ಒಟ್ಟಿನಲ್ಲಿ 'ನೈಂಟಿ' ಚಿತ್ರ ಪ್ರೇಕ್ಷಕರಿಗೆ ಸಖತ್ ಕಿಕ್ ಕೊಟ್ಟಿದೆ. ಗಾಂಧಿನಗರ 'ನೈಂಟಿ' ಚಿತ್ರದ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ. ಈಗ ಅವರೂ ಬಾರ್‌ನಲ್ಲಿ ಕೂತು ನೈಂಟಿ ಚಿತ್ರದ ಬಗ್ಗೆ ಗಂಭೀರವಾಗಿ ಯೋಚಿಸುವಂತೆ ಮಾಡಿದೆ. ಚಿತ್ರಕ್ಕೆ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸಾಧು ಕೋಕಿಲ ಅವರ ಕಾಮಿಡಿ ಕಿಕ್‌ಗೆ ಪ್ರೇಕ್ಷಕರು ಚಿತ್ರಮಂದಿರದಲ್ಲೇ ತೂರಾಡುವಂತಾಗಿದೆ. ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದೆ. ಚಿತ್ರಕ್ಕೆ ಫ್ಯಾಮಿಲಿ ಆಡಿಯನ್ಸ್ ಕೂಡ ಬರುತ್ತಿದ್ದಾರೆ. ಚಿತ್ರದ ಸಬ್ಜೆಕ್ಟ್ ಸಖತ್ ಇಷ್ಟವಾಗಿದೆ. ನಮಗೂ ಅಷ್ಟೇ ನೈಂಟಿ ಚಾ ಕುಡಿದಷ್ಟೇ ಸಂತಸವಾಗಿದೆ ಎಂದಿದ್ದಾರೆ ಸಾಧು ಕೋಕಿಲ.
ಪ್ರೇಕ್ಷಕರಿಗೆ ಚಿತ್ರದ ಮೆಸೇಜ್ ಇಷ್ಟವಾಗಿದೆ. ಕಾಮಿಡಿ ಸೀನ್‌ಗಳಂತೂ ಅವರನ್ನು ನಗುವಿನ ಅಲೆಯಲ್ಲಿ ತೇಲಿಸಿವೆ. ನಗಿಸುವುದರ ಜೊತೆಗೆ ಕುಡಿತ ದೈಹಿಕ ಮತ್ತು ಮಾನಸಿಕವಾಗಿ ಎಷ್ಟು ಮಾರಕ ಎಂಬ ಸಂದೇಹವನ್ನು ನೀಡಿದ್ದೇವೆ ಎನ್ನುವ ಸಾಧು ಅವರು ಲಕ್ಕಿ ಶಂಕರ್ ನಿರ್ದೇಶನಕ್ಕೆ ತಲೆತೂಗಿದ್ದಾರೆ.
ಉತ್ತಮ ಕತೆ, ಜೊತೆಗೆ ಅದರ ಪ್ರೆಸೆಂಟೇಷನ್ ಚೆನ್ನಾಗಿದ್ದರೆ ಪ್ರೇಕ್ಷಕರು ಖಂಡಿತ ಚಿತ್ರಮಂದಿರಕ್ಕೆ ಬರುತ್ತಾರೆ ಎಂಬುದನ್ನು ನೈಂಟಿ ಕುಡಿ ಪಲ್ಟಿ ಹೊಡಿ ಚಿತ್ರ ನಿರೂಪಿಸಿದೆ. ಚಿತ್ರಕ್ಕೆ ನೈಂಟಿ ಕಿಕ್ ನೀಡಿದವರು ತಬಲಾ ನಾಣಿ, ರಂಗಾಯಣ ರಘು, ರಾಜು ತಾಳಿಕೋಟೆ. (ದಟ್ಸ್‌ಕನ್ನಡ ಸಿನಿವಾರ್ತೆ)