ಚಿಂತನೆಯನ್ನು ಕೆದಕುವಂತಹ ಮಂಡನೆ, ರೋಮಾಂಚಕಾರೀ ವೈಜ್ಞಾನಿಕ ಪತ್ತೇದಾರಿಯ ಸ್ವಾರಸ್ಯಮಯ ನಿರೂಪಣೆ, ವಿಜ್ಞಾನಿಗಳು ಅನುಭವಿಸಿದ ಕಷ್ಟ ನಷ್ಟಗಳು, ಅವರು ಪಟ್ಟ ಅವಮಾನ, ಅವರು ಎದುರಿಸಿದ ಘೋರ ಘರ್ಷಣೆಗಳು, ಕಾಲಾನುಕಾಲಕ್ಕೆ ಹೇಗೆ ಹೊಸ ಹೊಸ ವಿಜ್ಞಾನಿಗಳು ಅವತರಿಸಿ, ಕೆಚ್ಚಿನಿಂದ, ಕಿಚ್ಚಿನಿಂದ, ಈ ಚಕ್ರವ್ಯೂಹವನ್ನು ಭೇದಿಸಿ, ಮುನ್ನುಗ್ಗಿ, ಮೂಡನಂಬಿಕೆಗಳನ್ನು ಸಾರಾಸಗಟಾಗಿ ತರಿದು, ವೈಜ್ಞಾನಿಕ ಮನೋಭಾವವನ್ನು ಬೆಳೆಸಿದರು ಎಂಬುದೇ ಈ ಪತ್ತೇದಾರಿ ಕಾದಂಬರಿಯ ಸಾರಾಂಶ.
ಹದಿನೈದು ಹರೆಯದ ಕಿಶೋರರಿಂದ ವಯೋವೃದ್ಧರವರೆಗೆ, ಎಲ್ಲರೂ ಓದಿ, ಖುಷಿ ಪಡಬಹುದಾದ, ಸಾಮಾನ್ಯ ಜ್ಞಾನ ಹೆಚ್ಚಿಸುವ, ಅಜ್ಞಾನವನ್ನು ಅಳಿಸುವ ವೈಜ್ಞಾನಿಕ ಕಾದಂಬರಿ ಇದು. ಓದಿದಷ್ಟೂ, ಮುಂದೇನಾಯಿತು ಎಂದು ತಿಳಿಯುವ ಕಾತರ, ಇನ್ನೂ ಓದಬೇಕೆಂಬ ಆತುರ, ಇವೇ ಈ ಪುಸ್ತಕದ ಕೆಲವು ವೈಶಿಷ್ಟ್ಯಗಳು.
-ಪುಸ್ತಕದ ಬೆನ್ನುಡಿಯಿಂದ
ಶೀರ್ಷಿಕೆ: ಜೀವ ಹೇಗೆ ಹುಟ್ಟಿದರೇನಂತೆ?
ಲೇಖಕರು:ಪ್ರೊ. ಎಂ.ಜೆ.ಸುಂದರ‍್ ರಾಮ್
ಪ್ರಕಾಶಕರು:ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು
ಪುಟ:108
ಬೆಲೆ:ರೂ.೪೦/-