ಪುಟಗಳು

ಕಿರಿಕಿರಿ ಕರೆ, ಎಸ್ಎಂಎಸ್ ಗೆ ಬಿತ್ತು ಕಡಿವಾಣ

ನವದೆಹಲಿ, ಸೆ.6: ಸೆ.27ರಿಂದ ಅನಪೇಕ್ಷಿತ ಕಿರಿಕಿರಿ ಕರೆ ಹಾಗೂ ಎಸ್ಎಂಎಸ್ ನಿಷೇಧ ಜಾರಿಗೊಳಿಸಲು ಭಾರತೀಯ ದೂರವಾಣಿ ನಿಯಂತ್ರಣ ಪ್ರಾಧಿಕಾರ 'ಟ್ರಾಯ್' ನಿರ್ಧರಿಸಿದೆ.

ಟೆಲಿ ಮಾರುಕಟ್ಟೆ ಕಂಪೆನಿಗಳಿಂದ ಮೊಬೈಲ್ ಮತ್ತು ಸ್ಥಿರ ದೂರವಾಣಿಗಳಿಗೆ ಬರುವ ವಾಣಿಜ್ಯ ಕರೆ ಮತ್ತು 'ಎಸ್‌ಎಂಎಸ್'ಗಳಿಂದ ಗ್ರಾಹಕರು ಮುಕ್ತರಾಗಬಹುದು.

ಕಿರಿಕಿರಿ ಕರೆ ತಪ್ಪಿಸಿಕೊಳ್ಳಲು ರಾಷ್ಟ್ರೀಯ ಗ್ರಾಹಕ ಆದ್ಯತಾ ನೋಂದಣಿಯಲ್ಲಿ (ಎನ್‌ಸಿಪಿಆರ್) ನೋಂದಾಯಿಸಿಕೊಂಡರೆ ಸಾಕು. ವಾಣಿಜ್ಯ ಕರೆಗಳ ಕಿರಿಕಿರಿ ತಪ್ಪಲಿದೆ.

ದೇಶದಲ್ಲಿ 850 ದಶಲಕ್ಷ ಮೊಬೈಲ್ ಮತ್ತು 34 ದಶಲಕ್ಷ ಸ್ಥಿರ ದೂರವಾಣಿ ಚಂದಾದಾರರಿದ್ದಾರೆ. ಟೆಲಿ ಮಾರುಕಟ್ಟೆ ಕರೆಗಳಿಗೆ ಟ್ರಾಯ್ '140' ಸಂಖ್ಯಾ ಸರಣಿ ನಿಗದಿಪಡಿಸಿದೆ. ಈ ಸಂಖ್ಯೆಗಳಿಂದ ಅಂತ್ಯಗೊಳ್ಳುವ ಕರೆಗಳನ್ನು ಗ್ರಾಹಕರು ಸುಲಭವಾಗಿ ಗುರುತಿಸಿ, ಆ ಸಂಖ್ಯೆಗಳ ನಿಷೇಧಕ್ಕೆ ಮನವಿ ಸಲ್ಲಿಸಬಹುದು.
  Read:  In English 
ಭಾರಿ ದಂಡ : ನಿಯಮ ಉಲ್ಲಂಘಿಸುವ ಟೆಲಿ ಮಾರುಕಟ್ಟೆ ಸಂಸ್ಥೆಗಳಿಗೆ 25 ಸಾವಿರ ರೂ.ನಿಂದ 2.5 ಲಕ್ಷ ರೂ ವರೆಗೂ ದಂಡ ವಿಧಿಸಲಾಗುವುದು ಎಂದು ಟ್ರಾಯ್ ಎಚ್ಚರಿಕೆ ನೀಡಿದೆ.

ಸುಮಾರು 130 ದಶಲಕ್ಷ ಮೊಬೈಲ್ ಚಂದಾದಾರರು ಅನಪೇಕ್ಷಿತ ಕರೆ ನಿಷೇಧಕ್ಕಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಪ್ರತಿ ತಿಂಗಳು ಸುಮಾರು 47 ಸಾವಿರ ದೂರುಗಳು ದಾಖಲಾಗುತ್ತಿವೆ. ಸುಮಾರು 72 ಸಾವಿರ ನೋಂದಾಯಿತ ಟೆಲಿ ಮಾರುಕಟ್ಟೆ ಸಂಪರ್ಕಗಳನ್ನು ಟ್ರಾಯ್ ರದ್ದುಗೊಳಿಸಿದೆ.