ಶಶಾಂಕ್ ನಿರ್ದೇಶನದ, ದುನಿಯಾ ವಿಜಯ್ ಮತ್ತು ಪ್ರಣೀತಾ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರದ ಆಲ್ಬಮ್ ನಲ್ಲಿರುವ ಮೂರು ಹಾಡು ಚೆನ್ನಾಗಿದ್ದು, ಆಲ್ಬಮ್ ನ ಮೊದಲ ಹಾಡು ಸೂಪರ್ ಹಿಟ್ ಆಗುವುದರಲ್ಲಿ ಡೌಟೇ ಇಲ್ಲ. ಕನ್ನಡದ ರೆಹಮಾನ್ ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಚಿತ್ರದಲ್ಲಿ ಉಪೇಂದ್ರ ಕಂಠಸಿರಿಯಿಂದ ಒಂದು ಹಾಡು ಮೂಡಿಬಂದಿರುವುದು ವಿಶೇಷ.
1 . ನೀ ಊರಿಗೆ ಬಾರೋ ಚನ್ನಿ ಹಿಡ್ಕೊಂಡು (ಅರ್ಜುನ್ ಜನ್ಯ, ಶಮಿತಾ ಮಲ್ನಾಡ್)
ಸಾಹಿತ್ಯ:ಶಶಾಂಕ್
ಗ್ರಾಮ್ಯ ಭಾಷೆಯ ಶೈಲಿಯಲ್ಲಿರುವ ಸಾಹಿತ್ಯ.ಜಾನಪದ ಮೆಲೋಡಿಯಸ್ ನಲ್ಲಿರುವ ಈ ಹಾಡು ಕಿವಿಗೆ ಇಂಪು ಮತ್ತು ರಸವತ್ತಾಗಿದೆ. ಒಮ್ಮೆ ಕೇಳಿದರೆ ಮತ್ತೆ ಮತ್ತೆ ಕೇಳಬೇಕಿನ್ನಿಸುತ್ತದೆ. ಈ ಹಾಡು ಚಿತ್ರ ಬಿಡುಗಡೆಗೆ ಮುನ್ನವೇ ಹಿಟ್ ಆಗುವುದರಲ್ಲಿ ಸಂದೇಹವೇ ಬೇಡ.
2 . ಅವರಿವರ ಜೊತೆ ಸೇರದೆ, ನುಡಿ ಕೇಳದೆ (ಸೋನು ನಿಗಮ್, ಅನುರಾಧ ಭಟ್)
ಸಾಹಿತ್ಯ: ಶಶಾಂಕ್
ಸೋನು ನಿಗಮ್ ಟ್ರೇಡ್ ಮಾರ್ಕ್ ಟ್ಯೂನ್. ಹಾಡಿನ ಸಾಹಿತ್ಯ ಕೂಡಾ ಅರ್ಥಪೂರ್ಣವಾಗಿದೆ. ಹಾಡಿನ ಅನುಪಲ್ಲವಿ ಫಾಸ್ಟ್ ಟ್ರ್ಯಾಕ್ ನಲ್ಲಿದ್ದು, ಹಾಡು ಉತ್ತಮವಾಗಿ ಮೂಡಿ ಬಂದಿದೆ.
3. ಪದೇ ಪದೇ ಫೋನಿನಲಿ (ಉಪೇಂದ್ರ, ಪ್ರಿಯಾ ಹಿಮೇಶ್)
ಸಾಹಿತ್ಯ: ಶಶಾಂಕ್ ಮತ್ತು ಪ್ರಹ್ಲಾದ್ ರಾಜ್
ನಾಯಕಿಯನ್ನು ನಾಯಕ ಸದಾ ಕಾಯುತ್ತಿರುತ್ತಾನೆ. ಫೋನಲ್ಲಿ ನಡೆಸುವ ಸಂಭಾಷಣೆ ಈ ಹಾಡಿನ ಸಾಹಿತ್ಯ. ಟ್ಯೂನ್ ಬಗ್ಗೆ ಸಂಗೀತ ನಿರ್ದೇಶಕರು ತಲೆ ಕೆಡಿಸಿ ಕೊಳ್ಳದೆ ಉಪೇಂದ್ರ ಇಮೇಜ್‌ಗೆ ತಕ್ಕಂತೆ ಸಂಗೀತ ನೀಡಿದ್ದಾರೆ. ಹಾಡು ಸುಮಾರಾಗಿದೆ.
4. ಹಳೇ ಹುಬ್ಬಳ್ಳಿ ಬಸ್ಟ್ಯಾಂಡ್ ಮೇಲೆ ನಿಂತಿದ್ದೆ (ಅರ್ಜುನ್ ಜನ್ಯ)
ಸಾಹಿತ್ಯ: ಯೋಗರಾಜ್ ಭಟ್
ಈ ಹಾಡು ಪಕ್ಕಾ ಮಾಸ್ ಗೆ. ಉತ್ತರ ಕರ್ನಾಟಕ ಶೈಲಿಯಲ್ಲಿರುವ ಈ ಹಾಡು ಆ ಭಾಗದ ಜನರನ್ನು ಸೆಳೆಯುವುದರಲ್ಲಿ ಸಂಶಯ ಬೇಡ. ಹಾಡು ಸಂಪೂರ್ಣ ಫಾಸ್ಟ್ ಪಿಚ್ ನಲ್ಲಿದೆ. ಹುಬ್ಬಳ್ಳಿ ಕನ್ನಡ ಭಾಷೆ, ಜೀವನಶೈಲಿಗೆ ತಕ್ಕಂತೆ ಭಟ್ರು ಉತ್ತಮ ಸಾಹಿತ್ಯ ನೀಡಿದ್ದಾರೆ.
5. ಯಾರಾದ್ರೂ ಹಾಳಾಗೋಗ್ಲಿ ನಾವಿಷ್ಟೇ ಇದ್ರೆ ಸಾಕು (ಕೈಲಾಶ್ ಖೇರ್, ಶಶಾಂಕ್ ಶೇಷಗಿರಿ, ಹರ್ಷ ಸದಾನಂದ )
ಸಾಹಿತ್ಯ: ಶಶಾಂಕ್
ಯಾರು ಹೇಗೇ ಇರಲಿ, ಬೇನಾಮಿ ಆಸ್ತಿ ಮಾಡಿ ತಾನು ಸಾಚಾ ಎಂದು ಗಂಟೆ ಹೊಡಿಯ ಬೇಕು, ಪ್ರಳಯ ಕೂಡಾ ಆಗ್ತಿಲ್ಲ. ಕುಡಿತದ ಬಗ್ಗೆ ಕೂಡಾ ಸಾಹಿತ್ಯ ವಿರುವ ಹಾಡು. ಇಂದಿನ ಪ್ರಾಪಂಚಿಕ ಜಗತ್ತಿನ ಬಗ್ಗೆ ಶಶಾಂಕ್ ಹಾಡಿನ ಮೂಲಕ ಪ್ರೇಕ್ಷಕರಿಗೆ ತಿಳಿಸಿದ್ದಾರೆ.